` kurukshetra, - chitraloka.com | Kannada Movie News, Reviews | Image

kurukshetra,

 • ದುರ್ಯೋಧನನಿಗೆ ಮೇಘನಾ ಭಾನುಮತಿ

  meghana as bhanumathi

  ಕುರುಕ್ಷೇತ್ರ, ಚಿತ್ರ ಶುರುವಾದಾಗಿನಿಂದ ಪಾತ್ರಧಾರಿಗಳ ಆಯ್ಕೆ, ಬದಲಾವಣೆ ಸುದ್ದಿಯಾಗುತ್ತಲೇ ಇದೆ. ಚಿತ್ರದ ಚಿತ್ರೀಕರಣ ಕ್ಲೈಮಾಕ್ಸ್ ಹಂತಕ್ಕೆ ಬಂದಿದೆ. ಡಬ್ಬಿಂಗ್ ಕೂಡಾ ಶುರುವಾಗಿದೆ. ಆದರೆ, ದುರ್ಯೋಧನನಿಗೆ ನಾಯಕಿ ಯಾರು ಎಂಬುದರ ಬಗ್ಗೆ ಗೊಂದಲವಿದ್ದೇ ಇತ್ತು.

  ರಮ್ಯಾ ನಂಬೀಸನ್ ಭಾನುಮತಿಯಾಗಿ ನಟಿಸುತ್ತಾರೆ ಎಂದು ಚಿತ್ರತಂಡ ಹೇಳಿಕೊಂಡಿತ್ತಾದರೂ, ರಮ್ಯಾ ನಂಬೀಸನ್ ಡೇಟ್ಸ್ ಸಿಗಲೇ ಇಲ್ಲವಂತೆ. ಹೀಗಾಗಿ ರಮ್ಯಾ ನಂಬೀಸನ್ ಅವರನ್ನು ಕೈಬಿಟ್ಟಿರುವ ಚಿತ್ರತಂಡ ಈಗ ಆ ಪಾತ್ರಕ್ಕೆ ಮೇಘನಾ ಅವರನ್ನು ಆಯ್ಕೆ ಮಾಡಿದೆ. ಅಲ್ಲಿಗೆ ಮೇಘನಾ ಭಾನುಮತಿಯಾಗಿ ನಟಿಸಲಿರುವುದು ಖಚಿತ.

  ಕುರುಕ್ಷೇತ್ರ ಚಿತ್ರದಲ್ಲಿ ಸ್ಟಾರ್‍ಗಳ ಸಮಾಗಮವೇ ಆಗಿದೆ. ಆ ಸ್ಟಾರ್‍ಗಳ ಪಟ್ಟಿಗೆ ಹೊಸ ಸೇರ್ಪಡೆ ಮೇಘನಾ ರಾಜ್. ಟೆಸ್ಟ್ ಶೂಟ್ ಮುಗಿದಿದ್ದು, ಮೇಘನಾ ಅವರ ಪಾತ್ರದ  ಚಿತ್ರೀಕರಣ ಕೆಲವೇ ದಿನಗಳಲ್ಲಿ ಶುರುವಾಗಲಿದೆ.

 • ಪತ್ನಿ, ಮಗನ ಜೊತೆ ಕುರುಕ್ಷೇತ್ರ ದರ್ಶನ

  darshan watches kuruklshetra with his family

  ಚಾಲೆಂಜಿಂಗ್ ಸ್ಟಾರ್ ದರ್ಶನ್, ಕುರುಕ್ಷೇತ್ರ ಬಿಡುಗಡೆಗೂ ಮುನ್ನವೇ ಪತ್ನಿ ವಿಜಯಲಕ್ಷ್ಮೀ ಹಾಗೂ ಮಗ ವಿನೀಶ್ ಜೊತೆ ಸಿನಿಮಾ ನೋಡಿ ಸಂಭ್ರಮಿಸಿದ್ದಾರೆ. ಇದು ದರ್ಶನ್‍ರ 50ನೇ ಸಿನಿಮಾ ಎನ್ನುವುದು ವಿಶೇಷ. ಮಗ ವಿನೀಶ್ ಅಪ್ಪನ ಕಟೌಟ್, ಪೋಸ್ಟರ್‍ಗಳ ಜೊತೆ ಫೋಟೋ ತೆಗೆಸಿಕೊಂಡು ಖುಷಿ ಪಟ್ಟಿದ್ದಾನೆ.

  ಕುರುಕ್ಷೇತ್ರ ಸಿನಿಮಾ ಆಗಸ್ಟ್ 9ರಂದು ವರಮಹಾಲಕ್ಷ್ಮಿ ಹಬ್ಬಕ್ಕೆ ರಿಲೀಸ್ ಆಗುತ್ತಿದೆ. ಅಂಬರೀಷ್ ಅಭಿನಯದ ಕೊನೆಯ ಚಿತ್ರವಾಗಿರುವ ಕುರುಕ್ಷೇತ್ರಕ್ಕೆ ನಾಗಣ್ಣ ನಿರ್ದೇಶನವಿದೆ. ಸದ್ಯಕ್ಕೆ ಕನ್ನಡ ಮತ್ತು ತೆಲುಗಿನಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ.

 • ಪರಭಾಷಿಕರಿಗೆ ಚಾಲೆಂಜಿಂಗ್ ಸ್ಟಾರ್ ಚಾಲೆಂಜ್

  darshan challengs other language

  ಕುರುಕ್ಷೇತ್ರ ಚಿತ್ರದ ಶೂಟಿಂಗ್, ಇಂದು (ಜನವರಿ 5) ಕಂಪ್ಲೀಟ್ ಆಗಲಿದೆ. ಮುಂದಿನದ್ದು ಪೋಸ್ಟ್ ಪ್ರೊಡಕ್ಷನ್ ಕೆಲಸ. ಮಾರ್ಚ್‍ನಲ್ಲಿ ರಿಲೀಸ್ ಮಾಡಲು ಸಿದ್ಧತೆ ನಡೆಸಿರುವ ನಿರ್ಮಾಪಕ ಮುನಿರತ್ನ, ಚಿತ್ರದ ಬಗ್ಗೆ ಖುಷಿಯಿಂದಿದ್ದಾರೆ. ಫೆ.10ರೊಳಗೆ ಎಲ್ಲ ಕೆಲಸ ಮುಗಿಸಿ, ಮಾ.2ಕ್ಕೆ ಸೆನ್ಸಾರ್ ಮಾಡಿಸಿ, ಮಾ.9ಕ್ಕೆ ರಿಲೀಸ್ ಮಾಡುವುದು ಮುನಿರತ್ನ ಪ್ಲಾನ್.

  ದರ್ಶನ್ ಹೇಳಿಕೊಂಡಿರೋದು ಇದನ್ನೇ. ಅದು ಪರಭಾಷಿಕರಿಗೆ ದರ್ಶನ್ ಹಾಕಿದ ಚಾಲೆಂಜ್ ಎಂದಾದರೂ ಎಂದುಕೊಳ್ಳಿ. ತಮ್ಮ ಚಿತ್ರದ ಮೇಲಿರುವ ಆತ್ಮವಿಶ್ವಾಸ ಎಂದು ಬೇಕಾದರೂ  ಎಂದುಕೊಳ್ಳಿ. ದರ್ಶನ್ ಓಪನ್ ಆಗಿ ಮಾತನಾಡಿದ್ದಾರೆ.

  ಇತ್ತೀಚೆಗೆ ಬಂದ ಪರಭಾಷೆಯ ಚಿತ್ರವೊಂದರ ಬಗ್ಗೆ ಭಾರಿ ಬಿಲ್ಡಪ್ ಕೊಟ್ರು. ಅದಕ್ಕೋಸ್ಕರ ಅವರು ಮೂರೂವರೆ ವರ್ಷ ತೆಗೆದುಕೊಂಡಿದ್ದರಂತೆ. ನಮ್ಮ ಬಳಿ ಬರಲಿ, ಕಡಿಮೆ ಅವಧಿಯಲ್ಲಿ ಸಿದ್ಧತೆ ಮಾಡಿಕೊಂಡು ಸಿನಿಮಾ ಮಾಡೋದು ಹೇಗೆ ಅನ್ನೋದನ್ನ ಹೇಳಿಕೊಡ್ತೀವಿ. ಕನ್ನಡದಲ್ಲಿ ಎಲ್ಲವೂ ಇದೆ. ಪ್ರೋತ್ಸಾಹ ಬೇಕಷ್ಟೆ ಎಂದಿದ್ದಾರೆ ದರ್ಶನ್. 

  ದರ್ಶನ್ ಹೇಳಿರುವ ಪರಭಾಷೆಯ ಸಿನಿಮಾ ಬಾಹುಬಲಿ ಎಂದು ಪ್ರತ್ಯೇಕವಾಗಿ ಬೇರೆ ಹೇಳಬೇಕಿಲ್ಲ. ಬಾಹುಬಲಿ ಸಿನಿಮಾ ವೇಳೆಯಲ್ಲಿ ಕೂಡಾ ದರ್ಶನ್ ಕನ್ನಡದ ಪತ್ರಿಕೆ, ಟಿವಿ ಚಾನೆಲ್‍ಗಳ ವಿರುದ್ಧ ಕಿಡಿ ಕಾರಿದ್ದರು. ಪರಭಾಷೆಯ ಚಿತ್ರಕ್ಕೆ ಕೊಡುವ ಪ್ರಚಾರವನ್ನು ಕನ್ನಡ ಚಿತ್ರಗಳಿಗೆ ಕೊಡಿ ಎಂದು ಬಹಿರಂಗವಾಗಿಯೇ ಹೇಳಿದ್ದರು. 

 • ಪಾಪ.. ರವಿಚಂದ್ರನ್‍ಗೆ ಮುನಿರತ್ನ ಹೀಗೆ ಮಾಡಬಾರದಿತ್ತು..!

  krishna ravichandran is mssing this in kurukshetra

  ಕ್ರೇಜಿ ಸ್ಟಾರ್ ರವಿಚಂದ್ರನ್, ಕನ್ನಡ ಚಿತ್ರರಂಗದ ಕನಸುಗಾರ. ಸೊಗಸುಗಾರ. ಈ ಚೆಲುವಾಂತ ಚೆನ್ನಿಗ ಕುರುಕ್ಷೇತ್ರ ಚಿತ್ರದಲ್ಲಿ ಕೃಷ್ಣನ ಪಾರ್ಟು ಹಾಕಿದ್ದಾರೆ. ಆದರೆ, ನೋಡಿ.. ಕೃಷ್ಣ ಅಂದಮೇಲೆ ಗೋಪಿಕೆಯರು ಇರಬೇಕಲ್ವಾ..? 16 ಸಾವಿರ ಚೆಲುವೆಯರ ಚೆಲುವಾಂತ ಚೆಲುವ ಕೃಷ್ಣನ ಪಾತ್ರ ಮಾಡಿರುವ ರವಿಚಂದ್ರನ್‍ಗೆ ಕುರುಕ್ಷೇತ್ರ ಚಿತ್ರದಲ್ಲಿ ಮುನಿರತ್ನ ಏನ್ ಮಾಡಿದ್ದಾರೆ ಗೊತ್ತಾ..?

  ಕೃಷ್ಣನ ಪಾತ್ರ ಕೊಟ್ಟಿದ್ದರೂ ಹುಡುಗಿಯರಿಲ್ಲ. ರೊಮ್ಯಾನ್ಸ್ ಇಲ್ಲ. ಎಲ್ಲರೂ ದ್ರಾಕ್ಷಿ ಅಂದ ಕೂಡ್ಲೇ ನನ್ನ ನೆನಪಿಸಿಕೊಳ್ತಾರೆ. ಇಲ್ಲಿ ದ್ರಾಕ್ಷಿ ತಿನ್ನಿಸೋದು ಕೂಡಾ ಇಲ್ಲ. ಕನ್ನಡ ಚಿತ್ರರಂಗದಲ್ಲಿ ಕೃಷ್ಣ ಅಂತ ಯಾರಾದ್ರೂ ಇದ್ರೆ ಅದು ನಾನು. ಲವ್ ಮಾಡಿಸೋ ನಾನು ಚಿತ್ರದಲ್ಲಿ ಯುದ್ಧ ಶುರು ಮಾಡಿಸುತ್ತೇನೆ ಎಂದು ಚಟಾಕಿ ಹಾರಿಸಿದ್ದಾರೆ ರವಿಚಂದ್ರನ್.

 • ಬಾಹುಬಲಿ ಸೈಡಿಗಿಡಿ ಎಂದರೇಕೆ ದರ್ಶನ್..?

  darshan talks about kurukshetra

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಕುರುಕ್ಷೇತ್ರ ಚಿತ್ರದ ಬಗ್ಗೆ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇದು ಅವರು ನಟಿಸಿರುವ ಮೊತ್ತ ಮೊದಲ ಪೌರಾಣಿಕ ಚಿತ್ರ ಅಷ್ಟೇ ಅಲ್ಲ, ಇದುವರೆಗೆ ದುರ್ಯೋಧನನನ್ನು ಕೇಂದ್ರವಾಗಿರಿಸಿಕೊಂಡು ಯಾವುದೇ ಚಿತ್ರ ಬಂದಿಲ್ಲ. ಹೀಗಾಗಿಯೇ ದರ್ಶನ್ ಎಲ್ಲಿಯೇ ಹೋದರೂ ಕುರುಕ್ಷೇತ್ರದ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ತಾರೆ.

  ಕುರುಕ್ಷೇತ್ರ ನಮ್ಮ ನೆಲದ ಸಿನಿಮಾ. ನಮ್ಮ ಮುಂದಿನ ತಲೆಮಾರಿನವರಿಗೆ ನಾವು ಹೇಳಲೇಬೇಕಾಗಿರುವ ನಮ್ಮದೇ ಮಹಾಭಾರತದ ಕಥೆ ಎನ್ನುವ ದರ್ಶನ್ ಇದೇ ವೇಳೆ ಬಾಹುಬಲಿಯನ್ನು ಸೈಡಿಗಿಡಿ ಎಂದಿದ್ದಾರೆ.

  ದರ್ಶನ್ ಇದನ್ನು ಹೇಳೋಕೆ ಕಾರಣವನ್ನೂ ಕೊಟ್ಟಿದ್ದಾರೆ. ಬಾಹುಬಲಿ ಒಂದು ಕಾಲ್ಪನಿಕ ಸಿನಿಮಾ, ಕಥೆಯಲ್ಲಿ ನಮಗೆ ಬೇಕಾದಂತೆ ಬದಲಾವಣೆ ಮಾಡಿಕೊಳ್ಳಬಹುದು, ಆದರೆ ಕುರುಕ್ಷೇತ್ರ ಹಾಗಲ್ಲ. ಪ್ರತಿಯೊಬ್ಬ ಭಾರತೀಯನಿಗೂ ಗೊತ್ತಿರುವ ಕಥೆ. ಹಾಗೆ ಗೊತ್ತಿರುವ ಕಥೆಯನ್ನೇ ನಾವು ಅದ್ಭುತವಾಗಿ ಹೇಳಬೇಕು. ಹೀಗಾಗಿ ಕುರುಕ್ಷೇತ್ರ, ಬಾಹುಬಲಿಗಿಂತ ದೊಡ್ಡ ಸಾಹಸ ಎಂದಿದ್ದಾರೆ.

 • ಬೆಳ್‍ಬೆಳಗ್ಗೇನೇ ಸ್ಟುಡಿಯೋಗೆ ಹೋಗ್ತಾರೆ ದರ್ಶನ್..!

  darshan dubs for kurukshetra

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 50ನೇ ಸಿನಿಮಾ ಕುರುಕ್ಷೇತ್ರ. ಚಿತ್ರತಂಡ ಹೇಳಿದ್ದಂತೆಯೇ ಎಲ್ಲವೂ ಆಗಿದ್ದರೆ, ಸಿನಿಮಾ ಇಷ್ಟು ಹೊತ್ತಿಗೆ ಥಿಯೇಟರ್‍ನಲ್ಲಿರಬೇಕಿತ್ತು. ಚಿತ್ರದ ಡಬ್ಬಿಂಗ್ ಭಾರಿ ವೇಗವಾಗಿ ನಡೆಯುತ್ತಿದ್ದು, ದರ್ಶನ್ ಅಂತೂ ತಪಸ್ಸಿನಂತೆ ಮಾಡುತ್ತಿದ್ದಾರೆ.

  ದರ್ಶನ್ ಮುಂಜಾನೆಯೇ ಎದ್ದು ಸ್ಟುಡಿಯೋಗೆ ಬಂದು ಫ್ರೆಶ್ ವಾಯ್ಸ್‍ನಲ್ಲೆ ಡಬ್ಬಿಂಗ್ ಮಾಡುತ್ತಿರುವುದು ವಿಶೇಷ. ಈ ಹಿಂದೆ ಸಂಗೊಳ್ಳಿ ರಾಯಣ್ಣ ಚಿತ್ರಕ್ಕೆ ಇದೇ ರೀತಿ ಡಬ್ ಮಾಡಿದ್ದ ದರ್ಶನ್, ಕುರುಕ್ಷೇತ್ರ ಚಿತ್ರಕ್ಕೂ ಅದೇ ಮಾದರಿ ಅನುಸರಿಸುತ್ತಿದ್ದಾರೆ.

  ಡಬ್ಬಿಂಗ್ ಒಂದು ಹಂತದ  ಕೆಲಸ ಮುಗಿದಿದ್ದು, ಈಗಾಗಲೇ 2ನೇ ಶೆಡ್ಯೂಲ್ ಜಾರಿಯಲ್ಲಿದೆ. 

 • ಭಾನುಮತಿ ಜೊತೆ ದುರ್ಯೋಧನನ ಪ್ರಣಯಗೀತೆ

  kurukshetra romantic songs goes viral

  ಕುರುಕ್ಷೇತ್ರದಲ್ಲಿ ದುರ್ಯೋಧನನಾಗಿ ಅಬ್ಬರಿಸಲು ರೆಡಿಯಾಗಿರುವ ದರ್ಶನ್, ಚಿತ್ರದಲ್ಲಿ ಪ್ರಣಯೇಶ್ವರನಾಗಿಯೂ ನಟಿಸಿದ್ದಾರೆ. ಮುನಿರತ್ನ ಕುರುಕ್ಷೇತ್ರದ ಪ್ರಣಯಗೀತೆಯ ಲಿರಿಕಲ್ ವಿಡಿಯೋ ಬಿಡುಗಡೆಯಾಗಿದೆ. ಭಾನುಮತಿಯಾಗಿ ಮೇಘನಾ ರಾಜ್ ಅವರೊಂದಿಗೆ `ಚಾರುತಂತಿ ನಿನ್ನ ತನುವು.. ನುಡಿಸ ಬರುವೆನು ದಿನಾ.. ಹಾಡು ಪ್ರೇಮಪರ್ವದ ಸರಸ ಸಲ್ಲಾಪದ ಗೀತೆ.

  ಸೋನು ನಿಗಮ್, ಶ್ರೇಯಾ ಘೋಷಾಲ್ ಹಾಡಿಗೆ ಭಾವನೆ ತುಂಬಿದ್ದರೆ, ಸಾಹಿತ್ಯ ನೀಡಿರುವುದು ಡಾ.ನಾಗೇಂದ್ರ ಪ್ರಸಾದ್. ಹರಿಕೃಷ್ಣ ಸಂಗೀತದ ಹಾಡು ವೈಭವಯುತವಾಗಿ ಚಿತ್ರೀಕರಣಗೊಂಡಿದೆ.

 • ಮಗನ ಅಭಿನಯ ಮೆಚ್ಚಿಕೊಂಡ ಮುಖ್ಯಮಂತ್ರಿ

  hd kumaraswamy appreciates nikhil in kurukshetra

  ರಾಜ್ಯದಲ್ಲೀಗ ಸರ್ಕಾರ ಉಳಿಯುತ್ತಾ.. ಉರುಳುತ್ತಾ ಅನ್ನೊದೇ ದೊಡ್ಡ ಚರ್ಚೆ. ಆದರೆ, ಸಿಎಂ ಆಗಿರುವ ಕುಮಾರಸ್ವಾಮಿ ಮಾತ್ರ ಕೂಲಾಗೇ ಇದ್ದಾರೆ. ಇಬ್ಬರು ಪಕ್ಷೇತರ ಶಾಸಕರು ಬೆಂಬಲ ವಾಪಸ್ ತೆಗೆದುಕೊಂಡು, ಇನ್ನೂ ಕೆಲವು ಶಾಸಕರು ಸಿಡಿದೆದ್ದಿದ್ದಾರೆ ಎಂಬ ಸೂಚನೆಯಿದ್ದರೂ.. ಅವರು ಮಾತ್ರ ಕೂಲ್ ಕೂಲ್. ಅವರು ನೆಮ್ಮದಿಯಾಗಿ.. ನಿರಾಳವಾಗಿ  ಮುನಿರತ್ನ ಅವರ ಮನೆಗೆ ಹೋಗಿ.. ಕುರುಕ್ಷೇತ್ರ ಚಿತ್ರದ ಒಂದು ಹಾಡು ನೋಡಿದ್ದಾರೆ. ಅಭಿಮನ್ಯು ಆಗಿ ನಟಿಸಿರುವ ಮಗನ ಅಭಿನಯವನ್ನು ಮೆಚ್ಚಿಕೊಂಡಿದ್ದಾರೆ.

  ಕುರುಕ್ಷೇತ್ರ ಚಿತ್ರ ಈಗಾಗಲೇ ಒಂದೂವರೆ ವರ್ಷ ತಡವಾಗಿದೆ. ಈ ಕುರಿತು ಮಾತನಾಡಿರುವ ಮುನಿರತ್ನ, ಚಿತ್ರದ 2ಡಿ ಪ್ರಿಂಟ್ ರೆಡಿಯಾಗಿದೆ. 3ಡಿ ಪ್ರಿಂಟ್ ರೆಡಿಯಾಗುತ್ತಿದೆ. ಎರಡೂ ವರ್ಷನ್ ರೆಡಿಯಾದ ಮೇಲೆ ರಿಲೀಸ್ ಎಂದಿದ್ದಾರೆ.

 • ಮತ್ತೊಮ್ಮೆ ಪರಭಾಷೆಯ ಎದುರು ಸೋತ ಕನ್ನಡಿಗರು..!

  saaho kills kannada movie screening in karnataka

  ಪರಭಾಷೆಯ ದೊಡ್ಡ ದೊಡ್ಡ ಸ್ಟಾರ್‍ಗಳ ಚಿತ್ರಗಳು ಬಂದಾಗ ಮೊದಲ ಹೊಡೆತ ಬೀಳುವುದೇ ಕನ್ನಡದ ಚಿತ್ರಗಳ ಮೇಲೆ. ಅದು ಈ ಬಾರಿಯೂ ನಿಜವಾಗಿದೆ. ಸಾಹೋ ಚಿತ್ರಕ್ಕೆ ಕನ್ನಡದ ಚಿತ್ರಗಳು ಬಲಿಯಾಗಿವೆ. ಸಾಹೋ ಚಿತ್ರಕ್ಕಾಗಿ ಅತಿ ದೊಡ್ಡ ಹೊಡೆತ ತಿಂದಿರುವುದು ನನ್ನ ಪ್ರಕಾರ ಚಿತ್ರ.

  ಪ್ರಿಯಾಮಣಿ, ಕಿಶೋರ್ ಅಭಿನಯದ ವಿನಯ್ ಬಾಲಾಜಿ ನಿರ್ದೇಶನದ ನನ್ನ ಪ್ರಕಾರ, ಕಥೆ ಮತ್ತು ಮೇಕಿಂಗ್‍ನಿಂದಾಗಿ ಗಮನ ಸೆಳೆದಿತ್ತು. ಸಿನಿಮಾ ಥಿಯೇಟರುಗಳಲ್ಲಿ ಕಚ್ಚಿಕೊಳ್ಳುತ್ತಿರುವಾಗಲೇ ರಿಲೀಸ್ ಆಯ್ತು ಸಾಹೋ. ಈಗ ನನ್ನ ಪ್ರಕಾರ ಚಿತ್ರ ಕೆಲವೇ ಕೆಲವು.. ಬೆರಳೆಣಿಕೆ ಚಿತ್ರಮಂದಿರಗಳಲ್ಲಿ ಮಾತ್ರವೇ ಲಭ್ಯ. ಚಿತ್ರತಂಡದವರು ಏನೆಲ್ಲ ಹೋರಾಡಿದರೂ.. ಪ್ರೇಕ್ಷಕರ ಬೆಂಬಲ ಸಿಗುತ್ತಿದ್ದರೂ.. ಚಿತ್ರಮಂದಿರದಲ್ಲಿ ಚಿತ್ರವೇ ಇಲ್ಲ. ಸಾಹೋ ನುಂಗಿಬಿಟ್ಟಿದೆ.

  ಕುರುಕ್ಷೇತ್ರ ಚಿತ್ರಕ್ಕೂ ಸಾಹೋ ಪ್ರದರ್ಶನದ ಬಿಸಿ ತಟ್ಟಿದೆ. ಅಂದಹಾಗೆ ಸಾಹೋ ಚಿತ್ರಕ್ಕೆ ಓಪನಿಂಗ್ ದಿನ ಒಂದು ಟಿಕೆಟ್ ದರ 750 ರೂ. ಇತ್ತು. ಪ್ರೇಕ್ಷಕರನ್ನು ಸುಲಿಗೆ ಮಾಡುವ ಅವಕಾಶ ದೊಡ್ಡದೋ.. ಕನ್ನಡ ಚಿತ್ರಗಳ ಮೇಲಿನ ಮಮಕಾರ ದೊಡ್ಡದೋ.. ನೋ ವೇ.. ದುಡ್ಡಿಗೇ ಜೈ ಎಂದಿರುವ ಮಲ್ಟಿಪ್ಲೆಕ್ಸ್ ಮಾಲೀಕರು.. ಕನ್ನಡ ಚಿತ್ರಗಳನ್ನೇ ಕೈಬಿಟ್ಟಿದ್ದಾರೆ. ಬಲಿಯಾಗಿರುವುದು ನನ್ನ ಪ್ರಕಾರ.

 • ಮುನಿರತ್ನ ಕುರುಕ್ಷೇತ್ರ 100 ಕೋಟಿ ಕ್ಲಬ್

  kurukshetra movie team celebrates 100 cr collections

  ಮುನಿರತ್ನ ಕುರುಕ್ಷೇತ್ರ 100 ಕೋಟಿ ಕ್ಲಬ್ ಸೇರಿದೆ. ಬಿಡುಗಡೆಯಾದ ಮೂರೇ ವಾರಗಳಲ್ಲಿ 100 ಕೋಟಿ ಗಳಿಕೆ ಮಾಡಿ ದಾಖಲೆ ಬರೆದಿದೆ ಕುರುಕ್ಷೇತ್ರ. ಈಗ ಇದು ಅಧಿಕೃತ. ಏಕೆಂದರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರೇ 100 ಕೋಟಿಯ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ.

  ಕುರುಕ್ಷೇತ್ರ ಮೊದಲ ದಿನವೇ 13 ಕೋಟಿ, 2ನೇ ದಿನ 10 ಕೋಟಿ ಗಳಿಸಿತ್ತು. ನಂತರವೂ ಸದ್ದಿಲ್ಲದೆ ನಾಗಲೋಟ ಮುಂದುವರಿಸಿದ ಕುರುಕ್ಷೇತ್ರ 100 ಕೋಟಿಯ ಗಡಿ ದಾಟಿದೆ. ಚಿತ್ರದ ವಿತರಕ ರಾಕ್‍ಲೈನ್ ವೆಂಕಟೇಶ್ ಮಾತ್ರ ಎಲ್ಲ ಲೆಕ್ಕವನ್ನೂ ಪರಿಶೀಲಿಸುವವರೆಗೆ ಮಾತನಾಡಲ್ಲ ಎಂದಿದ್ದಾರೆ. ನಿರ್ದೇಶಕ ನಾಗಣ್ಣ ಫುಲ್ ಹ್ಯಾಪಿ.

   

 • ಮುನಿರತ್ನ ಕುರುಕ್ಷೇತ್ರ ಅರ್ಧ ಶತದಿನೋತ್ಸವ

  muniratna kurukshetra completes 50 days

  ಚಾಲೆಂಜಿಂಗ್ ಸ್ಟಾರ್ ದರ್ಶನ್, ಅಂಬರೀಷ್, ಅರ್ಜುನ್ ಸರ್ಜಾ, ನಿಖಿಲ್ ಅಭಿನಯಿಸಿದ್ದ ಮುನಿರತ್ನ ಕುರುಕ್ಷೇತ್ರ ಯಶಸ್ವಿಯಾಗಿ 50 ದಿನ ಪೂರೈಸಿದೆ. ಬಿಡುಗಡೆಯಾದ ದಿನದಿಂದಲೂ ಬಾಕ್ಸಾಫೀಸ್ನಲ್ಲಿ ಅಬ್ಬರಿಸಿದ್ದ ಕುರುಕ್ಷೇತ್ರ, ಈಗಾಗಲೇ 100 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ.

  ಆಗಸ್ಟ್ 9ರಂದು ರಿಲೀಸ್ ಆಗಿದ್ದ ಕುರುಕ್ಷೇತ್ರ, ನೂರಾರು ಚಿತ್ರಮಂದಿರಗಳಲ್ಲಿ 50 ದಿನ ಪೂರೈಸಿದೆ. ಅಷ್ಟೇ ಅಲ್ಲ, ಬಾಕ್ಸಾಫೀಸ್ನಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ನಂ.2 ಸಿನಿಮಾ ಎಂಬ ಹಿರಿಮೆಗೆ ಪಾತ್ರವಾಗಿದೆ. ಮೊದಲ ಸ್ಥಾನದಲ್ಲಿ ಕೆಜಿಎಫ್ ಇದೆ.

  ಇಡೀ ಮಹಾಭಾರತವನ್ನು ದುರ್ಯೋಧನನ ದೃಷ್ಟಿಕೋನದಲ್ಲಿ ಚಿತ್ರಿಸಿದ್ದ ಕುರುಕ್ಷೇತ್ರ ಚಿತ್ರಕ್ಕೆ ನಾಗಣ್ಣ ನಿರ್ದೇಶನ ಮಾಡಿದ್ದರು. ಜಿ.ಕೆ.ಭಾರವಿ ಕಥೆ ಬರೆದಿದ್ದರು. 2 ವರ್ಷಗಳ ಸುದೀರ್ಘ ಕಾಲ ಶ್ರಮವಹಿಸಿ ತೆಗೆದಿದ್ದ ಚಿತ್ರಕ್ಕೆ ಸುಮಾರು 75 ಕೋಟಿ ಖರ್ಚು ಮಾಡಲಾಗಿತ್ತು.

 • ಮುನಿರತ್ನ ಕುರುಕ್ಷೇತ್ರ ಮಲಯಾಳಂ ರಿಲೀಸ್ ಡೇಟ್ ಫಿಕ್ಸ್

  muniratna kurukhshetra malayalam release on oct 18th

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕುರುಕ್ಷೇತ್ರ ಹಂತ ಹಂತವಾಗಿ ಬೇರೆ ಭಾಷೆಗಳಿಗೆ ಹೋಗುತ್ತಿದೆ. ಈಗಾಗಲೇ ಕನ್ನಡ, ತೆಲುಗು ಮತ್ತು ತಮಿಳಿನಲ್ಲಿ ರಿಲೀಸ್ ಆಗಿರುವ ಕುರುಕ್ಷೇತ್ರ ಈಗ ಹಿಂದಿಗೆ ಹೋಗುತ್ತಿದೆ. ಅಕ್ಟೋಬರ್ 18ರಂದು ಕೇರಳದಲ್ಲಿ ಕುರುಕ್ಷೇತ್ರ ರಿಲೀಸ್ ಆಗುತ್ತಿದೆ.

  ದರ್ಶನ್, ಅಂಬರೀಷ್, ಅರ್ಜುನ್ ಸರ್ಜಾ, ನಿಖಿಲ್ ಕುಮಾರಸ್ವಾಮಿ, ರವಿಶಂಕರ್, ರಾಕ್‍ಲೈನ್ ವೆಂಕಟೇಶ್, ಶ್ರೀನಾಥ್, ಶ್ರೀನಿವಾಸ ಮೂರ್ತಿ, ಹರಿಪ್ರಿಯಾ, ಮೇಘನಾ ರಾಜ್, ಭಾರತಿ ವಿಷ್ಣುವರ್ಧನ್.. ಹೀಗೆ ಘಟಾನುಘಟಿಗಳೇ ನಟಿಸಿದ್ದ ಕುರುಕ್ಷೇತ್ರ ಸಿನಿಮಾಗೆ ನಾಗಣ್ಣ ನಿರ್ದೇಶಕ. ಕನ್ನಡದಲ್ಲಿ ಶತದಿನೋತ್ಸವದತ್ತ ಮುನ್ನುಗ್ಗುತ್ತಿರುವ ಸಿನಿಮಾ, ಇದೇ ವಾರ ಮಲಯಾಳಂನಲ್ಲಿ ದರ್ಶನ ಕೊಡುತ್ತಿದೆ.

 • ಮುನಿರತ್ನ ಕುರುಕ್ಷೇತ್ರಕ್ಕೆ ರಾಕ್‍ಲೈನ್ ಬಲ

  kurukshetra to release in 5 languages

  ದರ್ಶನ್ ಅಭಿನಯದ 50ನೇ ಸಿನಿಮಾ ಮುನಿರತ್ನ ಕುರುಕ್ಷೇತ್ರ ಚಿತ್ರಕ್ಕೀಗ ರಾಕ್‍ಲೈನ್ ವೆಂಕಟೇಶ್ ಬಲ ಸಿಕ್ಕಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ.. ಐದೂ ಭಾಷೆಗಳಲ್ಲಿ ಕುರುಕ್ಷೇತ್ರ ಚಿತ್ರವನ್ನು ವಿತರಣೆ ಮಾಡುತ್ತಿರುವುದು ರಾಕ್‍ಲೈನ್ ವೆಂಕಟೇಶ್. 2ಡಿ ಮತ್ತು 3ಡಿಯಲ್ಲಿ ರಿಲೀಸ್ ಆಗುತ್ತಿರುವ ಕುರುಕ್ಷೇತ್ರ ಹೊಸ ದಾಖಲೆಯನ್ನೇ ಬರೆಯಲು ಸಿದ್ಧವಾಗಿದೆ.

  ಚಿತ್ರದ ಆಡಿಯೋ ರೈಟ್ಸ್ ಖರೀದಿಸಿರುವುದು ಲಹರಿ ವೇಲು. ದೇಶ ಹಾಗೂ ವಿದೇಶಗಳಲ್ಲಿ ಏಕಕಾಲಕ್ಕೆ ರಿಲೀಸ್ ಆಗುತ್ತಿರುವ ಕುರುಕ್ಷೇತ್ರ, 1000ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಆಗಲಿದೆ. ಕರ್ನಾಟಕದಲ್ಲಿಯೇ 300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ.

  ಜುಲೈ 27ಕ್ಕೆ ಕರ್ನಾಟಕದಲ್ಲಿ ಆಡಿಯೋ ರಿಲೀಸ್, ಆಗಸ್ಟ್ 2ಕ್ಕೆ ಸಿನಿಮಾ ರಿಲೀಸ್. ಕುರುಕ್ಷೇತ್ರದ ಅದ್ಧೂರಿ ಬಿಡುಗಡೆಗೆ ಸಕಲ ಸಿದ್ಧತೆಯೂ ನಡೆಯುತ್ತಿದೆ.

 • ಮುನಿರತ್ನ ಕುರುಕ್ಷೇತ್ರದ ಮುಹೂರ್ತಕ್ಕೆ ಡಿಕೆ ತಲೆನೋವು

  kurukshtera movie image

  ದರ್ಶನ್ ಅಭಿನಯದ 50ನೇ ಚಿತ್ರ ಕುರುಕ್ಷೇತ್ರ. ಅಲ್ಲಲ್ಲ.. ಅದು ಮುನಿರತ್ನ ಕುರುಕ್ಷೇತ್ರ. ಚಿತ್ರದ ಮುಹೂರ್ತಕ್ಕೆ ಆಗಸ್ಟ್ 6ನೇ ತಾರೀಕು ಡೇಟ್ ಫ{ಇಕ್ಸ್ ಆಗಿರುವುದು ನಿಜವಾದರೂ, ಮುನಿರತ್ನಗೆ ಒಂದು ವಿಚಿತ್ರ ತಲೆನೋವು ಶುರುವಾಗಿದೆ. ಅದು ಡಿಕೆ ತಲೆನೋವು

  ಇನ್ನೇನಿಲ್ಲ, ಮುನಿರತ್ನ ಡಿಕೆ ಶಿವಕುಮಾರ್ ಆಪ್ತರಲ್ಲಿ ಒಬ್ಬರು. ಹೀಗಾಗಿಯೇ ಸಿನಿಮಾ ಮುಹೂರ್ತದ ಆಹ್ವಾನ ಪತ್ರಿಕೆಯಲ್ಲಿ ಸಚಿವ ಡಿ.ಕೆ. ಶಿವಕುಮಾರ್ ಮತ್ತು ಸಂಸದ ಡಿ.ಕೆ. ಸುರೇಶ್ ಇಬ್ಬರ ಹೆಸರೂ ಇದೆ. ಆದರೆ ಈಗ ಕಂಪ್ಲೀಟ್ ಐಟಿ ಟೆನ್ಷನ್‍ನಲ್ಲಿರುವ ಡಿಕೆ ಬ್ರದರ್ಸ್, ಮುಹೂರ್ತ ಕಾರ್ಯಕ್ರಮಕ್ಕೆ ಬರುವುದು ಕಷ್ಟಸಾಧ್ಯ. ತನಿಖೆ ಮುಗಿಯಲೇ ಇಲ್ಲದವಾದರೆ ಬರಲು ಆಗುವುದೂ ಇಲ್ಲ. 

  ಈ ಮಧ್ಯೆ ಐಟಿಯವರು ಬೆಂಡೆತ್ತಿರುವಾಗಲೇ ಮುನಿರತ್ನ ಹೋಗಿ ಡಿಕೆ ಸುರೇಶ್ ಅವರಿಗೆ ಆಹ್ವಾನವನ್ನೂ ಕೊಟ್ಟು ಬಂದಿದ್ದಾರೆ. ಒಟ್ಟಿನಲ್ಲಿ ಮುನಿರತ್ನ ಕುರುಕ್ಷೇತ್ರದ ದಿನ ಏನೇ ಸಂಭ್ರಮವಿದ್ದರೂ, ಡಿಕೆ ತಲೆನೋವು ಎಲ್ಲರಿಗೂ ಕಾಡಲಿದೆ.

  Related Articles :-

  ಕುರುಕ್ಷೇತ್ರದ ಮುಹೂರ್ತಕ್ಕೆ ಆಹ್ವಾನ. ಹೇಗಿದ್ದಾರೆ ಗೊತ್ತಾ ದರ್ಶನ್..?

  ಕುರುಕ್ಷೇತ್ರದಲ್ಲಿ ದರ್ಶನ್ ಜೊತೆ ನಟಿಸುತ್ತಿಲ್ಲ - ಕಾರಣ ಹೇಳಿದ ಶಿವರಾಜ್​ ಕುಮಾರ್ 

  ಕುರುಕ್ಷೇತ್ರ ಚಿತ್ರದ ಮುಹೂರ್ತ ಮುಂದೆ ಹೋಯ್ತು..!

  ದುರ್ಯೋಧನ ದರ್ಶನ್​ಗೆ ಸಿಕ್ಕನಾ ಭೀಮ..? - ಬಾಲಿವುಡ್ ಆಂಜನೇಯ ಕುರುಕ್ಷೇತ್ರದ ಭೀಮ?

  Kurukshetra To be Launched on July 30th

  ದರ್ಶನ್ ಕುರುಕ್ಷೇತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಅಭಿಮನ್ಯು

  ಕುರುಕ್ಷೇತ್ರದಲ್ಲಿ ಹರಿಪ್ರಿಯ ದ್ರೌಪದಿಯಲ್ಲ..!

  Haripriya Confirmed For Kurukshetra

  Vivek Oberoi in Kurukshetra Say Reports

  Kurukshetra To Be Launched On July 23rd

 • ಮುನಿರತ್ನ ಕುರುಕ್ಷೇತ್ರದಲ್ಲಿ ಅವಕಾಶ - ಶಕುನಿ ರವಿಶಂಕರ್, ಧೃತರಾಷ್ಷ್ಟ್ರ ಶ್ರೀನಾಥ್​ಗೆ ಉತ್ಸಾಹವೋ ಉತ್ಸಾಹ

  ravishankar in kurukshetra

  ದರ್ಶನ್ ಅಭಿನಯದ 50ನೇ ಚಿತ್ರ ಮುನಿರತ್ನ ಕುರುಕ್ಷೇತ್ರ ಚಿತ್ರ, ಸೆಟ್ಟೇರುವ ಮೊದಲೇ ಅಪಾರ ನಿರೀಕ್ಷೆ ಹುಟ್ಟಿಸುತ್ತಿದೆ. ಈಗ ಚಿತ್ರದ ಅತ್ಯಂತ ಪ್ರಮುಖ ಪಾತ್ರಕ್ಕೆ ಆರ್ಮುಗಂ ಖ್ಯಾತಿಯ ರವಿಶಂಕರ್ ಸೇರ್ಪಡೆಯಾಗಿದ್ದಾರೆ. ರವಿಶಂಕರ್​ಗೆ ಕುರುಕ್ಷೇತ್ರ ಚಿತ್ರದಲ್ಲಿ ಶಕುನಿಯ ಪಾತ್ರ.

  ಕುರುಕ್ಷೇತ್ರ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿರುವುದೇ ನನ್ನ ಅದೃಷ್ಟ. ನಾನಂತೂ ಎಕ್ಸೈಟ್ ಆಗಿದ್ದೇನೆ ಎಂದಿದ್ದಾರೆ ರವಿಶಂಕರ್. ಅವರ ಎಕ್ಸೈಟ್​ಮೆಂಟ್​ಗೆ ಕಾರಣವೂ ಇದೆ. ಏಕೆಂದರೆ ಕುರುಕ್ಷೇತ್ರಕ್ಕೆ ಕಾರಣಕರ್ತನೇ ಶಕುನಿ. ಮಹಾಭಾರತದ ಅತ್ಯಂತ ಪ್ರಮುಖ ಪಾತ್ರವದು.

  ಇನ್ನು ಧೃತರಾಷ್ಟ್ರನ ಪಾತ್ರದಲ್ಲಿ ನಟಿಸುತ್ತಿರುವ ಶ್ರೀನಾಥ್​ಗೂ ಅಂಥದ್ದೇ ಉತ್ಸಾಹ. ಶ್ರೀನಾಥ್​ಗೆ ಪೌರಾಣಿಕ ಚಿತ್ರ ಮತ್ತು ಪಾತ್ರಗಳು ಹೊಸದಲ್ಲ. ಈ ಹಿಂದೆ ಅಣ್ಣಾವ್ರ ಜೊತೆ ನಾಲ್ಕು ಪೌರಾಣಿಕ ಚಿತ್ರಗಳಲ್ಲಿ ನಟಿಸಿದ್ದೆ. ಈಗ ಮತ್ತೆ ಅಂಥಾದ್ದೊಂದು ಅದ್ಭುತ ಅವಕಾಶ ಸಿಕ್ಕಿದೆ. ಹಳೆಯದೆಲ್ಲ ನೆನಪಾಗುತ್ತಿದೆ. ಅಭಿನಯಿಸಲು ಕಾತುರನಾಗಿದ್ದೇನೆ ಎಂದಿದ್ದಾರೆ ಶ್ರೀನಾಥ್.

  Related Articles :-

  ಮುನಿರತ್ನ ಕುರುಕ್ಷೇತ್ರದ ಮುಹೂರ್ತಕ್ಕೆ ಡಿಕೆ ತಲೆನೋವು

  ಕುರುಕ್ಷೇತ್ರದ ಮುಹೂರ್ತಕ್ಕೆ ಆಹ್ವಾನ. ಹೇಗಿದ್ದಾರೆ ಗೊತ್ತಾ ದರ್ಶನ್..?

  ಕುರುಕ್ಷೇತ್ರದಲ್ಲಿ ದರ್ಶನ್ ಜೊತೆ ನಟಿಸುತ್ತಿಲ್ಲ - ಕಾರಣ ಹೇಳಿದ ಶಿವರಾಜ್​ ಕುಮಾರ್ 

  ಕುರುಕ್ಷೇತ್ರ ಚಿತ್ರದ ಮುಹೂರ್ತ ಮುಂದೆ ಹೋಯ್ತು..!

  ದುರ್ಯೋಧನ ದರ್ಶನ್​ಗೆ ಸಿಕ್ಕನಾ ಭೀಮ..? - ಬಾಲಿವುಡ್ ಆಂಜನೇಯ ಕುರುಕ್ಷೇತ್ರದ ಭೀಮ?

  Kurukshetra To be Launched on July 30th

  ದರ್ಶನ್ ಕುರುಕ್ಷೇತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಅಭಿಮನ್ಯು

  ಕುರುಕ್ಷೇತ್ರದಲ್ಲಿ ಹರಿಪ್ರಿಯ ದ್ರೌಪದಿಯಲ್ಲ..!

 • ಮೇಘನಾ ರಾಜ್ ಕನಸು ಕುರುಕ್ಷೇತ್ರದಲ್ಲಿ ನನಸಾಯ್ತು..!!

  meghana raj's dreams come true with kurukshetra

  ಕನ್ನಡ ಮತ್ತು ಮಲಯಾಳಂನಲ್ಲಿ ಹಲವು ಚಿತ್ರಗಳಲ್ಲಿ ನಟಿಸಿರುವ ಮೇಘನಾ ರಾಜ್, ಆರಂಭದಲ್ಲಿ ಸುಂದರ್ ರಾಜ್-ಪ್ರಮೀಳಾ ಜೋಷಾಯ್ ಮಗಳಾಗಿ ಗುರುತಿಸಿಕೊಂಡರೂ, ಕೆಲವೇ ದಿನಗಳಲ್ಲಿ ಸುಂದರ್ ರಾಜ್-ಪ್ರಮೀಳಾ ಜೋಷಾಯ್.. ಮೇಘನಾ ರಾಜ್ ತಂದೆ ತಾಯಿಯಂತೆ ಎನ್ನುವಷ್ಟರ ಮಟ್ಟಿಗೆ ಬೆಳೆದವರು. ಅದು ಮೇಘನಾ ರಾಜ್ ಪ್ರತಿಭೆಗೆ ಸಾಕ್ಷಿ. ಹೀಗಿದ್ದರೂ ಮೇಘನಾ ರಾಜ್ ಅವರಿಗೆ ದರ್ಶನ್ ಜೊತೆ ನಟಿಸುವ ಕನಸಿತ್ತಂತೆ.

  ದರ್ಶನ್ ಜೊತೆ ನಟಿಸಬೇಕು ಎನ್ನುವುದು ನನ್ನ ಕನಸಾಗಿತ್ತು. ಆದರೆ, ಈಡೇರಿರಲೇ ಇಲ್ಲ. ಕುರುಕ್ಷೇತ್ರದಲ್ಲಿ ಭಾನುಮತಿಯ ಆಫರ್ ಬಂದಾಗ ಥ್ರಿಲ್ಲಾಗಿದ್ದೆ ಎನ್ನುವ ಮೇಘನಾಗೆ ಕುರುಕ್ಷೇತ್ರ ಹಲವು ಪ್ರಥಮಗಳ ಸಿನಿಮಾ.

  ಮೊದಲ ಪೌರಾಣಿಕ ಚಿತ್ರ, ಮೊದಲ 3ಡಿ ಸಿನಿಮಾ, ಸೆಟ್ಟಿನಲ್ಲಿಯೇ ಚಿತ್ರೀಕರಿಸಲ್ಪಟ್ಟ ಮೊದಲ ಸಿನಿಮಾ, ಮಾವ ಅರ್ಜುನ್ ಸರ್ಜಾ ಜೊತೆಯಲ್ಲೂ ಮೊದಲನೇ ಸಿನಿಮಾ ಮತ್ತು ದರ್ಶನ್ ಜೊತೆ ಮೊದಲ ಸಿನಿಮಾ. 

  ಮೊದಲ ದಿನವೇ ಅರ್ಜುನ್ ಸರ್ಜಾ ಮತ್ತು ದರ್ಶನ್ ಎದುರು ನಟಿಸುವ ದೃಶ್ಯ, ಜೊತೆಗೆ ದೊಡ್ಡ ಡೈಲಾಗು.. ನರ್ವಸ್ ಆಗಿದ್ದೆ ಎಂದು ಹೇಳಿಕೊಂಡಿದ್ದಾರೆ ಮೇಘನಾ ರಾಜ್.

  ಕುರುಕ್ಷೇತ್ರದಲ್ಲಿ ಮೇಘನಾ ರಾಜ್ ಭಾನುಮತಿ ಪಾತ್ರದಲ್ಲಿ ನಟಿಸಿದ್ದು, ಚಾರುತಂತಿ ಹಾಡು ಹಿಟ್ ಆಗಿದೆ.  ಇಡೀ ಚಿತ್ರತಂಡದಲ್ಲಿ ನಾನೇ ಚಿಕ್ಕವಳು. ಜೊತೆಯಲ್ಲಿದ್ದವರೆಲ್ಲ ದಿಗ್ಗಜರು. ಹೀಗಾಗಿ ಸೆಟ್‍ಗೆ ಹೋಗುವಾಗ ಒಂದು ಭಯ ಇರುತ್ತಿತ್ತು ಎಂದಿದ್ದಾರೆ ಮೇಘನಾ.

   

 • ಯುಗಾದಿಗೆ ಕುರುಕ್ಷೇತ್ರ

  kurukshetra may release for yugadi

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 50ನೇ ಸಿನಿಮಾ ಆಗಬೇಕಿದ್ದ ಕುರುಕ್ಷೇತ್ರ ಚಿತ್ರ 51ನೇ ಚಿತ್ರವಾಗುತ್ತಿದೆ. ಅದಕ್ಕಿಂತ ಮೊದಲೇ ಯಜಮಾನ ಬಂದಿರುತ್ತಾನೆ. 2018ರ ಸಂಕ್ರಾಂತಿಗೇ ರಿಲೀಸ್ ಆಗಬೇಕಿದ್ದ ಕುರುಕ್ಷೇತ್ರ 3ಡಿ ವರ್ಷನ್ ಹಿನ್ನೆಲೆಯಲ್ಲಿ ವಿಳಂಬವಾಗುತ್ತಿದೆ. ಈಗ 3ಡಿ ಕೆಲಸವೂ ಬಹುತೇಕ ಮುಗಿದಿದ್ದು, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿಯ ಡಬ್ಬಿಂಗ್ ಕೆಲಸಗಳು ಶುರುವಾಗಿವೆಯಂತೆ.

  ಎಲ್ಲ ಭಾಷೆಗಳಲ್ಲೂ ಖ್ಯಾತ ಬರಹಗಾರರು, ಡೈಲಾಗ್ ಬರೆಯುತ್ತಿದ್ದಾರೆ. ಡಬ್ಬಿಂಗ್ ಆರ್ಟಿಸ್ಟುಗಳ ಆಯ್ಕೆಯೂ ಮುಗಿದಿದ್ದು, ಶೀಘ್ರದಲ್ಲೇ ಡಬ್ಬಿಂಗ್ ಶುರುವಾಗಲಿದೆ.

  3 ಗಂಟೆ 5 ನಿಮಿಷದ ಕುರುಕ್ಷೇತ್ರ ಚಿತ್ರದ 2ಡಿ ವರ್ಷನ್ ಈಗಾಗಲೇ ಸೆನ್ಸಾರ್ ಆಗಿದೆ. 3ಡಿ ವರ್ಷನ್ ಬಂದೊಡನೆ ಸೆನ್ಸಾರ್ ಮುಗಿಸಿ ಏಪ್ರಿಲ್ 6ಕ್ಕೆ ಚಿತ್ರ ರಿಲೀಸ್ ಮಾಡುವ ಪ್ಲಾನ್ ಮಾಡಿದೆ ಚಿತ್ರತಂಡ. ಏಪ್ರಿಲ್ 7ಕ್ಕೆ ಯುಗಾದಿ.

 • ರವಿಚಂದ್ರನ್ ಕೃಷ್ಣನಾ.. ಕೊಳಲಿನಾ.. ಕರೆ...

  kurukshetra image

  ಕೃಷ್ಣನೆಂದರೆ ಏನೇನೆಲ್ಲ ನೆನಪಾಗುತ್ತೆ ಹೇಳಿ.. ಏನಿಲ್ಲವೆಂದರೂ ಕೃಷ್ಣನ ತುಂಟಾಟಗಳು ನೆನಪಾಗಿಯೇ ಆಗುತ್ತವೆ. ಅದರಲ್ಲಿ ಶ್ರೀಕೃಷ್ಣನ ಅವತಾರದಲ್ಲಿ ರವಿಚಂದ್ರನ್ ಬಂದುಬಿಟ್ಟರೆ, ಅಬ್ಬಾ.. ಮುಂದಿನದ್ದು ಹೇಳೋದೇ ಬೇಡ. ಮೊದಲೇ ರಸಿಕರ ರಸಿಕ ರವಿಚಂದ್ರನ್.

  ರಣಧೀರನಾಗಿಯೂ ಕೊಳಲು, ರಸಿಕನಾಗಿಯೂ ಕೊಳಲು, ಕೊಳಲಿಗೆ ರಾಯಭಾರಿ, ಕುರುಕ್ಷೇತ್ರದ ರೂವಾರಿ ಎಂದೆಲ್ಲ ಹೊಗಳಿಬಿಟ್ಟಿದ್ದಾರೆ ನಿರ್ದೇಶಕ ರಘುರಾಮ್. ಪುತ್ರ ಮನೋರಂಜನ್ ಶ್ರೀಕೃಷ್ಣನ ವೇಷದಲ್ಲಿರುವ ನನ್ನ ತಂದೆ ದೇವರು ಎಂದು ಭಕ್ತಿಯಿಂದಲೇ ಹೇಳಿಕೊಂಡಿದ್ದಾರೆ.

  30+ ವರ್ಷಗಳ ಚಿತ್ರಜೀವನದಲ್ಲಿ ಇದೆ ಮೊದಲ ಬಾರಿ ಮೀಸೆಯನ್ನೂ ತೆಗೆದು ನಟಿಸಿರುವ ರವಿಚಂದ್ರನ್, ಮೈಮೇಲಿನ ಕೂದಲನ್ನೆಲ್ಲ ತೆಗೆದಿದ್ದರು. ಈಗ ರವಿಚಂದ್ರನ್ ಅವರ ಫೋಟೋ ನಿಮ್ಮ ಕಣ್ಣ ಮುಂದಿದೆ. ಹೇಗಿದ್ದಾರೆ ರವಿಚಂದ್ರನ್..? ಅಲ್ಲಲ್ಲ.. ಹೇಗಿದ್ದಾರೆ ಶ್ರೀಕೃಷ್ಣ..?

 • ರವಿಚಂದ್ರನ್‍ರನ್ನು ನೋಡಿ ಕಾಲಿಗೆ ಬಿದ್ದವರು ಯಾರು..?

  ravichandran as krishna

  ಕ್ರೇಜಿ ಸ್ಟಾರ್ ರವಿಚಂದ್ರನ್, ಇದೇ ಮೊದಲ ಬಾರಿಗೆ ಕುರುಕ್ಷೇತ್ರ ಚಿತ್ರದಲ್ಲಿ ಪೌರಾಣಿಕ ಪಾತ್ರ ನಿರ್ವಹಿಸುತ್ತಿರುವುದು ಸರಿಯಷ್ಟೆ. ತಮ್ಮ ಆರಂಭದ ದಿನಗಳ ಸಿನಿಮಾಗಳಲ್ಲಿ ಪೋಲಿಕೃಷ್ಣನಾಗಿದ್ದ ರವಿಚಂದ್ರನ್, ಕುರುಕ್ಷೇತ್ರ ಚಿತ್ರದಲ್ಲಿ ನಿಜವಾದ ಶ್ರೀಕೃಷ್ಣನ ಪಾತ್ರದಲ್ಲಿಯೇ ನಟಿಸುತ್ತಿದ್ದಾರೆ.

  ಆ ಚಿತ್ರಕ್ಕಾಗಿ 8 ಕೆಜಿ ತೂಕ ಇಳಿಸಿಕೊಂಡಿರುವ ರವಿಚಂದ್ರನ್, ಮೀಸೆಗೂ ಬೈ ಬೈ ಹೇಳಿದ್ದರು. ಆಗ  ಅವರನ್ನು ನೋಡಿದವರೊಬ್ಬರು ನೀವು ವೀರಸ್ವಾಮಿ ಅವರ ತರಾ ಕಾಣಿಸ್ತಿದ್ದೀರಾ ಅಂದರಂತೆ. ಅದು ರವಿಚಂದ್ರನ್ ಅವರಿಗೆ ಸಿಕ್ಕಿರುವ ಬೆಸ್ಟ್ ಕಾಂಪ್ಲಿಮೆಂಟು.

  ಇನ್ನು ಚಿತ್ರದ ಮೇಕಪ್, ಮೈತುಂಬಾ ಬಳಿದ ನೀಲಿಬಣ್ಣ ಇಷ್ಟವಾಗದೆ ಮೊದಲ ದಿನ ಶೂಟಿಂಗ್‍ಗೇ ಹೋಗಲಿಲ್ಲವಂತೆ ರವಿಚಂದ್ರನ್. ಎರಡನೇ ದಿನ ತಾವೇ ನಾಲ್ಕು ಕಲರ್ ತರಿಸಿಕೊಂಡು, ಕಾಸ್ಟ್ಯೂಮ್‍ನ್ನು ಬದಲಾಯಿಸಿಕೊಂಡು ಅದೇ ದಿನ ಸಂಜೆ ಶ್ರೀಕೃಷ್ಣನ ಗೆಟಪ್‍ನಲ್ಲಿ ಸೆಟ್‍ಗೆ ಹೋಗಿದ್ದಾರೆ ರವಿಚಂದ್ರನ್. ಸೆಟ್‍ನಲ್ಲಿದ್ದವರೆಲ್ಲ ಕಾಲಿಗೆ ಬಿದ್ದರಂತೆ.

  ಅಷ್ಟಿಲ್ಲದೆ ಹೇಳ್ತಾರಾ.. ರವಿ ಕಾಣದ್ದನ್ನು ಕವಿ ಕಂಡ, ಕವಿಯೂ ಕಾಣದ್ದನ್ನು ರವಿಚಂದ್ರನ್ ಕಂಡ ಅಂತ.

 • ರಿಲೀಸ್‍ಗೂ ಮೊದಲೇ ಕುರುಕ್ಷೇತ್ರಕ್ಕೆ 20 ಕೋಟಿ ಬ್ಯುಸಿನೆಸ್

  kurushetra does 20 crore business even before the release

  ದರ್ಶನ್ ಅಭಿನಯದ 50ನೇ ಸಿನಿಮಾ ಮುನಿರತ್ನ ಕುರುಕ್ಷೇತ್ರ 5 ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ಈ ಸಿನಿಮಾ ಕನ್ನಡದ ಅತ್ಯಂತ ಅದ್ಧೂರಿ ಸಿನಿಮಾ ಎನ್ನುವುದರಲ್ಲಿ ಅನುಮಾನವಿಲ್ಲ. ವಿಶೇಷವೆಂದರೆ, ವರಮಹಾಲಕ್ಷ್ಮಿ ಹಬ್ಬಕ್ಕೆ ಅಂದರೆ, ಇನ್ನೂ ಎರಡೂವರೆ ತಿಂಗಳ ನಂತರ ರಿಲೀಸ್ ಆಗುತ್ತಿರುವ ಚಿತ್ರ ಆಗಲೇ 20 ಕೋಟಿ ಬ್ಯುಸಿನೆಸ್ ಮಾಡಿದೆ.

  ಕುರುಕ್ಷೇತ್ರ ಚಿತ್ರದ ಹಿಂದಿ ಸ್ಯಾಟಲೈಟ್ ಹಕ್ಕು ಹಾಗೂ ಕನ್ನಡ ಟಿವಿ ರೈಟ್ಸ್ ತಲಾ ಒಂಭತ್ತೂವರೆ ಕೋಟಿಗೆ ಮಾರಾಟವಾಗಿದ್ದರೆ, ಆಡಿಯೋ ಹಕ್ಕುಗಳನ್ನು ಒಂದೂವರೆ ಕೋಟಿಗೆ ಸೇಲ್ ಮಾಡಿದ್ದಾರೆ ನಿರ್ಮಾಪಕ ಮನಿರತ್ನ. ಉಳಿದಂತೆ ಇತರೆ ಭಾಷೆಗಳ ಸ್ಯಾಟಲೈಟ್ ರೈಟ್ಸ್, ಆನ್‍ಲೈನ್ ರೈಟ್ಸ್ ಹಾಗೂ ಡಿಸ್ಟ್ರಿಬ್ಯೂಷನ್ ರೈಟ್ಸ್, ಇನ್ನೂ ಶುರುವಾಗಬೇಕಿದೆ. ಒಟ್ಟಿನಲ್ಲಿ ಕನ್ನಡದ ಐತಿಹಾಸಿಕ ಚಿತ್ರವೊಂದು ದಾಖಲೆ ಬರೆಯಲು ರೆಡಿಯಾಗುತ್ತಿದೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery