` divya spandana, - chitraloka.com | Kannada Movie News, Reviews | Image

divya spandana,

 • ಇನ್ಮೇಲೆ ಸಿನಿಮಾ ರಂಗಕ್ಕೆ ಬರಲ್ಲ - ರಮ್ಯಾ

  politician ramya says no cinema

  ಚಿತ್ರನಟಿ ರಮ್ಯಾ ಈಗ ರಾಜಕಾರಣದಲ್ಲೇ ಫುಲ್ ಬ್ಯುಸಿ. ಚಿತ್ರರಂಗದಲ್ಲಿರುವಷ್ಟು ದಿನವೂ ಮೋಹಕ ತಾರೆ ಎಂಬ ಬಿರುದಿಗೆ ಪಾತ್ರರಾಗಿದ್ದ ರಮ್ಯಾ, ಈಗ ಚಿತ್ರರಂಗವನ್ನೇ ತೊರೆಯಲು ನಿರ್ಧರಿಸಿದ್ದಾರೆ. ರಮ್ಯಾ ಅವರ ಅಭಿನಯದ, ತೆರೆ ಕಂಡ ಕಟ್ಟಕಡೆಯ  ಸಿನಿಮಾ ನಾಗರಹಾವು. ಅದೂ ಕೂಡಾ ರಾಜಕೀಯ ಸೇರುವ ಮುನ್ನ ನಟಿಸಿದ್ದ ಸಿನಿಮಾ. 

  ಸಂಸದೆಯಾದ ಮೇಲೆ ಚಿತ್ರರಂಗದಿಂದ ಹೆಚ್ಚೂ ಕಡಿಮೆ ದೂರ ಇರುವ ರಮ್ಯಾ, ಇನ್ನು ಮುಂದೆ ಮತ್ತೆ ಬಣ್ಣ ಹಚ್ಚೋದಿಲ್ಲ ಎಂದು ಸ್ಪಷ್ಟವಾಗಿ ಹೇಳಿಬಿಟ್ಟಿದ್ದಾರೆ. ದೆಹಲಿಯಲ್ಲೇ ಇರುವ ರಮ್ಯಾ, ಮಂಡ್ಯದಲ್ಲೂ ಕಾಣಿಸಿಕೊಂಡಿಲ್ಲ. ರಾಹುಲ್ ಗಾಂಧಿ ಬಂದಾಗಲೂ ಮಂಡ್ಯಕ್ಕೆ ಬರಲಿಲ್ಲ. 

  ದೆಹಲಿಯಲ್ಲಿ ನನ್ನನ್ನು ಯಾರೂ ಗುರುತಿಸೋದಿಲ್ಲ. ಹೀಗಾಗಿ ನಾನು ದೆಹಲಿಯಲ್ಲಿ ನನ್ನ ಖಾಸಗಿ ಜೀವನ ಎಂಜಾಯ್ ಮಾಡ್ತೇನೆ. ಸಿನಿಮಾ ನೋಡುತ್ತಿದ್ದರೆ, ಇವಳು ನಾನೇನಾ ಎನ್ನಿಸುತ್ತೆ. ಇನ್ನು ಮತ್ತೆ ಮೇಕಪ್ ಮಾಡಿಕೊಳ್ಳೋ ಮಾತೇ ಇಲ್ಲ ಎಂದಿದ್ದಾರೆ ರಮ್ಯಾ. 

  ಸ್ಸೋ.. ಇನ್ನು ರಮ್ಯಾ ಅವರನ್ನು ಮಾಜಿ ಚಿತ್ರನಟಿ ಎನ್ನಬಹುದಾ..? 

 • ರಮ್ಯಾ ಜೊತೆ ಕೆಲಸ ಮಾಡಬೇಕಾ..? ಅರ್ಜಿ ಹಾಕಿ. ಆದರೆ...

  ramya image

  ನಿಮಗೆ ರಮ್ಯಾ ಜೊತೆ ಕೆಲಸ ಮಾಡಲು ಆಸಕ್ತಿ ಇದೆಯೇ..?

  ಕನ್ನಡ, ಮಲಯಾಳಂ, ತೆಲುಗು, ಗುಜರಾತಿ ಭಾಷೆ ಗೊತ್ತಿದೆಯೇ? ತರ್ಜುಮೆ ಮಾಡುವುದು ಗೊತ್ತಿದೆಯೇ..? ಹಾಗಾದರೆ ಅರ್ಜಿ ಹಾಕಿ. ಕೆಲಸ ಸಿಕ್ಕರೂ ಸಿಗಬಹುದು. ಆದರೆ, ಕೆಲಸ ಸಿಗೋದು ಚಿತ್ರರಂಗದಲ್ಲಿ ಅಲ್ಲ. ರಾಜಕೀಯದಲ್ಲಿ. ರಮ್ಯಾ ನಟಿಯಷ್ಟೇ ಅಲ್ಲ, ಕಾಂಗ್ರೆಸ್‍ನ ಸಾಮಾಜಿಕ ಜಾಲತಾಣೆಗಳ ಮುಖ್ಯಸ್ಥೆಯೂ ಹೌದು.

  ಪಕ್ಷದ ಸಾಮಾಜಿಕ ಜಾಲತಾಣಗಳನ್ನು ವಿಸ್ತರಿಸುವ ಸಲುವಾಗಿ 25 ಕೆಲಸಗಳಿಗೆ ಅರ್ಜಿ ಕರೆದಿದ್ದಾರೆ.

 • ರಮ್ಯಾ ಮದುವೆ ಯಾವಾಗ..? - ರಮ್ಯಾ ಅಮ್ಮ ಹೇಳಿದ್ದೇನು..?

  ramya's mother speaks

  ನಟಿ ರಮ್ಯಾ, ತಮ್ಮ ಸ್ಯಾಂಡಲ್‍ವುಡ್ ಕ್ವೀನ್ ಪಟ್ಟ ಕಳಚಿಟ್ಟು, ಅಪ್ಪಟ ರಾಜಕಾರಣಿಯಾಗಿದ್ದಾರೆ. ವಯಸ್ಸು ಆಗಲೇ 37 ವರ್ಷ. ಚಿತ್ರರಂಗದಲ್ಲಿದ್ದಾಗ ರಮ್ಯಾ ಅವರಿಗೆ ಇಂಥಾದ್ದೊಂದು ಪ್ರಶ್ನೆ ಆಗಾಗ್ಗೆ ಎದುರಾಗುತ್ತಿತ್ತು. ಇದರ ಮಧ್ಯೆ ಬ್ಯುಸಿನೆಸ್‍ಮನ್ ಒಬ್ಬರ ಜೊತೆ ಮದುವೆಯ ಸುಳಿವನ್ನೂ ಕೊಟ್ಟಿದ್ದರು ರಮ್ಯಾ. ಆದರೆ, ಅದೇಕೋ ಏನೋ.. ಅದು ಅಷ್ಟಕ್ಕೇ ನಿಂತು ಹೋಯ್ತು. ಈಗ ರಮ್ಯಾ ಮದುವೆ ಸುದ್ದಿ ಎತ್ತಿರುವುದು ರಮ್ಯಾ ಅವರ ತಾಯಿ ರಂಜಿತಾ.

  ಮಗಳನ್ನು ಮದುವೆಯಾಗು ಎಂದು ಒತ್ತಾಯಿಸುತ್ತಲೇ ಇದ್ದೇನೆ. ಅವಳಿಗೆ ತಾನು ಮದುವೆಯಾಗುವ ಹುಡುಗ ಹೀಗೆಯೇ ಇರಬೇಕು ಎಂಬ ಕನಸುಗಳಿವೆ. ಆದರೆ, ನನಗೆ ಹುಡುಗ ವಿದ್ಯಾವಂತನಾಗಿದ್ದು, ನೋಡೋಕೂ ಚೆನ್ನಾಗಿದ್ದು, ಒಳ್ಳೆಯವನಾಗಿದ್ದರೆ ಸಾಕು. ಇನ್ನು ರಮ್ಯಾಗೆ ರಾಜಕೀಯದಲ್ಲಿ ಏನಾದರೂ ಸಾಧಿಸಬೇಕು ಎಂಬ ಹಠವಿದೆ. ಅದುವರೆಗೂ ಸುಮ್ಮನಿರು ಅಂತಾಳೆ. ಆದರೆ ಮದುವೆಯಾಗಿಯೇ ಸಾಧನೆ ಮಾಡು ಅಂತಾ ನಾನು ಹೇಳ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ ರಂಜಿತಾ.

  ರಮ್ಯಾ ತಮ್ಮ ತಾಯಿಯ ಮದುವೆಯ ಡಿಮ್ಯಾಂಡ್‍ಗೆ ಸದ್ಯಕ್ಕಂತೂ ನೋ ಎಂದಿದ್ದಾರೆ. ರಾಜಕೀಯದಲ್ಲಿ ಏನಾದರೂ ಸಾಧಿಸಲೇಬೇಕು ಎಂದು ಪಣ ತೊಟ್ಟು ಹೊರಟಿದ್ದಾರೆ.

Matthe Udbhava Trailer Launch Gallery

Maya Bazaar Pressmeet Gallery