` kurukshetra, - chitraloka.com | Kannada Movie News, Reviews | Image

kurukshetra,

 • Vivek Oberoi in Kurukshetra Say Reports

  vivek oberoi in kurukshetra, reports

  According to some media reports Bollywood star Vivek Oberoi is likely to act in the Kannada film Kurukshetra. The multistarrer film is produced by Muniratna and is Challenging Star Darshan's 50th film.

  It is directed by Naganna who directed the historical film Krantiveera Sangolli Rayanna with Darshan earlier. The reports suggest that Vivek Oberoi has already been approached by the producer to act in the film, most likely in the role of Krishna. However the director Naganna has not confirmed the news. Darshan plays the role of Duryodhana in the film and many top Kannada actors were supposed to act in this film. 

   

 • ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲೂ ದರ್ಶನ್ ಹವಾ

  biffes 2020 winners

  ದರ್ಶನ್ ಅಂದ್ರೆ ಮಾಸ್. ಆದರೆ.. ದರ್ಶನ್ ಈ ಬಾರಿ ಕ್ಲಾಸ್ ಕೆಟಗರಿಯಲ್ಲೂ ಭರ್ಜರಿ ಸೌಂಡು ಮಾಡಿದ್ದಾರೆ. ಬೆಂಗಳೂರಿನಲ್ಲಿ ಮುಕ್ತಾಯಗೊಂಡ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ದರ್ಶನ್ ಅವರ 2 ಚಿತ್ರಗಳಿಗೆ ಪ್ರಶಸ್ತಿ ಲಭಿಸಿದೆ.

  ಜನಪ್ರಿಯ ಚಿತ್ರಗಳ ಪ್ರಶಸ್ತಿಯಲ್ಲಿ ಮುನಿರತ್ನ ಕುರುಕ್ಷೇತ್ರ ಪ್ರಥಮ ಪ್ರಶಸ್ತಿ ಗೆದ್ದರೆ, ಶೈಲಜಾ ನಾಗ್ ಅವರ ಯಜಮಾನ ಚಿತ್ರಕ್ಕೆ 3ನೇ ಪ್ರಶಸ್ತಿ ಲಭಿಸಿದೆ. 2ನೇ ಸ್ಥಾನ ಜಯತೀರ್ಥ-ರಿಷಬ್ ಶೆಟ್ಟಿ ಕಾಂಬಿನೇಷನ್ನಿನ ಬೆಲ್‍ಬಾಟಂ ಚಿತ್ರಕ್ಕೆ.

  ಇನ್ನು ಅತ್ಯುತ್ತಮ ಚಿತ್ರ ವಿಭಾಗದಲ್ಲಿ ಪುನೀತ್ ಬ್ಯಾನರ್‍ನ ಕವಲುದಾರಿ ಚಿತ್ರಕ್ಕೆ ಪ್ರಶಸ್ತಿ ಲಭಿಸಿದೆ. ಹೇಮಂತ್ ರಾವ್ ಖುಷಿ ಖುಷಿಯಾಗಿದ್ದಾರೆ. 2ನೇ ಸ್ಥಾನ ಒಂದು ಶಿಕಾರಿಯ ಕಥೆ ಚಿತ್ರಕ್ಕೆ. 3ನೇ ಅತ್ಯುತ್ತಮ ಚಿತ್ರ ದಯಾಳ್ ಪದ್ಮನಾಭನ್ ಅವರ ರಂಗನಾಯಕಿ ಚಿತ್ರಕ್ಕೆ.

  ಸೃಜನ್ ಲೋಕೇಶ್-ಮೇಘನಾ ರಾಜ್ ಅಭಿನಯದ ಇನ್ನೂ ರಿಲೀಸ್ ಆಗಬೇಕಿರುವ ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ ಚಿತ್ರಕ್ಕೆ ವಿಶೇಷ ತೀರ್ಪುಗಾರರ ಪ್ರಶಸ್ತಿ ಲಭಿಸಿದೆ.

 • ಅಂತಿಮ ಹಂತದಲ್ಲಿ ಕುರುಕ್ಷೇತ್ರ

  kurukshetra image

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 50ನೇ ಚಿತ್ರ ಕುರುಕ್ಷೇತ್ರ ಅಂತಿಮ ಹಂತದಲ್ಲಿದೆ. ರಾಮೋಜಿರಾವ್ ಫಿಲ್ಮ್ ಸಿಟಿಯಲ್ಲಿ ಸಿದ್ಧವಾಗುತ್ತಿರುವ ಸಿನಿಮಾ, 20 ಸೆಟ್‍ಗಳಲ್ಲಿ ಚಿತ್ರೀಕರಣಗೊಳ್ಳುತ್ತಿದೆ. ದಿನಕ್ಕೆ 700ರಿಂದ 800 ಕೆಲಸಗಾರರು ಕೆಲಸ ಮಾಡುತ್ತಿರುವುದು ವಿಶೇಷ.

  ಪತ್ರಕರ್ತರನ್ನೆಲ್ಲ ಹೈದರಾಬಾದ್‍ನ ಸೆಟ್‍ಗೆ ಕರೆಸಿಕೊಂಡು ಚಿತ್ರದ ಶೂಟಿಂಗ್ ವೈಭವ ಪರಿಚಯಿಸಿದ್ದಾರೆ ಮುನಿರತ್ನ. ಅಂಬಾರಿ ಮೇಲೆ ಬರುತ್ತಿರುವ ದರ್ಶನ್, ದುರ್ಯೋಧನನಿಗೆ ಬಹುಪರಾಕ್ ಹೇಳುವ ದೃಶ್ಯ, ಆ ದೃಶ್ಯದ ರಾಜವೈಭವ ಎಲ್ಲವನ್ನೂ ಅದ್ದೂರಿಯಾಗಿ ತರಲಾಗುತ್ತಿದೆ.

  ಚಿತ್ರದ ಸೆಟ್‍ಗೆ ಬೇರೆ ಚಿತ್ರರಂಗದ ಹಲವಾರು ಜನ ಬಂದು ನೋಡಿಕೊಂಡು ಹೋಗಿದ್ದಾರೆ. ಇಷ್ಟು ಅದ್ದೂರಿತನ ನಿಮ್ಮ ಕನ್ನಡಕ್ಕೆ ವರ್ಕೌಟ್ ಆಗುತ್ತಾ ಎಂದು ಹಲವರು ಕೇಳಿದ್ದಾರಂತೆ. ಅದನ್ನು ಸವಾಲಾಗಿ ತೆಗೆದುಕೊಂಡು ಸಿನಿಮಾ ಮಾಡುತ್ತಿದ್ದೇವೆ ಎಂದು ಹೇಳಿಕೊಂಡಿದ್ದಾರೆ ಮುನಿರತ್ನ.

 • ಅಣ್ಣಾವ್ರನ್ನು ಬಿಟ್ಟರೆ, ಈ ಸಾಹಸ ಮಾಡಿದ್ದು ದರ್ಶನ್ ಮಾತ್ರ..!

  ravishankar gowda compares darshan to raj

  ಡಾ.ರಾಜ್‍ರನ್ನು ಬಿಟ್ಟರೆ, ಅಂಥಾದ್ದೊಂದು ಧೈರ್ಯ, ಸಾಹಸ ಮೆರೆದಿರುವುದು ಕೇವಲ ದರ್ಶನ್. ಇಂಥಾದ್ದೊಂದು ಮಾತು ಹೇಳಿರುವುದು ರವಿಶಂಕರ್ ಗೌಡ. ಸಿಲ್ಲಿ ಲಲ್ಲಿ ಧಾರಾವಾಹಿಯ ಮೂಲಕವೇ ಸ್ಟಾರ್ ಆದ ರವಿಶಂಕರ್ ಗೌಡ, ಸಮಾರಂಭವೊಂದರಲ್ಲಿ ಈ ವಿಷಯವನ್ನು ಹಂಚಿಕೊಂಡಿದ್ದಾರೆ.

  ರವಿಶಂಕರ್ ಗೌಡ, ಇಂಥಾದ್ದೊಂದು ಹೇಳಿಕೆ ಕೊಡೋಕೆ ಕಾರಣ, ಕುರುಕ್ಷೇತ್ರ. ಕುರುಕ್ಷೇತ್ರ ಚಿತ್ರದಲ್ಲಿ ದರ್ಶನ್ ನಟಿಸುತ್ತಿರುವುದು ದುರ್ಯೋಧನನ ಪಾತ್ರದಲ್ಲಿ. ಅದು ಮಹಾಭಾರತದ ಖಳನಾಯಕನ ಪಾತ್ರ. ಮಾಸ್ ಹೀರೋ ಆಗಿದ್ದುಕೊಂಡು ಇಂಥ ಖಳನಟನ ಪಾತ್ರ ಮಾಡೋಕೆ ಎಂಟೆದೆ ಬೇಕು. ಅಂಥಾದ್ದೊಂದು ಧೈರ್ಯ ಡಾ.ರಾಜ್ ಅವರಿಗೆ ಇತ್ತು ಎಂದಿದ್ದಾರೆ ರವಿಶಂಕರ್.

  ಡಾ.ರಾಜ್, ತಮ್ಮ ಖ್ಯಾತಿಯ ಉತ್ತುಂಗದಲ್ಲಿದ್ದಾಗ ಭಕ್ತ ಪ್ರಹ್ಲಾದ ಚಿತ್ರದಲ್ಲಿ ಹಿರಣ್ಯಕಶಿಪು ಪಾತ್ರದಲ್ಲಿ ನಟಿಸಿದ್ದರು. ಅದು ದೇವರನ್ನೇ ದ್ವೇಷಿಸುವ, ತನ್ನನ್ನು ತಾನೇ ದೇವರು ಎಂದು ಕರೆದುಕೊಳ್ಳುವ ರಾಕ್ಷಸನ ಪಾತ್ರ. ಇಂದಿಗೂ ಅಭಿಮಾನಿಗಳ ಕಣ್ಣೆದುರು ಅಣ್ಣಾವ್ರ ಆ ಪಾತ್ರದ ಗತ್ತು, ಗಾಂಭೀರ್ಯ, ನಡಿಗೆ, ಧ್ವನಿ ಕಣ್ಣಿಗೆ ಕಟ್ಟಿದಂತಿದೆ. ಈಗ ದರ್ಶನ್, ದುರ್ಯೋಧನನ ಪಾತ್ರ ಮಾಡುತ್ತಿದ್ದಾರೆ. 

  ದರ್ಶನ್ ದುರ್ಯೋಧನನ ಗೆಟಪ್‍ನಲ್ಲಿ ಎಷ್ಟು ಚೆನ್ನಾಗಿ ಕಾಣಿಸುತ್ತಿದ್ದಾರೆ ಅಂದ್ರೆ, ಯಾರ ದೃಷ್ಟಿಯೂ ದರ್ಶನ್ ಮೇಲೆ ಬೀಳದಿರಲಿ ಎಂದು ಹಾರೈಸಿದ್ದಾರೆ ರವಿಶಂಕರ್ ಗೌಡ. 

 • ಅಪ್ಪು ಅಷ್ಟೇ ಅಲ್ಲ, ಅಪ್ಪು ಅಭಿಮಾನಿಗಳೂ ಕುರುಕ್ಷೇತ್ರಕ್ಕೆ ವೇಯ್ಟಿಂಗ್

  puneeth waiting for kurukshetra

  ಕುರುಕ್ಷೇತ್ರ ಚಿತ್ರ ರಿಲೀಸ್‍ಗೂ ಮುನ್ನವೇ ಭರ್ಜರಿ ನಿರೀಕ್ಷೆ ಹುಟ್ಟಿಸಿರುವ ಸಿನಿಮಾ. ಅದು ಕೇವಲ ಚಾಲೆಂಜಿಂಗ್ ಸ್ಟಾರ್ ದರ್ಶನ್‍ರ 50ನೇ ಸಿನಿಮಾ ಎಂಬ ಕಾರಣಕ್ಕೆ ಅಲ್ಲ. ಅದು ಇಡೀ ಕನ್ನಡ ಚಿತ್ರರಂಗದ ಕಲಾವಿದರ ದಂಡನ್ನೇ ಒಟ್ಟುಗೂಡಿಸಿರುವ ಸಿನಿಮಾ. ಅದರಲ್ಲೂ ದುರ್ಯೋಧನನಾಗಿ ಕಾಣಿಸಿಕೊಂಡಿರುವ ದರ್ಶನ್ ನಿರೀಕ್ಷೆಯ ಶಿಖರವನ್ನೇ ಅಭಿಮಾನಿಗಳ ಎದುರು ಇಟ್ಟುಬಿಟ್ಟಿದ್ದಾರೆ.

  ಸಹಜವಾಗಿಯೇ ಚಿತ್ರದ ಬಗ್ಗೆ ಕನ್ನಡ ಚಿತ್ರರಂಗದ ಎಲ್ಲ ತಾರೆಯರೂ ನಿರೀಕ್ಷೆಯಿಂದ ಕಾಯುತ್ತಿರುವುದಾಗಿ ಹೇಳಿದ್ದಾರೆ. ಇತ್ತೀಚೆಗೆ ಅಂಜನಿಪುತ್ರ ಚಿತ್ರದ ಬಿಡುಗಡೆ ವೇಳೆ ಪವರ್‍ಸ್ಟಾರ್ ಪುನೀತ್ ರಾಜ್‍ಕುಮಾರ್‍ಗೆ ಕುರುಕ್ಷೇತ್ರ ಚಿತ್ರದ ಬಗ್ಗೆ ಪ್ರಶ್ನೆಗಳು ಎದುರಾದವು. ದರ್ಶನ್ ಅವರ ಲುಕ್‍ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದ ಪುನೀತ್, ಚಿತ್ರವನ್ನು ನೋಡಲು ಕಾಯುತ್ತಿದ್ದೇನೆ ಎಂದು ಹೇಳಿದ್ದರು.

  ಈಗ ಡಿ ಬಾಸ್ ಫ್ಯಾನ್ಸ್ ಅಷ್ಟೇ ಅಲ್ಲ, ಅಪ್ಪು ಫ್ಯಾನ್ಸ್ ಕೂಡಾ ದರ್ಶನ್ ಲುಕ್ಕು, ಗೆಟಪ್‍ಗೆ ಮಾರು ಹೋಗಿದ್ದಾರೆ. ದರ್ಶನ್, ದುರ್ಯೋಧನನ ಪಾತ್ರಕ್ಕೆ ಹೇಳಿ ಮಾಡಿಸಿದ ಹಾಗಿದ್ದಾರೆ ಎಂದು ಹೊಗಳುತ್ತಿದ್ದಾರೆ. ಅಷ್ಟೇ ಅಲ್ಲ, ಯಾವುದೇ ಐತಿಹಾಸಿಕ ಅಥವಾ ಪೌರಾಣಿಕ ಪಾತ್ರಗಳಿದ್ದರೆ, ಅದಕ್ಕೆ ದರ್ಶನ್ ಮೊದಲ ಆಯ್ಕೆ ಎಂದಿದ್ದಾರೆ.

  ಇತ್ತೀಚೆಗೆ ಕನ್ನಡದ ಸ್ಟಾರ್‍ಗಳ ಅಭಿಮಾನಿಗಳ ನಡುವೆ ವಾರ್‍ಗಷ್ಟೇ ಸಾಕ್ಷಿಯಾಗುತ್ತಿದ್ದ ಸಾಮಾಜಿಕ ಜಾಲತಾಣಗಳಲ್ಲಿ ಇದು ಸಂಚಲನ ಸೃಷ್ಟಿಸಿರುವುದು ನಿಜ. ಎಲ್ಲ ನಟರು, ಕಲಾವಿದರನ್ನೂ ಅಭಿಮಾನಿಸುವ ಅಭಿಮಾನಿಗಳ ಸಂಖ್ಯೆ ಕೋಟಿಯಾಗಲಿ.

 • ಅಭಿಮನ್ಯುಗಾಗಿ ಕುರುಕ್ಷೇತ್ರ ಸ್ಪೆಷಲ್ ಶೋ

  kurukshetra special show for nikhil gowda

  ಮುನಿರತ್ನ ಕುರುಕ್ಷೇತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಅಭಿಮನ್ಯು ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಆದ ಮೇಲೆ ಚಿತ್ರಕ್ಕೆ ಡಬ್ಬಿಂಗ್ ಮಾಡಿರುವ ನಿಖಿಲ್, ಚಿತ್ರದ ಪ್ರಚಾರಕ್ಕೆ ಬರುತ್ತಿಲ್ಲ ಎಂಬ ಆರೋಪಗಳಿವೆ. ಅದಕ್ಕೆ ತಕ್ಕಂತೆ ಚಿತ್ರದ ಆಡಿಯೋ ರಿಲೀಸ್ ಹಾಗೂ ಸುದ್ದಿಗೋಷ್ಠಿಗಳಿಂದ ದೂರವೇ ಇದ್ದಾರೆ ನಿಖಿಲ್. ಇದರ ಹಿಂದೆ ರಾಜಕೀಯ ಕಾರಣಗಳಿವೆಯೇ ಎಂದರೆ ನಿಖಿಲ್ ನೋ ಅಂತಾರೆ.

  ಇದೆಲ್ಲದರ ನಡುವೆಯೇ ನಿಖಿಲ್ ಅವರಿಗಾಗಿಯೇ ರಾಕ್‍ಲೈನ್ ಮಾಲ್‍ನಲ್ಲಿ ಮುನಿರತ್ನ ವಿಶೇಷ ಪ್ರದರ್ಶನ ಏರ್ಪಡಿಸಿದ್ದರು. 

  ಸಿನಿಮಾ ನೋಡಿದ ನಂತರ ಮಾತನಾಡಿದ ನಿಖಿಲ್ ಈ ಚಿತ್ರದಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿದ್ದೇ ನನ್ನ ಅದೃಷ್ಟ, ಚಿತ್ರವನ್ನು ಚಿತ್ರಮಂದಿರದಲ್ಲೇ ನೋಡಿ ಎಂದು ಹೇಳಿದ್ದಾರೆ.

 • ಎಲ್ಲಿರುವೆ ಹರಿಯೇ.. ದ್ವಾರಕೆಯ ದೊರೆಯೇ.. ಕುರುಕ್ಷೇತ್ರ ವಸ್ತ್ರಾಪಹರಣದ ಹಾಡು

  elliruve hariye

  ಕುರುಕ್ಷೇತ್ರ ಯುದ್ಧಕ್ಕೆ ಮುನ್ನುಡಿ ಬರೆಯುವುದೇ ದ್ರೌಪದಿಯ ವಸ್ತ್ರಾಪಹರಣ. ಆ ವಸ್ತ್ರಾಪಹರಣದ ದೃಶ್ಯದ ಹಿನ್ನೆಲೆಯ ಹಾಡನ್ನು ಹೊರತಂದಿದೆ ಕುರುಕ್ಷೇತ್ರ ಟೀಂ. ದ್ರೌಪದಿಯಾಗಿ ಅಭಿನಯಿಸಿರುವ ಸ್ನೇಹಾ, ಹಸ್ತಿನಾವತಿಯ ಅರಮನೆಯಲ್ಲ ಕುಳಿತಿರುವ ಕುರುವಂಶದ ಹಿರಿಯರನ್ನು ಹೀಯಾಳಿಸುತ್ತಾ.. ನೆರವು ನೀಡು ತಂದೆಯೇ ಎಂದು ಶ್ರೀಕೃಷ್ಣನಿಗೆ ಮೊರೆ ಹೋಗುವ ಹಾಡದು.

  ಎಲ್ಲಿರುವೆ ಹರಿಯೇ.. ದ್ವಾರಕೆಯ ದೊರೆಯೇ.. ಈ ಅಬಲೆ ಮೊರೆ ಕೇಳಿ ಬರಬಾರದೆ ಎಂಬ ಹಾಡಿಗೆ ಸಂಗೀತ ನೀಡಿರುವುದು ಹರಿಕೃಷ್ಣ. ನಾಗೇಂದ್ರ ಪ್ರಸಾದ್ ಸಾಹಿತ್ಯಕ್ಕೆ ಭಾವ ತುಂಬಿ ಹಾಡಿರುವುದು ಅನುರಾಧಾ ಭಟ್. ರನ್ನನ ಗದಾಯುದ್ಧವನ್ನೇ ಆಧಾರವಾಗಿಟ್ಟುಕೊಂಡು ಜಿ.ಕೆ. ಭಾರವಿ ಚಿತ್ರಕಥೆ ಬರೆದಿದ್ದು, ನಾಗಣ್ಣ ಚಿತ್ರವನ್ನು ನಿರ್ದೇಶಿಸಿದ್ದಾರೆ.

  ದರ್ಶನ್ ದುರ್ಯೋಧನನಾಗಿ, ಅಂಬರೀಷ್ ಭೀಷ್ಮನಾಗಿ, ರವಿಚಂದ್ರನ್ ಶ್ರೀಕೃಷ್ಣನಾಗಿ ನಟಿಸಿರುವ ಚಿತ್ರದಲ್ಲಿ ಸ್ಯಾಂಡಲ್‍ವುಡ್ ಸ್ಟಾರ್‍ನಟರ ಸಮಾಗಮವೇ ಆಗಿದೆ.

 • ಏಪ್ರಿಲ್ 5ಕ್ಕೆ ಕುರುಕ್ಷೇತ್ರ ರಿಲೀಸ್ ಅಂತೆ..!

  will kurukshetra release on april 5th

  ಕಳೆದ ವರ್ಷದ ಸಂಕ್ರಾಂತಿಗೇ ತೆರೆಗೆ ಬರಬೇಕಿದ್ದ ಮುನಿರತ್ನ ಕುರುಕ್ಷೇತ್ರ ಏಪ್ರಿಲ್ 5ಕ್ಕೆ ರಿಲೀಸ್ ಆಗಲಿದೆ ಎಂಬ ಸುದ್ದಿ ಗಾಂಧಿನಗರದಲ್ಲಿ ಭರ್ಜರಿ ಸದ್ದು ಮಾಡುತ್ತಿದೆ. ನಿರ್ಮಾಪಕ ಮುನಿರತ್ನ ಈ ಬಗ್ಗೆ ಖಚಿತವಾಗಿ ಏನನ್ನೂ ಹೇಳಿಲ್ಲವಾದರೂ, ಏಪ್ರಿಲ್ 5ಕ್ಕೆ ರಿಲೀಸ್ ಎನ್ನುವ ಸುದ್ದಿ ಜೋರಾಗಿದೆ. ಕುರುಕ್ಷೇತ್ರ ಚಿತ್ರದ 2ಡಿ ವರ್ಷನ್ ಈಗಾಗಲೇ ಸೆನ್ಸಾರ್ ಆಗಿದೆ. 3ಡಿ ವರ್ಷನ್ ಗ್ರಾಫಿಕ್ಸ್ ಕೆಲಸ ಅಂತಿಮ ಹಂತದಲ್ಲಿದೆಯಂತೆ. ಹೀಗಾಗಿ ಏಪ್ರಿಲ್ 5ಕ್ಕೆ ರಿಲೀಸ್ ಮಾಡಲು ನಿರ್ಧರಿಸಲಾಗಿದೆಯಂತೆ.  ಆದರೆ, ಇಲ್ಲೂ ಒಂದು ಗೊಂದಲವಿದೆ.

  ಏಪ್ರಿಲ್ ಶುರುವಾಗುವ ಹೊತ್ತಿಗೆ ಚುನಾವಣೆ ಭರ್ಜರಿ ಕಾವೇರಿರುತ್ತೆ. ಚಿತ್ರದಲ್ಲಿ ಅಭಿಮನ್ಯುವಾಗಿ ನಟಿಸಿರುವ ನಿಖಿಲ್ ಕುಮಾರಸ್ವಾಮಿ, ಮಂಡ್ಯದಲ್ಲಿ ಅಭ್ಯರ್ಥಿಯಾಗಿರುತ್ತಾರೆ. ಆಗ, ನೀತಿ ಸಂಹಿತೆ ಪ್ರಕಾರ ಚಿತ್ರ ರಿಲೀಸ್ ಆಗುವುದಕ್ಕೆ ಅಡ್ಡಿಯಾಗುತ್ತೆ. 

  ಒಟ್ಟಿನಲ್ಲಿ ದರ್ಶನ್ ಅಭಿನಯದ 50ನೇ ಸಿನಿಮಾ, ಮುನಿರತ್ನ ಕುರುಕ್ಷೇತ್ರಕ್ಕೆ ನೂರೆಂಟು ವಿಘ್ನ.

 • ಕನ್ನಡ ಅಷ್ಟೇ ಅಲ್ಲ, 4 ಭಾಷೆಯಲ್ಲಿ ಕುರುಕ್ಷೇತ್ರ 

  kurukshetra to release in 4 languages

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 50ನೇ ಸಿನಿಮಾ ಮುನಿರತ್ನ ಕುರುಕ್ಷೇತ್ರ ರಿಲೀಸ್‍ಗೆ ಕ್ಷಣಗಣನೆ ಶುರುವಾಗಿದೆ. ಕನ್ನಡದ ಜೊತೆ ಇತರೆ ಭಾಷೆಗಳಲ್ಲೂ ರಿಲೀಸ್ ಮಾಡಲಿದ್ದೇವೆ ಎನ್ನುತ್ತಿದ್ದ ಚಿತ್ರತಂಡ, ಸಿನಿಮಾವನ್ನು 5 ಭಾಷೆಗಳಲ್ಲಿ ಬಿಡುಗಡೆ ಮಾಡಲು ಮುಂದಾಗಿದೆ. ಅದಕ್ಕೆ ತಕ್ಕಂತೆ, ಕುರುಕ್ಷೇತ್ರ ಚಿತ್ರದ ಕನ್ನಡ, ತೆಲುಗು, ತಮಿಳು, ಮಲಯಾಳಂನಲ್ಲಿ ಚಿತ್ರದ ಪೋಸ್ಟರ್ ಹೊರಬಿದ್ದಿದೆ.

  ದರ್ಶನ್ ಅಭಿನಯದ 51ನೇ ಸಿನಿಮಾ ಈಗಾಗಲೇ ರಿಲೀಸ್ ಆಗಿ, 50 ದಿನ ಪೂರೈಸಿ ಮುನ್ನುಗ್ಗುತ್ತಿದೆ. ರೆಬಲ್‍ಸ್ಟಾರ್ ಅಂಬರೀಷ್ ಅಭಿನಯದ ಕೊನೆಯ ಸಿನಿಮಾ ಆಗಿರುವ ಕುರುಕ್ಷೇತ್ರ ಚಿತ್ರದಲ್ಲಿ ಅರ್ಧಕ್ಕರ್ಧ ಸ್ಯಾಂಡಲ್‍ವುಡ್ ತಾರೆಯರು ನಟಿಸಿದ್ದಾರೆ. ರವಿಚಂದ್ರನ್, ಶ್ರೀನಾಥ್, ಅರ್ಜುನ್ ಸರ್ಜಾ, ಭಾರತಿ ವಿಷ್ಣುವರ್ಧನ್, ಹರಿಪ್ರಿಯಾ, ಸ್ನೇಹ, ಮೇಘನಾ ರಾಜ್, ನಿಖಿಲ್ ಕುಮಾರಸ್ವಾಮಿ, ರವಿಶಂಕರ್ ಸೇರಿದಂತೆ ಬಹುತೇಕ ಕನ್ನಡ ಚಿತ್ರರಂಗದ ಕಲಾವಿದರು ಚಿತ್ರದಲ್ಲಿದ್ದಾರೆ.

 • ಕಲ್ಯಾಣಕ್ಕಿಂತ ಮೊದಲೇ ಕುರುಕ್ಷೇತ್ರ

  nikhil kumaraswamy clears air

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 50ನೇ ಚಿತ್ರ ಕುರುಕ್ಷೇತ್ರ ಚಿತ್ರ ಬಿಡುಗಡೆಗೆ ಏನು ಕಾರಣ..? ಈ ಬಗ್ಗೆ ಪ್ರಶ್ನೆಗಳು ಉದ್ಭವಿಸಿದಾಗಲೆಲ್ಲ ಗಾಂಧಿನಗರದ ಗಲ್ಲಿಗಳಲ್ಲಿ ನಿಖಿಲ್‍ರತ್ತ ತೋರಿಸಲಾಗಿತ್ತು. ನಿಖಿಲ್ ಕುಮಾರಸ್ವಾಮಿಗೆ ಕುರುಕ್ಷೇತ್ರಕ್ಕಿಂತ ಮೊದಲು ತಮ್ಮ ನಾಯಕತ್ವದ ಸೀತಾರಾಮ ಕಲ್ಯಾಣ ಚಿತ್ರ ರಿಲೀಸ್ ಆಗಲಿ ಎಂಬ ಬಯಕೆಯಿದೆ. ಹೀಗಾಗಿ ಕುರುಕ್ಷೇತ್ರ ಡಬ್ಬಿಂಗ್ ಮಾಡದೆ ಸತಾಯಿಸುತ್ತಿದ್ದಾರೆ ಎನ್ನಲಾಗುತ್ತಿತ್ತು. ಈ ಗಾಸಿಪ್ಪುಗಳಿಗೆ ಈಗ ಸ್ವತಃ ನಿಖಿಲ್ ಉತ್ತರ ಕೊಟ್ಟಿದ್ದಾರೆ.

  ಕುರುಕ್ಷೇತ್ರ ವಿಳಂಬಕ್ಕೆ ನಾನು ಕಾರಣ ಅಲ್ಲ. ನಿರ್ದೇಶಕರು ಯಾವಾಗ ಕರೆದರೂ ಹೋಗಿ ಡಬ್ಬಿಂಗ್ ಮಾಡಿ ಬರೋಕೆ ರೆಡಿ ಎಂದಿದ್ದಾರೆ. ಅಷ್ಟೇ ಅಲ್ಲ, ಮಹಾಭಾರತದಲ್ಲಿ ಅಭಿಮನ್ಯು ಪಾತ್ರಕ್ಕೆ ಯಾವ ಮತ್ತು ಎಷ್ಟು ಮಹತ್ವವಿದೆಯೋ.. ಚಿತ್ರದಲ್ಲಿಯೂ ಅಷ್ಟೇ ಮಹತ್ವ ಇದೆ. ಅಭಿಮನ್ಯು ಪಾತ್ರವನ್ನು ಲೆಂಗ್ತ್ ಮಾಡೋಕೆ ಅದು ಕಾಲ್ಪನಿಕ ಕಥೆಯಲ್ಲ. ಮಹಾಭಾರತದ ಕಥೆ ಎಂದಿದ್ದಾರೆ.

 • ಕುರುಕ್ಷೇತ್ರ 2 ಟ್ರೇಲರ್ ನೋಡಿದ್ರಾ..?

  fans love kurukshetra's new trailer

  ಕುರುಕ್ಷೇತ್ರ ಚಿತ್ರದ ಹೊಸ ಟ್ರೇಲರ್ ಬಂದಿದೆ. ಮೊದಲ ಟ್ರೇಲರ್ ಬಗ್ಗೆ ಅಭಿಮಾನಿಗಳು ಅಸಮಾಧಾನಗೊಂಡಿದ್ದರು. ಯಾಕೋ.. ಸರಿಯಿಲ್ಲ ಎಂದು ಸೋಷಿಯಲ್ ಮೀಡಿಯಾಗಳಲ್ಲಿ ಕಿಡಿ ಕಾರಿದ್ದರು. ಅದಕ್ಕೆ ಉತ್ತರವೆಂಬಂತೆ ಅಭಿಮಾನಿಗಳಿಗಾಗಿಯೇ 2ನೇ ಟ್ರೇಲರ್ ರಿಲೀಸ್ ಮಾಡಿದ್ದಾರೆ ನಿರ್ಮಾಪಕ ಮುನಿರತ್ನ.

  ಧರ್ಮಜನನ್ನು ಯುವರಾಜ ಪಟ್ಟಕ್ಕೆ ನಾಮಕರಣ ಮಾಡುವ ಭೀಷ್ಮನ ಧ್ವನಿಯೊಂದಿಗೆ ಶುರುವಾಗುವ ಟ್ರೇಲರ್‍ನಲ್ಲಿ ಪಾತ್ರಗಳ ಪರಿಚಯ ಮಾಡಿಕೊಡಲಾಗಿದೆ. ಅಂಬರೀಷ್, ದರ್ಶನ್, ಜೂಜು, ಪಾಂಡವರಿಗೆ ಅವಮಾನ, ದ್ರೌಪದಿ ವಸ್ತ್ರಾಪಹರಣ, ಚಕ್ರವ್ಯೂಹದ ಯುದ್ಧ, ಶ್ರೀಕೃಷ್ಣ ಸಂಧಾನ, ಭೀಮ-ದುರ್ಯೋಧನರ ಕಾಳಗ.. ಹೀಗೆ ಹಲವು ಅಂಶಗಳು ಟ್ರೇಲರ್‍ನಲ್ಲಿವೆ. ಹೀಗಾಗಿ ಈ ಬಾರಿ ಅಭಿಮಾನಿಗಳು ಹ್ಯಾಪಿ.. ಹ್ಯಾಪಿ.

 • ಕುರುಕ್ಷೇತ್ರ ಅರ್ಧ ಶತಕ : ನಾಳೆ ದರ್ಶನ್ ಅಭಿಮಾನಿಗಳ ಸಂಭ್ರಮಾಚರಣೆ ಹೇಗಿದೆ ಗೊತ್ತಾ..?

  kurukshetra 50 days celebrations by darshan fans

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 50ನೇ ಸಿನಿಮಾ ಮುನಿರತ್ನ ಕುರುಕ್ಷೇತ್ರ ಯಶಸ್ವಿಯಾಗಿ 50 ದಿನ ಪೂರೈಸುತ್ತಿದೆ. ಈ ಹಿನ್ನೆಲೆಯಲ್ಲಿ ದರ್ಶನ್ ಅಭಿಮಾನಿಗಳು ನಾಳೆ ಅಂದರೆ ಸೆ.21ರಂದು ದಿನವಿಡೀ ಸಂಭ್ರಮಾಚರಣೆಗೆ ಪ್ಲಾನ್ ಮಾಡಿದ್ದಾರೆ.

  ಹಲವೆಡೆ ಅಭಿಮಾನಿಗಳ ಸಂಭ್ರಮ ಬೆಳಗ್ಗೆಯೇ ಶುರುವಾಗಲಿದೆ. ಟೈಂಟೇಬಲ್ ಕೂಡಾ ಇದೆ. ಬೆಳಗ್ಗೆ 10ಕ್ಕೆ ದರ್ಶನ್ ಕಟೌಟ್‍ಗೆ ಮಾಲಾರ್ಪಣೆ, ಮಧ್ಯಾಹ್ನ 12ಕ್ಕೆ ಅನ್ನ ಸಂತರ್ಪಣೆ, ಸಂಜೆ 4ಕ್ಕೆ ರಕ್ತದಾನ ಶಿಬಿರ ಹಾಗೂ ರಾತ್ರಿ 7 ಗಂಟೆಗೆ ಪಟಾಕಿ ಸಂಭ್ರಮ.

  ದರ್ಶನ್, ಅಂಬರೀಷ್, ಅರ್ಜುನ್ ಸರ್ಜಾ, ನಿಖಿಲ್ ಕುಮಾರಸ್ವಾಮಿ, ಹರಿಪ್ರಿಯಾ, ಮೇಘನಾ ರಾಜ್, ರವಿಶಂಕರ್, ಸ್ನೇಹಾ, ಶ್ರೀನಾಥ್, ಶ್ರೀನಿವಾಸ ಮೂರ್ತಿ, ಶಶಿಕುಮಾರ್.. ಹೀಗೆ ಘಟಾನುಘಟಿ ಕಲಾವಿದರೆಲ್ಲ ಒಟ್ಟಿಗೇ ನಟಿಸಿದ್ದ ಚಿತ್ರಕ್ಕೆ ಮುನಿರತ್ನ ನಿರ್ಮಾಪಕರಾದರೆ, ನಾಗಣ್ಣ ನಿರ್ದೇಶಕ.

 • ಕುರುಕ್ಷೇತ್ರ ಆಡಿಯೋ ರಿಲೀಸ್ ಅದ್ಧೂರಿ..

  kurukshetra audio release in grand function

  ಕುರುಕ್ಷೇತ್ರ ಚಿತ್ರದ ಆಡಿಯೋ ಬಿಡುಗಡೆ ಅದ್ಧೂರಿಯಾಗಿ ನೆರವೇರಿದೆ. ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ಇಡೀ ಚಿತ್ರತಂಡ ಒಟ್ಟಿಗೇ ಬಂದು ಚಿತ್ರದ ಬಗ್ಗೆ ಪ್ರೀತಿಯಿಂದ ಮಾತನಾಡಿದ್ದಾರೆ.

  ನಿರ್ಮಾಪಕ ಮುನಿರತ್ನ, ಚಿತ್ರದಲ್ಲಿ ಸಹಕರಿಸಿದ ಎಲ್ಲರಿಗೂ ಧನ್ಯವಾದ ಹೇಳಿದರು. ಅದರಲ್ಲೂ ವಿಶೇಷವಾಗಿ ಅಂಬರೀಷ್‍ರನ್ನು ನೆನೆದು ಭಾವುಕಾರದರು. ನಿರ್ದೇಶಕ ನಾಗಣ್ಣ, ಚಿತ್ರದ ಹೀರೋ ಮುನಿರತ್ನ ಎಂದರು. ಪೌರಾಣಿಕ ಚಿತ್ರಕ್ಕೆ ಇಷ್ಟು ದೊಡ್ಡ ಬಂಡವಾಳ ಹೂಡುವ ಧೈರ್ಯವಂತ ನಿರ್ಮಾಪಕ ಮುನಿರತ್ನ ಅವರೇ ಚಿತ್ರದ ನಾಯಕ ಎಂದರು.

  ಸಾಹಿತಿ ನಾಗೇಂದ್ರ ಪ್ರಸಾದ್‍ಗೆ ಇದು ಇನ್ನೊಂದು ವಿಶೇಷ. ದರ್ಶನ್‍ರ ಮೊದಲ ಚಿತ್ರ ಮೆಜೆಸ್ಟಿಕ್‍ನ ಎಲ್ಲ ಹಾಡುಗಳನ್ನೂ ಬರೆದಿದ್ದವರು ನಾಗೇಂದ್ರ ಪ್ರಸಾದ್. ಈಗ ಅವರ 50ನೇ ಚಿತ್ರ ಕುರುಕ್ಷೇತ್ರ ಚಿತ್ರದಲ್ಲೂ ಎಲ್ಲ ಹಾಡುಗಳನ್ನೂ ಅವರೇ ಬರೆದಿದ್ದಾರೆ. ಹಾಡಿನಲ್ಲಿ ಹಳಗನ್ನಡ, ನಡುಗನ್ನಡ, ಸಂಸ್ಕøತ ಪದಗಳೂ ಇವೆ ಎಂದರು.

  ನಟರಾದ ರವಿಚಂದ್ರನ್, ದರ್ಶನ್, ನಿಖಿಲ್, ಶ್ರೀನಾಥ್, ಅರ್ಜುನ್ ಸರ್ಜಾ, ಶ್ರೀನಿವಾಸ ಮೂರ್ತಿ, ರಮೇಶ್ ಭಟ್, ರವಿಶಂಕರ್, ಅವಿನಾಶ್, ಹರಿಪ್ರಿಯಾ, ಸೋನು ಸೂದ್, ಡ್ಯಾನಿಷ್ ಅಖ್ತರ್, ಯಶಸ್, ಶಶಿಕುಮಾರ್.. ಆಡಿಯೋ ಬಿಡುಗಡೆಯಲ್ಲಿದ್ದರು.

  ಸಚಿವ ಡಿ.ಕೆ.ಶಿವಕುಮಾರ್, ಸಂಸದ ಡಿ.ಕೆ.ಸುರೇಶ್.. ರಾಜಕೀಯ ಜಂಜಾಟಗಳ ನಡುವೆಯೂ ಅಡಿಯೋ ರಿಲೀಸ್‍ಗೆ ಬಂದು ಚಿತ್ರಕ್ಕೆ ಶುಭ ಹಾರೈಸಿದರು.

 • ಕುರುಕ್ಷೇತ್ರ ಆಡಿಯೋ ರಿಲೀಸ್ ಡೇಟ್ ಫಿಕ್ಸ್

  kurukshetra audio on july 29th

  ಶೂಟಿಂಗ್ ಮುಗೀತು. ಡಬ್ಬಿಂಗ್ ಮುಗೀತು. ಕುರುಕ್ಷೇತ್ರ ಚಿತ್ರದ ಬಿಡುಗಡೆ ಯಾವಾಗ..? ಸಂಕ್ರಾಂತಿಗೇ ತೆರೆ ಮೇಲೆ ಬರಲಿದೆ ಎನ್ನುತ್ತಿದ್ದ ಸಿನಿಮಾ ವರಮಹಾಲಕ್ಷ್ಮಿ ಹಬ್ಬ ಸಮೀಪಿಸಿದರೂ ಬಂದಿಲ್ಲ. ಯಾವಾಗ ರಿಲೀಸ್ ಹೇಳಿ.. ಹೇಳಿ ಎನ್ನುತ್ತಿದ್ದ ಅಭಿಮಾನಿಗಳಿಗೆ ಒಂದು ಸಿಹಿಸುದ್ದಿ, ಕುರುಕ್ಷೇತ್ರ ಚಿತ್ರದ ಆಡಿಯೋ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ. ಜುಲೈ 29ಕ್ಕೆ ಕುರುಕ್ಷೇತ್ರ ಚಿತ್ರದ ಆಡಿಯೋ ಬಿಡುಗಡೆ.

  ಚಾಲೆಂಜಿಂಗ್ ಸ್ಟಾರ್ ದರ್ಶನ್‍ರ 50ನೇ ಚಿತ್ರವಾಗಿರುವ ಕುರುಕ್ಷೇತ್ರ ಚಿತ್ರಕ್ಕೆ ಸಂಗೀತ ನೀಡಿರುವುದು ಹರಿಕೃಷ್ಣ. ಸಾಹಿತ್ಯ ನಾಗೇಂದ್ರ ಪ್ರಸಾದ್ ಅವರದ್ದು. ನಾಗಣ್ಣ ನಿರ್ದೇಶನದ ಚಿತ್ರಕ್ಕೆ, ಅರ್ಧಕ್ಕರ್ಧ ಕನ್ನಡ ಚಿತ್ರರಂಗವನ್ನೇ ಒಗ್ಗೂಡಿಸಿರುವುದು ನಿರ್ಮಾಪಕ ಮುನಿರತ್ನ.

 • ಕುರುಕ್ಷೇತ್ರ ಆಡಿಯೋ ರಿಲೀಸ್ ಡೇಟ್ ಫಿಕ್ಸ್

  kurukshetra audio launch date announced

  ಸತತ 2 ವರ್ಷಗಳಿಂದ ಅಭಿಮಾನಿಗಳು ಕಾಯುತ್ತಲೇ ಇರುವ ಮುನಿರತ್ನ ಕುರುಕ್ಷೇತ್ರದ ಆಡಿಯೋ ರಿಲೀಸ್‍ಗೆ ಡೇಟ್ ಫಿಕ್ಸ್ ಆಗಿದೆ. ತುಂಬಾ ದಿನ ಕಾಯಬೇಕಿಲ್ಲ. ಇನ್ನೇನು ಕೆಲವೇ ದಿನಗಳಲ್ಲಿ ಜುಲೈ 7ಕ್ಕೆ ಕುರುಕ್ಷೇತ್ರ ಚಿತ್ರದ ಆಡಿಯೋ ಬಿಡುಗಡೆಯಾಗಲಿದೆ. ಹರಿಕೃಷ್ಣ ಸಂಗೀತ ನೀಡಿರುವ ಹಾಡುಗಳು, ಎಲ್ಲ ಐದೂ ಭಾಷೆಗಳಲ್ಲಿ ಅದ್ಧೂರಿ ಕಾರ್ಯಕ್ರಮದಲ್ಲಿ ಬಿಡುಗಡೆಯಾಗುತ್ತಿವೆ.

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 50ನೇ ಸಿನಿಮಾ ಆಗಿರುವ ಕುರುಕ್ಷೇತ್ರ, ವಿಳಂಬವಾದ ಕಾರಣಕ್ಕೆ 51ನೇ ಸಿನಿಮಾ ಯಜಮಾನ ರಿಲೀಸ್ ಆಯ್ತು. ಅದು ಶತದಿನೋತ್ಸವ ಆಚರಿಸಿಯೂ ಆಯ್ತು. ಈಗ ಕುರುಕ್ಷೇತ್ರ ಬಿಡುಗಡೆಗೆ ಮುಹೂರ್ತ ಘೋಷಣೆಯಾಗಬೇಕಿದೆ. ರಿಲೀಸ್‍ಗೂ ಮುನ್ನ ಆಡಿಯೋ ರಿಲೀಸ್ ಆಗುತ್ತಿದೆ.

  ಇದು ಅಂಬರೀಷ್ ಅಭಿನಯಿಸಿರುವ ಕಟ್ಟಕಡೆಯ ಸಿನಿಮಾ. ರವಿಚಂದ್ರನ್ ಶ್ರೀಕೃಷ್ಣನಾಗಿದ್ದರೆ, ದರ್ಶನ್ ದುರ್ಯೋಧನ. ಅಂಬರೀಷ್ ಭೀಷ್ಮ. ಅರ್ಜುನ್ ಸರ್ಜಾ, ನಿಖಿಲ್ ಕುಮಾರಸ್ವಾಮಿ, ಶಶಿಕುಮಾರ್, ರವಿಶಂಕರ್, ಸೋನು ಸೂದ್, ಭಾರತಿ ವಿಷ್ಣುವರ್ಧನ್, ಸ್ನೇಹಾ, ಹರಿಪ್ರಿಯಾ, ಮೇಘನಾ ರಾಜ್ ಸೇರಿದಂತೆ ಬಹುತೇಕ ದಕ್ಷಿಣ ಭಾರತ ಚಿತ್ರರಂಗದ ತಾರೆಯರೆಲ್ಲ ಈ ಚಿತ್ರದಲ್ಲಿ ನಟಿಸಿದ್ದಾರೆ. 

 • ಕುರುಕ್ಷೇತ್ರ ಆಡಿಯೋ ರಿಲೀಸ್ ಯಾವಾಗ..?

  kurukshetra audio release soon

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 50ನೇ ಸಿನಿಮಾ ಕುರುಕ್ಷೇತ್ರ, ಕನ್ನಡ ಚಿತ್ರರಂಗದಲ್ಲೇ ಐತಿಹಾಸಿಕ ಚಿತ್ರವೆಂಬ ಖ್ಯಾತಿಗೆ ಪಾತ್ರವಾಗಿದೆ. ಮುನಿರತ್ನ ನಿರ್ಮಾಣದ ಸಿನಿಮಾ, ಎಲ್ಲವೂ ಪ್ಲಾನ್ ಪ್ರಕಾರವೇ ನಡೆದಿದ್ದರೆ, ಇಷ್ಟು ಹೊತ್ತಿಗೆ ರಿಲೀಸ್ ಆಗಿರಬೇಕಿತ್ತು. ಆದರೆ, ಮುನಿರತ್ನ ಎಲೆಕ್ಷನ್ ಪ್ರಚಾರಲ್ಲಿ ಬ್ಯುಸಿಯಾದ ಕಾರಣ, ಚಿತ್ರ ಸ್ವಲ್ಪ ತಡವಾಗಿದೆ.

  ಗ್ರಾಫಿಕ್ಸ್ ಕೆಲಸದ ಪ್ಯಾಚ್‍ವರ್ಕ್, ಹರಿಕೃಷ್ಣ ಅವರ ಸಂಗೀತಕ್ಕೆ ಫೈನಲ್ ಟಚ್ ಕೆಲಸದಿಂದಾಗಿ ಸ್ವಲ್ಪ ವಿಳಂಬವಾಗಿದೆ. ಈ ತಿಂಗಳ ಕೊನೆಯಲ್ಲಿ ಸಿನಿಮಾದ ಆಡಿಯೋ ರಿಲೀಸ್ ಆಗಲಿದೆ ಎಂದು ಹೇಳಿದ್ದಾರೆ ನಿರ್ದೇಶಕ ನಾಗಣ್ಣ.

  ಮುನಿರತ್ನ ಅವರ ಕಮಿಟ್‍ಮೆಂಟ್‍ಗಳು ಒಂದೆರಡಲ್ಲ. ಹೀಗಾಗಿ ಸ್ವಲ್ಪ ತಡವಾಗಿದೆ. ಎಲೆಕ್ಷನ್ ಮುಗಿದ ಮೇಲೆ ಸಿನಿಮಾದತ್ತ ಮತ್ತೆ ಗಮನಹರಿಸಲಾಗುವುದು. ಆದಷ್ಟು ಬೇಗ ಕುರುಕ್ಷೇತ್ರ ರಿಲೀಸ್ ಮಾಡಲಾಗುವುದು ಎಂದು ತಿಳಿಸಿದ್ದಾರೆ ಮುನಿರತ್ನ ಅವರ ವಕ್ತಾರ ವಿನಾಯಕ್ ಹೆಗ್ಡೆ. ಅಭಿಮಾನಿಗಳು ಕಾಯುತ್ತಿದ್ದಾರೆ.

 • ಕುರುಕ್ಷೇತ್ರ ಚಿತ್ರದ ಮುಹೂರ್ತ ಮುಂದೆ ಹೋಯ್ತು..!

  kurukshetra launch postponed

  ದರ್ಶನ್ ದುರ್ಯೋಧನನ ಪಾತ್ರದಲ್ಲಿ ನಟಿಸುತ್ತಿರುವ ಕುರುಕ್ಷೇತ್ರ ಚಿತ್ರದ ಮುಹೂರ್ತ ಮುಂದಕ್ಕೆ ಹೋಗಿದೆ. ನಾಗಣ್ಣ ನಿರ್ದೇಶನದ, ಮುನಿರತ್ನ ನಿರ್ಮಿಸುತ್ತಿರುವ ಚಿತ್ರದ ಮುಹೂರ್ತ ಮುಂದಕ್ಕೆ ಹೋಗಲು ಕಾರಣ ಯಾರು ಗೊತ್ತಾ..? ಮುಖ್ಯಮಂತ್ರಿ ಸಿದ್ದರಾಮಯ್ಯ.

  ಹೌದು, ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಚಿತ್ರದ ಮುಹೂರ್ತ ಇದೇ ತಿಂಗಳು ನೆರವೇರಬೇಕಿತ್ತು. ಆದರೆ, ಮುಹೂರ್ತಕ್ಕೆ ಸಿದ್ದರಾಮಯ್ಯನವರು ಬರಬೇಕು ಎನ್ನುವುದು ನಿರ್ಮಾಪಕ ಮುನಿರತ್ನ ನಿರೀಕ್ಷೆ. ಹೀಗಾಗಿ ಚಿತ್ರದ ಮುಹೂರ್ತವನ್ನು ಆಗಸ್ಟ್ 6ಕ್ಕೆ ಇಟ್ಟುಕೊಂಡಿದ್ದಾರೆ ಮುನಿರತ್ನ. ಅದೇ ದಿನ ದುರ್ಯೋಧನನ ಗೆಟಪ್ ಕೂಡಾ ರಿಲೀಸ್ ಆಗುತ್ತಂತೆ.

  ಜುಲೈ 27ಕ್ಕೆ ಮುನಿರತ್ನ ಸಣ್ಣದೊಂದು ಪೂಜೆ ಮಾಡಿಸುತ್ತಾರೆ. ಅದು ಪರ್ಸನಲ್. ಚಿತ್ರದ ಗ್ರ್ಯಾಂಡ್ ಎಂಟ್ರಿ ನಡೆಯೋದು ಆಗಸ್ಟ್ 6ಕ್ಕೆ.

 • ಕುರುಕ್ಷೇತ್ರ ಡಬ್ಬಿಂಗ್ ಪೂರ್ತಿ ಮುಗೀತು

  kurukshetra dubbing complete

  ಕುರುಕ್ಷೇತ್ರ ಚಿತ್ರದ ಎಲ್ಲ ಕಲಾವಿದರ ಡಬ್ಬಿಂಗ್ ಮುಗಿದಿದೆ. ದರ್ಶನ್ ಸೇರಿದಂತೆ, ಎಲ್ಲ ಕಲಾವಿದರೂ ಡಬ್ಬಿಂಗ್ ಮುಗಿಸಿ ಸಂಭ್ರಮಿಸಿದ್ದಾರೆ. ರವಿಚಂದ್ರನ್‍ಗೆ ಹಲವು ವರ್ಷಗಳ ನಂತರ ಶ್ರೀನಿವಾಸ ಪ್ರಭು ಡಬ್ಬಿಂಗ್ ಮಾಡಿರುವುದು ವಿಶೇಷ. ಜುಲೈನಲ್ಲಿ ಚಿತ್ರದ ಆಡಿಯೋ ಬಿಡುಗಡೆಯಾಗಲಿದೆ. 

  ವೃಷಭಾದ್ರಿ ಪ್ರೊಡಕ್ಷನ್ಸ್‍ನಲ್ಲಿ ಮುನಿರತ್ನ ನಿರ್ಮಿಸುತ್ತಿರುವ ಈ ಅದ್ಧೂರಿ ಚಿತ್ರದಲ್ಲಿ ಅರ್ಧಕ್ಕರ್ಧ ಚಿತ್ರರಂಗವೇ ಇದೆ. ದರ್ಶನ್, ಅಂಬರೀಷ್, ರವಿಚಂದ್ರನ್, ಅರ್ಜುನ್ ಸರ್ಜಾ, ರಾಕ್‍ಲೈನ್ ವೆಂಕಟೇಶ್, ನಿಖಿಲ್ ಕುಮಾರಸ್ವಾಮಿ, ಸ್ನೇಹ, ಮೇಘನಾರಾಜ್, ಹರಿಪ್ರಿಯಾ, ಶ್ರೀನಾಥ್, ರವಿಶಂಕರ್, ಅವಿನಾಶ್, ಸೋನುಸೂದ್, ಶಶಿಕುಮಾರ್, ರಮೇಶ್ ಭಟ್, ಪವಿತ್ರ ಲೋಕೇಶ್.. ಸೇರಿದಂತೆ ಭರ್ಜರಿ ತಾರಾಗಣವೇ ಚಿತ್ರದಲ್ಲಿದೆ.

  ಬಾಹುಬಲಿಗೆ ಸಾಹಸ ನಿರ್ದೇಶನ ಮಾಡಿದ್ದ ಸಾಲೋಮನ್, ಕುರುಕ್ಷೇತ್ರ ಚಿತ್ರಕ್ಕೂ ಸಾಹಸ ಸಂಯೋಜಿಸಿರುವುದು ವಿಶೇಷ. ಚಿತ್ರದ ಶೇ.40ರಷ್ಟು ಭಾಗ ಗ್ರಾಫಿಕ್ಸ್‍ನಲ್ಲೇ ಇರಲಿದೆ. 

  ಕನ್ನಡದಲ್ಲೇ ಅತ್ಯಂತ ಅದ್ಧೂರಿ ಚಿತ್ರವಾಗಿರುವ ಮುನಿರತ್ನ ಕುರುಕ್ಷೇತ್ರ, ಶೀಘ್ರದಲ್ಲೇ ಬಿಡುಗಡೆಯಾಗುವ ಸಾಧ್ಯತೆಯಿದೆ.

 • ಕುರುಕ್ಷೇತ್ರ ಡಬ್ಬಿಂಗ್ ರೈಟ್ಸ್​ನಲ್ಲೇ ಭರ್ಜರಿ ವ್ಯಾಪಾರ

  kurukshetra movie image

  ಕುರುಕ್ಷೇತ್ರ. ದರ್ಶನ್ ಅಭಿನಯದ 50ನೇ ಸಿನಿಮಾ. ಕನ್ನಡ ಚಿತ್ರರಂಗದ ಅಪರೂಪದ ಪೌರಾಣಿಕ ಚಿತ್ರವಾಗುತ್ತಿರುವ ಕುರುಕ್ಷೇತ್ರದ ಡಬ್ಬಿಂಗ್ ರೈಟ್ಸ್, ಶೂಟಿಂಗ್ ಹಂತದಲ್ಲೇ ಭರ್ಜರಿ ಮೊತ್ತಕ್ಕೆ ಸೇಲ್ ಆಗುತ್ತಿವೆ.

  ಮೂಲಗಳ ಪ್ರಕಾರ, ಕುರುಕ್ಷೇತ್ರ ಚಿತ್ರದ ಹಿಂದಿ ಡಬ್ಬಿಂಗ್ ರೈಟ್ಸ್, 9 ಕೋಟಿಗೆ ಸೇಲ್ ಆಗಿದೆಯಂತೆ. ಅದು ಕನ್ನಡ ಚಿತ್ರವೊಂದಕ್ಕೆ ಅತಿ ದೊಡ್ಡ ಮೊತ್ತ ಎನ್ನುತ್ತಿವೆ ಮೂಲಗಳು. 

  ಹಿಂದಿಯಷ್ಟೇ ಅಲ್ಲ, ತಮಿಳು, ತೆಲುಗು ಹಾಗೂ ಮಲಯಾಳಂ ಡಬ್ಬಿಂಗ್ ಹಕ್ಕುಗಳೂ ಒಳ್ಳೆಯ ಮೊತ್ತಕ್ಕೆ ಮಾರಾಟವಾಗಿವೆಯಂತೆ. ಸುಮಾರು 80 ಕೋಟಿ ಬಜೆಟ್ ದಾಟಲಿದೆ ಎನ್ನುತ್ತಿರುವ ಸಿನಿಮಾ, ಶೂಟಿಂಗ್ ಹಂತದಲ್ಲೇ ದಾಖಲೆ ಬರೆಯುತ್ತಿದೆ.

 • ಕುರುಕ್ಷೇತ್ರ ಬಹುತೇಕ ರೆಡಿ. ಆದರೆ...

  muniratna talks about kurukshetra

  ಕುರುಕ್ಷೇತ್ರ ಚಿತ್ರ ಯಾವಾಗ..? ಇದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳ ಪ್ರಶ್ನೆ. ಏಕೆಂದರೆ, ಅದು ದರ್ಶನ್‍ಗೆ 50ನೇ ಸಿನಿಮಾ. ಅದು ಇಡೀ ಚಿತ್ರರಂಗದ ಪ್ರಶ್ನೆಯೂ ಹೌದು. ಏಕೆಂದರೆ, ಚಿತ್ರರಂಗದ ಶೇ.75ಕ್ಕೂ ಹೆಚ್ಚು ಕಲಾವಿದರು ನಟಿಸಿರುವ ಸಿನಿಮಾ. ಪಕ್ಕಾ ಡೇಟ್ ಮಾತ್ರ ಇನ್ನೂ ಗೊತ್ತಾಗಿಲ್ಲ. ಆದರೆ, ಈಗ ನಿರ್ಮಾಪಕ ಮುನಿರತ್ನ ಅವರೇ ಕುರುಕ್ಷೇತ್ರ ಚಿತ್ರದ ಹೊಸ ಅಪ್‍ಡೇಟ್ ಕೊಟ್ಟಿದ್ದಾರೆ.

  ಚಿತ್ರ ಬಹುತೇಕ ಮುಗಿದಿದೆಯಂತೆ. ರಿಲೀಸ್‍ಗೆ ಮೊದಲು ಮುನಿರತ್ನ ಸಿನಿಮಾ ನೋಡಲಿದ್ದಾರಂತೆ. ಸಿನಿಮಾ ತಮಗೆ ತೃಪ್ತಿ ನೀಡಿದ ಮೇಲೆ ರಿಲೀಸ್ ಡೇಟ್ ಘೋಷಿಸುತ್ತೇನೆ. ಅಲ್ಲಿಯವರೆಗೂ ಕೆಲಸಗಳು ನಡೆಯುತ್ತಲೇ ಇರುತ್ತವೆ ಎಂದಿದ್ದಾರೆ ಮುನಿರತ್ನ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery