` krishna dop, - chitraloka.com | Kannada Movie News, Reviews | Image

krishna dop,

 • ಪೈಲ್ವಾನ್ 2 ಕಿಚ್ಚ ರೆಡಿ : ಕಂಡಿಷನ್ಸ್ ಅಪ್ಲೈ

  sudeep ready for pailan sequel

  ಪೈಲ್ವಾನ್ ಬಾಕ್ಸಾಫೀಸ್‍ನಲ್ಲಿ ಧೂಳೆಬ್ಬಿಸುತ್ತಿದ್ದಂತೆಯೇ ಪೈಲ್ವಾನ್ 2ಗೆ ಸಿದ್ಧರಾಗುತ್ತಿದ್ದಾರೆ ನಿರ್ದೇಶಕ ಕೃಷ್ಣ ಮತ್ತು ಕಿಚ್ಚ ಸುದೀಪ್. ಈಗಾಗಲೇ ಕೃಷ್ಣ ಕಥೆಯನ್ನೂ ಸುದೀಪ್ ಅವರಿಗೆ ಹೇಳಿದ್ದಾರಂತೆ. ಕಥೆಯನ್ನು ಇಷ್ಟಪಟ್ಟಿರುವ ಸುದೀಪ್, ಕೃಷ್ಣಗೆ ಕೆಲವು ಕಂಡೀಷನ್ಸ್ ಹಾಕಿದ್ದಾರಂತೆ.

  ಕಿಚ್ಚ ಸುದೀಪ್ ಅವರಿಗೆ ಕಥೆ ಹೇಳಿದ್ದೇನೆ. ಅದು ಅವರಿಗೂ ಇಷ್ಟವಾಗಿದೆ. ಆದರೆ ಡೆವಲಪ್ ಮಾಡುವಂತೆ ಸೂಚನೆ ಸಿಕ್ಕಿಲ್ಲ ಎಂದಿದ್ದಾರೆ ಕೃಷ್ಣ. ಆದರೆ ಸುದೀಪ್ ಪೈಲ್ವಾನ್ 2ನಲ್ಲಿ ಪೈಲ್ವಾನ್ ಆಗುವ ಬದಲು, ಪೈಲ್ವಾನ್‍ನ ಗುರು ಆಗುವ ಬಯಕೆ ಹೊಂದಿದ್ದಾರಂತೆ. ಕಾರಣ ಇಷ್ಟೆ, ಕಷ್ಟದ ಸಾಹಸ ದೃಶ್ಯಗಳಿರೋದಿಲ್ಲ ಎನ್ನುವುದು.

  ಆದರೆ, ಇಂಥದ್ದೊಂದು ಸುದ್ದಿ ಹೊರಬಿದ್ದ ಬೆನ್ನಲ್ಲೇ ನಾನ್ ರೆಡಿ ಎನ್ನುವ ಅರ್ಥದಲ್ಲಿ ಹೊರಬಿದ್ದಿರುವ ಸುದೀಪ್ ಅವರ ಟ್ವೀಟ್, ಪೈಲ್ವಾನ್ ಫ್ಯಾನ್ಸ್ ಶಿಳ್ಳೆ ಹೊಡೆಯುವಂತೆ ಮಾಡಿದೆ. ಅಂದಹಾಗೆ ಪೈಲ್ವಾನ್ ಮುಗಿಸಿದ ನಂತರವೂ ಕಿಚ್ಚ ಜಿಮ್ ಬಿಟ್ಟಿಲ್ಲ. ಪ್ರತಿದಿನ ತಪ್ಪದೇ ಜಿಮ್ ಮಾಡುತ್ತಿದ್ದಾರೆ.

 • ಪೈಲ್ವಾನ್ ಅಡ್ವಾನ್ಸ್ ಬುಕ್ಕಿಂಗ್ ನುಗ್ಗಿ ಬಂದ್ರು ಪೈಲ್ವಾನ್ಸ್ ಫ್ಯಾನ್ಸ್

  pailwan advance booking craze

  ಎಂದಿಗೂ ಎಣೆಯಿಲ್ಲ ಈ ಪ್ರೀತಿಗೆ.. ಬಂದ್ರು ನೋಡೋ ಫ್ಯಾನ್ಸು.. ಎಂದು ಕಿಚ್ಚ ಸುದೀಪ್ ಹಾಡಬೇಕಾದ ಟೈಮ್ ಇದು. ಪೈಲ್ವಾನ್ ಚಿತ್ರದ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿದ್ದೇ ತಡ, ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಟಿಕೆಟ್ ಬುಕ್ಕಿಂಗ್ ಜೋರಾಗಿ ನಡೆಯುತ್ತಿದೆ.

  ಬೆಂಗಳೂರಿನ ಸಿದ್ದೇಶ್ವರ ಟಾಕೀಸ್‍ನಲ್ಲಿ ಬೆಳಗ್ಗೆ 5.30ಕ್ಕೆ ಮೊದಲ ಶೋ. ಚಂದ್ರೋದಯ, ಕಾವೇರಿ ಥಿಯೇಟರುಗಳಲ್ಲೂ ಅರ್ಲಿ ಮಾರ್ನಿಂಗ್  ಶೋ ಇದೆ. ಹೆಚ್ಚುತ್ತಿರುವ ಡಿಮ್ಯಾಂಡ್ ನೋಡಿದರೆ ಮಧ್ಯರಾತ್ರಿ ಶೋ ಶುರುವಾದರೂ ಆಶ್ಚರ್ಯವಿಲ್ಲ.

  ಪೈಲ್ವಾನ್‍ಗೆ ಕೃಷ್ಣ ಆ್ಯಕ್ಷನ್ ಕಟ್ ಹೇಳಿದ್ದು, ಸ್ವಪ್ನಾ ಕೃಷ್ಣ ನಿರ್ಮಾಪಕಿ. ಸುದೀಪ್ ಜೊತೆ ಸುನಿಲ್ ಶೆಟ್ಟಿ, ಆಕಾಂಕ್ಷಾ ಸಿಂಗ್ ನಟಿಸಿದ್ದಾರೆ.

   

 • ಪೈಲ್ವಾನ್ ಕಿಚ್ಚನ ತೂಕ ಈಗ ಎಷ್ಟು..?

  kiccha sudeep looses his weight for phailwan

  ಕನ್ನಡದಲ್ಲಿ ಫಿಟ್‍ನೆಸ್ ಮೈಂಟೇನ್ ಮಾಡುವ ಕೆಲವೇ ನಟರಲ್ಲಿ ಸುದೀಪ್ ಕೂಡಾ ಒಬ್ಬರು. ಅವರು ಮೊದಲಿನಿಂದಲೂ ತೀರಾ ದಪ್ಪಗೂ ಆಗಿಲ್ಲ. ತೀರಾ ತೆಳ್ಳಗೂ ಆಗಿಲ್ಲ. ಎಲ್ಲ ಓಕೆ.. ಕಿಚ್ಚ ಸುದೀಪ್ ಈಗ ಎಷ್ಟು ಕೆಜಿ ತೂಕವಿದ್ದಾರೆ..? 

  89 ಕೆಜಿ ತೂಗುತ್ತಿದ್ದ ಸುದೀಪ್, ಈಗ 73 ಕೆಜಿಗೆ ಇಳಿದಿದ್ದಾರೆ. 36 ಇದ್ದ ಎದೆಯ ಸುತ್ತಳತೆ ಈಗ 31.5ಕ್ಕೆ ಇಳಿದಿದೆ. ಎಲ್ಲದಕ್ಕೂ ಕಾರಣ.. ಪೈಲ್ವಾನ್ ಸಿನಿಮಾ. ಪೈಲ್ವಾನ್ ಸಿನಿಮಾಗಾಗಿ ಕಸರತ್ತು ಮಾಡುತ್ತಿರುವ ಸುದೀಪ್, ಇದಕ್ಕೆ ಸ್ಫೂರ್ತಿ ನೀಡಿದ ಪೈಲ್ವಾನ್ ಚಿತ್ರತಂಡ ಹಾಗೂ ನಟ ಕಬೀರ್ ದುಲ್ಹನ್ ಸಿಂಗ್‍ಗೆ ಥ್ಯಾಂಕ್ಸ್ ಹೇಳಿದ್ದಾರೆ.

 • ಪೈಲ್ವಾನ್ ಕಿಚ್ಚನ ಹೊಸ ಕಥೆ

  pailwan first look

  ಪೈಲ್ವಾನ್, ಸುದೀಪ್ ಅಭಿನಯದ ಈ ಚಿತ್ರ ಶೂಟಿಂಗ್ ಶುರುವಾಗುವ ಮುನ್ನವೇ ಭಾರಿ ನಿರೀಕ್ಷೆ ಹುಟ್ಟಿಸಿದೆ. ಆದರೆ, ಚಿತ್ರಕ್ಕೆ ಇನ್ನೂ ನಾಯಕಿ ಆಯ್ಕೆಯಾಗಿಲ್ಲ. ಚಿತ್ರದಲ್ಲಿ ನಾಯಕಿಯ ಪಾತ್ರಕ್ಕೆ ತುಂಬಾನೇ ಸ್ಕೋಪ್ ಇದೆ. ಸಾಮಾನ್ಯವಾಗಿ ಸ್ಟಾರ್ ನಟರ ಚಿತ್ರಗಳಲ್ಲಿ ನಾಯಕಿಯ ಪಾತ್ರಕ್ಕೆ ಅಷ್ಟೊಂದು ಪ್ರಾಮುಖ್ಯತೆ ಇರಲ್ಲ. ಆದರೆ, ಪೈಲ್ವಾನ್ ಚಿತ್ರದಲ್ಲಿ ನಾಯಕಿಯ ಪಾತ್ರಕ್ಕೆ ತುಂಬಾನೇ ಮಹತ್ವವಿದೆ. ಹೀಗಾಗಿ ನಾಯಕಿಯ ಆಯ್ಕೆ ನಿಧಾನವಾಗುತ್ತಿದೆ. ಕೆಲವರನ್ನು ಸಂಪರ್ಕಿಸಿದ್ದೇವೆ. ಇನ್ನೂ ಪೈನಲ್ ಆಗಿಲ್ಲ ಎಂದಿದ್ದಾರೆ ನಿರ್ದೇಶಕ ಕೃಷ್ಣ.

  ಸುದೀಪ್ ಅವರಿಗೆ ಪೈಲ್ವಾನ್ ಆಗಿ ರೂಪುಗೊಳ್ಳಲು ತರಬೇತಿ ಕೂಡಾ ನೀಡಲಾಗುವುದಂತೆ. ಅದಕ್ಕಾಗಿ ಎರಡು ಕ್ರೀಡಾ ಸಂಸ್ಥೆಗಳನ್ನು ಸಂಪರ್ಕಿಸಲಾಗಿದೆಯಂತೆ. ಪೈಲ್ವಾನ್ ಚಿತ್ರಕ್ಕೆ ಸುದೀಪ್ ಪೈಲ್ವಾನ್ ತರಬೇತಿ ಪಡೆದುಕೊಂಡೇ ಬಣ್ಣ ಹಚ್ಚಲಿದ್ದಾರೆ ಕಿಚ್ಚ.

  ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಲಿದ್ದಾರೆ. ಕರುಣಾಕರ್ ಕ್ಯಾಮೆರಾ ಕೆಲಸ ಮಾಡಲಿದ್ದಾರೆ. ಹೆಬ್ಬುಲಿಯಲ್ಲಿ ಅದ್ಭುತ ಸಾಹಸ ಸಂಯೋಜಿಸಿದ್ದ ರವಿವರ್ಮ, ಪೈಲ್ವಾನ್‍ಗೆ ಸಾಹಸ ನಿರ್ದೇಶಕ. ಕೆಲವು ಬಾಕ್ಸಿಂಗ್ ಹಾಗೂ ಕ್ಲೈಮಾಕ್ಸ್ ದೃಶ್ಯಗಳ ಚಿತ್ರೀಕರಣ ವಿದೇಶದಲ್ಲಿ ನಡೆಯಲಿದೆ. ಎಲ್ಲ ತಯಾರಿಯೂ ಮುಗಿದರೆ, ಅಕ್ಟೋಬರ್ ಮೊದಲ ವಾರದಲ್ಲಿ ಚಿತ್ರೀಕರಣ ಶುರುವಾಗಲಿದೆ.

  Related Articles :-

  ಪೈಲ್ವಾನ್ ಸುದೀಪ್​ಗೆ ಸೆಲಬ್ರಿಟಿಗಳ ಬಹುಪರಾಕ್..!

  ಪೈಲ್ವಾನ ಸುದೀಪ್..ಹೇಗಿರ್ತಾರೋ ನೋಡ್ಬೇಕು..

 • ಪೈಲ್ವಾನ್ ಕೃಷ್ಣ ಇಂಡಿಯಾ ಟೂರ್

  pailwan krishna all set to tour pan india

  ಪೈಲ್ವಾನ್ ಚಿತ್ರದ ಶೂಟಿಂಗ್ ಮುಗಿಸಿ ಪೋಸ್ಟ್ ಪ್ರೊಡಕ್ಷನ್‍ನಲ್ಲಿರುವಾಗ, ಚಿತ್ರದ ನಿರ್ದೇಶಕ ಕೃಷ್ಣ ಇಂಡಿಯಾ ಟೂರ್ ಹೊರಟಿದ್ದಾರೆ. ಇನ್ನು 3 ತಿಂಗಳು ಕೃಷ್ಣ ದೇಶಾಚಾರಿ. ಕಾರಣ, ಪೈಲ್ವಾನ್ ಚಿತ್ರದ ಪ್ರಮೋಷನ್. ಒಟ್ಟು 9 ಭಾಷೆಗಳಲ್ಲಿ ಪೈಲ್ವಾನ್ ರಿಲೀಸ್ ಆಗುತ್ತಿದೆ. ಹೀಗಾಗಿ ದೇಶದ ಎಲ್ಲ ಕಡೆ, ಪ್ರಮುಖ  ನಗರಗಳಲ್ಲಿ ಚಿತ್ರದ ಪ್ರಚಾರ ನಿರ್ವಹಣೆಗೆ ತಲೆ ಕೆಡಿಸಿಕೊಂಡಿದ್ದಾರೆ ಕೃಷ್ಣ. 

  ಚಿತ್ರದ ನಿರ್ಮಾಪಕರೂ ಆಗಿರುವ ಕೃಷ್ಣನಿಗೆ ಸಪೋರ್ಟ್ ಆಗಿ ನಿಂತಿರುವುದು ಕಿಚ್ಚ ಸುದೀಪ್. ಚಿತ್ರದಲ್ಲಿ ಬಾಕ್ಸರ್ ಮತ್ತು ಪೈಲ್ವಾನ್ ಆಗಿ ನಟಿಸಿರುವ ಸುದೀಪ್, ಪೈಲ್ವಾನ್ ಚಿತ್ರವನ್ನು ಇನ್ನಿಲ್ಲದಂತೆ ಪ್ರೀತಿಸಿದ್ದಾರೆ. ಚಿತ್ರವನ್ನು ಜೂನ್ ಹೊತ್ತಿಗೆ ತರುವ ಟಾರ್ಗೆಟ್ ಇಟ್ಟುಕೊಂಡು ದುಡಿಯುತ್ತಿದೆ ಪೈಲ್ವಾನ್ ಟೀಂ.

 • ಪೈಲ್ವಾನ್ ಚಿತ್ರವೇ ಬೇರೆ.. ದಂಗಲ್, ಸುಲ್ತಾನ್ ಚಿತ್ರವೇ ಬೇರೆ

  pailwan is different from sultan and dangal

  ಕಿಚ್ಚ ಸುದೀಪ್ ಪೈಲ್ವಾನ್ ಚಿತ್ರದ ಅನೌನ್ಸ್ ಮಾಡಿದ ತಕ್ಷಣ ಹಲವರು ಇದು ದಂಗಲ್ ಅಥವಾ ಸುಲ್ತಾನ್ ಮಾದರಿಯ ಕಥೆ ಇರಬೇಕು ಎಂದುಕೊಂಡಿದ್ದರು. ದಂಗಲ್, ಪೊಗಟ್ ಸೋದರಿಯರ ಬಯೋಪಿಕ್ ಆದರೆ, ಸುಲ್ತಾನ್ ಅಪ್ಪಟ ಸಲ್ಮಾನ್ ಶೈಲಿಯ ಸಿನಿಮಾ.

  ಸುಲ್ತಾನ್ ಚಿತ್ರದಲ್ಲಿ ಕೌಟುಂಬಿಕ ಕಥಾ ಹಂದರವಿದ್ದರೆ, ದಂಗಲ್ನಲ್ಲಿ ರಾಷ್ಟ್ರೀಯ ಕ್ರೀಡಾಪ್ರೇಮದ ಸ್ಫೂರ್ತಿಯ ಸೆಲೆಯಿತ್ತು. ಈ ಎರಡೂ ಚಿತ್ರಗಳನ್ನು ಮಿಕ್ಸ್ ಮಾಡಿ ಕಥೆ ಮಾಡಿರ್ತಾರೆ ಎಂದು ಕಾಲೆಳೆದಿದ್ದವರು ಈಗ ಅಬ್ಬಾ ಎಂದಿದ್ದಾರೆ.

  ಪೈಲ್ವಾನ್ ಚಿತ್ರಕ್ಕೂ, ದಂಗಲ್, ಸುಲ್ತಾನ್ ಚಿತ್ರಕ್ಕೂ ಹೋಲಿಕೆ ಇರೋದು ಒಂದೇ ವಿಷಯದಲ್ಲಿ. ಆ ಎರಡೂ ಚಿತ್ರಗಳು ಕುಸ್ತಿಯನ್ನು ಆಧರಿಸಿದ ಸಿನಿಮಾಗಳೇ. ಇಲ್ಲಿ ಕೂಡಾ ಸುದೀಪ್ ಕುಸ್ತಿಪಟು. ಆದರೆ, ಕಥೆ. ಸಿಂಪಲ್ಲಾಗಿ ಹೇಳಬೇಕು ಅಂದ್ರೆ.. ಪ್ರೀತಿ, ಕುಸ್ತಿ ಮತ್ತು ಒಂದು ಅದ್ಭುತ ಸಂದೇಶವನ್ನು ಹದವಾಗಿ ಬೆರೆಸಿ ತೆಗೆದಿದ್ದಾರೆ ನಿರ್ದೇಶಕ ಕೃಷ್ಣ. ಒಂದು ವರ್ಷದ ಶ್ರಮ ವ್ಯರ್ಥವಾಗಿಲ್ಲ. ಪ್ರೇಕ್ಷಕರು ಗೆದ್ದಾ ನೋಡೋ ಪೈಲ್ವಾನ್ ಎನ್ನುತ್ತಿದ್ದಾರೆ.

 • ಪೈಲ್ವಾನ್ ಪೈರಸಿ. STOP THIS CRIME 

  pailwan piracy, stop this crime

  ದೊಡ್ಡ ದೊಡ್ಡ ನಟರ ಚಿತ್ರಗಳಿಗೆ ಪೈರಸಿ ಕಾಟ ತಪ್ಪಿದ್ದಲ್ಲ. ಪೈಲ್ವಾನ್ ಚಿತ್ರಕ್ಕೂ ಈ ಪೈರಸಿ ದೊಡ್ಡ ಕಳ್ಳನಾಗಿ ಕಾಡಿದ್ದಾನೆ. ಪೈರಸಿ ವೀರರು ಸಿನಿಮಾವನ್ನು ಅದು ಹೇಗೋ ಕದ್ದು, ಇಂಟರ್‍ನೆಟ್ಟಿಗೆ ಬಿಟ್ಟು ಬಿಡುತ್ತಾರೆ. ಪೈಲ್ವಾನ್ ರಿಲೀಸ್ ಆದ ಮೊದಲ ದಿನ ಇಂಥದ್ದೇ ಸ್ಥಿತಿ ಎದುರಾಗಿದೆ.

  ಒನ್ಸ್ ಎಗೇಯ್ನ್ ಪೈರಸಿ ಕ್ಷೇತ್ರದ ಭಯೋತ್ಪಾದಕ ತಮಿಳ್ ರಾಕರ್ಸ್ ಮತ್ತು 3ಮೂವೀ ರೂಲ್ಸ್ ವೆಬ್‍ಸೈಟ್‍ಗಳಲ್ಲಿ ಚಿತ್ರವನ್ನು ರಿಲೀಸ್ ಮಾಡಿದ್ದಾರೆ. ಅಫ್‍ಕೋರ್ಸ್.. ಕೆಲವೇ ಕ್ಷಣಗಳಲ್ಲಿ ಅದನ್ನು ತೆಗೆದುಹಾಕಲಾಗಿದೆಯಾದರೂ, ಪೈರಸಿ ಖದೀಮರ ಕೈ ತುಂಬಾ ದೊಡ್ಡದು.

  ಇಂತಹ ಪೈರಸಿ ನಿಮ್ಮ ಕಣ್ಣಿಗೇನಾದರೂ ಬಿದ್ದರೆ This email address is being protected from spambots. You need JavaScript enabled to view it. ಗೆ ಮಾಹಿತಿ ನೀಡಿ. ಪೈರಸಿ ಕ್ರೈಂನ್ನು ನಿಲ್ಲಿಸಿ. ಕನ್ನಡ ಚಿತ್ರಗಳನ್ನು ಚಿತ್ರಮಂದಿರದಲ್ಲೇ ನೋಡಿ

 • ಪೈಲ್ವಾನ್ ಫ್ಯಾನ್ಸ್ ಅಬ್ಬರಕ್ಕೆ ಥಿಯೇಟರೇ ನಾಪತ್ತೆ..!

  pailwan movie craze, flex and hoardings cover theaters

  ಕಿಚ್ಚ ಸುದೀಪ್ ಬಾಕ್ಸರ್ ಮತ್ತು ಕುಸ್ತಿ ಪಟುವಾಗಿ ನಟಿಸಿರುವ ಪೈಲ್ವಾನ್ ರಿಲೀಸ್ ಆಗುತ್ತಿದೆ. ಅದೂ 5 ಭಾಷೆಗಳಲ್ಲಿ.. 4000ಕ್ಕೂ ಹೆಚ್ಚು ಸ್ಕ್ರೀನ್‍ಗಳಲ್ಲಿ. ಸುದೀರ್ಘ ಗ್ಯಾಪ್ ನಂತರ ಬರುತ್ತಿರುವುದಕ್ಕೋ ಏನೋ.. ಅಭಿಮಾನಿಗಳ ಉತ್ಸಾಹ ಈ ಬಾರಿ ಮೇರೆ ಮೀರಿದೆ. ಸಂಭ್ರಮಕ್ಕೆ ಎಣೆಯೂ ಇಲ್ಲ.. ಮಿತಿಯೂ ಇಲ್ಲ.

  ರಾಜ್ಯದ ಹಲವು ಥಿಯೇಟರುಗಳಲ್ಲಿ ಅಭಿಮಾನಿಗಳು ವಾರಕ್ಕೆ ಮೊದಲೇ ಅಲಂಕಾರ ಆರಂಭಿಸಿದ್ದಾರೆ. ಕಟೌಟು, ಬ್ಯಾನರು, ಹಾರ, ಪೋಸ್ಟರು ಹಾಕಿದ್ದಾರೆ. ಎಷ್ಟರ ಮಟ್ಟಿಗೆ ಎಂದರೆ ಹಲವು ಥಿಯೇಟರುಗಳಲ್ಲಿ ಥಿಯೇಟರುಗಳ ಬೋರ್ಡು ಕೂಡಾ ಕಾಣುತ್ತಿಲ್ಲ. ಇದು ಥಿಯೇಟರ್ ಎಂದು ಗೊತ್ತಾಗುವುದು ಅದನ್ನು ಮುಚ್ಚಿರುವ ಪೋಸ್ಟರ್‍ಗಳಿಂದಲೇ.  ಕೃಷ್ಣ ನಿರ್ದೇಶನದ ಚಿತ್ರ ಪೈಲ್ವಾನ್ ಹಬ್ಬವಾಗುತ್ತಿದೆ.

 • ಪೈಲ್ವಾನ್ ಬಜೆಟ್ 45 ಕೋಟಿ..!

  what is pailwan movie budget

  ಕಿಚ್ಚ ಸುದೀಪ್ ತಮ್ಮ ಪೈಲ್ವಾನ್ ಚಿತ್ರದ ಬಜೆಟ್ ಸೀಕ್ರೆಟ್ ಹೊರಹಾಕಿದ್ದಾರೆ. ಅಷ್ಟೇ ಅಲ್ಲ, ತಮ್ಮ ಚಿತ್ರದ ಪೋಸ್ಟರ್, ಫೋಟೋ ಗ್ರಾಫಿಕ್ಸ್ ಸೃಷ್ಟಿ ಎನ್ನುವವರಿಗೂ ಉತ್ತರ ಕೊಟ್ಟಿದ್ದಾರೆ. ಚಿತ್ರದ ಕೆಲವು ಫೋಟೋಗಳನ್ನು ರಿಲೀಸ್ ಮಾಡಿರುವ ಪೈಲ್ವಾನ್ ಚಿತ್ರತಂಡ, ಸುದೀಪ್ ಅವರ ಡೆಡಿಕೇಷನ್ ಏನು ಅನ್ನೋದನ್ನು ಹೇಳಿಕೊಂಡಿದೆ. ಇದನ್ನೂ ಮೀರಿ ಟೀಕೆ ಮಾಡುವವರಿಗೆ ಉತ್ತರ ಕೊಡುವ ಅಗತ್ಯವಿಲ್ಲ ಎಂಬ ಸಂದೇಶವನ್ನೂ ಕೊಟ್ಟಿದೆ ಪೈಲ್ವಾನ್ ಟೀಂ.

  ಅಂದಹಾಗೆ ಕೃಷ್ಣ ನಿರ್ದೇಶನದ ಪೈಲ್ವಾನ್ ಚಿತ್ರದ ಬಜೆಟ್ 45 ಕೋಟಿಯಂತೆ. ಚಿತ್ರ ಫೆಬ್ರವರಿಯಲ್ಲಿ ತೆರೆಗೆ ಬರಲಿದ್ದು, ಈಗಾಗಲೇ 9 ಭಾಷೆಗಳಿಂದ ಚಿತ್ರಕ್ಕೆ 30 ಕೋಟಿ ಡಿಮ್ಯಾಂಡ್ ಬಂದಿದೆಯಂತೆ. ಪೈಲ್ವಾನ್ ಸಿನಿಮಾ, ತೆಲುಗು, ತಮಿಳು, ಮರಾಠಿ, ಬೆಂಗಾಳಿ, ಪಂಜಾಬಿ, ಭೋಜ್‍ಪುರಿಯಲ್ಲೂ ತೆರೆ ಕಾಣುತ್ತಿದೆ. 

 • ಪೈಲ್ವಾನ್ ವಿರುದ್ಧ ಅಪಪ್ರಚಾರಕ್ಕೆ ಕಿಚ್ಚ ಹೇಳಿದ್ದೇನು..?

  sudeep's dignified reaction to negative publicity

  ಕಿಚ್ಚ ಸುದೀಪ್ ಅವರ ಪೈಲ್ವಾನ್ ಅಬ್ಬರಿಸಿ ಬೊಬ್ಬಿರಿಯುತ್ತಿದ್ದರೆ, ಕೆಲವು ಕಿಡಿಗೇಡಿಗಳು ಚಿತ್ರದ ಬಗ್ಗೆ ಅಪಪ್ರಚಾರಕ್ಕೆ ಕೈ ಹಾಕಿದ್ದಾರೆ. ಕನ್ನಡದಲ್ಲಷ್ಟೆ ಅಲ್ಲ, ಹಿಂದಿ, ತಮಿಳು, ತೆಲುಗು, ಮಲಯಾಳಂನಲ್ಲೂ ಪ್ರೇಕ್ಷಕ ಮಹಾಪ್ರಭು ಗೆದ್ದಾ ನೋಡೋ ಪೈಲ್ವಾನ್ ಎನ್ನುತ್ತಿದ್ದಾರೆ. ಆದರೆ, ವಿಘ್ನ ಸಂತೋಷಿಗಳು ಎಲ್ಲೆಲ್ಲೂ ಇರುತ್ತಾರೆ ಅಲ್ವೇ. ಅಂತಹವರು ಸುದೀಪ್ ಅವರಂತಹ ಸ್ಟಾರ್ ನಟರನ್ನೂ ಬಿಟ್ಟಿಲ್ಲ. ಇದಕ್ಕೆಲ್ಲ ನೀವು ಉತ್ತರ ಕೊಡಿ ಎಂದು ಆಗ್ರಹಿಸಿದ ಅಭಿಮಾನಿಗಳಿಗೆ ಸುದೀಪ್ ಹೇಳಿರುವುದು ಇಷ್ಟು.

  `ಚಿತ್ರದ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿರುವವರನ್ನು ಆಡಿಕೊಳ್ಳಲು ಬಿಟ್ಟು ಬಿಡಿ. ಅವರ ಸಂತೋಷ ಅವರಿಗೆ. ಇಷ್ಟಕ್ಕೂ ಅವರು ಯಾಕೆ ನಮ್ಮ ಬಗ್ಗೆ ಅಪಪ್ರಚಾರ ಮಾಡ್ತಾರೆ ಹೇಳಿ.. ನಾವು ಏನನ್ನಾದರೂ ಅದ್ಭುತವಾದದ್ದನ್ನು ಮಾಡಿ ತೋರಿಸಿದಾಗ. ಅವರನ್ನೆಲ್ಲ ಸೈಡಿಗಿಡಿ. ಚಿತ್ರವನ್ನು ಎಂಜಾಯ್ ಮಾಡಿ'

  ಹಲವು ಕಡೆ ಚಿತ್ರಮಂದಿರವೇ ಕಾಣದಷ್ಟು ಬ್ಯಾನರುಗಳು, ಅಭಿಮಾನಿಗಳ ಸಂದೇಶಗಳು ತುಂಬಿಕೊಂಡಿವೆ. ಮತ್ತೊಂದೆಡೆ ಪೈರಸಿ ಕ್ರಿಮಿನಲ್ಸ್ ಕಾಟವೂ ಇದೆ. ಇಷ್ಟೆಲ್ಲ ಇದ್ದರೂ ಚಿತ್ರಮಂದಿರಗಳು ತುಂಬಿ ತುಳುಕುತ್ತಿರುವುದೇ ಪೈಲ್ವಾನ್ ಮಾಡಿರುವ ಅತಿ ದೊಡ್ಡ ಸಾಧನೆ.

 • ಪೈಲ್ವಾನ್‍ಗೆ ಮುಂಬೈ ಮಳೆಯೇ ಪ್ರಾಬ್ಲಂ..!

  mumbai rain disturba pailwan's work

  ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರ ಫೈನಲ್ ಟಚ್ ಹಂತದಲ್ಲಿದೆ. ಪ್ಲಾನ್ ಪ್ರಕಾರ ವರಮಹಾಲಕ್ಷ್ಮಿ ಹಬ್ಬಕ್ಕೆ ಬರುತ್ತಿಲ್ಲ. ಬದಲಿಗೆ ಕಿಚ್ಚನ ಹುಟ್ಟುಹಬ್ಬಕ್ಕೆ ಬರಲಿದೆ. ಸೆಪ್ಟೆಂಬರ್ 2ರಂದು ಸುದೀಪ್ ಹುಟ್ಟುಹಬ್ಬ. ಅದಕ್ಕೆ 3 ದಿನ ಮೊದಲು ಪೈಲ್ವಾನ್ ರಿಲೀಸ್ ಆಗಲಿದೆ. ಕುರುಕ್ಷೇತ್ರ ಚಿತ್ರವೂ ಹಬ್ಬಕ್ಕೆ ಬರುತ್ತಿರುವುದು ಚಿತ್ರವನ್ನು ಮುಂದೂಡಲು ಮತ್ತೊಂದು ಕಾರಣ.

  ಇಷ್ಟಕ್ಕೂ ಪೈಲ್ವಾನ್‍ಗೆ ತೊಡಕಾಗಿರುವುದು ಗ್ರಾಫಿಕ್ಸ್ ಕೆಲಸ. ಗ್ರಾಫಿಕ್ಸ್‍ಗೆ ತೊಡಕಾಗಿರುವುದು ಮುಂಬೈ ಮಳೆ. ಮುಂಬೈನಲ್ಲಿ ಸುರಿಯುತ್ತಿರೋ ಮಳೆಯಿಂದಾಗಿ ಗ್ರಾಫಿಕ್ಸ್ ಕೆಲಸಗಳು ಅಂದುಕೊಂಡಂತೆ ವೇಗವಾಗಿ ಆಗುತ್ತಿಲ್ಲ. ಗ್ರಾಫಿಕ್ಸ್‍ಗೆ ಟ್ರಾಫಿಕ್ ಪ್ರಾಬ್ಲಂ.

  ಹೀಗಾಗಿ ಈಗಲೇ ಇಂಥದ್ದೇ ದಿನ ರಿಲೀಸ್ ಎಂದು ಹೇಳುವುದು ಕಷ್ಟ. ಗ್ರಾಫಿಕ್ಸ್ ಕೆಲಸ ಮುಗಿದ ಮೇಲಷ್ಟೇ ಉಳಿದ ಮಾತು ಎನ್ನುತ್ತಾರೆ ನಿರ್ದೇಶಕ, ನಿರ್ಮಾಪಕ ಕೃಷ್ಣ.

 • ಪೈಲ್ವಾನ್‍ಗೆ ಹಾಲಿವುಡ್ ಸಾಹಸ ನಿರ್ದೇಶಕ

  phailwan gets hollywood stunt master

  ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರಕ್ಕೆ ಹಾಲಿವುಡ್ ಸ್ಟಂಟ್‍ಮಾಸ್ಟರ್ ಬರುತ್ತಿದ್ದಾರೆ. ಕ್ಯಾಪ್ಟನ್ ಅಮೆರಿಕ, ಸಿವಿಲ್ ವಾರ್, ಕಿಕ್ ಬಾಕ್ಸರ್, ಡ್ರ್ಯಾಗನ್ ಐಯ್ಸ್, ದಿ ಹಂಗರ್ ಗೇಮ್ಸ್.. ಮೊದಲಾದ ಸಿನಿಮಾ, ಟಿವಿ ಶೋಗಳ ಸ್ಟಂಟ್ ಡೈರೆಕ್ಟರ್ ಲಾರ್ನೆಲ್ ಸ್ಟೊವೆಲ್, ಪೈಲ್ವಾನ್‍ಗೆ ಸಾಹಸ ನಿರ್ದೇಶನ ಮಾಡಲಿದ್ದಾರೆ.

  ರಾಜಮೌಳಿಯ ಬಾಹುಬಲಿ, ಸಲ್ಮಾನ್ ಖಾನ್‍ರ ಸುಲ್ತಾನ್ ಚಿತ್ರಗಳಿಗೆ ಸ್ಟಂಟ್ ಮಾಸ್ಟರ್ ಆಗಿದ್ದ ಲಾರ್ನೆಲ್, ಅಕ್ಟೋಬರ್‍ನಲ್ಲಿ ನಿರ್ದೇಶಕ ಕೃಷ್ಣ ಜೊತೆಯಾಗಲಿದ್ದಾರೆ. ಅಲ್ಲಿಂದ ತಯಾರಿ ಶುರುವಾಗಲಿದೆ.

 • ಬಂದ ನೋಡು ಪೈಲ್ವಾನ್..

  banda nodo pailwan song

  ಪೈಲ್ವಾನ್ ತೋಳು ನೋಡು ಉಕ್ಕು.. ಒಂದೇ ಏಟು ಸಾಕು.. ದೇವ್ರೇ ನಿಂಗೆ ದಿಕ್ಕು..  ಬಂದ ನೋಡು ಪೈಲ್ವಾನ್..

  ಪೈಲ್ವಾನ್ ಚಿತ್ರದ ಥೀಮ್ ಮ್ಯೂಸಿಕ್ ಇರುವ ಹಾಡಿದು. ಹಾಡಿನ ಲಿರಿಕಲ್ ವಿಡಿಯೋ ರಿಲೀಸ್ ಮಾಡಿ, ಮೊದಲ ಖುಷಿ ಕೊಟ್ಟಿದೆ ಪೈಲ್ವಾನ್ ಟೀಂ. ಪೋಸ್ಟರುಗಳು ಹಾಗೂ ಟೀಸರ್ ಮೂಲಕ ನಿರೀಕ್ಷೆ ಹುಟ್ಟಿಸಿದ್ದ ಪೈಲ್ವಾನ್ ಚಿತ್ರದ ಲಿರಿಕಲ್ ವಿಡಿಯೋ ಭಾರಿ ಸದ್ದು ಮಾಡುತ್ತಿದೆ.

  ಕಿಚ್ಚ ಸುದೀಪ್ ಹುರಿಗಟ್ಟಿದ ದೇಹ ಇಡೀ ಹಾಡಿನಲ್ಲಿ ಎದ್ದು ಕಂಡರೆ, ಬ್ಯಾಕ್‍ಗ್ರೌಂಡ್‍ನಲ್ಲಿ ಭರ್ಜರಿ ಸ್ಕೋರ್ ಮಾಡಿದ್ದಾರೆ ಅರ್ಜುನ್ ಜನ್ಯ. ಮ್ಯೂಸಿಕ್ಕು ಕಿಕ್ಕೇರಿಸುತ್ತಿದೆ ಎನ್ನುವುದು ಅಭಿಮಾನಿಗಳ ಒನ್‍ಲೈನ್ ಕಾಂಪ್ಲಿಮೆಂಟ್.

  ಕೃಷ್ಣ ನಿರ್ದೇಶನದ ಚಿತ್ರದ ಈ ಹಾಡಿಗೆ ಸಾಹಿತ್ಯ ಬರೆದಿರುವುದು ನಾಗೇಂದ್ರ ಪ್ರಸಾದ್. ಇಡೀ ಚಿತ್ರದಲ್ಲಿ ಈ ಹಾಡು ಪದೇ ಪದೇ ಬರಲಿದ್ದು, ಇಡೀ ಚಿತ್ರದ ಥೀಮ್ ಸಾಂಗ್ ಇದು ಎಂದಿದ್ದಾರೆ ನಿರ್ದೇಶಕ ಕೃಷ್ಣ. ಐದೂ ಭಾಷೆಯಲ್ಲಿ ಲಿರಿಕಲ್ ವಿಡಿಯೋ ಬಂದಿದೆ.

 • ಬಾರೋ ಪೈಲ್ವಾನ.. ಹಾಡು ಸೂಪರೋ ಅಣ್ಣಾ

  baro pailwan creates sensation

  ಪೈಲ್ವಾನ್ ಚಿತ್ರದ ಮತ್ತೊಂದು ಸಾಂಗ್ ಇದು. ಬಾರೋ ಪೈಲ್ವಾನ.. ಹಾಡಿದು. ಗೆದ್ದ ಗೆದ್ದ ಕುಸ್ತಿಯ ಗೆದ್ದ ಎದುರಿಲ್ಲ ಈ ಪೈಲ್ವಾನ್‍ಗೆ.. ಎದ್ದ ಮಣ್ಣಲಿ ಎದ್ದ ಎದುರಾದ ಬಿರುಗಾಳಿಗೆ.. ಎಂದು ಶುರುವಾಗುವ ಹಾಡು ತಾರಕಕ್ಕೆ ಹೋಗುವುದು ಬಾರೋ ಪೈಲ್ವಾನ್ ಎಂಬ ಬ್ಯಾಕ್‍ಗ್ರೌಂಡ್ ಸೌಂಡ್ ಶುರುವಾದಾಗ..

  ಇದು ಪೈಲ್ವಾನ್‍ನ ಇಂಟ್ರೊಡಕ್ಷನ್ ಸಾಂಗ್. ಹೆಜ್ಜೆ ಹಾಕಿರೋದು ಸುದೀಪ್ ಒಬ್ಬರೇ ಅಲ್ಲ, ಸುನಿಲ್ ಶೆಟ್ಟಿ ಕೂಡಾ ಸ್ಟೆಪ್ಪು ಹಾಕಿದ್ದಾರೆ. ಐದೂ ಭಾಷೆಯಲ್ಲಿ ಹಾಡಿನ ಲಿರಿಕಲ್ ವಿಡಿಯೋ ಹೊರಬಿದ್ದಿದ್ದು, ಕನ್ನಡವೊಂದರಲ್ಲೇ ಈಗಾಗಲೇ 10 ಲಕ್ಷಕ್ಕೂ ಹೆಚ್ಚು ಮಂದಿ ನೋಡಿ ಮೆಚ್ಚಿದ್ದಾರೆ.

  ಅರ್ಜುನ್ ಜನ್ಯ ಮ್ಯೂಸಿಕ್ಕು ಒನ್ಸ್ ಎಗೇಯ್ನ್ ಕಿಕ್ಕೇರಿಸುತ್ತಿದ್ದರೆ, ವಿಜಯ್ ಪ್ರಕಾಶ್, ಕೈಲಾಷ್ ಖೇರ್ ಮತ್ತು ಚಂದನ್ ಶೆಟ್ಟಿಯವರ ವಾಯ್ಸ್ ಕಿವಿಯಲ್ಲಿ ಮಾರ್ದನಿಸುವಂತಿದೆ. ಸಾಹಿತ್ಯ ಕೃಪೆ ನಾಗೇಂದ್ರ ಪ್ರಸಾದ್ ಅವರದ್ದು.

  ಕೃಷ್ಣ ನಿರ್ದೇಶನದ ಚಿತ್ರಕ್ಕೆ ಅವರ ಪತ್ನಿ ಸ್ವಪ್ನಾ ಕೃಷ್ಣಾ ಅವರೇ ನಿರ್ಮಾಪಕಿ. ಹಾಡಿನ ಜೋಷ್ ಮತ್ತು ಫೋರ್ಸ್ ಬಗ್ಗೆ ಸೆಲಬ್ರಿಟಿಗಳು ಮತ್ತು ಫ್ಯಾನ್ಸ್ ಫಿದಾ ಆಗಿದ್ದಾರೆ. ಅರ್ಜುನ್ ಜನ್ಯಾಗೆ ಹೆಚ್ಚು ಸ್ಕೋರ್ ಕೊಟ್ಟಿದ್ದಾರೆ.

 • ಬೆಂಗಳೂರಲ್ಲೇ ಪೈಲ್ವಾನ್ ಆಡಿಯೋ ಹಬ್ಬ

  oailwan audio release in bangalore

  ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರದ ಆಡಿಯೋ ಬಿಡುಗಡೆ ಇಷ್ಟು ಹೊತ್ತಿಗೆ ಆಗಿ ಹೋಗಿರಬೇಕಿತ್ತು. ಆಡಿಯೋ ರಿಲೀಸ್‍ಗೆ ಚಿತ್ರದುರ್ಗದಲ್ಲಿ ಸಕಲ ವ್ಯವಸ್ಥೆಯನ್ನೂ ಮಾಡಿಕೊಳ್ಳಲಾಗಿತ್ತು. ವರಮಹಾಲಕ್ಷ್ಮಿ ಹಬ್ಬದ ದಿನವೇ ಆಗಬೇಕಿದ್ದ ಕಾರ್ಯಕ್ರಮವನ್ನು ಕೊನೆ ಕ್ಷಣದಲ್ಲಿ ರದ್ದು ಪಡಿಸಲಾಗಿತ್ತು. ಕಾರಣ, ಕರ್ನಾಟಕ ಹಿಂದೆಂದೂ ಕಂಡು ಕೇಳರಿಯದ ಪ್ರವಾಹ. ಇಡೀ ರಾಜ್ಯ ಕಷ್ಟದಲ್ಲಿರುವಾಗ ಆಡಿಯೋ ರಿಲೀಸ್ ಸರಿಯಲ್ಲ ಎಂದುಕೊಂಡು ಕಾರ್ಯಕ್ರಮ ಮುಂದೂಡಿದ್ದರು.

  ಈಗ ಚಿತ್ರತಂಡ ಆಡಿಯೋ ರಿಲೀಸ್‍ನ್ನು ಬೆಂಗಳೂರಿನಲ್ಲೇ ಮಾಡಲು ಪ್ಲಾನ್ ಮಾಡಿಕೊಂಡಿದೆ. ಬಹುಶಃ ಆಗಸ್ಟ್ 18ರಂದು ಆಡಿಯೋ ರಿಲೀಸ್ ಆಗಬಹುದು.

  ಚಿತ್ರದುರ್ಗದ ಆಡಿಯೋ ರಿಲೀಸ್ ಕಾರ್ಯಕ್ರಮಕ್ಕೆ ಎಲ್ಲವೂ ಫಿಕ್ಸ್ ಆಗಿತ್ತು. ಅತಿಥಿಯಾಗಿ ಪುನೀತ್ ರಾಜ್‍ಕುಮಾರ್ ಬರಬೇಕಿತ್ತು. ಕಲಾವಿದರೂ ಡೇಟ್ಸ್ ಹೊಂದಿಸಿಕೊಂಡಿದ್ದರು. ಈಗ ಬೆಂಗಳೂರಿನಲ್ಲಿ ನಡೆದರೆ, ಮತ್ತೆ ಎಲ್ಲವನ್ನೂ ಮೊದಲಿನಿಂದಲೇ ಪ್ಲಾನ್ ಮಾಡಬೇಕು. ನಿರ್ದೇಶಕ ಕೃಷ್ಣ, ಸುದೀಪ್, ನಿರ್ಮಾಪಕಿ ಸ್ವಪ್ನಾ ಕೃಷ್ಣ ಈ ಕುರಿತು ಮಾತುಕತೆ ನಡೆಸುತ್ತಿದ್ದಾರೆ.

 • ಮುಚ್ಚಿದ್ದ ಥಿಯೇಟರ್ ಓಪನ್ ಮಾಡಿಸಿದ ಪೈಲ್ವಾನ್..!

  pailwan brings good news to kannada film industry

  ಕರ್ನಾಟಕದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಹಲವು ಚಿತ್ರಮಂದಿರಗಳು ಬಾಗಿಲು ಮುಚ್ಚಿವೆ. ಥಿಯೇಟರ್ ಜಾಗ ಮಾಲ್ಗಳಾಗಿವೆ. ಮಲ್ಟಿಪ್ಲೆಕ್ಸುಗಳಾಗಿವೆ. ಅತ್ತ ಗ್ರಾಮೀಣ ಪ್ರದೇಶಕ್ಕೆ ಹೋದರೆ.. ಅಲ್ಲಿ ಇನ್ನೊಂದು ಸಮಸ್ಯೆ. ಕೆಲವು ಚಿತ್ರಮಂದಿರಗಳು ಬೇರೇನೂ ಮಾಡಲು ಸಾಧ್ಯವಾಗದೆ ಬಾಗಿಲು ಮುಚ್ಚುತ್ತಿವೆ. ಗಡಿ ಭಾಗದಲ್ಲಿ ಕನ್ನಡ ಚಿತ್ರಗಳಿಗೆ ಥಿಯೇಟರುಗಳೇ ಸಿಗುತ್ತಿಲ್ಲ. ಈ ಎಲ್ಲ ಸಮಸ್ಯೆಗಳಿಗೂ ಪೈಲ್ವಾನ್ ಉತ್ತರ ಕೊಟ್ಟಿದೆ.

  ಗ್ರಾಮೀಣ ಭಾಗದಲ್ಲಿ ಮುಚ್ಚಲ್ಪಟ್ಟಿದ್ದ ಕೆಲವು ಚಿತ್ರಮಂದಿರಗಳು ಪೈಲ್ವಾನ್ ಚಿತ್ರಕ್ಕಾಗಿ ರೀ-ಓಪನ್ ಆಗಿವೆ. ಈ ಸಿಹಿ ಸುದ್ದಿ ಹಂಚಿಕೊಂಡಿದ್ದಾರೆ ವಿತರಕ ಕಾರ್ತಿಕ್ ಗೌಡ. ಹೈದರಾಬಾದ್ ಕರ್ನಾಟಕ, ಕೋಲಾರದಲ್ಲಿ ಕೆಲವು ಚಿತ್ರಮಂದಿರಗಳು ಪೈಲ್ವಾನನಿಗಾಗಿ ಮತ್ತೆ ಬಾಗಿಲು ತೆರೆದಿವೆ. ಅದರಲ್ಲೂ ಗ್ರಾಮೀಣ ಪ್ರದೇಶಧ ‘ಸಿ' ಸೆಂಟರ್ ಟಾಕೀಸುಗಳು ಮತ್ತೆ ಪ್ರದರ್ಶನ ಆರಂಭಿಸಿವೆ.

  ಪೈಲ್ವಾನ್ ಮಾದರಿಯ ಇನ್ನೂ ಹಲವು ಚಿತ್ರಮಂದಿರಗಳು ಬಂದರೆ ಚಿತ್ರರಂಗಕ್ಕೆ ಖಂಡಿತಾ ಶುಭ ಸೂಚನೆಯಾಗಲಿದೆ. ಪೈಲ್ವಾನ್ 5 ಭಾಷೆಗಳಲ್ಲಿ ಏಕಕಾಲಕ್ಕೆ ರಿಲೀಸ್ ಆಗಿದ್ದು, 3000ಕ್ಕೂ ಹೆಚ್ಚು ಸೆಂಟರ್ನಲ್ಲಿ ಶೋ ಇವೆ. ಸ್ವಪ್ನಾ ಕೃಷ್ಣ ನಿರ್ಮಾಣದ ಪೈಲ್ವಾನ್ಗೆ ಹೆಬ್ಬುಲಿ ಕೃಷ್ಣ ನಿರ್ದೇಶಕ.

 • ಮೊದಲ ದಿನವೇ 10 ಕೋಟಿ ಕ್ಲಬ್ ಸೇರಿದ ಪೈಲ್ವಾನ್

  pailwan joins 10 crore club on first day itself

  5 ಭಾಷೆಗಳಲ್ಲಿ ರಿಲೀಸ್ ಆಗಿ ಎಲ್ಲೆಡೆಯಿಂದ ಮೆಚ್ಚುಗೆ ಸ್ವೀಕರಿಸುತ್ತಿರುವ ಸಿನಿಮಾ ಪೈಲ್ವಾನ್. ಕ್ಲಾಸ್ ಮತ್ತು ಮಾಸ್.. ಎರಡೂ ವರ್ಗದ ಪ್ರೇಕ್ಷಕರಿಂದ ಹಾಗೂ ವಿಮರ್ಶಕರಿಂದ ಏಕಕಾಲಕ್ಕೆ ಶಹಬ್ಬಾಸ್ ಎನಿಸಿಕೊಂಡಿರುವ ಪೈಲ್ವಾನ್ ಮೊದಲ ದಿನವೇ ಭರ್ಜರಿ ಕಲೆಕ್ಷನ್ ಮಾಡಿದೆ. 10 ಕೋಟಿ ಕ್ಲಬ್ ಸೇರಿದೆ.

  ಇದು ಕನ್ನಡದ ಮಟ್ಟಿಗೆ ದಾಖಲೆಯೇ ಸರಿ. ಆದರೆ, ಮೊದಲ ದಿನದ ಅತೀ ಹೆಚ್ಚು ಕಲೆಕ್ಷನ್ ದಾಖಲೆ ಈಗಲೂ ಸುದೀಪ್-ಶಿವಣ್ಣ ನಟಿಸಿದ್ದ ದಿ ವಿಲನ್ ಚಿತ್ರದ ಹೆಸರಲ್ಲಿಯೇ ಇದೆ. ಅದು ಫಸ್ಟ್ ಡೇ 20 ಕೋಟಿ ಕಲೆಕ್ಷನ್ ಮಾಡಿತ್ತು.

  ಕಲೆಕ್ಷನ್ ಭರ್ಜರಿಯಾಗಿ ಆಗಿದೆ ಎನ್ನುವುದು ಸತ್ಯ. ಆದರೆ ಎಷ್ಟು ಎನ್ನುವುದನ್ನು ಈಗಲೇ ಹೇಳುವುದು ಸಾಧ್ಯವಿಲ್ಲ. ಪಕ್ಕಾ ಲೆಕ್ಕ ಸಿಗೋಕೆ ಇನ್ನೂ ಟೈಂ ಬೇಕು. ಎಲ್ಲ ಭಾಷೆಗಳಲ್ಲೂ ಪಾಸಿಟಿವ್ ರಿಯಾಕ್ಷನ್ ಸಿಕ್ಕಿದೆ. ಒಂದು ವಾರ ಹೀಗೆಯೇ ಕಂಟಿನ್ಯೂ ಆದರೆ, ಹಾಕಿದ ಬಂಡವಾಳ ನಮ್ಮ ಕೈ ಸೇರಲಿದೆ ಎಂದಿದ್ದಾರೆ ನಿರ್ದೇಶಕ ಕೃಷ್ಣ. ಚಿತ್ರಕ್ಕೆ ಅವರ ಪತ್ನಿ ಸ್ವಪ್ನಾ ಕೃಷ್ಣ ಅವರೇ ನಿರ್ಮಾಪಕಿ.

  ಅಂದಹಾಗೆ ಪೈಲ್ವಾನ್ ಚಿತ್ರಕ್ಕೆ ಸುಮಾರು 45 ಕೋಟಿ ಖರ್ಚಾಗಿದೆಯಂತೆ.

   

 • ರಕ್ತಬೀಜಾಸುರ ಪೈರಸಿ ವಿರುದ್ಧ ಪೈಲ್ವಾನ್ ಮಹಾಯುದ್ಧ

  pailwan movie producer files complaint against piracy criminals

  ಪೈರಸಿ ಕಾಟ ಸಿನಿಮಾ ರಂಗಕ್ಕೆ ಹೊಸದೇನಲ್ಲ. ಆದರೆ ಪೈಲ್ವಾನ್ ಎದುರಿಸುತ್ತಿರುವುದು ಅತಿ ದೊಡ್ಡ ಪೈರಸಿ ಯುದ್ಧ. ಎಷ್ಟರಮಟ್ಟಿಗೆ ಎಂದರೆ ಸಿನಿಮಾ ರಿಲೀಸ್ ಆದ ದಿನವೇ ರಾತ್ರಿ ಹೊತ್ತಿಗೆ 3 ಭಾಷೆಗಳಲ್ಲಿ ಪೈಲ್ವಾನ್ ಲೀಕ್ ಆಗಿತ್ತು. ಒನ್ಸ್ ಎಗೇಯ್ನ್ ಖಳನಾಯಕ ತಮಿಳು ರಾಕರ್ಸ್.

  ಇಷ್ಟಕ್ಕೂ ಇದನ್ನು ರಕ್ತಬೀಜಾಸುರ ಎಂದು ಕರೆದಿದ್ದಕ್ಕೆ ಕಾರಣವೂ ಇದೆ. ಇದುವರೆಗೆ ಪೈಲ್ವಾನ್ ಚಿತ್ರವನ್ನು ಅಪ್‍ಲೋಡ್ ಮಾಡಿದ್ದ 300ಕ್ಕೂ ಹೆಚ್ಚು ಲಿಂಕ್‍ಗಳನ್ನು ಡಿಲೀಟ್ ಮಾಡಲಾಗಿದೆ. ಕೋಟಿ ಕೋಟಿ ಸುರಿದು ಚಿತ್ರ ನಿರ್ಮಿಸಿದವರು ಪೈರಸಿ ವಿರುದ್ಧ ಹೋರಾಡಲೇಬೇಕಾದ ಅನಿವಾರ್ಯತೆ ಇದೆ.

  ಪೈರಸಿ ತಡೆಗಾಗಿ ಇಷ್ಟೆಲ್ಲ ಕ್ರಮ ಕೈಗೊಂಡಿದ್ದರೂ ಪೊಲೀಸರಿಗೂ ದೂರು ಕೊಟ್ಟಿದ್ದಾರೆ ನಿರ್ಮಾಪಕಿ ಸ್ವಪ್ನಾ ಕೃಷ್ಣ. ಅಷ್ಟೇ ಅಲ್ಲ, ಸೋಷಿಯಲ್ ಮೀಡಿಯಾದಲ್ಲಿ ನಡೆಯುತ್ತಿರುವ ಕೆಟ್ಟ ಯುದ್ಧಕ್ಕೂ ಫುಲ್ ಸ್ಟಾಪ್ ಇಡುವ ಪ್ರಯತ್ನ ಮಾಡಿದ್ದಾರೆ.

  `ದರ್ಶನ್ ಅಭಿಮಾನಿಗಳಿಗೂ ಸಿನಿಮಾ ಲೀಕ್ ಆಗಿದ್ದಕ್ಕೂ ಸಂಬಂಧವಿಲ್ಲ. ಪೈರಸಿ ಮಾಡಿದವರು ದರ್ಶನ್ ಅಭಿಮಾನಿಗಳಲ್ಲ' ಎಂದು ಸ್ಪಷ್ಟನೆ ಕೊಟ್ಟಿರುವ ಸ್ವಪ್ನಾ ಕೃಷ್ಣ, ಸೈಬರ್ ಪೊಲೀಸರಿಗೆ ದೂರನ್ನೂ ಕೊಟ್ಟಿದ್ದಾರೆ.

 • ಶೂಟಿಂಗ್..ವರ್ಕೌಟ್.. ಶೂಟಿಂಗ್..ವರ್ಕೌಟ್.. ಶೂಟಿಂಗ್..ವರ್ಕೌಟ್..

  pailwan is a result of hardwork

  ಪೈಲ್ವಾನ್, ಕಿಚ್ಚ ಸುದೀಪ್ ಬಹಳ ಇಷ್ಟಪಟ್ಟು, ಅದಕ್ಕೆ ತಕ್ಕಂತೆ ಕಷ್ಟವನ್ನೂ ಪಟ್ಟು ನಟಿಸಿರುವ ಬಹುನಿರೀಕ್ಷಿತ. ಇಡೀ ಇಂಡಿಯಾದಲ್ಲಿ ತೆರೆ ಕಾಣ್ತಿರೋ ಈ ಚಿತ್ರ ನಟನಾಗಿ ಸುದೀಪ್ ಅವರಿಗೆ ಸವಾಲೂ ಹೌದು. ನಿರ್ದೇಶಕ ಕೃಷ್ಣ, ಚಿತ್ರದ ಕಥೆಯನ್ನು ಸುದೀಪ್ ಅವರಿಗೆ ಹೇಳಿದಾಗ ಈ ಕಥೆಯನ್ನು ಮತ್ತೊಮ್ಮೆ ನನಗೆ ತರಬೇಡ ಎಂದು ಕಳಿಸಿದ್ದರಂತೆ ಕಿಚ್ಚ. ಆದರೆ, ಕೃಷ್ಣ ಹೋದ ಮೇಲೆ ಯಾಕೆ ಮಾಡಬಾರದು ಎಂದು ಯೋಚನೆ ಮಾಡಿದರಂತೆ. ಮತ್ತೆ ಕೃಷ್ಣ ಅವರನ್ನು ಕರೆಸಿಕೊಂಡರಂತೆ.

  ಕೃಷ್ಣ ಬಳಿ ಸುದೀಪ್ ಹಾಕಿದ್ದು ಒಂದೇ ಕಂಡೀಷನ್. ನಾನು ಹಾರ್ಡ್‍ವರ್ಕ್ ಮಾಡುತ್ತೇನೆ, ನೀವು ಸಾಥ್ ಕೊಡಬೇಕು. ಇಡೀ ಸಿನಿಮಾದ ಶೂಟಿಂಗ್ ಬೇರೆ ಕಡೆ ಆಗಬೇಕು. ಶೂಟಿಂಗ್.. ವರ್ಕೌಟ್.. ಶೂಟಿಂಗ್.. ವರ್ಕೌಟ್.. ಇಷ್ಟೇ ಇರಬೇಕು. ಚಿತ್ರೀಕರಣದ ಜಾಗಕ್ಕೆ ಯಾರೂ ಬರಬಾರದು. ಬೆಳಗ್ಗೆ 6ಕ್ಕೆ ಶೂಟಿಂಗ್ ಶುರುವಾಗಲೇಬೇಕು. ಹೀಗೆ ಷರತ್ತು ವಿಧಿಸಿಯೇ ಬೆವರು ಸುರಿಸಲು ಶುರು ಮಾಡಿದರು.

  ನಾನೊಬ್ಬನೇ ಅಲ್ಲ, ಇಡೀ ಚಿತ್ರತಂಡ ನನ್ನೊಂದಿಗೆ ಕಷ್ಟಪಟ್ಟಿದೆ. ನಾವು ಪಟ್ಟ ಕಷ್ಟ, ಚಿತ್ರದ ಎರಡು ಪೋಸ್ಟರ್, ಟೀಸರ್‍ನಲ್ಲಿ ಕಾಣಿಸ್ತಿದೆ. ಚಿತ್ರದ ಕ್ವಾಲಿಟಿ ಚೆನ್ನಾಗಿದೆ ಎಂದು ವಿಶ್ವಾಸದಿಂದ ಹೇಳುತ್ತಾರೆ ಸುದೀಪ್.

 • ಸ್ಟಾರ್ ನಟ, ನಿರ್ದೇಶಕರು ಕೇಳಿದ್ದು.. ಕಿಚ್ಚ ಹೇಳಿದ್ದು..

  stars asks, sudeep reacts, ask pailwan

  ಸುದೀಪ್ ತಮ್ಮ ಪೈಲ್ವಾನ್ ಬಿಡುಗಡೆಗೆ ಪ್ರಚಾರದಲ್ಲಿ ಮಗ್ನರಾಗಿದ್ದಾರೆ. ಹೀಗಿರುವಾಗಲೇ ಸುದೀಪ್ ಅವರಿಗೆ ಪ್ರಶ್ನೆ ಕೇಳಲು ಕಾತುರಗೊಂಡಿದ್ದವರಿಗೆ ಸೋಷಿಯಲ್ ಮೀಡಿಯಾದ ಮೂಲಕವೇ ಸಿಕ್ಕಿದ್ದಾರೆ. ಸ್ಟಾರ್ ನಟರು, ನಿರ್ದೇಶಕರು ಸುದೀಪ್ ಅವರಿಗೆ ಕೇಳಿದ ಪ್ರಶ್ನೆ ಮತ್ತು ಆ ಎಲ್ಲ ಪ್ರಶ್ನೆಗಳಿಗೆ ಸುದೀಪ್ ನೀಡಿರುವ ಉತ್ತರ ಇಲ್ಲಿದೆ.

  ರಕ್ಷಿತ್ ಶೆಟ್ಟಿ : ನಿಮ್ಮ ವರ್ಕೌಟ್ ಮತ್ತು ಡಯಟ್ ಪ್ಲಾನ್ ಹಂಚಿಕೊಳ್ಳಬಹುದಾ..?

  ಸುದೀಪ್ ; ಹಾಯ್ ರಕ್ಷಿತ್, ಬರೀ ಕಥೆ ಬರೆಯೋದ್ರಲ್ಲಿ, ಅವನೇ ಶ್ರೀಮನ್ನಾರಾಯಣ ಸಂಭಾಷಣೆ ಇಂಪ್ರೂವ್ ಮಾಡೋದು, 777 ಚಾರ್ಲಿ ಆ್ಯಕ್ಟಿಂಗ್ ಮಾಡ್ಕೊಂಡ್ ಇದ್ರೆ ಹೇಗೆ..? ಮೊದಲು ಜಿಮ್‍ಗೆ ಹೋಗಬೇಕು, ಉಳಿದದ್ದು ನಂತರ ಹೇಳ್ತೇನೆ

  ಸಿಂಪಲ್ ಸುನಿ : ನಿಮಗೆ ಕಿಚ್ಚ ಸುದೀಪ್ ಎಂದು ಕರೆದರೋ ಇಷ್ಟಾನೋ.. ಪೈಲ್ವಾನ್ ಸುದೀಪ್ ಎಂದು ಕರೆದರೆ ಇಷ್ಟಾನೋ..?

  ಸುದೀಪ್ : ನಿಮ್ಮ ಕನ್ನಡದ ಟ್ವೀಟ್‍ಗಳು ನನಗಿಷ್ಟ. ಪ್ರೀತಿಯಿಂದ ಹೇಗೆ ಕರೆದರೂ ಇಷ್ಟವಾಗುತ್ತೆ.

  ರಿಷಬ್ ಶೆಟ್ಟಿ : ಪೈಲ್ವಾನ್ ಕಥೆ ಕೇಳಿದಾಗ ಯಾವ ವಿಷಯ ಎಕ್ಸೈಟಿಂಗ್ ಎನಿಸಿತು. ಒನ್‍ಲೈನ್‍ನಲ್ಲಿ ಹೇಳ್ತಿರಾ..?

  ಸುದೀಪ್ : ಅದನ್ನು ನಾನು ನಿಮ್ಮ ಬಳಿಯೇ ಕಲಿಯಬೇಕು. ದೊಡ್ಡ ದೊಡ್ಡ ವಿಷಯವನ್ನು ಚಿಕ್ಕದಾಗಿ ಹೇಳ್ತೀರಿ. ಚಿಕ್ಕದಾಗಿ ಹೇಳೋದು ಹೇಗೆ ಅನ್ನೋದನ್ನ ನಿಮ್ಮ ಬಳಿಯೇ ಕಲಿಯಬೇಕು.

  ಕಾರ್ತಿಕ್ ಗೌಡ : ಕುಸ್ತಿ ಇಷ್ಟವೋ..? ಬಾಕ್ಸಿಂಗ್ ಇಷ್ಟವೋ..?

  ಸುದೀಪ್ : ಯಾಕೆ ನೆನಪಿಸಿ ನೆನಪಿಸಿ ಗಾಯದ ಮೇಲೆ ಬರೆ ಎಳೆಯುತ್ತೀರಿ. ಶೂಟಿಂಗ್ ಶುರುವಾಗುವ ಮುನ್ನ ಎರಡರ ಮೇಲೂ ಆಸಕ್ತಿ ಇತ್ತು. ಆದರೆ, ಶೂಟಿಂಗ್ ಶುರುವಾದ ಮೇಲೆ ಮುಗಿದರೆ ಸಾಕಪ್ಪಾ ಎನ್ನುವಂತಾಗಿ ಹೋಯ್ತು.

  ಸ್ವಪ್ನಾ ಕೃಷ್ಣ : ನಿಮ್ಮ ಪ್ರಕಾರ ಪೈಲ್ವಾನ್ ಯಾರು..?

  ಸುದೀಪ್ : ಪ್ರಾಜೆಕ್ಟ್ ಶುರುವಾದಾಗ ನಾನೇ ಪೈಲ್ವಾನ್ ಆಗಿದ್ದೆ. ಚಿತ್ರೀಕರಣ ಶುರುವಾದ ಮೇಲೆ ನಿರ್ಮಾಪಕರು ಪೈಲ್ವಾನ್ ಎನಿಸಿತು. ನಂತರ ಅರ್ಜುನ್ ಜನ್ಯಾ ಮತ್ತು ವಿತರಕರು ಪೈಲ್ವಾನ್ ರೀತಿ ಕಾಣಿಸಿದ್ರು. ಈಗ ಪ್ರೇಕ್ಷಕರು ಪೈಲ್ವಾನ್ ಎನಿಸುತ್ತಿದೆ.

  ಅಭಿಮಾನಿ : ಕ್ರಿಕೆಟ್ ಆಟಗಾರರ ಬಯೋಪಿಕ್ ಮಾಡುವ ಅವಕಾಶ ಬಂದರೆ ಯಾವ ಆಟಗಾರನ ಪಾತ್ರದಲ್ಲಿ ನಟಿಸಲು ಇಷ್ಟಪಡುತ್ತೀರಿ..?

  ಸುದೀಪ್ : ರಾಹುಲ್ ದ್ರಾವಿಡ್ ಮತ್ತು ಅನಿಲ್ ಕುಂಬ್ಳೆ.

  ಪ್ರಿಯಾ ಸುದೀಪ್ : ಹಲೋ ಬ್ಯುಸಿ ಹಸ್ಬೆಂಡ್.. ಮನೆಗೆ ಯಾವಾಗ ಬರುತ್ತೀರಿ..?

  ಸುದೀಪ್ : ಶೀಘ್ರದಲ್ಲೇ ಬರುತ್ತೇನೆ. ಸದ್ಯಕ್ಕೆ ದಬಾಂಗ್-3ಗಾಗಿ ಸಲ್ಮಾನ್ ಖಾನ್ ವಶದಲ್ಲಿದ್ದೇನೆ. ಅವರು ಕಳಿಸಿದ ಕೂಡಲೇ ಬರುತ್ತೇನೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery