` shankar nag, - chitraloka.com | Kannada Movie News, Reviews | Image

shankar nag,

 • ಅಂದು ಶಂಕರ್`ಗೆ ಅನಂತ್.. ಈಗ ಚಿರುಗೆ ಧ್ರುವ..

  dhruva to dub for chiru's fllm

  ಚಿರಂಜೀವಿ ಸರ್ಜಾ ಅವರ ಅಕಾಲಿಕ ಮರಣ, ಅವರ ಕುಟುಂಬವನ್ನಷ್ಟೇ ಅಲ್ಲ, ಚಿತ್ರೋದ್ಯಮಿಗಳನ್ನೂ ಕಂಗೆಡಿಸಿರುವುದು ಸತ್ಯ. ಏಕೆಂದರೆ, ಚಿರು ಕೈತುಂಬಾ ಚಿತ್ರಗಳನ್ನಿಟ್ಟುಕೊಂಡಿದ್ದರು. ಕೆಲವು ಚಿತ್ರಗಳು ಚಿತ್ರೀಕರಣ ಮುಗಿಸಿದ್ದರೆ, ಇನ್ನೂ ಕೆಲವು ಪ್ರಿ-ಪ್ರೊಡಕ್ಷನ್ ಹಂತದಲ್ಲಿದ್ದವು. ಸಮಸ್ಯೆಯಾಗಿರುವುದು ಶೂಟಿಂಗ್ ಮುಗಿಸಿ, ಪೋಸ್ಟ್ ಪ್ರೊಡಕ್ಷನ್‍ನಲ್ಲಿರೋ ಚಿತ್ರಗಳಿಗೆ.

  ರಾಮ್‍ನಾರಾಯಣ್ ನಿರ್ದೇಶನದ ರಾಜಮಾರ್ತಾಂಡ ಚಿತ್ರದ ಚಿತ್ರೀಕರಣ ಮುಗಿದು ಎಡಿಟಿಂಗ್ ಟೇಬಲ್ ಮೇಲಿತ್ತು. ಡಬ್ಬಿಂಗ್ ಬಾಕಿಯಿತ್ತು. ಈಗ ಚಿರು ಇಲ್ಲ. ಹೀಗಾಗಿ ಅಣ್ಣನ ಪಾತ್ರಕ್ಕೆ ಸ್ವತಃ ಡಬ್ಬಿಂಗ್ ಮಾಡಲು ಒಪ್ಪಿಕೊಂಡಿದ್ದಾರೆ ಧ್ರುವ ಸರ್ಜಾ.

  ಈ ಹಿಂದೆ ಶಂಕರ್ ನಾಗ್ ಅಕಾಲಿಕ ಸಾವಿಗೀಡಾದಾಗಲೂ ಹೀಗೆಯೇ ಆಗಿತ್ತು. ಆಗ ಶಂಕರ್ ಅಭಿನಯಿಸಿದ್ದ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದ ನಿಗೂಢ ರಹಸ್ಯ ಮತ್ತು ಸುಂದರ ಕಾಂಡ ಚಿತ್ರಗಳನ್ನು ಅಣ್ಣ ಅನಂತ್ ನಾಗ್ ಮುಗಿಸಿಕೊಟ್ಟಿದ್ದರು. ಈಗ ಧ್ರುವ ಸರ್ಜಾ.

  ಅತ್ತ ತಮ್ಮ ಅಭಿನಯದ ಪೊಗರು ಚಿತ್ರದ ಬ್ಯುಸಿ ಶೆಡ್ಯೂಲ್ ನಡುವೆಯೇ ಅಣ್ಣನ ಚಿತ್ರಗಳ ಡಬ್ಬಿಂಗ್ ಮುಗಿಸಿಕೊಡಲು ಒಪ್ಪಿಕೊಂಡಿದ್ದಾರೆ ಧ್ರುವ.

 • ಎಂಜಿ ರಸ್ತೆಯಲ್ಲಿ ಶಂಕರ್​ನಾಗ್ ಮತ್ತೊಮ್ಮೆ ನಿಧನ

  shankar nag death again

  ಶಂಕರ್​ನಾಗ್ ಕನ್ನಡ ಚಿತ್ರರಂಗದ ಮುತ್ತು. ಆ ಮುತ್ತಿನ ಹೆಸರಲ್ಲಿದ್ದ ಏಕೈಕ ಚಿತ್ರಮಂದಿರ ಎಂಜಿ ರಸ್ತೆಯಲ್ಲಿದ್ದ ಶಂಕರ್​ನಾಗ್ ಚಿತ್ರಮಂದಿರ. ಮೊನ್ನೆ ಗುರುವಾರದಿಂದ ಚಿತ್ರಮಂದಿರ ಕಣ್ಣು ಮುಚ್ಚಿದೆ. ಅಲ್ಲೀಗ ಕನ್ನಡ ಚಿತ್ರಗಳ ಪ್ರದರ್ಶನ ಇಲ್ಲ. 

  ಒಂದಾನೊಂದು ಕಾಲದಿಂದ ಬೆಂಗಳೂರಿನ ಎಂಜಿ ರಸ್ತೆಯಲ್ಲಿ ಲ್ಯಾಂಡ್​ಮಾರ್ಕ್​ಗಳಲ್ಲೊಂದಾಗಿದ್ದ ಶಂಕರ್​ನಾಗ್ ಚಿತ್ರಮಂದಿರಕ್ಕೆ ಜನರೇ ಬರುತ್ತಿಲ್ಲವಂತೆ. ಮಲ್ಟಿಪ್ಲೆಕ್ಸ್​ಗಳ ಭರಾಟೆ ಇದಕ್ಕೆಲ್ಲ ಕಾರಣವಂತೆ. ಅದು ಬಿಬಿಎಂಪಿಯವರು ಹೇಳುತ್ತಿರುವ ಸಬೂಬು. ನಂಬೋಕೆ ಶಂಕರ್ ಅಭಿಮಾನಿಗಳು ತಯಾರಿಲ್ಲ.

  ಶಂಕರ್​ನಾಗ್ ಚಿತ್ರಮಂದಿರ ಶುರುವಾಗಿದ್ದು 1979ರಲ್ಲಿ. ಆಗ ಅದು ಸಿಂಫೋನಿ ಚಿತ್ರಮಂದಿರವಾಗಿತ್ತು. 1991ರಲ್ಲಿ ಶಂಕರ್​ನಾಗ್ ನಿಧನದ ನಂತರ ಆ ಚಿತ್ರಮಂದಿರಕ್ಕೆ ಫೇಮ್ ಶಂಕರ್​ನಾಗ್ ಚಿತ್ರಮಂದಿರ ಎಂದು ಹೊಸದಾಗಿ ನಾಮಕರಣ ಮಾಡಲಾಯ್ತು. ಅದಕ್ಕೂ ಮೊದಲು ಅಲ್ಲಿ ಹೆಚ್ಚಾಗಿ ಪ್ರದರ್ಶನವಾಗುತ್ತಿದ್ದುದು ಇಂಗ್ಲಿಷ್ ಚಿತ್ರಗಳು. ನಂತರ ಅದು ಕನ್ನಡ ಚಿತ್ರಗಳ ಪ್ರದರ್ಶನಕ್ಕೇ ಮೀಸಲಾಯ್ತು.

  560 ಸೀಟುಗಳ ಈ ಚಿತ್ರಮಂದಿರಕ್ಕೆ ಬೀಗ ಬೀಳುತ್ತಿರುವುದು ಇದೇ ಮೊದಲೇನಲ್ಲ. 2005ರಲ್ಲಿ ಒಮ್ಮೆ, 2009ರಲ್ಲಿ ಮತ್ತೊಮ್ಮೆ ಇದೇ ಸಮಸ್ಯೆ ತಲೆದೋರಿತ್ತು. ಮುಂಬೈನ ಶೃಂಗಾರ್ ಸಿನಿಮಾಸ್​ನವರು ಚಿತ್ರಮಂದಿರವನ್ನು 2009ರಲ್ಲಿ ವಹಿಸಿಕೊಂಡಿದ್ದರು. ಆದರೆ, ತಿಂಗಳಿಗೆ ಹದಿನೇಳೂವರೆ ಲಕ್ಷ ಬಾಡಿಗೆ ಕಟ್ಟಲಾಗದೆ, ಚಿತ್ರಮಂದಿರವನ್ನು ಕೈಬಿಟ್ಟಿದ್ದಾರೆ.

  ಬೆಂಗಳೂರಿನಲ್ಲಿ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು ಒಂದೊಂದಾಗಿ ಅಕಾಲ ಮರಣಕ್ಕೀಡಾಗುತ್ತಿರುವ ಈ ಸಮಯದಲ್ಲಿ,  ಚಿತ್ರರಂಗದ ಇತಿಹಾಸವೇ ಆಗಿರುವ ಶಂಕರ್​ನಾಗ್ ಹೆಸರಿನ ಚಿತ್ರಮಂದಿರದ ಬಾಗಿಲು ಮುಚ್ಚುತ್ತಿದೆ. ಆಟೋರಾಜನ ಅಭಿಮಾನಿಗಳು ಹೇಗೆ ಸ್ವೀಕರಿಸುತ್ತಾರೋ..?

  ಬೆಂಗಳೂರಿನ ಅಭಿವೃದ್ಧಿಗೆ ಶಂಕರ್​ನಾಗ್ ಕಂಡಿದ್ದ ಹಲವು ಕನಸುಗಳು, ಈಗೀಗಾ ಸಾಕಾರಗೊಳ್ಳುವ ಹಂತದಲ್ಲಿವೆ. ಮೆಟ್ರೋ, ನಂದಿಬೆಟ್ಟಕ್ಕೆ ರೋಪ್​ ವೇ..ಇತ್ಯಾದಿ..ಆದರೆ, ಆ ಕನಸುಗಳನ್ನು ಕಂಡಿದ್ದ ಶಂಕರನ ನೆನಪನ್ನೇ ಬೆಂಗಳೂರು ಕಳೆದುಕೊಳ್ಳುತ್ತಿದೆ.

 • ಶಾಲೆಯಲ್ಲಿ ಪಾಠವಾದರು ಶಂಕರ್‍ನಾಗ್

  shankar nag in text books

  ಶಂಕರ್‍ನಾಗ್. ಕನ್ನಡಿಗರು ಮರೆಯದ ಮಾಣಿಕ್ಯ. ಚಿಕ್ಕ ವಯಸ್ಸಿನಲ್ಲೇ ಇಹಲೋಕ ತ್ಯಜಿಸಿದರೂ, ಸಾಧನೆಯ ಶಿಖರವನ್ನೇ ಸೃಷ್ಟಿಸಿದ್ದ ಕಲಾವಿದ, ನಿರ್ದೇಶಕ, ತಂತ್ರಜ್ಞ. ನಮ್ಮನ್ನಗಲಿ 3 ದಶಕಗಳಾಗಿದ್ದರೂ, ಶಂಕರ್ ನಾಗ್ ಇಂದಿಗೂ ಜನಮಾನಸದಲ್ಲಿ ಉಳಿದಿದ್ದಾರೆ.

  ಆಟೋ ಡ್ರೈವರ್‍ಗಳ ಪಾಲಿಗೆ ಆಟೋ ರಾಜನಾಗಿ, ಕ್ಲಾಸಿಕ್ ಚಿತ್ರ ಮೆಚ್ಚುವವರ ಕಣ್ಣಲ್ಲಿ ವಿಭಿನ್ನ ದೃಷ್ಟಿಕೋನದ ನಿರ್ದೇಶಕರಾಗಿ, ಕಮಷಿಯಲ್ ಚಿತ್ರಪ್ರೇಮಿಗಳ ನೆನಪಲ್ಲಿ ಸಾಂಗ್ಲಿಯಾನ ಆಗಿ, ಕನಸುಗಾರರಿಗೆ ಸದಾ ಸ್ಫೂರ್ತಿಯಾಗಿದ್ದಾರೆ. 

  ಇಂತಹ ಶಂಕರ್‍ನಾಗ್ ಅವರ ಜೀವನ ಚರಿತ್ರೆ, ಈಗ ಶಾಲಾ ಪಠ್ಯಗಳಲ್ಲೂ ಸೇರಿದೆ ಎನ್ನುವುದೇ ಹೆಮ್ಮೆಯ ವಿಚಾರ. 8ನೇ ತರಗತಿಯ ಕನ್ನಡ ಪುಸ್ತಕದಲ್ಲಿ ಶಂಕರ್‍ನಾಗ್ ಅವರ ಅಧ್ಯಾಯವೊಂದನ್ನು ಸೇರಿಸಲಾಗಿದೆ. ಇದುವರೆಗೆ ಪಠ್ಯ ಪುಸ್ತಕಗಳಲ್ಲಿ ಡಾ.ರಾಜ್ ಬಗ್ಗೆ ಮಾತ್ರ ಅಧ್ಯಾಯವಿತ್ತು. ಈಗ ಆ ಸಾಲಿಗೆ ಶಂಕರ್‍ನಾಗ್ ಕೂಡಾ ಸೇರಿದ್ದಾರೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery