` kavalu dari, - chitraloka.com | Kannada Movie News, Reviews | Image

kavalu dari,

 • ಕವಲುದಾರಿ ಟೀಸರ್ ಸೂಪರ್‍ಹಿಟ್

  kavaludari teaser is superhit

  ಪುನೀತ್ ರಾಜ್‍ಕುಮಾರ್ ಬ್ಯಾನರ್‍ನ ಮೊದಲ ಸಿನಿಮಾ ಕವಲುದಾರಿ ಚಿತ್ರದ ಟೀಸರ್ ಹೊರಬಿದ್ದಿದೆ. ಅಮೆರಿಕದಲ್ಲಿ ಬಿಡುಗಡೆ ಮಾಡಿರುವ ಚಿತ್ರದ ಟೀಸರ್‍ನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ರಿಲೀಸ್ ಮಾಡಿದ್ದಾರೆ ಪುನೀತ್. 

  ಇತ್ತೀಚೆಗಷ್ಟೇ ಟ್ವಿಟರ್ ಲೋಕಕ್ಕೆ ಎಂಟ್ರಿ ಕೊಟ್ಟಿದ್ದ ಪುನೀತ್ ರಾಜ್‍ಕುಮಾರ್ ಮಾಡಿರುವ ಮೊದಲ ಟ್ವೀಟ್ ಇದು. ಕವಲುದಾರಿ ಟೀಸರ್. ಗೋಧಿ ಬಣ್ಣ ಸಾಧಾರಣ ಮೈಕಟ್ಟು ಖ್ಯಾತಿಯ ಹೇಮಂತ್ ರಾವ್ ನಿರ್ದೇಶನದ ಕವಲುದಾರಿಯಲ್ಲಿ ಥ್ರಿಲ್ಲರ್ ಕಥೆಯಿದೆ. ಅಮೆರಿಕದಿಂದ ಬಂದ ಮೇಲೆ ಪುನೀತ್ ಸರ್ ಸಿನಿಮಾ ನೋಡುತ್ತಾರೆ. ಅವರೂ ಕೂಡಾ ಎಕ್ಸೈಟ್ ಆಗಿದ್ದಾರೆ. ಅಕ್ಟೋಬರ್‍ನಲ್ಲಿ ಸಿನಿಮಾ ರಿಲೀಸ್ ಆಗಲಿದೆ ಎಂದಿದ್ದಾರೆ ಹೇಮಂತ್ ರಾವ್. ಅನಂತ್‍ನಾಗ್, ರೋಷಿನಿ ಪ್ರಕಾಶ್ ಅಭಿನಯದ ಚಿತ್ರದಲ್ಲಿ ಅಲಮೇಲಮ್ಮ ಖ್ಯಾತಿಯ ರಿಷಿ ಹೀರೋ.

  Related Articles :-

  'Kavalu Daari' Teaser Released

 • ಕವಲುದಾರಿ ನೋಡಲೇಬೇಕು - 5 ಸ್ಪೆಷಲ್ ರೀಸನ್ 

  5 reasns to watch kavaludaari

  1. ಗೋಧಿ ಬಣ್ಣ ಸಾಧಾರಣ ಮೈಕಟ್ಟು ನಂತರ, ನಿರ್ದೇಶಕ ಹೇಮಂತ್ ರಾವ್ ನಿರ್ದೇಶಿಸಿರುವ 2ನೇ ಸಿನಿಮಾ ಇದು. ಇದರ ನಡುವೆಯೇ ಹೇಮಂತ್, ಹಿಂದಿಯ ಅಂದಾದುನ್ ಚಿತ್ರಕ್ಕೆ ಸ್ಕ್ರಿಪ್ಟ್ ಮಾಡಿದ್ದರು. ಆ ಸಿನಿಮಾ 100 ಕೋಟಿ ಬಾಚಿತ್ತು. ಸಕ್ಸಸ್‍ಫುಲ್ ನಿರ್ದೇಶಕನ 2ನೇ ಸಿನಿಮಾ.

  2.ಪುನೀತ್ ರಾಜ್‍ಕುಮಾರ್ ಸ್ವಂತ ಬ್ಯಾನರ್‍ನ ಮೊದಲ ಸಿನಿಮಾ ಕವಲುದಾರಿ. ಡಾ.ರಾಜ್ ಬ್ಯಾನರ್‍ಗಳಲ್ಲಿ ಕಥೆಯೇ ಪ್ರಧಾನ. ಅದೇ ಫಾರ್ಮುಲಾವನ್ನು ಪುನೀತ್ ಕೂಡಾ ಪಿಆರ್‍ಕೆ ಬ್ಯಾನರ್‍ನಲ್ಲಿ ಅನುಸರಿಸಿದ್ದಾರೆ.

  3. 80ರ ದಶಕದ ಕಾಲದ ಕ್ರೈಂ ಥ್ರಿಲ್ಲರ್ ಸಿನಿಮಾ. ಹೇಮಂತ್ ರಾವ್, ಅನಂತ್‍ನಾಗ್ ಕಾಂಬಿನೇಷನ್‍ನ 2ನೇ ಸಿನಿಮಾ ಕವಲುದಾರಿ. ಅನಂತ್‍ರನ್ನು ಗೋಧಿಬಣ್ಣದಲ್ಲಿ ಮುಗ್ಧ ಅಜ್ಜನಂತೆ ತೋರಿಸಿದ್ದ ಹೇಮಂತ್, ಇಲ್ಲಿ ಬುದ್ದಿವಂತ ಆಫೀಸರ್ ಮಾಡಿದ್ದಾರೆ.

  4. ಚಿತ್ರಕ್ಕೆ ಹಿನ್ನೆಲೆ ಸಂಗೀತ ಮಾಡಿಸಿರುವುದು ಮ್ಯಾಸೆಡೊನಿಯಾದಲ್ಲಿ. 100ಕ್ಕೂ ಹೆಚ್ಚು ತಂತ್ರಜ್ಞರು ಈ ಚಿತ್ರಕ್ಕೆ ಲೈವ್ ಇನ್ಸ್‍ಟ್ರುಮೆಂಟ್ ನುಡಿಸಿದ್ದಾರೆ.

  5. ಚಿತ್ರದಲ್ಲಿ ಯಾವುದೇ ಮೆಸೇಜ್ ಇಲ್ಲ. ಜನ ಇಷ್ಟಪಡಬೇಕು. ಅವರಿಗೆ ಇಷ್ಟವಾಗಿದ್ದು, ಅನಿಸಿದ್ದೇ ಚಿತ್ರದ ಸಂದೇಶ.

  ಹೀಗೆ ಚಿತ್ರದ ಬಗ್ಗೆ ವಿವರಗಳ ಪಟ್ಟಿ ಮಾಡುತ್ತಾ ಹೋಗುವ ಹೇಮಂತ್, ಪ್ರೇಕ್ಷಕರನ್ನು ತುಂಬಾ ಬುದ್ದಿವಂತರು ಎಂದೇ ಭಾವಿಸಿ ಕಥೆ, ಚಿತ್ರಕಥೆ ಮಾಡಿದ್ದೇನೆ ಎಂದಿದ್ದಾರೆ. ಅಲಮೇಲಮ್ಮ ಟ್ರೇಲರ್ ನೋಡಿ ರಿಷಿಯನ್ನು ಆಯ್ಕೆ ಮಾಡಿದ್ದ ಹೇಮಂತ್ ರಾವ್, ಸಂಗೀತಕ್ಕೆ ಚರಣ್ ರಾಜ್ ಅವರನ್ನೇ ಕಂಟಿನ್ಯೂ ಮಾಡಿಕೊಂಡಿದ್ದಾರೆ. ವೇವ್‍ಲೆಂಗ್ತ್ ಓಕೆ ಆಗುತ್ತೆ ಎನ್ನುವುದೇ ಇದಕ್ಕೆ ಕಾರಣ. ಸಿನಿಮಾ ನಾಳೆಯಿಂದ ಥಿಯೇಟರುಗಳಲ್ಲಿರಲಿದೆ.

 • ಕವಲುದಾರಿ ನೋಡಿ.. ಆಮೇಲೆ ವೋಟ್ ಮಾಡಿ

  kavaludaari is all about political thriller

  ನನಗೂ ರಾಜಕೀಯಕ್ಕೂ ಸಂಬಂಧವಿಲ್ಲ, ಯಾರ ಪರವೂ, ವಿರುದ್ಧವೂ ಪ್ರಚಾರ ಮಾಡಲ್ಲ ಎಂದಿರುವ ಪುನೀತ್, ಮರೆಯದೇ ವೋಟ್ ಮಾಡಿ ಎನ್ನುವುದನ್ನು ಮರೆಯುವುದಿಲ್ಲ. ಹಾಗೆ ವೋಟ್ ಮಾಡಿ ಎನ್ನುತ್ತಲೇ, ಮತದಾರರ ಮನಸ್ಸಿನ ಮೇಲೆ ಪ್ರಭಾವ ಬೀರುವಂತಹಾ ಸಿನಿಮಾವನ್ನು ನಿರ್ಮಿಸಿ ಪ್ರೇಕ್ಷಕರ ಎದುರು ಇಟ್ಟಿದ್ದಾರೆ ಪುನೀತ್.

  ಈ ಸಿನಿಮಾ ನೋಡಿದ ಮೇಲೆ ಮತದಾರ ಖಂಡಿತಾ ಬದಲಾಗ್ತಾನೆ. ನಾನು ಯಾರಿಗೆ ವೋಟ್ ಹಾಕಬೇಕು ಅನ್ನೋದನ್ನು ಯೋಚಿಸುತ್ತಾನೆ. ತಮ್ಮ ಅಭ್ಯರ್ಥಿ ಯಾರು ಅನ್ನೋದನ್ನು ಖಂಡಿತಾ ತಿಳಿದುಕೊಳ್ಳೋ ಪ್ರಯತ್ನ ಮಾಡ್ತಾನೆ. ಮತ ಹಾಕುವ ಮುನ್ನ ಪ್ರತಿಯೊಬ್ಬ ಮತದಾರನನ್ನೂ ಅಭ್ಯರ್ಥಿಯ ಬಗ್ಗೆ ಯೋಚಿಸುವಂತೆ ಮಾಡಲಿದೆ ಈ ಸಿನಿಮಾ ಎನ್ನುವುದು ನಿರ್ದೇಶಕ ಹೇಮಂತ್ ರಾವ್ ಮಾತು.

  ಹಾಗಾದರೆ ಚಿತ್ರದಲ್ಲಿ ಅಂಥದ್ದೇನಿದೆ.. ತುಂಬಾ ಲೇಟ್ ಏನಿಲ್ಲ. ಸಿನಿಮಾ ರಿಲೀಸ್‍ಗೆ ಕ್ಷಣಗಣನೆ ಶುರುವಾಗಿದೆ.

 • ಕವಲುದಾರಿ ಸಕ್ಸಸ್ ಪಾರ್ಟಿ - ಮಸಾಲದೋಸೆ, ಮೈಸೂರು ಪಾಕ್

  kavaludaari different success story

  ಸಕ್ಸಸ್ ಪಾರ್ಟಿಯನ್ನು ಹೀಗೂ ಮಾಡಬಹುದು. ಒಂದು ಮೈಸೂರು ಪಾಕ್, ಜೊತೆಗೊಂದು ಮಸಾಲ ದೋಸೆ.. ಅನಂತ್‍ನಾಗ್, ಗಾಯತ್ರಿ, ರಿಷಿ ಹಾಗೂ ನಿರ್ದೇಶಕ ಹೇಮಂತ್ ರಾವ್ ಒಟ್ಟಿಗೇ ಇಂಥಾದ್ದೊಂದು ಪಾರ್ಟಿ ಮಾಡಿದ್ದಾರೆ. ನಮ್ಮ ಈ ಚಿತ್ರದ ಗೆಲುವು, ನಿರ್ದೇಶಕ ಹೇಮಂತ್ ರಾವ್ ಅವರಂತಹ ಮಹತ್ವಾಕಾಂಕ್ಷಿ ನಿರ್ದೇಶಕರ ಗೆಲುವು ಎಂದಿದ್ದಾರೆ ನಾಯಕ ನಟ ರಿಷಿ. ಪಾರ್ಟಿಯಲ್ಲಿ ಮಿಸ್ ಆಗಿರುವುದು ನಿರ್ಮಾಪಕ ಪುನೀತ್ ರಾಜ್‍ಕುಮಾರ್.

  ಅವರು ಇನ್ನೊಂದು ಕಡೆ ಚಿತ್ರವನ್ನು ವಿದೇಶಗಳಲ್ಲಿ ರಿಲೀಸ್ ಮಾಡಲು ಓಡಾಡುತ್ತಿದ್ದಾರೆ. ಕನ್ನಡಕ್ಕೆ ವಿಭಿನ್ನವಾದ, ರೆಗ್ಯುಲರ್ ಫಾಮ್ರ್ಯಾಟ್‍ನಿಂದ ದೂರವಾಗಿರುವ ಕಥೆಯೊಂದನ್ನು ಸಿನಿಮಾ ಮಾಡಿ, ಗೆದ್ದಿರುವ ಪುನೀತ್, ಇಂತಹ ಪ್ರಯತ್ನಗಳನ್ನು ಬೆಂಬಲಿಸಿ, ನೋಡಿ, ಹರಸಿ ಎಂದು ಪ್ರೇಕ್ಷಕರಿಗೆ ಮನವಿ ಮಾಡಿದ್ದಾರೆ.

 • ಕವಲುದಾರಿ.. 3ನೇ ವಾರ.. 6 ಕೋಟಿ..

  kavaludaari running successfully

  ಪಿಆರ್‍ಕೆ ಬ್ಯಾನರ್‍ನ ಮೊದಲ ಸಿನಿಮಾ ಕವಲುದಾರಿ, ಗೆಲುವಿನ ನಗಾರಿ ಬಾರಿಸಿದೆ. ಚಿತ್ರ 2 ವಾರ ಪೂರೈಸಿ, 3ನೇ ವಾರಕ್ಕೆ ಕಾಲಿಟ್ಟಿದೆ. ದೇಶ ವಿದೇಶದಲ್ಲೂ ಸದ್ದು ಮಾಡುತ್ತಿರುವ ಚಿತ್ರ ಈಗಾಗಲೇ 6 ಕೋಟಿ ಲಾಭ ಗಳಿಸಿದೆಯಂತೆ. ಚಿತ್ರತಂಡವೇ ಈ ವಿಷಯವನ್ನು ಅಧಿಕೃತವಾಗಿ ಹೇಳಿಕೊಂಡಿರೋದು ವಿಶೇಷ.

  ಕವಲುದಾರಿ ರಾಜ್ಯಾದ್ಯಂತ 180 ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಒಳ್ಳೆಯ ಚಿತ್ರಗಳನ್ನು ಜನ ಯಾವತ್ತೂ ಕೈಬಿಟ್ಟಿಲ್ಲ ಎನ್ನುವುದಕ್ಕೆ ಕವಲುದಾರಿ ಮತ್ತೊಂದು ಸಾಕ್ಷಿ ಎಂದಿದ್ದಾರೆ ನಿರ್ದೇಶಕ ಹೇಮಂತ್ ರಾವ್. ಗೋಧಿಬಣ್ಣ ನಂತರ ಸುದೀರ್ಘ ಗ್ಯಾಪ್ ಬಳಿಕ ಬಂದ ಹೇಮಂತ್ ರಾವ್, ಇದು 2ನೇ ಸತತ ಸಕ್ಸಸ್ಸು.

  ನಾಯಕ ನಟ ರಿಷಿ, ಅನಂತ್‍ನಾಗ್ ಕೂಡಾ ಫುಲ್ ಹ್ಯಾಪಿ. ಏಕೆಂದರೆ, ರಿಷಿಗೂ ಇದು ಸತತ 2ನೇ ಯಶಸ್ಸು. ಅನಂತ್‍ನಾಗ್‍ಗೆ, ಹೇಮಂತ್ ಮೇಲಿಟ್ಟ ವಿಶ್ವಾಸ ಈ ಬಾರಿಯೂ ಗೆದ್ದಿತು ಎಂಬ ಖುಷಿ. 

  ಇದರ ಜೊತೆಗೆ ಕವಲುದಾರಿಯ ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂಗೆ ರೀಮೇಕ್ ರೈಟ್ಸ್‍ಗೆ ಮಾತುಕತೆ ನಡೆಯುತ್ತಿದೆ. ಪುನೀತ್ ನಿರ್ಮಾಪಕರಾಗಿ ಮೊದಲ ಪ್ರಯತ್ನದಲ್ಲೇ ಗೆದ್ದಿದ್ದಾರೆ.

 • ಕವಲುದಾರಿಯ ರೋಷನಿಗೆ ಮೇಕಪ್ಪೇ ಇಲ್ಲ..!

  roshini prakash acts in kavaludaari with no makeup

  ಕವಲುದಾರಿ ಚಿತ್ರದ ಹೀರೋಯಿನ್ ರೋಷನಿ ಪ್ರಕಾಶ್. ಹೆಸರಿನಲ್ಲೇ ಸೂರ್ಯನನ್ನೂ, ಬೆಳಕಿನ ಪ್ರಕಾಶವನ್ನೂ ಹೊಂದಿರುವ ಈ ಚೆಲುವೆಗೆ ನಿರ್ದೇಶಕ ಹೇಮಂತ್ ರಾವ್ ಮೇಕಪ್ಪನ್ನೇ ಹಾಕಿಸಿಲ್ಲ. ಕಾರಣ ಇಷ್ಟೆ, ಕವಲುದಾರಿಯಲ್ಲಿ ರೋಷನಿಯದ್ದು ಪ್ರಿಯಾ ಎಂಬ ಯುವತಿಯ ಪಾತ್ರ. ಜರ್ನಲಿಸ್ಟ್ ಆಗಿರುವ ಅಪ್ಪ, ಪದೇ ಪದೇ ಮಾಡಿಕೊಳ್ಳುವ ಎಡವಟ್ಟುಗಳಿಂದ ಕುಟುಂಬವನ್ನು ಸಂಕಷ್ಟಕ್ಕೆ ದೂಡುತ್ತಾರೆ. ಆ ಪಾತ್ರದಲ್ಲಿ ಅಚ್ಯುತ್ ಕುಮಾರ್ ನಟಿಸಿದ್ದರೆ, ಅವರ ಮಗಳಾಗಿ, ಇಡೀ ಮನೆಯ ಜವಾಬ್ದಾರಿ ಹೊತ್ತು ನಿಲ್ಲುವ ಪಾತ್ರ ರೋಷನಿ ನಟಿಸಿರುವ ಪ್ರಿಯಾ ಎಂಬ ಪಾತ್ರದ್ದು.

  ಆ ಪಾತ್ರಕ್ಕೆ ಮೇಕಪ್ ಬೇಕಿರಲಿಲ್ಲ. ವಿಶೇಷ ಕೇಶವಿನ್ಯಾಸವೂ ಬೇಕಿರಲಿಲ್ಲ. ಒಬ್ಬ ಮಧ್ಯಮವರ್ಗದ ಮನೆಯ ಹುಡುಗಿ ಹೇಗಿರುತ್ತಾಳೋ ಹಾಗೆ ಇರಬೇಕಿತ್ತು. ಹಾಗೆಯೇ ನಟಿಸಿದ್ದೇನೆ ಎಂದಿದ್ದಾರೆ ರೋಷನಿ.

  ಚಿತ್ರವನ್ನು ಒಪ್ಪಿಕೊಳ್ಳೋಕೆ ಮೊದಲನೇ ಕಾರಣ, ಅದು ಪುನೀತ್ ಸರ್ ಬ್ಯಾನರ್ ಎನ್ನುವುದು, ಎರಡನೇ ಕಾರಣ ನಿರ್ದೇಶಕ ಹೇಮಂತ್ ರಾವ್, 3ನೇ ಕಾರಣ ಅನಂತ್ ಸರ್ ಇರುತ್ತಾರೆ ಎನ್ನುವುದು.. ಹೀಗೆ ಲಿಸ್ಟುಗಳ ಸರಮಾಲೆ ಒಪ್ಪಿಸುವ ರೋಷನಿ, ಅಚ್ಯುತ್ ಕುಮಾರ್ ನಟನೆಗೆ ಬೆರಗಾಗಿದ್ದರಂತೆ.

  ಅವರು ಅಳುವಾಗ, ನಗುವಾಗ ಅದು ನಟನೆಯೋ.. ನಿಜಕ್ಕೂ ಹಾಗಿದ್ದಾರೋ ಎಂದು ಕನ್‍ಫ್ಯೂಸ್ ಆಗುವಷ್ಟು ಸಹಜವಾಗಿ ನಟಿಸುತ್ತಿದ್ದರು. ಅವರಿಂದ ಕಲಿತದ್ದು ಅಪಾರ ಎಂದಿದ್ದಾರೆ ರೋಷನಿ. 

   

 • ಕವಲುದಾರಿಯಲ್ಲಿ ರಾಜಕೀಯದ ಕ್ರೈಂ ವಲ್ರ್ಡ್

  kavaludaari is political crime thriller

  ಕವಲುದಾರಿ ಚಿತ್ರದಲ್ಲಿರೋ ಕಥೆ ಏನು..? ಪಿಆರ್‍ಕೆ ಬ್ಯಾನರ್‍ನ ಮೊದಲ ಸಿನಿಮಾ ಎಂಬ ಕಾರಣಕ್ಕೆ ಕುತೂಹಲ ಸೃಷ್ಟಿಸಿರುವ ಚಿತ್ರದಲ್ಲಿ ನಿರೀಕ್ಷೆ ಹುಟ್ಟಿಸಿರುವುದು ಅದೊಂದೇ ಅಲ್ಲ. ನಿರ್ದೇಶಕ ಹೇಮಂತ್ ರಾವ್, ಅನಂತ್ ನಾಗ್ ಜೋಡಿ ಮತ್ತೊಮ್ಮೆ ಜೊತೆಯಾಗಿದೆ. ಅಜನೀಶ್ ಸಂಗೀತ ಅದ್ಭುತವಾಗಿ ಕೇಳಿಸುತ್ತಿದೆ. ರಿಷಿ, ಡಿಫರೆಂಟಾಗಿ ಕಾಣಿಸುತ್ತಿದ್ದರೆ, ಸುಮನ್ ರಂಗನಾಥ್ ಮತ್ತಷ್ಟು ಸುಂದರಿಯಾಗಿ ಕಂಗೊಳಿಸುತ್ತಿದ್ದಾರೆ. ಇದೆಲ್ಲದರ ನಡುವೆ ಇದೊಂದು ಕ್ರೈಂ ಥ್ರಿಲ್ಲರ್ ಕಥೆ ಎಂಬುದೇ ಕುತೂಹಲ.

  ಅನಂತ್ ನಾಗ್ ಪಾತ್ರದ ಹೆಸರು ಮುತ್ತಣ್ಣ. ಅದು ಜಮ್ಮುಕಾಶ್ಮೀರದಲ್ಲಿ ಹುತಾತ್ಮರಾದ ಯೋಧನೊಬ್ಬನ ಹೆಸರು. ಚಿತ್ರದಲ್ಲಿ ಅನಂತ್ ನಿವೃತ್ತ ಪೊಲೀಸ್ ಅಧಿಕಾರಿಯ ಪಾತ್ರ. ಅವರ ಬಳಿಗೆ ಟ್ರಾಫಿಕ್ ಪೊಲೀಸ್ ಅಧಿಕಾರಿ ರಿಷಿ, ತಮ್ಮ ಮುಂದೆ ಇರುವ ಕೇಸ್‍ಗಳ ಅನುಮಾನ ಬಗೆಹರಿಸಿಕೊಳ್ಳೋಕೆ ಬರುತ್ತಾರೆ. ರಿಷಿ, ಕ್ಲೂಗಳನ್ನು ಹುಡುಕಿ ತೆಗೆಯುವುದರಲ್ಲಿ ಎಕ್ಸ್‍ಪರ್ಟ್. 

  ಹೀಗೆ ಸಾಗುತ್ತಾ ಹೋಗುವ ಕಥೆಯಲ್ಲಿ ನಿಜಕ್ಕೂ ಹೈಲೈಟ್ ಆಗಿರುವುದು ರಾಜಕೀಯ ಮತ್ತು ಕ್ರೈಂ. 

  ನಾನು ರಾಜಕೀಯದಲ್ಲೂ ಇದ್ದು ಬಂದವನು. ಹೀಗಾಗಿ ಇದು ನನಗೆ ವಾಸ್ತವಕ್ಕೆ ಹತ್ತಿರ ಎನಿಸಿತು. ಕಥೆ ಇಷ್ಟವಾಯಿತು ಎನ್ನುತ್ತಾರೆ ಅನಂತ್‍ನಾಗ್.

  ರಾಜಕೀಯ ಮತ್ತು ಕ್ರೈಂ ಬೇರೆಬೇರೆಯಾಗಿಯೇನೂ ಉಳಿದಿಲ್ಲ. ಆದರೆ, ನೇರವಾಗಿ ಹೇಳುವುದಕ್ಕೂ ಸಾಧ್ಯವಿಲ್ಲ. ಹೀಗಿರುವಾಗ, ಈ ಚಿತ್ರದಲ್ಲಿ ಅವುಗಳನ್ನು ಹೇಗೆ ಹೇಳಿದ್ದಾರೆ ಎನ್ನುವುದೇ ಕವಲುದಾರಿ ಕುತೂಹಲ.

 • ಕವಲುದಾರಿಯಲ್ಲಿ ಸುಮನ್ `ಖಾಲಿ ಖಾಲಿ.. ' ಚೆಲುವೆ

  suman ranganath stuns in kavaludaari

  ವಯಸ್ಸು 44 ಆದರೂ ಸುಮನ್ ರಂಗನಾಥ್, 30ರ ಹರೆಯದ ಚೆಲುವೆಯಂತೆಯೇ ಕಾಣ್ತಾರೆ. ಸುಮನ್ ಕನ್ನಡಕ್ಕೆ ವಾಪಸ್ ಬಂದಿದ್ದೇ ಅಪ್ಪು ಅಭಿನಯದ ಬಿಂದಾಸ್ ಚಿತ್ರದ ಕಲ್ಲು ಮಾಮ ಕಲ್ಲು ಮಾಮ.. ಎಂಬ ಐಟಂ ಸಾಂಗ್ ಮೂಲಕ. ಮೈನಾ ಚಿತ್ರದಲ್ಲಿನ ಓ ಪ್ರೇಮದ ಪೂಜಾರಿ ಹಾಡಂತೂ.. ಈಗಲೂ ಕಿಕ್ಕೇರಿಸುವ ಗೀತೆಗಳಲ್ಲೊಂದು. ಇಂತಹ ಸುಮನ್, ಈಗ ಮತ್ತೊಮ್ಮೆ ಕ್ಯಾಬರೆ ಹಾಡಿಗೆ ಕುಣಿದಿದ್ದಾರೆ. ಕವಲುದಾರಿಯಲ್ಲಿ.

  ಪುನೀತ್ ರಾಜ್‍ಕುಮಾರ್ ನಿರ್ಮಾಣದ ಕವಲು ದಾರಿ ಚಿತ್ರದಲ್ಲಿ ಖಾಲಿ ಖಾಲಿ ಅನಿಸೋ ಕ್ಷಣಕೆ.. ಎಂಬ ಹಾಡಿದೆ.  ಆ ಹಾಡಿನಲ್ಲಿ ಸುಮನ್ ರೆಟ್ರೋ ಸ್ಟೈಲ್ ಕ್ಯಾಬರೆ ಲುಕ್‍ನಲ್ಲಿ ಮಿಂಚಿದ್ದಾರೆ. 

  ಅದು ಕ್ಯಾಬರೆ ಹಾಡಾದರೂ, ಸುಮನ್ ಅವರ ಭಾವಾಭಿನಯಕ್ಕೆ ಹೆಚ್ಚಿನ ಒತ್ತು ನೀಡಿದ್ದೇವೆ. ಅವರು ಕಣ್ಣಿನಲ್ಲೇ ಮಾತನಾಡುತ್ತಾರೆ ಎಂದು ಸರ್ಟಿಫಿಕೇಟ್ ಕೊಟ್ಟಿದ್ದಾರೆ ನಿರ್ದೇಶಕ ಹೇಮಂತ್ ರಾವ್. ಸುಮನ್ ಅವರ ಪಾತ್ರದ ಹೆಸರು ಮಾಧುರಿ.

  ರಿಷಿ, ಅನಂತ್ ನಾಗ್ ಪ್ರಮುಖ ಪಾತ್ರದಲ್ಲಿರೋ ಚಿತ್ರಕ್ಕೆ ಸಂಗೀತ ನೀಡಿರೋದು ಚರಣ್‍ರಾಜ್.

 • ಕೇರಳ, ಅಮೆರಿಕಕ್ಕೆ ಕವಲುದಾರಿ ಪಯಣ

  kavaludaari to release in kerala and in united states

  ರಾಜ್ಯಾದ್ಯಂತ ವಿಭಿನ್ನತೆಯ ಮೂಲಕವೇ ಗಮನ ಸೆಳೆದಿರುವ, ಕ್ಲಾಸ್ ಪ್ರೇಕ್ಷಕರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿರುವ ಕವಲುದಾರಿ ಸಿನಿಮಾ, ವಿದೇಶಕ್ಕೆ ಹೊರಟು ನಿಂತಿದೆ. ಚೆನ್ನೈ, ಮುಂಬೈ, ಹೈದರಾಬಾದ್ ಸೇರಿದಂತೆ ಹಲವು ಕಡೆ ರಿಲೀಸ್ ಆಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇದರಿಂದಾಗಿಯೇ ಈಗ ಸಿನಿಮಾಗೆ ಭರ್ಜರಿ ಡಿಮ್ಯಾಂಡ್ ಬಂದುಬಿಟ್ಟಿದೆ.

  ಪುನೀತ್ ರಾಜ್‍ಕುಮಾರ್, ಅಶ್ವಿನಿ ಪುನೀತ್ ಇಬ್ಬರೂ ಜನರ ನಡುವೆ ಸಿನಿಮಾ ನೋಡಿದ್ದಾರೆ. ಪ್ರೇಕ್ಷಕರ ಪ್ರತಿಕ್ರಿಯೆ ನೋಡಿ ಖುಷಿಯಾಗಿದ್ದಾರೆ. ಅದೇ ವೇಳೆಗೆ ಅತ್ತ ಅಮೆರಿಕದಿಂದ ಡಿಮ್ಯಾಂಡ್ ಶುರುವಾಗಿದೆ. ಅಮೆರಿಕದಲ್ಲಿ ಎಷ್ಟು ಸೆಂಟರ್‍ಗಳಲ್ಲಿ ರಿಲೀಸ್ ಮಾಡಬೇಕು ಎಂದು ಪ್ಲಾನ್ ಮಾಡುತ್ತಿದೆ ಚಿತ್ರತಂಡ. ಅದ್ಕಿಂತ ಇನ್ನೊಂದು ಖುಷಿಯೆಂದರೆ, ಮಲಯಾಳಂನಲ್ಲಿ ಕವಲುದಾರಿ ಬಿಡುಗಡೆಗೆ ವಿತರಕರು ಮುಂದೆ ಬಂದಿರೋದು. ಚಿತ್ರವನ್ನು ಮಲಯಾಳಂಗೆ ಡಬ್ ಮಾಡಿಕೊಡಿ ಎಂದು ಕೇರಳದ ವಿತರಕರು ಬೆನ್ನು ಹತ್ತಿದ್ದಾರೆ. ಒಟ್ಟಿನಲ್ಲಿ ಕವಲುದಾರಿ ಅದೃಷ್ಟ ಖುಲಾಯಿಸಿದೆ.

 • ಗುಡ್ ಲುಕ್ ಪವರ್ ಸ್ಟಾರ್ - ಸ್ಯಾಂಡಲ್‍ವುಡ್ ಶುಭಾಶಯ

  sandalwood wishes good luck to kavaludaari

  ಪಿಆರ್‍ಕೆ ಬ್ಯಾನರ್ ಮೂಲಕ ನಿರ್ಮಾಪಕರೂ ಆದ ಪುನೀತ್ ರಾಜ್‍ಕುಮಾರ್, ಸಿನಿಮಾ ನಿರ್ಮಾಣ ಖುಷಿ, ಕಿಕ್ ಎರಡನ್ನೂ ಕೊಟ್ಟಿದೆ ಎಂದಿದ್ದಾರೆ. ಕವಲುದಾರಿ, ಕನ್ನಡದಲ್ಲಿ ಭಾರಿ ನಿರೀಕ್ಷೆ ಹುಟ್ಟುಹಾಕಿರುವ ಸಿನಿಮಾ. ಗೋಧಿ ಬಣ್ಣ ಸಾಧಾರಣ ಮೈಕಟ್ಟು ನಂತರ ನಿರ್ದೇಶಕ ಹೇಮಂತ್ ರಾವ್ ನಿರ್ದೇಶಿಸಿರುವ ಸಿನಿಮಾ ಇದು.

  ತಮ್ಮನಿಗೆ ಮೊದಲು ಶುಭಾಶಯ ತಿಳಿಸಿರುವುದು ಅಣ್ಣ ಶಿವಣ್ಣ. ಸ್ವತಃ ನಟನಾಗಿ, ಇನ್ನೊಬ್ಬ ನಟನಿಗೆ ಸಿನಿಮಾ ಮಾಡಿದ್ದಾರೆ ಅಂದ್ರೆ, ಕಥೆ ನಿಜಕ್ಕೂ ಪವರ್‍ಫುಲ್ಲಾಗೇ ಇರುತ್ತೆ. ಅಪ್ಪು ಸರ್, ಸಿನಿಮಾ ನೋಡೋಕೆ ನಾನೂ ಕಾಯ್ತಿದ್ದೇನೆ ಎಂದಿರುವುದು ರಾಕಿಂಗ್ ಸ್ಟಾರ್ ಯಶ್.

  ಪುನೀತ್ ಅವರ ಸಂಬಂಧಿಯೂ ಆಗಿರುವ ನಟ ಶ್ರೀಮುರಳಿ ಕೂಡಾ ಪುನೀತ್‍ರ ಮೊದಲ ಪ್ರಯತ್ನಕ್ಕೆ ಶುಭವಾಗಲಿ ಎಂದಿದ್ದಾರೆ.

 • ಟಿಶ್ಯೂ ಪೇಪರ್‍ನಲ್ಲಿ ಕವಲುದಾರಿ ಪ್ರಮೋಷನ್

  kavaludaari promotions on tissue paaper

  ಗೋಧಿ ಬಣ್ಣ ಸಾಧಾರಣ ಮೈಕಟ್ಟು ಚಿತ್ರವನ್ನು ಕಾಫಿ ಕಪ್ಪುಗಳಲ್ಲಿ ಪ್ರಮೋಟ್ ಮಾಡಿದ್ದ ನಿರ್ದೇಶಕ ಹೇಮಂತ್ ರಾವ್, ಕವಲುದಾರಿ ಚಿತ್ರವನ್ನು ಟಿಶ್ಯೂ ಪೇಪರ್‍ಗಳಲ್ಲಿ ಪ್ರಮೋಟ್ ಮಾಡುತ್ತಿದ್ದಾರೆ. ಟಿಶ್ಯೂ ಪೇಪರ್‍ಗಳಲ್ಲಿ ಚಿತ್ರದ ವಿವರಗಳನ್ನು ಮುದ್ರಿಸಿ, ಜನರನ್ನು ರೀಚ್ ಆಗಲು ಹೊರಟಿದ್ದಾರೆ.

  ಪಿಆರ್‍ಕೆ ಬ್ಯಾನರ್‍ನ ಮೊದಲ ಸಿನಿಮಾ ಕವಲುದಾರಿ. ಚಿತ್ರದ ಪ್ರಮೋಷನ್‍ಗೆ ಸ್ವತಃ ಪುನೀತ್ ಇದ್ದಾರೆ. ಅನಂತ್‍ನಾಗ್, ರಿಷಿ, ಸುಮನ್ ರಂಗನಾಥ್, ಅಚ್ಯುತ್ ಕುಮಾರ್, ರೋಷನಿ ಪ್ರಕಾಶ್ ಅಭಿನಯದ ಸಿನಿಮಾ ಕವಲುದಾರಿ.

  ಸಿನಿಮಾ ಪ್ರಚಾರಕ್ಕೆ ಈಗ ಪೋಸ್ಟರ್‍ಗಳಿಲ್ಲ, ಬ್ಯಾನರುಗಳೂ ಇಲ್ಲ. ಹೀಗಿರುವಾಗ ಚಿತ್ರದ ಪ್ರಚಾರಕ್ಕೆ ವಿಭಿನ್ನ ಐಡಿಯಾ ಕಂಡುಕೊಳ್ಳುವುದು ಅನಿವಾರ್ಯವೂ ಹೌದು. ಹೇಮಂತ್ ರಾವ್ ವಿಭಿನ್ನ ಹೆಜ್ಜೆಯಿಟ್ಟಿದ್ದಾರೆ.

 • ನಿವೃತ್ತ ಪೊಲೀಸ್ ಆಫೀಸರ್ ಅನಂತ್‍ನಾಗ್

  ananth nag plays a role of retired cop

  ಕವಲುದಾರಿ ಚಿತ್ರದಲ್ಲಿ ಅನಂತ್ ನಾಗ್ ಅವರ ಪಾತ್ರ ಯಾವುದು ಎನ್ನುವ ಗುಟ್ಟು ಬಿಟ್ಟುಕೊಟ್ಟಿದ್ದಾರೆ ನಿರ್ದೇಶಕ ಹೇಮಂತ್ ರಾವ್. ಕವಲುದಾರಿ ಚಿತ್ರದ 12 ದಿನದ ಶೂಟಿಂಗ್ ಮುಗಿಸಿರುವ ಹೇಮಂತ್ ರಾವ್, ಕತೆ ಬರೆದು ಪಾತ್ರಗಳ ಹುಡುಕಾಟಕ್ಕೆ ನಿಂತಾಗ, ಈ ಪಾತ್ರಕ್ಕೆ ಅನಂತ್‍ನಾಗ್ ಅವರನ್ನು ಹೊರತುಪಡಿಸಿ ಬೇರೆ ಕಲಾವಿದರೇ ಕಲ್ಪನೆಯಲ್ಲಿ ಬರಲಿಲ್ಲ. ಹೀಗಾಗಿ ಮತ್ತೆ ಒಂದಾಗುವ ಅದೃಷ್ಟ ಒಲಿದುಬಂತು ಎಂದಿದ್ದಾರೆ.

  ಕವಲು ದಾರಿ ಪುನೀತ್ ರಾಜ್‍ಕುಮಾರ್ ನಿರ್ಮಾಣದ ಚಿತ್ರ. ಹೇಮಂತ್ ರಾವ್ ಗೋಧಿ ಬಣ್ಣ ಸಾಧಾರಣ ಮೈಕಟ್ಟು ನಂತರ ನಿರ್ದೇಶಿಸುತ್ತಿರುವ 2ನೇ ಚಿತ್ರ. 2ನೇ ಚಿತ್ರದಲ್ಲೂ ಹೇಮಂತ್ ರಾವ್, ಅನಂತ್ ನಾಗ್ ಜೋಡಿ ಮುಂದುವರೆದಿದೆ. ಕೆಂಪು ಬಣ್ಣದ ಶಾಲು ಹೊದ್ದಿರುವ ಅನಂತ್ ನಾಗ್ ಬಿಳಿಬಣ್ಣದ ಜುಬ್ಬಾ ಪೈಜಾಮದಲ್ಲಿರುವ ಫೋಟೋ ಚಿತ್ರದ ಬಗ್ಗೆ ಕುತೂಹಲ ಮೂಡಿಸಿದೆ.

   

 • ಸ್ಯಾಂಡಲ್‍ವುಡ್ ಸುದ್ದಿ ಸಂಚಾರ

  news snippet november

  - ಚಿರಂಜೀವಿ ಸರ್ಜಾರ ` ಅಮ್ಮಾ ಐ ಲವ್ ಯೂ' ಚಿತ್ರಕ್ಕೆ ನಾಯಕಿಯಾಗಿ ನಿರ್ಶವಿಕಾ ನಾಯ್ಡು ಆಯ್ಕೆಯಾಗಿದ್ದಾರೆ. `ವಾಸು-ನಾನು ಪಕ್ಕಾ ಕಮರ್ಷಿಯಲ್' ಚಿತ್ರದಲ್ಲಿ ನಟಿಸಿದ್ದ ನಿಶ್ವಿಕಾಗೆ ಇದು 2ನೇ ಸಿನಿಮಾ.

  - ನೀನಾಸಂ ಸತೀಶ್, ತಮ್ಮದೇ ಬ್ಯಾನರ್‍ನಲ್ಲಿ `ರಾಮನು ಕಾಡಿಗೆ ಹೋದನು' ಚಿತ್ರವನ್ನು ಆರಂಭಿಸಿದ್ದಾರೆ. ಚಿತ್ರದ ಪೋಸ್ಟರ್ ರಿಲೀಸ್ ಆಗಿದ್ದು ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ.

  - ಸಂಚಾರಿ ವಿಜಯ್ ಅಭಿನಯದ ನನ್ ಮಗಳೇ ಹೀರೋಯಿನ್ ಚಿತ್ರದ ಟ್ರೇಲರ್‍ನ್ನು ಪುನೀತ್, ದರ್ಶನ್‍ರಕ್ಷಿತ್ ಶೆಟ್ಟಿ, ಪ್ರೇಮ್, ಪ್ರಜ್ವಲ್ ದೇವರಾಜ್, ಗಣೇಶ್, ಮೊದಲಾದವರು ನೋಡಿ ಮೆಚ್ಚಿಕೊಂಡಿದ್ದಾರೆ. ನಿರ್ದೇಶಕ ಬಾಹುಬಲಿ, ನಾಯಕ ನಟ ಸಂಚಾರಿ ವಿಜಯ್ ಅವರಂತೂ ಸ್ಟಾರ್ ನಟರ ಪ್ರಶಂಸೆಗೆ ಖುಷಿಯಾಗಿದ್ದಾರೆ.

  - ಪುನೀತ್ ರಾಜ್‍ಕುಮಾರ್ ನಿರ್ಮಾಣದ `ಕವಲು ದಾರಿ' ಚಿತ್ರಕ್ಕೆ ತಮಿಳಿನ ಸುಲೀಲ್ ಕುಮಾರ್ ಖಳನಟರಾಗಿ ಆಯ್ಕೆಯಾಗಿದ್ದಾರೆ. ಚಿತ್ರಕ್ಕೆ ಹೊಸ ಮುಖವೇ ಬೇಕು ಎಂಬ ಹಿನ್ನೆಲೆಯಲ್ಲಿ ನಿರ್ದೇಶಕ ಹೇಮಂತ್ ರಾವ್ ಹುಡುಕೀ ಹುಡುಕಿ, ಸುಲೀಲ್ ಕುಮಾರ್ ಅವರನ್ನು ಆಯ್ಕೆ ಮಾಡಿದ್ದಾರೆ. 

  - ಕೋಡ್ಲು ರಾಮಕೃಷ್ಣ `ಇನ್ನೂ ಹೆಸರಿಟ್ಟಿಲ್ಲ' ಎಂಬ ಹೊಸ ಚಿತ್ರ ಶುರು ಮಾಡಿದ್ದಾರೆ. ಅನಂತ್ ನಾಗ್ ಹಾಗೂ ದಿಗಂತ್ ಕಾಂಬಿನೇಷನ್‍ನ ಚಿತ್ರ ಶೀಘ್ರದಲ್ಲೇ ಶುರುವಾಗಲಿದೆ.

 • ಹೊಸ ಬ್ಯಾನರ್, ಹೊಸ ಡೌಟ್ಸು - ಪುನೀತ್ ಉತ್ತರ

  puneeth image

  ಪುನೀತ್ ರಾಜ್‍ಕುಮಾರ್ ಪಿಆರ್‍ಕೆ ಪ್ರೊಡಕ್ಷನ್ಸ್ ಎಂಬ ಹೊಸ ಬ್ಯಾನರ್ ಮೂಲಕ ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಪುನೀತ್ ಹೊಸ ಬ್ಯಾನರ್ ನಿರ್ಮಿಸಿದರು ಎಂದ ಕೂಡಲೇ ಒಂದಷ್ಟು ಹೊಸ ಅನುಮಾನಗಳು, ಪ್ರಶ್ನೆಗಳು ಎದ್ದಿವೆ. ಆ ರೀತಿಯ ಪ್ರಶ್ನೆಗಳು ಏಳೋದು ಸಹಜ. ಅಂತಹ ಪ್ರಶ್ನೆಗಳಿಗೆಲ್ಲ ಪುನೀತ್ ಉತ್ತರ ಕೊಟ್ಟಿದ್ದಾರೆ. ಇನ್ನೊಂದು ವಿಶೇಷವಿದೆ ಕೇಳಿ. ಪಿಆರ್‍ಕೆ ಪ್ರೊಡಕ್ಷನ್ಸ್ ಎಂದರೆ, ಪುನೀತ್ ರಾಜ್‍ಕುಮಾರ್ ಪ್ರೊಡಕ್ಷನ್ಸ್ ಅಲ್ಲ. ಪಾರ್ವತಮ್ಮ ರಾಜ್‍ಕುಮಾರ್ ಪ್ರೊಡಕ್ಷನ್ಸ್. ಇದು ತಾಯಿಯ ಹೆಸರಲ್ಲಿ ಪುನೀತ್ ಆರಂಭಿಸಿರುವ ಹೊಸ ಚಿತ್ರ ನಿರ್ಮಾಣ ಸಂಸ್ಥೆ.

  ಪ್ರಶ್ನೆ : ವಜ್ರೇಶ್ವರಿಯಿಂದ ಪಿಆರ್‍ಕೆ ಹೇಗೆ ಭಿನ್ನ..? ಇದು ಬೇರೆಯೇ ಸಂಸ್ಥೆನಾ..?

  ಪುನೀತ್ : ಪಿಆರ್‍ಕೆ ಬ್ಯಾನರ್ ಉದ್ಘಾಟನೆಯಾಯಿತು ಎಂದ ಕೂಡಲೇ ವಜ್ರೇಶ್ವರಿ ಸಂಸ್ಥೆಯಿಂದ ದೂರವೇನೂ ಇರಲ್ಲ. ಅದರಂತೆಯೇ ಇದು ಕೂಡಾ ಇನ್ನೊಂದು ಬ್ಯಾನರ್ ಅಷ್ಟೆ. ಮುಂದಿನ ವರ್ಷ ಸ್ವಂತ ಬ್ಯಾನರ್‍ನಲ್ಲೇ ಚಿತ್ರ ನಿರ್ಮಾಣದ ಯೋಚನೆ ಇದೆ. ವಜ್ರೇಶ್ವರಿಯಲ್ಲಾದರೂ ನಿರ್ಮಾಣವಾಗಬಹುದು, ಪಿಆರ್‍ಕೆ ಬ್ಯಾನರ್‍ನಲ್ಲಾದರೂ ನಿರ್ಮಾಣವಾಗಬಹುದು.

  ಪ್ರಶ್ನೆ : ಇನ್ನು ಮುಂದೆ ಬೇರೆ ಬ್ಯಾನರ್‍ಗಳಲ್ಲಿ ನಟಿಸೋದಿಲ್ವಾ..?

  ಪುನೀತ್ : ಹಾಗೇನಿಲ್ಲ. ಬೇರೆ ಬ್ಯಾನರ್‍ಗಳಲ್ಲೂ ನಟಿಸುತ್ತೇನೆ. ನಮ್ಮ ಬ್ಯಾನರ್‍ನಲ್ಲೂ ನಟಿಸುತ್ತೇನೆ.

  ಪ್ರಶ್ನೆ : ನೀವು ನಿರ್ಮಿಸುತ್ತಿರುವ ಚಿತ್ರದಲ್ಲಿ ಬೇರೊಬ್ಬರು ಹೀರೋ ಆಗುವದು ಹೊಸ ಪ್ರಯತ್ನ ಅಲ್ಲವೇ..?

  ಪುನೀತ್ : ಹಾಗೇನಿಲ್ಲ. ಈ ಹಿಂದೆ, ಸುದೀಪ್, ದರ್ಶನ್ ಇಂಥ ಪ್ರಯತ್ನ ಮಾಡಿದ್ದಾರೆ. ನಮ್ಮಲ್ಲೂ ಹೊಸ ಹೊಸ ಪ್ರಯೋಗಗಳಿಗೆ ಜನ ಒಪ್ಪಿಕೊಳ್ಳುತ್ತಿದ್ದಾರೆ. ಹೀಗಾಗಿ ಇಂಥ ಕೆಲಸಕ್ಕೆ ಕೈ ಹಾಕಲು ಧೈರ್ಯವಾಯಿತು.

  ಪ್ರಶ್ನೆ : ನಿಮ್ಮ ಬ್ಯಾನರ್‍ನಿಂದ ಎಂಥ ಸಿನಿಮಾಗಳು ಬರುತ್ತವೆ..?

  ಪುನೀತ್ ; ಕಮರ್ಷಿಯಲ್ ಸಿನಿಮಾಗಳೇ ಬರುತ್ತವೆ. ಪ್ರಯೋಗಾತ್ಮಕ ಕಮರ್ಷಿಯಲ್ ಸಿನಿಮಾಗಳಿಗೆ ಮೊದಲ ಆದ್ಯತೆ ನೀಡುವ ಮನಸ್ಸಿದೆ. ನನ್ನ ಪ್ರಕಾರ, ಸಿನಿಮಾಗಳನ್ನು ಕಮರ್ಷಿಯಲ್, ಆರ್ಟ್ ಎಂದು ವಿಭಜಿಸಲೇಬಾರದು. ಒಂದು ಸಿನಿಮಾ ಎಲ್ಲರಿಗೂ ತಲುಪುವಂತಿರಬೇಕು.

Mugilpete Shooting Pressmeet In Sakleshpura

Odeya Audio Launch Gallery