` rishi, - chitraloka.com | Kannada Movie News, Reviews | Image

rishi,

  • ಕಾಳಿ ಸ್ವಾಮಿಯ ಹೊಸ ಅವತಾರ..!

    kaali swamy image

    ಕಾವಿಧಾರಿಯಾಗಿ, ಟಿವಿ ನ್ಯೂಸ್ ಚಾನೆಲ್ಲುಗಳಲ್ಲಿ ಧಾರ್ಮಿಕ ವಿಚಾರದ ಬಗ್ಗೆ ಅತ್ಯುಗ್ರವಾಗಿ ಮಾತನಾಡುತ್ತಿದ್ದ ಕಾಳಿ ಸ್ವಾಮಿ ಅಲಿಯಾಸ್ ರಿಷಿ ಕುಮಾರ್ ನಿತ್ಯಾನಂದ ಪ್ರಕರಣದಲ್ಲಿ ರಾಜ್ಯಾದ್ಯಂತ ಫೇಮಸ್ ಆಗಿಬಿಟ್ಟರು. ಅಷ್ಟೇ ಬೇಗ ಕುಖ್ಯಾತಿಯನ್ನೂ ಸಂಪಾದಿಸಿದ್ದು ಎಲ್ಲರಿಗೂ ಗೊತ್ತು. ಆದರೆ, ಅವರೊಳಗೊಬ್ಬ ಅದ್ಭುತ ನೃತ್ಯ ಕಲಾವಿದನಿದ್ದಾನೆ ಎನ್ನುವುದು ಆಮೇಲೆ ಗೊತ್ತಾಗಿತ್ತು.

    ಅದಾದ ಮೇಲೆ ಕೆಲವು ಸಿನಿಮಾಗಳಲ್ಲಿ ಸಣ್ಣ ಪುಟ್ಟ ಪಾತ್ರ ಮಾಡುತ್ತಿದ್ದ ರಿಷಿಕುಮಾರ್ ಅಲಿಯಾಸ್ ಕಾಲಿ ಸ್ವಾಮಿ, ಈಗ ಮಕ್ಕಳ ಸಿನಿಮಾವೊಂದರಲ್ಲಿ ಮತ್ತೆ ಬಣ್ಣ ಹಚ್ಚುತ್ತಿದ್ದಾರೆ. ಸನ್ಯಾಸಿ ಮಾರ್ಗವನ್ನು ಹಿಡಿದಿದ್ದರೂ ರಿಯಾಲಿಟಿ ಶೋನಲ್ಲೂ ಕಾಣಿಸಿಕೊಂಡು, ನೃತ್ಯ ಪ್ರತಿಭೆ ತೋರಿಸಿದ್ದ ಕಾಳಿ ಸ್ವಾಮಿ, ಸರ್ವಸ್ಯ ನಾಟ್ಯಂ ಎಂಬ ಚಿತ್ರದಲ್ಲಿ ಬಣ್ಣ ಹಚ್ಚುತ್ತಿದ್ದಾರೆ. ಅದು ಮಕ್ಕಳ ಚಿತ್ರ. ಆ ಚಿತ್ರದಲ್ಲಿ ರಿಷಿ ಕುಮಾರರದ್ದು ನೃತ್ಯ ಶಿಕ್ಷಕರ ಪಾತ್ರವಂತೆ.

  • ಕೇರಳ, ಅಮೆರಿಕಕ್ಕೆ ಕವಲುದಾರಿ ಪಯಣ

    kavaludaari to release in kerala and in united states

    ರಾಜ್ಯಾದ್ಯಂತ ವಿಭಿನ್ನತೆಯ ಮೂಲಕವೇ ಗಮನ ಸೆಳೆದಿರುವ, ಕ್ಲಾಸ್ ಪ್ರೇಕ್ಷಕರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿರುವ ಕವಲುದಾರಿ ಸಿನಿಮಾ, ವಿದೇಶಕ್ಕೆ ಹೊರಟು ನಿಂತಿದೆ. ಚೆನ್ನೈ, ಮುಂಬೈ, ಹೈದರಾಬಾದ್ ಸೇರಿದಂತೆ ಹಲವು ಕಡೆ ರಿಲೀಸ್ ಆಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇದರಿಂದಾಗಿಯೇ ಈಗ ಸಿನಿಮಾಗೆ ಭರ್ಜರಿ ಡಿಮ್ಯಾಂಡ್ ಬಂದುಬಿಟ್ಟಿದೆ.

    ಪುನೀತ್ ರಾಜ್‍ಕುಮಾರ್, ಅಶ್ವಿನಿ ಪುನೀತ್ ಇಬ್ಬರೂ ಜನರ ನಡುವೆ ಸಿನಿಮಾ ನೋಡಿದ್ದಾರೆ. ಪ್ರೇಕ್ಷಕರ ಪ್ರತಿಕ್ರಿಯೆ ನೋಡಿ ಖುಷಿಯಾಗಿದ್ದಾರೆ. ಅದೇ ವೇಳೆಗೆ ಅತ್ತ ಅಮೆರಿಕದಿಂದ ಡಿಮ್ಯಾಂಡ್ ಶುರುವಾಗಿದೆ. ಅಮೆರಿಕದಲ್ಲಿ ಎಷ್ಟು ಸೆಂಟರ್‍ಗಳಲ್ಲಿ ರಿಲೀಸ್ ಮಾಡಬೇಕು ಎಂದು ಪ್ಲಾನ್ ಮಾಡುತ್ತಿದೆ ಚಿತ್ರತಂಡ. ಅದ್ಕಿಂತ ಇನ್ನೊಂದು ಖುಷಿಯೆಂದರೆ, ಮಲಯಾಳಂನಲ್ಲಿ ಕವಲುದಾರಿ ಬಿಡುಗಡೆಗೆ ವಿತರಕರು ಮುಂದೆ ಬಂದಿರೋದು. ಚಿತ್ರವನ್ನು ಮಲಯಾಳಂಗೆ ಡಬ್ ಮಾಡಿಕೊಡಿ ಎಂದು ಕೇರಳದ ವಿತರಕರು ಬೆನ್ನು ಹತ್ತಿದ್ದಾರೆ. ಒಟ್ಟಿನಲ್ಲಿ ಕವಲುದಾರಿ ಅದೃಷ್ಟ ಖುಲಾಯಿಸಿದೆ.

  • ಗುಡ್ ಲುಕ್ ಪವರ್ ಸ್ಟಾರ್ - ಸ್ಯಾಂಡಲ್‍ವುಡ್ ಶುಭಾಶಯ

    sandalwood wishes good luck to kavaludaari

    ಪಿಆರ್‍ಕೆ ಬ್ಯಾನರ್ ಮೂಲಕ ನಿರ್ಮಾಪಕರೂ ಆದ ಪುನೀತ್ ರಾಜ್‍ಕುಮಾರ್, ಸಿನಿಮಾ ನಿರ್ಮಾಣ ಖುಷಿ, ಕಿಕ್ ಎರಡನ್ನೂ ಕೊಟ್ಟಿದೆ ಎಂದಿದ್ದಾರೆ. ಕವಲುದಾರಿ, ಕನ್ನಡದಲ್ಲಿ ಭಾರಿ ನಿರೀಕ್ಷೆ ಹುಟ್ಟುಹಾಕಿರುವ ಸಿನಿಮಾ. ಗೋಧಿ ಬಣ್ಣ ಸಾಧಾರಣ ಮೈಕಟ್ಟು ನಂತರ ನಿರ್ದೇಶಕ ಹೇಮಂತ್ ರಾವ್ ನಿರ್ದೇಶಿಸಿರುವ ಸಿನಿಮಾ ಇದು.

    ತಮ್ಮನಿಗೆ ಮೊದಲು ಶುಭಾಶಯ ತಿಳಿಸಿರುವುದು ಅಣ್ಣ ಶಿವಣ್ಣ. ಸ್ವತಃ ನಟನಾಗಿ, ಇನ್ನೊಬ್ಬ ನಟನಿಗೆ ಸಿನಿಮಾ ಮಾಡಿದ್ದಾರೆ ಅಂದ್ರೆ, ಕಥೆ ನಿಜಕ್ಕೂ ಪವರ್‍ಫುಲ್ಲಾಗೇ ಇರುತ್ತೆ. ಅಪ್ಪು ಸರ್, ಸಿನಿಮಾ ನೋಡೋಕೆ ನಾನೂ ಕಾಯ್ತಿದ್ದೇನೆ ಎಂದಿರುವುದು ರಾಕಿಂಗ್ ಸ್ಟಾರ್ ಯಶ್.

    ಪುನೀತ್ ಅವರ ಸಂಬಂಧಿಯೂ ಆಗಿರುವ ನಟ ಶ್ರೀಮುರಳಿ ಕೂಡಾ ಪುನೀತ್‍ರ ಮೊದಲ ಪ್ರಯತ್ನಕ್ಕೆ ಶುಭವಾಗಲಿ ಎಂದಿದ್ದಾರೆ.

  • ಟಿಶ್ಯೂ ಪೇಪರ್‍ನಲ್ಲಿ ಕವಲುದಾರಿ ಪ್ರಮೋಷನ್

    kavaludaari promotions on tissue paaper

    ಗೋಧಿ ಬಣ್ಣ ಸಾಧಾರಣ ಮೈಕಟ್ಟು ಚಿತ್ರವನ್ನು ಕಾಫಿ ಕಪ್ಪುಗಳಲ್ಲಿ ಪ್ರಮೋಟ್ ಮಾಡಿದ್ದ ನಿರ್ದೇಶಕ ಹೇಮಂತ್ ರಾವ್, ಕವಲುದಾರಿ ಚಿತ್ರವನ್ನು ಟಿಶ್ಯೂ ಪೇಪರ್‍ಗಳಲ್ಲಿ ಪ್ರಮೋಟ್ ಮಾಡುತ್ತಿದ್ದಾರೆ. ಟಿಶ್ಯೂ ಪೇಪರ್‍ಗಳಲ್ಲಿ ಚಿತ್ರದ ವಿವರಗಳನ್ನು ಮುದ್ರಿಸಿ, ಜನರನ್ನು ರೀಚ್ ಆಗಲು ಹೊರಟಿದ್ದಾರೆ.

    ಪಿಆರ್‍ಕೆ ಬ್ಯಾನರ್‍ನ ಮೊದಲ ಸಿನಿಮಾ ಕವಲುದಾರಿ. ಚಿತ್ರದ ಪ್ರಮೋಷನ್‍ಗೆ ಸ್ವತಃ ಪುನೀತ್ ಇದ್ದಾರೆ. ಅನಂತ್‍ನಾಗ್, ರಿಷಿ, ಸುಮನ್ ರಂಗನಾಥ್, ಅಚ್ಯುತ್ ಕುಮಾರ್, ರೋಷನಿ ಪ್ರಕಾಶ್ ಅಭಿನಯದ ಸಿನಿಮಾ ಕವಲುದಾರಿ.

    ಸಿನಿಮಾ ಪ್ರಚಾರಕ್ಕೆ ಈಗ ಪೋಸ್ಟರ್‍ಗಳಿಲ್ಲ, ಬ್ಯಾನರುಗಳೂ ಇಲ್ಲ. ಹೀಗಿರುವಾಗ ಚಿತ್ರದ ಪ್ರಚಾರಕ್ಕೆ ವಿಭಿನ್ನ ಐಡಿಯಾ ಕಂಡುಕೊಳ್ಳುವುದು ಅನಿವಾರ್ಯವೂ ಹೌದು. ಹೇಮಂತ್ ರಾವ್ ವಿಭಿನ್ನ ಹೆಜ್ಜೆಯಿಟ್ಟಿದ್ದಾರೆ.

  • ತಮಿಳಿಗೆ ಹೊರಟರು ಅಲಮೇಲಮ್ಮನ ರಿಷಿ

    rishi in dhanu's banner

    ಆಪರೇಷನ್ ಅಲಮೇಲಮ್ಮ ಖ್ಯಾತಿಯ ರಿಷಿ, ಲಡ್ಡುಗಳು ಒಂದರ ಹಿಂದೊಂದರಂತೆ ಬಾಯಿಗೆ ಬೀಳುತ್ತಿವೆ. ಆಪರೇಷನ್ ಅಲಮೇಲಮ್ಮ ನಂತರ ಪುನೀತ್ ರಾಜ್‍ಕುಮಾರ್ ನಿರ್ಮಾಣದ ಚಿತ್ರ ಕವಲುದಾರಿಯಲ್ಲಿ ಅವಕಾಶ ಪಡೆದ ರಿಷಿ, ಈಗ ತಮಿಳಿನಲ್ಲೂ ಚಾನ್ಸ್ ಗಿಟ್ಟಿಸಿದ್ದಾರೆ. ತಮಿಳಿನಲ್ಲಿ ಧನುಷ್ ನಿರ್ಮಿಸುತ್ತಿರುವ ಚಿತ್ರದಲ್ಲಿ ರಿಷಿ ಹೀರೋ.

    ತಮಿಳಿನ ಆ ಚಿತ್ರದಲ್ಲಿ ಧನುಷ್ ನಿರ್ಮಾಪಕರಷ್ಟೇ. ಇಸ್ಲಾಹುದ್ದೀನ್ ನಿರ್ದೇಶನದ ಈ ಚಿತ್ರ ಶೀಘ್ರದಲ್ಲೇ ಸೆಟ್ಟೇರಲಿದೆ.

  • ಧನುಷ್ ಕನ್ನಡ ಚಿತ್ರಕ್ಕೆ ಮಲೆಯಾಳಿ ಹೀರೋಯಿನ್

    reba monica is heroine in dhanush's debut production

    ತಮಿಳು ಸೂಪರ್‍ಸ್ಟಾರ್ ಧನುಷ್, ಕನ್ನಡದಲ್ಲಿ ಸಿನಿಮಾ ನಿರ್ಮಿಸುತ್ತಿದ್ದಾರೆ. ಚಿತ್ರದ ಹೀರೋ ಅಲಮೇಲಮ್ಮ ಖ್ಯಾತಿಯ ರಿಷಿ. ಈಗ ಹೀರೋಯಿನ್ ಆಯ್ಕೆಯೂ ಆಗಿದೆ. ರೆಬಾ ಮೋನಿಕಾ ಜಾನ್ ಎಂಬ ಮಲೆಯಾಳಿ ಸುಂದರಿ, ರಿಚಿ ಎದುರು ನಾಯಕಿಯಾಗುತ್ತಿದ್ದಾರೆ.

    ಇಲ್ಲಾವುದ್ದೀನ್ ನಿರ್ದೇಶನದ ಸಿನಿಮಾಗೆ ಧನುಷ್ ಅಷ್ಟೇ ಅಲ್ಲ, ನಿರ್ದೇಶಕ ಜೇಕಬ್ ವರ್ಗಿಸ್ ಕೂಡಾ ನಿರ್ಮಾಪಕರು. ರೆಬಾ, ಮಲೆಯಾಳಿಯಾದರೂ ಹುಟ್ಟಿದ್ದು ಹಾಗೂ ಮಾಸ್ಟರ್ ಡಿಗ್ರಿ ಓದಿದ್ದು ಬೆಂಗಳೂರಿನಲ್ಲೇ. ತಮಿಳು ಹಾಗೂ ಮಲಯಾಳಂ ಚಿತ್ರಗಳಲ್ಲಿ ನಟಿಸಿರುವ ರೆಬಾ, ಮಾಡೆಲ್ ಕೂಡಾ ಹೌದು. ಚಿತ್ರದ ಚಿತ್ರೀಕರಣ ಬಿರುಸಿನಿಂದ ನಡೆಯುತ್ತಿದೆ.

    Related Articles :-

    Rishi To Star In Dhanush's First Kannada Production

    ಕನ್ನಡ ಸಿನಿಮಾ ಮಾಡ್ತಾರಾ ಧನುಷ್..?

    ತಮಿಳಿಗೆ ಹೊರಟರು ಅಲಮೇಲಮ್ಮನ ರಿಷಿ

  • ನಕ್ಕು ನಕ್ಕು ಸುಸ್ತಾಗಬೇಕಾ.. ಡಿ.20ಕ್ಕೆ ಸುವರ್ಣಾಕಾಶ..

    a laughter bomb ready to explode on dec 20th

    ನಾಯಕನ ತಂದೆಯಾಗಿ ದತ್ತಣ್ಣ. ನಾಯಕಿಯ ತಾಯಿ ಶಾಲಿನಿ. ಪಕ್ಕಾ ಜಿಪುಣಿ. ಆಟೋ ಚಾಲಕನಾಗಿ ನಗಿಸೋಕೆ ಮಿತ್ರ. ರಂಗಯಣ ರಘು ಅವರು ಇನ್ನೊಂದು ಕಡೆ. ಅಪ್ಪನದ್ದೋ ಮೈತುಂಬಾ ಸಾಲ. ನಾಯಕನೋ ಎಂಬಿಎ ಪದವೀಧರ. ಇದರ ನಡುವೆ ನಾಯಕಿಯ ತಾಪತ್ರಯವೇ ಇನ್ನೊಂದು.. ಇವೆಲ್ಲವೂ ಒಟ್ಟಿಗೇ ಸೇರಿಕೊಂಡು ಕೊಲಾಜ್ ಆದಾಗ ಸೃಷ್ಟಿಯಾದ ನಗೆಬಾಂಬು ಸಾರ್ವಜನಿಕರಿಗೆ ಸುವರ್ಣಾವಕಾಶ.

    ನಾಯಕನಾಗಿ ರಿಷಿ ಇದ್ದಾರೆ. ಕವಲುದಾರಿಯಲ್ಲಿ ಸಿಕ್ಕಾಪಟ್ಟೆ ಸೀರಿಯಸ್ ಆಗಿ ಗೆದ್ದಿದ್ದ ರಿಷಿಗೆ, ಇಲ್ಲಿ ನಗಿಸುವ ಕಾಯಕ. ನಾಯಕಿಯಾಗಿ ನಟಿಸಿರುವುದು ಧನ್ಯಾ ರಾಮಕೃಷ್ಣ. ಕನ್ನಡತಿಯೇ ಆದರೂ, ಬೇರೆ ಭಾಷೆಗಳಲ್ಲಿ ನಟಿಸಿದ ಮೇಲೆ ಕನ್ನಡದಲ್ಲಿ ಮೊದಲ ಬಾರಿಗೆ ನಟಿಸಿದ್ದಾರೆ.

    ಅನೂಪ್ ರಾಮಸ್ವಾಮಿ ಕಶ್ಯಪ್ ನಿರ್ದೇಶನದ ಟ್ರೇಲರ್ ಮಜಾ ಕೊಡುತ್ತಿದೆ.  ಪ್ರೀತಿ, ಪ್ರೇಮ, ಭರ್ಜರಿ ಮನೋರಂಜನೆ, ಒಂದು ಕಾಯಿಲೆ, ಮತ್ಯಾವುದೋ ನಿಗೂಢ ಎಲ್ಲವೂ ಈ ಚಿತ್ರದಲ್ಲಿದೆ.  ದೇವರಾಜ್, ಪ್ರಶಾಂತ್ ರೆಡ್ಡಿ ಮತ್ತು ಜನಾರ್ದನ್ ಚಿಕ್ಕಣ್ಣ ನಿರ್ಮಾಣದ ಚಿತ್ರ ಡಿಸೆಂಬರ್ 20ಕ್ಕೆ ತೆರೆ ಮೇಲೆ ಬರುತ್ತಿದೆ. ನಗಬೇಕಾ.. ಡಿ.20ಕ್ಕೆ ರೆಡಿಯಾಗಿ.

  • ನಗುವವರಿಗೆ.. ನಗಿಸುವವರಿಗೆ ಸುವರ್ಣಾವಕಾಶ..

    sarvajanikarige suvaranavakasha specialty

    ಸಾರ್ವಜನಿಕರಿಗೆ ಸುವರ್ಣಾವಕಾಶ, ಇದು ಆಪರೇಷನ್ ಅಲಮೇಲಮ್ಮ, ಕವಲುದಾರಿ ಖ್ಯಾತಿಯ ರಿಷಿ ಅಭಿನಯದ ಹೊಸ ಚಿತ್ರ. ಅನೂಪ್ ರಾಮಸ್ವಾಮಿ ನಿರ್ದೇಶನದ ಟ್ರೇಲರ್, ಭರ್ಜರಿ ಸದ್ದು ಮಾಡುತ್ತಿದೆ. ಚಿತ್ರದ ಟ್ರೇಲರಿನಲ್ಲಿ ಸಣ್ಣ ಸಣ್ಣ ತುಂಟಾಟಗಳು ನೋಡುವವರಿಗೆ ಇಷ್ಟವಾಗುತ್ತಿವೆ.

    ರಿಷಿ ಎದುರು ಧನ್ಯಾ ಬಾಲಕೃಷ್ಣ ನಾಯಕಿಯಾಗಿ ನಟಿಸಿದ್ದಾರೆ. ದತ್ತಣ್ಣ, ರಂಗಾಯಣ ರಘು, ಪೋಷಕ ಪಾತ್ರದಲ್ಲಿದ್ದಾರೆ.

    ಚಿತ್ರದಲ್ಲಿ ಫಿಟ್ಸ್ ಬರುವ ನಾಯಕಿ, ಪ್ರೀತಿ, ಪ್ರೇಮ, ಮಧ್ಯೆಯೆಲ್ಲೋ ಒಂದು ವಿಚಿತ್ರವಾದ ಸಸ್ಪೆನ್ಸು ಎಲ್ಲವೂ ಇರುವ ಟ್ರೇಲರ್ ಪ್ರೇಕ್ಷಕರಿಗೆ ಇಷ್ಟವಾಗಿದೆ.

     

  • ಪರ್ಮಿ ತರಾ ಅಲ್ಲ.. ವೇದಾಂತ್ ರಿಯಲ್ ಬುದ್ದಿವಂತ..!

    rishi plays a role of smart intelligent person in sarvajanikarige suvarnavakash

    ಅವನ ಹೆಸರು ವೇದಾಂತ್. ಎಂಬಿಎ ಪದವೀಧರ. ಸಮಸ್ಯೆ ಯಾವುದೆ ಇರಲಿ, ಫಟಾಫಟ್ ಪರಿಹಾರ ಕೊಡಬಲ್ಲ ಇಂಟೆಲಿಜೆAಟ್. ಪರಿಸ್ಥಿತಿ ಹೇಗಾದರೂ ಇರಲಿ, ತನ್ನ ಕಂಟ್ರೋಲಿಗೆ ತೆಗೆದುಕೊಳ್ಳಬಲ್ಲಷ್ಟು ಸಮರ್ಥ. ಈತ ಪರ್ಮಿ ತರಾ ಅಲ್ಲ..

    ಅರೆ.. ಪರ್ಮಿ ಯಾರು..? ವೇದಾಂತ್ ಯಾರು..? ಎರಡೂ ಒಬ್ಬನೇ. ಆಪರೇಷನ್ ಅಲಮೇಲಮ್ಮನ ಪರ್ಮಿಗೆ ಈಗ ಸುವರ್ಣಾವಕಾಶವೊಂದು ಸಿಕ್ಕು ವೇದಾಂತ್ ಆಗಿದ್ದಾನೆ. ಯೆಸ್, ಇದು ಸಾರ್ವಜನಿಕರಿಗೆ ಸುವರ್ಣಾವಕಾಶ ಚಿತ್ರದ ಹೀರೋ ರಿಷಿಯ ಕಥೆ.

    ಸಾಮಾನ್ಯವಾಗಿ ಎಲ್ಲರೂ ಕಥೆಯ ಒನ್‌ಲೈನ್ ಹೇಳುತ್ತಾರೆ. ಆದರೆ, ಸಾ.ಸು. ನಿರ್ದೇಶಕರು ಕಂಪ್ಲೀಟ್ ಸ್ಕಿçಪ್ಟ್ ಜೊತೆ ಬಂದಿದ್ದರು. ಅಷ್ಟೊಂದು ಪಕ್ಕಾ ಡೀಟೈಲ್ಸ್ ಅವರ ಬಳಿ ಇತ್ತು. ಕಥೆ ಕೇಳುವಾಗಲೇ ಸಿಕ್ಕಾಪಟ್ಟೆ ನಕ್ಕಿದ್ದೇನೆ. ಸಿನಿಮಾ ನೋಡುವ ಪ್ರತಿಯೊಬ್ಬರಿಗೂ ಚಿತ್ರದಲ್ಲಿ 100% ಎಂಟರ್‌ಟೈನ್‌ಮೆAಟ್ ಇದೆ ಎನ್ನುತ್ತಾರೆ ರಿಷಿ.

    ಸ್ವರೂಪ್ ನಿರ್ದೇಶನದ ಚಿತ್ರದಲ್ಲಿ ರಿಷಿ ಎದುರು ಧನ್ಯಾ ಬಾಲಕೃಷ್ಣ ನಾಯಕಿ. ಗುಳ್ಟು ಟೀಂ ಮತ್ತೊಮ್ಮೆ ಜೊತೆಯಾಗಿರುವ ಚಿತ್ರದ ಮೇಲೆ ಭಾರಿ ನಿರೀಕ್ಷೆ ಇದೆ.

  • ಮಲ್ಟಿ ಸ್ಟಾರ್ ಅಲ್ಲ.. ಮಲ್ಟಿ ಸ್ಟಾರ್ ಡೈರೆಕ್ಟರ್ಸ್ ಸಿನಿಮಾ..!

    its mult directors movie time in sandalwood

    ಹಲವು ಸ್ಟಾರ್ ನಟರೂ ಒಂದೇ ಚಿತ್ರದಲ್ಲಿ ನಟಿಸಿದರೆ, ಅದು ಮಲ್ಟಿ ಸ್ಟಾರ್ ಸಿನಿಮಾ. ಹಲವು ನಿರ್ದೇಶಕರು ಒಂದೇ ಚಿತ್ರದಲ್ಲಿ ತೊಡಗಿಸಿಕೊಂಡರೆ.. ಅದನ್ನು ಮಲ್ಟಿ ಸ್ಟಾರ್ ಡೈರೆಕ್ಟರ್ ಸಿನಿಮಾ ಎನ್ನಬೇಕಾ..? ಕನ್ನಡ ಚಿತ್ರರಂಗದಲ್ಲಿ ಒಬ್ಬ ನಿರ್ದೇಶಕರ ಸಿನಿಮಾದಲ್ಲಿ, ಇನ್ನೊಬ್ಬ ನಿರ್ದೇಶಕರು ಹಾಡು ಬರೆಯೋದು, ಸಣ್ಣ ಪುಟ್ಟ ಪಾತ್ರದಲ್ಲಿ ನಟಿಸೋದು ಹೊಸದೇನಲ್ಲ. ಆದರೆ, ಇಬ್ಬರು ನಿರ್ದೇಶಕರು ಸೇರಿಕೊಂಡು, ಚಿತ್ರವನ್ನು ನಿರ್ಮಾಣ ಮಾಡಿ, ಆ ಚಿತ್ರದ ನಿರ್ದೇಶನದ ಹೊಣೆಯನ್ನು ಮತ್ತೊಬ್ಬ ಹೊಸ ಪ್ರತಿಭೆಗೆ ನೀಡೋದಿದ್ಯಲ್ಲ.. ಅದು ಹೊಸದು. ಅಂಥಾದ್ದೊಂದು ಸಾಹಸಕ್ಕೆ ಪ್ರೀತಿಯಿಂದ ಕೈ ಹಾಕಿರೋದು ಯೋಗರಾಜ ಭಟ್ ಮತ್ತು ಶಶಾಂಕ್.

    shashank_yogaraj_bhatt_new_.jpgಯೋಗರಾಜ್ ಭಟ್ ಮತ್ತು ಶಶಾಂಕ್, ಇಬ್ಬರೂ ಕನ್ನಡದ ಸ್ಟಾರ್ ನಿರ್ದೇಶಕರು. ಈಗ ಈ ಇಬ್ಬರೂ ಒಟ್ಟಿಗೇ ಒಂದೇ ಸಿನಿಮಾಗೆ ಬಂಡವಾಳ ಹೂಡುತ್ತಿದ್ದಾರೆ. ಕಥೆ, ಯೋಗರಾಜ್ ಭಟ್ಟರದ್ದು. ಅವರು ಕಥೆ ಹೇಳಿದ್ದು ನಟ ರಿಷಿಗೆ. ರಿಷಿ ಆ ಕಥೆಯನ್ನು ಶಶಾಂಕ್ ಅವರ ಬಳಿ ಹಂಚಿಕೊಂಡಿದ್ದಾರೆ. ಶಶಾಂಕ್, ನೇರವಾಗಿ ಭಟ್ಟರ ಬಳಿ ಬಂದು ಸಿನಿಮಾ ಮಾಡುವ ಪ್ಲಾನ್ ಇಟ್ಟಿದ್ದಾರೆ. ಅಲ್ಲಿಗೆ.. ಹೊಸದೊಂದು ಇತಿಹಾಸಕ್ಕೆ ಮುನ್ನುಡಿ ಬಿದ್ದಿದೆ.

    ಶಶಾಂಕ್ ಮತ್ತು ಯೋಗರಾಜ್ ಭಟ್ ಜಂಟಿ ಬ್ಯಾನರ್‍ನಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ. ನಿರ್ದೇಶಕ, ಭಟ್ಟರ ಗರಡಿಯ ಹುಡುಗ ಮೋಹನ್ ಸಿಂಗ್. ನಾಯಕ ರಿಷಿ. 

    ಚಿತ್ರಕಥೆಯ ಕೆಲಸ ಶುರುವಾಗಿದ್ದು, ಜೂನ್ ತಿಂಗಳಲ್ಲಿ ಸಿನಿಮಾದ ಶೂಟಿಂಗ್ ಶುರುವಾಗಲಿದೆ. ಹೊಸ ಇತಿಹಾಸ ನಿರ್ಮಾಣವಾಗುತ್ತಿದೆ.

  • ರಿಷಿ ಆಪರೇಷನ್ ಕಲ್ಯಾಣ : ನ.10ಕ್ಕೆ `ಸ್ವಾತಿ'ಮುತ್ತು

    rishi swathi wedding on nov 0th

    ಆಪರೇಷನ್ ಅಲಮೇಲಮ್ಮ, ಕವಲುದಾರಿ ಖ್ಯಾತಿಯ ರಿಷಿ ವಿವಾಹವಾಗುತ್ತಿದ್ದಾರೆ ಎನ್ನುವುದು ಗುಟ್ಟಾಗಿಯೇನೂ ಇರಲಿಲ್ಲ. ಈಗ ಡೇಟ್ ಫಿಕ್ಸ್ ಆಗಿದೆ. ರಿಷಿ, ಸ್ವಾತಿ ಎಂಬುವವರನ್ನು ಮದುವೆಯಾಗುತ್ತಿದ್ದು, ನವೆಂಬರ್ 10ರಂದು ಚೆನ್ನೈನಲ್ಲಿ ಮದುವೆ. ನವೆಂಬರ್ 20ಕ್ಕೆ ಬೆಂಗಳೂರಿನಲ್ಲಿ ರಿಸೆಪ್ಷನ್.

    ಸ್ವಾತಿ, ಕೇರಳದ ಪಾಲಕ್ಕಾಡ್‍ನವರು. ರಂಗಭೂಮಿಯಲ್ಲಿ ಪರಿಚಯವಾಗಿ, ಅದು ಪ್ರೇಮವಾಗಿ.. ಈಗ ವಿವಾಹವಾಗುತ್ತಿದ್ದಾರೆ. ಸ್ವಾತಿ, ಕಂಟೆಂಟ್ ರೈಟರ್. ಮದುವೆ ಇಬ್ಬರ ಮನೆಯ ಸಂಪ್ರದಾಯದಂತೆ ನಡೆಯುತ್ತಿದೆ. ಮದುವೆಗೆ ತಮ್ಮ ಆಪ್ತರು ಹಾಗೂ ಸ್ಯಾಂಡಲ್‍ವುಡ್ ಗಣ್ಯರನ್ನು ಆಹ್ವಾನಿಸಿದ್ದಾರೆ ರಿಷಿ.

  • ರಿಷಿ ಚಿತ್ರಕ್ಕೆ ಅಪ್ಪು ಹಾಡು

    puneeth sings a song for rishi's movie

    ತಮ್ಮದೇ ಬ್ಯಾನರಿನಲ್ಲಿ ಕವಲುದಾರಿ ಚಿತ್ರ ನಿರ್ಮಿಸಿ ಗೆದ್ದಿದ್ದರು ಪುನೀತ್ ರಾಜ್‍ಕುಮಾರ್. ಆ ಚಿತ್ರದಲ್ಲಿ ಹೀರೋ ಆಗಿದ್ದ ರಿಷಿ, ಈಗ ಸಾರ್ವಜನಿಕರಿಗೆ ಸುವರ್ಣಾವಕಾಶ ಚಿತ್ರದಲ್ಲಿ ನಟಿಸುತ್ತಿದ್ದಾರೆ. ರಿಷಿ ನಟಿಸುತ್ತಿರುವ ಹೊಸ ಚಿತ್ರದಲ್ಲಿ ಹಾಡುವ ಮೂಲಕ ಪುನೀತ್ ರಿಷಿಗೆ ಗುಡ್ ಲಕ್ ಹೇಳಿದ್ದಾರೆ.

    ಅನೂಪ್ ರಾಮಸ್ವಾಮಿ ಕಶ್ಯಪ್ ಎಂಬುವರು ನಿರ್ದೇಶಿಸುತ್ತಿರುವ ಚಿತ್ರಕ್ಕೆ ದೇವರಾಜ್, ಪ್ರಶಾಂತ್ ರೆಡ್ಡಿ, ಜನಾರ್ದನ್ ಚಿಕ್ಕಣ್ಣ ನಿರ್ಮಾಪಕರು.

    ಸಾರ್ವಜನಿಕರಿಗೆ ಸುವರ್ಣಾವಕಾಶ ಚಿತ್ರದಲ್ಲಿ ರಿಷಿಗೆ ಧನ್ಯಾ ನಾಯಕಿಯಾಗಿ ನಟಿಸುತ್ತಿದ್ದು, ದತ್ತಣ್ಣ, ರಂಗಾಯಣ ರಘು ಮೊದಲಾದವರು ನಟಿಸಿದ್ದಾರೆ.

  • ರಿಷಿಯ ರುದ್ರ ಗರುಡ ಪುರಾಣ

    ರಿಷಿಯ ರುದ್ರ ಗರುಡ ಪುರಾಣ

    ಆಪರೇಷನ್ ಅಲಮೇಲಮ್ಮ ಖ್ಯಾತಿಯ ರಿಷಿ, ಸಿಂಪಲ್ ಸುನಿ ಗರಡಿಯಿಂದ ಬೆಳಕಿಗೆ ಬಂದ ಕಲಾವಿದ. ಇದೀಗ ರುದ್ರ ಗರುಡ ಪುರಾಣ ಚಿತ್ರದಲ್ಲಿ ಪೊಲೀಸ್ ಆಗಿದ್ದಾರೆ. ಕವಲುದಾರಿಯಲ್ಲಿಯೂ ಪೊಲೀಸ್ ಪಾತ್ರದಲ್ಲಿ ಮಿಂಚಿದ್ದ ರಿಷಿಗೆ ಈ ಚಿತ್ರದಲ್ಲಿ ಪ್ರಿಯಾಂಕಾ ತಿಮ್ಮೇಶ್ ಜೋಡಿ. ಗೋದ್ರಾ ಚಿತ್ರದ ನಿರ್ದೇಶಕ ಕೆ.ಎಸ್.ನಂದೀಶ್ ಈ ಚಿತ್ರಕ್ಕೂ ಡೈರೆಕ್ಟರ್. ಅಶ್ವಿನ್ ಮೋಹಿತ್ ನಿರ್ಮಾಪಕರು.

    ಚಿತ್ರದ ಮುಹೂರ್ತ ನೆರವೇರಿದ್ದು, ಚಿತ್ರಕ್ಕೆ ಕ್ಲಾಪ್ ಮಾಡಿ ಶುಭ ಹಾರೈಸಿದ್ದು ನಟ ನೀನಾಸಂ ಸತೀಶ್.

    ನಿರ್ದೇಶಕರು ಕಥೆಯನ್ನು ಹೊಸ ರೀತಿಯಲ್ಲಿ ಹೇಳುತ್ತಿದ್ದಾರೆ. ಕಥೆಯಂತೂ ಸಖತ್ ಇಷ್ಟವಾಯಿತು. ನನಗೆ ಮೊದಲು ಇಷ್ಟವಾಗಿದ್ದೇ ಚಿತ್ರದ ಟೈಟಲ್. ಆಮೇಲೆ ಕಥೆಯೂ ಇಷ್ಟವಾಯಿತು ಎನ್ನುವ ರಿಷಿಯವರಿಗೆ ಚಿತ್ರದ ಮೇಲೆ ನಂಬಿಕೆಯಿದೆ. ಈ ಚಿತ್ರ ಕನ್ನಡ ಮತ್ತು ತೆಲುಗು, ಎರಡೂ ಭಾಷೆಯಲ್ಲಿ ತಯಾರಾಗುತ್ತಿದೆ.

  • ಶಿವಣ್ಣ, ಧ್ರುವ ಲಿಸ್ಟಿಗೆ ಸೇರ್ತಾರಾ ರಿಷಿ..?

    rishi expecting a hat trick woth sarvajanikarige suvarnavakasha

    ಒಂದು.. ಮತ್ತೊಂದು.. ಮಗದೊಂದು.. ಆರಂಭದಲ್ಲೇ ಹೀಗೆ ಸತತ ಹಿಟ್ ಸಿಕ್ಕರೆ, ಅದು ಕೊಡೊ ಕಿಕ್ಕೇ ಬೇರೆ. ಆಪರೇಷನ್ ಅಲಮೇಲಮ್ಮ ಚಿತ್ರದಿಂದ ಬೆಳ್ಳಿತೆರೆಗೆ ಪರಿಚಿತರಾದ ರಿಷಿ, ಈಗ ಹ್ಯಾಟ್ರಿಕ್ ನಿರೀಕ್ಷೆಯಲ್ಲಿದ್ದಾರೆ.

    ಸಿಂಪಲ್ ಸುನಿ ನಿರ್ದೇಶನದ ಆಪರೇಷನ್ ಅಲಮೇಲಮ್ಮ ಮತ್ತು ಪುನೀತ್ ನಿರ್ಮಾಣದ ಕವಲುದಾರಿ. ಎರಡೂ ಹಿಟ್ ಚಿತ್ರಗಳು. ಈ ವಾರ ಸಾರ್ವಜನಿಕರಿಗೆ ಸುವರ್ಣಾವಕಾಶ ರಿಲೀಸ್ ಆಗುತ್ತಿದೆ. ಈ ಬಾರಿಯೂ ಅವರಿಗೆ ಹಿಟ್ ಪ್ರೊಡ್ಯೂಸರ್, ಕಥೆಗಾರರು ಸಿಕ್ಕಿದ್ದಾರೆ.

    ಗುಳ್ಟು ಖ್ಯಾತಿಯ ಜನಾರ್ದನ್ ಚಿಕ್ಕಣ್ಣ ಬ್ಯಾನರಿಗೆ ಚಿತ್ರ ಸಾರ್ವಜನಿಕರಿಗೆ ಸುವರ್ಣಾವಕಾಶ. ಗುಳ್ಟುನಲ್ಲಿ ಸಾಫ್ಟ್ವೇರ್ ವಂಚಕರ ಕಥೆಯನ್ನು ಅಷ್ಟೇ ಸೀರಿಯಸ್ಸಾಗಿ ಹೇಳಿದ್ದವರು ಈಗ ಕಾಮಿಡಿ ಅಸ್ತ್ರ ಎತ್ತಿಕೊಂಡಿದ್ದಾರೆ. ಇದು 100% ವೊರಿಜಿಲನಲ್ ಕಥೆ ಎನ್ನುವುದು ನಿರ್ದೇಶಕ ಅನೂಪರ್ ಅವರ ಕಾನ್ಫಿಡೆನ್ಸು. ಚಿತ್ರ ನೋಡಿ ನೀವು ನಕ್ಕರೆ.. ನಿರ್ಮಾಪಕರೂ ನಗುತ್ತಾರೆ. ಗೆಟ್ ರೆಡಿ..

  • ಸಕಲಕಲಾವಲ್ಲಭ ರಿಷಿ

    rishi in now sakalakalvallabha

    ಆಪರೇಷನ್ ಅಲಮೇಲಮ್ಮ, ಕವಲುದಾರಿ ಖ್ಯಾತಿಯ ರಿಷಿ ಈಗ ಸಕಲಕಲಾವಲ್ಲಭನಾಗುತ್ತಿದ್ದಾರೆ. ನಿರ್ದೇಶಕ ಜೇಕಬ್ ವರ್ಗಿಸ್. ನಿರ್ಮಾಪಕರೂ ಅವರೇ.

    ಚಿತ್ರದಲ್ಲಿ ಸಾಯಿಕುಮಾರ್ ಕೂಡಾ ಪ್ರಧಾನ ಪಾತ್ರವೊಂದನ್ನು ಪೋಷಿಸುತ್ತಿದ್ದಾರೆ. ರಾಮನ ಅವತಾರ ಮತ್ತು ಸಾರ್ವಜನಿಕರಲ್ಲಿ ವಿನಂತಿ ಎಂಬ ಎರಡು ಚಿತ್ರಗಳಲ್ಲಿ ನಟಿಸುತ್ತಿರುವ ರಿಷಿಗೆ ಇದು 3ನೇ ಸಿನಿಮಾ.

    1991ರಲ್ಲಿ ಶಶಿಕುಮಾರ್ ಅಭಿನಯದಲ್ಲಿ ಸಕಲಕಲಾವಲ್ಲಭ ಸಿನಿಮಾ ತೆರೆ ಕಂಡಿತ್ತು. ಅದೇ ಟೈಟಲ್‍ನಲ್ಲಿ ತೆರೆಗೆ ಬರುತ್ತಿರುವ ಈ ಚಿತ್ರಕ್ಕೂ, 1991ರ ಆ ಹಳೆಯ ಚಿತ್ರಕ್ಕೂ ಕನೆಕ್ಷನ್ ಇಲ್ಲ.

  • ಸಾರ್ವಜನಿಕರಿಗೆ ಸುವರ್ಣಾವಕಾಶ ಅಪ್ಪು ಹಾಡಿನ ಮಜಾನೇ ಬೇರೆ..

    puneeth's song from sarvajanikarige suvarnavakasha creates craze

    ಏನು ಸ್ವಾಮಿ ಮಾಡೋಣ..

    ಆಗಿಹೋಯ್ತು ಅದ್ವಾನ..

    ಹಾಕಿ ಬಿಟ್ಲು ಕಿಟಕಿ ಬಾಗ್ಲನ್ನ..

    ಇಂಥಾದ್ದೊಂದು ಮಜವಾದ ಹಾಡು ಸಾರ್ವಜನಿಕರಿಗೆ ಸುವರ್ಣಾವಕಾಶ ಚಿತ್ರದಲ್ಲಿದೆ. ಹಾಡಿರೋದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್. ಮಿದುನ್ ಮುಕುಂದನ್ ಸಂಗೀತ ಸಂಯೋಜನೆಯ ಹಾಡಿಗೆ ಅಕ್ಷರ ಜೋಡಿಸಿರುವುದು ಡಾ.ವಿ.ನಾಗೇಂದ್ರ ಪ್ರಸಾದ್.  

    ಪುನೀತ್ ಅವರಂತೂ ಪಡ್ಡೆಗಳ ಭಾವಾವೇಶದಲ್ಲಿಯೇ ಹಾಡು ಹಾಡಿದ್ದಾರೆ. ಹಾಡಿನ ಕಿಕ್ಕನ್ನೂ ಹೆಚ್ಚಿಸಿದ್ದಾರೆ. ರಿಷಿ ಌಕ್ಟಿಂಗ್ ಕೂಡಾ ವ್ಹಾವ್ ಎನ್ನುವಂತಿದೆ. ಪ್ರೀತಿಯಲ್ಲಿ ಏಟು ತಿಂದ ಯುವಕರ ತಲೆಯಲ್ಲಿ ಸೃಷ್ಟಿಯಾಗುವ ವೇದಾಂತವೇ ಈ ಹಾಡಿನ ಸಾಹಿತ್ಯ.

    ಅನೂಪ್ ರಾಮಸ್ವಾಮಿ ಕಶ್ಯಪ್ ನಿರ್ದೇಶನದ ಚಿತ್ರಕ್ಕೆ ಗುಳ್ಟು ಖ್ಯಾತಿಯ ಜನಾರ್ದನ್ ಚಿಕ್ಕಣ್ಣ,

    ದೇವರಾಜ್, ಪ್ರಶಾಂತ್ ರೆಡ್ಡಿ ನಿರ್ಮಾಪಕರು. ಜನಾರ್ದನ್ ಚಿಕ್ಕಣ್ಣ ಅವರದ್ದೇ ಕಥೆ. ರಿಷಿಗೆ ಜೋಡಿಯಾಗಿ ನಟಿಸಿರುವುದು ಧನ್ಯಾ ರಾಮಕೃಷ್ಣ.  

  • ಸಾರ್ವಜನಿಕರಿಗೆ ಸುವರ್ಣಾವಕಾಶ ಡಿಸೆಂಬರ್ ಲಕ್ಕಿ

    sarvajanikrige suvarnavakasha waitiging for december luck

    ಸಾರ್ವಜನಿಕರಿಗೆ ಸುವರ್ಣಾವಕಾಶ ಚಿತ್ರ, ತನ್ನ ಟ್ರೇಲರ್, ವಿಭಿನ್ನವಾದ ಹಾಡುಗಳ ಮೂಲಕ ಗಮನ ಸೆಳೆದಿರುವ ಸಿನಿಮಾ. ಜೊತೆಗೆ ಗುಳ್ಟು ಟೀಂನ ಸಿನಿಮಾ ಎಂಬುದು ಬೇರೆ ಚಿತ್ರದ ಮೇಲೆ ಭಾರಿ ನಿರೀಕ್ಷೆ ಹುಟ್ಟಿಸಿದೆ. ಹೀಗಿರುವಾಗ ಈ ಚಿತ್ರಕ್ಕೆ ಡಿಸೆಂಬರ್ ಅದೃಷ್ಟವೂ ಜೊತೆಗೂಡಿದೆ. ಏನು ಗೊತ್ತೇ.. ಈ ಚಿತ್ರವನ್ನು ವಿತರಣೆ ಮಾಡುತ್ತಿರುವುದು ಕನ್ನಡ ಚಿತ್ರರಂಗದ ಸೂಪರ್ ವಿತರಕ ಜೋಡಿ ಜಯಣ್ಣ-ಭೋಗೇಂದ್ರ.

    ಇವರು ಡಿಸೆಂಬರ್‌ನಲ್ಲಿ ವಿತರಣೆ ಮಾಡಿದ ಚಿತ್ರಗಳೆಲ್ಲ ಬೊಂಬಾಟ್ ಹಿಟ್ ಆಗಿವೆ. ಆ ಲಿಸ್ಟಿಗೆ ನಮ್ಮದೂ ಸೇರಲಿದೆ ಎಂಬ ನಿರೀಕ್ಷೆ ನಿರ್ದೇಶಕ ಅನೂಪ್ ಅವರದ್ದು.

    ರಿಷಿ, ಧನ್ಯಾ ಜೋಡಿಯ ಸಿನಿಮಾ, 100ಕ್ಕೂ ಹೆಚ್ಚು ಚಿತ್ರಮಂದಿರಗಳಳಲ್ಲಿ ರಿಲೀಸ್ ಆಗುತ್ತಿದೆ. ಆಪರೇಷನ್ ಅಲಮೇಲಮ್ಮ, ಕವಲುದಾರಿ ಚಿತ್ರಗಳ ಯಶಸ್ಸಿನ ನಂತರ ರಿಲೀಸ್ ಆಗುತ್ತಿರುವ ಸಾರ್ವಜನಿಕರಿಗೆ ಸುವರ್ಣಾವಕಾಶ ಚಿತ್ರ ರಿಷಿಯ ಪಾಲಿಗೆ ಅತ್ಯಂತ ಮಹತ್ವದ ಸಿನಿಮಾ. ಅವರು ಹ್ಯಾಟ್ರಿಕ್ ನಿರೀಕ್ಷೆಯಲ್ಲಿದ್ದಾರೆ.

  • ಸೈತಾನ್ ರಿಷಿಯ ರಾಮನ ಅವತಾರ : ಇನ್ನೊಂದು ಹಾಡು ಬಂತು

    ಸೈತಾನ್ ರಿಷಿಯ ರಾಮನ ಅವತಾರ : ಇನ್ನೊಂದು ಹಾಡು ಬಂತು

    ಸೈತಾನ್ ರಿಷಿ ಯಾರು ಎಂದು ಶಾಕ್ ಆಗಬೇಡಿ. ಇತ್ತೀಚೆಗೆ ತೆಲುಗಿನ ಸೈತಾನ್ ವೆಬ್ ಸಿರೀಸ್ ನೋಡಿದ್ದರೆ, ಇವರೇನಾ ನಮ್ಮ ರಿಷಿ ಎಂದು ಆಶ್ಚರ್ಯ ಪಡುತ್ತೀರಿ. ಆಪರೇಷನ್ ಅಲಮೇಲಮ್ಮ, ಕವಲುದಾರಿಯಂತಹ ಸಿನಿಮಾಗಳಲ್ಲಿ ತರಲೆಯಾಗಿ, ಗಂಭೀರನಾಗಿ ನಟಿಸಿದ್ದ ಅದೇ ರಿಷಿ, ಸೈತಾನ್`ನಲ್ಲಿ ಭಯ ಹುಟ್ಟಿಸುತ್ತಾರೆ. ಅಷ್ಟೊಂದು ರಗಡ್ ಕ್ಯಾರೆಕ್ಟರ್ ಅದು. ಅದೇ ರಿಷಿ, ಈಗ ರಾಮನ ಅವತಾರ ಎತ್ತಿದ್ದಾರೆ.

    ರಾಮನ ಅವತಾರ' ಸಿನಿಮಾದ ಎರಡನೇ ಹಾಡು ಬಿಡುಗಡೆಯಾಗಿದೆ. ಸಿಂಪಲ್ ಸುನಿ ಸಾಹಿತ್ಯದ ಮನಸ್ಸು ಬೇರೆ ದಿಕ್ಕಿಗೆ ಸಾಗಲು ಹಾಡಿಗೆ ಖ್ಯಾತ ಗಾಯಕ ಸಂಚಿತ್ ಹೆಗಡೆ ಧ್ವನಿಯಾಗಿದ್ದು, ಜೂಡಾ ಸ್ಯಾಂಡಿ ಟ್ಯೂನ್ ಹಾಕಿದ್ದಾರೆ. ಉಡುಪಿ ಬೀಚ್ನಲ್ಲಿ ಇಡೀ ಹಾಡನ್ನು ಚಿತ್ರೀಕರಿಸಲಾಗಿದೆ. ಸೊಗಸಾದ ಈ ಪ್ರೇಮಗೀತೆಯಲ್ಲಿ ರಿಷಿ ಹಾಗೂ ಪ್ರಣೀತಾ ಜೋಡಿ ನೋಡುಗರ ಗಮನಸೆಳೆಯುತ್ತಿದೆ. ಇದು ಕಲಿಯುಗದ ರಾಮನ ಕಥೆ ಆಗಿದ್ದು, ಈ ಸಿನಿಮಾ ನೋಡುವಾಗ ಅಲ್ಲಲ್ಲಿ ಪ್ರೇಕ್ಷಕರಿಗೆ ರಾಮಾಯಣದ ನೆನಪು ಆಗುವುದಂತೆ. ಇದು ಪಕ್ಕಾ ಕಾಮಿಡಿ ಜಾನರ್ ಎನ್ನಲಾಗಿದೆ.

    ರಾಮನ ಅವತಾರ ಸಿನಿಮಾಗೆ ಇಬ್ಬರು ಹೀರೋಯಿನ್ಸ್. ಪ್ರಣೀತಾ ಸುಭಾಷ್ ಹಾಗೂ ಶುಭ್ರ ಅಯ್ಯಪ್ಪ ನಾಯಕಿಯರಾಗಿ ನಟಿಸಿದ್ದಾರೆ. ಅರುಣ್ ಸಾಗರ್ ಪ್ರಧಾನ ಪಾತ್ರದಲ್ಲಿದ್ದಾರೆ.  ವಿಕಾಸ್ ಪಂಪಾಪತಿ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಿದ್ದು, ಇದು ಇವರ ಫಸ್ಟ್ ಮೂವಿ.

    ಸ್ಟಾರ್ ಫ್ಯಾಬ್ ಪ್ರೊಡಕ್ಷನ್ನಡಿ ಆಪರೇಷನ್ ಅಲಮೇಲಮ್ಮ ಸಿನಿಮಾ ನಿರ್ಮಾಣ ಮಾಡಿದ್ದ ಅಮರೇಜ್ ಸೂರ್ಯವಂಶಿ ಚಿತ್ರ ನಿರ್ಮಾಣ ಮಾಡಿದ್ದಾರೆ.

  • ಹಿಂದಿ, ಮರಾಠಿ, ತಮಿಳು.. ಆಪರೇಷನ್ ಅಲಮೇಲಮ್ಮನ ಸಕ್ಸಸ್ ಯಾತ್ರೆ

    operation almelamma

    ಆಪರೇಷನ್ ಅಲಮೇಲಮ್ಮ ಕನ್ನಡದಲ್ಲಿ ಹಿಟ್ ಆಗಿದ್ದೇ ತಡ, ಹಲವು ಭಾಷೆಯ ನಿರ್ಮಾಪಕರು ಕಥೆಯ ಬೆನ್ನು ಬಿದ್ದಿದ್ದಾರೆ. ಕಚಗುಳಿಯಿಡುವ ಸಂಭಾಷಣೆ, ಪ್ರೇಮಕಥೆಯನ್ನು ಕಿಡ್ನಾಪ್ ಸ್ಟೋರಿಯೊಂದಿಗೆ ಬೆಸೆದಿರುವ ನಿರ್ದೇಶಕ ಸುನಿಯ ಟೆಕ್ನಿಕ್ ಇಲ್ಲಿ ವರ್ಕೌಟ್ ಆಗಿದೆ. 

    ಅಲಮೇಲಮ್ಮ ಚಿತ್ರವನ್ನು ಮರಾಠಿ ಮತ್ತು ಹಿಂದಿಯಲ್ಲಿ ಧೂನ್ ಎಂಬ ಸಂಸ್ಥೆ ನಿರ್ಮಿಸೋಕೆ ಮುಂದಾಗಿದ್ದರೆ, ತಮಿಳಿನಲಿ ಹಾರಿಜನ್ ಎಂಬ ಸಂಸ್ಥೆ ಚಿತ್ರ ನಿರ್ಮಾಣಕ್ಕೆ ಆಸಕ್ತಿ ತೋರಿದೆ. ಇನ್ನು ಚಿತ್ರದ 2ನೇ ಭಾಗಕ್ಕೂ ಸಿದ್ಧತೆ ನಡೆಯುತ್ತಿದ್ದು, ಅಮರೇಶ್ ಸೂರ್ಯವಂಶಿ ನಿರ್ಮಾಣಕ್ಕೆ ಆಸಕ್ತಿ ತೋರಿಸುತ್ತಿದ್ದಾರೆ.

  • ಹೀರೋ-ಹೀರೋಯಿನ್‌ಗೆ ಸಾಲ ಕೊಡುವ ಸುವರ್ಣಾವಕಾಶ

    sarvajanikarige suvarnavakasha lyrical video attracts audience

    ಸಾರ್ವಜನಿಕರಿಗೆ ಸುವರ್ಣಾವಕಾಶ ಚಿತ್ರದ ಲಿರಿಕಲ್ ವಿಡಿಯೋ ಸಾಂಗ್ ಕಣ್ಮನ ಸೆಳೆಯುತ್ತಿದೆ. ನೀಲಾಕಾಶವೇ ಕೇಳು.. ಪ್ರೀತಿ ಸಾಲ ಹೇಳು ಎಂಬ ಗೀತೆಯಿದು. ರಿಷಿ ಮತ್ತು ಧನ್ಯಾ ಬಾಲಕೃಷ್ಣ ನಟಿಸಿರುವ ಗೀತೆಯನ್ನು ಮುದ್ದು ಮುದ್ದಾಗಿ ಸೆರೆ ಹಿಡಿದಿರುವುದು ನಿರ್ದೇಶಕ ಅನೂಪ್ ಕಶ್ಯಪ್.

    ಪ್ರೇಮಿಗಳ ಭಾವನೆಗಳನ್ನು ಕಲರ್ ಫುಲ್ ಆಗಿ ತೋರಿಸುವ ಹಾಡಿದು ಎನ್ನುವ ಅನೂಪ್ ಅವರೇ ಹಾಡಿಗೆ ಸಾಹಿತ್ಯವನ್ನೂ ಬರೆದಿದ್ದಾರೆ. ಹಾಡಿರುವುದು ಹರಿಚರಣ್ ಮತ್ತು ರಕ್ಷಿತಾ ರಾವ್. ಮಿದುನು ಮುಕುಂದನ್ ಸಂಗೀತ ಮೆಲೋಡಿಯಾಗಿದೆ.

    ಕಾಮಿಡಿ ಟ್ರಾö್ಯಕ್‌ನಲ್ಲಿಯೇ ಜೀವನದ ವಿವಿಧ ಮಜಲುಗಳನ್ನು ಸಮಸ್ಯೆಗಳನ್ನು ಹೋರಾಟದ ಬದುಕನ್ನು ಹೇಳುವ ಸಾರ್ವಜನಿಕರಿಗೆ ಸುವರ್ಣಾವಕಾಶ ಇದೇ ವಾರ ರಿಲೀಸ್ ಆಗುತ್ತಿದೆ.