ಹಾಸ್ಯನಟ ಟೆನ್ನಿಸ್ ಕೃಷ್ಣ ವೃತ್ತಿ ಬದುಕಿನ ಹೊಸ ಇನ್ನಿಂಗ್ಸ್ ಶುರುವಾಗಿದೆ. ಟೆನ್ನಿಸ್ ಕೃಷ್ಣ ರಾಜಕೀಯ ಪ್ರವೇಶಿಸಿದ್ದಾರೆ. ಕನ್ನಡದಲ್ಲಿಯೇ 600ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಟೆನ್ನಿಸ್ ಕೃಷ್ಣಗೂ, ಟೆನ್ನಿಸ್ ಆಟಕ್ಕೂ ಯಾವ ಸಂಬಂಧವೂ ಇಲ್ಲ. ಕೃಷ್ಣ ಕೆರಿಯರ್ ಶುರುವಾದಾಗ ಚಿತ್ರರಂಗದಲ್ಲಿ ಕೃಷ್ಣರೇ ತುಂಬಿದ್ದರು. ಗುರುತಿಸಲು ಸುಲಭವಾಗಲಿ ಎಂದು ಇಟ್ಟ ಅಡ್ಡಹೆಸರು ಟೆನ್ನಿಸ್ ಕೃಷ್ಣ.
ರಂಗಭೂಮಿಯಿಂದ ಬಂದವರಾದ ಕೃಷ್ಣ, ರೇಖಾದಾಸ್ ಅವರೊಟ್ಟಿಗೆ 100ಕ್ಕೂ ಹೆಚ್ಚು ಚಿತ್ರಗಳಲ್ಲಿ ಜೋಡಿಯಾಗಿ ನಟಿಸಿದ್ದಾರೆ. ಕಾಮಿಡಿ ಜೋಡಿಯೊಂದು ಇಷ್ಟು ಚಿತ್ರಗಳಲ್ಲಿ ಒಟ್ಟಾಗಿ ನಟಿಸಿದ್ದು ಒಂದು ದಾಖಲೆ. ಈ ಹಿಂದೆ ಕೆಲವು ನಾಯಕರ ಪರವಾಗಿ ಪ್ರಚಾರ ಮಾಡಿದ್ದರಾದರೂ ಅದು ಅವರ ಪರ್ಸನಲ್ ವಿಷಯಗಳಾಗಿತ್ತು. ಈಗ ಅಧಿಕೃತವಾಗಿ ರಾಜಕೀಯ ಪ್ರವೇಶಿಸಿದ್ದಾರೆ.
ಆಮ್ ಆದ್ಮಿ ಪಕ್ಷದ ಮೂಲಕ ರಾಜಕೀಯಕ್ಕೆ ಎಂಟ್ರಿ ಕೊಟ್ಟಿರುವ ಟೆನ್ನಿಸ್ ಕೃಷ್ಣ ಅವರನ್ನು ಎಎಪಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಪಕ್ಷಕ್ಕೆ ಸ್ವಾಗತ ಮಾಡಿಕೊಂಡಿದ್ದಾರೆ. ಅಧಿಕಾರಕ್ಕಾಗಿ ಅಲ್ಲ, ಜನಸೇವೆಗಾಗಿ ರಾಜಕೀಯಕ್ಕೆ ಬಂದಿದ್ದೇನೆ ಎಂದಿದ್ದಾರೆ ಟೆನ್ನಿಸ್ ಕೃಷ್ಣ.