` trimurthy - chitraloka.com | Kannada Movie News, Reviews | Image

trimurthy

 • ಪಾರ್ವತಮ್ಮ ರಾಜ್​ಕುಮಾರ್ ಮೊದಲ ನಿರ್ಮಾಣದ ಚಿತ್ರ ಯಾವುದು?

  trimurthy image

  ಪಾರ್ವತಮ್ಮ ರಾಜ್​ಕುಮಾರ್ ನಿರ್ಮಾಣದ ಮೊದಲ ಚಿತ್ರ ತ್ರಿಮೂರ್ತಿ. ಅದು ರಾಜ್​ ಅವರ ಮಾರುಕಟ್ಟೆ ಮೌಲ್ಯವನ್ನು ಕಡಿಮೆ ತೋರಿಸುತ್ತಿದ್ದ ನಿರ್ಮಾಪಕರು, ವಿತರಕರಿಗೆ ಸಡ್ಡು ಹೊಡೆದು ಪೂರ್ಣಿಮಾ ಕಂಬೈನ್ಸ್​ನಲ್ಲಿ ನಿರ್ಮಿಸಿದ ಚಿತ್ರ. ಆದರೆ, ಅದಕ್ಕೂ ಮೊದಲೇ ಚಿತ್ರರಂಗದಲ್ಲಿ ಪಾರ್ವತಮ್ಮನವರ ಹೆಜ್ಜೆ ಗುರುತುಗಳಿವೆ.

  1959ರಲ್ಲಿ ನಿರ್ಮಾಣವಾಗಿ 1960ರಲ್ಲಿ ಬಿಡುಗಡೆಯಾದ ಚಿತ್ರವಿದು. ಕನ್ನಡ ಚಿತ್ರರಂಗದ 100ನೇ ವಾಕ್​ಚಿತ್ರವೂ ರಣಧೀರ ಕಂಠೀರವ ಚಿತ್ರ. ಕನ್ನಡ ಚಲನಚಿತ್ರ ಕಲಾವಿದರ ಸಂಘದ ಹೆಸರಲ್ಲಿ ನಿರ್ಮಿಸಿದ ಈ ಚಿತ್ರ, ಕನ್ನಡದ ಮೊದಲ ಐತಿಹಾಸಿಕ ಚಿತ್ರವೂ ಹೌದು.

  ಈ ಚಿತ್ರದ ನಿರ್ಮಾಣದ ಹೊಣೆ ಹೊತ್ತಿದ್ದವರು ಕನ್ನಡ ಚಲನಚಿತ್ರ ಕಲಾವಿದರ ಸಂಘ. ರಾಜ್​ಕುಮಾರ್, ನರಸಿಂಹ ರಾಜು, ಬಾಲಕೃಷ್ಣ, ಲೀಲಾವತಿ ಮತ್ತು ಜಿ.ವಿ. ಅಯ್ಯರ್ ಒಟ್ಟಾಗಿ ಸೇರಿ, ಕನ್ನಡ ಚಿತ್ರರಂಗವನ್ನು ಮದರಾಸ್​ನಿಂದ ಹೊರತರಲು ನಿರ್ಮಿಸಿದ್ದ ಚಿತ್ರವದು. 

  ಹಾಗೆ ನೋಡಿದರೆ, ಈ ಚಿತ್ರದ ಮೂಲಕವೇ ಪಾರ್ವತಮ್ಮ ಮೊದಲ ಬಾರಿಗೆ ನಿರ್ಮಾಪಕಿಯಾದರು. ಆದರೆ, ಹೆಸರು ಹಾಕಿಕೊಳ್ಳಲಿಲ್ಲ. ಆರಂಭದಲ್ಲಿ ವಿತರಕರು ಈ ಚಿತ್ರವನ್ನು ಬಿಡುಗಡೆ ಮಾಡಲು ಕೂಡಾ ಮುಂದೆ ಬರಲಿಲ್ಲ.  ಆ ಚಿತ್ರ ಮೈಸೂರಿನ ಭಾರತ್ ಎಂಬ ಒಂದೇ ಒಂದು ಚಿತ್ರಮಂದಿರದಲ್ಲಿ ಬಿಡುಗಡೆಯಾಗಿತ್ತು. ಚಿತ್ರ ಯಶಸ್ವಿಯೂ ಆಗಿತ್ತು. ರಮೇಶ್ ಮೂವೀಸ್ ಆ ಚಿತ್ರವನ್ನು ವಿತರಣೆ ಮಾಡಿತ್ತು.