` khushboo, - chitraloka.com | Kannada Movie News, Reviews | Image

khushboo,

  • #me too ರವಿಚಂದ್ರನ್ ವಿರುದ್ಧ ಖುಷ್‍ಬೂ ಕೊಟ್ಟ ಉತ್ತರ

    khushboo reacts on me too complaint against ravichandran

    #me too.. ನಾನೂ ಲೈಂಗಿಕ ಕಿರುಕುಳ ದೌರ್ಜನ್ಯ ಅನುಭವಿಸಿದ್ದೆ ಎಂದು ಹೇಳಿಕೊಳ್ಳುವ ಸೋಷಿಯಲ್ ಮೀಡಿಯಾ ಅಭಿಯಾನ. ಈ ಅಭಿಯಾನದಲ್ಲಿ ಅತಿ ಹೆಚ್ಚು ದಾಳಿಗೆ ಗುರಿಯಾಗಿರುವುದು ಸಿನಿಮಾ ಇಂಡಸ್ಟ್ರಿ. ಕನ್ನಡ ಚಿತ್ರರಂಗದಲ್ಲೂ ಬಿರುಗಾಳಿ ಸಣ್ಣಗೆ ಏಳುವುದಕ್ಕೆ ಶುರುವಾಗಿದೆ. ಈ ಅಭಿಯಾನದ ಖುಷ್‍ಬೂ, ಒಂದು ಪ್ರತಿಕ್ರಿಯೆ ನೀಡಿದ್ದರು. ನನ್ನ 40 ವರ್ಷದ ಕೆರಿಯರ್‍ನಲ್ಲಿ ನನಗೆ ಅಂತಹ ಅನುಭವವಾಗಿಲ್ಲ ಎಂದಿದ್ದರು. ಇದಕ್ಕೆ ಲಕ್ಷ್ಮಿ ಎಂಬುವವರು ಟ್ವಿಟರ್‍ನಲ್ಲೇ ಪ್ರತಿಕ್ರಿಯೆ ನೀಡಿ, ನನಗೇನೋ ಹಾಗನ್ನಿಸ್ತಿಲ್ಲ. ನೀವು ರವಿಚಂದ್ರನ್ ಜೊತೆ ಅಭಿನಯಿಸಿದ್ದೀರಿ. ಅವರು ತಮ್ಮ ಜೊತೆ ನಟಿಸಿದ ಒಬ್ಬರನ್ನೂ ಬಿಡೋದಿಲ್ವಂತೆ ಎಂದು ಕೆಣಕಿದ್ದರು. ಅದಕ್ಕೆ ಖುಷ್‍ಬೂ ಕೊಟ್ಟಿರುವ ಪ್ರತಿಕ್ರಿಯೆ ಇದು.

    `ಇವತ್ತು ನನ್ನ ತಾಯಿ ಬದುಕಿದ್ದರೆ ಅದಕ್ಕೆ ವಿ.ರವಿಚಂದ್ರನ್. ಮತ್ತು ಅವರ ತಂದೆ ಎನ್.ವೀರಸ್ವಾಮಿ ಕಾರಣ. ನಿಮಗೇನು ಗೊತ್ತು ಅವರ ಬಗ್ಗೆ. ಅವರ ವ್ಯಕ್ತಿತ್ವದ ಬಗ್ಗೆ ಕೆಟ್ಟಕೆಟ್ಟದಾಗಿ ಮಾತನಾಡಬೇಡಿ. ಪ್ರಚಾರಕ್ಕಾಗಿ ಏನೇನೋ ಹೇಳಬಾರದು. ಇಂತಹ ಸುಳ್ಳುಗಳಿಂದ ನಿಜವಾಗಿಯೂ ತಮಗಾದ ದೌರ್ಜನ್ಯ ಹೇಳಿಕೊಳ್ಳುತ್ತಿರುವ ಹಲವು ಹೆಣ್ಣುಮಕ್ಕಳ ಬಗ್ಗೆ ಜನ ಅನುಮಾನದಿಂದ ನೋಡುವಂತಾಗುತ್ತೆ ಎಂದಿದ್ದಾರೆ ಖುಷ್‍ಬೂ.

    ರವಿಚಂದ್ರನ್ ಜೊತೆ ಖುಷ್‍ಬೂ ರಣಧೀರ, ಅಂಜನದಗಂಡು, ಶಾಂತಿಕ್ರಾಂತಿ, ಯುಗಪುರುಷ.. ಹೀಗೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಇಂದಿಗೂ ರವಿಚಂದ್ರನ್ ಹಾಗೂ ಖುಷ್‍ಬೂ ಆತ್ಮೀಯ ಸ್ನೇಹಿತರು. ಸಿನಿಮಾಗಳ ಬಗ್ಗೆ ವಿಪರೀತ ಫ್ಯಾಷನೇಟ್ ಆಗಿರುವ ರವಿಚಂದ್ರನ್, ತಮ್ಮ ಚಿತ್ರಗಳಲ್ಲಿ ಹೀರೋಯಿನ್‍ಗಳ ಸೌಂದರ್ಯವನ್ನು ಅದ್ಭುತವಾಗಿ ತೋರಿಸುವುದರಲ್ಲಿ ಫೇಮಸ್. ಆದರೆ, ಖುಷ್‍ಬೂ ಕೊಟ್ಟಿರುವ ಈ ಹೇಳಿಕೆ ರವಿಚಂದ್ರನ್ ಅಭಿಮಾನಿಗಳು ಹೆಮ್ಮೆ ಪಡುವಂತೆ ಮಾಡಿರುವುದಂತೂ ಸತ್ಯ.

  • Khushbu Defends Ravichandran From Stray Aspersions 

    khushbhu defends ravichandran from stray aspersions

    Actress-politician Khushbu has defended Ravichandran from a random troll who tried to cast aspersions on him. The general comment on the #MeToo campaign threatened to turn into a controversy over Sandalwood star Ravichandran but Khushbu defended him saying he was a great human being who helped those in need and that was the only way "he has spared no one". 

    About the #MeToo issue Khushbu remarked that she never had such an experience (of harassment) in her career. She said "Many ask if I have ever faced #metoo moment in my career spanning 40yrs in films..sorry to disappoint you but I haven’t..I was always taught to fight my own battles and hit back hard..and I did just that.."

    Replying to this a Twitter user calling herself Lakshmi replied "I don't think so... I think u may faced Actor Ravichandran he don't spare anyone at all as u can guess how he was.." The comment was meant to suggest that Ravichandran was a kind of person who would have harassed women. 

    Khushbu replied with her own example defending Ravichandran and said it was wrong to make such fake allegations against the Kannada actor. She said "If my mother is alive today, it is because of V.Ravichandran and his great father Late.N.Veeraswamy.. ‘he spares no one’ should be counted as he has always been a silent philanthropist and a wonderful soul who has been a true friend to many out there..so never speak ill of him."

    Despite this the troll Lakshmi contained to abuse the actor by saying "I know well about thr father he was great but Ravichandran not sure ! I wonder how his sons born opposite to him."

    Upset with this continued harassment by the Twitter user an angry Khushbu said "Were you part of the so called ‘he spares no one’ ?? Shame on you..Sadly hearsay is what educated illiterates like you jump just to be there in wave for the heck of it..you are an insult to the women who are fighting out there.."

    The troll continued making insinuations against Ravichandran even dragging the case of actress Bindiya. Khushbu remarked "I ask again.. he w well do you know him?? Or are you a victim here?? If not, stop maligning a person.. don’t speak to gain publicity ..it degrades other women out here who fighting it out.." ending the conversation.

  • ಅಮ್ಮ ಆಗೋಕೆ ಖುಷ್‍ಬೂನೇ ಒಪ್ಪಿಲ್ಲ.. ಅಷ್ಟರಲ್ಲಾಗಲೇ..

    khusbhoo not yest confirmed to act in vinay rajkumar;s next

    ಅಪ್ಪ ಅಮ್ಮ ಪ್ರೀತಿ. ಇದು ವಿನಯ್ ರಾಜ್‍ಕುಮಾರ್ ಅಭಿನಯದ ಹೊಸ ಸಿನಿಮಾ. ಇನ್ನೂ ಶೂಟಿಂಗ್ ಶುರುವಾಗಿಲ್ಲ. ಚಿತ್ರದ ಪೋಸ್ಟರ್‍ನ್ನು ಮಾತ್ರ ಬಿಡುಗಡೆ ಮಾಡಲಾಗಿದೆ. ಆರಂಭದಲ್ಲಿ ಚಿತ್ರಕ್ಕೆ 

    ವಿನಯ್ ರಾಜ್‍ಕುಮಾರ್‍ಗೆ ಖುಷ್‍ಬೂ ಅಮ್ಮನಾಗಿ ಬರುತ್ತಿದ್ದಾರೆ ಎನ್ನಲಾಗಿತ್ತು. ಅದಕ್ಕೂ ಮೊದಲು ಆ ಪಾತ್ರಕ್ಕೆ ರಾಧಿಕಾ ಶರತ್ ಕುಮಾರ್ ಬರಲಿದ್ದಾರೆ ಎನ್ನಲಾಗಿತ್ತು. ಕೊನೆಗೆ ಖುಷ್‍ಬೂ ಅವರನ್ನು ಫೈನಲ್ ಮಾಡಿದ್ದ ಚಿತ್ರತಂಡ, ಚಿತ್ರದ ಪೋಸ್ಟರ್‍ನ್ನೂ ಬಿಡುಗಡೆ ಮಾಡಿತ್ತು. 

    ಈ ಕುರಿತಂತೆ ಚಿತ್ರಲೋಕದ ಸುದ್ದಿಗೆ ಟ್ವಿಟರ್‍ನಲ್ಲೇ ಪ್ರತಿಕ್ರಿಯೆ ನೀಡಿರುವ ಖುಷ್‍ಬೂ, ನಾನಿನ್ನೂ ಒಪ್ಪಿಕೊಂಡಿಲ್ಲ. ನನ್ನ ಅಂತಿಮ ನಿರ್ಧಾರವನ್ನು ಇನ್ನೂ ತಿಳಿಸಿಲ್ಲ ಎಂದಿದ್ದಾರೆ. ಹಾಗಾದರೆ, ಖುಷ್‍ಬೂ ಅವರು ಒಪ್ಪಿಗೆ ನೀಡುವ ಮುನ್ನವೇ ಚಿತ್ರತಂಡ ಆತುರಕ್ಕೆ ಬಿದ್ದಿದ್ದು ಏಕೆ..? ಪೋಸ್ಟರ್ ಬಿಡುಗಡೆ ಮಾಡಿದ್ದು ಏಕೆ..? ಚಿತ್ರತಂಡವೇ ಉತ್ತರಿಸಬೇಕು.

    ಮಾನಸ ರಾಧಾಕೃಷ್ಣನ್ ನಾಯಕಿಯಾಗಿರು ಚಿತ್ರಕ್ಕೆ, ಶ್ರೀಧರ್ ನಿರ್ದೇಶನವಿದೆ. ಎಸ್.ಎಲ್.ಎನ್. ಮೂರ್ತಿ ನಿರ್ಮಾಪಕರು. ಚಿತ್ರದ ಚಿತ್ರೀಕರಣಕ್ಕಾಗಿ ಲೊಕೇಷನ್ ಹುಡುಕಾಟ ನಡೆಯುತ್ತಿದೆ. ಸದ್ಯಕ್ಕೆ ತಾಯಿಯೇ ಫೈನಲ್ ಆಗಿಲ್ಲ.

  • ಅರ್ಜುನ್ ನನಗೆ 34 ವರ್ಷಗಳಿಂದ ಗೊತ್ತು - ಖುಷ್‍ಬೂ

    khushbhu stands with arjun sarja

    ಶೃತಿ ಹರಿಹರನ್ ಮೀಟೂ ಆರೋಪದ ನಂತರ, ಅರ್ಜುನ್ ಸರ್ಜಾ ಪರ ನಿಲ್ಲುವವರ ಸಂಖ್ಯೆ ಹೆಚ್ಚುತ್ತಲೇ ಹೋಗುತ್ತಿದೆ. ಅದರಲ್ಲೂ ಅರ್ಜುನ್ ಸರ್ಜಾ ಜೊತೆ ಹಲವು ಚಿತ್ರಗಳಲ್ಲಿ ನಟಿಸಿರುವ ಖುಷ್‍ಬೂ, ಅರ್ಜುನ್ ಸರ್ಜಾ ಬೆಂಬಲಕ್ಕೆ ನಿಂತಿದ್ದಾರೆ.

    `ನಾನು ಚಿತ್ರರಂಗಕ್ಕೆ ಬಂದಿದ್ದೇ ಅರ್ಜುನ್ ಸರ್ಜಾ ಚಿತ್ರದ ಮೂಲಕ. ಅವರೊಂದಿಗೆ ಹಲವಾರು ಚಿತ್ರಗಳಲ್ಲಿ ನಟಿಸಿದ್ದೇನೆ. ಅವರು ಸಹನಟರಷ್ಟೇ ಅಲ್ಲ, ನನ್ನ ಅತ್ಯುತ್ತಮ ಗೆಳೆಯರೂ ಹೌದು. ಅವರು ನನಗೆ 34 ವರ್ಷಗಳಿಂದ ಗೊತ್ತು. ಅವರ ಮೇಲೆ ಆರೋಪ ಮಾಡಿದ್ದಾರೆ ಎಂದರೆ ನಂಬೋಕೂ ಆಗುತ್ತಿಲ್ಲ. ಎಷ್ಟೋ ಬಾರಿ ಅವರೇ ನನಗೆ ರಕ್ಷಿಸಿದ್ದಾರೆ. ಈ ಸಮಯದಲ್ಲಿ ಅರ್ಜುನ್ ಜೊತೆ ನಾನು ನಿಲ್ಲಲೇಬೇಕು. ಶೃತಿಗೆ ನಾನು ಹೇಳೋದಿಷ್ಟೆ, ನೀವು ಈ ಮೂಲಕ ಒಬ್ಬ ವ್ಯಕ್ತಿಯನ್ನು ದೂಷಿಸುತ್ತಿಲ್ಲ. ನಿಮ್ಮ ಈ ಆರೋಪದಿಂದ ಆತನ ಪತ್ನಿ, ತಾಯಿ, ಇಬ್ಬರು ಹೆಣ್ಣು ಮಕ್ಕಳು.. ಎಲ್ಲರೂ ನೋವಲ್ಲಿ ಮುಳುಗಿದ್ದಾರೆ. ಅರ್ಜುನ್ ಇಷ್ಟು ವರ್ಷ ಗಳಿಸಿದ್ದ ಹೆಸರು, ಸಾಧನೆ ಎಲ್ಲದಕ್ಕೂ ಮಸಿ ಬಳಿದಿದ್ದೀರಿ. ಒಬ್ಬ ಸ್ನೇಹಿತೆಯಾಗಿ ನಾನು ಅರ್ಜುನ್ ಪರ ನಿಲ್ಲುತ್ತೇನೆ'.

    ಮೀಟೂ ಅಭಿಯಾನ ಶುರುವಾದಾಗ, ರವಿಚಂದ್ರನ್ ಬಗ್ಗೆ ಯಾರೋ ಒಬ್ಬರು ಕೆಟ್ಟದಾಗಿ ಕೇಳಿದ್ದಕ್ಕೆ ರವಿಚಂದ್ರನ್ ವ್ಯಕ್ತಿತ್ವವನ್ನೇ ಕಟ್ಟಿಕೊಟ್ಟಿದ್ದ ಖುಷ್‍ಬೂ, ಈ ಬಾರಿ ಅರ್ಜುನ್ ಸರ್ಜಾ ಬೆನ್ನಿಗೂ ನಿಂತಿದ್ದಾರೆ.

  • ಖುಷ್ಬೂ ತಮ್ಮ ಡಿಪಿಯನ್ನೇ ಬದಲಾಯಿಸಿದರು..!

    khushbu changes her twitter dp

    ಖುಷ್ಬೂ ಸುಂದರ್. ಅಂಬರೀಷ್ ಜೊತೆ ನಟಿಸಿದ್ದ ನೂರಾರು ನಾಯಕಿಯರಲ್ಲಿ ಅವರೂ ಒಬ್ಬರು. ಒಂಟಿ ಸಲಗ, ಅಂಬಿ-ಖುಷ್ಬೂ ಅಭಿನಯದ ಸೂಪರ್ ಹಿಟ್ ಸಿನಿಮಾ. ಸಿನಿಮಾದ ಹೊರತಾಗಿಯೂ ಅಂಬಿ-ಖುಷ್ಬೂ ಮಧ್ಯೆ ಅತ್ಯುತ್ತಮ ಸ್ನೇಹವಿತ್ತು.

    ನಾನು ಈಗ ಕಳೆದುಕೊಂಡಿದ್ದು ಒಬ್ಬ ಅತ್ಯುತ್ತಮ ಗೆಳೆಯನನ್ನ. ಸುಮ ಮತ್ತು ಅಭಿಯ ನೋವಿನಲ್ಲಿ ಜೊತೆಯಾಗಿರುತ್ತೇನೆ. ನಿಮ್ಮನ್ನು ಕಳೆದುಕೊಂಡ ನೋವು ಕಾಡುತ್ತಿದೆ ಅಂಬರೀಷ್ ಸರ್ ಎಂದಿದ್ದಾರೆ ಖುಷ್ಬೂ. ತಮ್ಮ ಟ್ವಿಟರ್ ಅಕೌಂಟ್ನ ಡಿಪಿಯನ್ನೇ ಬದಲಿಸಿದ್ದಾರೆ.

  • ಖುಷ್ಬೂರ 33 ವರ್ಷಗಳ ಕನಸು ನನಸಾಯ್ತು..!

    khushboo's dream comes true

    ರಣಧೀರನ ಬೆಡಗಿ ಖುಷ್​ ಬೂ, ಕನ್ನಡದಲ್ಲಷ್ಟೇ ಅಲ್ಲ, ತಮಿಳು, ತೆಲುಗು, ಹಿಂದಿಯಲ್ಲೂ ನಟಿಸಿದ್ದ ಸ್ಟಾರ್ ನಟಿ. ಆದರೆ, ಅವರು ತಮ್ಮ ಕನಸಿನ ಒಂದು ಕ್ಷಣಕ್ಕೆ 33 ವರ್ಷ ಕಾದಿದ್ದರು ಎಂದರೆ ನಂಬತ್ತೀರಾ..? ನಂಬಲೇಬೇಕು. ಏಕೆಂದರೆ, ಅದನ್ನು ಈಗ ಅವರೇ ಹೇಳಿಕೊಂಡಿದ್ದಾರೆ.ಅವರ ಕನಸು ದೊಡ್ಡದೇನಾಗಿರಲಿಲ್ಲ. ಅವರ ಕನಸಿನ ಹೀರೋ ಒಬ್ಬರನ್ನು ಭೇಟಿ ಮಾಡಬೇಕಿತ್ತು ಅಷ್ಟೆ.

    ಆ ಹೀರೋ ಒಂದು ಕಾಲದ ಟೀಮ್ ಇಂಡಿಯಾ ಕ್ರಿಕೆಟ್ ಆಟಗಾರ, ಹಾಲಿ ಟೀಮ್ ಇಂಡಿಯಾ ಕೋಚ್ ರವಿಶಾಸ್ತ್ರಿ. ಅವರನ್ನು ಇತ್ತೀಚೆಗಷ್ಟೇ ಭೇಟಿ ಮಾಡಿರುವ ಖುಷ್ಬೂ, 'ನಾನು ಕಂಡ ಕನಸು ನನಸಾಗಿದೆ. ನನ್ನ ಹೀರೋ ರವಿಶಾಸ್ತ್ರಿಯನ್ನು ಭೇಟಿಯಾದೆ. ಇನ್ನು ನನ್ನ ನಿರೀಕ್ಷೆಗೆ ತೆರೆಬಿದ್ದಿದೆ. ಅವರನ್ನು ಭೇಟಿಯಾಗಲು ಬರೋಬ್ಬರಿ 33 ವರ್ಷ ಎದುರು ನೋಡಿದೆ' ಎಂದು ಹೇಳಿಕೊಂಡಿದ್ದಾರೆ.

  • ದೇವಿಯಾಗಿ ಕನ್ನಡ ಕಿರುತೆರೆಗೆ ಬರುತ್ತಿದ್ದಾರೆ ಖುಷ್​ ಬೂ

    khushboo image

    ಖುಷ್ ಬೂ. ಒಂದಾನೊಂದು ಕಾಲದ ಯುವಕರ ಪಾಲಿನ ಕನಸಿನ ರಾಣಿ. ರಣಧೀರನ ಸುಂದರಿ ಖುಷ್ ಬೂ ಈಗ ಮತ್ತೊಮ್ಮೆ ಕನ್ನಡ ಕಿರುತೆರೆಯಲ್ಲಿ ಪ್ರತ್ಯಕ್ಷರಾಗುತ್ತಿದ್ದಾರೆ. ಅದೂ ದೇವಿಯ ರೂಪದಲ್ಲಿ. 

    ಉದಯ ಟಿವಿಯಲ್ಲಿ ಬರುತ್ತಿರುವ ನಂದಿನಿ ಧಾರಾವಾಹಿಯಲ್ಲಿ ಖುಷ್ ಬೂ, ಪಾರ್ವತಿ ಎಂಬ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಕಥೆಯಲ್ಲಿ ಆಕೆ ಇಚ್ಚಾಧಾರಿ ರೂಪ ಧರಿಸುವ ನಾಗಿಣಿಯೂ ಹೌದು. ಚಿತ್ರದ ಪ್ರಮುಖ ಪಾತ್ರಧಾರಿ ನಂದಿನಿಯ ತಾಯಿಯ ಪಾತ್ರವಂತೆ. 

    ಖುಷ್ ಬೂ ಅವರನ್ನೇ ಆಯ್ಕೆ ಮಾಡಿಕೊಳ್ಳೋಕೂ ಕಾರಣವಿದೆ. ನಂದಿನಿ ಕೇವಲ ಕನ್ನಡದಲ್ಲಷ್ಟೇ ಅಲ್ಲ, ತೆಲುಗು ಮತ್ತು ತಮಿಳಿನಲ್ಲೂ ಅದೇ ಹೆಸರಿನಲ್ಲಿ ಧಾರಾವಾಹಿಯಾಗಿ ಬರುತ್ತಿದೆ. ಏಕಕಾಲದಲ್ಲಿ ಮೂರೂ ಭಾಷೆಗೆ ಸಲ್ಲುವ ನಾಯಕಿಯಾಗಿರುವ ಖುಷ್ ಬೂ ಅವರನ್ನು ಅದೇ ಕಾರಣಕ್ಕಾಗಿ ಆ ಪಾತ್ರಕ್ಕೆ ಆರಿಸಲಾಗಿದೆ.

  • ಮೋದಿ ಬಾಲಿವುಡ್ ಪ್ರೀತಿ : ಜಗ್ಗೇಶ್, ಖುಷ್ಬೂ ಅಸಮಾಧಾನ

    jaggesh, khusbhoo expressed displeasure over modis ignorance towards south film industry

    ಮಹಾತ್ಮಾ ಗಾಂಧೀಜಿ 150ನೇ ಜಯಂತಿ ವಿಶೇಷವಾಗಿ ಕೇಂದ್ರ ಸರ್ಕಾರ ವಿಶೇಷ ಕಾರ್ಯಕ್ರಮವೊಂದನ್ನು ಆಯೋಜಿಸಿತ್ತು. ಕಾರ್ಯಕ್ರಮಕ್ಕೆ ಬಾಲಿವುಡ್ ಗಣ್ಯರನ್ನು ಆಹ್ವಾನಿಸಲಾಗಿತ್ತು. ಇಡೀ ಕಾರ್ಯಕ್ರಮದಲ್ಲಿ ದಕ್ಷಿಣ ಭಾರತದ ಯಾವುದೇ ಭಾಷೆಯ ಒಬ್ಬ ಕಲಾವಿದರೂ ಇರಲಿಲ್ಲ. ಮೋದಿಯವರ ಕಣ್ಣಿಗೆ ದಕ್ಷಿಣ ಭಾರತದ ಕನ್ನಡ, ತೆಲುಗು, ತಮಿಳು, ಮಲಯಾಳಂ ಕಲಾವಿದರು ಕಾಣಲಿಲ್ಲವೇ ಎಂದು ಹಲವು ದಕ್ಷಿಣದ ತಾರೆಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಸ್ವತಃ ಬಿಜೆಪಿ ಮುಖಂಡರೂ ಅಗಿರುವ ಜಗ್ಗೇಶ್ ಕಲಾರಂಗಕ್ಕೆ ಶಾರೂಕ್, ಅಮೀರ್ ಅವರೇ ಒಡೆಯರಲ್ಲ. ಕನ್ನಡದಲ್ಲೂ ಕಲಿಗಳು ಅನೇಕರಿದ್ದಾರೆ. ಪರಭಾಷೆಗಳಿಗೆ ಚಪ್ಪಾಳೆ ಹೊಡೆತ ತಪ್ಪಿಗೆ ನಾವು ಕನ್ನಡಿಗರು ದಾರಿ ತಪ್ಪಿದಂತೆ ಆಗಿದ್ದೇವೆ. ಉತ್ತರ ಭಾರತದ ನಟನಟಿಯರಿಗಿಂತ ನಾವು ಯಾವುದ್ರಲ್ಲೂ ಕಡಿಮೆ ಇಲ್ಲ ಎಂದು ಟ್ವೀಟ್ ಮಾಡಿದ್ದಾರೆ.

    ಬಿಜೆಪಿ ಮುಖಂಡರಾಗಿ ಮೋದಿ ವಿರುದ್ಧ ಮಾತನಾಡಿದ್ರಾ ಎಂಬ ಪ್ರಶ್ನೆಗೂ ಉತ್ತರ ಕೊಟ್ಟಿರುವ ಜಗ್ಗೇಶ್ ನಾನು ಮೋದಿ ವಿರುದ್ಧ ತಿರುಗಿಬೀಳುಷ್ಟು ದೊಡ್ಡವನಲ್ಲ. ಸೌತ್ ಇಂಡಿಯಾದವರನ್ನು ಬಿಟ್ಟಿದ್ದಕ್ಕೆ ವಿರೋಧಿಸಿದ್ದೇನೆ ಅಷ್ಟೆ ಎಂದು ಸ್ಪಷ್ಟಪಡಿಸಿದ್ದಾರೆ.

    ನಟಿ ಖುಷ್ಬೂ ಸುಂದರ್, ತೆಲುಗು ನಟ ರಾಮ್ ಚರಣ್ ಅವರ ಪತ್ನಿ ಉಪಾಸನಾ ಕೂಡಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದಕ್ಷಿಣ ಭಾರತದ ಕಲಾವಿದರನ್ನೂ ಇದೇ ರೀತಿ ಆಹ್ವಾನಿಸಿ ಗೌರವಿಸಿದರೆ ಆಗ ಸರಿ ಎನ್ನುತ್ತೇನೆ. ಭಾರತದ ಅಭಿವೃದ್ಧಿಗೆ ದಕ್ಷಿಣ ಭಾರತದವರ ಕೊಡುಗೆಯೂ ಇದೆ ಎಂಬುದನ್ನು ಮರೆಯಬಾರದು ಎಂಬರ್ಥದಲ್ಲಿ ಟ್ವೀಟ್ ಮಾಡಿದ್ದಾರೆ. ದಕ್ಷಿಣ ಭಾರತದ ಹಲವು ಕಲಾವಿದರು ಈ ನಡೆಯನ್ನು ಬೆಂಬಲಿಸಿದ್ದಾರೆ.

  • ರಾಜಕೀಯದ ಎಫೆಕ್ಟ್.. ಖುಷ್‍ಬೂ ಹೆಸರು ಬದಲಾವಣೆ

    khusbhoo sundar changes her name for political reasons

    ರಣಧೀರನ ಬೆಡಗಿ ಖುಷ್‍ಬೂ ತಮಿಳುನಾಡಿನಲ್ಲಿ ಕಾಂಗ್ರೆಸ್ ನಾಯಕಿ. ಮದುವೆಯಾದ ಮೇಲೆ ತಮ್ಮ ಹೆಸರನ್ನು ಖುಷ್‍ಬೂ ಸುಂದರ್ ಎಂದು ಬದಲಿಸಿಕೊಂಡಿರುವ ಖುಷ್‍ಬೂ, ಬಿಜೆಪಿಯನ್ನು ಸಾಮಾಜಿಕ ಜಾಲತಾಣದಲ್ಲಿ ತರಾಟೆಗೆ ತೆಗೆದುಕೊಳ್ಳುತ್ತಲೇ ಇರುತ್ತಾರೆ. ಹೀಗೆ ತರಾಟೆಗೆ ತೆಗೆದುಕೊಳ್ಳುವ ಖುಷ್‍ಬೂರನ್ನು ಬಿಜೆಪಿಯ ಟ್ವಿಟ್ಟಿಗರು, ಖುಷ್‍ಬೂ ಅವರ ನಿಜವಾದ ಹೆಸರು ಖುಷ್‍ಬೂ ಅಲ್ಲ, ನಖಟ್‍ಖಾನ್. ರಾಜಕೀಯಕ್ಕಾಗಿ ಖುಷ್‍ಬೂ ತಮ್ಮ ಹೆಸರು ಮರೆಮಾಚಿ, ಖುಷ್‍ಬೂ ಸುಂದರ್ ಎಂದಿಟ್ಟುಕೊಂಡಿದ್ದಾರೆ ಎಂದು ಹುಯಿಲೆಬ್ಬಿಸಿದರು.

    ಇದಕ್ಕೆ ಟ್ವಿಟರ್‍ನಲ್ಲಿ ತಿರುಗೇಟು ನೀಡಿದ ಖುಷ್‍ಬೂ, ತಮ್ಮ ಖಾತೆಯ ಹೆಸರನ್ನು ಖುಷ್‍ಬೂ ಸುಂದರ್, ಬಿಜೆಪಿಯವರಿಗಾಗಿ ನಖಟ್‍ಖಾನ್ ಎಂದು ಬದಲಾಯಿಸಿದರು.

    ಖುಷ್‍ಬೂ ಮುಸ್ಲಿಂ ಮನೆತನದವರು. ಚಿತ್ರರಂಗಕ್ಕೆ ಬಂದ ಮೇಲೆ ತಮ್ಮ ಹೆಸರು ಬದಲಾಯಿಸಿಕೊಂಡಿದ್ದರು. ಟ್ವಿಟರ್ ಹೆಸರು ಬದಲಿಸಿಕೊಂಡ ಖುಷ್‍ಬೂ, ಭಕ್ತರೇ, ನನ್ನ ಹೆಸರು ಇಡೀ ಭಾರತಕ್ಕೆ ಗೊತ್ತು. ಎರಡು ಹೆಸರುಗಳೂ ಗೊತ್ತು. ಅದನ್ನು ನಾನು ಮುಚ್ಚಿಟ್ಟಿಲ್ಲ. ಈಗ ನೀವು ಮುಚ್ಚಿಕೊಂಡಿರುವ ನಿಮ್ಮ ಮುಖವನ್ನು ತೋರಿಸಿ ಎಂದು ಸವಾಲು ಹಾಕಿದ್ದಾರೆ.

     

  • ವಿನಯ್ ರಾಜ್‍ಕುಮಾರ್‍ಗೆ ಖುಷ್‍ಬೂ ಅಮ್ಮ

    khusbhoo to act as vinay rajkumar's mother

    ನಟ ವಿನಯ್ ರಾಜ್‍ಕುಮಾರ್ ಅಭಿನಯದ ಅಪ್ಪ ಅಮ್ಮ ಪ್ರೀತಿ ಚಿತ್ರದಲ್ಲಿ ವಿನಯ್ ರಾಜ್‍ಕುಮಾರ್ ತಾಯಿಯ ಪಾತ್ರಕ್ಕೆ ಖುಷ್‍ಬೂ ಬರುತ್ತಿದ್ದಾರೆ. ಈ ಮೊದಲು ಈ ಪಾತ್ರಕ್ಕೆ ರಾಧಿಕಾ ಶರತ್‍ಕುಮಾರ್ ಬರಲಿದ್ದಾರೆ ಎನ್ನಲಾಗಿತ್ತು. ಆದರೆ, ಡೇಟ್ಸ್  ಸಮಸ್ಯೆಯಿಂದಾಗಿ ಆ ಜಾಗಕ್ಕೆ ಖುಷ್‍ಬೂ ಬಂದಿದ್ದಾರೆ.

    ಮಾನಸ ರಾಧಾಕೃಷ್ಣನ್ ನಾಯಕಿಯಾಗಿರು ಚಿತ್ರಕ್ಕೆ, ಶ್ರೀಧರ್ ನಿರ್ದೇಶನವಿದೆ. ಎಸ್.ಎಲ್.ಎನ್. ಮೂರ್ತಿ ನಿರ್ಮಾಪಕರು. ಚಿತ್ರದ ಚಿತ್ರೀಕರಣಕ್ಕಾಗಿ ಲೊಕೇಷನ್ ಹುಡುಕಾಟ ನಡೆಯುತ್ತಿದೆ.