` aditi prahudeva, - chitraloka.com | Kannada Movie News, Reviews | Image

aditi prahudeva,

 • ಡೈರೆಕ್ಟರ್ ಸಿಂಪಲ್ಲು.. ಮನರಂಜನೆ ಡಬ್ಬಲ್ಲು..

  bazaar is an total entertainment package

  ಸಿಂಪಲ್ ಸುನಿ ನಿರ್ದೇಶನದ ಬಜಾರ್ ನಾಳೆ ತೆರೆಗೆ ಬರುತ್ತಿದೆ. ಅವರ ಹೆಸರಿನ ಜೊತೆಗೆ ಸಿಂಪಲ್ ಅಂಟಿಕೊಂಡಿದ್ದರೂ, ಬಜಾರ್ ಚಿತ್ರದಲ್ಲಿ ಮನರಂಜನೆ ಡಬ್ಕು ಡಬಲ್ ಇದೆಯಂತೆ. ಹಾಗಂತ ಹೇಳಿರೋದು ಹೀರೋ ಧನ್ವೀರ್.

  ಇದು ನನ್ನ ಮೊದಲ ಸಿನಿಮಾ. ಸೀನ್ ಚೆನ್ನಾಗಿ ಮಾಡಿದಾಗ ಸುನಿಯವರು ನನ್ನನ್ನು ಹೊಗಳಿದ್ದಾರೆ. ಕೆಟ್ಟದಾಗಿ ಮಾಡಿದಾಗ ಬೈದೂ ಇದ್ದಾರೆ. ಅವರೊಂದಿಗೆ ಕೆಲಸ ಮಾಡಿದ್ದು ನನಗೆ ಮರೆಯಲಾಗದ ಅನುಭವ ಎಂದು ಹೇಳಿಕೊಂಡಿದ್ದಾರೆ.

  ಆದಿತಿ ಪ್ರಭುದೇವ ಜೊತೆಗಿನ ರೊಮ್ಯಾನ್ಸ್ ಯುವಕರಿಗೆ ಇಷ್ಟವಾಗುತ್ತೆ. ಆ್ಯಕ್ಷನ್ ಸೀನ್ಸ್ ಮೈ ನವಿರೇಳಿಸುತ್ತೆ. ಫ್ಯಾಮಿಲಿ ಡ್ರಾಮಾ, ಕಾಮಿಡಿ ಇಷ್ಟವಾಗುತ್ತೆ. ಒಟ್ಟಾರೆ ಇದು ಫುಲ್ ಮನರಂಜನೆ ಇರೋ ಸಿನಿಮಾ ಅನ್ನೋದು ಹೀರೋ ಕೊಡುವ ಭರವಸೆ.

  ತಿಮ್ಮೇಗೌಡ ನಿರ್ಮಾಣದ ಚಿತ್ರದಲ್ಲಿ ಭೂಗತ ಜಗತ್ತು ಮತ್ತು ಪಾರಿವಾಳಗಳ ರೇಸ್ ಸ್ಟೋರಿ ಇದೆ.

 • ತೋತಾಪುರಿಗೆ ಬಜಾರ್ ಹುಡುಗಿ

  aditi prabhudeva in thotapuri

  ಸಿಂಪಲ್ ಸುನಿ ನಿರ್ದೇಶನದ ಬಜಾರ್ ಚಿತ್ರದ ನಾಯಕಿ ಆದಿತಿ ಪ್ರಭುದೇವ್, ಜಗ್ಗೇಶ್-ವಿಜಯ್ ಪ್ರಸಾದ್ ಜೋಡಿಯ ತೋತಾಪುರಿ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಬಜಾರ್ ರಿಲೀಸ್‍ಗೂ ಮೊದಲೇ ಮತ್ತೊಂದು ದೊಡ್ಡ ಅವಕಾಶ ಆದಿತಿಯನ್ನು ಹುಡುಕಿಕೊಂಡು ಬಂದಿದೆ. ದುನಿಯಾ ವಿಜಯ್ ಜೊತೆ ಕುಸ್ತಿಯಲ್ಲಿ ನಾಯಕಿಯಾಗಿರುವ ಆದಿತಿ, ತೋತಾಪುರಿಗೂ ಬಣ್ಣ ತುಂಬಲಿದ್ದಾರೆ.

  ಸಿನಿಮಾ ನಾಯಕಿಗಾಗಿ ನಡೆದ ಅಡಿಷನ್‍ನಲ್ಲಿ ಕಾವ್ಯಾ ಶೆಟ್ಟಿ ಮತ್ತು ಆದಿತಿ ಪ್ರಭುದೇವ್ ಅಂತಿಮ ಸುತ್ತಿನಲ್ಲಿದ್ದರು. ಶುದ್ಧವಾದ ಭಾಷೆ ಮತ್ತು ಅಭಿನಯದ ಆಧಾರದ ಮೇಲೆ ಆದಿತಿ ಆಯ್ಕೆಯಾಗಲಿದ್ದಾರೆ ಎಂದಿದ್ದಾರೆ ನಿರ್ದೇಶಕ ವಿಜಯ್ ಪ್ರಸಾದ್.

  ತೋತಾಪುರಿಯಲ್ಲಿ ಆದಿತಿ, ಶಕೀಲಾ ಬಾನು ಎಂಬ ಸಂಪ್ರದಾಯಸ್ಥ ಮುಸ್ಲಿಂ ಹುಡುಗಿಯಾಗಿ ನಟಿಸಲಿದ್ದಾರೆ. ಉಡಾಳ ನಾಯಕನ ಪರಿಚಯವಾದ ಮೇಲೆ ಸಂಪೂರ್ಣ ಚೇಂಜ್ ಆಗುವ ಹುಡುಗಿಯಾಗಿ ನಟಿಸುತ್ತಿದ್ದಾರೆ. 

 • ದುನಿಯಾ ವಿಜಯ್ ಜೊತೆ ಆದಿತಿ ಕುಸ್ತಿ

  aditi prabhudeva in duniya vijay's kusthi

  ಧೈರ್ಯಂ ಚಿತ್ರದ ಮೂಲಕ ನಾಯಕಿಯಾಗಿ ಗುರುತಿಸಿಕೊಂಡ ಆದಿತಿ ಪ್ರಭುದೇವ, ದುನಿಯಾ ವಿಜಯ್‍ಗೆ ನಾಯಕಿಯಾಗುತ್ತಿದ್ದಾರೆ. ದುನಿಯಾ ವಿಜಯ್ ನಿರ್ಮಾಣದ ಕುಸ್ತಿ ಸಿನಿಮಾಗೆ ಆದಿತಿ ನಾಯಕಿ. ರಾಘು ಶಿವಮೊಗ್ಗ ನಿರ್ದೇಶನದ ಚಿತ್ರದಲ್ಲಿ ಆದಿತಿ ಪ್ರಭುದೇವಗೆ ಬೋಲ್ಡ್ ಪಾತ್ರವಿದೆಯಂತೆ.

  ಬಜಾರ್ ಚಿತ್ರದ ರಿಲೀಸ್‍ಗೆ ಕಾಯ್ತಿರೋ ಆದಿತಿ, ಆಪರೇಷನ್ ನಕ್ಷತ್ರ ಚಿತ್ರಕ್ಕೂ ನಾಯಕಿ. ದಾವಣಗೆರೆ ಹುಡುಗಿಯಾದ ಆದಿತಿಗೆ, ಕುಸ್ತಿ ಅಂದ್ರೆ ತುಂಬಾ ಇಷ್ಟವಂತೆ. ದಾವಣಗೆರೆಯಲ್ಲಿ ನಡೆಯೋ ಜಾತ್ರೆಗಳಲ್ಲಿ ಕುಸ್ತಿಗಳು ಕಾಮನ್. ನನಗೂ ಕುಸ್ತಿ ಬಗ್ಗೆ ಕ್ರೇಜ್ ಇದೆ. ಈಗ ಕುಸ್ತಿಯ ಕಥೆ ಆಧರಿಸಿದ ಸಿನಿಮಾದಲ್ಲಿ ನಟಿಸುತ್ತಿರುವುದು ಥ್ರಿಲ್ ಕೊಡುತ್ತಿದೆ ಎಂದಿದ್ದಾರೆ ಆದಿತಿ.

  ದುನಿಯಾ ವಿಜಯ್ ಜೊತೆಗೆ ಅವರ ಪುತ್ರ ಸಾಮ್ರಾಟ್ ಕೂಡಾ ನಟಿಸುತ್ತಿದ್ದು, ಕಲ್ಯಾಣಿ ವಿಜಿ ತಾಯಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

 • ನಗೆಯ ಹಬ್ಬದ ಸಂಭ್ರಮ ಬ್ರಹ್ಮಚಾರಿ

  be a part of laugh riot with bramhachari

  ನೀನಾಸಂ ಸತೀಶ್, ಉದಯ್ ಮೆಹ್ತಾ ಕಾಂಬಿನೇಷನ್‍ನಲ್ಲಿ ಬರುತ್ತಿರುವ ಸಿನಿಮಾ ಬ್ರಹ್ಮಚಾರಿ. ಲವ್ ಇನ್ ಮಂಡ್ಯ ನಂತರ ಹೀರೋ ಮತ್ತು ನಿರ್ಮಾಪಕರು ಮತ್ತೆ ಒಂದಾಗಿರುವ ಚಿತ್ರವಿದು. ಚಿತ್ರದ ನಿರ್ದೇಶಕರು ಡಬಲ್ ಎಂಜಿನ್, ಬಾಂಬೆ ಮಿಠಾಯಿ ಚಿತ್ರಗಳ ಚಂದ್ರಮೋಹನ್. ಆ ಚಿತ್ರಗಳಲ್ಲಿ ಚಂದ್ರಮೋಹನ್ ಡಬಲ್ ಮೀನಿಂಗ್ ಸಂಭಾಷಣೆಯನ್ನು ಹೆಚ್ಚು ಬಳಸಿದ್ದರು. ಹೀಗಾಗಿಯೇ ಇವರ ಜೊತೆ ಚಿತ್ರ ಮಾಡೋದಾ ಎಂಬ ಯೋಚನೆಯಲ್ಲಿದ್ದೆ. ಅವರ ಸಹವಾಸವೇ ಬೇಡ ಎಂದುಕೊಂಡಿದ್ದೆ. ಆದರೆ, ಕಥೆ ಕೇಳುವಾಗಲೇ ನಗು ತಡೆಯೋಕೆ ಆಗಲಿಲ್ಲ. ಹೀಗಾಗಿ ಒಪ್ಪಿಕೊಂಡೆ ಎನ್ನುವ ಸತೀಶ್, ಚಿತ್ರದಲ್ಲಿ ಮುಜುಗರ ತರುವ ಹಾಸ್ಯ ಇಲ್ಲ ಎನ್ನುತ್ತಾರೆ. 

  ನಾಯಕಿಯಾಗಿ ನಟಿಸಿರುವ ಆದಿತಿ ಪ್ರಭುದೇವ ಅವರಿಗೆ ಸತೀಶ್ ಎದುರು ನಗು ಕಂಟ್ರೋಲ್ ಮಾಡಿಕೊಂಡು ನಟಿಸುವುದೇ ದೊಡ್ಡ ಚಾಲೆಂಜ್ ಆಗಿತ್ತಂತೆ. ದತ್ತಣ್ಣ, ಕೆಆರ್‍ಪೇಟೆ ಶಿವರಾಜ್, ಅಚ್ಯುತ್ ಕುಮಾರ್, ಪದ್ಮಜಾ ರಾವ್ ನಟಿಸಿರುವ ಚಿತ್ರ, ವಿಶೇಷವಾಗಿ ಹುಡುಗರಿಗೆ ಇಷ್ಟವಾಗಲಿದೆ ಅನ್ನೋದು ಚಿತ್ರತಂಡದವರು ಅದರಲ್ಲೂ ಚಿತ್ರದ ನಾಯಕಿ ಆದಿತಿ ಕಾನ್ಫಿಡೆನ್ಸು.

 • ಪಾರಿವಾಳಗಳ ರೇಸ್ ಜಗತ್ತಿಗೆ ಸ್ವಾಗತ..

  welcome to the world of pigeon racinf

  ಸಿಂಪಲ್ ಸುನಿ ನಿರ್ದೇಶನದ ಬಜಾರ್ ತೆರೆಗೆ ಬರುತ್ತಿದೆ. ಪಾರಿವಾಳಗಳ ರೇಸ್ ಜಗತ್ತಿಗೆ ಸ್ವಾಗತ ಕೋರುತ್ತಿದೆ. ನಿಜವಾದ ಪಾರಿವಾಳಗಳ ಜೊತೆ ಧನ್ವೀರ್ ಮತ್ತು ಆದಿತಿ ಪ್ರಭುದೇವ ಎಂಬ ಹೊಚ್ಚ ಹೊಸ ಪಾರಿವಾಳಗಳೂ ಇವೆ. ಒಂದು ನಾಯಕ ಪಾರಿವಾಳ. ಇನ್ನೊಂದು ನಾಯಕಿ ಪಾರಿವಾಳ.

  ಪಾರಿವಾಳಗಳ ರೇಸ್, ಬೆಟ್ಟಿಂಗ್ ಜಗತ್ತು, ಭೂಗತ ಲೋಕ ಎಲ್ಲವನ್ನೂ ಒಳಗೊಂಡಿರುವ ಕಥೆಯಲ್ಲಿ ನವಿರಾದ ಪ್ರೇಮಕಥೆಯೊಂದಿದೆ. ಇದು ಕನ್ನಡಕ್ಕೆ ಹೊಸತು. ಸ್ಟೋರಿಯನ್ನು ಹೇಳಿರುವ ಶೈಲಿಯೂ ಹೊಸತು ಎನ್ನುವ ಭರವಸೆ ಸಿಂಪಲ್ ಸುನಿ ಅವರದ್ದು.

  ಪಾರಿವಾಳಗಳ ರೇಸ್ ಮತ್ತು ಬೆಟ್ಟಿಂಗ್‍ನ ದುಷ್ಟ್ಪರಿಣಾಮಗಳ ಬಗ್ಗೆ ಚಿತ್ರದಲ್ಲೊಂದು ಅದ್ಭುತ ಸಂದೇಶವಿದೆ ಎಂದಿದ್ದಾರೆ ನಿರ್ಮಾಪಕ ತಿಮ್ಮೇಗೌಡ. ಮಾರಿ-2 ಚಿತ್ರದಲ್ಲಿ ಪಾರಿವಾಳಗಳ ಕಥೆಯಿದ್ದರೂ, ಅದೇ ಬೇರೆ.. ಇದೇ ಬೇರೆ. 

 • ಫೆ.1ಕ್ಕೆ ಬಜಾರ್ ನಲ್ಲಿಯೇ ಡವ್ ಹೊಡೀತಾರೆ ಸುನಿ

  bazaar all set to fly on jan 1st

  ಡವ್ ಮಾಡೋದು.. ಡವ್ ಹಾಕೋದು.. ಡವ್ ಡವ್ ಡವ್.. ಹೀಗೆಲ್ಲ ಪದಗಳು ಕಿವಿಗೆ ಬಿದ್ದರೆ ಅದರ ಅರ್ಥ ಏನು ಅನ್ನೊದನ್ನ ಬೇರೆ ಹೇಳಬೇಕಿಲ್ಲ. ಈ ಬಾರಿ ಬಜಾರ್‍ನಲ್ಲಿ ಡವ್ ಹಾಕೋಕೆ ರೆಡಿಯಾಗಿರೋದು ಬಜಾರ್ ಸುನಿ.

  ಅನಿಮಲ್ ಬೋರ್ಡಿನವರ ಕಾನೂನಿನಿಂದಾಗಿ ಮುಂದೆ ಮುಂದೆ ಹೋಗಿದ್ದ ಬಜಾರ್ ಸಿನಿಮಾದ ರಿಲೀಸ್ ಫೆಬ್ರವರಿ 1ಕ್ಕೆ ಮತ್ತೆ ಫಿಕ್ಸ್ ಆಗಿದೆ. ಧನ್ವೀರ್ ಮತ್ತು ಆದಿತಿ ಪ್ರಭುದೇವ ನಟಿಸಿರುವ ಚಿತ್ರದಲ್ಲಿ ಪಾರಿವಾಳಗಳು ಮತ್ತು ಅಂಡರ್‍ವಲ್ರ್ಡ್ ಕಥೆ ಇದೆ.

 • ಬಜಾರ್ ಬರುವ ಮುನ್ನವೇ ಬಜಾರ್‍ನಲ್ಲಿ ಸ್ಟಾರ್ ಆದ ಹೀರೋಯಿನ್

  bazar acts lucky to its heroine aditi

  ಬಜಾರ್. ಮುಂದಿನ ವಾರ ತೆರೆಗೆ ಬರುತ್ತಿರುವ ಸಿಂಪಲ್ ಸುನಿ ನಿರ್ದೇಶನದ ಸಿನಿಮಾ. ಹೊಸಬರ ಪಾಲಿಗೆ ಲಕ್ಕಿ ಡೈರೆಕ್ಟರ್ ಆಗಿರುವ ಸುನಿ, ಈ ಚಿತ್ರದಲ್ಲಿ ಧನ್ವೀರ್ ಎಂಬ ಹೊಸ ಪ್ರತಿಭೆಯನ್ನು ತೆರೆಗೆ ತಂದಿದ್ದಾರೆ. ಚಿತ್ರದಲ್ಲಿರೋದು ಪಾರಿವಾಳಗಳ ರೇಸ್ ಮತ್ತು ಭೂಗತ ಜಗತ್ತಿನ ಸ್ಟೋರಿ. ಮೊದಲ ಚಿತ್ರದಲ್ಲೇ ಪಾರಿವಾಳಗಳ ಜೊತೆ ನಟಿಸುವಂತಹ ರಿಸ್ಕ್ ತೆಗೆದುಕೊಂಡು ಗೆದ್ದಿದ್ದಾರೆ ಹೀರೋ ಧನ್ವೀರ್.

  ಇದು ನನ್ನ ವೃತ್ತಿ ಜೀವನದ ವಿಶೇಷ ಸಿನಿಮಾ. ಔಟ್ & ಔಟ್ ಕಮರ್ಷಿಯಲ್ ಮೂವಿ. ನನ್ನ ಹಿಂದಿನ ಚಿತ್ರಗಳನ್ನು ತಲೆಯಲ್ಲಿಟ್ಟುಕೊಂಡು ಬರಬೇಡಿ. ಇದು ಬೇರೆಯೇ ಜಾನರ್‍ನ ಸಿನಿಮಾ ಎನ್ನುತ್ತಾರೆ ಸುನಿ. ಚಮಕ್ ನಂತರ ಇನ್ನೊಂದು ಸಕ್ಸಸ್ ಎದುರು ನೋಡುತ್ತಿದ್ದಾರೆ ಸುನಿ.

  ಬಜಾರ್ ಸ್ಪೆಷಲ್ಲಾಗಿರೋದು ನಾಯಕಿ ಆದಿತಿ ಪ್ರಭುದೇವಗೆ. ಏಕೆಂದರೆ, ಚಿತ್ರದ ಟ್ರೇಲರ್ ನೋಡಿಯೇ 3 ಚಿತ್ರಗಳ ಆಫರ್ ಬಂದಿದೆಯಂತೆ. ` ಈ ಚಿತ್ರದಲ್ಲಿ ನನ್ನದು ಪಾರಿಜಾತ ಎಂಬ ಹೆಸರಿನ ಮಧ್ಯಮ ವರ್ಗದ ಹುಡುಗಿಯ ಪಾತ್ರ. ಚಿತ್ರದ ಟ್ರೇಲರ್ ನೋಡಿ 3 ಚಿತ್ರಗಳಿಗೆ ಆಫರ್ ಬಂದಿದೆ. ಹೀಗಾಗಿ ಇದು ನನಗೆ ಅದೃಷ್ಟದ ಸಿನಿಮಾ' ಅಂತಾರೆ ಆದಿತಿ.

 • ಬಜಾರ್ ಬೆನ್ನು ಹತ್ತಿದ ಕಾಲಿವುಡ್

  taml producers wants to buy bazaar remake righs

  ಸಿಂಪಲ್ ಸುನಿ ನಿರ್ದೇಶನದ ಬಜಾರ್ ಚಿತ್ರ ಕಮರ್ಷಿಯಲ್ಲಾಗಿ ಹಿಟ್ ಆಗುತ್ತಿರುವಂತೆಯೇ, ಕಾಲಿವುಡ್ ನಿರ್ದೇಶಕರು, ನಿರ್ಮಾಪಕರು ಚಿತ್ರದ ಬಗ್ಗೆ ಆಸಕ್ತಿ ತೋರಿಸುತ್ತಿದ್ದಾರೆ. ಚಿತ್ರ ಬಿಡುಗಡೆಗೂ ಮೊದಲೇ ಕಥೆಯ ಒನ್‍ಲೈನ್ ಕೇಳಿ ಇಷ್ಟಪಟ್ಟಿದ್ದ ತಮಿಳು ನಿರ್ಮಾಪಕರು, ಚಿತ್ರದ ರೀಮೇಕ್ ಹಕ್ಕು ಖರೀದಿಗೆ ಮುಂದಾಗಿದ್ದಾರೆ.

  ಧನ್ವೀರ್, ಆದಿತಿ ಪ್ರಭುದೇವ, ಶರತ್ ಲೋಹಿತಾಶ್ವ, ಸಾಧುಕೋಕಿಲ ನಟಿಸಿರುವ ಚಿತ್ರದ ಹಿಂದಿ ಡಬ್ಬಿಂಗ್ ರೈಟ್ಸ್ ಈಗಾಗಲೇ ಸೇಲ್ ಆಗಿದೆ. ಚಿತ್ರವನ್ನು ನೋಡಿದ ಪ್ರೇಕ್ಷಕರಿಗೆ ಪಾರಿವಾಳಗಳ ಕಥೆ, ಭೂಗತ ಜಗತ್ತಿನ ಪ್ರೇಮಲೋಕದ ಕಥೆ ಇಷ್ಟವಾಗಿದೆ.

 • ಬಜಾರ್‍ಗೆ ಪಾರಿವಾಳಗಳೇ ವಿಲನ್..!

  bazar release postponed due to pigeons

  ಬಜಾರ್ ಚಿತ್ರದ ಬಿಡುಗಡೆ ಮುಂದಕ್ಕೆ ಹೋಗಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ಜನವರಿ 11ರ ಹೊತ್ತಿಗೆ ಬಜಾರ್ ಸಿನಿಮಾ ಥಿಯೇಟರುಗಳಲ್ಲಿರಬೇಕಿತ್ತು. ಸಿನಿಮಾದ ಎಲ್ಲ ಕೆಲಸ ಮುಗಿಸಿ, ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದ ಚಿತ್ರತಂಡ, ಸಿನಿಮಾ ಬಿಡುಗಡೆಯನ್ನೇ ಮುಂದಕ್ಕೆ ಹಾಕಿದೆ. ಕಾರಣ ಬೇರೇನಲ್ಲ. ಪಾರಿವಾಳಗಳು.

  ಈಗಾಗಲೇ ಚಿತ್ರತಂಡ ಹೇಳಿಕೊಂಡಿರೋ ಹಾಗೆ ಇಡೀ ಚಿತ್ರದ ಕಥೆ ಸುತ್ತುವುದೇ ಪಾರಿವಾಳಗಳ ಸುತ್ತ. ಪಾರಿವಾಳಗಳ ರೇಸ್ ಮತ್ತು ಭೂಗತ ಲೋಕದ ಕಥೆ ಇರುವ ಬಜಾರ್‍ನಲ್ಲಿ ನಿಜವಾದ ಪಾರಿವಾಳಗಳನ್ನು ಬಳಸಿಕೊಂಡಿರುವುದೇ ಚಿತ್ರತಂಡವನ್ನು ಕಾಡುತ್ತಿದೆ. 

  ವನ್ಯಜೀವಿ ಸಂರಕ್ಷಣಾ ಕಾಯಿದೆ ಎಷ್ಟು ಬಿಗಿಯಾಗಿದೆಯೆಂದರೆ, ಅದು ಬಜಾರ್ ಚಿತ್ರದ ಬಿಡುಗಡೆಯನ್ನೇ ತಡೆಹಿಡಿದಿದೆ. ಇನ್ನೊಂದು ಅರ್ಥದಲ್ಲಿ ಚಿತ್ರದ ಹೀರೋ ಆಗಿದ್ದ ಪಾರಿವಾಳಗಳೇ, ಈಗ ವಿಲನ್ ಆಗಿಬಿಟ್ಟಿವೆ.

  ಆಗಿರೋದು ಇಷ್ಟು. ಪಾರಿವಾಳಗಳನ್ನು ಸಿನಿಮಾಗಳಲ್ಲಿ ಬಳಸಿಕೊಳ್ಳೋದಕ್ಕೆ ಸೆಂಟ್ರಲ್ ಅನಿಮಲ್ ಬೋರ್ಡ್ ಅನುಮತಿ ಕೊಡಬೇಕು. ಇದಕ್ಕೆ ಚಿತ್ರತಂಡ ಪ್ರಕ್ರಿಯೆ ಆರಂಭಿಸಿತ್ತು. ಆದರೆ, ಅವರ ದುರದೃಷ್ಟ ನೋಡಿ. ಇನ್ನೇನು ಅಂತಿಮ ಅನುಮತಿ ಪತ್ರ ಸಿಗಬೇಕು ಎಂಬ ಹೊತ್ತಿನಲ್ಲಿ ಅನಿಮಲ್ ಬೋರ್ಡ್ ನಿರ್ದೇಶಕರು ಬದಲಾಗಿಬಿಟ್ಟರು. ಹೀಗಾಗಿ.. ಅನುಮತಿ ಪಡೆಯುವ ಪ್ರಕ್ರಿಯೆ ಮತ್ತೆ ಮೊದಲಿನಿಂದ ಶುರುವಾಯ್ತು. ಇದರಿಂದಾಗಿ ಸಿನಿಮಾವನ್ನು ಅನಿವಾರ್ಯವಾಗಿ ಬೇರೆ ದಿನಾಂಕದಲ್ಲಿ ರಿಲೀಸ್ ಮಾಡೋಕೆ ನಿರ್ಧರಿಸಿದೆ ಬಜಾರ್ ಟೀಂ.

  ತಿಮ್ಮೇಗೌಡ ನಿರ್ಮಾಣದ ಬಜಾರ್ ಚಿತ್ರದ ಮೂಲಕ ಧನ್ವೀರ್ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದು, ಆದಿತಿ ನಾಯಕಿ. ಸಿಂಪಲ್ ಸುನಿ ನಿರ್ದೇಶನದ ಚಿತ್ರ ಎಂಬ ಕಾರಣಕ್ಕೆ ಭಾರಿ ಕುತೂಹಲ ಹುಟ್ಟಿಸಿರುವ ಸಿನಿಮಾ ಬಿಡುಗಡೆಯ ಮುಂದಿನ ದಿನಾಂಕ ಸದ್ಯಕ್ಕೆ ಸಸ್ಪೆನ್ಸ್.

 • ಬಜಾರ್‍ನಲ್ಲಿ ಬೆಳ್ಳಿ.. ಚುಕ್ಕಿ.. ಯಾರವರು..?

  find out who is belli chukki in bazar

  ಬಜಾರ್. ಪಾರಿವಾಳಗಳ ರೇಸ್ ಮತ್ತು ಭೂಗತ ಜಗತ್ತಿನ ಕಥೆ. ಈ ಚಿತ್ರದಲ್ಲಿ ಹೀರೋ-ಹೀರೋಯಿನ್ ಅವರಷ್ಟೇ ಪ್ರಧಾನ ಪಾತ್ರ ಪಾರಿವಾಳಗಳದ್ದು. ಚಿತ್ರದಲ್ಲಿ ಎಲ್ಲರಿಗೂ ಇಷ್ಟವಾಗಿದ್ದೇ ಅದು. ಅದರಲ್ಲೂ ಶೂಟಿಂಗ್ ವೇಳೆ ಚಿತ್ರತಂಡದವರು ಪಾರಿವಾಳಗಳ ಜೊತೆ ಬಾಂಧವ್ಯ ಬೆಳೆಸಿಕೊಂಡುಬಿಟ್ಟಿದ್ದರು.

  ಅದರಲ್ಲೂ ನಾಯಕಿ ಆದಿತಿ, ಸೆಟ್‍ನಲ್ಲಿದ್ದ ನೂರಾರು ಪಾರಿವಾಳಗಳ ಪೈಕಿ ಎರಡನ್ನು ಸಾಕಿದ್ದರಂತೆ. ಅವುಗಳಿಗೆ ಬೆಳ್ಳಿ, ಚುಕ್ಕಿ ಎಂದೂ ಹೆಸರಿಟ್ಟಿದ್ದರಂತೆ. ಸೆಟ್‍ಗೆ ಬಂದ ಕೂಡಲೇ ಕಣ್ಣಿಗೆ ಬೆಳ್ಳಿ, ಚುಕ್ಕಿ ಕಾಣಿಸಿಕೊಳ್ಳಬೇಕು. ಇಲ್ಲದಿದ್ದರೆ ಏನೋ ತಳಮಳವಾಗುತ್ತಿತ್ತು. ಏನನ್ನೋ ಕಳೆದುಕೊಂಡಂತಾಗುತ್ತಿತ್ತು ಎಂದಿದ್ದಾರೆ ಆದಿತಿ ಪ್ರಭುದೇವ.

  ಚಿತ್ರದಲ್ಲಿ ಆದಿತಿ ಟೈಲರಿಂಗ್ ಹುಡುಗಿಯಾಗಿ ಕಾಣಿಸಿಕೊಂಡಿದ್ದು, ಮಹತ್ವಾಕಾಂಕ್ಷೆಯ ಹುಡುಗಿ. ಧನ್‍ವೀರ್ ನಾಯಕರಾಗಿರುವ ಚಿತ್ರಕ್ಕೆ, ಸಿಂಪಲ್ ಸುನಿ ನಿರ್ದೇಶಕ. ಮುಂದಿನ ವಾರ ತೆರೆಗೆ ಬರುತ್ತಿರುವ ಚಿತ್ರದ ಮೇಲೆ ಭಾರಿ ನಿರೀಕ್ಷೆ ಸೃಷ್ಟಿಯಾಗಿದೆ.

 • ಬ್ರಹ್ಮಚಾರಿ, ಫಸ್ಟ್ ನೈಟಲ್ಲೇ ರನೌಟ್..!!!

  bramhachari teaser brings smile

  ನೀನಾಸಂ ಸತೀಶ್ ಹುಟ್ಟುಹಬ್ಬದ ದಿನವೇ ರನೌಟ್ ಆಗಿ ಪ್ರೇಕ್ಷಕರ ಮುಖದಲ್ಲಿ ನಗು ಅರಳಿಸಿದ್ದಾರೆ. ಬ್ರಹ್ಮಚಾರಿ ಚಿತ್ರದ ಟೀಸರ್ ಅಷ್ಟರಮಟ್ಟಿಗೆ ನಗು ಉಕ್ಕಿಸಿದೆ. ಚಿತ್ರದ ಕಥೆ ಏನಿರಬಹುದು..? ಹೇಗಿರಬಹುದು.? ಎಂಬ ಕುತೂಹಲಕ್ಕೂ ಟೀಸರ್‍ನಲ್ಲಿ ಚಿಕ್ಕ ಉತ್ತರ ಸಿಕ್ಕಿದೆ. ಇನ್ನು ಬಾಯಿಚಪ್ಪರಿಸಿಕೊಂಡು, ಕಿವಿ ಅಗಲಿಸಿಕೊಂಡು ಚಿತ್ರಕ್ಕೆ ವೇಯ್ಟ್ ಮಾಡುವವರ ಸಂಖ್ಯೆಯೂ ಹೆಚ್ಚಿದೆ.

  ಉದಯ್ ಮೆಹ್ತಾ ಬ್ಯಾನರ್‍ನಲ್ಲಿ ಸತೀಶ್ ನಟಿಸುತ್ತಿರುವ ಬ್ರಹ್ಮಚಾರಿ ಚಿತ್ರದ ಟೀಸರ್‍ನಲ್ಲಿ ಕಾಮಿಡಿಯ ಟಚ್ ಇದೆ. ಫಸ್ಟ್ ನೈಟ್ ದಿನವೇ ಆದಿತಿ ಪ್ರಭುದೇವ ಎದುರು ರನೌಟ್ ಆಗುವ ಸತೀಶ್, ಡಾಕ್ಟರ್ ದತ್ತಣ್ಣನ ಬಳಿ ಕಷ್ಟ ಹೇಳಿಕೊಳ್ಳುವ ಪುಟ್ಟ ಬಿಟ್ ಟೀಸರ್‍ನಲ್ಲಿದೆ. ನಾಯಕನ ಕಷ್ಟ ಹೇಳೋದು ಶಿವರಾಜ್ ಕೆಆರ್ ಪೇಟೆ.

  ಇದು ಬಾಂಬೆ ಮಿಠಾಯಿ, ಡಬಲ್ ಎಂಜಿನ್ ಚಿತ್ರಗಳನ್ನು ನಿರ್ದೇಶಿಸಿದ್ದ ಚಂದ್ರಮೋಹನ್ ನಿರ್ದೇಶನದ ಸಿನಿಮಾ.

 • ಬ್ರಹ್ಮಚಾರಿಗೆ ಬಜಾರ್ ಬ್ಯೂಟಿ

  bazaar beauty joins bramhachaari

  ನೀನಾಸಂ ಸತೀಶ್, ಉದಯ್ ಮೆಹ್ತಾ ಜೋಡಿ, ಲವ್ ಇನ್ ಮಂಡ್ಯ ಚಿತ್ರದ ನಂತರ ಮತ್ತೆ ಒಂದಾಗಿರುವ ಸಿನಿಮಾ ಬ್ರಹ್ಮಚಾರಿ 100% ವರ್ಜಿನ್. ಈ ಬ್ರಹ್ಮಚಾರಿಯ ಚಿತ್ತ ಚಂಚಲಗೊಳಿಸಲು ಬಂದಿರುವ ಚೆಲುವೆ ಆದಿತಿ ಪ್ರಭುದೇವ.

  ಸಿಂಪಲ್ ಸುನಿ ನಿರ್ದೇಶನದ ಬಜಾರ್ ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟ ಆದಿತಿ, ಸ್ಯಾಂಡಲ್‍ವುಡ್‍ನ ಬ್ಯುಸಿ ನಟಿಯಾಗುತ್ತಿದ್ದಾರೆ. ಬಜಾರ್ ನಂತರ ಚಿರಂಜೀವಿ ಸರ್ಜಾ ಎದುರು ಸಿಂಗದಲ್ಲಿ ನಟಿಸುತ್ತಿರುವ ಆದಿತಿ, ಈಗ ನೀನಾಸಂ ಸತೀಶ್‍ಗೆ ಜೋಡಿಯಾಗಿದ್ದಾರೆ.

  ಆದಿತಿ ಕೈಲಿ ಈಗಾಗಲೇ ತೋತಾಪುರಿ, ರಂಗನಾಯಕಿ, ಸಿಂಗ ಹಾಗೂ ದುನಿಯಾ ವಿಜಯ್ ಜೊತೆ ಒಂದು ಸಿನಿಮಾ ಇದೆ. 

 • ಮತ್ತೊಂದು ಕಿಕ್ ಕೊಟ್ಟ ಬಜಾರ್ ಸುನಿ

  bazaar second trailer is out

  ಸಿಂಪಲ್ ಸುನಿ, ಚಮಕ್ ಸುನಿ.. ಈಗ ಬಜಾರ್ ಸುನಿಯಾಗಿದ್ದಾರೆ. ಪಾರಿವಾಳಗಳ ರೇಸ್, ಭೂಗತ ಜಗತ್ತು ಮತ್ತು ಮಧ್ಯದಲ್ಲೊಂದು ನವಿರಾದ ಪ್ರೇಮಕತೆಯನ್ನಿಟ್ಟುಕೊಂಡು ಬಜಾರ್ ಅನ್ನೋ ಚಿತ್ರ ಸೃಷ್ಟಿಸಿರುವ ಸುನಿ, ಅದೇ ಚಿತ್ರದ ಮತ್ತೊಂದು ಕಿಕ್ ಕೊಟ್ಟಿದ್ದಾರೆ. 

  ಹೊಸ ಪ್ರತಿಭೆ ಧನ್‍ವೀರ್, ಆದಿತಿ, ಶರತ್ ಲೋಹಿತಾಶ್ವ ನಟಸಿರುವ ಚಿತ್ರದ 2ನೇ ಟ್ರೇಲರ್ ಹೊರಬಿಟ್ಟಿದ್ದಾರೆ ಸುನಿ. ಪಾರಿವಾಳ ಎಂದರೆ ಪ್ರೀತಿ.. ಪಾರಿವಾಳ ಎಂದರೆ ಶಾಂತಿ.. ಆ ಎರಡನ್ನೂ ಹೊರತುಪಡಿಸಿದ ಇನ್ನೊಂದು ಕಥೆ ಇಲ್ಲಿದೆ ಎನ್ನುತ್ತಲೇ ವಿಭಿನ್ನ ಕಥೆಯೊಂದನ್ನು ಹೊರತೆಗೆದಿದ್ದಾರೆ ಸುನಿ.

  ಚಿತ್ರಕ್ಕೆ ರವಿ ಬಸ್ರೂರು ಸಂಗೀತವಿದ್ದು, ಹಾಡು ಹೆಜ್ಜೆ ಹಾಕುವಂತಿವೆ. ಚಿಗುರು ಮೀಸೆ ಹುಡುಗನಾಗಿ ಧನ್‍ವೀರ್, ಚೆಂದೊಳ್ಳಿ ಚೆಲುವೆಯಾಗಿ ಆದಿತಿ ಇಷ್ಟವಾಗುವಂತಿದ್ದಾರೆ. ಜನವರಿ 11ಕ್ಕೆ ಚಿತ್ರಮಂದಿರದ ಬಜಾರುಗಳಲ್ಲಿರಲಿದೆ ಬಜಾರ್.

 • ರಂಗನಾಯಕಿ ಮೊದಲ ಸಕ್ಸಸ್ ; ಅಂ.ರಾ. ಚಿತ್ರೋತ್ಸವಕ್ಕೆ ಆಯ್ಕೆ

  ranganayaki gets its firs success at goa film festiva

  ದಯಾಳ್ ಪದ್ಮನಾಭನ್ ಬ್ರಿಡ್ಜ್ ಸಿನಿಮಾಗಳಲ್ಲಿ ಭರ್ಜರಿ ಸದ್ದು ಮಾಡುತ್ತಿರುವ ನಿರ್ದೇಶಕ. ಮತ್ತೊಮ್ಮೆ ಯಶಸ್ಸಿನ ಏಣಿ ಹತ್ತಿದ್ದಾರೆ. ದಯಾಳ್ ಅವರ ರಂಗನಾಯಕಿ ಸಿನಿಮಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ. ಗೋವಾದಲ್ಲಿ ನಡೆಯಲಿರುವ 50ನೇ ಅಂ.ರಾ.ಚಲನಚಿತ್ರೋತ್ಸವಕ್ಕೆ ಪನೋರಮಾದಿಂದ ಅತ್ಯುತ್ತಮ ಕನ್ನಡ ಸಿನಿಮಾ ಆಗಿ ಆಯ್ಕೆಯಾಗಿದೆ ರಂಗನಾಯಕಿ.

  ರಂಗನಾಯಕಿ ಚಿತ್ರದಲ್ಲಿ ಆದಿತಿ ಪ್ರಭುದೇವ ನಾಯಕಿಯಾಗಿದ್ದು, ಗ್ಯಾಂಗ್ ರೇಪ್ ಕಥೆ ಚಿತ್ರದಲ್ಲಿದೆ. 76 ದೇಶಗಳ 200ಕ್ಕೂ ಹೆಚ್ಚು ಅತ್ಯುತ್ತಮ ಚಿತ್ರಗಳ ಪ್ರದರ್ಶನದಲ್ಲಿ ರಂಗನಾಯಕಿಯೂ ಇರಲಿದೆ. ರಂಗನಾಯಕಿ ನವೆಂಬರ್ 1ರಂದು ರಾಜ್ಯಾದ್ಯಂತ ರಿಲೀಸ್ ಆಗುತ್ತಿದೆ.

 • ರೊಮಾನ್ಸ್ ಮಾಡೋದೇ ಕಷ್ಟವಾಯ್ತಂತೆ..!

  bazaar hero has no experience in love

  ಬಜಾರ್ ಚಿತ್ರದಲ್ಲಿರೋದು ಪಾರಿವಾಳ, ಭೂಗತ ಲೋಕದ ಕಥೆ. ಆ್ಯಕ್ಷನ್ ಸೀನುಗಳಿಗೆ ಬರವೇ ಇಲ್ಲ. ಚಿತ್ರದ ನಾಯಕ ದನ್ವೀರ್‍ಗೆ ಇದು ಮೊದಲ ಸಿನಿಮಾ. ಎಲ್ಲವೂ ಹೊಸದು. ಹೀಗಿದ್ದರೂ ಚಿತ್ರದಲ್ಲಿ ಫೈಟಿಂಗ್, ಆ್ಯಕ್ಷನ್, ಕಾಮಿಡಿ ಸೀನುಗಳನ್ನು ಮಾಡೋಕೆ ಭಯವಾಗಿರಲಿಲ್ಲವಂತೆ. ಕಾರಣ, ನಿರ್ದೇಶಕ ಸಿಂಪಲ್ ಸುನಿ.

  ಅವರು ಎಲ್ಲವನ್ನೂ ವಿವರವಾಗಿ ಹೇಳುತ್ತಿದ್ದರು. ನಾನು ಫಾಲೋ ಮಾಡ್ತಿದ್ದೆ. ಆ್ಯಕ್ಷನ್, ಕಾಮಿಡಿ ಕಷ್ಟವಾಗಲಿಲ್ಲ. ಆದರೆ, ರೊಮ್ಯಾಂಟಿಕ್ ದೃಶ್ಯಗಳೇ ನಿಜಕ್ಕೂ ಕಷ್ಟವಾದವು ಎಂದು ನಗುತ್ತಾರೆ ಧನ್ವೀರ್.

  ಕಾರಣ, ಇಷ್ಟೆ, ಲವ್ವಲ್ಲಿ ಧನ್ವೀರ್ ಅನನುಭವಿ. ಎಕ್ಸ್‍ಪೀರಿಯನ್ಸ್ ನಾಸ್ತಿ ಹುಡುಗ. ಆದರೂ ನಟಿ ಆದಿತಿ ಜೊತೆ ಚೆನ್ನಾಗಿ ನಟಿಸಿದ್ದಾರಂತೆ. ಚಿತ್ರ ಇದೇ ವಾರ ತೆರೆಗೆ ಬರುತ್ತಿದೆ. 

 • ಶೂಟಿಂಗ್ ಮುಗಿದ ಮೇಲೂ ಕಾಡಿದ ಸಿನಿಮಾ ರಂಗನಾಯಕಿ

  ranganayaki heroine talks about her shooting experience

  ರಂಗನಾಯಕಿ ಟ್ರೇಲರ್‍ಗೆ ಪ್ರೇಕ್ಷಕರಿಂದ ಭರಪೂರ ಮೆಚ್ಚುಗೆ ಸಿಗುತ್ತಿದೆ. ನಿರ್ದೇಶಕ ದಯಾಳ್, ಈ ಬಾರಿ ಅತ್ಯಾಚಾರದ ವಸ್ತುವನ್ನೆತ್ತಿಕೊಂಡಿದ್ದಾರೆ. ನಿರ್ಭಯ ಬದುಕಿದ್ದರೆ ಕಾನೂನು ಮತ್ತು ಜೀವನವನ್ನು ಯಾವ ರೀತಿ ಎದುರಿಸಬೇಕಾಗಿತ್ತು ಎನ್ನುವ ಕಲ್ಪನೆಯಲ್ಲಿ ಅರಳಿದ ಚಿತ್ರ ರಂಗನಾಯಕಿ. ಆ ಪಾತ್ರಕ್ಕೆ ಜೀವ ತುಂಬಿರುವ ಆದಿತಿ ಪ್ರಭುದೇವ ತಮ್ಮ ಪಾತ್ರದ ಅನುಭವದ ಕುರಿತು ಹೇಳಿಕೊಂಡಿದ್ದಾರೆ.

  `ಸಾಮಾನ್ಯವಾಗಿ ಯಾರಾದರೂ ಹುಡುಗರು ನಮ್ಮ ಮೈ ಮುಟ್ಟಿದರೇನೇ ಕೋಪ ಬರುತ್ತೆ. ಅಂಥಾದ್ದರಲ್ಲಿ ಗ್ಯಾಂಗ್‍ರೇಪ್ ಊಹಿಸಿಕೊಳ್ಳೋಕೂ ಸಾಧ್ಯವಿಲ್ಲ. ಕೆಲವು ದೃಶ್ಯಗಳನ್ನು ಓದಿದಾಗ, ನಟಿಸಿದಾಗ ಕಣ್ಣೀರು ಹಾಕಿದ್ದೇನೆ. ನೆನಪಿಸಿಕೊಂಡು ನೆನಪಿಸಿಕೊಂಡು ಅತ್ತಿದ್ದೇನೆ. ಅಷ್ಟರಮಟ್ಟಿಗೆ ಈ ಪಾತ್ರ ನನ್ನನ್ನು ಕಾಡಿದೆ'' ಎಂದಿದ್ದಾರೆ ಆದಿತಿ.

 • ಶ್ಯಾನೆ ಟಾಪಾಗವ್ಳೆ.. ಗಾಳಿಪಟ ಹಾರಿಸ್ತಾವ್ಳೆ..

  aditi prabhudeva in gaalipata 2

  ಯೋಗರಾಜ್ ಭಟ್ಟರ ಹೊಸ ಸಿನಿಮಾ ಗಾಳಿಪಟ-2ಗೆ ಮತ್ತೊಬ್ಬ ಹೀರೋಯಿನ್ ಆಯ್ಕೆಯಾಗಿದೆ. ಈಗಾಗಲೇ ಪಂಚತಂತ್ರದ ಸೋನಲ್ ಮಂಥೆರೋ, ಶರ್ಮಿಳಾ ಮಾಂಡ್ರೆ ನಾಯಕಿಯರಾಗಿ ಆಯ್ಕೆಯಾಗಿದ್ದರು. ಶರಣ್, ರಿಷಿ ಹಾಗೂ ನಿರ್ದೇಶಕ ಪವನ್ ಕುಮಾರ್ ನಾಯಕರಾಗಿರುವ ಚಿತ್ರವಿದು. ಈಗ 3ನೇ ನಾಯಕಿಯಾಗಿ ಆದಿತಿ ಪ್ರಭುದೇವ ಆಯ್ಕೆಯಾಗಿದ್ದಾರೆ.

  ಸಿಂಪಲ್ ಸುನಿ ಶೋಧಿಸಿದ ಪ್ರತಿಭೆ ಆದಿತಿ ಪ್ರಭುದೇವ. ಬಜಾರ್ ಹುಡುಗಿ. ಈಗ ಶ್ಯಾನೆ ಟಾಪಾಗವ್ಳೆ ಹಾಡಿನಿಂದ ಟಾಪ್‍ನಲ್ಲಿರೋ ನಟಿ. ಈ ಮೂವರು ನಾಯಕರಲ್ಲಿ ಆದಿತಿ ಯಾರಿಗೆ ನಾಯಕಿ ಅನ್ನೋದು ಭಟ್ಟರಿಗೆ ಮಾತ್ರ ಗೊತ್ತು. 

  ಆದಿತಿ ಪ್ರಭುದೇವ ಸದ್ಯಕ್ಕೆ ಬ್ರಹ್ಮಚಾರಿ, ಸಿಂಗ, ರಂಗನಾಯಕಿ, ತೋತಾಪುರಿ, ಕುಸ್ತಿ, ಆಪರೇಷನ್ ನಕ್ಷತ್ರಗಳಲ್ಲಿ ಬ್ಯುಸಿಯಾಗಿದ್ದಾರೆ.

 • ಶ್ಯಾನೆ ಟಾಪ್ ಹುಡುಗಿಯನ್ನು ರಿಜೆಕ್ಟ್ ಮಾಡಿದ್ದರಂತೆ..!

  shane topagavle heroine was rejected from 20 projects

  ಸಿಂಗ ಚಿತ್ರದ ಶ್ಯಾನೆ ಟಾಪಾಗವ್ಳೆ ಹಿಟ್ ಆಗಿದ್ದೇ ತಡ.. ಯಾರೀ ನಾಗಕನ್ನಿಕೆ ಎಂದು ಹುಡುಕಾಡಿದವರ ಸಂಖ್ಯೆ ಲಕ್ಷ ಲಕ್ಷ. ಅದಿತಿ ಪ್ರಭುದೇವ ನಾಗಕನ್ನಿಕೆಯಾಗಿಯೇ ಕನ್ನಡ ಕಲಾರಸಿಕರಿಗೆ ಪರಿಚಯವಾದ ಹುಡುಗಿ.

  ಧೈರ್ಯಂ ಮೂಲಕ ಪದಾರ್ಪಣೆ ಮಾಡಿ, ಬಜಾರ್‍ನಲ್ಲಿ ಭರ್ಜರಿಯಾಗಿ ಸದ್ದು ಮಾಡಿದ್ದ ಅದಿತಿ, ಈಗ ಸಿಂಗಂನಿಂದ ಇನ್ನೂ ಒಂದು ಎತ್ತರಕ್ಕೇರಿದ್ದಾರೆ. 3 ವರ್ಷಗಳಲ್ಲಿ 9 ಚಿತ್ರಗಳಿಗೆ ಸಹಿ ಮಾಡಿರುವ ಬ್ಯುಸಿ ಹೀರೋಯಿನ್ ಅದಿತಿ.

  ಆದರೆ, ಇದೇ ಅದಿತಿಯನ್ನು ಸುಮಾರು 20 ಚಿತ್ರಗಳಿಂದ ರಿಜೆಕ್ಟ್ ಮಾಡಲಾಗಿತ್ತಂತೆ.

  ಧೈರ್ಯಂ ಸಿನಿಮಾ ನಂತರ ಸಿನಿಮಾಗಳಲ್ಲಿ ಅವಕಾಶಕ್ಕಾಗಿ ಕಾದೆ. ಇದರ ನಡುವೆ ಸೀರಿಯಲ್ ಅವಕಾಶ ಸಿಕ್ಕಿತು. ಆದರೆ, ಸುಮಾರು 20ಕ್ಕೂ ಹೆಚ್ಚು ಸಿನಿಮಾಗಳ ಅಡಿಷನ್‍ನಲ್ಲಿ ಸೀರಿಯಲ್‍ನಲ್ಲಿ ನಟಿಸುತ್ತಿದ್ದೇನೆ ಎನ್ನುವ ಕಾರಣಕ್ಕಾಗಿಯೇ ರಿಜೆಕ್ಟ್ ಮಾಡಿದ್ರು. ಆದರೆ ಅದರ ಬಗ್ಗೆ ನನಗೆ ಬೇಜಾರಿಲ್ಲ. ಅದು ನನಗೆ ಅನ್ನ ಹಾಕಿದೆ. ಅಭಿನಯ ಕಲಿಸಿದೆ ಎನ್ನುತ್ತಾರೆ ಅದಿತಿ.

  ಸಿಂಪಲ್ ಸುನಿ ನಿರ್ದೇಶನದ ಬಜಾರ್ ನಂತರ ಅದಿತಿ ಗುರುತಿಸಿಕೊಂಡರು. ಈಗ ಕೈತುಂಬಾ ಚಿತ್ರಗಳು. ಯೋಗರಾಜ್ ಭಟ್, ದಯಾಳ್ ಪದ್ಮನಾಭನ್ ಮೊದಲಾದ ನಿರ್ದೇಶಕರ ಚಿತ್ರಗಳಲ್ಲಿ, ಜಗ್ಗೇಶ್, ದುನಿಯಾ ವಿಜಯ್ ಮೊದಲಾದ ನಟರ ಚಿತ್ರಗಳಲ್ಲಿ ಈಗ ಅದಿತಿ ನಟಿಸುತ್ತಿದ್ದಾರೆ. 

  ಸೀರಿಯಲ್‍ನವರು ಅಂದ್ರೆ ಯಾಕೆ ಹಾಗೆ ಮಾಡ್ತಾರೋ ಗೊತ್ತಿಲ್ಲ. ದರ್ಶನ್, ಯಶ್, ಗಣೇಶ್, ರಾಧಿಕಾ ಪಂಡಿತ್, ರಚಿತಾ ರಾಮ್.. ಇವರೆಲ್ಲರೂ ಸೀರಿಯಲ್‍ನಿಂದಲೇ ಬಂದವರಲ್ಲವೇ ಎಂದು ಪ್ರಶ್ನಿಸುವ ಅದಿತಿಗೆ ಅದು ಈಗಲೂ ಅರ್ಥವೇ ಆಗದ ಸಂಗತಿ. ಸದ್ಯಕ್ಕಂತೂ ಅದಿತಿ ಶ್ಯಾನೆ ಟಾಪಾಗವ್ಳೆ.

 • ಶ್ರೀಮುರಳಿ ಭರಾಟೆಗೆ ನಾಯಕಿಯಾಗಿ ಆದಿತಿ ಪ್ರಭುದೇವ ಎಂಟ್ರಿ..!!!

  aditi prabhudeva joins srimurali's bharaate

  ಶ್ರೀಮುರಳಿ-ಶ್ರೀಲೀಲಾ ಅಭಿನಯದ ಭರಾಟೆ ಚಿತ್ರಕ್ಕೆ ಹೊಸ ಹುಡುಗಿ ಎಂಟ್ರಿ ಕೊಟ್ಟಿದ್ದಾರೆ. ಚಿತ್ರದಲ್ಲಿ ರಚಿತಾ ರಾಮ್ ಗೆಸ್ಟ್ ರೋಲ್‍ನಲ್ಲಿದ್ದಾರೆ. ಹೀಗಿರುವಾಗ ಆದಿತಿ ಪ್ರಭುದೇವ ನಾಯಕಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಅರೆ ಶ್ರೀಲೀಲಾ ನಾಯಕಿಯಾಗಿರೋವಾಗ ಇನ್ನೊಬ್ಬ ನಾಯಕಿ ಹೇಗೆ ಬರೋಕೆ ಸಾಧ್ಯ..? ಆಲ್‍ಮೋಸ್ಟ್ ಶೂಟಿಂಗ್ ಮುಗಿಸಿರುವ ಸಿನಿಮಾಗೆ ಹೊಸ ಹೀರೋಯಿನ್ ಹೇಗೆ ಬರ್ತಾರೆ ಎಂಬ ನಿಮ್ಮ ಕುತೂಹಲಕ್ಕೆ ಉತ್ತರ ಇಷ್ಟೆ.

  ಚಿತ್ರಕ್ಕೆ ಶ್ರೀಲೀಲಾ ಅವರೇ ನಾಯಕಿ. ನೋ ಡೌಟ್. ಆದರೆ ಶ್ರೀಲೀಲಾ ಪಾತ್ರಕ್ಕೆ ಡಬ್ ಮಾಡಿರುವುದು ಆದಿತಿ ಪ್ರಭುದೇವ. ನಾಯಕಿಯೊಬ್ಬರ ಪಾತ್ರಕ್ಕೆ ಇನ್ನೊಬ್ಬ ನಾಯಕಿ ಡಬ್ ಮಾಡಿರುವುದೇ ವಿಶೇಷ.

  ಚೇತನ್ ಕುಮಾರ್ ನಿರ್ದೇಶನದ ಭರಾಟೆ ಚಿತ್ರ ರಿಲೀಸ್‍ಗೂ ಮುನ್ನವೇ ದೊಡ್ಡ ಹವಾ ಎಬ್ಬಿಸಿದೆ. ನಿರ್ಮಾಪಕ ಸುಪ್ರೀತ್ ಚಿತ್ರವನ್ನು ಅಕ್ಟೋಬರ್‍ನಲ್ಲಿ ರಿಲೀಸ್ ಮಾಡಲು ಪ್ಲಾನ್ ಹಾಕಿಕೊಂಡಿದ್ದಾರೆ.

 • ಸುನಿಗೆ ಬಜಾರ್ ಸಿಕ್ಸರ್

  bazar is sixth movie for suni

  ಬಜಾರ್. ಸಿಂಪಲ್ ಸುನಿ ನಿರ್ದೇಶನದ ಚಿತ್ರ ಎಂಬ ಕಾರಣಕ್ಕಾಗಿಯೇ ಕುತೂಹಲ ಹುಟ್ಟಿಸಿರುವ ಸಿನಿಮಾ. ಇದು ಅವರ ನಿರ್ದೇಶನದ ಆರನೇ ಸಿನಿಮಾ. ಹೀಗಾಗಿಯೇ ಭರ್ಜರಿ ಸಿಕ್ಸರ್ ನಿರೀಕ್ಷೆಯಲ್ಲಿದ್ದಾರೆ ಸುನಿ.

  2013ರಲ್ಲಿ ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಚಿತ್ರದ ಮೂಲಕ ರಕ್ಷಿತ್ ಶೆಟ್ಟಿ ಎಂಬ ಸ್ಟಾರ್ ಹುಟ್ಟಿಗೆ ಕಾರಣರಾದ ಸುನಿ, ಈಗ ಧನ್‍ವೀರ್ ಅವರನ್ನು ಈ ಚಿತ್ರದ ಮೂಲಕ ಪರಿಚಯಿಸುತ್ತಿದ್ದಾರೆ.

  ಬಜಾರ್, ಸುನಿ ಕೆರಿಯರ್‍ನಲ್ಲಿಯೇ ವಿಭಿನ್ನ ಕಥಾ ಹಂದರ ಹೊಂದಿರುವ ಸಿನಿಮಾ. ಪಾರಿವಾಳಗಳ ರೇಸ್‍ನ ಕಥೆ ಚಿತ್ರದಲ್ಲಿದೆ. ಪಾರಿವಾಳಗಳ ರೇಸ್, ಭೂಗತ ಜಗತ್ತಿನ ಕಥೆ ಹೇಳುತ್ತಿರುವ ಸುನಿ, ಫೈಟ್ಸ್, ರೊಮ್ಯಾನ್ಸ್, ಕಾಮಿಡಿಯನ್ನು ಹದವಾಗಿ ಬೆರೆಸಿ ತೆಗೆದಿರುವ ಪಾಕ ಬಜಾರ್.

  ಆದಿತಿ ಪ್ರಭುದೇವ ಚಿತ್ರದ ನಾಯಕಿ. ಚಿತ್ರದ 2ನೇ ಟ್ರೇಲರ್ 3ನೇ ತಾರೀಕು ರಿಲೀಸ್ ಆಗುತ್ತಿದ್ದು, ಸಿನಿಮಾ ಜನವರಿ 2ನೇ ವಾರದಲ್ಲಿ ತೆರೆಗೆ ಬರಲಿದೆ.

Ayushmanbhava Movie Gallery

Ellidhe Illitanaka Movie Gallery