` suicide attempt, - chitraloka.com | Kannada Movie News, Reviews | Image

suicide attempt,

  • ನಾಗಮಂಡಲ ವಿಜಯಲಕ್ಷ್ಮಿ ಆತ್ಮಹತ್ಯೆ ಯತ್ನ : ಸ್ಥಿತಿ ಗಂಭೀರ

    vijayalakshmi image

    ನಾಗಮಂಡಲ ಚಿತ್ರದ ಮೂಲಕ ಕನ್ನಡಿಗರಿಗೆ ಪರಿಚತರಾದ ಖ್ಯಾತ ನಟಿ ವಿಜಯಲಕ್ಷ್ಮಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ವಿಜಯಲಕ್ಷ್ಮಿ ಸ್ಥಿತಿ ಗಂಭೀರವಾಗಿದ್ದು, ಚೆನ್ನೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ಇತ್ತೀಚೆಗಷ್ಟೇ ವಿಜಯಲಕ್ಷ್ಮಿ, ತಮಿಳು ನಟ ಸೀಮನ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ಸೀಮನ್ ತಮಗೆ ಕಿರುಕುಳ ನೀಡುತ್ತಿದ್ದು, ನನಗೆ ಸಹಿಸಲು ಆಗುತ್ತಿಲ್ಲ. ನನಗೆ ಪ್ರಾಸ್ಟಿಟ್ಯೂಟ್ ರೀತಿ ಬಾಳೋಕೆ ಇಷ್ಟವಿಲ್ಲ. ಆದರೆ, ಸೀಮನ್ ನಾನು ವೇಶ್ಯಾವಾಟಿಕೆ ಮಾಡುತ್ತಿದ್ದೇನೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದಾನೆ. ನಾನು ಕನ್ನಡದವಳು, ಕರ್ನಾಟಕದಲ್ಲಿ ಹುಟ್ಟಿದವಳು ಎಂಬ ಏಕೈಕ ಕಾರಣಕ್ಕೆ ನನಗೆ ಸೀಮನ್ ಕಿರುಕುಳ ನೀಡುತ್ತಿದ್ದಾನೆ. ನಾನು ಈಗಾಗಲೇ ಮೂರು ಬಿಪಿ ಟ್ಯಾಬ್ಲೆಟ್ ತೆಗೆದುಕೊಂಡಿದ್ದೇನೆ. ಇನ್ನು ಕೆಲವೇ ಕ್ಷಣಗಳಲ್ಲಿ ನನಗೆ ಬಿಪಿ ಡೌನ್ ಆಗುತ್ತೆ. ಇದೇ ನನ್ನ ಕೊನೆಯ ವಿಡಿಯೋ. ನನ್ನ ಸಾವಿಗೆ ಕಾರಣರಾದ ಸೀಮನ್ ಮತ್ತು ಹರೀಂದ್ರನ್ ಎನ್ನುವವರನ್ನು ಬಿಡಬೇಡಿ ಎಂದು ವಿಡಿಯೋ ಪೋಸ್ಟ್ ಮಾಡಿದ್ದಾರೆ.

    you_tube_chitraloka1.gif

    ಈ ಹಿಂದೆ ವಿಜಯಲಕ್ಷ್ಮಿ ಸಂಕಷ್ಟದಲ್ಲಿದ್ದಾಗ ನಟ ಸುದೀಪ್ ಮತ್ತು ರವಿಪ್ರಕಾಶ್ ನೆರವಿಗೆ ಬಂದಿದ್ದರು. ಆದರೆ, ನಟಿ ವಿಜಯಲಕ್ಷ್ಮಿ ರವಿಪ್ರಕಾಶ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ಈ ಆರೋಪದ ವಿರುದ್ಧ ರವಿಪ್ರಕಾಶ್ ವಿಜಯಲಕ್ಷ್ಮಿ ವಿರುದ್ಧ ಕೇಸು ದಾಖಲಿಸಿದ್ದರು. ಇತ್ತೀಚೆಗೆ ವಿಜಯಲಕ್ಷ್ಮಿ ಅವರ ಅಕ್ಕ ನನಗೆ ಕರೆ ಮಾಡಿ ರಾಜಿ ಮಾಡಿಕೊಳ್ಳಲು ಮನವಿ ಮಾಡಿದ್ದಾರೆ. ಆದರೆ, ನಾನು ರಾಜಿ ಮಾಡಿಕೊಳ್ಳೋದಿಲ್ಲ. ಕಾನೂನು ಸಮರ ಮುಂದುವರಿಸುತ್ತೇನೆ ಎಂದು ರವಿಪ್ರಕಾಶ್ ಹೇಳಿದ್ದರು. ಇದೆಲ್ಲ ಆದ ಕೆಲವೇ ದಿನಗಳಲ್ಲಿ ವಿಜಯಲಕ್ಷ್ಮಿ, ತಮಿಳು ನಟನ ವಿರುದ್ಧ ಆರೋಪ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

    Also Read

    Raviprakash says he won't compromise in Vijayalakshmi case

    ವಿಜಯಲಕ್ಷ್ಮಿಗೆ ಸಹಾಯ ಮಾಡಿ ಸಂಕಷ್ಟಕ್ಕೆ ಸಿಲುಕಿದರಾ ನಟ ರವಿಪ್ರಕಾಶ್..?

    Vijayalakshmi Used Me Like A Tissue Paper & Then Made False Accusation: Raviprakash

  • ಹುಚ್ಚ ವೆಂಕಟ್ ಆತ್ಮಹತ್ಯೆ ಯತ್ನ - ಪ್ರೀತಿಸಿದ್ದ ಹುಡುಗಿ ಹೇಳಿದ್ದೇನು?

    huccha venkat tries to commit suicide

    ಹುಚ್ಚ ವೆಂಕಟ್ ಪ್ರೀತಿಸುತ್ತಿದ್ದ ಹುಡುಗಿ ರಚನಾ. ಸ್ಟಾರ್ ಸುವರ್ಣ ವಾಹಿನಿಯ ಸೂಪರ್ ಜೋಡಿ ಡ್ಯಾನ್ಸ್ ಶೋದಲ್ಲಿ ಹುಚ್ಚ ವೆಂಕಟ್​ನ ಪೇರ್ ಆಗಿದ್ದವರು. ಪೊರ್ಕಿ ಹುಚ್ಚ ವೆಂಕಟ್ ಸಿನಿಮಾದಲ್ಲಿ ನಟಿಸಿದ್ದರು ಕೂಡಾ. ಈಗ ಆಕೆಯೇ ಮಾಧ್ಯಮಗಳ ಎದುರು ಬಂದು ಹೇಳಿಕೆ ನೀಡಿದ್ದಾರೆ.

    ಹುಚ್ಚ ವೆಂಕಟ್​ ಜೊತೆ ಡ್ಯಾನ್ಸ್ ಶೋದಲ್ಲಿ ಭಾಗವಹಿಸಿದ್ದುದು ಹೌದು. ಆದರೆ, ಆತನಿಗೂ ನನಗೂ ಮಧ್ಯೆ ಪ್ರೀತಿಯೂ ಇಲ್ಲ. ಏನೂ ಇಲ್ಲ. ಆತ ಮಹಿಳೆಯರಿಗೆ ಗೌರವ ಕೊಡುತ್ತಾನೆ ಎಂದು ಜೊತೆಯಲ್ಲಿ ಡ್ಯಾನ್ಸ್ ಮಾಡಿದ್ದೆ. ರಿಯಾಲಿಟಿ ಶೋನಲ್ಲಿ ಯಾವುದೇ ತೊಂದರೆಯಾಗಿರಲಿಲ್ಲ.

    ಆದರೆ, ಈಗ ಮದುವೆಯಾಗುವಂತೆ ಬೆನ್ನು ಬಿದ್ದಿದ್ದರು. ನನಗೂ ಇಷ್ಟವಿರಲಿಲ್ಲ. ನನ್ನ ಮನೆಯವರೂ ಒಪ್ಪುವುದಿಲ್ಲ ಎಂದು ಅದನ್ನು ನಿರಾಕರಿಸಿದ್ದೆ. ಈಗ ಅವರು ಈ ಕೆಲಸ ಮಾಡಿದ್ದಾರೆ. ಅವರ ಆತ್ಮಹತ್ಯೆ ಯತ್ನಕ್ಕೂ ನನಗೂ ಸಂಬಂಧವಿಲ್ಲ. ಈ ಸುದ್ದಿ ಬಹಳ ಬೇಸರ ತರಿಸಿದೆ ಎಂದಿದ್ದಾರೆ ರಚನಾ.

  • ಹುಚ್ಚ ವೆಂಕಟ್..ಏನಪ್ಪಾ ಇದು?

    huccha venkat whats all this

    ಹುಚ್ಚ ವೆಂಕಟ್ ಆತ್ಮಹತ್ಯೆ ಯತ್ನ ಈಗ ರಾಜ್ಯದ ಬಿಗ್​ನ್ಯೂಸ್​ಗಳಲ್ಲೊಂದಾಗಿಬಿಟ್ಟಿದೆ. ಟಿವಿ ಚಾನೆಲ್​ಗಳಲ್ಲಿ ಮಾತನಾಡುತ್ತಿರುವ ಹುಚ್ಚ ವೆಂಕಟ್, ರಚನಾನೇ ನನಗೆ ಪ್ರಪೋಸ್ ಮಾಡಿದ್ದರು ಎನ್ನುತ್ತಿದ್ದಾನೆ. ರಚನಾಗೆ ಇವನು ಬಟ್ಟೆ, ಶೂ ಎಲ್ಲವನ್ನೂ ಕೊಡಿಸಿದ್ದನಂತೆ. ವೆಂಕಟ್​ನನ್ನು ರಚನಾ, ಸಮಾಧಾನ ಮಾಡುತ್ತಿದ್ದರಂತೆ. ಇದೆಲ್ಲವನ್ನೂ ಹೇಳಿಕೊಂಡು ಕಣ್ಣೀರಿಟ್ಟಿದ್ದಾನೆ ಹುಚ್ಚ ವೆಂಕಟ್.

    ನಿನ್ನಿಂದಾಗಿ ನನ್ನ ಮಾನ ಮರ್ಯಾದೆ ಹೋಯ್ತು. ನಾನ್ಯಾವತ್ತೂ ನಿನ್ನನ್ನು ಲವ್ ಮಾಡಿರಲೇ ಇಲ್ಲ ಎಂದು ಹುಚ್ಚ ವೆಂಕಟ್​ನನ್ನು ಬೈದಿದ್ದಾರೆ ರಚನಾ. 

    ಹುಚ್ಚರು ಯಾರು?

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery