` srinivasraju, - chitraloka.com | Kannada Movie News, Reviews | Image

srinivasraju,

  • 'Dandupalya 4' In The Offing?

    dandupalya 4 in offing?

    If everything had gone right, then Srinivas Raju's new film '3' which is the continuation of 'Dandupalya' and '2' was supposed to release on the 19th of January. However, there is no news of release this week. Meanwhile, there is a news that the fourth edition in the series may happen in the coming days.

    Yes, If the sources are to be believed, then there is a news that 'Dandupalya 4' is in the offing and the film may start only after the release of 'Dandupalya 3'. Sources say, Srinivas Raju is busy finalising the script of the film.

    Meanwhile, 'Dandupalya 3' has been postponed due to various reasons and the film is likely to release in the coming weeks. Pooja Gandhi, Ravi Kaale, Makrand Deshapande, Shruthi, Sanjana, Danny Kuttappa, Jaidev, Ravishankar and others have played prominent roles in the film. Arjun Janya is the cameraman. Ram Talluri is the producer.

  • 3 ಬಿಡುಗಡೆ ಹೊತ್ತಿನಲ್ಲೇ 4 ಶೂಟಿಂಗ್ ಕನಸು..!

    srinivas raju plans dandupalya 4

    ದಂಡುಪಾಳ್ಯ ಚಿತ್ರದ ಎರಡು ಭಾಗಗಳು ಈಗಾಗಲೇ ತೆರೆಗೆ ಬಂದಿವೆ. ದಂಡುಪಾಳ್ಯ ಹಂತಕರ ಕ್ರೌರ್ಯದ ಕಥೆ ಹೇಳಿದ್ದ ಮೊದಲ ಭಾಗ ಹಿಟ್ ಆಗಿತ್ತು. ಆದರೆ, ಅದು ಪೊಲೀಸರ ಪಿತೂರಿ ಎಂಬಂತೆ ಚಿತ್ರಿಸಲಾಗಿದ್ದ 2 ಸುದ್ದಿ ಮಾಡಿತ್ತು. ಈಗ 3 ಬಿಡುಗಡೆಗೆ ರೆಡಿಯಾಗಿ ನಿಂತಿದೆ. ಆಗಲೇ 4ನೇ ಭಾಗದ ಸುಳಿವು ಹೊರಬಿದ್ದಿದೆ.

    ಶ್ರೀವಿನಾಸ ರಾಜು ಅವರೇ 4 ಚಿತ್ರಕ್ಕೂ ಕಥೆ, ಚಿತ್ರಕಥೆ, ಸಂಭಾಷಣೆ ಬರೆಯಲಿದ್ದಾರಂತೆ. ನಿರ್ದೇಶನವೂ ಅವರದ್ದೇ ಇರುತ್ತೆ. ಆದರೆ, ಈ ಅಂತೆಕಂತೆಗಳಿಗೆಲ್ಲ ಮುಕ್ತಿ ಸಿಗುವುದು 4 ಚಿತ್ರ ಸೆಟ್ಟೇರಿದ ನಂತರ. ಸದ್ಯಕ್ಕೆ ಎಲ್ಲರ ಕುತೂಹಲದ ಕಣ್ಣಿರುವುದು 3 ಚಿತ್ರದತ್ತ. ಆ ಚಿತ್ರದಲ್ಲಿ ದಂಡುಪಾಳ್ಯ ಸರಣಿಗೆ ಯಾವ ತಿರುವು ಸಿಗಲಿದೆಯೋ.. ನೋಡಬೇಕು.

  • KFCC To Take Action On Srinivasa Raju

    kfcc to take action on srinivas raju

    The Karnataka Film Chamber of Commerce has said that it will take action on director Srinivasa Raju for his objectionable scene in the movie 2. The scene was deleted by the Censor Board but has been leaked in the last few days leading to a major controversy. The scene is about a police officer torturing a woman suspect. Ravishankar and Sanjjanaa are the main actors in the scene.

    KFCC president Sa Ra Govindu is very upset with the controversy surrounding the scene. The alleged nude vide of Sanjjana that was leaked has been in the centre of controversy. While Sanjjanaa today said that she was wearing a dress that was masked and it was not really a nude video the film industry is upset with the bad potrayal of the police and the disgrace the video is brining. 

    Speaking to Chitraloka Sa Ra Govindu said that KFCC is calling a meeting with the Directors Association and will take action against Srinivasa Raju for making this type of scene and insulting the police department. "We are going to call actor Ravishankar and Sanjjana to hear what exactly happened and how they accepted to do this scene and what happened there," Govindu said. Will Srinivasa Raju be banned in the Kannada film industry is to be seen.

  • ಆಚಾರ್ಯ ಅರೆಸ್ಟ್ ಚಿತ್ರ ಸಿದ್ಧವಾಗುತ್ತಿದೆ - ಯಾರದು ಸ್ವಾಮೀಜಿ..? ಏನು ಕಥೆ..?

    srinivasa raju

    ದಂಡುಪಾಳ್ಯ ಖ್ಯಾತಿಯ ಶ್ರೀನಿವಾಸ ರಾಜು, ಹೊಸದೊಂದು ಚಿತ್ರ ಘೋಷಿಸಿದ್ದು, ಅದಕ್ಕೆ ಆಚಾರ್ಯ ಅರೆಸ್ಟ್ ಅನ್ನೋ ನಾಮಕರಣ ಮಾಡಿರೋದು ಹಳೆ ವಿಚಾರ. ಅವರು ಆ ಚಿತ್ರದಲ್ಲಿ ಹೇಳಹೊರಟಿರೋದು ಕಂಚಿ ಕಾಮಕೋಟಿ ಪೀಠದ ಶ್ರೀ ಜಯೇಂದ್ರ ಸರಸ್ವತೀ ಸ್ವಾಮೀಜಿ ಬಗ್ಗೆ. 

    ಅದು ಕಂಚಿ ಶ್ರೀಗಳ ವಿರುದ್ಧದ ಸಂಚು ಎನ್ನುತ್ತಿರುವ ಶ್ರೀನಿವಾಸ ರಾಜು, ಚಿತ್ರವನ್ನು ನವೆಂಬರ್​ನಲ್ಲಿ ಶುರು ಮಾಡುವ ಸುಳಿವು ಕೊಟ್ಟಿದ್ದಾರೆ. 

    ಏನದು ಪ್ರಕರಣಗಳು..?

    ಕಂಚಿ ಶ್ರೀಗಳ ವಿರುದ್ಧ ಇದ್ದದ್ದು ಎರಡು ಆರೋಪ. ಒಂದು ಕೊಲೆ ಮತ್ತೊಂದು ಕೊಲೆ ಯತ್ನದ ಆರೋಪ. ಎರಡೂ ಘಟನೆಗಳು ನಡೆದಿದ್ದುದು 2004ರಲ್ಲಿ. 

    ಮಠದ ಆಡಿಟರ್ ಆಗಿದ್ದ ರಾಧಾಕೃಷ್ಣನ್ ಮೇಲೆ ಮಠದಲ್ಲಿ ಹಲ್ಲೆಯಾಗಿತ್ತು. ಅದನ್ನು ಖುದ್ದು ಶ್ರೀಗಳೇ ಮುಂದೆ ನಿಂತು ಮಾಡಿಸಿದ್ದರು ಎನ್ನುವುದು ಒಂದು ಆರೋಪ. 

    ಇನ್ನೊಂದು ಮಠದ ಮ್ಯಾನೇಜರ್ ಆಗಿದ್ದ ಶಂಕರರಾಮನ್ ಕೊಲೆ ಪ್ರಕರಣ. ಇದಕ್ಕೂ ಖುದ್ದು ಶ್ರೀಗಳೇ ಕಾರಣ ಎನ್ನುವುದು ಎರಡನೇ ಆರೋಪ.

    ಎರಡೂ ಪ್ರಕರಣದಲ್ಲಿ ಶ್ರೀಗಳು ಖುಲಾಸೆಯಾದರು. ಅವರಷ್ಟೇ ಅಲ್ಲ, ಪ್ರಕರಣದಲ್ಲಿ ಆರೋಪಿಗಳಾಗಿದ್ದ ಯಾರೊಬ್ಬರ ವಿರುದ್ಧವೂ ಸಾಕ್ಷ್ಯಗಳು ಸಿಕ್ಕಲಿಲ್ಲ. 

    ಈಗ ಶ್ರೀನಿವಾಸ ರಾಜು ಎತ್ತಿಕೊಳ್ಳಲಿರುವ ಆಚಾರ್ಯ ಅರೆಸ್ಟ್ ಚಿತ್ರದಲ್ಲಿ ಇದೇ ಎರಡು ಪ್ರಕರಣಗಳ ಕಥೆಯೇ ಇರಲಿದೆ.  

  • ಮಗಳ ಆ ದೃಶ್ಯ ನೋಡಿದ ಸಂಜನಾ ತಾಯಿ ಹೇಳಿದ್ದೇನು?

    sanjana's mother reacts

    ಬಹುಶಃ ಎಂಥವರೂ ಆಘಾತಕ್ಕೊಳಗಾಗುವುದು ಸಹಜವೇ. ಸಂಜನಾ ಈ ಬಾರಿ ಸಿಕ್ಕಿಕೊಂಡಿದ್ದು ಅಂಥಾ ವಿವಾದದಲ್ಲಿ. 2 ಚಿತ್ರದಲ್ಲಿ ನಟಿ ಸಂಜನಾ ಅವರ ಆ ವಿಡಿಯೋ ನೋಡಿ ಸಂಜನಾ ತಾಯಿ ರೇಷ್ಮಾ ಶಾಕ್ ಆಗಿದ್ದರಂತೆ. ಆದರೆ, ನನ್ನ ಮಗಳು ನಗ್ನವಾಗಿ ನಟಿಸಿರಲಿಲ್ಲ. ಆ ದಿನ ಶೂಟಿಂಗ್ ಮಾಡುವ ಸಮಯದಲ್ಲಿ ನಾನು ಶೂಟಿಂಗ್ ಸ್ಪಾಟ್‍ನಲ್ಲೇ ಇದ್ದೆ ಎಂದಿದ್ದಾರೆ ಸಂಜನಾ ತಾಯಿ ರೇಷ್ಮಾ.

    ಅಷ್ಟೇ ಅಲ್ಲ, ಸಂಜನಾ ತಮ್ಮ ಮೇಕಪ್ ರೂಂನಿಂದಲೇ ತಾಯಿಗೆ ಆ ದೃಶ್ಯದಲ್ಲಿ ತಾವು ಹೇಗಿರುತ್ತೇವೆ ಎನ್ನುವುದರ ಬಗ್ಗೆ ತಾಯಿಗೆ ಫೋಟೋ ಕೂಡಾ ಕಳಿಸಿದ್ದರು. ಈಗ ಸಂಜನಾ ಸಾಕ್ಷಿ ಎಂದು ತೋರಿಸುತ್ತಿರುವ ಫೋಟೋ ಅದೇ. ನನ್ನ ಮಗಳಿಗೆ ಆಗದವರ್ಯಾರೋ ಈ ಕೆಲಸ ಮಾಡಿದ್ದಾರೆ.

    ಅವರೇ ಈ ವಿಡಿಯೋ ಹೊರಗೆ ಬಿಟ್ಟಿದ್ದಾರೆ ಎಂದು ಹೇಳುತ್ತಿದ್ದಾರೆ ರೇಷ್ಮಾ. ಅಂದಹಾಗೆ, ಈ ವಿಚಾರದಲ್ಲಿ ನಟಿ ಸಂಜನಾ ಆಗಲೀ, ನಿರ್ಮಾಪಕ, ನಿರ್ದೇಶಕರಾಗಲಿ ಫಿಲ್ಮ್ ಚೇಂಬರ್‍ಗೆ ದೂರು ಕೊಟ್ಟಿಲ್ಲ. ಪೊಲೀಸರಿಗೂ ದೂರು ಕೊಟ್ಟಿಲ್ಲ. ರಾಜ್ಯ ಮಹಿಳಾ ಹಕ್ಕು ಆಯೋಗ ಮಾತ್ರ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದೆ. ಮುಂದೇನು..?

    Related Articles :-

    KFCC To Take Action On Srinivasa Raju

    ಲೀಕ್ ವಿಡಿಯೋಗೆ ಫೋಟೋ ಸಾಕ್ಷಿ - ಸಂಜನಾ ನೀಲಿ ಬಟ್ಟೆ ಧರಿಸಿದ್ದರ ಹಿಂದಿನ ಟೆಕ್ನಾಲಜಿ

    ಸಂಜನಾ ವಿಡಿಯೋ ಲೀಕ್‍ನಲ್ಲಿ ನಮ್ಮ ಪಾತ್ರವಿಲ್ಲ - ನಿರ್ದೇಶಕ ಶ್ರೀನಿವಾಸ ರಾಜು ಮೊದಲ ಪ್ರತಿಕ್ರಿಯೆ

    ಬೆತ್ತಲಾಗಿಲ್ಲ..ಬೆತ್ತಲಾಗಿಲ್ಲ.. - ಸಾಕ್ಷಿ ಸಮೇತ ಬಂದರು ಸಂಜನಾ

    ಸಂಜನಾ ವಿಡಿಯೋ ಲೀಕ್ ಮಾಡ್ತೀರಾ..? ನನ್‍ಮಗಂದ್..ವಿಷ ಕುಡೀರಿ - ಸಿಡಿದೆದ್ದ ಹುಚ್ಚ ವೆಂಕಟ್

    ವಿಡಿಯೋ ಲೀಕ್ ಆದ ಮೇಲೆ ಸಂಜನಾ ಕೇಳುತ್ತಿರುವ ಪ್ರಶ್ನೆ ಇದೊಂದೇ..

    Nude scene when duty calls

    2ನಲ್ಲಿ ಬೆತ್ತಲಾದರಾ ನಟಿ ಸಂಜನಾ..? ಲೀಕ್ ಆಗಿದೆ ವಿಡಿಯೋ..!