` dinakar thoogudeepa, - chitraloka.com | Kannada Movie News, Reviews | Image

dinakar thoogudeepa,

  • Darshan Releases The Songs Of 'Life Jothe Ondu Selfie'

    life joth ondu selfie audio launched by darshan

    The shooting for Dinakar Thoogudeepa's new film 'Life Jothe Ondu Selfie' which stars Prem, Prajwal and Haripriya is completed and the songs of the film was released by Darshan recently.

    Producer Samruddhi Manjunath had organised the audio release on his birthday. It was incidentally his wife's and son's birthday also. Their birthdays were celebrated after the release of the songs. Darshan, Devaraj, Aditya, Yashas Surya, Minister Puttaraju and others were present during the occasion. 

    Dinakar's wife Manasa has written the story for Dinakar is back with 'Life Jothe Ondu Selfie'. Raghu Shastry and Chintan are writing the lyrics. V Harikrishna is composing the music for the film, while Niranjan Babu is the cameraman.

     

  • Kaviraj to Direct a Film for Thoogudeepa Productions

    kaviraj, darshan image

    Lyricist turned dialogue writer Kaviraj is all set to turn director with a new film. The film will be produced by Darshan's brother Dinakar under the Thoogudeepa Productions. Though not much details about the film has been divulged, sources say Dinakar who was supposed to direct Darshan's 50th film 'Sarvantharyami' will be producing a film for Kaviraj.

    The film will be launched soon and after the release, Dinakar plans to start 'Sarvantharyami'.

  • Life Jothe Ondu Selfie Launched

    dinakar's life jothe ondhu selfie

    Dinakar Thoogudeepa's new film 'Life Jothe Ondu Selfie' which stars Prem, Prajwal and Haripriya in prominent roles was launched today morning at Kanteerava Studios in Bangalore.

    Actor and Dinakar's brother Darshan came over as chief guest and sounded the clap for the first shot featuring Prem, Prajwal and Haripriya.

    Dinakar's wife Manasa has written the story for Dinakar is back with 'Life Jothe Ondu Selfie'. Raghu Shastry and Chintan are writing the lyrics. V Harikrishna is composing the music for the film, while Niranjan Babu is the cameraman.

  • Life Jothe Ondu Selfie Movie Review, Chitraloka Rating 4/5

    life jothe ondu selfie review

    After the blockbuster hit Sarathi, director Dinakar Toogudeepa is back with Life Jothe Ondu Selfie. This is a multistarrer with Nenapirali Prem, Prajwal Devaraj, Haripriya, Sudharani and others. The film is unique in many ways. It is a very youthful film that talks about so many things that are important to the social and personal lives of youngsters these days. The film starts with the introduction of three characters. 

    Prem's family members want to get him married. But he wants to quit his job and become a film director. He takes a break, quits his high-paying job and heads to Goa. There he meets Haripriya who seems to be hellbent on having a good time whatever the situation. The duo then come across Prajwal who too is in Goa from Karnataka but does not reveal why. The stories of Haripriya and Prajwal is revealed in flashbacks. They are not in Goa for a jolly time but trying to come to terms with problems with their life. Will Goa give them solace?

    The second half of the film shows how the three solve their personal problems. It all happens during the course of a few days in Goa. But is that really possible? For that you have to watch the film in theatres. It will give you a nice entertaining list of possibilities. Enchanting locations of Goa are showcased in the film that will take your breath away. Will Haripriya get around to the idea that her life will change beyond recognition after marriage? Will Prajwal manage to get a real life for his mother? What will happen to Prem's idea of becoming a director?

    Dinakar Toogudeepa is back with a bang. He has managed to narrate a beautiful picture that also has important message for the youngsters of today. Life can be as easy as taking a selfie. But it is important to learn from the experiences of others and understand that life is more than just a party in Goa. It is a kind of film that will pull at your heart strings and also give you beautiful memories to take back home. 

    The acting by the main characters is superb. Prajwal as the rich kid who has a face off with his father to protect his mother, Haripriya as a tomboy who has to understand life after marriage and Prem who has to take a life changing decision are all characters that audience will relate to. All the three have done brilliant jobs. It is Sudharani as the mother of Prajwal that steals the show. She can act with subtle ease. Dhananjaya is in an extended cameo but makes a big impression. There are some beautiful songs too and as said earlier superb locations. Overall it is a perfect wholesome entertainer film with a message. 

    Chitraloka Rating - 4/5

     

  • Writer Kamal Sarathi Turns Director With Gandhi Class

    kamala sarthi image

    Dialogue writer Kamal Sarathi who has written dialogues to many films has turned director with a new film called 'Gandhi Class'. The film which stars Chakri and Megasri was launched on Monday morning at the Dodda Ganapathi Temple in Bangalore.

    The film has nothing to do with the 'Gandhi Class' in theaters, but instead tells a different story. 'People who has Gandhiji's ideology is a separate class and that's why we have titled the film as 'Gandhi Class'' says Kamal Sarathi.

    One of the highlight of the film is, director Dinakar Thoogudeepa will be playing a negative character in the film. Dinakar who was present during the muhurath, 'It was Kamal who first told me that he wanted me to cast in a role in one of his films. However, I acted in 'Chakravarthy'. Now Kamal has started the film and I play a corrupt police officer in this film' says Dinakar.

    The film stars Sudharani, Sharath Lohitashwa and others and is produced by Vijay Kumar.

  • ಅಣ್ಣನನ್ನು ಶಿವನಂದಿ ಮಾಡ್ತಾರಾ ದಿನಕರ್ ತೂಗುದೀಪ..?

    dinakar thogadeepa acquires shivanandi title

    ದರ್ಶನ್ ಅವರ ಪ್ಲಾನ್ ಪ್ರಕಾರವೇ ಎಲ್ಲವೂ ಆಗಿದ್ದರೆ, ದರ್ಶನ್ ಅವರ 50ನೇ ಚಿತ್ರವನ್ನು ದಿನಕರ್ ತೂಗುದೀಪ ನಿರ್ದೇಶಿಸಬೇಕಿತ್ತು. ಕೊನೆಗೆ ಅದು ಕುರುಕ್ಷೇತ್ರವಾಯಿತು. ಅದಕ್ಕೂ ಮೊದಲೇ ಯಜಮಾನ ರಿಲೀಸ್ ಆಯ್ತು. ಈಗ ಸೂಪರ್ ಹಿಟ್ ಸಿನಿಮಾ ಯಜಮಾನ ಚಿತ್ರದ ಹಿಟ್ ಸಾಂಗ್‍ನಲ್ಲಿದ್ದ ಶಿವನಂದಿ ಅನ್ನೋ ಟೈಟಲ್ ರಿಜಿಸ್ಟರ್ ಆಗಿದೆ. ರಿಜಿಸ್ಟರ್ ಮಾಡಿಸಿರುವುದು ದಿನಕರ್ ತೂಗುದೀಪ.

    ದಿನಕರ್, ಈಗಾಗಲೇ ಅಣ್ಣ ದರ್ಶನ್‍ಗಾಗಿ ಎರಡು ಸೂಪರ್ ಹಿಟ್ ಚಿತ್ರಗಳನ್ನು ಕೊಟ್ಟಿದ್ದಾರೆ. ನವಗ್ರಹ ಹಾಗೂ ಸಾರಥಿ, ಎರಡೂ ಬ್ಲಾಕ್ ಬಸ್ಟರ್ ಹಿಟ್ ಚಿತ್ರಗಳು. ಈಗ ಶಿವನಂದಿ. ದರ್ಶನ್ ಅವರಿಗಾಗಿಯೇ ಈ ಸಿನಿಮಾ ರೆಡಿಯಾಗುತ್ತಾ..? ಅಭಿಮಾನಿಗಳಲ್ಲಿ ಕುತೂಹಲ.

  • ಕಷ್ಟ ಬಂದೋರೆಲ್ಲ ಸೆಲ್ಫಿ ನೋಡ್ಕಳಿ

    life jothe ondu selfie has a good message about life

    ಲೈಫ್ ಜೊತೆ ಒಂದ್ ಸೆಲ್ಫಿ... ದಿನಕರ್ ಅವರ ಪತ್ನಿ ಮಾನಸಾ ಅವರು ಬರೆದಿರುವ ಕಥೆ. ಪ್ರತಿಯೊಬ್ಬರ ಜೀವನದಲ್ಲೂ ಕಷ್ಟ ಅನ್ನೋದು ಬರುತ್ತೆ. ಒಬ್ಬೊಬ್ಬರೂ ಆ ಕಷ್ಟವನ್ನು ಬೇರೆ ಬೇರೆ ರೀತಿ ಫೇಸ್ ಮಾಡ್ತಾರೆ. ತಾಳ್ಮೆಯೊಂದಿದ್ದರೆ ಎಂಥ ಕಷ್ಟವನ್ನಾದರೂ ಪಳಗಿಸಬಹುದು, ಗೆಲ್ಲಬಹುದು ಅನ್ನೋದೇ ಚಿತ್ರದ ಕಥೆ. 

    ಮಾನಸಾ, ಇದಕ್ಕೂ ಮೊದಲು ಕೆಲವೊಂದಿಷ್ಟು ಕಥೆ ಹೇಳಿದ್ದರು. ಅದೇಕೋ, ಅವು ನನಗೆ ಇಷ್ಟವಾಗಿರಲಿಲ್ಲ. ಈ ಕಥೆ ಕೇಳುತ್ತಿದ್ದಂತೆಯೇ ಥ್ರಿಲ್ ಆಯ್ತು. ಈಗ ಸಿನಿಮಾ ರೆಡಿ ಎನ್ನುತ್ತಾರೆ ದಿನಕರ್.

    ಸಾರಥಿ ನಂತರ ಮತ್ತೆ ನಿರ್ದೇಶನ ವಿಳಂಬವಾಗೋಕೆ ಕಾರಣ, ಚೇಂಜ್. ಹಳೆಯ ಸಿನಿಮಾಗಿಂತ, ನಾನು ಮಾಡುವ ಹೊಸ ಸಿನಿಮಾ ಡಿಫರೆಂಟ್ ಆಗಿರಬೇಕು. ನನಗೆ ಅದು ಹೊಸತೆನಿಸಬೇಕು. ಹೀಗಾಗಿ ಲೇಟ್ ಎನ್ನುತ್ತಾರೆ.

    ಪ್ರಜ್ವಲ್ ಮತ್ತು ಪ್ರೇಮ್ ಜೊತೆ, ಬೋಲ್ಡ್ ಅಂಡ್ ಬ್ಯೂಟಿಫುಲ್ ಆಗಿ ಕಾಣಿಸಿಕೊಂಡಿರೋದು ಹರಿಪ್ರಿಯಾ. ಅಲ್ಲೊಂದು ಬ್ಯೂಟಿಫುಲ್ ಪ್ರೇಮಕಥೆಯಿದೆ. ಅದು ಪ್ರೇಮಕಾವ್ಯ ಎನ್ನುತ್ತಾರೆ ದಿನಕರ್. ಸಿನಿಮಾ ರಿಲೀಸ್‍ಗೆ ರೆಡಿ. ಮುಂದಿನ ವಾರ ಥಿಯೇಟರ್‍ಗೆ ಹೋಗಿ ಲೈಫ್ ಜೊತೆ ಒಂದ್ ಸೆಲ್ಫಿ ತಗೊಳ್ಳಿ.

  • ಜಯಣ್ಣ-ಭೋಗೇಂದ್ರ ಜೋಡಿಯ ದಿನಕರ್ ಸಿನಿಮಾ ಶುರು

    ಜಯಣ್ಣ-ಭೋಗೇಂದ್ರ ಜೋಡಿಯ ದಿನಕರ್ ಸಿನಿಮಾ ಶುರು

    ಡೈರೆಕ್ಟರ್ : ದಿನಕರ್ ತೂಗುದೀಪ.

    ಹೀರೋ : ಕಿಸ್ ಖ್ಯಾತಿಯ ವಿರಾಟ್

    ನಿರ್ಮಾಪಕರು : ಜಯಣ್ಣ ಮತ್ತು ಭೋಗೇಂದ್ರ

    ಬ್ಯಾನರ್ : ಜಯಣ್ಣ ಫಿಲಮ್ಸ್‍ನ 23ನೇ ಸಿನಿಮಾ

    ದಿನಕರ್ ತೂಗುದೀಪ್ ಸುದೀರ್ಘ ಗ್ಯಾಪ್ ನಂತರ ಮತ್ತೊಮ್ಮೆ ಡೈರೆಕ್ಷನ್ ಕ್ಯಾಪ್ ತೊಟ್ಟಿದ್ದಾರೆ. ಜಯಣ್ಣ ಭೋಗೇಂದ್ರ ನಿರ್ಮಾಣದಲ್ಲಿ ವಿರಾಟ್ ಹೀರೋ ಆಗಿರುವ ಚಿತ್ರಕ್ಕೆ ಮುಹೂರ್ತ ನೆರವೇರಿದೆ. ಚಿತ್ರಕ್ಕೆ ಮೀನಾ ತೂಗುದೀಪ ಕ್ಲಾಪ್ ಮಾಡಿ ಶುಭ ಕೋರಿದ್ದಾರೆ.

    ಪ್ಲಾನ್ ಪ್ರಕಾರ ದಿನಕರ್, ಜಯಣ್ಣ ಅವರಿಗಾಗಿಯೇ ಪುನೀತ್ ಸಿನಿಮಾ ನಿರ್ದೇಶಿಸಬೇಕಿತ್ತು. ಪುನೀತ್ ಅಕಾಲಿಕ ನಿಧನದ ನಂತರ ದಿನಕರ್ ಮತ್ತೊಂದು ಕಥೆ ಸಿದ್ಧಪಡಿಸಿದ್ದು, ಆ ಚಿತ್ರಕ್ಕೆ ವಿರಾಟ್ ಆಯ್ಕೆಯಾಗಿದ್ಧಾರೆ.

    ಕಿಸ್ ಸೂಪರ್ ಹಿಟ್ ಆದ ನಂತರ ವಿರಾಟ್, ಎ.ಪಿ.ಅರ್ಜುನ್ ಅವರೊಂದಿಗೆ ಅದ್ಧೂರಿ ಲವರ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದು ಅವರಿಗೆ 3ನೇ ಸಿನಿಮಾ. ಲೈಫ್ ಜೊತೆ ಒಂದ್ ಸೆಲ್ಫಿ ನಂತರ ಸುದೀರ್ಘ ಗ್ಯಾಪ್ ನಂತರ ದಿನಕರ್ ಡೈರೆಕ್ಟರ್ ಆಗಿರುವುದರಿಂದ ಚಿತ್ರದ ಮೇಲೆ ನಿರೀಕ್ಷೆಯೂ ಹೆಚ್ಚಿದೆ.

  • ಡಿಸೆಂಬರ್ ತಿಂಗಳಿಗೆ ದಿನಕರ್ ತೂಗುದೀಪ್ ಹೊಸ ಸಿನಿಮಾ

    dinkar thougadeepa's movie to start in december

    ಲೈಫ್ ಜೊತೆ ಒಂದ್ ಸೆಲ್ಫಿ ಚಿತ್ರದ ನಂತರ ನಿರ್ದೇಶಕ ದಿನಕರ್ ತೂಗುದೀಪ ಮತ್ತೊಮ್ಮೆ ಆ್ಯಕ್ಷನ್ ಕಟ್ ಹೇಳೋಕೆ ಸಿದ್ಧರಾಗುತ್ತಿದ್ದಾರೆ. ಹೊಸದೊಂದು ಕಥೆ ಸಿದ್ಧ ಮಾಡುತ್ತಿದ್ದಾರೆ. ಸ್ಟಾರ್ ಯಾರು..? ಕಥೆಯ ಎಳೆ ಏನು..? ಇದ್ಯಾವುದನ್ನೂ ದಿನಕರ್ ಹೇಳುತ್ತಿಲ್ಲ.

    ಹೊಸ ಸಿನಿಮಾ ಸಿದ್ಧತೆ ನಡೀತಾ ಇದೆ. ಸ್ಕ್ರಿಪ್ಟ್ ವರ್ಕ್ ಶುರುವಾಗಿದೆ. ತಲೆಯಲ್ಲಿ ಯಾವುದೇ ಸ್ಟಾರ್ ನಟ ಇಲ್ಲ. ಬರವಣಿಗೆ ಮುಗಿಯುವುದಕ್ಕೆ ಸ್ವಲ್ಪ ಸಮಯ ಬೇಕು. ಬಹುತೇಕ ಡಿಸೆಂಬರ್ ಹೊತ್ತಿಗೆ ಸಿನಿಮಾ ಶುರುವಾಗಬಹುದು ಎಂದಿದ್ದಾರೆ ದಿನಕರ್.

  • ಡೈರೆಕ್ಟರ್ ದಿನಕರ್ ಜೊತೆ ಒಂದ್ ಸೆಲ್ಫಿ

    dinakar talks about life jothe ondu selfie

    ಲೈಫ್ ಜೊತೆ ಒಂದ್ ಸೆಲ್ಫಿ ಚಿತ್ರವನ್ನು ರಿಲೀಸ್‍ಗೆ ರೆಡಿ ಮಾಡಿರುವ ದಿನಕರ್ ತೂಗುದೀಪ್ & ಟೀಂ, ಚಿತ್ರದ ಪ್ರಚಾರವನ್ನು ವಿಭಿನ್ನವಾಗಿ ಮಾಡುತ್ತಿದೆ. 7 ವರ್ಷಗಳ ನಂತರ ಸಿನಿಮಾ ನಿರ್ದೇಶನಕ್ಕೆ ಇಳಿದಿರುವ ದಿನಕರ್, ಚಿತ್ರದ ಬಗ್ಗೆ ಮಾತನಾಡಿದ್ದಾರೆ.

    ಚಿತ್ರದಲ್ಲಿ 3 ಪಾತ್ರಗಳೇ ಹೈಲೈಟ್. ಪ್ರಜ್ವಲ್ ವಿರಾಟ್ ಎಂಬ ಹೆಸರಿನ ಮಲ್ಟಿಮಿಲಿಯನೇರ್ ಪಾತ್ರ. ಲೈಫಲ್ಲಿ ಎಲ್ಲ ಇದ್ದರೂ, ಏನೋ ಇಲ್ಲ ಎಂಬ ಕೊರಗಿನಲ್ಲಿರುವ ವ್ಯಕ್ತಿ.

    ಪ್ರೇಮ್ ಅವರದ್ದು ನಕುಲ್ ಎಂಬ ಎಂಎನ್‍ಸಿ ಉದ್ಯೋಗಿಯ ಪಾತ್ರ. ಅವರಿಗೆ ನಿರ್ದೇಶಕನಾಗಬೇಕು ಎಂಬ ಕನಸು.

    ಹರಿಪ್ರಿಯಾ ಅವರದ್ದೂ ಒಂದು ಸಮಸ್ಯೆ ಇರುತ್ತೆ. ಅವರೂ ಒಂದು ಕೊರಗಿನಲ್ಲೇ ಇರ್ತಾರೆ. 

    ಹೀಗೆ ಕೊರಗುವ ಜೀವಗಳೆಲ್ಲ ಒಂದು ಕಡೆ ಸೇರುತ್ತವೆ. ಗೋವಾದಲ್ಲಿ ಪರಿಚಯವಾಗೋ ಮೂವರನ್ನೂ ಕನ್ನಡಿಗರು ಎಂಬ ವಿಷಯ ಒಗ್ಗೂಡಿಸುತ್ತೆ. ಮೊದಲರ್ಧ ಸಮಸ್ಯೆಗಳಾದರೆ, ದ್ವಿತೀಯಾರ್ಧ ಪರಿಹಾರ. ಸಿನಿಮಾ ನೋಡುವಾಗ ಪ್ರತಿಯೊಬ್ಬರೂ ತಮ್ಮ ಜೊತೆ, ತಮ್ಮ ಲೈಫ್ ಜೊತೆ ಒಂದ್ ಸೆಲ್ಫಿ ತಗೋತಾರೆ ಅನ್ನೋ ಕಾನ್ಫಿಡೆನ್ಸ್ ದಿನಕರ್ ಅವರಿಗೆ ಇದೆ.

    ಸಮೃದ್ಧಿ ಮಂಜುನಾಥ್ ನಿರ್ಮಾಣದ ಚಿತ್ರಕ್ಕೆ ಹರಿಕೃಷ್ಣ ಸಂಗೀತ ನಿರ್ದೇಶನವಿದೆ.

  • ಡೈರೆಕ್ಟರ್‍ಗೆ ಒಂದ್ ರಾಖಿ ಜೊತೆ ಸೆಲ್ಫಿ

    haripriya ties rakhi to dinakar

    ಲೈಫ್ ಜೊತೆ ಒಂದ್ ಸೆಲ್ಫಿ ಚಿತ್ರ ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ. ಈ ಯಶಸ್ಸಿನ ನಡುವೆಯೇ ಚಿತ್ರದ ನಿರ್ದೇಶಕ ತೂಗುದೀಪ್ ದಿನಕರ್‍ಗೆ ಹೊಸ ತಂಗಿ ಸಿಕ್ಕಿದ್ದಾರೆ. ಅವರೇ ಹರಿಪ್ರಿಯಾ.

    ಲೈಫ್ ಜೊತೆ ಒಂದ್ ಸೆಲ್ಫಿ ಚಿತ್ರದ ನಾಯಕಿಯೂ ಆಗಿರುವ ಹರಿಪ್ರಿಯಾ, ದಿನಕರ್ ಬಗ್ಗೆ, ದಿನಕರ್ ತಮ್ಮ ಚಿತ್ರತಂಡದವರ ವಹಿಸುವ ಕಾಳಜಿಯ ಬಗ್ಗೆ ಮಾತನಾಡಿದ್ದರು. ದಿನಕರ್ ಅವರ ಈ ಗುಣವೇ ಇರಬೇಕು, ಹರಿಪ್ರಿಯಾ ತಮ್ಮ ಪ್ರೀತಿಯ ನಿರ್ದೇಶಕರಿಗೆ ಸೋದರನ ಸ್ಥಾನ ಕೊಟ್ಟು, ರಕ್ಷಾ ಬಂಧನ ಆಚರಿಸಿದ್ದಾರೆ. ದಿನಕರ್‍ಗೆ ರಾಖಿ ಕಟ್ಟಿದ್ದಾರೆ.

  • ದಿನಕರ್ ಅಂದ್ರೆ ಹರಿಪ್ರಿಯಾಗೆ ಲಕ್ಕಿ..!

    dinakar is lucky for haripriya

    ದಿನಕರ್ ತೂಗುದೀಪ ನಿರ್ದೇಶನದ ಲೈಫ್ ಜೊತೆ ಒಂದ್ ಸೆಲ್ಫಿ ಚಿತ್ರ ರಿಲೀಸ್‍ಗೆ ರೆಡಿಯಾಗಿದೆ. ಪ್ರಜ್ವಲ್ ದೇವರಾಜ್, ಪ್ರೇಮ್ ಮತ್ತು ಹರಿಪ್ರಿಯಾ ಕಾಂಬಿನೇಷನ್‍ನ ಸಿನಿಮಾ, ಬಿಡುಗಡೆಗೆ ಮೊದಲೇ ಕ್ರೇಜ್ ಹುಟ್ಟಿಸಿರುವ ಚಿತ್ರ. ಸತತ ಹಿಟ್ ಕೊಟ್ಟಿರುವ ದಿನಕರ್, 7 ವರ್ಷದ ನಂತರ ನಿರ್ದೇಶನ ಮಾಡಿರುವ ಚಿತ್ರ ಲೈಫ್ ಜೊತೆ ಒಂದ್ ಸೆಲ್ಫಿ. ಚೌಕ ನಂತರ, ಪ್ರೇಮ್ ಮತ್ತು ಪ್ರಜ್ವಲ್ ಒಟ್ಟಿಗೇ ನಟಿಸಿರುವ ಚಿತ್ರ ಲೈಫ್ ಜೊತೆ ಒಂದ್ ಸೆಲ್ಫಿ. ಪ್ರಜ್ವಲ್ ಜೊತೆ ನಟಿಸಿರುವ 3ನೇ ಸಿನಿಮಾ. ಇಷ್ಟೆಲ್ಲ ಇದ್ದರೂ, ಹರಿಪ್ರಿಯಾಗೆ ದಿನಕರ್ ಲಕ್ಕಿ ಅನ್ನಿಸೋಕೆ ಇನ್ನೂ ಒಂದು ಕಾರಣ ಇದೆ.

    ಹರಿಪ್ರಿಯಾಗೆ ದೊಡ್ಡ ಬ್ರೇಕ್ ಕೊಟ್ಟ ಚಿತ್ರ ಉಗ್ರಂ. ದೊಡ್ಡ ಹೆಸರನ್ನೂ ಕೊಟ್ಟ ಚಿತ್ರ ನೀರ್‍ದೋಸೆ. ಆ ಎರಡೂ ಚಿತ್ರಗಳ ವಿತರಣೆಗೆ ದಿನಕರ್ ಸಾಥ್ ಕೊಟ್ಟಿದ್ದರಂತೆ. ಈಗ.. ಅವರದ್ದೇ ನಿರ್ದೇಶನದ ಸಿನಿಮಾದಲ್ಲಿ ನಟಿಸುತ್ತಿದ್ದೇನೆ. ಈ ಸಿನಿಮಾ ಕೂಡಾ ಹಿಟ್ ಆಗುತ್ತೆ ಅನ್ನೋ ನಿರೀಕ್ಷೆಯಲ್ಲಿದ್ದಾರೆ ಹರಿಪ್ರಿಯಾ.

    ಚಿತ್ರದಲ್ಲಿನ ನನ್ನ ಪಾತ್ರ ರಿಯಲ್ ಲೈಫ್‍ಗೆ ಹತ್ತಿರವಾಗಿದೆ.  ಹೀಗಾಗಿ ಚಿತ್ರದ ಬಗ್ಗೆ ಭಾರಿ ನಿರೀಕ್ಷೆ ಇದೆ ಎಂದು ಹೇಳಿಕೊಂಡಿದ್ದಾರೆ ಹರಿಪ್ರಿಯಾ. ದಿನಕರ್ ಅವರ ಪತ್ನಿ ಮಾನಸ ಅವರು ಬರೆದಿರುವ ಕಥೆಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ ದಿನಕರ್.

  • ದಿನಕರ್ ತೂಗುದೀಪ ಡೈರೆಕ್ಷನ್ನಲ್ಲಿ ಅಪ್ಪು ಪಕ್ಕಾ

    ದಿನಕರ್ ತೂಗುದೀಪ ಡೈರೆಕ್ಷನ್ನಲ್ಲಿ ಅಪ್ಪು ಪಕ್ಕಾ

    ಸಾರಥಿ, ನವಗ್ರಹ, ಲೈಫ್ ಜೊತೆ ಒಂದು ಸೆಲ್ಫಿ ನಂತರ ದಿನಕರ್ ತೂಗುದೀಪ್, ಪುನೀತ್ ಅವರಿಗೆ ಸಿನಿಮಾ ಮಾಡ್ತಾರೆ  ಅನ್ನೋ ಸುದ್ದಿ ತೇಲಿಬಂದಿತ್ತು. ರಾಬರ್ಟ್ ಸಂದರ್ಶನದಲ್ಲಿ ಬಂದ ಪ್ರಶ್ನೆಗೆ ಹೌದು ಎಂದು ಉತ್ತರ ನೀಡಿದ್ದರು ದರ್ಶನ್. ನನ್ನ ತಮ್ಮ ನನ್ನ  ಹೊರಗೂ ಬೆಳೆಯಬೇಕು ಎಂದು ನನ್ನ ಬಯಕೆ, ಈಗ ಪುನೀತ್ ಜೊತೆ ಸಿನಿಮಾ ಮಾಡುತ್ತಿದ್ದಾನೆ ಎಂದಿದ್ದರು. ಅತ್ತ ಪುನೀತ್ ಕೂಡಾ ಸಿನಿಮಾ ಮಾತುಕತೆ ನಡೆಯುತ್ತಿದೆ ಎಂದು ಹೇಳಿದ್ದರು. ಈಗ ಆ ಸುದ್ದಿಗೆ ಇನ್ನೊಂದು ರೂಪ ಸಿಕ್ಕಿದೆ.

    ದಿನಕರ್ ತೂಗುದೀಪ್ ಡೈರೆಕ್ಷನ್ ಮಾಡುತ್ತಿರೋದು ಪಕ್ಕಾ ಆಗಿದೆ. ನಿರ್ಮಾಪಕರಾಗಿರುವುದು ಜಯಣ್ಣ ಮತ್ತು ಭೋಗೇಂದ್ರ. ಜಯಣ್ಣ  ಕಂಬೈನ್ಸ್ನಲ್ಲಿಯೇ ಪುನೀತ್ ಹೊಸ ಸಿನಿಮಾ ಸೆಟ್ಟೇರುತ್ತಿದ್ದು, ಮಾರ್ಚ್ 17ರಂದು ಸಿನಿಮಾ ಅಧಿಕೃತವಾಗಿ ಘೋಷಣೆಯಾಗಲಿದೆಯಂತೆ.

  • ದಿನಕರ್-ವಿರಾಟ್ ಚಿತ್ರಕ್ಕೆ ಹೀರೋಯಿನ್ ಫಿಕ್ಸ್

    ದಿನಕರ್-ವಿರಾಟ್ ಚಿತ್ರಕ್ಕೆ ಹೀರೋಯಿನ್ ಫಿಕ್ಸ್

    ದಿನಕರ್ ತೂಗುದೀಪ್ ಸುದೀರ್ಘ ಗ್ಯಾಪ್ ನಂತರ ಡೈರೆಕ್ಷನ್ ಮಾಡ್ತಿರೋ ಚಿತ್ರ ಇತ್ತೀಚೆಗೆ ತಾನೇ ಮುಹೂರ್ತ ಆಚರಿಸಿಕೊಂಡಿತ್ತು. ಜಯಣ್ಣ ಭೋಗೇಂದ್ರ ನಿರ್ಮಾಣದಲ್ಲಿ ವಿರಾಟ್ ಹೀರೋ ಆಗಿರುವ ಚಿತ್ರಕ್ಕೆ ಇನ್ನೂ ಟೈಟಲ್ ಫಿಕ್ಸ್ ಆಗಿಲ್ಲ. ಈಗ ಹೀರೋಯಿನ್ ಆಯ್ಕೆ ಆಗಿದೆ.

    ಕೆಮಿಸ್ಟ್ರಿ ಆಫ್ ಕರಿಯಪ್ಪ ಚಿತ್ರದ ಮೂಲಕ ಎಂಟ್ರಿ ಕೊಟ್ಟ ಸಂಜನಾ ಆನಂದ್ ಸಲಗ ಚಿತ್ರದಲ್ಲಿ ದೊಡ್ಡ ಮಟ್ಟದಲ್ಲಿ ಗಮನ ಸೆಳೆದಿದ್ದರು. ವಿರಾಟ್ ಎದುರು ಸಂಜನಾ ಆನಂದ್ ನಟಿಸುತ್ತಿದ್ದಾರೆ. ಸದ್ಯಕ್ಕೆ ಸಂಜನಾ ಆನಂದ್ ತೆಲುಗು ಚಿತ್ರವೊಂದರಲ್ಲಿ ಬ್ಯುಸಿಯಾಗಿದ್ದಾರೆ. ಅದು ಮುಗಿದ ತಕ್ಷಣವೇ ಈ ಚಿತ್ರತಂಡ ಸೇರಿಕೊಳ್ಳಲಿದ್ದಾರೆ ಸಂಜನಾ ಆನಂದ್.

    ಕಿಸ್ ನಂತರ ವಿರಾಟ್ ಎ.ಪಿ.ಅರ್ಜುನ್ ಅವರೊಂದಿಗೆ ಅದ್ಧೂರಿ ಲವರ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದು ಅವರಿಗೆ 3ನೇ ಸಿನಿಮಾ. ಲೈಫ್ ಜೊತೆ ಒಂದ್ ಸೆಲ್ಫಿ ನಂತರ ಸುದೀರ್ಘ ಗ್ಯಾಪ್ ನಂತರ ದಿನಕರ್ ನಿರ್ದೇಶಿಸುತ್ತಿರುವ ಚಿತ್ರವಿದು. ದಿನಕರ್ ಚಿತ್ರ ಎಂದ ಮೇಲೆ ನಿರೀಕ್ಷೆಯೂ ಹೆಚ್ಚಾಗಿಯೇ ಇರುತ್ತೆ.

  • ಪುನೀತ್ಗೆ ದಿನಕರ್ ತೂಗುದೀಪ ಡೈರೆಕ್ಷನ್..?

    ಪುನೀತ್ಗೆ ದಿನಕರ್ ತೂಗುದೀಪ ಡೈರೆಕ್ಷನ್..?

    ಜೊತೆ ಜೊತೆಯಲಿ, ನವಗ್ರಹ,  ಸಾರಥಿ, ಲೈಫ್ ಜೊತೆ ಒಂದ್ ಸೆಲ್ಫಿ ಚಿತ್ರಗಳ ಮೂಲಕ ಸ್ಟಾರ್ ಡೈರೆಕ್ಟರ್ ಪಟ್ಟಕ್ಕೇರಿರುವ ದಿನಕರ್ ತೂಗುದೀಪ್, ಈಗ ಹೊಸ ಚಿತ್ರಕ್ಕೆ ರೆಡಿಯಾಗುತ್ತಿದ್ದಾರೆ. ಅದರಲ್ಲೂ ಈ ಬಾರಿ ಪುನೀತ್ ರಾಜ್ಕುಮಾರ್ ಜೊತೆ ಸಿನಿಮಾ ಮಾಡ್ತಾರೆ. ಇಂತಾದ್ದೊಂದು ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿದೆ.

    ದಿನಕರ್, ನಟರನ್ನು ಮನಸ್ಸಿನಲ್ಲಿಟ್ಟುಕೊಂಡು ಕಥೆ ಮಾಡುವವರಲ್ಲ. ಈ ಬಾರಿ ಲಾಕ್ ಡೌನ್ ಮಧ್ಯೆ ಒಂದು ಚೆಂದದ ಕಥೆ ಸಿದ್ಧ ಮಾಡಿಟ್ಟುಕೊಂಡಿದ್ದು, ಆ ಕಥೆಗೆ ಪುನೀತ್ ಹೊಂದುತ್ತಾರಂತೆ. ಈ ಬಗ್ಗೆ ಪುನೀತ್ ಆಗಲಿ, ದಿನಕರ್ ಆಗಲೀ ಏನೂ ಹೇಳಿಲ್ಲ. ಆದರೆ, ಗಾಂಧಿನಗರದಲ್ಲಿ ಸುದ್ದಿ ಭರ್ಜರಿಯಾಗಿ ಹರಿದಾಡುತ್ತಿರೋದಂತೂ ಸತ್ಯ. ನಿಜವಾದರೆ, ಒಂದೊಳ್ಳೆ ಸಿನಿಮಾ ಗ್ಯಾರಂಟಿ.

  • ಪ್ರೇಮ್ ದಿನಕರ್ ಜೊತೆ ಜೊತೆಯಲಿ ಸೆಲ್ಫಿ.. 12 ವರ್ಷಗಳ ನಂತರ

    prem nenapirali and dinakar reunite after 12 years

    ನೆನಪಿರಲಿ ಪ್ರೇಮ್ ಮತ್ತು ದಿನಕರ್ ತೂಗುದೀಪ್ ಮತ್ತೊಮ್ಮೆ ಒಂದಾಗಿದ್ದಾರೆ. ಬರೋಬ್ಬರಿ 14 ವರ್ಷಗಳ ನಂತರ. ದಿನಕರ್ ತೂಗುದೀಪ್ ನಿರ್ದೇಶನದ ಮೊದಲ ಸಿನಿಮಾ ಜೊತೆ ಜೊತೆಯಲಿ. ಪ್ರೇಮ್-ರಮ್ಯಾ ಕಾಂಬಿನೇಷನ್‍ನ ಆ ಸಿನಿಮಾ, ನೆನಪಿರಲಿ ಪ್ರೇಮ್‍ರನ್ನು ಲವ್ಲೀ ಸ್ಟಾರ್ ಮಾಡಿದ್ದ ಸಿನಿಮಾ. ಹರಿಕೃಷ್ಣ ಸಂಗೀತ ನಿರ್ದೇಶಕರಾಗಿ ಎಂಟ್ರಿ ಕೊಟ್ಟಿದ್ದ ಸಿನಿಮಾ. 2006ರಲ್ಲಿ ಬಂದಿದ್ದ ಆ ಸಿನಿಮಾ ಸೂಪರ್ ಹಿಟ್ ಆಗಿತ್ತು.

    ಈಗ ಅದೇ ಜೋಡಿ, 14 ವರ್ಷಗಳ ನಂತರ ಪ್ರೇಮ್ ಮತ್ತು ದಿನಕರ್ ಮತ್ತೆ ಒಂದಾಗಿದ್ದಾರೆ. ಲೈಫ್ ಜೊತೆ ಒಂದ್ ಸೆಲ್ಫಿ ಎನ್ನುತ್ತಿದ್ದಾರೆ. ಈ 12 ವರ್ಷಗಳಲ್ಲಿ ದಿನಕರ್ ನಿರ್ದೇಶಿಸಿರುವುದು ಕೇವಲ 4 ಸಿನಿಮಾ. ಜೊತೆ ಜೊತೆಯಲಿ, ನವಗ್ರಹ, ಸಾರಥಿ ಮತ್ತು ಈಗ ಲೈಫ್ ಜೊತೆ ಒಂದ್ ಸೆಲ್ಫಿ. ಈ ಹಿಂದಿನ ಮೂರೂ ಸಿನಿಮಾಗಳೂ ಸೂಪರ್ ಹಿಟ್. ಇನ್ನೊಂದು ವಿಶೇಷವೆಂದರೆ, ಮೂರು ಚಿತ್ರಗಳ ನಡುವೆ ಒಂದಕ್ಕೊಂದು ಹೋಲಿಕೆಯೇ ಇಲ್ಲ. ಅದು ದಿನಕರ್ ಸ್ಪೆಷಾಲಿಟಿ. 

    ಹೀಗಾಗಿ ಈ ಬಾರಿ ಲೈಫ್ ಜೊತೆ ಒಂದ್ ಸೆಲ್ಫಿ ಚಿತ್ರದ ಕುರಿತೂ ಸಾವಿರಾರು ನಿರೀಕ್ಷೆಗಳಿವೆ. ಆ ನಿರೀಕ್ಷೆಗಳನ್ನು ದಿನಕರ್ ಸುಳ್ಳು ಮಾಡಲ್ಲ ಅನ್ನೋ ವಿಶ್ವಾಸ ಪ್ರೇಮ್, ಪ್ರಜ್ವಲ್, ಹರಿಪ್ರಿಯಾ ಮತ್ತು ಪ್ರೇಕ್ಷಕ ಪ್ರಭುಗಳದ್ದು. 

  • ಮತ್ತೆ ನಿರ್ದೇಶನದತ್ತ ದಿನಕರ್ ತೂಗುದೀಪ್

    dinakar image

    ಸಾರಥಿ ಚಿತ್ರದ ನಂತರ ಹೆಚ್ಚೂ ಕಡಿಮೆ ನಿರ್ದೇಶನದಿಂದ ಕಂಪ್ಲೀಟ್ ದೂರವೇ ಇದ್ದ ದಿನಕರ್ ತೂಗುದೀಪ್, ಈಗ ಮತ್ತೆ ಡೈರೆಕ್ಟರ್ ಕ್ಯಾಪ್ ತೊಟ್ಟುಕೊಳ್ಳೊಕೆ ರೆಡಿಯಾಗಿದ್ದಾರೆ. ಚಿತ್ರದ ಕಥೆ ರೆಡಿಯಾಗಿದೆ. ಹೆಸರು ಲೈಫ್ ಜೊತೆ ಒಂದು ಸೆಲ್ಫಿ.

    ದಿನಕರ್ ನಿರ್ದೇಶಿಸಲು ಹೊರಟಿರುವ ಹೊಸ ಚಿತ್ರದ ಕಥೆ, ಅವರ ಪತ್ನಿ ಮಾನಸ ಅವರದ್ದು. ಪ್ರಜ್ವಲ್ ದೇವರಾಜ್ ಮತ್ತು ಲವ್ಲಿ ಸ್ಟಾರ್ ಪ್ರೇಮ್ ನಟಿಸಲಿರುವ ಚಿತ್ರದ ನಾಯಕಿಯ ಆಯ್ಕೆ ಇನ್ನೂ ಆಗಿಲ್ಲ. ಸಮೃದ್ಧಿ ಮಂಜುನಾಥ್ ಚಿತ್ರದ ನಿರ್ಮಾಪಕರು.

  • ಮತ್ತೆ ಹಾರ್ಟಿಗೇ ಕೈ ಹಾಕಿದ್ರು ದಿನಕರ್ ತೂಗುದೀಪ್

    trailer highlights of life jothe ondu selfie

    ಲೈಫ್ ಜೊತೆ ಒಂದ್ ಸೆಲ್ಫಿ... ಚಿತ್ರದ ಟ್ರೇಲರ್ ಹೊರಬೀಳುತ್ತಿದ್ದಂತೆ ಎಲ್ಲರಲ್ಲೂ ಒಂದು ಕಾತುರ, ನಿರೀಕ್ಷೆ ಇತ್ತು. ಏಕೆಂದರೆ, ಸಾರಥಿ ನಂತರ, ದಿನಕರ್ ತೂಗುದೀಪ್ ನಿರ್ದೇಶನ ಮಾಡಿರುವ ಸಿನಿಮಾ ಇದು. ಚಿತ್ರದ ಟ್ರೇಲರ್ ನೋಡಿದರೆ, ಈ ಬಾರಿ ದಿನಕರ್ ತೂಗುದೀಪ್ ನೇರವಾಗಿ ಹೃದಯಕ್ಕೇ ಕೈ ಹಾಕಿಬಿಟ್ಟಿದ್ದಾರೆ. ಒಂದು ಕುತೂಹಲವನ್ನು ಉಳಿಸಿಯೇ ಭಾವನೆಗಳನ್ನು ಅರಳಿಸಿದ್ದಾರೆ.

    ಟ್ರೇಲರ್ ನೋಡಿದರೆ, ಅದು ಮೂವರು ಗೆಳೆಯರ ಟ್ರಾವೆಲ್ ಜರ್ನಿ ಎನ್ನಿಸುತ್ತೆ. ಪ್ರೇಮ್, ಪ್ರಜ್ವಲ್ ಮತ್ತು ಹರಿಪ್ರಿಯಾ ಪ್ರಮುಖ ಪಾತ್ರದಲ್ಲಿರುವ ಚಿತ್ರದಲ್ಲಿ ಇದ್ದಕ್ಕಿದ್ದಂತೆ ಒಂದು ಟ್ವಿಸ್ಟು. ದಾರಿ ಮಧ್ಯೆ ಸಿಗುವವರ ನಡುವಿನ ಬಾಂಧವ್ಯಕ್ಕೂ, ತಾಯಿಯ ಅನುಬಂಧಕ್ಕೂ ಹೋಲಿಕೆ ಕಾಣುತ್ತೆ. ಪ್ರತಿಯೊಬ್ಬರ ಜೀವನದಲ್ಲೂ ಎರಡನೇ ಲೈಫ್ ಶುರುವಾಗೋದೇ, ನಮಗಿರೋದು ಒಂದೇ ಜೀವನ ಅಂತಾ ಗೊತ್ತಾದ ಮೇಲೆ ಅನ್ನೋ ಡೈಲಾಗ್, ದಿನಕರ್ ಅವರ ತಾಕತ್ತು ಹೇಳುತ್ತಿವೆ. 

    ತಾಯಿಯ ಪಾತ್ರದಲ್ಲಿ ಸುಧಾರಾಣಿ, ಕಾಮಿಡಿಗೆ ಸಾಧುಕೋಕಿಲ ಇದ್ದಾರೆ. ಎಂದಿನಂತೆ ಸಂಗೀತ ಹರಿಕೃಷ್ಣ ಅವರದ್ದು. 

    ಹಾಡು, ಟ್ರೇಲರ್ ಮ್ಯಾಜಿಕ್ ಮಾಡೋಕೆ ಶುರುವಾಗಿದೆ. ಸಿನಿಮಾ.. ವೇಯ್ಟ್ ಮಾಡಿ.. ಅತಿ ಶೀಘ್ರದಲ್ಲೇ ಥಿಯೇಟರ್‍ಗೂ ಬರುತ್ತೆ.

  • ಮೈ ಗಢಗಢ ನಡುಗುವ ಚಳಿಯಲ್ಲಿ..ರಿವರ್ ರಾಫ್ಟಿಂಗ್

    life jothe ondu selfie team

    ರಿವರ್ ರ್ಯಾಫ್ಟಿಂಗ್ ಅನ್ನೋದು ಅದ್ಭುತ ಅನುಭವ ಕೊಡುತ್ತೆ. ಹರಿಯುವ ನದಿಯಲ್ಲಿ ರ್ಯಾಫ್ಟಿಂಗ್ ಮಾಡೋದು ಸುಲಭದ ಕೆಲಸವಲ್ಲ. ಅದಕ್ಕೆ ಮೊದಲು ಧೈರ್ಯ ಇರಬೇಕು. ಈಜು ಗೊತ್ತಿರಬೇಕು. ಈಜು ಗೊತ್ತಿದ್ದವರಿಗಷ್ಟೇ ಧೈರ್ಯ ಬರಲು ಸಾಧ್ಯ. ಸದ್ಯಕ್ಕೆ ಲೈಫ್ ಜೊತೆ ಒಂದ್ ಸೆಲ್ಫಿ ಚಿತ್ರತಂಡ ಹಿಮಾಲಯದ ತಪ್ಪಲಲ್ಲಿ ರ್ಯಾಫ್ಟಿಂಗ್ ಮಾಡಿದೆ.

    ದಿನಕರ್ ತೂಗುದೀಪ್ ನಿರ್ದೇಶನದ ಈ ಚಿತ್ರದಲ್ಲಿ ಪ್ರಜ್ವಲ್, ಪ್ರೇಮ್, ಹರಿಪ್ರಿಯಾ ಪ್ರಮುಖ ಪಾತ್ರದಲ್ಲಿದ್ದಾರೆ. ಇಡೀ ಚಿತ್ರತಂಡ ಹೃಷಿಕೇಶದಲ್ಲಿ ಗಢಗಢ ನಡುಗುವ ಈ ಚಳಿಯಲ್ಲೇ ರ್ಯಾಫ್ಟಿಂಗ್ ಮಾಡಿರುವುದು ವಿಶೇಷ. ಹರಿಪ್ರಿಯಾ, ಪ್ರಜ್ವಲ್, ಪ್ರೇಮ್.. ಎಲ್ಲರೂ.. ಈಜು ಗೊತ್ತಿದ್ದರೂ, ಹರಿಯುವ ನದಿಯಲ್ಲಿ ರ್ಯಾಫ್ಟಿಂಗ್ ಮಾಡುವುದು ವಿಭಿನ್ನ ಅನುಭವ ಎಂದು ಖುಷಿ ಹಂಚಿಕೊಂಡಿದ್ದಾರೆ.