` aditi prahudeva, - chitraloka.com | Kannada Movie News, Reviews | Image

aditi prahudeva,

 • ಹಿಡ್ಕಳಿ.. ಹಿಡ್ಕಳಿ.. ಬ್ರಹ್ಮಚಾರಿ ಬರೋ ಡೇಟ್ ಗೊತ್ತಾಯ್ತು

  brahachari release date fixed

  ಹಿಡ್ಕ ಹಿಡ್ಕ ಹಿಡ್ಕ ವಸಿ ಹಿಡ್ಕ ಹಿಡ್ಕ ಹಿಡ್ಕ.. ಹಾಡಿನ ಮೂಲಕ ಪಡ್ಡೆಗಳ ಹೃದಯಕ್ಕೆ ಇಲಿಯನ್ನೇ ಬಿಟ್ಟಿರುವ ಬ್ರಹ್ಮಚಾರಿ ನವೆಂಬರ್ ೨೯ಕ್ಕೆ ಥಿಯೇಟರಿಗೆ ಬರುತ್ತಿದ್ದಾನೆ. ನೀನಾಸಂ ಸತೀಶ್ ಬ್ರಹ್ಮಚರ್ಯಕ್ಕೆ ಸವಾಲು ಹಾಕಿರೋದು ಶ್ಯಾನೆ ಟಾಪ್ ಆಗಿರೋ ಆದಿತಿ ಪ್ರಭುದೇವ.

  ಒಂದು ಯೂತ್ ಫುಲ್ ಕಾಮಿಡಿ ಕಥೆ ಹೇಳಿರೋದು ಚಂದ್ರಮೋಹನ್. ಟಿ.ಆರ್.ಚಂದ್ರಶೇಖರ್ ನಿರ್ಮಾಣದ ಚಿತ್ರದಲ್ಲಿ ಭರಪೂರ ಕಾಮಿಡಿಯಿದೆ. ಆದರೆ, ಇದು ಪಕ್ಕಾ ಫ್ಯಾಮಿಲಿ ಎಂಟರ್‌ಟೈನರ್. ಚಿತ್ರವನ್ನು ಕೆಆರ್‌ಜಿ ಸ್ಟುಡಿಯೋ ಮೂಲಕ ಕಾರ್ತಿಕ್ ಗೌಡ ವಿತರಣೆ ಮಾಡುತ್ತಿದ್ದಾರೆ. ೧೦೦% ವರ್ಜಿನ್ ಅನ್ನೋ ಟ್ಯಾಗ್‌ಲೈನ್ ಇರೋ ಚಿತ್ರ ೨೦೦% ಕಾಮಿಡಿ ಎನ್ನೋದ್ರಲ್ಲಿ ನೋ ಡೌಟ್ ಅಂತಿದೆ ಗಾಂಧಿನಗರ.

   

 • ಹ್ಮಚಾರಿ ಚಾಲಿಗೆ ದಾರ ಕಟ್ಟಿದ್ದೇಕೆ ಆದಿತಿ..?

  bramhachari movie scene leaked

  ಹಿಡ್ಕ ಹಿಡ್ಕ.. ವಸಿ.. ತಡ್ಕ.. ತಡ್ಕ.. ಹಾಡಿನ ಮೂಲಕ ಸೆನ್ಸೇಷನ್ ಸೃಷ್ಟಿಸಿರುವ ಬ್ರಹ್ಮಚಾರಿ ಚಿತ್ರದಲ್ಲಿನ ಸೀನ್‍ವೊಂದು ಲೀಕ್ ಆಗಿಬಿಟ್ಟಿದೆ. ಈ ದೃಶ್ಯದಲ್ಲಿ ನಟಿ ಆದಿತಿ ಪ್ರಭುದೇವ, ಸತೀಶ್ ಕಾಲಿಗೆ ದಾರ ಕಟ್ಟಿ ಕಿಚಾಯಿಸುವ ದೃಶ್ಯವಿದು. ಸಖತ್ ಫನ್ನಿಯಾಗೇನೋ ಇದೆ. ಆದರೆ, ಈ ದೃಶ್ಯ ಲೀಕ್ ಆಗಿದ್ದು ಹೇಗೆ..?

  ಉದಯ್ ಕೆ.ಮೆಹ್ತಾ ನಿರ್ಮಾಣದ ಬ್ರಹ್ಮಚಾರಿ ಚಿತ್ರಕ್ಕೆ ಚಂದ್ರಮೋಹನ್ ನಿರ್ದೇಶಕ. ಧರ್ಮವಿಶ್ ಸಂಗೀತವಿದೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery