` ಝೀ ಕನ್ನಡ ವಾಹಿನಿ - chitraloka.com | Kannada Movie News, Reviews | Image

ಝೀ ಕನ್ನಡ ವಾಹಿನಿ

 • ಪ್ರಕಾಶ್ ರೈರಿಂದ ಆರಂಭ, ಗಣೇಶ್​ರಿಂದ ಅಂತ್ಯ

  ganesh image

  ವೀಕೆಂಡ್ ವಿತ್ ರಮೇಶ್, ಈ ಬಾರಿ ಟಿಆರ್​ಪಿಯಲ್ಲಷ್ಟೇ ಅಲ್ಲ, ವಿಭಿನ್ನತೆಯಲ್ಲೂ ವಿಶೇಷ ದಾಖಲೆ ಬರೆದಿದೆ. ಝೀ ಕನ್ನಡ ವಾಹಿನಿಯ ವೀಕೆಂಡ್ ವಿತ್ ರಮೇಶ್ ಸೀಸನ್ 3 ಈ ವಾರ ಕೊನೆಯಾಗುತ್ತಿದೆ. ಕೊನೆಯ ಕಾರ್ಯಕ್ರಮದ ಅತಿಥಿ ಗೋಲ್ಡನ್ ಸ್ಟಾರ್ ಗಣೇಶ್.

  ಈ ಸರಣಿ ಶುರುವಾಗಿದ್ದು ಪ್ರಕಾಶ್ ರೈ ಅವರಿಂದ. ಈ ಬಾರಿಯ ವೀಕೆಂಡ್ ಸೀಟ್​ನಲ್ಲಿ ಸಿನಿಮಾದವರಷ್ಟೇ ಅಲ್ಲ, ಬೇರೆ ಬೇರೆ ರಂಗದವರೂ ಭಾಗವಹಿಸಿದ್ದು ವಿಶೇಷ. ಚಿತ್ರರಂಗದ ಸ್ಟಾರ್​ಗಳಲ್ಲಿ ಭಾರತಿ ವಿಷ್ಣುವರ್ಧನ್, ಜಗ್ಗೇಶ್, ಬಿ.ಜಯಶ್ರೀ, ಶೃತಿ, ರಕ್ಷಿತ್ ಶೆಟ್ಟಿ, ಪ್ರಿಯಾಮಣಿ ಮೊದಲಾದವರು ಕಾಣಿಸಿಕೊಂಡರೆ, ಸಿನಿಮಾ ಹೊರತಾಗಿ ನಿ. ಲೋಕಾಯಕ್ತ ಸಂತೋಷ್ ಹೆಗ್ಡೆ, ಹಾಸ್ಯ ಕಲಾವಿದರಾದ ಪ್ರಾಣೇಶ್, ಕೃಷ್ಣೇಗೌಡ ವೇದಿಕೆಯೇರಿದರು.

  ಆದರೆ, ವೀಕೆಂಡ್​ ಇನ್ನೊಂದು ಮಜಲು ತಲುಪಿದ್ದು ಮಾಜಿ ಪ್ರಧಾನಿ ಹೆಚ್​.ಡಿ. ದೇವೇಗೌಡ ಮತ್ತು ಹಾಲಿ ಸಿಎಂ ಸಿದ್ದರಾಮಯ್ಯ ವೀಕೆಂಡ್ ಸೀಟ್​ನಲ್ಲಿ ಕುಳಿತಾಗ. ಹೀಗೆ 3 ತಿಂಗಳ ಕಾಲ ವಿಭಿನ್ನತೆ, ವಿಶಿಷ್ಟತೆ ಮೆರೆದ ವೀಕೆಂಡ್ ವಿತ್ ರಮೇಶ್ ಟಿಆರ್​ಪಿಯಲ್ಲೂ ದಾಖಲೆ ಬರೆಯಿತು.

  ಈ ವಾರ ಗೋಲ್ಡನ್ ಸ್ಟಾರ್ ಗಣೇಶ್ ಪಾಲ್ಗೊಂಡಿದ್ದು ಶನಿವಾರ ಮತ್ತು ಭಾನುವಾರ ಎರಡೂ ದಿನ ಗಣೇಶ್ ಚಿತ್ರ ಜೀವನ ವೀಕೆಂಡ್​ನಲ್ಲಿ ತೆರೆದುಕೊಳ್ಳಲಿದೆ.