ದರ್ಶನ್ ಅಭಿನಯದ ಮುನಿರತ್ನ ಕುರುಕ್ಷೇತ್ರ ರಿಲೀಸ್ಗೆ ರೆಡಿಯಾಗುತ್ತಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲಿ ಸಿದ್ಧವಾಗುತ್ತಿದೆ. ನಾಲ್ಕು ಭಾಷೆಯಲ್ಲಿ ಕುರುಕ್ಷೇತ್ರ 3ಡಿ ವರ್ಷನ್ ಸಂಪೂರ್ಣ ಸಿದ್ಧಗೊಂಡಿದೆ. ಕನ್ನಡ ವರ್ಷನ್ ಸೆನ್ಸಾರ್ ಕೂಡಾ ಆಗಿದೆ. ಇನ್ನುಳಿದ ಮೂರು ಭಾಷೆಯ ಚಿತ್ರಗಳು ಮುಂದಿನ ವಾರ ಸೆನ್ಸಾರ್ಗೆ ಹೋಗುತ್ತಿವೆ. ಇನ್ನು 15 ದಿನಗಳಲ್ಲಿ ಹಿಂದಿ ವರ್ಷನ್ ಕೂಡಾ ಮುಕ್ತಾಯಗೊಳ್ಳಲಿದೆ. ಹೀಗೆ ರಿಲೀಸ್ಗೆ ರೆಡಿಯಾಗುತ್ತಿರುವಾಗಲೇ ಹಿಂದಿ ಕುರುಕ್ಷೇತ್ರ ಚಿತ್ರದ ಟಿವಿ ರೈಟ್ಸ್ ಒಂಭತ್ತೂವರೆ ಕೋಟಿಗೆ ಮಾರಾಟವಾಗಿದೆ.
ಇದು ಕೇವಲ ಟಿವಿ ರೈಟ್ಸ್, ಡಿಸ್ಟ್ರಿಬ್ಯೂಷನ್ ರೈಟ್ಸ್ ಅಲ್ಲ. ಯಾವುದೇ ಭಾಷೆಯ ಡಿಸ್ಟ್ರಿಬ್ಯೂಷನ್ನ್ನು ಇನ್ನೂ ಮಾರಾಟ ಮಾಡಿಲ್ಲ. ಐದಕ್ಕೆ ಐದೂ ಭಾಷೆಯಲ್ಲಿ ಕುರುಕ್ಷೇತ್ರ ಚಿತ್ರವನ್ನು ಏಕಕಾಲಕ್ಕೆ ರಿಲೀಸ್ ಮಾಡುವ ಪ್ಲಾನ್ ಮಾಡುತ್ತಿದ್ದಾರೆ ನಿರ್ಮಾಪಕ ಮುನಿರತ್ನ.
ದರ್ಶನ್ ದುರ್ಯೋಧನನಾಗಿ ನಟಿಸಿದ್ದು, ದುರ್ಯೋಧನನ ಆ್ಯಂಗಲ್ನಲ್ಲಿಯೇ ಇಡೀ ಚಿತ್ರವನ್ನು ಕಟ್ಟಿಕೊಡಲಾಗಿದೆ. ರವಿಚಂದ್ರನ್, ಅರ್ಜುನ್ ಸರ್ಜಾ, ಶ್ರೀನಾಥ್, ನಿಖಿಲ್ ಕುಮಾರಸ್ವಾಮಿ, ಮೇಘನಾ ರಾಜ್, ಹರಿಪ್ರಿಯಾ, ಸ್ನೇಹ, ಸೃಜನ್ ಲೋಕೇಶ್ ಮೊದಲಾದವರು ನಟಿಸಿರುವ ಬಹುತಾರಾಗಣದ ಸಿನಿಮಾ ಕುರುಕ್ಷೇತ್ರ.
ರೆಬಲ್ಸ್ಟಾರ್ ಅಂಬರೀಷ್ ಅಭಿನಯದ ಕೊನೆಯ ಚಿತ್ರವೂ ಇದಾಗಿದ್ದು, ನಾಗಣ್ಣ ಮತ್ತು ನಾಗೇಂದ್ರ ಪ್ರಸಾದ್ ಚಿತ್ರವನ್ನು ನಿರ್ದೇಶಿಸಿದ್ದಾರೆ.