` krishna dop, - chitraloka.com | Kannada Movie News, Reviews | Image

krishna dop,

  • 'Pailwan' Ready To Serve

    pailwan ready to serve

    Sudeep starrer 'Pailwan' is almost complete and director Krishna has confirmed that it is ready to serve. The film is already scheduled to release on the Varamahalakshmi festival day across India in various languages simultaneously.

    Krishna took to his twitter account today morning and has announced that the 

    film is ready. 'Meal's ready. Garnishing is done. What's left is to put it on a platter and serve. Enjoying every bit of this process. Great feeling. My journey from being a DOP, becoming a director and turn producer is the biggest and the most beautiful journey. I owe to all' tweeted Krishna.

    'Pailwan' is being produced by Swapna Krishna and written and directed by S Krishna. Karunakar is the cameraman, while Arjun Janya is the music director. Akanksha Singh is the heroine, while Kabir Singh Duhan, Chikkanna, Sunil Shetty and others play prominent roles in the film.

  • 'Pailwan' To Release On Varamahalakshmi Festival

    pailwan to release on varamahalakshmi festival

    The shooting of Sudeep starrer 'Phailwan' is complete and the post-production of the film is in full progress. Meanwhile, the team has decided to release the festival on the auspicious day of Varmahalakshmi festival day.

    'Phailwan' is being produced by Swapna Krishna and written and directed by S Krishna. Karunakar is the cameraman, while Arjun Janya is the music director. Akanksha Singh is the heroine, while Kabir Singh Duhan, Chikkanna, Sunil Shetty and others play prominent roles in the film.

    Meanwhile, there is also news that Shivarajakumar starrer 'Anand' being produced by Dwarkish and directed by P Vasu and Murali starrer 'Bharaate' will also be releasing on the same day.

  • 'Pailwan' Trailer On August 22nd

    pailwan trailer on august 22nd

    The songs of Sudeep starrer 'Phailwan' was released recently and now the trailer of the film is all set to be released at 1 PM tomorrow..

    Producer Swapna Krishna has announced in her Twitter account that the trailer of the film will be releasing on Thursday. Not only the Kannada version, but all the languages will be released simultaneously in You Tube tomorrow.

    'Phailwan' stars Sudeep, Akanksha Singh, Kabir Singh Duhan, Chikkanna, Sunil Shetty and others. The film is being produced by Swapna Krishna and written and directed by S Krishna. Karunakar is the cameraman, while Arjun Janya is the music director.

     

  • 2500 ಸ್ಕ್ರೀನ್.. ಇದು ಪೈಲ್ವಾನನ ಅಖಾಡ

    pailwan film will release in 2500 screens

    ಪ್ರೇಕ್ಷಕರ ಅಖಾಡಕ್ಕೆ ಧುಮುಕಲು ಸಿದ್ಧನಾಗಿರೋ ಪೈಲ್ವಾನ್, ಅಖಾಡಕ್ಕಿಳಿಯುತ್ತಿರೋದು ಆಗಸ್ಟ್ 8ಕ್ಕೆ. ವರಮಹಾಲಕ್ಷ್ಮಿ ಹಬ್ಬಕ್ಕೆ. ಆ ದಿನ ಪೈಲ್ವಾನ್ ಹೊಸ ದಾಖಲೆ ಬರೆಯಲಿದ್ದಾರೆ. 2500ಕ್ಕೂ ಹೆಚ್ಚು ಸ್ಕ್ರೀನ್‍ಗಳಲ್ಲಿ ಅಬ್ಬರಿಸಲಿದ್ದಾನೆ.

    ಸುದೀಪ್ ಈ ಚಿತ್ರಕ್ಕಾಗಿ ಹರಿಸಿರುವ ಬೆವರು ಸ್ವಲ್ಪ ಮಟ್ಟದಲ್ಲ. ಸುದೀಪ್ ಇಡೀ ಚಿತ್ರಕ್ಕೆ ತಮ್ಮನ್ನು ತಾವು ಸಮರ್ಪಿಸಿಕೊಂಡಿದ್ದಾರೆ. ಕೃಷ್ಣ ನಿರ್ದೇಶನದ ಜೊತೆಗೆ ನಿರ್ಮಾಣದ ಹೊಣೆಯನ್ನೂ ಹೊತ್ತಿದ್ದಾರೆ.

    ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿಯಲ್ಲಿ ರಿಲೀಸ್ ಆಗುತ್ತಿದೆ ಪೈಲ್ವಾನ್. ಸುನಿಲ್ ಶೆಟ್ಟಿ ಇನ್ನೊಂದು ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೆ, ಆಕಾಂಕ್ಷಾ ಸಿಂಗ್ ಚಿತ್ರದ ನಾಯಕಿ. 

  • 3000+ ಥಿಯೇಟರುಗಳಲ್ಲಿ ಪೈಲ್ವಾನ್

    pailwan to release in 3000 plus theaters

    ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ರಿಲೀಸ್ ಆಗುತ್ತಿರುವುದು ಸೆಪ್ಟೆಂಬರ್ 12ಕ್ಕೆ. ಟ್ರೇಲರ್, ಹಾಡು ರಿಲೀಸ್ ಆಗಿದ್ದು ದೊಡ್ಡ ಹವಾ ಎಬ್ಬಿಸಿದೆ. ಹೆಬ್ಬುಲಿ ಕೃಷ್ಣ ನಿರ್ದೇಶನದ ಚಿತ್ರಕ್ಕೆ ಹಂಚಿಕೆದಾರರಿಂದಲೇ ಡಿಮ್ಯಾಂಡ್ ಬಂದಿದೆ. ಅದರಲ್ಲೂ ಹಿಂದಿ ಭಾಷೆಯ ಥಿಯೇಟರ್ ಮಾಲೀಕರು ಸ್ವತಃ ಪೈಲ್ವಾನ್ ಚಿತ್ರವನ್ನು ನಮಗೆ ಕೊಡಿ ಎಂದು ಕೇಳುತ್ತಿದ್ದಾರೆ. 

    ಉತ್ತರ ಭಾರತದಲ್ಲಿಯೇ 1500ಕ್ಕೂ ಹೆಚ್ಚು ಥಿಯೇಟರ್ಸ್, ಆಂಧ್ರದಲ್ಲಿ 300+, ತಮಿಳಿನಲ್ಲಿ 200+, ಕೇರಳದಲ್ಲಿ 100+ ಥಿಯೇಟರುಗಳಲ್ಲಿ ಪೈಲ್ವಾನ್ ರಿಲೀಸ್ ಆಗಲಿದೆ. ಜಗತ್ತಿನಾದ್ಯಂತ ಒಂದೇ ದಿನ 3000ಕ್ಕೂ ಹೆಚ್ಚು ಸೆಂಟರುಗಳಲ್ಲಿ ಸಿನಿಮಾ ರಿಲೀಸ್ ಮಾಡಲಿದ್ದೇವೆ ಎಂದಿದ್ದಾರೆ ನಿರ್ದೇಶಕ ಕೃಷ್ಣ.

    ಕನ್ನಡದಲ್ಲಿ ಕೆಆರ್‍ಜಿ ಸ್ಟುಡಿಯೋ, ತೆಲುಗಿನಲ್ಲಿ ವಾರಾಹಿ, ತಮಿಳಿನಲ್ಲಿ ವೈಎನ್‍ಓಟಿಎಕ್ಸ್ ಮಾರ್ಕೆಟಿಂಗ್ & ಡಿಸ್ಟ್ರಿಬ್ಯೂಷನ್, ಮಲಯಾಳಂನಲ್ಲಿ ಪಲ್ಲವಿ ರಿಲೀಸ್, ಹಿಂದಿಯಲ್ಲಿ ಜೀ ಸ್ಟುಡಿಯೋಸ್ ಸಿನಿಮಾ ವಿತರಣೆ ಹಕ್ಕು ಪಡೆದುಕೊಂಡಿವೆ.

    ಸುದೀಪ್ ಜೊತೆ ಸುನಿಲ್ ಶೆಟ್ಟಿ, ಆಕಾಂಕ್ಷಾ ಸಿಂಗ್ ಪ್ರಧಾನ ಪಾತ್ರದಲ್ಲಿದ್ದು, ಸ್ವಪ್ನಾ ಕೃಷ್ಣ ಈ ಚಿತ್ರದ ಮೂಲಕ ಮೊದಲ ಬಾರಿಗೆ ಸಿನಿಮಾ ನಿರ್ಮಾಪಕಿಯಾಗಿದ್ದಾರೆ.

  • 4 ಭಾಷೆಗಳಲ್ಲಿ ಕಿಚ್ಚನದ್ದೇ ಡಬ್ಬಿಂಗ್ : ಇಷ್ಟವಾಗಿದ್ದು ಯಾವುದು..? ಕಷ್ಟವಾಗಿದ್ದು ಯಾವುದು..?

    sudeep dubs in four languages for pailwan

    ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಇದೇ ವಾರ ತೆರೆ ಕಾಣುತ್ತಿದೆ. ಕೃಷ್ಣ ನಿರ್ದೇಶನದ ಚಿತ್ರದಲ್ಲಿ ಆಕಾಂಕ್ಷಾ ಸಿಂಗ್ ನಾಯಕಿ. ಸುನಿಲ್ ಶೆಟ್ಟಿ, ಕಿಚ್ಚನ ಗುರುವಾಗಿ ನಟಿಸಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲಿ ಏಕಕಾಲಕ್ಕೆ ಜಗತ್ತಿನಾದ್ಯಂತ ತೆರೆ ಕಾಣ್ತಿದೆ ಪೈಲ್ವಾನ್. ಈ 5 ಭಾಷೆಗಳಲ್ಲಿ ನಾಲ್ಕರಲ್ಲಿ ಸುದೀಪ್ ಅವರೇ ಡಬ್ ಮಾಡಿದ್ದಾರೆ.

    ಕನ್ನಡದಲ್ಲಿ ಡಬ್ಬಿಂಗ್ ಸುಲಭ. ಕಾರಣ ಅದು ನಮ್ಮ ಭಾಷೆ. ಏಕಾಗ್ರತೆ ಸುಲಭ. ಡೈಲಾಗ್‍ನ್ನು ಇಂಪ್ರೂವ್ ಮಾಡುತ್ತಲೇ ಹೋಗಬಹುದು ಎನ್ನುವ ಸುದೀಪ್‍ಗೆ ತಮಿಳು, ತೆಲುಗು ಕಷ್ಟವೇನೂ ಆಗಲಿಲ್ಲ.

    ತುಂಬಾ ಕಷ್ಟವಾಗಿದ್ದು ಹಿಂದಿ ಡಬ್ಬಿಂಗ್. ಹಿಂದಿ ಗೊತ್ತಿದ್ದರೂ ಡಬ್ ಮಾಡುವಾಗ ಕಷ್ಟ ಪಟ್ಟೆ ಎನ್ನುವ ಸುದೀಪ್, ಮಲಯಾಳಂನ್ನು ಮಾತ್ರ ಟ್ರೈ ಮಾಡೋಕೆ ಹೋಗಲಿಲ್ಲವಂತೆ.

     

  • 90+ ಸೆಂಟರುಗಳಲ್ಲಿ ಪೈಲ್ವಾನ್ 50 ಫಿಕ್ಸ್

    pailwan 50 days in 90 plus theaters

    100ಕ್ಕೂ ಹೆಚ್ಚು ಸೆಂಟರುಗಳಲ್ಲಿ 25 ದಿನ ಪೂರೈಸಿ, ಬಾಕ್ಸಾಫೀಸಿನಲ್ಲಿ ದಾಖಲೆ ಬರೆದ ಪೈಲ್ವಾನ್, 90ಕ್ಕೂ ಹೆಚ್ಚು ಸೆಂಟುಗಳಲ್ಲಿ 50 ದಿನ ಪೂರೈಸುವುದು ಪಕ್ಕಾ ಆಗಿದೆ. ಪೈಲ್ವಾನ್ ನಿರ್ಮಾಪಕರೂ ಆಗಿರುವ ಸ್ವಪ್ನಾ ಕೃಷ್ಣ ನಿರ್ದೇಶಕ ಕೃಷ್ಣ ಈ ವಿಷಯವನ್ನು ಅಧಿಕೃತವಾಗಿಯೇ ಘೋಷಿಸಿದ್ದಾರೆ. ಯಾವ್ಯಾವ ಸೆಂಟುಗಳಲ್ಲಿ ಪೈಲ್ವಾನ್ 50 ದಿನ ಪೂರೈಸಲಿದೆ ಎಂದು ಮಾಹಿತಿಯನ್ನೂ ಕೊಟ್ಟಿದ್ದಾರೆ.

    ಈ ಗೆಲುವಿಗೆ, ಶ್ರೇಯಸ್ಸಿಗೆ ನೀವು ಅರ್ಹರಾಗಿದ್ದೀರಿ. ಕಂಗ್ರಾಟ್ಸ್ ಎಂದು ಶುಭಾಶಯ ತಿಳಿಸಿದ್ದಾರೆ ಕಿಚ್ಚ ಸುದೀಪ್

  • Krishna Flies To Hyderabad To Write Script For Sudeep

    krishna flies to hyderabad to write script for sudeep

    Director-cinematographer Krishna who will be directing Sudeep's next film is in Hyderabad to complete the script for it. Sudeep and Krishna had a successful combination with Hebbuli that released earlier this year and became a big hit.

    The two are coming back soon after their first film together. Krishna did not start any other film in the meantime while Sudeep is acting in Prem-directed The Villain. The shooting for The Villain is underway in south-east Asia where the action portions are being shot.

    Krishna has not revealed much about the new film but he has hinted that he would be exploring a new genre rather than the two action films he has directed so far. The script is being finalized by a team of writers in Hyderabad after Sudeep accepted the story line

  • Pailwaan Review: Chitraloka Rating 4/5

    pailwan movie review

    He simply rocks as Pailwaan, and he is namma very own Abhinaya Chakravarthy and the Badshah of Sandalwood- Kichcha Sudeepa. Tagged with the powerful Kichcha, S Krishna has delivered a thundering knockout punch on his debut as a director, and producing it along with his better half Swapna Krishna makes this blistering experience even more special.

    Pailwaan, which is released in multiple languages including Kannada, has undoubtedly witnessed to one of the biggest openings in recent times in the history of Kannada film industry.

    Coming back to Pailwaan, it's a perfect action thriller presented with the right amount of sensible and meaningful emotions to it. That's not all, it is packed with all the essential for a commercial entertainment too. The story is straight and simple which is another crucial factor for why it appeals to not just Kichcha fans but the general audience who seeks for a complete two plus hours of pure meaningful entertainment.

    Kichcha shines without an iota of doubt and all his hard work to get into the soul of the character of a pailwaan, a desi fighter has paid off. The biggest surprise of all is his transformation to fit into the role of a professional boxer in the second half. More than the physical changes, the emotional shift and the thinking of a true wrestler is the real and reel winner for the actor.

    Insofar as the supporting cast, it is Bollywood actor Suneil Shetty, who makes his debut in Kannada with this one which adds greater value to the script by not limiting his talent to couple of scenes as a guest actor but is seen in major chunks of Pailwaan. That apart, Aakanksha Singh who also makes her debut too, leaves a pretty impression and stands out as a cute lover and then as a supporting wife and a mother.

    The rest is more or less about the fight. The motto of a real wrestler fighter is to fight for a noble cause, and this what Pailwaan stands for. The making and everything else with respect to the technical aspects are of top notch which makes it one of the best from cinematographer turned director Krishna.

    Pailwaan is worth every penny, and deserves appreciation for sheer hard work and dedication. Go watch the extravaganza at a theatre near you, as this match is won already.

  • Pailwan' Postponed; To Release After Varamahalakshmi Festival

    pailwan release postponed

    Though director S Krishna had announced that he will be releasing his latest film 'Phailwan' on the auspicious day of Varmahalakshmi festival, there were doubts whether the film will reach the audience by the expected time. Now, Krishna himself has announced that there will be a delay in the film's release and the film will be releasing after the Varmahalakshmi festival

    The real reason behind the film's release is said to be the graphics work. Krishna says there is a large portion of graphics to be done and Red Chillies Studio is monitoring the graphics work of the film. However, there is a delay in the graphics work due to various reasons and the makers have decided to postpone the film by few weeks..

    'Phailwan' is being produced by Swapna Krishna and written and directed by S Krishna. Karunakar is the cameraman, while Arjun Janya is the music director. Akanksha Singh is the heroine, while Kabir Singh Duhan, Chikkanna, Sunil Shetty and others play prominent roles in the film.

     

  • Sudeep Thanks All For The Wonderful Response For 'Pailwan'

    sudeep thanks all for the wonderful response for pailwan

    The boxing poster of Sudeep starrer 'Phailwan' was released on Tuesday and within minutes of the release, the poster became a sensational hit. Celebrities from not only from Kannada film industry, but also other film industries have been appreciating the effort of the team. Sudeep who is overwhelmed by all this has thanked all for the response he has got for 'Phailwan'.

    Sudeep in his twitter account has thanked one and all for standing behind him and making this day special.

    'Success has never defined me. Failure has never scared me. Cinema is a beautiful platform of creativity and entertainment, where I have met wonderful people and also made few good friends. By the end of today, want to thank those friends and colleagues for making this day special' tweeted Sudeep.

     

  • Watch 'Pailwan' At Half Rate

    watch pailwan at half rate

    Sudeep starrer 'Phailwan' which was released on the 12th of September is all set to complete 50 days. Meanwhile, the team has given a new offer to the public and people can watch the film with a 50 percent discount on ticket rate for the next one week.

    Director S Krishna has announced this on his Twitter account on Thursday. The director who is also the producer has thanked the public for making the film a huge hit and has announced 50 percent discount on the ticket rate for the next one week. However, this offer is not applicable in multiplexes and is only for single screens.

    'Phailwan' stars Sudeep, Akanksha Singh, Kabir Singh Duhan, Chikkanna, Sunil Shetty and others. The film is being produced by Swapna Krishna and written and directed by S Krishna. Karunakar is the cameraman, while Arjun Janya is the music director.

  • ಅಪ್ಪುಗೆ ಪೈಲ್ವಾನ್ ಕೃಷ್ಣ ಡೈರೆಕ್ಷನ್..?

    ಅಪ್ಪುಗೆ ಪೈಲ್ವಾನ್ ಕೃಷ್ಣ ಡೈರೆಕ್ಷನ್..?

    ಸದ್ಯಕ್ಕೆ ಪುನೀತ್ ಭರ್ಜರಿ ಚೇತನ್ ಅವರ ಜೇಮ್ಸ್‍ನಲ್ಲಿ ಬ್ಯುಸಿಯಾಗಿದ್ದಾರೆ. ಇನ್ನೇನು ಕೆಲವೇ ದಿನ, ಯುವರತ್ನ ಪ್ರಮೋಷನ್ನಿನಲ್ಲಿ ಬ್ಯುಸಿಯಾಗ್ತಾರೆ. ಅದು ಮುಗಿಯುತ್ತಿದ್ದಂತೆ ಮುಂದಿನ ಸಿನಿಮಾ ಯಾವುದು..? ಯಾರದು..? ಡೈರೆಕ್ಟರ್ ಯಾರು..? ಈ ಪ್ರಶ್ನೆಗಳಿಗೆ ಇತ್ತೀಚೆಗೆ ಇಬ್ಬರ ಹೆಸರು ಕೇಳಿ ಬಂದಿತ್ತು.

    ಸಂತೋಷ್ ಆನಂದ್ ರಾಮ್ ಅವರೇ ಇನ್ನೊಂದು ಸಿನಿಮಾ ಮಾಡ್ತಾರೆ ಅನ್ನೋದು ಒಂದು ಮಾತಾದ್ರೆ, ದಿನಕರ್ ತೂಗುದೀಪ ಡೈರೆಕ್ಷನ್ ಮಾಡ್ತಾರಂತೆ ಅನ್ನೋದು ಇನ್ನೊಂದು ಸುದ್ದಿ. ಈಗ ಇದ್ದಕ್ಕಿದ್ದಂತೆ ಅಲ್ಲಿ ಪೈಲ್ವಾನ್ ಕೃಷ್ಣ ಹೆಸರು ಕೇಳಿ ಬರ್ತಿದೆ.

    ಗಜಕೇಸರಿ ಮೂಲಕ ಡೈರೆಕ್ಟರ್ ಆದ ಕೃಷ್ಣ, ಹೆಬ್ಬುಲಿ, ಪೈಲ್ವಾನ್ ನಂತರ ಈಗ ಪ್ರೊಡ್ಯೂಸರ್ ಆಗಿಯೂ ಕ್ಲಿಕ್ ಆಗಿದ್ದಾರೆ. ಪುನೀತ್ ಅವರ ಹಲವು ಚಿತ್ರಗಳಿಗೆ ಕ್ಯಾಮೆರಾಮನ್ ಆಗಿ ಅನುಭವ ಮತ್ತು ಆತ್ಮೀಯತೆ ಇರುವ ಕೃಷ್ಣ, ಪುನೀತ್ ಸಿನಿಮಾಗೆ ರೆಡಿಯಾಗಿದ್ದರೆ ಆಶ್ಚರ್ಯವೇನಿಲ್ಲ. ಏನೇ ಅಂದ್ರೂ ಕೆಲವೇ ದಿನಗಳಲ್ಲಿ ಪುನೀತ್ ಹುಟ್ಟುಹಬ್ಬವಿದೆ. ಆ ದಿನ ಎಲ್ಲವೂ ಗೊತ್ತಾಗಲಿದೆ.

  • ಆಂಧ್ರ, ತೆಲಂಗಾಣ, ತಮಿಳುನಾಡಲ್ಲಿ ಪೈಲ್ವಾನ್ ಕ್ರೇಝ್

    pailwan craze in andhra, telangana and tmil nadu

    ಕಿಚ್ಚ ಸುದೀಪ್ ಅವರಿಗೆ ಕನ್ನಡದಲ್ಲಷ್ಟೇ ಅಲ್ಲ, ತೆಲುಗು, ತಮಿಳು, ಹಿಂದಿಯಲ್ಲೂ ಅಭಿಮಾನಿಗಳಿದ್ದಾರೆ. ಪೈಲ್ವಾನ್ ಸಿನಿಮಾ ಏಕಕಾಲಕ್ಕೆ 5 ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ಅತ್ತ ಆಂಧ್ರಪ್ರದೇಶ, ತೆಲಂಗಾಣದಲ್ಲಿ ಪೈಲ್ವಾನನ ಕ್ರೇಝ್ ಶುರುವಾಗಿದೆ.

    ನಿರ್ದೇಶಕ ಕೃಷ್ಣ, ನಿರ್ಮಾಪಕಿ ಸ್ವಪ್ನಾ ಕೃಷ್ಣ ಚಿತ್ರದ ಪ್ರಚಾರವನ್ನು ಆಗಲೇ ಶುರು ಮಾಡಿದ್ದಾರೆ. ಪೈಲ್ವಾನನ ವ್ಯಾನ್‍ಗಳು ಸುತ್ತಾಟ ಆರಂಭಿಸಿವೆ. ಹೋದೆಡೆಯಲ್ಲೆಲ್ಲ ಅಭಿಮಾನಿಗಳು ಕಿಚ್ಚನ ದರ್ಶನಕ್ಕೆ ಮುಗಿ ಬೀಳುತ್ತಿದ್ದಾರೆ. ಜೈಕಾರ ಜೋರಾಗಿದೆ.

    ಸುದೀಪ್ ಜೊತೆ ಸುನಿಲ್ ಶೆಟ್ಟಿ ಕೂಡಾ ಪ್ರಮುಖ ಪಾತ್ರದಲ್ಲಿರುವ ಚಿತ್ರದಲ್ಲಿ ಆಕಾಂಕ್ಷಾ ಸಿಂಗ್ ನಾಯಕಿ. ತಮಿಳುನಾಡಿನಲ್ಲೂ ಪೈಲ್ವಾನ್ ಹವಾ ಶುರುವಾಗಿದ್ದು, ಅಭಿಮಾನಿಗಳೇ ಸ್ವತಃ ವಿಡಿಯೋ ಮಾಡಿ ಹಾಡು, ಟ್ರೇಲರ್ ಬಗ್ಗೆ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಸೆಪ್ಟೆಂಬರ್ 12ರಿಂದ ಪೈಲ್ವಾನ್ ಹಬ್ಬ ಶುರುವಾಗಲಿದೆ.

     

  • ಇದು ಅಧಿಕೃತ : ವೀರೇಶ್ ಚಿತ್ರಮಂದಿರದ 4 ದಿನದ ಗಳಿಕೆ ಎಷ್ಟು..?

    veeresh theater owner discloses pailwan 4 days collections

    ಪೈಲ್ವಾನ್ ಚಿತ್ರ ಒಂದು ಲೆಕ್ಕದ ಪ್ರಕಾರ ವಾರ ಮುಗಿಯುವ ಮೊದಲೇ 50 ಕೋಟಿಯ ಕಲೆಕ್ಷನ್ ದಾಟು ಮುನ್ನುಗ್ಗುತ್ತಿದೆ. ಅದರಲ್ಲಿ ನಿರ್ಮಾಪಕರ ಷೇರ್ ಎಷ್ಟು ಎನ್ನುವುದು ಬೇರೆಯದೇ ವಿಚಾರ. ಮತ್ತೊಂದೆಡೆ ಚಿತ್ರಕ್ಕೆ ಜನ ಇಲ್ಲ, ಥಿಯೇಟರು ಖಾಲಿ ಖಾಲಿ ಎಂಬ ಅಪಪ್ರಚಾರವೂ ನಡೆಯುತ್ತಿದೆ. ಅಫ್‍ಕೋರ್ಸ್.. ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಕಾದಾಡುತ್ತಿರುವುದು ಸುದೀಪ್ ಫ್ಯಾನ್ಸ್.

    ಈ ಅಪಪ್ರಚಾರಗಳಿಗೆ ಸ್ವತಃ ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ವೀರೇಶ್ ಚಿತ್ರಮಂದಿರದ ಮಾಲೀಕರಾದ ಕೆ.ವಿ.ಚಂದ್ರಶೇಖರ್ ಉತ್ತರ ಕೊಟ್ಟಿದ್ದಾರೆ.

    ಮೊದಲ 4 ದಿನಗಳಲ್ಲಿ ವೀರೇಶ್ ಸಿನಿಮಾಸ್ ಚಿತ್ರಮಂದಿರದಲ್ಲಿ ಪೈಲ್ವಾನ್ ಚಿತ್ರದ ಗಳಿಕೆ 31 ಲಕ್ಷ. ಇದು ಅವರ ಥಿಯೇಟರಿನಲ್ಲಿ ಮಾತ್ರವೇ ಆದ ಕಲೆಕ್ಷನ್ ವಿವರ.

    ಚಿತ್ರಕ್ಕೆ ಮೊದಲು ನಡೆಯುವ ಪ್ರಚಾರ ಮೊದಲ ಶೋಗಳಿಗಷ್ಟೇ ಸೀಮಿತ. ನಂತರದ್ದೇನಿದ್ದರೂ ಬಾಯಿ ಮಾತಿನ ಪ್ರಚಾರದಲ್ಲಿಯೇ ನಡೆಯಬೇಕು. ಅಪಪ್ರಚಾರದಿಂದ ಯಾವುದೇ ಚಿತ್ರವನ್ನು ಸೋಲಿಸಲು ಸಾಧ್ಯವಿಲ್ಲ. ಚಿತ್ರ ಚೆನ್ನಾಗಿದ್ದರೆ ಹೀರೋ ಯಾರೇ ಆಗಿದ್ದರೂ ಪ್ರೇಕ್ಷಕ ಪ್ರಭು ಕೈಬಿಡಲ್ಲ ಎಂದಿರುವ ಚಂದ್ರಶೇಖರ್, ಪ್ರೇಕ್ಷಕರನ್ನು ಚಿತ್ರಮಂದಿರದಿಂದ ದೂರ ತಳ್ಳುವ ಇಂತಹ ಕುತಂತ್ರಗಳನ್ನು ಕೈಬಿಡಿ, ಇದು ಚಿತ್ರರಂಗಕ್ಕೆ ಮತ್ತು ಕನ್ನಡಕ್ಕೆ ಒಳ್ಳೆಯದಲ್ಲ ಎಂದು ಮನವಿ ಮಾಡಿದ್ದಾರೆ.

     

  • ಏನು ಮಾಡಲಿ ಹೊಡೀತು ಕಿಚ್ಚನ ಕಣ್ಣು..

    pailwan dance number completed

    ಏನು ಮಾಡಲಿ ಹೊಡೀತು ಕಣ್ಣು.. ಎಂದು ಕಿಚ್ಚ ಹಾಡಿ ಕುಣಿಯುತ್ತಿದ್ದರೆ, ಕಣ್ಣು ಹೊಡೆಸಿಕೊಂಡ ಹುಡುಗಿ ಆಕಾಂಕ್ಷಾ ಸಿಂಗ್ ಕಣ್ಣು ಇರೋದೇ ಹೊಡೆಯೋಕೆ ಎಂಬಂತೆ ಹೆಜ್ಜೆ ಹಾಕಿದ್ದಾರೆ. ಇದು ಪೈಲ್ವಾನ್ ಚಿತ್ರದ ಐಟಂ ನಂಬರ್ ಪೆಪ್ಪಿ ನಂಬರ್ ಹಾಡು. ಮುಂಬೈನಲ್ಲಿ ಶೂಟಿಂಗ್ ಮುಗಿದಿದೆ.

    ಬಾಲಿವುಡ್ ಸ್ಟಾರ್ ಕೊರಿಯೋಗ್ರಾಫರ್ ಗಣೇಶ್ ಆಚಾರ್ಯ, ಈ ಹಾಡಿಗೆ ನೃತ್ಯ ಸಂಯೋಜಿಸಿದ್ದಾರೆ. ಕೃಷ್ಣ ನಿರ್ದೇಶನದ ಸಿನಿಮಾದಲ್ಲಿ ಕುಸ್ತಿ ಮತ್ತು ಬಾಕ್ಸಿಂಗ್ ಎರಡೂ ಆಟದ ಕಥೆಯಿದೆ.

  • ಕಿಚ್ಚನಿಗಿಂತ ಮೊದಲ ಪೈಲ್ವಾನ್ ಡಾ.ರಾಜ್

    sudeep's pailwan reminds dr rajkumar's roles

    ಕಿಚ್ಚ ಸುದೀಪ್ ಇದೇ ಮೊದಲ ಬಾರಿಗೆ ಪೈಲ್ವಾನ್ ಆಗಿ ನಟಿಸಿದ್ದಾರೆ. ಸಿನಿಮಾ ರಿಲೀಸ್ ಆಗಿದೆ. ಭರ್ಜರಿ ಹಿಟ್ ಆಗುವತ್ತ ದೊಡ್ಡ ಹೆಜ್ಜೆಯಿಟ್ಟಿದೆ. ಕನ್ನಡದಲ್ಲಿ ಕ್ರೀಡೆಯನ್ನೇ ಆಧರಿಸಿದ ಸಿನಿಮಾಗಳು ಅಪರೂಪದಲ್ಲಿ ಅಪರೂಪ. ಅದರಲ್ಲೂ ಕುಸ್ತಿ ಇದೆಯಲ್ಲ. ಈ ಆಟಕ್ಕೆ ಕೈ ಹಾಕಿದವರ ಸಂಖ್ಯೆ ಬಹಳ ಕಡಿಮೆ.

    ಆದರೆ ಆಡು ಮುಟ್ಟದ ಸೊಪ್ಪಿಲ್ಲ.. ರಾಜ್ ಮಾಡದ ಪಾತ್ರವಿಲ್ಲ ಎಂಬ ಹಾಗೆ, ಪೈಲ್ವಾನನಾಗಿಯೂ ಕಂಗೊಳಿಸಿರುವ ಹಿರಿಮೆ ಅಣ್ಣಾವ್ರಿಗಿದೆ.

    ಡಾ.ರಾಜ್ ಹಲವು ಚಿತ್ರಗಳಲ್ಲಿ ಕುಸ್ತಿ ಪಟುವಾಗಿ, ಜಟ್ಟಿಯಾಗಿ ನಟಿಸಿದ್ದಾರೆ. ಕನ್ನಡ ಚಿತ್ರರಂಗವನ್ನು ಕರ್ನಾಟಕಕ್ಕೆ ತರುವ ಸಲುವಾಗಿ ಅತಿ ದೊಡ್ಡ ಸಾಹಸಕ್ಕೆ ಕೈ ಹಾಕಿ ನಿರ್ಮಿಸಿದ್ದ ರಣಧೀರ ಕಂಠೀರವ ಚಿತ್ರದಲ್ಲಿಯೇ ಡಾ.ರಾಜ್ ಕುಸ್ತಿ ಮಾಡಿ ಗೆಲ್ಲುತ್ತಾರೆ. ಮಯೂರ ಚಿತ್ರದಲ್ಲಿ ರಾಜ್ ಎಂಟ್ರಿಯೇ ಕುಸ್ತಿ ಅಖಾಡದಲ್ಲಿ. ರಾಜ್ ಎದುರು ಲಂಗೋಟಿಯಲ್ಲಿ ಕುಸ್ತಿ ಆಡುವುದು ಟೈಗರ್ ಪ್ರಭಾಕರ್. ಶ್ರೀಕೃಷ್ಣದೇವರಾಯ ಚಿತ್ರದಲ್ಲೂ ಕುಸ್ತಿ ಪಟುವಾಗಿ ಗಮನ ಸೆಳೆಯುವ ರಾಜ್‍ಕುಮಾರ್ ಪೈಲ್ವಾನನಂತೆಯೇ ದೇಹದಾಢ್ರ್ಯ ಹೊಂದಿದ್ದರು. ಅದರಲ್ಲಿಯೂ ರಣಧೀರ ಕಂಠೀರವ ಚಿತ್ರದಲ್ಲಿ ರಾಜ್ ಅವರ ದೇಹ ಸೌಷ್ಟವ ಅದ್ಭುತವಾಗಿತ್ತು.

    ಈಗ ಪೈಲ್ವಾನ್ ರೂಪದಲ್ಲಿ ಸುದೀಪ್ ಕುಸ್ತಿ ಪಟುವಾಗಿ, ಬಾಕ್ಸರ್ ಆಗಿ ಎಂಟ್ರಿ ಕೊಟ್ಟಿದ್ದಾರೆ. ಅಭಿಮಾನಿಗಳು ಅಣ್ಣಾವ್ರ ಆ ಕುಸ್ತಿ ಪಟ್ಟುಗಳನ್ನು ನೆನಪಿಸಿಕೊಂಡೇ ಕಿಚ್ಚನಿಗೆ ಜೈಜೈಜೈ ಎಂದಿದ್ದಾರೆ. ಪೈಲ್ವಾನ್ ಸೃಷ್ಟಿಕರ್ತ ಕೃಷ್ಣಗೆ ಮತ್ತೊಮ್ಮೆ ಗೆದ್ದ ಖುಷಿ. ಸ್ವಪ್ನಾ ಕೃಷ್ಣ ಅವರಿಗೆ ಮೊದಲ ಪ್ರಯತ್ನದಲ್ಲೇ ದಿಗ್ವಿಜಯ ಸಾಧಿಸಿದ ಸಂಭ್ರಮ.

  • ನೇಪಾಳ, ಭೂತಾನ್‍ಗೂ ಪೈಲ್ವಾನ್..!

    pailwan to release in nepal and bhutan

    ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾ ಏಕಕಾಲಕ್ಕೆ ಇಂಡಿಯಾ ಹಾಗೂ ಹೊರದೇಶಗಳಲ್ಲಿ ರಿಲೀಸ್ ಆಗುತ್ತಿದೆ. ಈ ಬಾರಿಯ ವಿಶೇಷವೆಂದರೆ, ಪಕ್ಕದ ನೇಪಾಳ ಹಾಗೂ ಭೂತಾನ್‍ನಲ್ಲೂ ಸಿನಿಮಾ ರಿಲೀಸ್ ಆಗುತ್ತಿರುವುದು. ಇಡೀ ಉತ್ತರ ಭಾರತದ ಕನ್ನಡೇತರ ಪೈಲ್ವಾನ್ ಡಿಸ್ಟ್ರಿಬ್ಯೂಷನ್ ಹೊಣೆಯನ್ನು ಜೀ ಸ್ಟುಡಿಯೋಸ್ ಹೊತ್ತುಕೊಂಡಿದ್ದರೆ, ಕನ್ನಡದ ಪೈಲ್ವಾನ್ ವಿತರಣೆ ಹೊಣೆಯನ್ನು ಕೆಆರ್‍ಜಿ ಸ್ಟುಡಿಯೋಸ್ ನಿರ್ವಹಣೆ ಮಾಡುತ್ತಿದೆ. ಜೀ ಸ್ಟುಡಿಯೋಸ್‍ನವರೇ ಚಿತ್ರವನ್ನು ನೇಪಾಳ ಹಾಗೂ ಭೂತಾನ್‍ಗೆ ಒಯ್ಯುತ್ತಿದ್ದಾರೆ.

    `ನನ್ನ ಕುಟುಂಬ ಈಗ ಇನ್ನಷ್ಟು ದೊಡ್ಡದಾಗುತ್ತಿದೆ. ನಮ್ಮ ಸಿನಿಮಾದಲ್ಲಿ ಯೂನಿವರ್ಸಲ್ ಸಬ್ಜೆಕ್ಟ್ ಇದೆ. ಜವಾಬ್ದಾರಿಯೂ ಹೆಚ್ಚಿದೆ' ಎಂದು ಖುಷಿಯಾಗಿದ್ದಾರೆ ನಿರ್ದೇಶಕ ಕೃಷ್ಣ.

    ಪೈಲ್ವಾನ್ ಬಹುತೇಕ ಆಗಸ್ಟ್ 29ರಂದು ರಿಲೀಸ್ ಆಗುವ ಪ್ಲಾನ್ ಮಾಡಿಕೊಂಡಿದ್ದು, ಅಮೆರಿಕ, ಆಸ್ಟ್ರೇಲಿಯಾ, ಬ್ರಿಟನ್, ಸೌದಿ ರಾಷ್ಟ್ರಗಳು, ಆಫ್ರಿಕಾ.. ಹೀಗೆ ವಿದೇಶಗಳಲ್ಲಿಯೂ ತೆರೆ ಕಾಣಲಿದೆ.

  • ಪೈಲ್ವಾನ ಟ್ರೇಲರ್ ಪ್ರತಾಪ

    pailwan trailer creates sensation

    ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರದ ಟ್ರೇಲರ್ ಹೊರಬಿದ್ದಿದೆ. ಸುನಿಲ್ ಶೆಟ್ಟಿ, ಆಕಾಂಕ್ಷಾ ಸಿಂಗ್ ನಟಿಸಿರುವ ಚಿತ್ರಕ್ಕೆ ಗಜಕೇಸರಿ ಕೃಷ್ಣ ಅಲಿಯಾಸ್ ಹೆಬ್ಬುಲಿ ಕೃಷ್ಣ ಅಲಿಯಾಸ್ ಪೈಲ್ವಾನ್ ಕೃಷ್ಣ ನಿರ್ದೇಶಕ. ನಿರ್ಮಾಪಕಿ ಸ್ವಪ್ನಾ ಕೃಷ್ಣ. ಚಿತ್ರದ ಟ್ರೇಲರ್ ದೊಡ್ಡ ಹವಾ ಎಬ್ಬಿಸಿದೆ.

    ಬಲ ಇದೆ ಅಂತಾ ಹೊಡೆದಾಡೋನು ರೌಡಿ, ಬಲವಾದ ಕಾರಣಕ್ಕೆ ಹೊಡೆದಾಡೋದು ಯೋಧ ನಮ್ಮ ಕಿಚ್ಚ ಕಣಕ್ಕಿಳಿದ ಅಂದ್ರೆ ಸಿಂಹ ಸಾರ್ ಸಿಂಹ ನಾನು ಗೆಲ್ತೀನೋ.. ಇಲ್ವೋ ಗೊತ್ತಿಲ್ಲ. ಆದರೆ ಸೋಲನ್ನ ಅಷ್ಟು ಸುಲಭವಾಗಿ ಒಪ್ಪಿಕೊಳ್ಳಲ್ಲ ಟ್ರೇಲರ್‍ನಲ್ಲಿರೋ ಡೈಲಾಗ್‍ಗಳ ಸ್ಯಾಂಪಲ್ ಇವು. ಶಿಳ್ಳೆ ಹೊಡೆಯುವಂತಿವೆ. 

    ಸೆಪ್ಟೆಂಬರ್ 12ಕ್ಕೆ ಸಿನಿಮಾ ರಿಲೀಸ್ ಆಗುತ್ತಿದ್ದು, ಶರತ್ ಲೋಹಿತಾಶ್ವ, ಕಬೀರ್ ದುಹಾನ್ ಸಿಂಗ್, ಸುಶಾಂತ್ ಸಿಂಗ್ ಚಿತ್ರದ ಇನ್ನಿತರ ಪಾತ್ರಗಳಲ್ಲಿದ್ದಾರೆ. ಅರ್ಜುನ್ ಜನ್ಯಾ ಸಂಗೀತ ನೀಡಿದ್ದಾರೆ.

  • ಪೈಲ್ವಾನನಿಗೆ ರಮೇಶ್ ಅರವಿಂದ್ ಸಾಥ್

    ramesh aravond lends voice for sudeep's pailwan

    ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್‍ಗೆ ಈಗ ರಮೇಶ್ ಅರವಿಂದ್ ಕೂಡಾ ಜೊತೆಯಾಗಿದ್ದಾರೆ. ಸೆಪ್ಟೆಂಬರ್ 12ರಂದು ರಿಲೀಸ್ ಆಗುತ್ತಿರುವ ಪೈಲ್ವಾನ್ ಚಿತ್ರದಲ್ಲಿ ಹಿನ್ನೆಲೆ ಧ್ವನಿ ನೀಡಿದ್ದಾರೆ ರಮೇಶ್ ಅರವಿಂದ್. ಅಂದಹಾಗೆ ಇದು ಕನ್ನಡದಲ್ಲಿ ಮಾತ್ರ. ಬೇರೆ ಬೇರೆ ಭಾಷೆಗಳಲ್ಲಿ ಬೇರೆ ಬೇರೆ ಧ್ವನಿಗಳಿವೆ.

    ಪೈಲ್ವಾನ್ ಅಮೆರಿಕ, ಆಸ್ಟ್ರೇಲಿಯಾ, ಕುವೈತ್, ದುಬೈ, ಬ್ರಿಟನ್, ಕತಾರ್, ಸಿಂಗಾಪುರ ಸೇರಿದಂತೆ ಹಲವಾರು ದೇಶಗಳಲ್ಲಿ ಪ್ರಪಂಚದಾದ್ಯಂತ ಏಕಕಾಲಕ್ಕೆ ರಿಲೀಸ್ ಆಗುತ್ತಿದೆ.

    ಕಿಚ್ಚ ಸುದೀಪ್ ಚಿತ್ರದಲ್ಲಿ ಇದೇ ಮೊದಲ ಬಾರಿಗೆ ಕುಸ್ತಿ ಪಟುವಾಗಿ ನಟಿಸಿದ್ದು, ಸುನಿಲ್ ಶೆಟ್ಟಿ ಕಿಚ್ಚನ ಗುರುವಾಗಿದ್ದಾರೆ. ಆಕಾಂಕ್ಷಾ ಸಿಂಗ್ ಕಿಚ್ಚನ ಹೀರೋಯಿನ್. ಕೃಷ್ಣ ನಿರ್ದೇಶನದ ಚಿತ್ರಕ್ಕೆ ಸ್ವಪ್ನಾ ಕೃಷ್ಣ ನಿರ್ಮಾಪಕಿ.