ಸಹನಟ ಭುವನ್ ತೊಡೆ ಕಚ್ಚಿದ್ದ ಪ್ರಕರಣದಲ್ಲಿ ಬಿಗ್ಬಾಸ್ ಪ್ರಥಮ್ಗೆ ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿದೆ. 5 ಸಾವಿರ ರೂ. ನಗದ ಶ್ಯೂರಿಟಿ ಹಾಗೂ ಷರತ್ತು ವಿಧಿಸಿ ಜಾಮೀನು ನೀಡಿದೆ. ನಿಖೆಗೆ ಸಹಕರಿಸುವಂತೆ ಸೂಚಿಸಿದೆ.
ಜಾಮೀನು ನೀಡುವಾಗ ನ್ಯಾಯಾಧೀಶರು ಪ್ರಥಮ್ಗೆ ಬುದ್ಧಿವಾದ ಹೇಳಿದ್ದಾರೆ. ಏನಿದು ಹುಚ್ಚಾಟ..? ಸಾರ್ವಜನಿಕರ ಜೊತೆ ಇರುವವರು ಹೀಗೆ ಇರಬಾರದು. ಇದರಿಂದ ಸಮಾಜಕ್ಕೆ ಕೆಟ್ಟ ಸಂದೇಶ ಹೋಗುತ್ತೆ ಎಂದು ಬುದ್ಧಿ ಹೇಳಿದ್ದಾರೆ. ವಿಚಾರಣೆ ವೇಳೆ ಕೇಳದೇ ಇದ್ದರೂ ತಾನು ಬಿಗ್ಬಾಸ್ ವಿನ್ನರ್. 50 ಲಕ್ಷ ಬಹುಮಾನ ಗೆದ್ದಿದ್ದೆ. ಅದನ್ನು ಯೋಧರಿಗೆ ರೈತರಿಗೆ ನೀಡಿದ್ದೆ ಎಂದು ಹೇಳಿದ ಪ್ರಥಮ್. ದೂರು ನೀಡಲು ತಡವಾಗಿದ್ದಕ್ಕೆ ಕಾರಣ ಕೇಳಿದಾಗ, ಕುತ್ತಿಗೆ ನೋವಿಗೆ ಚಿಕಿತ್ಸೆ ಪಡೆಯಲು ಹೋಗಿದ್ದೆ ಎಂದು ವಿವರಣೆ ನೀಡಿದ್ದಾರೆ.