ಹರಿಪ್ರಿಯಾ ಕನ್ನಡದಲ್ಲಿ ಸಿಕ್ಕಾಪಟ್ಟೆ ಬ್ಯುಸಿ. ಲೈಫ್ ಜೊತೆ ಒಂದ್ ಸೆಲ್ಫಿ, ಸೂಜಿದಾರ ಚಿತ್ರಗಳಲ್ಲಿ ನಾಯಕಿಯಾಗಿ, ಆಂಜನಿಪುತ್ರದಲ್ಲಿ ಕ್ಯಾಮಿಯೋ ಆಗಿ ಕಾಣಿಸಿಕೊಂಡಿರುವ ಹರಿಪ್ರಿಯಾ, ಇತ್ತೀಚೆಗಷ್ಟೇ ಕುರುಕ್ಷೇತ್ರ ಮುಗಿಸಿದ್ದಾರೆ. ಇನ್ನು ಸಂಹಾರ ಚಿತ್ರದಲ್ಲಿ ನೆಗೆಟಿವ್ ಶೇಡ್ ಇರೋ ಪಾತ್ರ, ಕನಕದಲ್ಲಿ ಹಳ್ಳಿ ಹುಡುಗಿಯಾಗಿ ಕಾಣಿಸಿಕೊಂಡಿರುವ ಹರಿಪ್ರಿಯಾಗೆ ಬಿಡುವೇ ಇಲ್ಲ.
ಈ ಬಿಡುವಿಲ್ಲದ ಶೆಡ್ಯೂಲ್ ಮಧ್ಯೆಯೇ ಹರಿಪ್ರಿಯಾ ತೆಲುಗಿಗೆ ಹೊರಟು ನಿಂತಿದ್ದಾರೆ. ಬಾಲಕೃಷ್ಣ ಅಭಿನಯದ, ಕೆ.ಎಸ್.ರವಿಕುಮಾರ್ ನಿರ್ದೇಶನದ ಚಿತ್ರದಲ್ಲಿ ಬಾಲಯ್ಯಗೆ ಹರಿಪ್ರಿಯಾ ನಾಯಕಿ. ದ್ವಿಪಾತ್ರದಲ್ಲಿರುವ ಬಾಲಕೃಷ್ಣಗೆ ಒಂದು ಪಾತ್ರದಲ್ಲಿ ನಯನತಾರ ನಾಯಕಿಯಾಗಿದ್ದರೆ, ಇನ್ನೊಂದು ಪಾತ್ರದಲ್ಲಿ ಹರಿಪ್ರಿಯಾ ನಾಯಕಿಯಾಗಿರುತ್ತಾರೆ.
4 ವರ್ಷಗಳ ನಂತರ ತೆಲುಗು ಚಿತ್ರದಲ್ಲಿ ನಟಿಸುತ್ತಿರುವ ಹರಿಪ್ರಿಯಾ, ಬಾಲಕೃಷ್ಣ ಜೊತೆ ನಟಿಸುವುದೇ ಒಂದು ದೊಡ್ಡ ಗೌರವ ಎಂದು ಹೇಳಿದ್ದಾರೆ.