` pushkar mallikarjun, - chitraloka.com | Kannada Movie News, Reviews | Image

pushkar mallikarjun,

 • ಅವನೇ ಶ್ರೀಮನ್ನಾರಾಯಣ ಚಿತ್ರದ ಬಜೆಟ್ ಎಷ್ಟು..?

  what is the total budget of avane srimannarayana

  ಅವನೇ ಶ್ರೀಮನ್ನಾರಾಯಣ, ಸಿನಿಮಾ ರಿಲೀಸ್ ಆಗೋಕೆ ಇನ್ನೇನು ಕೆಲವೇ ದಿನ. ಚಿತ್ರದ ಮೇಕಿಂಗ್, ಟ್ರೇಲರ್, ಗ್ರಾಫಿಕ್ಸ್ ಕ್ವಾಲಿಟಿ ನೋಡಿದವರೆಲ್ಲ ಕಡಿಮೆಯೆಂದರೂ ಈ ಚಿತ್ರಕ್ಕೆ 50 ಕೋಟಿ ಖರ್ಚಾಗಿದೆ ಎನ್ನುತ್ತಿದ್ದಾರೆ. ಆದರೆ, ಚಿತ್ರದ ನಿಜವಾದ ಬಜೆಟ್ ಎಷ್ಟು..? ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಈ ಪ್ರಶ್ನೆಗೆ ಇಷ್ಟೇ ಎಂಬ ಉತ್ತರ ಕೊಡಲ್ಲ. ಬದಲಿಗೆ ಸ್ಟೈಲಾಗಿ ಒಂದು ಸ್ಮೈಲ್ ಬಿಸಾಕಿ ಸುಮ್ಮನಾಗುತ್ತಾರೆ. ಆದರೆ, ಚಿತ್ರದ ಹೀರೋ ರಕ್ಷಿತ್ ಶೆಟ್ಟಿ, ಚಿತ್ರದ ಬಜೆಟ್ ಎಷ್ಟು ಎಂಬ ಬಗ್ಗೆ ಹೇಳಿಕೊಂಡಿದ್ದಾರೆ.

  ರಕ್ಷಿತ್  ಶೆಟ್ಟಿ ಪ್ರಕಾರ ಚಿತ್ರದ ಬಜೆಟ್ ಸುಮಾರು 23 ಕೋಟಿ. ಹೌದೇ.. ಇದು ಹೇಗೆ ಸಾಧ್ಯ ಎಂದರೆ, ರಕ್ಷಿತ್ ಶೆಟ್ಟಿ ಕೈತೋರಿಸುವುದು ಅವರ ಟೀಂನತ್ತ. ನಮ್ಮ ಟೀಂನಲ್ಲಿ ಪಕ್ಕಾ ಪ್ರೊಫೆಷನಲ್ಸ್ ಇದ್ರು. ಪ್ರತಿಯೊಂದನ್ನೂ ಅಳೆದು ತೂಗಿ ಮಾಡ್ತಾ ಇದ್ರು. ಹೀಗಾಗಿ ದುಂದುವೆಚ್ಚ ತಪ್ಪಿತು. ಚಿತ್ರದ ಬಜೆಟ್ ಕಡಿಮೆಯಾಯ್ತು ಎಂದಿದ್ದಾರೆ ರಕ್ಷಿತ್.

  ಪುಷ್ಕರ್  ಮಲ್ಲಿಕಾರ್ಜುನಯ್ಯ, ಇಷ್ಟು ದೊಡ್ಡ ಬಜೆಟ್ ಸಿನಿಮಾ ಮಾಡೋಕೆ ಸಾಧ್ಯನಾ ಎಂಬ ಪ್ರಶ್ನೆ ಕೇಳಿದ್ದವರು ಹಲವರು. ಅವರಿಗೆ ಉತ್ತರವಾಗಿ ಬಂದಿದೆ ಅವನೇ ಶ್ರೀಮನ್ನಾರಾಯಣ. ಸಚಿನ್ ನಿರ್ದೇಶನದ ಚಿತ್ರದಲ್ಲಿ ಶಾನ್ವಿ ಶ್ರೀವಾತ್ಸವ್ ಲಕ್ಷ್ಮೀ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

 • ಅವನೇ ಶ್ರೀಮನ್ನಾರಾಯಣ ಟೀಸರ್ ಹಿಟ್ ಸಂಭ್ರಮ

  avane srimannarayana teser released

  ರಕ್ಷಿತ್ ಶೆಟ್ಟಿ ಅವರ ಹುಟ್ಟುಹಬ್ಬಕ್ಕೆಂದೇ ಅವನೇ ಶ್ರೀಮನ್ನಾರಾಯಣ ಚಿತ್ರದ ಟೀಸರ್ ಹೊರಬಿತ್ತು. 80ರ ದಶಕದ ಪೊಲೀಸ್ ಕಥೆ ಹೊಂದಿರುವ ಸಿನಿಮಾದ ಟೀಸರ್, ಆನ್‍ಲೈನ್‍ನಲ್ಲಿ ಸೂಪರ್ ಡ್ಯೂಪರ್ ಹಿಟ್. ಹಳೆಯ ಕಾಲದ ಗೆಟಪ್ಪು, ಶೋಲೆಯನ್ನು ನೆನಪಿಸುವಂತಹ ವಿಲನ್‍ಗಳು, ಸ್ಟೈಲು.. ಟೀಸರ್ ನೋಡಿದವರು ಫುಲ್ ಫಿದಾ.

  ನಾಯಕಿ ಶಾನ್ವಿ ಶ್ರೀವಾಸ್ತವ್, ಅಚ್ಯುತ್ ಕುಮಾರ್, ಬಾಲಾಜಿ ಮನೋಹರ್, ಪ್ರಮೋದ್ ಶೆಟ್ಟಿ, ಮಧುಸೂದನ್ ರಾವ್ ಮೊದಲಾದವರಿರುವ ಚಿತ್ರಕ್ಕೆ ಸಚಿನ್ ನಿರ್ದೇಶನವಿದೆ. ಟೀಸರ್ ನೋಡಿದವರಿಗೆ ಇಷ್ಟವಾಗಿರೋದು ರಕ್ಷಿತ್ ಶೆಟ್ಟಿ, ಮ್ಯಾನರಿಸಂ. ಟೀಸರ್ ವೀಕ್ಷಿಸಿದವರ ಸಂಖ್ಯೆ ಈಗಾಗಲೇ 4 ಲಕ್ಷ ಗಡಿದಾಟಿರುವುದು ವಿಶೇಷ.ಮಲಯಾಳಂನಲ್ಲೂ ರಿಲೀಸ್ ಮಾಡಿ ಎಂದು ಕೇರಳದ ಅಭಿಮಾನಿಗಳು ಆನ್‍ಲೈನ್‍ನಲ್ಲೇ ಡಿಮ್ಯಾಂಡ್ ಇಟ್ಟಿರುವುದು ಅವನೇ ಶ್ರೀಮನ್ನಾರಾಯಣ ಚಿತ್ರತಂಡಕ್ಕೆ ಬೂಸ್ಟ್ ಕೊಟ್ಟಂತಾಗಿದೆ.

 • ಅವನೇ ಶ್ರೀಮನ್ನಾರಾಯಣನಿಗೆ ಒಂದೇ ಡ್ರೆಸ್ಸಾ..?

  secret shetty's costume secret in avana srimananarayana

  ರಕ್ಷಿತ್ ಶೆಟ್ಟಿ-ಶಾನ್ವಿ ಶ್ರೀವಾಸ್ತವ್ ಪ್ರಧಾನ ಪಾತ್ರದಲ್ಲಿರುವ ಅವನೇ ಶ್ರೀಮನ್ನಾರಾಯಣ, ಆಗಸ್ಟ್‍ನಲ್ಲಿ ತೆರೆಗೆ ಬರಲಿದೆ. ಕನ್ನಡವೂ ಸೇರಿದಂತೆ 5 ಭಾಷೆಗಳಲ್ಲಿ ಏಕಕಾಲದಲ್ಲಿ ರಿಲೀಸ್ ಆಗಲಿದೆ ಎನ್ನುವುದೆಲ್ಲ ಈಗ ಕನ್ನಡಿಗರಿಗೆ ಗೊತ್ತು. ಆದರೆ, ಇಷ್ಟು ದೊಡ್ಡ ಅದ್ಧೂರಿ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿಯವರಿಗೆ ಇರೋದು ಒಂದೇ ಡ್ರೆಸ್ಸು. ತಮಾಷೆ ಅಲ್ಲ ಸ್ವಾಮಿ.. ಇದು ಸತ್ಯ.

  ಚಿತ್ರದ 99% ದೃಶ್ಯಗಳಲ್ಲಿ ರಕ್ಷಿತ್ ಶೆಟ್ಟಿ ಪೊಲೀಸ್ ಯೂನಿಫಾರ್ಮಲ್ಲೇ ಇರ್ತಾರೆ ಎಂದು ಹೇಳಿರುವುದು ನಿರ್ಮಾಪಕರಲ್ಲಿ ಒಬ್ಬರಾದ ಪುಷ್ಕರ್ ಮಲ್ಲಿಕಾರ್ಜುನಯ್ಯ. ಚಿತ್ರದಲ್ಲಿ ಒಂದು ಹೋಳಿ ಹಾಡಿದ್ದು, ಆ ಹಾಡಿನಲ್ಲಿ ಮಾತ್ರ ರಕ್ಷಿತ್ ಶೆಟ್ಟಿ ಬಣ್ಣಬಣ್ಣದ ಹುಡುಗನಾಗಿ ಕಾಣಿಸಿಕೊಂಡಿದ್ದಾರಂತೆ.

  ಹೋಳಿ ದೃಶ್ಯಗಳು ತುಂಬಾ ರೊಮ್ಯಾಂಟಿಕ್ ಆಗಿ ಬಂದಿವೆ. ಇಮ್ರಾನ್ ಸರ್ದಾರಿಯಾ ಒಳ್ಳೆಯ ನೃತ್ಯ ಸಂಯೋಜಿಸಿದ್ದಾರೆ. ಚಿತ್ರೀಕರಣ ಮುಗಿದಿದ್ದು ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಚುರುಕುಗೊಳ್ಳಲಿವೆ.

 • ಊರ್ವಶಿಯಲ್ಲಿ ಶ್ರೀಮನ್ನಾರಾಯಣ ಬಾಕ್ಸಿಂಗ್ ಡೇ ದರ್ಶನ

  Avane Srimannarayana Premiere Show Tpday

  ಅವನೇ ಶ್ರೀಮನ್ನಾರಾಯಣ ರಿಲೀಸ್ ಆಗುವುದು ಬಾಕ್ಸಿಂಗ್ ಡೇ ಮುಗಿದ ಮೇಲೆ. ಬಾಕ್ಸಿಂಗ್ ಡೇ ಎಂದರೆ ಗೊತ್ತಲ್ಲ, ಕ್ರಿಸ್‍ಮಸ್ ಮಾರನೇ ದಿನವನ್ನ ಬಾಕ್ಸಿಂಗ್ ಡೇ ಅಂತಾ ಕರೆಯೋದು ವಾಡಿಕೆ. ಆದರೆ, ಆ ಬಾಕ್ಸಿಂಗ್ ಡೇ ದಿನವೇ ಅವನೇ ಶ್ರೀಮನ್ನಾರಾಯಣ ದರ್ಶನ ಕೊಡಲಿದ್ದಾನೆ.

  ರಿಲೀಸ್ ಆಗುವುದು ಡಿ.27ಕ್ಕೇ ಆದರೂ, ಊರ್ವಶಿಯಲ್ಲಿ ಪ್ರೀಮಿಯರ್ ಶೋ ಇದೆ. 26ನೇ ತಾರೀಕು ರಾತ್ರಿ 9ಕ್ಕೆ ಊರ್ವಶಿಯಲ್ಲಿ ನಡೆಯಲಿರುವ ಪ್ರೀಮಿಯರ್ ಶೋನಲ್ಲಿ ಸೆಲಬ್ರಿಟಿಗಳು ಭಾಗವಹಿಸಲಿದ್ದಾರೆ.

  ಸಚಿನ್ ರವಿ ನಿರ್ದೇಶನದ ಸಿನಿಮಾಗೆ ರಕ್ಷಿತ್ ಶೆಟ್ಟಿ ಹೀರೋ. 3 ವರ್ಷಗಳ ಸುದೀರ್ಘ ಗ್ಯಾಪ್ ನಂತರ ಬರುತ್ತಿರುವ ಸಿನಿಮಾಗೆ ಶಾನ್ವಿ ಶ್ರೀವಾತ್ಸವ್ ನಾಯಕಿ. ಅಜನೀಶ್ ಮತ್ತು ಚರಣ್‍ರಾಜ್ ಮ್ಯೂಸಿಕ್ ಪವರ್ ಇರುವ ಚಿತ್ರಕ್ಕೆ ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಪಕ.

 • ಎಂಥವರಿಗೆ ವೋಟ್ ಹಾಕಬಾರದು..? - ನೊಗ್‍ರಾಜ್ ಸಿನಿಮಾ ನೋಡಿ

  humble politicain nograj

  ಹಂಬಲ್ ಪೊಲಿಟಿಷಿಯನ್ ನೊಗ್‍ರಾಜ್. ಡ್ಯಾನಿಶ್ ಸೇಟ್ ಅಭಿನಯದ ಈ ಸಿನಿಮಾ ರಾಜಕೀಯ ವಿಡಂಬನೆಯ ಚಿತ್ರ. ಸಾದ್ ನಿರ್ದೇಶನದ ಈ ಸಿನಿಮಾದಲ್ಲಿ ರಾಜಕಾರಣಿಗಳನ್ನು ಲೇವಡಿ ಮಾಡಲಾಗಿದೆ. ಗಿಮಿಕ್ಕುಗಳನ್ನು, ಗಿಮಿಕ್ಕುಗಳ ಹಿಂದಿನ ರಸಗವಳದಂತಾ ಕಥೆಯನ್ನು ತೋರಿಸಲಾಗಿದೆ. ಹಾಗಾದರೆ ಸಿನಿಮಾವನ್ನು ಏಕೆ ನೋಡಬೇಕು..? ಹಲವು ವಿಶೇಷಗಳ ಜೊತೆ ಇನ್ನೂ ಒಂದು ಕಾರಣ ಇದೆ. ಈ ಸಿನಿಮಾ ನೋಡಿದರೆ ಎಂಥವರಿಗೆ ವೋಟ್ ಹಾಕಬಾರದು ಎನ್ನುವುದು ಗೊತ್ತಾಗಲಿದೆ.

  ಸಿನಿಮಾ ಆರಂಭವಾಗಿ ಮುಗಿಯುವವರೆಗೆ ಜನ ಬಿದ್ದು ಬಿದ್ದೂ ನಗ್ತಾರೆ. ಒಂದು ಒಳ್ಳೆಯ ಮೆಸೇಜ್ ಇರುವ ಸಿನಿಮಾ. ಸಿನಿಮಾ ನೋಡಿದರೆ, ಎಂಥವರಿಗೆ ವೋಟ್ ಹಾಕಬಾರದು ಎಂಬುದಂತೂ ಗೊತ್ತಾಗುತ್ತೆ. ಎಲೆಕ್ಷನ್ ಬೇರೆ ಹತ್ತಿರ ಬರ್ತಾ ಇದೆ. ಈ ಸಮಯಕ್ಕೆ ಇಂಥಾದ್ದೊಂದು ಸಿನಿಮಾ ಬೇಕಿತ್ತು ಅಂತಾರೆ ಡ್ಯಾನಿಶ್ ಸೇಟ್.

  ಪ್ರತಿದಿನ ಸಿನಿಮಾದ ಪುಟ್ಟ ಪುಟ್ಟ ವಿಡಿಯೋಗಳನ್ನು ಅಪ್‍ಲೋಡ್ ಮಾಡುತ್ತಲೇ ಇರುವ ಡ್ಯಾನಿಶ್ ಸೇಟ್, ಅದರಿಂದ ಚಿತ್ರಕ್ಕೆ ಪ್ರಚಾರವಾಗುತ್ತದೆಯೇ ಹೊರತು ಸಮಸ್ಯೆ ಆಗೋದಿಲ್ಲ. ನಮ್ಮ ಸಿನಿಮಾದ ಮೇಲೆ ನಮಗೆ ನಂಬಿಕೆ ಇದೆ ಎಂದು ಆತ್ಮವಿಶ್ವಾಸದಿಂದ ಹೇಳ್ತಾರೆ. ಚಿತ್ರದ ಬಿಡುಗಡೆ ಜೊತೆ ಜೊತೆಯಲ್ಲೇ 17 ಪ್ರೀಮಿಯರ್ ಶೋಗಳನ್ನು ಏರ್ಪಡಿಸಲಾಗಿದೆ. ಪ್ರೀಮಿಯರ್ ಶೋಗಳು ಆಗಲೇ ಹೌಸ್‍ಫುಲ್. 

  ಆನ್‍ಲೈನ್ ಮತ್ತು ಪ್ರೀಮಿಯರ್ ಶೋ ರೆಸ್ಪಾನ್ಸ್ ನೋಡುತ್ತಿದ್ದರೆ, ಜನವರಿ 12ರಂದು ಥಿಯೇಟರ್‍ಗಳು ತುಂಬಿ ತುಳುಕೋದ್ರಲ್ಲಿ ನೋ ಡೌಟ್.

   

 • ಕಂಗ್ರಾಟ್ಸ್ ಪುಷ್ಕರ್ ಮಲ್ಲಿಕಾರ್ಜುನಯ್ಯ

  Pushkar Mallikarjunaiah Happy With Avane Srimannarayana's Success

  ಇದು ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಅವರಿಗೆ ಶುಭಾಶಯ ಹೇಳುವ ಸಮಯ. ಅವನೇ ಶ್ರೀಮನ್ನಾರಾಯಣ ಸಿನಿಮಾ ಬಾಕ್ಸಾಫೀಸಿನಲ್ಲಿ ಹವಾ ಸೃಷ್ಟಿಸಿದೆ. 3 ವರ್ಷಗಳ ನಿರಂತರ ಶ್ರಮ ಮತ್ತು ಪ್ರತಿಭೆಗೆ ಪ್ರೇಕ್ಷಕ ನಾರಾಯಣ ಜೈ ಹೋ ಎಂದಿದ್ದಾನೆ. ರಕ್ಷಿತ್ ಶೆಟ್ಟಿ, ಶಾನ್ವಿ ಶ್ರೀವಾತ್ಸವ್ ಜೋಡಿ ಮೋಡಿ ಮಾಡಿದ್ದರೆ, ಸಚಿನ್ ರವಿ ನಿರ್ದೇಶನ ಮ್ಯಾಜಿಕ್ ಮಾಡಿದೆ.

  ಮೊದಲ ದಿನ 12 ಕೋಟಿ, 2ನೇ ದಿನ 15 ಕೋಟಿ ಆಸುಪಾಸಿನಲ್ಲಿದೆ ಕಲೆಕ್ಷನ್. 3ನೇ ದಿನವೂ 12 ರಿಂದ 15 ಕೋಟಿ ಕಲೆಕ್ಷನ್ ಎನ್ನುತ್ತಿವೆ ಮೂಲಗಳು. ಅಂದಹಾಗೆ ಇದು ಅಧಿಕೃತ ಲೆಕ್ಕವಲ್ಲ. ಬಾಕ್ಸಾಫೀಸ್ ಪಂಡಿತರ ಲೆಕ್ಕಾಚಾರ.

  ಇದರ ಜೊತೆಗೆ ಚಿತ್ರಕ್ಕೆ ಪ್ರೇಕ್ಷಕರು ಕೊಟ್ಟಿರುವ ರೇಟಿಂಗ್, ವಿಮರ್ಶಕರು ನೀಡಿರುವ ಮೆಚ್ಚುಗೆಯೂ ಪುಷ್ಕರ್ ಮಲ್ಲಿಕಾರ್ಜುನಯ್ಯ ಅವರಿಗೆ ಖುಷಿ ಕೊಟ್ಟಿದೆ. ರಿಲೀಸ್ ಆಗುವುದಕ್ಕೂ ಮೊದಲೇ ಸೇಫ್ ಜೋನ್ ಸೇರಿದ್ದ ಪುಷ್ಕರ್ ಮಲ್ಲಿಕಾರ್ಜುನಯ್ಯ, ಈಗ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ವರ್ಷನ್ ಬಿಡುಗಡೆಯಲ್ಲಿ ಬ್ಯುಸಿಯಾಗಿದ್ದಾರೆ. ಚಿತ್ರಕ್ಕೆ ವಿದೇಶಿ ಮಾರುಕಟ್ಟೆಯಲ್ಲೂ ಅದ್ಭುತ ಸಪೋರ್ಟ್ ಸಿಕ್ಕಿದೆ.

 • ಕತೆಯೊಂದು ಶುರುವಾಗಿದೆ.. ಶೂಟಿಂಗ್ ಮುಗಿದೋಗಿದೆ

  dinganth;s katheyondhu shuruvagidhe

  ಕತೆಯೊಂದು ಶುರುವಾಗಿದೆ.. ಇದು ಪುಷ್ಕರ್ ಮಲ್ಲಿಕಾರ್ಜುನಯ್ಯ ಮತ್ತು ರಕ್ಷಿತ್ ಶೆಟ್ಟಿ ಕಾಂಬಿನೇಷನ್‍ನ ಸಿನಿಮಾ. ಕಥೆ, ಚಿತ್ರಕಥೆಗಳಿಗೇ ಹೆಚ್ಚು ಆದ್ಯತೆ ಕೊಡುತ್ತಿರುವ ಪುಷ್ಕರ್-ರಕ್ಷಿತ್ ಜೋಡಿ, ಈ ಚಿತ್ರವನ್ನೂ ಹಾಗೆಯೇ ಒಪ್ಪಿಕೊಂಡು ನಿರ್ಮಿಸಿದೆ. ಚಿತ್ರಕ್ಕೆ ಅವರು ಎಷ್ಟರಮಟ್ಟಿಗೆ ಸಿದ್ಧರಾಗಿದ್ದರು ಎಂದರೆ, ಮೂವತ್ತೇ ದಿನಕ್ಕೆ ಶೂಟಿಂಗ್ ಮುಗಿದೇ ಹೋಗಿದೆ.

  ಚಿತ್ರದ ಬಗ್ಗೆ ಸಂಪೂರ್ಣ ಪೂರ್ವತಯಾರಿ ಆಗಿತ್ತು. ಯಾವ ಸೀನ್‍ಗೆ ಎಷ್ಟು ಶಾಟ್ ಬೇಕು ಎನ್ನುವುದು ಕೂಡಾ ನಿರ್ಧಾರವಾಗಿ ಹೋಗಿತ್ತು. ಪ್ರತಿಯೊಂದನ್ನೂ ತಯಾರಿ ಮಾಡಿಕೊಂಡರೆ, 30 ದಿನಗಳಲ್ಲಿ ಶೂಟಿಂಗ್ ಮುಗಿಸುವುದು ಕಷ್ಟವೇನಲ್ಲ ಅಂತಾರೆ ನಿರ್ದೇಶಕ ಸೆನ್ನಾ ಹೆಗ್ಡೆ.

  ಚಿತ್ರಕ್ಕೆ ದಿಗಂತ್ ಹೀರೋ ಆದರೆ, ಪೂಜಾ ದೇವರಿಯಾ ನಾಯಕಿ. ಸಚಿನ್ ವಾರಿಯರ್ ಸಂಗೀತವಿರುವ ಚಿತ್ರಕ್ಕೆ ಕಿರಣ್ ಕಾವೇರಪ್ಪ ಸಾಹಿತ್ಯ ಹಾಗೂ ಅಭಿಜಿತ್ ಮಹೇಶ್ ಸಂಭಾಷಣೆ ಇದೆ.

 • ನವೆಂಬರ್`ನಲ್ಲೇ ಅವತಾರ ಪುರುಷ

  ನವೆಂಬರ್`ನಲ್ಲೇ ಅವತಾರ ಪುರುಷ

  ಶರಣ್ ಮತ್ತು ಆಶಿಕಾ ರಂಗನಾಥ್ ಮತ್ತೊಮ್ಮೆ ಜೋಡಿಯಾಗಿರೋ ಅವತಾರ ಪುರುಷ ಸಿನಿಮಾ ನವೆಂಬರ್‍ನಲ್ಲಿಯೇ ರಿಲೀಸ್ ಆಗಲಿದೆ. ಡೇಟ್ ಯಾವುದು ಅನ್ನೋದನ್ನ ಚಿತ್ರತಂಡ ಅಧಿಕೃತವಾಗಿ ಅನೌನ್ಸ್ ಮಾಡಿಲ್ಲ.. ಅಷ್ಟೆ..ಭಜರಂಗಿ 2 ರಿಲೀಸ್ ಅಬ್ಬರ ಮುಗಿದು, ರಿಲೀಸ್ ಆದ ನಂತರ ಡೇಟ್ ಘೋಷಣೆಯಾಗಬಹುದು. ಮೂಲಗಳ ಪ್ರಕಾರ ರಿಲೀಸ್ ಡೇಟ್ ನವೆಂಬರ್ 18.

  ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣದ ಅವತಾರ ಪುರುಷ, ಎರಡು ಭಾಗಗಳಲ್ಲಿ ರಿಲೀಸ್ ಆಗುತ್ತಿದೆ. ಕೆಜಿಎಫ್ ಮತ್ತು ಬಾಹುಬಲಿ ಮಾದರಿಯಲ್ಲಿ... ಸಿಂಪಲ್ ಸುನಿ ನಿರ್ದೇಶನವಿರೋ ಚಿತ್ರಕ್ಕೆ ಸುಧಾರಾಣಿ, ಸಾಯಿಕುಮಾರ್, ಶ್ರೀನಗರ ಕಿಟ್ಟಿ.. ಸೇರಿದಂತೆ ಭರ್ಜರಿ ತಾರಾಗಣವೇ ಇದೆ. ಹಾರರ್ ಥ್ರಿಲ್ಲರ್ ಚಿತ್ರದಲ್ಲಿ ಸುನಿ ಮತ್ತು ಶರಣ್ ಕಾಂಬಿನೇಷನ್ ಇರೋ ಕಾರಣ.. ಕಾಮಿಡಿಗಂತೂ ಬರವಿಲ್ಲ. ಕಥೆಗೆ ಮೋಸವಂತೂ ಇರೋದಿಲ್ಲ.

 • ನಾರಾಯಣನನ್ನು ಪ್ರಚಾರ ಮಾಡಿದ್ದು ರಕ್ಷಿತ್ ಅಲ್ಲ.. ಪುಷ್ಕರ್ ಅಲ್ಲ.. ಮತ್ಯಾರು..?

  audience promotoed avane srimnarayana more than the movie team

  ಅವನೇ ಶ್ರೀಮನ್ನಾರಾಯಣ ಭರ್ಜರಿ ರಿಲೀಸ್ ಕಂಡಿದೆ. ಒಂದು ಸಾವಿರಕ್ಕೂ ಹೆಚ್ಚು ಥಿಯೇಟರುಗಳಲ್ಲಿ ಏಕಕಾಲಕ್ಕೆ ರಿಲೀಸ್ ಎಂದರೆ ಸುಮ್ಮನೆ ಮಾತಲ್ಲ. ದೊಡ್ಡ ಚಿತ್ರವೊಂದನ್ನು ಪ್ರಚಾರವಿಲ್ಲದೆ ಬಿಡುಗಡೆ ಮಾಡಬಾರದು ಎಂಬ ಕಾರಣಕ್ಕೆ ದೊಡ್ಡ ಮಟ್ಟದಲ್ಲಿಯೇ ಸಿನಿಮಾ ಪ್ರಮೋಷನ್ ಮಾಡಲಾಗಿದೆ.

  ಆದರೆ, ವಿಶೇಷವೇನು ಗೊತ್ತೇ.. ಇಷ್ಟೆಲ್ಲ ಪ್ರಮೋಷನ್ನುಗಳ ನಡುವೆ ಅತಿ ದೊಡ್ಡ ಪ್ರಚಾರ ಮಾಡಿದ್ದು ಹೀರೋ ರಕ್ಷಿತ್ ಶೆಟ್ಟಿ ಅಲ್ಲ, ಹೀರೋಯಿನ್ ಶಾನ್ವಿ ಶ್ರೀವಾತ್ಸವ್ ಅಲ್ಲ, ಡೈರೆಕ್ಟರ್ ಸಚಿನ್ ಅಲ್ಲ.. ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಅವರೂ ಅಲ್ಲ. ಹಾಗಾದರೆ ಯಾರು..?

  ಕನ್ನಡಿಗರು. ಹೌದು, ಸಿನಿಮಾ ರಿಲೀಸ್ ಆಗುವ ಮುಂಚೆ ಬಂದ ಟ್ರೇಲರ್ ಹಿಟ್ ಮಾಡಿದ್ದ ಪ್ರೇಕ್ಷಕರು, ಹ್ಯಾಂಡ್ಸಪ್ ಚಾಲೆಂಜ್‍ನ್ನಂತೂ ಮನಸಾರೆ ಎಂಜಾಯ್ ಮಾಡಿದರು. ಚಿತ್ರರಂಗದ ನಟ ನಟಿಯರೇ ಚಾಲೆಂಜ್ ಸ್ವೀಕರಿಸಿ, ತಾವೇ ಹಾಡಿ ಕುಣಿದು ಪ್ರಚಾರ ಮಾಡಿದರು. ಈಗ.. ಸಿನಿಮಾ ರಿಲೀಸ್ ಆಗಿದೆ. ಸಿನಿಮಾ ನೋಡಿದ ಪ್ರೇಕ್ಷಕರೇ.. ವ್ಹಾವ್.. ಈ ಸಿನಿಮಾ ಹಿಟ್ ಆಗಲೇಬೇಕು ಎಂದು ಸ್ವತಃ ಪ್ರಚಾರಕ್ಕೆ ನಿಂತುಬಿಟ್ಟಿದ್ದಾರೆ. ಅವನೇ ಶ್ರೀಮನ್ನಾರಾಯಣನ ಶಕ್ತಿಯೇ ಅವರು.. ಪ್ರೇಕ್ಷಕರು.

 • ನಾರಾಯಣನಿಗೆ ರವಿಚಂದ್ರನ್, ಶಿವಣ್ಣ ಬಹುಪರಾಕ್

  avavens rimnanarayana receives appreciation from cekebs

  ಅವನೇ ಶ್ರೀಮನ್ನಾರಾಯಣ ಚಿತ್ರದ ಪ್ರೀಮಿಯರ್ ಶೋ ಚಿತ್ರರಂಗದ ಸ್ಟಾರ್‍ಗಳ ಮನಸ್ಸು ಗೆದ್ದಿದೆ. ಇಡೀ ಚಿತ್ರರಂಗ ಒಟ್ಟಿಗೇ ಬಂದು ಊರ್ವಶಿಯಲ್ಲಿ ಹೊಸ ಲೋಕವನ್ನೇ ಸೃಷ್ಟಿಸಿತ್ತು. ಚಿತ್ರರಂಗದ ಗಣ್ಯರಿಗೆ ರೆಡ್ ಕಾರ್ಪೆಟ್ ಸ್ವಾಗತ ಕೋರಿದ್ದರು ಪುಷ್ಕರ್ ಮಲ್ಲಿಕಾರ್ಜುನಯ್ಯ.

  ಚಿತ್ರವನ್ನು ನೋಡಿದವರಲ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್ ಚಿತ್ರವನ್ನು ಹೊಗಳಿದ್ದಾರೆ. ಇದೊಂದು ಹೊಸ ಲೋಕ. ಹೊಸ ಕಲ್ಪನೆ. ಚಿತ್ರ ಅದ್ಭುತವಾಗಿ ಟೇಕಾಫ್ ಆಗಿದೆ ಎಂದಿದ್ದಾರೆ ರವಿಚಂದ್ರನ್. ರವಿಚಂದ್ರನ್ ಸುಖಾಸುಮ್ಮನೆ ಹೊಗಳಲ್ಲ ಎನ್ನುವುದು ಅಭಿಮಾನಿಗಳಿಗೆ ಗೊತ್ತಿಲ್ಲದ ಸಂಗತಿಯೇನಲ್ಲ.

  ಇನ್ನು ಶಿವರಾಜ್ ಕುಮಾರ್ ಚಿತ್ರದ ಕಾನ್ಸೆಪ್ಟ್, ಮೇಕಿಂಗ್‍ಗೆ ಫಿದಾ ಆಗಿದ್ದಾರೆ. ಇಂತಾದ್ದೊಂದು ಚಿತ್ರವನ್ನು ಕನ್ನಡ ಪ್ರೇಕ್ಷಕರು ನೋಡಿ ಮೆಚ್ಚಿ ಹರಸಬೇಕು ಎಂದು ಕೋರಿದ್ದಾರೆ.

  ರಕ್ಷಿತ್ ಶೆಟ್ಟಿ, ಶಾನ್ವಿ ಅಭಿನಯದ ಸಿನಿಮಾ ರಿಲೀಸ್ ಆಗಿದ್ದು ಎಲ್ಲೆಡೆ ಭರ್ಜರಿ ಪ್ರದರ್ಶನ ಕಾಣುತ್ತಿದೆ.

 • ಪುನೀತ್ ನಂತರ ಪುಷ್ಕರ್..!

  Pushkar Likely to release Bheemasena Nalamaharaja on OTT Platform

  ಕೊರೊನಾದಿಂದಾಗಿ ಥಿಯೇಟರುಗಳು ಓಪನ್ ಆಗುತ್ತಿಲ್ಲ. ಈ ವರ್ಷವಂತೂ ಸಿನಿಮಾ ಟಾಕೀಸ್ ನಡೆಯುವ ಯಾವುದೇ ಲಕ್ಷಣಗಳೂ ಇಲ್ಲ. ಹೀಗಾಗಿ ದೊಡ್ಡ ದೊಡ್ಡ ನಿರ್ಮಾಪಕರು ಓಟಿಟಿಯತ್ತ ಮುಖ ಮಾಡುತ್ತಿದ್ದಾರೆ. ಹಿಂದಿಯಲ್ಲಿ ಅಮಿತಾಭ್ ಬಚ್ಚನ್, ಅಕ್ಷಯ್ ಕುಮಾರ್, ತೆಲುಗಿನಲ್ಲಿ ಅನುಷ್ಕಾ ಶೆಟ್ಟಿ, ತಮಿಳಿನಲ್ಲಿ ಸೂರ್ಯ ಮೊದಲಾದವರು ಓಟಿಟಿಗೆ ಬಂದಿದ್ದಾಗಿದೆ. ಕನ್ನಡದಲ್ಲಿ ಆ ಸಾಹಸ ಮಾಡಿದ್ದು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್.

  ಈಗ ಪುನೀತ್ ಬೆನ್ನಲ್ಲೇ ಕನ್ನಡದ ಸ್ಟಾರ್ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಕೂಡಾ ಅದೇ ಹಾದಿ ಹಿಡಿದಿದ್ದಾರೆ. ಪುಷ್ಕರ್ ಬ್ಯಾನರಿಗೆ ಭೀಮಸೇನ ನಳಮಹರಾಜ ಸಿನಿಮಾ ಈಗ ಓಟಿಟಿಯಲ್ಲೇ ರಿಲೀಸ್ ಆಗುತ್ತಿದೆ. ಅರವಿಂದ್ ಅಯ್ಯರ್, ಆರೋಹಿ ನಾರಾಯಣ್ (ದೃಶ್ಯ ಖ್ಯಾತಿ) ನಿರ್ಮಾಣದ ಚಿತ್ರಕ್ಕೆ ಕಾರ್ತಿಕ್ ಸರಗೂರು ನಿರ್ದೇಶಕ. ಎಲ್ಲವೂ ಪ್ಲಾನ್ ಪ್ರಕಾರವೇ ನಡೆದರೆ ಇನ್ನೊಂದು ತಿಂಗಳಲ್ಲಿ ಭೀಮಸೇನ ನಳಮಹರಾಜ ಸಿನಿಮಾ ಅಮೇಜಾನ್ ಪ್ರೈಂನಲ್ಲಿ ಬರಲಿದೆ.

 • ಪುಷ್ಕರ್ ಬ್ರಹ್ಮರಾಕ್ಷಸ

  Puskhar mallikarjunaiah image

  ಕನ್ನಡದ ಸ್ಟಾರ್ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಹೊಸ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಚಿತ್ರದ ಟೈಟಲ್ ಬ್ರಹ್ಮರಾಕ್ಷಸ. ಗೋಧಿಬಣ್ಣ ಸಾಧಾರಣ ಮೈಕಟ್ಟು, ಕಿರಿಕ್ ಪಾರ್ಟಿ, ಅವನೇ ಶ್ರೀಮನ್ನಾರಾಯಣ, ಹಂಬಲ್ ಪೊಲಿಟಿಷಿಯನ್ ನೊಗ್ರಾಜ್..ನಂತಹ ಚಿತ್ರಗಳನ್ನು ನಿರ್ಮಿಸಿರೋ ಪುಷ್ಕರ್, ಈಗ 777 ಚಾರ್ಲಿ, ಭೀಮಸೇನ ನಳಮಹರಾಜ, ಅವತಾರ್ ಪುರುಷದಂತಹ ಚಿತ್ರಗಳಲ್ಲಿ ಬ್ಯುಸಿ. ಹೀಗಿದ್ದುಕೊಂಡೇ ಬ್ರಹ್ಮರಾಕ್ಷಸನಾಗಲು ಹೊರಟಿದ್ದಾರೆ ಪುಷ್ಕರ್.

  you_tube_chitraloka1.gif

  ಮಮ್ಮಿ, ದೇವಕಿ ಚಿತ್ರಗಳ ಮೂಲಕ ವಿಭಿನ್ನ ನಿರ್ದೇಶಕ ಎಂದು ಗುರುತಿಸಿಕೊಂಡಿರುವ ಎಂ.ಲೋಹಿತ್, ಬ್ರಹ್ಮರಾಕ್ಷಸ ಚಿತ್ರಕ್ಕೆ ನಿರ್ದೇಶಕ. ಇದೂ ಕೂಡಾ ಹಾರರ್ ಥ್ರಿಲ್ಲರ್ ಸಿನಿಮಾ ಎಂದಿದ್ದಾರೆ ಲೋಹಿತ್.

 • ಪುಷ್ಕರ್ ಮಲ್ಲಿಕಾರ್ಜುನಯ್ಯ ವಿರುದ್ಧ ರಕ್ಷಿತ್ ಶೆಟ್ಟಿ ಆರೋಪವೇನು?

  ಪುಷ್ಕರ್ ಮಲ್ಲಿಕಾರ್ಜುನಯ್ಯ ವಿರುದ್ಧ ರಕ್ಷಿತ್ ಶೆಟ್ಟಿ ಆರೋಪವೇನು?

  ಪುಷ್ಕರ್ ಮಲ್ಲಿಕಾರ್ಜುನಯ್ಯ ಮತ್ತು ರಕ್ಷಿತ್ ಶೆಟ್ಟಿ ಆತ್ಮೀಯ ಮಿತ್ರರು. 2016ರಲ್ಲಿ ಗೋಧಿ ಬಣ್ಣ ಸಾಧಾರಣ ಮೈಕಟ್ಟು ಚಿತ್ರದಿಂದ ಶುರುವಾದ ಗೆಳೆತವನ ಅದು. ರಕ್ಷಿತ್ ಶೆಟ್ಟಿ ವೃತ್ತಿ ಜೀವನದ ಅತಿದೊಡ್ಡ ಹಿಟ್ ಕಿರಿಕ್ ಪಾರ್ಟಿ ಚಿತ್ರಕ್ಕೂ ಬಂಡವಾಳ ಹೂಡಿದ್ದವರು ಪುಷ್ಕರ್ ಮಲ್ಲಿಕಾರ್ಜುನಯ್ಯ. ರಕ್ಷಿತ್ ಶೆಟ್ಟಿಯ ಪ್ರತಿ ಪ್ರಾಜೆಕ್ಟ್‍ನಲ್ಲೂ ಪುಷ್ಕರ್ ಹೆಸರು ಇರುತ್ತಿತ್ತು. ಅವರಿಬ್ಬರ ಸ್ನೇಹಕ್ಕೆ ಹುಳಿ ಹಿಂಡಿದ್ದೇ ಅವನೇ ಶ್ರೀಮನ್ನಾರಾಯಣ.

  ಅವನೇ ಶ್ರೀಮನ್ನಾರಾಯಣ, ದೊಡ್ಡ ಬಜೆಟ್ಟಿನಲ್ಲಿ ತಯಾರಾಗಿದ್ದ ಚಿತ್ರ. ದೊಡ್ಡ ಮಟ್ಟದ ನಿರೀಕ್ಷೆಯೂ ಇತ್ತು. ಚಿತ್ರದ ಖರ್ಚಿನಲ್ಲಿ ಧಾರಾಳಿಯಾಗಿದ್ದ ಪುಷ್ಕರ್ ಮಲ್ಲಿಕಾರ್ಜುನಯ್ಯ, ಚಿತ್ರದ ಪ್ರಮೋಷನ್‍ನ್ನೂ ದೊಡ್ಡದಾಗಿಯೇ ಮಾಡಿದರು. ಆದರೆ, ಚಿತ್ರ ಪ್ರೇಕ್ಷಕರಿಗೆ ರುಚಿಸಲೇ ಇಲ್ಲ. ಲಾಸ್ ಆಯಿತು.

  ರಕ್ಷಿತ್ ಶೆಟ್ಟಿ ಪ್ರಕಾರ `ಅವನೇ ಶ್ರೀಮನ್ನಾರಾಯನ ಚಿತ್ರಕ್ಕೆ ಪುಷ್ಕರ್ ಮಲ್ಲಿಕಾರ್ಜುಯನ್ನ ಬಡ್ಡಿಗೆ ಸಾಲ ತಂದು ಹಾಕಿದ್ದರು. ಹೀಗಾಗಿ ಲಾಸ್ ಆಯಿತು. ಇಲ್ಲದೇ ಇದ್ದರೆ ಲಾಸ್ ಆಗುತ್ತಿರಲಿಲ್ಲ. ನಾನೂ 3 ವರ್ಷ ಚಿತ್ರಕ್ಕೆ ಶ್ರಮ ಹಾಕಿದ್ದೆ. ಸಿನಿಮಾ ಓಡಲಿಲ್ಲ ಎಂದ ಮಾತ್ರಕ್ಕೆ ಸಿನಿಮಾ ಬಗ್ಗೆ ಲೂಸ್ ಟಾಕ್ ಮಾಡ್ತಾನೆ ಅಂದ್ರೆ ಆತನಿಗೆ ಸಿನಿಮಾ ಬಗ್ಗೆ ಪ್ರೀತಿ ಇರಲಿಲ್ಲ ಎಂದೇ ಅರ್ಥ. ಹೀಗಾಗಿ ಆತನ ಜೊತೆಗಿನ ಸಂಬಂಧ ಕಡಿದುಕೊಂಡಿದ್ದೇವೆ' ಎಂದಿದ್ದಾರೆ ರಕ್ಷಿತ್ ಶೆಟ್ಟಿ.

  ಅವನೇ ಶ್ರೀಮನ್ನಾರಾಯಣ ಚಿತ್ರದ ಲಾಸ್ 20 ಕೋಟಿಯನ್ನು ಸಾಲ ಮಾಡಿ ತಂದುಕೊಟ್ಟಿದ್ದೇನೆ. ಚಾರ್ಲಿ 777 ಚಿತ್ರಕ್ಕೆ ಹೂಡಿದ್ದ ಮೂರೂವರೆ ಕೋಟಿ ಹಾಗೂ ಸಪ್ತಸಾಗರದಾಚೆಯೆಲ್ಲೋ ಚಿತ್ರದಲ್ಲಿದ್ದ ಬಂಡವಾಳವನ್ನೂ ಪುಷ್ಕರ್ ಅವರಿಗೆ ವಾಪಸ್ ನೀಡಿದ್ದೇನೆ ಎಂದಿರೋ ರಕ್ಷಿತ್ ಶೆಟ್ಟಿ, ಪುಷ್ಕರ್ ಅವರ ಬಿಸಿನೆಸ್ ಸ್ಟೈಲ್ ನನಗೆ ಇಷ್ಟವಾಗಲಿಲ್ಲ ಎಂದಿದ್ದಾರೆ.

  ಹಾಗಂತ ರಕ್ಷಿತ್ ಶೆಟ್ಟಿ ಮತ್ತು ಪುಷ್ಕರ್ ಮಧ್ಯೆ ಇರೋ ಸ್ನೇಹವೂ ಮುಗಿದು ಹೋಯ್ತಾ ಎಂದರೆ ಹಾಗೇನಿಲ್ಲ. ಇತ್ತೀಚೆಗೆ ರಕ್ಷಿತ್ ಶೆಟ್ಟಿ ವಿರುದ್ಧ ಸುದ್ದಿಗಳ ಗಾಸಿಪ್ ಆದಾಗ ಜೊತೆಗಿದ್ದವರು ಇದೇ ಪುಷ್ಕರ್. ರಕ್ಷಿತ್ ಶೆಟ್ಟಿಯ ಹುಟ್ಟುಹಬ್ಬಕ್ಕೂ ಶುಭ ಕೋರಿದ್ದ ಪುಷ್ಕರ್, ರಕ್ಷಿತ್ ಶೆಟ್ಟಿ ಬಗ್ಗೆ ನೆಗೆಟಿವ್ ಸುದ್ದಿ ಬಂದಾಗಲೆಲ್ಲ ಪಾಸಿಟಿವ್ ಆಗಿಯೇ ಜೊತೆಗಿದ್ದಾರೆ.

 • ಪುಷ್ಕರ್ ಸಿನಿ ವಿಮಾನದಲ್ಲಿ ಸುನಿ ರಾಬಿನ್ ಹುಡ್

  Pushkar - Suni's Next Film Titled 'Robinhood'

  ಸಿಂಪಲ್ ಡೈರೆಕ್ಟರ್ ಖ್ಯಾತಿಯ ಸುನಿ ಮತ್ತು ಸ್ಟಾರ್ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಜೋಡಿ ಮತ್ತೊಮ್ಮೆ ಒಂದಾಗುತ್ತಿದೆ. ಈಗಾಗಲೇ ಸುನಿ-ಪುಷ್ಕರ್ ಜೋಡಿ, ಅವತಾರ್ ಪುರುಷ ಸಿನಿಮಾ ಮಾಡುತ್ತಿದೆ. ಇದು ಮುಗಿಯುತ್ತಿದ್ದಂತೆಯೇ ಪುಷ್ಕರ್ ಬ್ಯಾನರ್‍ಗಾಗಿ ರಾಬಿನ್ ಹುಡ್ ಸಿನಿಮಾ ಕೈಗೆತ್ತಿಕೊಳ್ಳಲಿದ್ದಾರೆ ಸುನಿ.

  ಸುನಿ ಹುಟ್ಟುಹಬ್ಬಕ್ಕಾಗಿ ಚಿತ್ರದ ಪೋಸ್ಟರ್ ರಿಲೀಸ್ ಮಾಡಿರುವ ಚಿತ್ರತಂಡ, ಈ ಚಿತ್ರದ ಮೂಲಕ ಹೊಸ ಹೀರೋನನ್ನು ಪರಿಚಯ ಮಾಡಲಿದೆಯಂತೆ. ನಮ್ ಡೈರೆಕ್ಟರ್ ಹುಟ್ಟುಹಬ್ಬಕ್ಕೆ ಟೈಟಲ್ ಪೋಸ್ಟರ್ ಬಿಡುಗಡೆ ಮಾಡಿದ್ದೇವೆ. ಶೀಘ್ರದಲ್ಲೇ ಸಿನಿಮಾ ತಂಡವನ್ನು ರಿವೀಲ್ ಮಾಡುತ್ತೇವೆ ಎಂದಿದ್ದಾರೆ ಪುಷ್ಕರ್ ಮಲ್ಲಿಕಾರ್ಜುನಯ್ಯ.

  ಸಿಂಪಲ್ ಸುನಿ ಸದ್ಯಕ್ಕೆ ಶರಣ್ ಜೊತೆ ಅವತಾರ್ ಪುರುಷ ಮತ್ತು ಗಣೇಶ್ ಜೊತೆ ಸಖತ್ ಸಿನಿಮಾ ಮಾಡುತ್ತಿದ್ದಾರೆ. ಅವೆರಡೂ ಮುಗಿದ ನಂತರ ರಾಬಿನ್ ಹುಡ್.

   

 • ಪ್ರಭುದೇವಗೆ ಮೂಕಿ ಚಿತ್ರ ಸವಾಲಾಗಲಿಲ್ಲ. ಏಕೆ ಗೊತ್ತಾ..?

  prabhudeva talks about mercury

  ಮಕ್ರ್ಯುರಿ.. ಮೂಕಿ ಸಿನಿಮಾ. ಸೈಲೆಂಟ್ ಥ್ರಿಲ್ಲರ್. ಇಡೀ ಚಿತ್ರದಲ್ಲಿ ಒಂದೇ ಒಂದು ಸಂಭಾಷಣೆ ಇಲ್ಲ. ಡ್ಯಾನ್ಸ್ ಕೂಡಾ ಇಲ್ಲ. ಕಾಮಿಡಿಯೂ ಇಲ್ಲ. ಆದರೆ, ಈ ಚಿತ್ರದ ಹೀರೋ ಪ್ರಭುದೇವ. ಪ್ರಭುದೇವ ಇದ್ದೂ, ಇವ್ಯಾವುದೂ ಇಲ್ಲ ಎಂದರೆ ಹೇಗೆ..? ಪ್ರಭುದೇವ ಅವರಿಗೆ ಇದು ರಿಸ್ಕ್ ಎನಿಸಲಿಲ್ಲವಾ..? ಇಂಥಾದ್ದೊಂದು ಪ್ರಶ್ನೆಯನ್ನು ಪ್ರಭುದೇವ ಮುಂದಿಟ್ಟಾಗ ಅವರು ಹೇಳಿದ್ದು ನಮಗೆ ಅಚ್ಚರಿ ತರಬಹುದು.

  `ನಾನು ಮೂಲತಃ ಡ್ಯಾನ್ಸರ್. ಡ್ಯಾನ್ಸ್ ಮಾಡುವವರು ಮಾತನಾಡದೆಯೇ ಸಂಭಾಷಣೆ ನಡೆಸೋದು ಅತ್ಯಂತ ಸಹಜವಾಗಿ ನಡೆದು ಹೋಗುತ್ತೆ. ಕಣ್ಣು, ಕೈಬಾಯಿ ಸನ್ನೆಗಳಲ್ಲೇ ಕಮ್ಯುನಿಕೇಷನ್ ಆಗಿರುತ್ತೆ. ಹೀಗಾಗಿ ಈ ಸಿನಿಮಾದಲ್ಲಿ ನಟಿಸುವುದು ನನಗೆ ಚಾಲೆಂಜ್ ಎನಿಸಲಿಲ್ಲ'

  ಇದು ಪ್ರಭುದೇವ ಉತ್ತರ. ಮಕ್ರ್ಯುರಿ ಚಿತ್ರದ ಕಥೆ ಕೇಳಿದಾಗ ಥ್ರಿಲ್ ಆಗಿದ್ದರಂತೆ ಪ್ರಭುದೇವ. ನನ್ನೊಳಗೆ ಡ್ಯಾನ್ಸರ್ ಅಷ್ಟೇ ಅಲ್ಲ, ನಟನೂ ಇದ್ದಾನೆ. ಒಳ್ಳೆಯ ಪಾತ್ರಕ್ಕಾಗಿ ಮನಸ್ಸು ಹುಡುಕುತ್ತಿರುತ್ತೆ. ಹೀಗಿರುವಾಗಲೇ ಈ ಸಿನಿಮಾದ ಆಫರ್ ಬಂತು. ಥ್ರಿಲ್ಲಾಗಿಬಿಟ್ಟೆ ಅಂತಾರೆ ಪ್ರಭುದೇವ. 

  ಸಿನಿಮಾ ಇದೇ ವಾರ ರಿಲೀಸ್. ರಕ್ಷಿತ್ ಶೆಟ್ಟಿ, ಪುಷ್ಕರ್ ಮಲ್ಲಿಕಾರ್ಜುನಯ್ಯ ಬ್ಯಾನರ್‍ನ ಪರಂವಾ ಸ್ಟುಡಿಯೋಸ್ ಸಿನಿಮಾವನ್ನು ರಾಜ್ಯದಾದ್ಯಂತ ಬಿಡುಗಡೆ ಮಾಡುತ್ತಿದೆ.ಕಾರ್ತಿಕ್ ಸುಬ್ಬರಾಜ್ ನಿರ್ದೇಶನದ ಈ ಚಿತ್ರ, ಕಾರ್ತಿಕ್-ಪ್ರಭುದೇವ ಕಾಂಬಿನೇಷನ್ ಹಾಗೂ ಸೈಲೆಂಟ್ ಮೂವಿ ಎಂಬ ಕಾರಣಕ್ಕೇ ನಿರೀಕ್ಷೆ ಹುಟ್ಟಿಸಿದೆ.

 • ಪ್ರೊಡ್ಯೂಸರ್ ಪುಷ್ಕರ್.. ಈಗ ಆ್ಯಕ್ಟರ್

  pushkar mallikarjunaiah turns actor

  ಪುಷ್ಕರ್ ಮಲ್ಲಿಕಾರ್ಜುನಯ್ಯ. ಕನ್ನಡದಲ್ಲಿ ಆಕ್ಟಿವ್ ಆಗಿರುವ ಕೆಲವೇ ನಿರ್ಮಾಪಕರಲ್ಲಿ ಒಬ್ಬರು. ಒಂದರ ಹಿಂದೊಂದು ಚಿತ್ರಗಳಲ್ಲಿ ತೊಡಗಿಸಿಕೊಳ್ಳುತ್ತಲೇ ಇರುವ ಪುಷ್ಕರ್ ಮಲ್ಲಿಕಾರ್ಜುನಯ್ಯ, ಈಗ ನಟರಾಗಿದ್ದಾರೆ. ಟೆರರಿಸ್ಟ್ ಚಿತ್ರದಲ್ಲಿ ಪುಷ್ಕರ್ ಮಲ್ಲಿಕಾರ್ಜುನಯ್ಯ, ತನಿಖಾಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ.

  ಪಿ.ಸಿ.ಶೇಖರ್ ನಿರ್ದೇಶನದ ಚಿತ್ರದಲ್ಲಿ ರಾಗಿಣಿ ದ್ವಿವೇದಿ ನಾಯಕಿ. ಚಿತ್ರದ ಪ್ರತಿಯೊಂದು ಪಾತ್ರವೂ ರಿಯಲೆಸ್ಟಿಕ್ ಆಗಿರಬೇಕು ಅನ್ನೋದು ನನ್ನ ಆಸೆಯಾಗಿತ್ತು. ಪುಷ್ಕರ್ ಆ ಪಾತ್ರಕ್ಕೆ ಹೊಂದಿಕೊಳ್ಳುತ್ತಿದ್ದರು. ಹೊಸ ಮುಖ. ಹೀಗಾಗಿ ಅವರಿಂದಲೇ ಈ ಪಾತ್ರ ಮಾಡಿಸಿದ್ದೇನೆ ಅಂತಾರೆ ಪಿ.ಸಿ.ಶೇಖರ್.

  ನಿರ್ಮಾಣಕ್ಕಿಳಿದಾಗ ನಟನಾಗಬೇಕು ಎಂದುಕೊಂಡಿದ್ದೆ. ಆದರೆ, ನಟನಾಗಲೇಬೇಕೆಂದು ಕನಸು ಕಂಡವನಲ್ಲ. ಅದಕ್ಕಾಗಿ ತಯಾರಿ ಮಾಡಿಕೊಳ್ಳುತ್ತಿದ್ದೆ. ನನ್ನ ನಿರ್ದೇಶನ, ನಿರ್ಮಾಣದಲ್ಲಿ ನಾನು ಯಾವಾಗ ಬೇಕಾದರೂ ನಟಿಸಬಹುದು. ಆದರೆ, ಬೇರೆ ನಿರ್ದೇಶಕರ ಜೊತೆ ನಟಿಸುವ ಅನುಭವವೇ ಬೇರೆ. ತನಿಖಾಧಿಕಾರಿಯಾಗಿ ಕಾಣಿಸಿಕೊಂಡಿದ್ದೇನೆ. ನನ್ನ ಲುಕ್‍ಗೆ ತಕ್ಕಂತೆಯೇ ಕ್ಯಾರೆಕ್ಟರ್ ಇದೆ ಎಂದಿದ್ದಾರೆ ಪುಷ್ಕರ್ ಮಲ್ಲಿಕಾರ್ಜುನಯ್ಯ.

  ಪುಷ್ಕರ್ ಮಲ್ಲಿಕಾರ್ಜುನಯ್ಯ ಅವರಲ್ಲಿ ಒಬ್ಬ ತನಿಖಾಧಿಕಾರಿಗೆ ಇರಬೇಕಾದ, ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುವ ಗುಣ ಇದೆಯಂತೆ. ಒಬ್ಬ ನಿರ್ಮಾಪಕರಾಗಿ ಅವರು ಅದನ್ನು ಮಾಡುತ್ತಿರುತ್ತಾರೆ. ಹೀಗಾಗಿಯೇ ಅವರನ್ನು ಆಯ್ಕೆ ಮಾಡಿದೆ. ನನ್ನ ನಿರೀಕ್ಷೆಗೂ ಮೀರಿ ಚೆನ್ನಾಗಿ ನಟಿಸಿದ್ದಾರೆ ಎಂದು ಸರ್ಟಿಫಿಕೇಟ್ ಕೊಟ್ಟಿದ್ದಾರೆ ನಿರ್ದೇಶಕ ಪಿ.ಸಿ.ಶೇಖರ್.

 • ಪ್ರೊಡ್ಯೂಸರ್ ಪುಷ್ಕರ್.. ವಿನಯ್ ರಾಜ್ ಬಾಕ್ಸರ್.. ಸಿನಿಮಾ ಶುರು ಸಾರ್

  vinay rajkumar as boxer in pushkar's next

  ವಿನಯ್ ರಾಜ್‍ಕುಮಾರ್ ಬಾಕ್ಸರ್ ಆಗಿ ನಟಿಸುತ್ತಿರುವ ಹೊಸ ಚಿತ್ರಕ್ಕೆ ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಪಕ. ಈ ಚಿತ್ರಕ್ಕಾಗಿ ಹಲವು ತಿಂಗಳಿಂದ ಬಾಕ್ಸಿಂಗ್ ಪ್ರಾಕ್ಟೀಸ್ ಮಾಡುತ್ತಿರುವ ವಿನಯ್, ಬಾಕ್ಸರ್ ಆಗಿ ಕಾಣಿಸಿಕೊಳ್ಳೋಕೆ ರೆಡಿಯಾಗಿದ್ದಾರೆ.

  ಕರಮ್ ಚಾವ್ಲಾ ಅವರ ಪ್ರಥಮ ನಿರ್ದೇಶನದ ಚಿತ್ರವಿದು. ಅನುಷಾ ರಂಗನಾಥ್ ನಾಯಕಿ. ಚಿತ್ರಕ್ಕಿನ್ನೂ ಟೈಟಲ್ ಇಟ್ಟಿಲ್ಲ. ಹೊಸ ಚಿತ್ರದ ಮುಹೂರ್ತ ಬನಶಂಕರಿಯ ಧರ್ಮಗಿರಿ ಮಂಜುನಾಥ ದೇವಸ್ಥಾನದಲ್ಲಿ ನಡೆಯಿತು. ರಕ್ಷಿತ್ ಶೆಟ್ಟಿ, ರಾಘವೇಂದ್ರ ರಾಜ್‍ಕುಮಾರ್ ಸೇರಿದಂತೆ ಹಲವರು ಹೊಸ ಚಿತ್ರಕ್ಕೆ ಶುಭ ಹಾರೈಸಿದ್ರು.

 • ಬಂದ.. ಬಂದ.. ಬಂದ.. ಅವನೇ ಶ್ರೀಮನ್ನಾರಾಯಣ

  avane srimmanrayana teaser out

  ರಕ್ಷಿತ್ ಶೆಟ್ಟಿ ಹುಟ್ಟುಹಬ್ಬಕ್ಕೆಂದೇ ವಿಶೇಷವಾಗಿ ಸಿದ್ಧಪಡಿಸಲಾಗಿರುವ ಅವನೇ ಶ್ರೀಮನ್ನಾರಾಯಣದ ಟೀಸರ್ ಹೊರಬಿದ್ದಿದೆ. ರಾಕ್ಷಸರನ್ನು ಕೊಲ್ಲಲು ನಮ್ಮೊಳಗಿನ ರಾಕ್ಷಸನನ್ನು ಮೊದಲು ಕೊಂದುಹಾಕಬೇಕು ಎಂಬ ವಾಯ್ಸ್ ಓವರ್‍ನೊಂದಿಗೆ ಶುರುವಾಗುವ ಟೀಸರ್ ನೋಡಿದರೆ, ಕಥೆ ಖಂಡಿತಾ ಗೊತ್ತಾಗಲ್ಲ.

  3 ವರ್ಷಗಳ ನಂತರ ರಕ್ಷಿತ್ ಶೆಟ್ಟಿಯನ್ನು ತೆರೆಗೆ ತರುತ್ತಿರುವ ಚಿತ್ರವಿದು. ಸಚಿನ್ ನಿರ್ದೇಶನದ ಚಿತ್ರದ ಟೀಸರ್ ಪಕ್ಕಾ ಮಾಸ್ ಆ್ಯಕ್ಷನ್ ಸಿನಿಮಾ ಇರಬಹುದು ಎನಿಸುತ್ತದೆಯಾದರೂ, ಬೇರೇನೋ ಇದೆ ಎಂಬ ಕುತೂಹಲವನ್ನೂ ಹುಟ್ಟಿಸುತ್ತೆ. 

  ಶಾನ್ವಿ ಶ್ರೀವತ್ಸವ್ ನಾಯಕಿಯಾಗಿರುವ ಚಿತ್ರಕ್ಕೆ ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಪಕ. ಸಿನಿಮಾ ವರಮಹಾಲಕ್ಷ್ಮಿ ಹಬ್ಬದ ದಿನ ರಿಲೀಸ್ ಆಗುವ ಸಾಧ್ಯತೆ ಇದೆ.

 • ಮಕ್ರ್ಯುರಿ ಚಿತ್ರದಲ್ಲಿ ಕೊಡೈಕೆನಾಲ್ ಪಾಯ್ಸನ್ ದುರಂತದ ಕಥೆ

  mercury is based on real incidents

  ಮಕ್ರ್ಯುರಿ ಚಿತ್ರ, ಸೈಲೆಂಟ್ ಥ್ರಿಲ್ಲರ್ ಎಂಬ ಕಾರಣಕ್ಕಾಗಿಯೇ ಗಮನ ಸೆಳೆಯುತ್ತಿರುವ ಸಿನಿಮಾ. ಸಂಭಾಷಣೆ ಇಲ್ಲದ ಚಿತ್ರದಲ್ಲಿರುವ ಕಥೆ ಏನು ಎಂಬುದಕ್ಕೆ ಉತ್ತರ ಸಿಕ್ಕಿದೆ. ಚಿತ್ರದಲ್ಲಿನ ಕಥೆಯ ಮೂಲವಸ್ತು ಕೊಡೈಕೆನಾಲ್‍ನ ಮಕ್ರ್ಯುರಿ ಫ್ಯಾಕ್ಟರಿಯಲ್ಲಿ ನಡೆದ ದುರಂತದ ಕಥೆ. ಅದನ್ನು ನಾಲ್ವರು ಗೆಳೆಯರ ಮೂಲಕ ಹೇಳಲಾಗಿದೆ. 

  1987ರಲ್ಲಿ ಕೊಡೈಕೆನಾಲ್‍ನಲ್ಲಿ ಪಾಂಡ್ಸ್ ಕಂಪೆನಿಯವರು ಮಕ್ರ್ಯುರಿ ಥರ್ಮಾಮೀಟರ್ ಘಟಕ ಸ್ಥಾಪಿಸಿದರು. ಅಮೆರಿಕದಿಂದ ಪಾದರಸ ತರಿಸಿಕೊಂಡು, ಥರ್ಮಾಮೀಟರ್ ತಯಾರಿಸುವುದು ಆ ಫ್ಯಾಕ್ಟರಿಯ ಕೆಲಸ. 2001ರ ಹೊತ್ತಿಗೆ ಆ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರಲ್ಲಿ ಕಿಡ್ನಿ ಸಮಸ್ಯೆ ಕಾಣಿಸಿಕೊಂಡಿತು. ಕಾರಣ ಏನೆಂದು ಹುಡುಕುತ್ತಾ ಹೊರಟಾಗ, ಫ್ಯಾಕ್ಟರಿಯವರು ಪಾದರಸದ ವೇಸ್ಟ್‍ನ್ನು ಯಾವುದೇ ಮುಂಜಾಗ್ರತೆ ವಹಿಸದೆ ಕಸ ಎಸೆಯುವಂತೆ ಎಸೆಯುತ್ತಿದ್ದ ವಿಷಯ ಬೆಳಕಿಗೆ ಬಂದಿತ್ತು. ನೂರಾರಲ್ಲ.. ಸಾವಿರಾರು ಕಾರ್ಮಿಕರು, ಕಿಡ್ನಿ ಕಳೆದುಕೊಂಡಿದ್ದಾರೆ. ಜೀವ ಕಳೆದುಕೊಂಡಿದ್ದಾರೆ. ಅವರ ಮಕ್ಕಳು ಇಂದಿಗೂ ನರಳುತ್ತಿದ್ದಾರೆ. ನಮ್ಮ ಕರಾವಳಿ ಭಾಗದ ಎಂಡೋಸಲ್ಫಾನ್ ಕಥೆಯಂತಹುದೇ ಕಥೆ ವಿಷಕಾರಿ ಪಾದರಸದ್ದು. ಆ ಜನರಿಗೆ ಇದುವರೆಗೆ ಯಾವುದೇ ಪರಿಹಾರ ಸಿಕ್ಕಿಲ್ಲ. ಕಂಪೆನಿಯ ತಪ್ಪೇ ಇಲ್ಲ ಎಂಬ ವರದಿ ಬಂದಿದೆ. ಇದು ಸತ್ಯ ಘಟನೆ. 

  ಮಕ್ರ್ಯುರಿ ಚಿತ್ರದಲ್ಲಿರೋದು ಇದೇ ಕಥೆ. ಈ ನೈಜ ಘಟನೆಯನ್ನಿಟ್ಟುಕೊಂಡು ಥ್ರಿಲ್ಲರ್ ಕಥೆ ಹೆಣೆಯಲಾಗಿದೆ. ಹೀಗಾಗಿಯೇ ರಕ್ಷಿತ್ ಶೆಟ್ಟಿ, ಪುಷ್ಕರ್ ಮಲ್ಲಿಕಾರ್ಜುನಯ್ಯ ಅವರ ಪರಂವಾ ಸ್ಟುಡಿಯೋ, ಚಿತ್ರವನ್ನು ಹೆಚ್ಚು ಹೆಚ್ಚು ಜನರಿಗೆ ತಲುಪಿಸುವ ಗುರಿ ಇಟ್ಟುಕೊಂಡು ಹೊರಟಿದೆ. ಕರ್ನಾಟಕದಲ್ಲಿ ಸಿನಿಮಾ ಬಿಡುಗಡೆಯ ಜವಾಬ್ದಾರಿ ಹೊತ್ತಿರುವುದೇ ಪರಂವಾ ಸ್ಟುಡಿಯೋ. ಒಂದು ಸಾಮಾಜಿಕ ಕಳಕಳಿ ಇರುವ ಚಿತ್ರ, ಇದೇ ವಾರ ಬಿಡುಗಡೆಯಾಗುತ್ತಿದೆ.

 • ಮಕ್ರ್ಯುರಿ ಹವಾ ಭರ್ಜರಿ

  mercury trending online

  ಮಕ್ರ್ಯುರಿ, 7 ಭಾಷೆಗಳಲ್ಲಿ ರಿಲೀಸ್ ಆಗುತ್ತಿರುವ ಮೂಕಿ ಚಿತ್ರ. ಪ್ರಭುದೇವ ನಾಯಕರಾಗಿರುವ ಚಿತ್ರದಲ್ಲಿ ಇರುವುದು ಥ್ರಿಲ್ಲರ್ ಕಥೆ. ಹೈಸ್ಕೂಲಿನಲ್ಲಿ ಒಟ್ಟಿಗೇ ಓದಿದ ಐವರು ಗೆಳೆಯರು ಹಲವು ವರ್ಷಗಳ ನಂತರ ಒಟ್ಟಿಗೇ ಸೇರುತ್ತಾರೆ. ಅಲ್ಲಿ ನಡೆಯಬಾರದ ಘಟನೆಯೊಂದು ನಡೆದು ಹೋಗುತ್ತೆ. ಅಲ್ಲಿಂದ ಶುರುವಾಗುತ್ತೆ ಮಕ್ರ್ಯುರಿ ಥ್ರಿಲ್ಲರ್. ಕ್ಷಣ ಕ್ಷಣವೂ ಕುತೂಹಲ ಹುಟ್ಟಿಸುವ ಚಿತ್ರದಲ್ಲಿ ಸಂಭಾಷಣೆಗಳಿಲ್ಲ. 

  ಚಿತ್ರದಲ್ಲಿ ಪ್ರಭುದೇವ ಮುಖ್ಯಪಾತ್ರದಲ್ಲಿದ್ದಾರೆ. ಕಾರ್ತಿಕೇಯನ್, ಸಂತಾನಂ, ಜಯಂತಿಲಾಲ್ ಗಡ ಜಂಟಿಯಾಗಿ ನಿರ್ಮಿಸಿರುವ ಚಿತ್ರ ಇದು. ಕಾರ್ತಿಕ್ ಸುಬ್ಬರಾಜು ಚಿತ್ರದ ನಿರ್ದೇಶಕ.

  ವೆನ್ ಲೈಫ್ ಈಸ್ ಅಟ್ ವಾರ್, ದಿ ಮೋಸ್ಟ್ ಪವರ್‍ಫುಲ್ ಸ್ಕೀಮ್ ಈಸ್ ಸೈಲೆನ್ಸ್ ಅನ್ನೋದು ಚಿತ್ರದ ಟ್ಯಾಗ್‍ಲೈನ್. ಜೀವನವೇ ಯುದ್ಧವಾಗಿರುವ ಸಮಯದಲ್ಲಿ ಮೌನವೇ ಅತಿ ದೊಡ್ಡ ಎದುರಾಳಿ ಎನ್ನುವ ಅರ್ಥವಿದೆ. ಟೀಸರ್‍ನಲ್ಲಿ ಸಂತೋಷ್ ನಾರಾಯಣನ್ ಹಿನ್ನೆಲೆ ಸಂಗೀತ ಹಾಗೂ ತಿರುನವುಕ್ಕರಸು ಕ್ಯಾಮೆರಾ ಕೆಲಸ ಗಮನ ಸೆಳೆಯುತ್ತಿದೆ. ಹಾಲಿವುಡ್ ಫೀಲ್ ಕೊಡುತ್ತಿರುವ ಚಿತ್ರ, ಮುಂದಿನ ವಾರ ಪಾದರಸದಂತೆಯೇ ಜಗತ್ತಿನಾದ್ಯಂತ ತೆರೆ ಕಾಣುತ್ತಿದೆ.