ಇದು ಹೊಸದೇನೂ ಅಲ್ಲ. ಮೆಡ್ರಾಸಿ.. ಎಂದೇ ದಕ್ಷಿಣ ಭಾರತದವರನ್ನು ಕರೆಯುತ್ತಿದ್ದ ಹಿಂದಿ ಚಿತ್ರರಂಗ ಈಗ ಇಲ್ಲಿನ ಕಥೆಗಾರರು, ನಿರ್ದೇಶಕರ ಬೆನ್ನು ಹತ್ತಿದೆ. ಇಷ್ಟಕ್ಕೂ ಹಿಂದಿಯವರು ಮೊದಲಿಂದಲೂ ವೊರಿಜಿನಲ್ ಚಿತ್ರಗಳನ್ನಷ್ಟೇ ಮಾಡಿದವರಾ..? ಹಾಗೆ ನೋಡಿದರೆ ಹಿಂದಿಗೆ ಆಕ್ಸಿಜನ್ ನೀಡಿದ್ದು ಮೊದಲಿಗೆ ಹಿಂದಿಯವರೂ ಅಲ್ಲ, ಬೆಂಗಾಳಿ ಚಿತ್ರರಂಗದವರು. ಅದೆಲ್ಲ ಮಾತು ಬಿಡಿ.. ಹಿಂದಿಯವರು ದಕ್ಷಿಣದ ಚಿತ್ರಗಳನ್ನು ರೀಮೇಕ್ ಮಾಡಿಯೇ ಗೆದ್ದ ಚಿತ್ರಗಳ ಲಿಸ್ಟ್ ಇಲ್ಲಿದೆ.
ಅಜಯ್ ದೇವಗನ್ : ಮೊದಲ ಸಿನಿಮಾ ಪ್ಯಾರಿ ಬೆಹನಾ. ಇದರಲ್ಲಿ ಅಜಯ್ ಬಾಲನಟ. ಈ ಚಿತ್ರ ತಮಿಳಿನ ಮುಲ್ಲಂ ಮುಲ್ಲದ ರೀಮೇಕ್.
ಪೂಲ್ ಔರ್ ಕಾಂಟೆ ಮಲಯಾಳಂನ ಪರಂಪರಾ ರೀಮೇಕ್. ಈ ಚಿತ್ರದಿಂದಲೇ ಅಜಯ್ ಸ್ಟಾರ್ ಆಗಿದ್ದು.
ದೀವಾನಗಿ ತಮಿಳಿನ ಕಾದಲ್ ಕಿರುಕ್ಕನ್ ರೀಮೇಕ್.
ಯುವ ತಮಿಳಿನ ಆಯುತ್ತು ಇಜುತ್ತು ರೀಮೇಕ್.
ಇನ್ಸಾನ್ ತೆಲುಗಿನ ಖಡ್ಗಂ ರೀಮೇಕ್.
ಜಮೀರ್ ಮಲಯಾಳಂನ ಮಜಯೇತ್ತುಂ ಮನ್ಬೆ ರೀಮೇಕ್
ಗೋಲ್‍ಮಾಲ್ ಮಲಯಾಳಂನ ಕಕ್ಕಕುಯಿಲ್ ರೀಮೇಲ್.
ಸಂಡೇ ತೆಲುಗಿನ ಅನಕಕೊಂಡ ಒಕ ರೋಜು ರೀಮೇಕ್.
ಆಲ್ ದಿ ಬೆಸ್ಟ್ ಕನ್ನಡದ ಗಲಾಟೆ ಸಂಸಾರದ ರೀಮೇಕ್
ಸಿಂಘಂ : ತಮಿಳಿನ ಸಿಂಗಂ ರೀಮೇಕ್
ಹಿಮ್ಮತ್‍ವಾಲಾ : ತಮಿಳಿನ ಊರಿಕಿ ಮನಗಾಡು ರೀಮೇಕ್
ದೃಶ್ಯಂ : ಮಲಯಾಳಂನ ದೃಶ್ಯಂ ರೀಮೇಕ್. ಈಗ ದೃಶ್ಯ 2 ಕೂಡಾ ರೆಡಿಯಾಗುತ್ತಿದೆ
ಸಲ್ಮಾನ್ ಖಾನ್ : ಸೋತು ಸುಣ್ಣವಾಗಿದ್ದ ಸಲ್ಲುಗೆ ಯಶಸ್ಸು ಸಿಕ್ಕಿದ್ದೇ ರೀಮೇಕ್‍ಗಳಿಂದ.
ತೇರೇ ನಾಮ್ : ತಮಿಳಿನ ಸೇತು ರೀಮೇಕ್
ವಾಂಟೆಡ್ : ತೆಲುಗಿನ ಪೋಕಿರಿ ರೀಮೇಕ್
ರೆಡಿ : ತೆಲುಗಿನ ರೆಡಿ ರೀಮೇಕ್
ಬಾಡಿಗಾರ್ಡ್ : ಮಲಯಾಳಂನ ಬಾಡಿಗಾರ್ಡ್ ರೀಮೇಕ್
ಕಿಕ್ : ತೆಲುಗಿನ ಕಿಕ್ ರೀಮೇಕ್
ಜುಡ್ವಾ : ತೆಲುಗಿನ ಹಲೋ ಬ್ರದರ್ ರೀಮೇಕ್
ಜೈ ಹೋ : ತೆಲುಗಿನ ಸ್ಟಾಲಿನ್ ರೀಮೇಕ್
ಬೀವಿ ನಂ.1 : ತಮಿಳಿನ ಸತಿ ಲೀಲಾವತಿ
ಅಮೀರ್ ಖಾನ್ ಚಿತ್ರಗಳಲ್ಲೂ ರೀಮೇಕ್ ಇದೆ. ಆದರೆ ಹೋಲಿಸಿದರೆ ಕಡಿಮೆ.
ಗಜಿನಿ : ತಮಿಳಿನ ಗಜಿನಿ ಚಿತ್ರದ ರೀಮೇಕ್
ಉಳಿದಂತೆ ಅಮೀರ್ ಕಣ್ಣು ಹಾಕೋದು ಹಾಲಿವುಡ್ ಚಿತ್ರಗಳ ಮೇಲೆ.
ಅಕ್ಷಯ್ ಕುಮಾರ್ ಚಿತ್ರಗಳ ಸಂಖ್ಯೆ ಬಹಳ ದೊಡ್ಡದು. ವರ್ಷಕ್ಕೆ ಕನಿಷ್ಠ ಮೂರರಿಂದ 5 ಚಿತ್ರಗಳಲ್ಲಿ ನಟಿಸೋ ಅಕ್ಷಯ್ ವರ್ಷಕ್ಕೆ ಒಂದಾದರೂ ರೀಮೇಕ್‍ನಲ್ಲಿ ನಟಿಸುತ್ತಾರೆ.
ಹೇರಾಫೇರಿ : ಮಲಯಾಳಂನ ರಾಮೋಜಿರಾವ್ ಸ್ಪೀಕಿಂಗ್‍ನ ರೀಮೇಕ್
ರೌಡಿ ರಾಥೋರ್ : ತೆಲುಗಿನ ವಿಕ್ರಮಾರ್ಕುಡು ರೀಮೇಕ್
ಲಕ್ಷ್ಮಿ : ತಮಿಳಿನ ಕಾಂಚನಾ ರೀಮೇಕ್
ಭೂಲ್ ಬುಲಯ್ಯಾ : ಮಲಯಾಳಂನ ಮಣಿಚಿತ್ರತ್ತಾಳ್ ರೀಮೇಕ್ (ಕನ್ನಡದ ಆಪ್ತಮಿತ್ರ)
ಹಾಲಿಡೇ : ತಮಿಳಿನ ತುಪಾಕಿ ರೀಮೇಕ್
ಬಚ್ಚನ್ ಪಾಂಡೆ : ತಮಿಳಿನ ಜಿಗರ್‍ಥಾಂಡ
ಗಬ್ಬರ್ ಈಸ್ ಬ್ಯಾಕ್ : ತಮಿಳಿನ ರಮಣ ರೀಮೇಕ್
ಮುಂಬರುವ ಅಕ್ಷಯ್ ಕುಮಾರ್ ರೀಮೇಕ್ ಚಿತ್ರಗಳು : ಸೆಲ್ಫೀ (ಮಲಯಾಳಂನ ಡ್ರೈವಿಂಗ್ ಲೈಸೆನ್ಸ್) ಮಿಷನ್ ಸಿಂಡ್ರೆಲಾ (ತಮಿಳಿನ ರತ್ಸಾನಂ) ಸೂರರೈ ಪೊಟ್ರು ತಮಿಳಿಂದ ರೀಮೇಕ್. ಇದು ಕನ್ನಡಿಗ ಕ್ಯಾಪ್ಟರ್ ಗೋಪಿನಾಥ್ ಕಥೆ
ಇನ್ನು ಸೈಫ್ ಅಲಿ ಖಾನ್, ಜಾನ್ ಅಬ್ರಹಾಂ, ಅಭಿಷೇಕ್ ಬಚ್ಚನ್, ಶಾಹಿದ್ ಕಪೂರ್, ಅನಿಲ್ ಕಪೂರ್.. ಹೀಗೆ ಬಾಲಿವುಡ್‍ನ ಹಲವು ಹೀರೋಗಳಿಗೆ ಪುನರ್ಜನ್ಮ ಕೊಟ್ಟಿರುವುದೇ ರೀಮೇಕ್ ಚಿತ್ರಗಳು. ಹಾಗೆ ಬರುತ್ತಿದ್ದ ಚಿತ್ರಗಳು ಇದ್ದಕ್ಕಿದ್ದಂತೆ ರೀಮೇಕ್ ಮಾಡೋಕೂ ಅವಕಾಶ ಕೊಡದಂತೆ ನೇರವಾಗಿ ಬಂದು ಗೆದ್ದಾಗ.. ಸಹಜವಾಗಿಯೇ ಕಾಡುವ ಅಸ್ಥಿತ್ವದ ಭಯ ಅವರನ್ನು ಕಾಡುತ್ತಿದೆ.. ದಟ್ಸಾಲ್.