ಅಮ್ಮ ಐ ಲವ್ ಯೂ. ಈ ದಿನ ಬಿಡುಗಡೆಯಾಗಿರುವ ಸಿನಿಮಾ. ತಾಯಿ ಮತ್ತು ಮಗನ ಬಾಂಧವ್ಯದ ಕಥೆ ಹೊಂದಿರುವ ಚಿತ್ರವನ್ನು ಏಕೆ ನೋಡಬೇಕು ಅನ್ನೋಕೆ ಹಲವಾರು ಕಾರಣಗಳಿವೆ. ಚಿತ್ರ ರೀಮೇಕ್ ಆದರೂ, ಇದು ಪ್ರತಿಯೊಬ್ಬರೂ ನೋಡಲೇಬೇಕಾ ಸಿನಿಮಾ. ಕಾರಣಗಳನ್ನೆಲ್ಲ ಪಟ್ಟಿ ಮಾಡುತ್ತಾ ಹೋದರೆ, ಹಲವು ವಿಶೇಷಗಳು ಹೊಳೆಯುತ್ತವೆ.
ಈ ಸಿನಿಮಾ ಮಕ್ಕಳಿಗಾಗಿ. ತಾಯಿಯನ್ನು ಪ್ರೀತಿಸುವ ಮಕ್ಕಳಿಗಾಗಿ. ನೀವು ತಾಯಿಯನ್ನು ಪ್ರೀತಿಸುತ್ತಿದ್ದರೆ, ಈ ಸಿನಿಮಾ ನೋಡಿದ ಮೇಲೆ ಇನ್ನೂ ಇನ್ನೂ ಇನ್ನೂ ಹೆಚ್ಚು ಪ್ರೀತಿಸುತ್ತೀರಿ. ತಾಯಿಯನ್ನು ಮರೆತಿದ್ದರೆ, ಸಿನಿಮಾ ನೋಡಿ ಹೊರಬಂದ ಮೇಲೆ ತಕ್ಷಣ ತಾಯಿಯನ್ನು ನೋಡಲು ಹೊರಡುತ್ತೀರಿ. ನಿಮ್ಮ ತಾಯಿ ಮತ್ತು ನಿಮ್ಮ ನಡುವಿನ ಮಧುರ ಕ್ಷಣಗಳನ್ನು ಈ ಚಿತ್ರ ಖಂಡಿತಾ ನೆನಪಿಸುತ್ತೆ.
ಇದು ಚಿರಂಜೀವಿ ಸರ್ಜಾ ಸಿನಿಮಾ ಕೆರಿಯರ್‍ನ ಬೆಸ್ಟ್ ಸಿನಿಮಾ. ಸಿತಾರಾ ಅವರದ್ದು ಮನೋಜ್ಞ ಅಭಿನಯ. ಈ ಚಿತ್ರದ ಅಚ್ಚರಿ ನಿಶ್ವಿಕಾ ನಾಯ್ಡು. ಹೊಸಬಳು ಎಂದು ಅನ್ನಿಸುವುದೇ ಇಲ್ಲ. ಪ್ರಕಾಶ್ ಬೆಳವಾಡಿ, ಚಿತ್ರದ ಶಕ್ತಿ. ಚಿಕ್ಕಣ್ಣ, ಬಿರಾದಾರ್ ಅವರನ್ನು ನೀವಿಲ್ಲಿ ಬೇರೆಯೇ ರೀತಿ ನೋಡುತ್ತೀರಿ.
ಗುರುಕಿರಣ್ ಅವರ ಸಂಗೀತ ಚಿತ್ರದ ಆತ್ಮ ಎನಿಸುವುದು ಸುಳ್ಳಲ್ಲ. ಆಪ್ತಮಿತ್ರ ಚಿತ್ರದ ನಂತರ, ದ್ವಾರಕೀಶ್ ಬ್ಯಾನರ್‍ಗೆ ಮ್ಯೂಸಿಕ್ ಮಾಡಿರುವ ಸಿನಿಮಾ ಇದು. ನಿರ್ಮಾಪಕ ಯೋಗಿಗೂ ಅಷ್ಟೆ, ಅವರು ನಾಯಕರಾಗಿ ಎಂಟ್ರಿ ಕೊಟ್ಟಿದ್ದ ಮಜ್ನು ಚಿತ್ರಕ್ಕೂ ಗುರುಕಿರಣ್ ಅವರದ್ದೇ ಸಂಗೀತವಿತ್ತು. ಈಗ ಜೋಡಿ ಮತ್ತೊಮ್ಮೆ ಒಂದಾಗಿದೆ. ಚಿತ್ರೀಕರಣ ಮಾಡಿದ ನಂತರ, ದೃಶ್ಯಗಳಿಗೆ ತಕ್ಕಂತೆ ಮ್ಯೂಸಿಕ್ ನೀಡಿರುವುದು ಗುರುಕಿರಣ್ ಅವರ ಸಾಧನೆ.
ಚಿತ್ರದ ಮತ್ತೊಂದು ಸ್ಟ್ರೆಂಗ್ತ್ ಶೇಖರ್ ಚಂದ್ರ ಅವರ ಛಾಯಾಗ್ರಹಣ. ಚೈತನ್ಯ ಅವರ ನಿರ್ದೇಶನ. ಆಟಗಾರ ಚಿತ್ರದ ನಂತರ ಯೋಗಿ, ಚೈತನ್ಯ ಮತ್ತು ಚಿರಂಜೀವಿ ಸರ್ಜಾ ಮತ್ತೊಮ್ಮೆ ಜೊತೆಯಾಗಿರುವ ಸಿನಿಮಾ ಇದು. ಒಟ್ಟಿನಲ್ಲಿ ಟೆಕ್ನಿಕಲಿ ಸೌಂಡ್ ಆಗಿರುವ ಸಿನಿಮಾ ಅಮ್ಮ ಐ ಲವ್ ಯೂ.
ಇದಿಷ್ಟೂ ಅಮ್ಮ ಐ ಲವ್ ಯೂ ಚಿತ್ರ ನೋಡೋಕೆ ಕಾರಣಗಳು. ಇದೆಲ್ಲವನ್ನೂ ಬಿಡಿಸಿ ಬಿಡಿಸಿ ಹೇಳಿರುವುದು ನಿರ್ಮಾಪಕ ಯೋಗಿ ದ್ವಾರಕೀಶ್. ಅರೆ, ನಾಲ್ಕೇ ಕಾರಣಗಳನ್ನು ಹೇಳಿಬಿಟ್ಟಿರಿ. 5ನೇ ಕಾರಣ ಏನು ಅಂತೀರಾ..
ಅದು ಅಮ್ಮ. ಅದು ನಿಮ್ಮ ತಾಯಿಯೂ ಆಗಿರಬಹುದು. ನಮ್ಮ ತಾಯಿಯೂ ಆಗಿರಬಹುದು. ತಾಯಿಯನ್ನು ಪ್ರೀತಿಸುವವರು ಖಂಡಿತಾ ಈ ಸಿನಿಮಾ ನೋ