` prashanth neel, - chitraloka.com | Kannada Movie News, Reviews | Image

prashanth neel,

 • ಕೆಜಿಎಫ್‌ ಚಾಪ್ಟರ್‌ 2ಗೆ ರೌಡಿ ತಂಗಂ ಟ್ರಬಲ್

  kgf chapter 2 lands in new trouble

  ಇತ್ತೀಚೆಗಷ್ಟೇ ಸೈನೇಡ್ ಗುಡ್ಡದ ಶೂಟಿಂಗ್ ಸಂಕಟದಿಂದ ಪಾರಾಗಿದ್ದ ಕೆಜಿಎಫ್ ಚಾಪ್ಟರ್ 2 ಸಿನಿಮಾಗೆ ಈಗ ಇನ್ನೊಂದು ಸಮಸ್ಯೆ ಎದುರಾಗಿದೆ. ಅದು ಬಂದಿರೋದು ರೌಡಿ ತಂಗಂ ತಾಯಿಯಿಂದ. ಕೆಜಿಎಫ್ 1 ಸಿನಿಮಾದಲ್ಲಿ ನನ್ನ ಮಗನನ್ನು ಒಳ್ಳೆಯ ರೀತಿ ತೋರಿಸುತ್ತೇವೆ ಎಂದು ಹೇಳಿ, ಅವನನ್ನು

   ಕೆಟ್ಟದಾಗಿ ತೋರಿಸಿದ್ದಾರೆ. ಹೀಗಾಗಿ ಕೆಜಿಎಫ್‌ ಚಾಪ್ಟರ್‌ 2 ಚಿತ್ರೀಕರಣಕ್ಕೆ ತಡೆ ನೀಡಬೇಕು ಎಂದು ತಂಗಂ ತಾಯಿ ಪೌಳಿ, 2ನೇ  ಹೆಚ್ಚುವರಿ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.

  ರೌಡಿ ತಂಗಂ ಹಲವು ವರ್ಷಗಳ ಹಿಂದೆ, ಪೊಲೀಸ್ ಎನ್‌ಕೌಂಟರ್‌ನಲ್ಲಿ ಮೃತಪಟ್ಟಿದ್ದ ರೌಡಿ. ಅರ್ಜಿ ಹಿನ್ನೆಲೆಯಲ್ಲಿ ನ್ಯಾಯಾಲಯ, ನಿರ್ಮಾಪಕ ವಿಜಯ ಕಿರಗಂದೂರು, ನಿರ್ದೇಶಕ ಪ್ರಶಾಂತ್ ನೀಲ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಮತ್ತು ಬಿಜಿಎಂಎಲ್‌ ಕಂಪೆನಿಗೆ ಸಮನ್ಸ್ ನೀಡಿದೆ. ಅರ್ಜಿಯ ವಿಚಾರಣೆ ಅಕ್ಟೋಬರ್ 9ಕ್ಕೆ ನಿಗಧಿಯಾಗಿದೆ.

 • ಕೆಜಿಎಫ್‍ಗೆ ಪೈರಸಿ ಶಾಕ್.. 

  piracy criminals shock kgf once again

  ರಿಲೀಸ್ ಆದ ಮರುಕ್ಷಣದಿಂದ ಬಾಕ್ಸಾಫೀಸ್ ಚಿಂದಿ ಉಡಾಯಿಸುತ್ತಿರುವ ಕೆಜಿಎಫ್‍ಗೆ ಪೈರಸಿ ಕ್ರಿಮಿನಲ್ಸ್ ಶಾಕ್ ಕೊಟ್ಟೇಬಿಟ್ಟಿದ್ದಾರೆ. ಹೆಲ್ಪ್‍ಲೈನ್ ನಂಬರ್ ನೀಡಿ, ಕಾನೂನು ಮುಂಜಾಗ್ರತೆ ಕ್ರಮ ಕೈಗೊಂಡರೂ ಕೆಲವು ಕ್ರಿಮಿನಲ್ಸ್ ಪೈರಸಿ ಮಾಡಿದ್ದಾರೆ. ಒಂದೆರಡು ವೆಬ್‍ಸೈಟ್‍ಗಳಲ್ಲಿ ಕೆಜಿಎಫ್ ಹಿಂದಿ ಹಾಗೂ ತೆಲುಗು ವರ್ಷನ್ ಸಿನಿಮಾ ಅಪ್‍ಲೋಡ್ ಮಾಡಿದ್ದಾರೆ.

  ಮೈಯ್ಯೆಲ್ಲ ಕಣ್ಣಾಗಿ ಕಾಯುತ್ತಿದ್ದ ಕೆಜಿಎಫ್ ತಂಡ ತಕ್ಷಣ ಕ್ರಮ ತೆಗೆದುಕೊಂಡಿದೆಯಾದರೂ, ಪೈರಸಿ ಕ್ರಿಮಿನಲ್ಸ್‍ಗಳು ಚಿತ್ರರಂಗಕ್ಕೆ ದೊಡ್ಡ ತಲೆನೋವಾಗಿರುವುದು ನಿಜ. 

  ಆದರೆ, ಈ ಪೈರಸಿ ಕ್ರಿಮಿನಲ್ಸ್ ಕನ್ನಡದಲ್ಲಿ ಕೆಜಿಎಫ್‍ನ್ನು ಮುಟ್ಟಿಲ್ಲ. 

 • ಕೆಜಿಎಫ್‍ಗೆ ಮಸ್ತ್ ಮಸ್ತ್ ಹುಡುಗಿ ಬಂದ್ಲು

  raveena tandon jins kgf team

  ಕೆಜಿಎಫ್ ಚಾಪ್ಟರ್ 2 ಚಿತ್ರಕ್ಕೆ ಸಂಜಯ್ ದತ್ ಬರ್ತಾರೆ ಅನ್ನೋ ಸುದ್ದಿ ಇರುವಾಗಲೇ, ಮಸ್ತ್ ಮಸ್ತ್ ಹುಡುಗಿ ರವೀನಾ ಟಂಡನ್ ಬರ್ತಾರೆ ಅನ್ನೋ ಸುದ್ದಿ ಸರಿದಾಡುತ್ತಿದೆ. ಉಪೇಂದ್ರ ಚಿತ್ರದಲ್ಲಿ ಕೀರ್ತಿಯಾಗಿ ನಟಿಸಿದ್ದ ರವೀನಾ ಟಂಡನ್, ಬಾಲಿವುಡ್‍ನಲ್ಲೂ ಕೂಡಾ ತೆರೆ ಹಿಂದಿನ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ.

  ಈಗ ವಿಶ್ವಾದ್ಯಂತ ಸದ್ದು ಮಾಡಿದ ಕೆಜಿಎಫ್ ಚಿತ್ರದ 2ನೇ ಭಾಗಕ್ಕೆ ರವೀನಾ ಟಂಡನ್ ಓಕೆ ಎಂದಿದ್ದಾರೆ ಅನ್ನೋ ಸುದ್ದಿಯಿದೆ. ಚಾಪ್ಟರ್ 2 ಪ್ರಿ ಪ್ರೊಡಕ್ಷನ್ ಕೆಲಸಗಳು ಶುರುವಾಗಿದ್ದು, ಶೀಘ್ರದಲ್ಲೇ ಶೂಟಿಂಗ್ ಕೂಡ ಆರಂಭವಾಗಲಿದೆ.

 • ಗಡ್ಡಧಾರಿಗಳೆಲ್ಲ ಕ್ಯೂನಲ್ಲಿ ನಿಂತ್ರು..

  kgf craze witnessed in malleswaram

  ಕೆಜಿಎಫ್ ಚಿತ್ರದ ಹೈಲೈಟುಗಳು ಒಂದೆರಡಲ್ಲ.. ಹೀಗಾಗಿಯೇ ದಾಖಲೆ ಬರೆದ ಚಿತ್ರದಲ್ಲಿ ಗಡ್ಡಧಾರಿಗಳೂ ಗಮನ ಸೆಳೆದಿದ್ದರು. ಹೀರೋ, ವಿಲನ್, ಸಣ್ಣ ಪುಟ್ಟ ಪಾತ್ರಗಳು.. ಎಲ್ಲರೂ ಗಡ್ಡಧಾರಿಗಳೇ. ಹೀಗಾಗಿಯೇ, ಕೆಜಿಎಫ್ 2 ಚಿತ್ರದ ಅಡಿಷನ್‍ಗೆ ಸಾಲು ಸಾಲಾಗಿ ನಿಂತಿದ್ದವರಲ್ಲಿ ಗಡ್ಡಧಾರಿಗಳೇ ಹೆಚ್ಚಿದ್ದರು.

  ಮೇ 6ನೇ ತಾರೀಕಿನಿಂದ ಕೆಜಿಎಫ್ ಚಾಪ್ಟರ್ 2 ಶೂಟಿಂಗ್ ಅಧಿಕೃತವಾಗಿ ಆರಂಭವಾಗಲಿದೆ. ಜೂನ್ ಆರಂಭದಲ್ಲಿ ಯಶ್ ಪಾತ್ರದ ಚಿತ್ರೀಕರಣ ಶುರುವಾಗಲಿದೆ. ಇದಕ್ಕೂ ಮುನ್ನ ಕೆಲವು ಪುಟ್ಟ ಪುಟ್ಟ ಪಾತ್ರಗಳಿಗಾಗಿ ಅಡಿಷನ್ ನಡೆಸಲಾಗಿದೆ. ಮಲ್ಲೇಶ್ವರಂ ಜಿಎಂ ರಿಜಾಯ್ಸ್‍ನಲ್ಲಿ ನಡೆದ ಅಡಿಷನ್ಸ್‍ನಲ್ಲಿ ಸಾವಿರಾರು ಜನ ಭಾಗವಹಿಸಿದ್ದರು. ಹಾಗೆ ಬಂದವರಲ್ಲಿ ಗಡ್ಡಧಾರಿಗಳೇ ಹೆಚ್ಚಿದ್ದರು. 8ರಿಂದ 16 ವರ್ಷದ ಮಕ್ಕಳು, 25 ವರ್ಷದ ಯುವಕರಿಗೆ ಅಡಿಷನ್‍ಗೆ ಬರುವಂತೆ ಮೊದಲೇ ಸೂಚಿಸಲಾಗಿತ್ತು. ಅವರೆಲ್ಲ ತಮ್ಮ ತಮ್ಮ ಪ್ರತಿಭೆಯನ್ನು ಕೇವಲ 1 ನಿಮಿಷದಲ್ಲಿ ತೋರಿಸಬೇಕಿತ್ತು.

  ರಸ್ತೆಯುದ್ದಕ್ಕೂ ಕ್ಯೂ ನಿಂತಿದ್ದ ಯುವಕರ ಸರದಿ ಸಾಲು, ಕಿಲೋಮೀಟರುಗಟ್ಟಲೆ ಇತ್ತು ಎನ್ನುವುದೇ ಕೆಜಿಎಫ್ ಹವಾಗೆ ಸಾಕ್ಷಿ. ಇವರಲ್ಲಿ ಕೆಲವರನ್ನು ನಿರ್ದೇಶಕ ಪ್ರಶಾಂತ್ ನೀಲ್ ಆಯ್ಕೆ ಮಾಡಿದ್ದಾರಂತೆ

 • ಜ್ಯೂ. ಎನ್‍ಟಿಆರ್ ಜೊತೆ ಪ್ರಶಾಂತ್ ನೀಲ್ ಸಿನಿಮಾ ಪಕ್ಕಾ. ಸೆನ್ಸೇಷನ್ ಸೃಷ್ಟಿಸಿದ ಟ್ವೀಟ್

  prashanth neel's special birthday wishes to jr ntr

  ಪ್ರಶಾಂತ್ ನೀಲ್ ಮತ್ತು ಜ್ಯೂ.ಎನ್‍ಟಿಆರ್ ಒಟ್ಟಿಗೇ ಸಿನಿಮಾ ಮಾಡ್ತಾರಾ..? ಕೆಜಿಎಫ್ ನೋಡಿದವರ ಮನಸ್ಸು ಹುಚ್ಚೆದ್ದು ಕುಣಿಯುತ್ತಿದೆ. ಪ್ರಶಾಂತ್ ಮೇಕಿಂಗ್ ಸ್ಟೈಲ್ ಮತ್ತು ಎನ್‍ಟಿಆರ್ ಪವರ್‍ಫುಲ್ ಆಕ್ಟಿಂಗ್ ಜೊತೆಯಾದರೆ ಒಂದು ವಂಡರ್‍ಫುಲ್ ಸಿನಿಮಾ ಸೃಷ್ಟಿಯಾಗುತ್ತೆ ಅನ್ನೋದೇ ಥ್ರಿಲ್ ಆಗೋಕೆ ಕಾರಣ. ಅಂಥಾದ್ದೊಂದು ಸುದ್ದಿ ಓಡಾಡುತ್ತಿದ್ದರೂ, ಅಧಿಕೃತ ಮಾಹಿತಿ ಸಿಕ್ಕಿರಲಿಲ್ಲ. ಅಫಿಷಿಯಲ್ ಆಗಿರಲಿಲ್ಲ. ಅಫ್‍ಕೋರ್ಸ್, ಈಗಲೂ ಅದು ಅಫಿಷಿಯಲ್ ಅಲ್ಲ. ಆದರೆ ಪ್ರಶಾಂತ್ ನೀಲ್ ಅವರ ಒಂದು ಟ್ವೀಟ್, ಎನ್‍ಟಿಆರ್ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ ಪರಿ ಅಭಿಮಾನಿಗಳ ಕನಸಿಗೆ ರೆಕ್ಕೆಪುಕ್ಕ ಮೂಡಿಸಿರುವುದಂತೂ ಸುಳ್ಳಲ್ಲ. ಇಷ್ಟಕ್ಕೂ ಆ ಟ್ವೀಟ್‍ನಲ್ಲಿ ಏನಿದೆ..?

  ಅಂತೂ.. ಒಂದು ಪರಮಾಣು ಸ್ಥಾವರದ ಪಕ್ಕ ಕುಳಿತರೆ ಆ ಅನುಭವ ಹೇಗಿರುತ್ತೆ ಅನ್ನೋ ಫೀಲ್ ಅರ್ಥ ಆಯ್ತು. ಮುಂದಿನ ಸಲ ನನ್ನ ರೇಡಿಯೇಷನ್ ಸೂಟ್ ಧರಿಸಿಕೊಂಡು ನಿಮ್ಮ ಕ್ರೇಜಿ ಎನರ್ಜಿ ಹತ್ತಿರ ಸುಳಿಯುತ್ತೇನೆ. ಹ್ಯಾಪಿ ಬರ್ತ್ ಡೇ ಸೋದರ.. ಶೀಘ್ರದಲ್ಲೇ ಭೇಟಿಯಾಗೋಣ..

  ಇದಿಷ್ಟು ಪ್ರಶಾಂತ್ ನೀಲ್ ಅವರ ಸಾಲು. ಈಗ ಅಭಿಮಾನಿಗಳ ನಿರೀಕ್ಷೆ ಗರಿಗೆದರೋಕೆ ಕಾರಣ ಇಷ್ಟೆ.. ಈ ಮೂಲಕ ಪ್ರಶಾಂತ್ ತಾವು ಮತ್ತು ಎನ್‍ಟಿಆರ್ ಭೇಟಿಯಾಗೋದನ್ನು ಖಚಿತಪಡಿಸಿದ್ದಾರೆ. ಶೀಘ್ರದಲ್ಲೇ ಭೇಟಿಯಾಗುತ್ತಾರೆ. ನೋ ಡೌಟ್, ಅವರು ಮುಂದಿನ ಭೇಟಿಯಲ್ಲಿ ಮಾತನಾಡೋದು ಸಿನಿಮಾ ಬಗ್ಗೆನೇ ಅನ್ನೊದು ಅಭಿಮಾನಿಗಳ ಲೆಕ್ಕಾಚಾರ. ಅಷ್ಟೇ ಅಲ್ಲ, ಪ್ರಶಾಂತ್ ನೀಲ್ ಅವರಿಗೆ 2 ಕೋಟಿ ಅಡ್ವಾನ್ಸ್ ಕೊಟ್ಟಿದ್ದಾರೆ ಅನ್ನೋ ಸುದ್ದಿಯೂ ಹರಿದಾಡುತ್ತಿದೆ.

   

 • ತಮ್ಮದೇ ದಾಖಲೆ ಮುರಿದ ರಾಜಕುಮಾರ ವಿಜಯ್ ಕಿರಗಂದೂರು

  vijay kiragandur breaks his own record

  ಕೆಜಿಎಫ್ ಬಾಕ್ಸಾಫೀಸ್‍ನಲ್ಲಿ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿದೆ. ಈ ದಾಖಲೆಗಳಲ್ಲಿ 2ನೇ ಸ್ಥಾನಕ್ಕೆ ಇಳಿದಿರುವುದು ವಿಜಯ್ ಕಿರಗಂದೂರು ಅವರ ಸಿನಿಮಾ. ಅಫ್‍ಕೋರ್ಸ್.. ಮೊದಲನೇ ಸ್ಥಾನಕ್ಕೆ ಏರಿರುವುದೂ ಅವರೇ. ಈ ಮೊದಲು ಕನ್ನಡದ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದುದು ರಾಜಕುಮಾರ.

  ಪುನೀತ್ ರಾಜ್‍ಕುಮಾರ್ ಅಭಿನಯದ ರಾಜಕುಮಾರ ಚಿತ್ರ, 60ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿತ್ತು. ಆ ಚಿತ್ರದ ನಿರ್ಮಾಪಕರೂ ಹೊಂಬಾಳೆ ಪ್ರೊಡಕ್ಷನ್ಸ್‍ನ ವಿಜಯ್ ಕಿರಗಂದೂರು. ಈಗ.. ಕೆಜಿಎಫ್ ಒಂದೇ ವಾರದಲ್ಲಿ ಆ ದಾಖಲೆಯನ್ನು ಹಿಂದಿಕ್ಕಿ ಮುನ್ನುಗ್ಗಿದೆ. ಕನ್ನಡದಲ್ಲಿಯೇ, ಮೊದಲ ವಾರದಲ್ಲಿಯೇ 60ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ ಕೆಜಿಎಫ್.

  ಮೂಲಗಳ ಪ್ರಕಾರ ಕರ್ನಾಟಕದಲ್ಲಿ, ನಿರ್ಮಾಪಕರಿಗೆ ಸಿಕ್ಕಿರುವ ಮೊದಲ ವಾರದ ಷೇರ್ ಸುಮಾರು 30 ಕೋಟಿ. ತೆಲುಗು ಭಾಷೆಯಲ್ಲಿ ಸುಮಾರು 7 ಕೋಟಿ ಹಾಗೂ ತಮಿಳಿನಲ್ಲಿ ಸುಮಾರು 5 ಕೋಟಿ ಷೇರ್ ಸಿಕ್ಕಿದೆ. ಹಿಂದಿಯಲ್ಲಿ ಕೂಡಾ ಕೆಜಿಎಫ್ ಷೇರ್ 8 ಕೋಟಿ ದಾಟಿದೆ.

  ಅಂದಹಾಗೆ ಇದು ನಿರ್ಮಾಪಕರಿಗೆ ಸಿಕ್ಕಿರುವ ಷೇರ್‍ನ ಮಾಹಿತಿ. ಕಲೆಕ್ಷನ್‍ನಲ್ಲಿ 5 ಭಾಷೆಗಳಲ್ಲಿ ಕೆಜಿಎಫ್ ಈಗಾಗಲೇ 100 ಕೋಟಿ ದಾಟಿ ಮುನ್ನುಗ್ಗುತ್ತಿದೆ.

 • ನನ್ನ ಹೆಸರಲ್ಲಿ ಮೇಯ್ಲ್ ಬಂದರೆ ಎಚ್ಚರಿಕೆ  - ಕೆಜಿಎಫ್ ನಿರ್ದೇಶಕರ ವಾರ್ನಿಂಗ್

  kgf director warns about fake message under his name

  ನಿಮಗೆ ನಮ್ಮ ಸಿನಿಮಾದಲ್ಲಿ ನಟಿಸುವ ಆಸೆಯಿದೆಯೇ..? ನಮ್ಮಲ್ಲಿ ನಿಮಗಿದೆ ಅವಕಾಶ..! ಬನ್ನಿ, ಭಾಗವಹಿಸಿ, ಅವಕಾಶ ನಿಮ್ಮದಾಗಿಸಿಕೊಳ್ಳಿ..

  ಇಂಥಾದ್ದೊAದು ಮೇಯ್ಲ್ ಬಂದರೆ ಉಪೇಕ್ಷೆ ಮಾಡುವವರೇ ಹೆಚ್ಚು. ಆದರೆ, ಮೇಯ್ಲ್ ಕಳಿಸಿರೋದು ಪ್ರಶಾಂತ್ ನೀಲ್ ಆದರೆ... ಪ್ರತಿಭಾವಂತರು ಎದ್ದೆನೋ.. ಬಿದ್ದೆನೋ.. ಎಂದು ಓಡೋಡಿ ಬರುತ್ತಾರೆ. ಆದರೆ ಅದೂ ನಿಜವಲ್ಲ. ನನ್ನ ಹೆಸರಲ್ಲಿ ಮೇಯ್ಲ್ ಬಂದರೆ ಎಚ್ಚರಿಕೆ, ಮೋಸ ಹೋಗಬೇಡಿ ಎಂದು ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಅವರೇ ಎಚ್ಚರಿಕೆ ಕೊಟ್ಟಿದ್ದಾರೆ.

  ಪ್ರಶಾಂತ್‌ನೀಲ್‌ಕನೆಕ್ಟ್÷@ಜಿಮೇಯ್ಲ್.ಕಾಮ್ ಹೆಸರಲ್ಲಿ ಕೆಲವು ಪ್ರತಿಭಾವಂತ ಕಲಾವಿದರಿಗೆ ಪ್ರಶಾಂತ್ ಹೆಸರಲ್ಲಿಮೆಸೇಜ್ ಹೋಗಿದೆ.

  ಹೀಗಾಗಿ ಸ್ವತಃ ಪ್ರಶಾಂತ್ ನೀಲ್ ಅವರೇ ಎಚ್ಚರಿಕೆ ನೀಡಿದ್ದಾರೆ. ಕೆಜಿಎಫ್ ಕುರಿತ ಯಾವುದೇ ಮೆಸೇಜ್ ಇದ್ದರೆ, ಅದನ್ನು ಹೊಂಬಾಳೆ ಫಿಲಂಸ್ ಮೂಲಕವೇ ನಡೆಸುತ್ತೇವೆ. ಅದು ಮಾತ್ರವೇ ಅಧಿಕೃತ ಎಂದು ಎಚ್ಚರಿಕೆ ನೀಡಿದ್ದಾರೆ ಪ್ರಶಾಂತ್ ನೀಲ್.

 • ಪ್ರಭಾಸ್ ಚಿತ್ರ ಮಾಡ್ತಾರಾ ಕೆಜಿಎಫ್ ಪ್ರಶಾಂತ್ ನೀಲ್..?

  will prashanth neel to direct prabhas ?

  ಕೆಜಿಎಫ್ ಚಿತ್ರ ಇಡೀ ದೇಶವನ್ನು ಸಮ್ಮೋಹನಗೊಳಿಸಿದೆ. ಸಹಜವಾಗಿಯೇ ಕೆಜಿಎಫ್, ತೆಲುಗು ಸ್ಟಾರ್ ನಟ ಪ್ರಭಾಸ್‍ರನ್ನೂ ಆಕರ್ಷಿಸಿದೆ. ಚಿತ್ರ ನೋಡಿದ ಪ್ರಭಾಸ್‍ಗೆ ಇಷ್ಟವಾಗಿರೋದು ನಿರ್ದೇಶಕ ಪ್ರಶಾಂತ್ ನೀಲ್. ಹೀಗಾಗಿ ತಮಗೊಂದು ಸಿನಿಮಾ ಮಾಡಿಕೊಡಿ ಎಂದು ಪ್ರಭಾಸ್, ಪ್ರಶಾಂತ್ ನೀಲ್‍ರನ್ನು ಕೇಳಿಕೊಂಡಿದ್ದಾರಂತೆ.

  ಪ್ರಭಾಸ್ ಅವರ ಯುವಿ ಕ್ರಿಯೇಷನ್ಸ್‍ನಲ್ಲೇ ಪ್ರಭಾಸ್‍ರ ಮುಂದಿನ ಸಿನಿಮಾ ನಿರ್ಮಾಣವಾಗಲಿದೆ. ಒಂದು ಸುತ್ತಿನ ಮಾತುಕತೆಯೂ ನಡೆದಿದೆ ಎನ್ನಲಾಗಿದೆ.

  ಪ್ರಶಾಂತ್ ನೀಲ್ ಅವರ ಬಗ್ಗೆ ಪ್ರಭಾಸ್ ಬಳಿ ಸ್ವತಃ ರಾಜಮೌಳಿ ಶಿಫಾರಸು ಮಾಡಿದ್ದಾರೆ ಎನ್ನುವುದು ತೆಲುಗು ಚಿತ್ರರಂಗದಿಂದ ತೇಲಿ ಬರುತ್ತಿರುವ ಸುದ್ದಿ. ಸುದ್ದಿಯನ್ನು ಇದುವರೆಗೆ ಪ್ರಶಾಂತ್ ನೀಲ್ ಕನ್‍ಫರ್ಮ್ ಮಾಡಿಲ್ಲ.

 • ಪ್ರಶಾಂತ್ ನೀಲ್ ಐಡಿಯಾ ಕೇಳಿ ನಕ್ಕಿದ್ದರಂತೆ ಯಶ್..!

  yash reveals interesting story behind kgf

  ಕೆಜಿಎಫ್ ಮೇಲೆ ನಂಬಿಕೆ ಇಡೋಕೆ ಅತಿ ದೊಡ್ಡ ಕಾರಣ ಯಶ್ ಅಷ್ಟೇ ಅಲ್ಲ, ಪ್ರಶಾಂತ್ ನೀಲ್. ಅದಕ್ಕೂ ಮುನ್ನ ಪ್ರಶಾಂತ್ ನೀಲ್ ಮಾಡಿದ್ದ ಉಗ್ರಂ ಚಿತ್ರ, ಅದ್ಭುತ ಪ್ರೆಸೆಂಟೇಷನ್‍ನಿಂದ ಗಮನ ಸೆಳೆದಿದ್ದ ಸಿನಿಮಾ. ಬಹುಶಃ ಆ ಸಿನಿಮಾ ಮಾಡದೇ ಹೋಗಿದ್ದರೆ, ಪ್ರಶಾಂತ್ ನೀಲ್ ಇಂದು ಕೆಜಿಎಫ್ ಮಾಡೋಕೆ ಸಾಧ್ಯವೇ ಇರಲಿಲ್ಲ. ಆ ರಹಸ್ಯವನ್ನೂ ಯಶ್ ಅವರೇ ಬಿಚ್ಚಿಟ್ಟಿದ್ದಾರೆ.

  ಪ್ರಶಾಂತ್ ಅದ್ಭುತ ನಿರ್ದೇಶಕ. ಆದರೆ, ಕೆಟ್ಟದಾಗಿ ನರೇಶನ್ ಮಾಡ್ತಾರೆ. ಅವರು ಕಥೆಯನ್ನು ನಮಗೆ ಹೇಳುವಾಗ, ಅವರ ಕಲ್ಪನೆಯ ಹತ್ತಿರಕ್ಕೂ ಹೋಗೋಕೆ ಆಗಲ್ಲ. ಮೊದಲ ಬಾರಿ ಇವರು ಕೆಜಿಎಫ್ ಐಡಿಯಾ ಹೇಳಿದಾಗ ನಾನೇ ನಕ್ಕುಬಿಟ್ಟಿದ್ದೆ. ಏನೋ ಸ್ಪೆಷಲ್ ಇದೆ ಎನ್ನಿಸಿದರೂ ಏನು ಎಂದು ಅರ್ಥವಾಗಿರಲಿಲ್ಲ. ಉಗ್ರಂ ನೋಡಿದ ಮೇಲೆ, ನನಗೆ ಆ ಕಥೆ ಹೇಳಿದ ಇವರೇನಾ ಉಗ್ರಂ ಮಾಡಿದ್ದು ಎನ್ನುವಷ್ಟು ಅಚ್ಚರಿಯಾಗಿತ್ತು. ನಂತರ ಕೆಜಿಎಫ್ ಒಪ್ಪಿದೆವು. ಕಥೆ ಹೇಳುವಾಗಿನ ಪ್ರಶಾಂತ್ ನೀಲ್ ಬೇರೆ. ಡೈರೆಕ್ಷನ್ ಮಾಡುವಾಗಿನ ಪ್ರಶಾಂತ್ ನೀಲ್ ಬೇರೆ. ಅವರಿಗೆ ಏನು ಬೇಕು ಅನ್ನೋದು ಅತ್ಯಂತ ಸ್ಪಷ್ಟವಾಗಿ ಗೊತ್ತು. ಅದನ್ನು ಅವರು ಎಲ್ಲಿಯೂ ಬಿಟ್ಟುಕೊಡದೇ ಮಾಡ್ತಾರೆ. ಅಂತಹ ಬೆರಗು ಹುಟ್ಟಿಸುವ ನಿರ್ದೇಶಕ ಪ್ರಶಾಂತ್ ನೀಲ್''

  ಇದು ಯಶ್, ಪ್ರಶಾಂತ್ ಬಗ್ಗೆ ಹೇಳಿರುವ ಮಾತು. ಯಶ್ ಪ್ರಕಾರ, ಪ್ರಶಾಂತ್ ನೀಲ್ ಅವರ ಅತಿದೊಡ್ಡ ಬಂಡವಾಳ, ಹೂಡಿಕೆ ಉಗ್ರಂ. ಈಗ ಕೆಜಿಎಫ್ ಬರುತ್ತಿದೆ. ಪ್ರಶಾಂತ್ ನೀಲ್‍ಗಷ್ಟೇ ಏಕೆ, ಕೆಜಿಎಫ್.. ಕನ್ನಡ ಚಿತ್ರರಂಗಕ್ಕೇ ಒಂದು ಚಾಲೆಂಜ್. ಗೆಲ್ಲಬೇಕು.

 • ಪ್ರಶಾಂತ್ ನೀಲ್ ಜೊತೆ ಶ್ರೀಮುರಳಿ ಹೊಸ ಸಿನಿಮಾ

  prahsnath neel and srimurali to pair up for a next film

  ಭರಾಟೆ ಚಿತ್ರದ ರಿಲೀಸ್ ಗುಂಗಿನಲ್ಲಿರುವ ಶ್ರೀಮುರಳಿ ಸುತ್ತ ಒಂದು ಹ್ಯಾಪಿ ಹ್ಯಾಪಿ ನ್ಯೂಸ್ ಹರಿದಾಡುತ್ತಿದೆ. ಆ ಹ್ಯಾಪಿ ನ್ಯೂಸ್ ನಿಜವಾಗಿದ್ದೇ ಆದರೆ, ಪ್ರಶಾಂತ್ ನೀಲ್ ಮತ್ತು ಶ್ರೀಮುರಳಿ ಮತ್ತೆ ಒಂದಾಗಲಿದ್ದಾರೆ.

  ಶ್ರೀಮುರಳಿ ವೃತ್ತಿ ಜೀವನಕ್ಕೆ ಅತಿ ದೊಡ್ಡ ಬ್ರೇಕ್ ಕೊಟ್ಟ ಚಿತ್ರ ಉಗ್ರಂ. ಪ್ರಶಾಂತ್ ನೀಲ್ ನಿರ್ದೇಶನದ ಮೊದಲ ಚಿತ್ರವದು. ಅವರೀಗ ಕೆಜಿಎಫ್ ಮೂಲಕ ನ್ಯಾಷನಲ್ ಸ್ಟಾರ್ ಡೈರೆಕ್ಟರ್. ಸಂಬಂಧದಲ್ಲಿ ಶ್ರೀಮುರಳಿಯ ಭಾವ.

  ಪ್ರಶಾಂತ್ ನೀಲ್ ಕೆಜಿಎಫ್ ಮುಗಿಸಿಕೊಂಡ ನಂತರ ಶ್ರೀಮುರಳಿ ಅವರನ್ನು ಹಾಕಿಕೊಂಡು ಹೊಸ ಸಿನಿಮಾ ಮಾಡುವ ಸುಳಿವು ಕೊಟ್ಟಿದ್ದಾರೆ. ಸದ್ಯಕ್ಕೆ ಶ್ರೀಮುರಳಿ ಭರಾಟೆ ಮುಗಿದೊಡನೆ ಮದಗಜ ಚಿತ್ರ ಕೈಗೆತ್ತಿಕೊಳ್ಳಲಿದ್ದಾರೆ.

 • ಪ್ರಶಾಂತ್ ನೀಲ್ ಬಗ್ಗೆ ಯಶ್ ಕಂಡ ಕನಸು

  yash praises director prashnth neel

  ಕೆಜಿಎಫ್ ಎಂಬ ಬ್ಲಾಕ್ ಬಸ್ಟರ್ ಕೊಟ್ಟ ಯಶ್, ಆ ಚಿತ್ರಕ್ಕಾಗಿ ನಿರ್ದೇಶಕ ಪ್ರಶಾಂತ್ ನೀಲ್ ಅವರ ಅಭಿಮಾನಿಯೂ ಹೌದು. ಪ್ರಶಾಂತ್ ನೀಲ್ ಅವರ ವೃತ್ತಿ ಪರತೆ ಮತ್ತು ಕ್ರಿಯೇಟಿವಿಟಿಯನ್ನು ಹೊಗಳಿದ್ದಾರೆ. ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿ ಮಾತನಾಡಿರುವ ಯಶ್ `ಪ್ರಶಾಂತ್ ನೀಲ್ ಅವರಿಗೆ ಹಾಲಿವುಡ್‍ನಲ್ಲಿಯೂ ಸಿನಿಮಾ ಮಾಡುವ ಶಕ್ತಿ ಇದೆ.

  ಅವರ ಬಳಿ ಒಂದು ಇಂಗ್ಲಿಷ್ ಸಿನಿಮಾ ಮಾಡಿಸಬೇಕು. ಅವರಿಗೆ ಆ ತಾಕತ್ತಿದೆ' ಎನ್ನುವ ಯಶ್ ತಮ್ಮನ್ನೇ ಹಾಕಿಕೊಂಡು ಇಂಗ್ಲಿಷ್ ಸಿನಿಮಾ ಮಾಡಬೇಕೆಂದಿಲ್ಲ, ಅವರಿಗೆ ಇಷ್ಟವಾಗುವ ಯಾರನ್ನೇ ಆದರೂ ಹಾಕಿಕೊಂಡು ಸಿನಿಮಾ ಮಾಡಬಹುದು. ಸಿನಿಮಾ ಡಿಸೈನ್ ಜವಾಬ್ದಾರಿ ನಂದು ಎಂದಿದ್ದಾರೆ ಯಶ್.

 • ಫ್ಯಾನ್ಸ್ ಕಟಕಟೆಯಲ್ಲಿ ಪ್ರಶಾಂತ್ ನೀಲ್ : ಪ್ರಶ್ನೆಗಳಷ್ಟೇ ಅಲ್ಲ, ಉತ್ತರಗಳೂ ರೋಚಕ

  prashanth neel answers fans questions

  ಕೆಜಿಎಫ್ ಚಾಪ್ಟರ್ 2 ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಿಗೂ ಬ್ರೇಕ್ ಬಿದ್ದಿದೆ. ಅಕ್ಟೋಬರ್ 23ಕ್ಕೆ ರಿಲಿಸ್ ಡೇಟ್ ಘೋಷಿಸಿರುವ ಚಿತ್ರತಂಡವೂ ಕೂಡಾ ಈಗ ಕೊರೋನಾ ಬ್ರೇಕ್‍ನಲ್ಲಿದೆ. ಹೀಗಾಗಿಯೇ ನಿರ್ದೇಶಕ ಪ್ರಶಾಂತ್ ನೀಲ್ ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರ ಕೊಟ್ಟಿದ್ದಾರೆ. ಫಸ್ಟ್ ಟೈಂ.

  ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನೆಗಳಿದ್ದರೆ ಕೇಳಿ, ಉತ್ತರ ಕೊಡ್ತೇನೆ ಎಂದಿದ್ದೇ ತಡ, ಅಭಿಮಾನಿಗಳು ಮುಗಿ ಬಿದ್ದರು. ಎಲ್ಲರಿಗೂ ತಮ್ಮ ತಮ್ಮ ಮೆಚ್ಚಿನ ಸ್ಟಾರ್ ಬಗ್ಗೆ ಪ್ರಶಾಂತ್ ನೀಲ್ ಏನು ಹೇಳಬಹುದು ಎಂಬ ಕುತೂಹಲ. ಹೀಗಾಗಿಯೇ ಅಂತಹ ಪ್ರಶ್ನೆಗಳೇ ಹೆಚ್ಚಿದ್ದವು.

  ಅಷ್ಟೇ ಅಲ್ಲ, ಪ್ರಶಾಂತ್ ನೀಲ್ ಅವರ ಪತ್ನಿಗೊಂದು ಸಲಹೆಯೂ ಬಂತು.

  ಪ್ರಶಾಂತ್ ನೀಲ್ ಅವರಿಗೆ ಕ್ಲೀನ್ ಶೇವ್ ಮಾಡಿಸಿ ಮೇಡಂ, ಸಖತ್ ಸ್ಮಾರ್ಟ್ ಆಗಿ ಕಾಣ್ತಾರೆ ಅನ್ನೋ ಅಭಿಮಾನಿಯೊಬ್ಬರ ಸಲಹೆಗೆ, `ಅವರಿಗೆ ಉದ್ದ ಗಡ್ಡ ಅಂದರೆ ಇಷ್ಟ, ಅದಕ್ಕೇ ಅವರು ಶೇವ್ ಮಾಡೊಲ್ಲ' ಎಂದು ಉತ್ತರ ಕೊಟ್ಟರು ಅವರ ಪತ್ನಿ.

  ಪುನೀತ್ ಬಗ್ಗೆ ಒಂದು ಪದದಲ್ಲಿ ಹೇಳಿ ಅನ್ನೋ ಪ್ರಶ್ನೆಗೆ ಸರಿಸಾಟಿಯೇ ಇಲ್ಲದ ಎನರ್ಜಿ ಅಂದ್ರೆ, ಸುದೀಪ್ ಬಗ್ಗೆ ಜೀವನಕ್ಕಿಂತ ದೊಡ್ಡವರು ಎಂದುತ್ತರಿಸಿದ್ದಾರೆ.

  ರಾಜಮೌಳಿಗೆ ದಾರಿ ತೋರಿಸುವ ವ್ಯಕ್ತಿ ಎಂದಿದ್ದರೆ, ದಳಪತಿ ವಿಜಯ್ ಅವರನ್ನು ಪವರ್ ಹೌಸ್ ಎಂದಿದ್ದಾರೆ.  ಪ್ರಭಾಸ್ ಅವರು ಡಾರ್ಲಿಂಗ್ ಡಾರ್ಲಿಂಗ್.

  ಅಂದಹಾಗೆ ಅವರು ಮನೆಯಲ್ಲಿ ಕನ್ನಡ, ತೆಲುಗು ಮತ್ತು ಇಂಗ್ಲಿಷ್ ಭಾಷೆಗಳನ್ನು ಮಾತನಾಡ್ತಾರಂತೆ.

 • ಬಾಹುಬಲಿಗೆ ಆದ ಗತಿಯೇ ಕೆಜಿಎಫ್ ಚಿತ್ರಕ್ಕೂ ಆಗುತ್ತಾ..?

  kgf to premiere on tv soon

  ಕೆಜಿಎಫ್ ಇನ್ನೂ ಥಿಯೇಟರುಗಳಲ್ಲಿ ಓಡುತ್ತಿದೆ. ವೀಕೆಂಡ್ ಹೌಸ್‍ಫುಲ್ ಆಗುತ್ತಿದೆ. ಹೀಗಿರುವಾಗಲೇ.. ಇನ್ನೂ 50 ದಿನ ಪೂರೈಸುವ ಮುನ್ನವೇ ಚಿತ್ರ ಟಿವಿಯಲ್ಲಿ ಪ್ರಸಾರವಾಗೋಕೆ ರೆಡಿಯಾಗಿಬಿಟ್ಟಿದೆ. ಹಿಂದಿಗೆ ಡಬ್ ಆಗಿರುವ ಕೆಜಿಎಫ್ ಚಿತ್ರದ ಹಿಂದಿ ವರ್ಷನ್ ಸೋನಿ ಮ್ಯಾಕ್ಸ್‍ನಲ್ಲಿ ಶೀಘ್ರದಲ್ಲೇ ಪ್ರಸಾರವಾಗಲಿದೆ. ಈಗಾಗಲೇ ಕೆಜಿಎಫ್ ಪ್ರಸಾರದ ಪ್ರೋಮೋ ಹೊರಬಿಟ್ಟಿದೆ ಸೋನಿ ಮ್ಯಾಕ್ಸ್.

  ಈ ಹಿಂದೆ ಬಾಹುಬಲಿ ಸಿನಿಮಾವನ್ನೂ ಹೀಗೆಯೇ ಮಾಡಿತ್ತು ಹಿಂದಿ ಚಾನೆಲ್. ಚಿತ್ರ ಥಿಯೇಟಿನಲ್ಲಿರುವಾಗಲೇ ಟಿವಿಯಲ್ಲಿ ಪ್ರಸಾರ ಮಾಡಿತ್ತು. ಅದು ಚಿತ್ರದ ಬಾಕ್ಸಾಫೀಸ್‍ಗೂ ಹೊಡೆತ ಕೊಟ್ಟಿತ್ತು. ಈಗ ಅದೇ ರೀತಿಯಲ್ಲಿ ಕೆಜಿಎಫ್‍ಗೂ ಆಗುತ್ತಾ..? ಗೊತ್ತಿಲ್ಲ. ಪ್ರೋಮೋದಲ್ಲಿ ನಿರೀಕ್ಷಿಸಿ ಎಂದು ಪ್ರೋಮೋ ಬರುತ್ತಿದೆಯೇ ಹೊರತು, ಡೇಟ್ ಮತ್ತು ಟೈಂ ಹೇಳಿಲ್ಲ.

 • ಭಾವ ಶ್ರೀಮುರಳಿ ಚಿತ್ರಕ್ಕೆ ಪ್ರಶಾಂತ್ ನೀಲ್ ನಿರ್ಮಾಪಕ

  prashanth neel to produce sriimurali

  ಹುಟ್ಟುಹಬ್ಬದ ಸಂಭ್ರಮದಲ್ಲಿರೋ ಭಾವ ಶ್ರೀಮುರಳಿಗೆ ಪ್ರಶಾಂತ್ ನೀಲ್ ಉಡುಗೊರೆಯೊಂದನ್ನು ಕೊಟ್ಟಿದ್ದಾರೆ. ಶ್ರೀಮುರಳಿಯ ಹೊಸ ಚಿತ್ರಕ್ಕೆ ಅವರೇ ಕಥೆ ಬರೆದಿರುವುದಷ್ಟೇ ಅಲ್ಲ, ಸ್ವತಃ ನಿರ್ಮಾಪಕರೂ ಆಗುತ್ತಿದ್ದಾರೆ. ಮದಗಜ ನಂತರ ಆ ಚಿತ್ರ ಸೆಟ್ಟೇರಲಿದೆ.

  ಲಕ್ಕಿ ಡೈರೆಕ್ಟರ್ ಸೂರಿ ನಿರ್ದೇಶನದ ಹೊಣೆ ಹೊತ್ತಿದ್ದು, ಪ್ರಶಾಂತ್ ನೀಲ್ ಅವರ ಸ್ವರ್ಣಲತಾ ಪ್ರೊಡಕ್ಷನ್ಸ್ನಲ್ಲಿ ಸಿನಿಮಾ ಸೆಟ್ಟೇರಲಿದೆ. ಪ್ರಶಾಂತ್ ನೀಲ್ ನಿರ್ದೇಶನದ ಮೊದಲ ಸಿನಮಾ ಉಗ್ರಂ. ಅದು ಶ್ರೀಮುರಳಿಗೆ ದೊಡ್ಡ ಬ್ರೇಕ್ ಕೊಟ್ಟಿದ್ದ ಸಿನಿಮಾ. ಅದಾದ ನಂತರ ನಿರ್ದೇಶಿಸಿದ ಕೆಜಿಎಫ್, ದೇಶಾದ್ಯಂತ ಸದ್ದು ಮಾಡಿದೆ.

 • ಮದಗಜ ನಂತರ ಪ್ರಶಾಂತ್ ನೀಲ್ ಚಿತ್ರ ರೋರಿಂಗ್

  srimurali plans for his next film with prashanth neel

  ರೋರಿAಗ್ ಸ್ಟಾರ್ ಶ್ರೀಮುರಳಿ, ಈಗ ಮದಗಜದಲ್ಲಿ ಬ್ಯುಸಿ. ಅಯೋಗ್ಯ ಖ್ಯಾತಿಯ ಮಹೇಶ್ ನಿರ್ದೇಶನದ ಚಿತ್ರ ಟೇಕಾಫ್ ಆಗಿದೆ. ಇದರ ಜೊತೆಯಲ್ಲೇ ಇನ್ನೊಂದು ಹೊಸ ಚಿತ್ರಕ್ಕೆ ಶ್ರೀಮುರಳಿ ರೆಡಿಯಾಗುತ್ತಿದ್ದಾರೆ.

  ನಿರ್ದೇಶಕ ಪ್ರಶಾಂತ್ ನೀಲ್ ಕಥೆಯೊಂದನ್ನು ರೆಡಿ ಮಾಡಿದ್ದಾರೆ. ಸ್ಕಿçಪ್ಟ್ ಕೆಲಸ ಮುಗಿದಿದೆ. ಈ ಮದಗಜ ಮುಗಿದ ನಂತರ ಆ ಸಿನಿಮಾ ಶುರುವಾಗಲಿದೆ. ಲಕ್ಕಿ ಖ್ಯಾತಿಯ ಡಾ.ಸೂರಿ ಈ ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ. 6-5=2 ಚಿತ್ರತಂಡ, ಈ ಸಿನಿಮಾ ನಿರ್ಮಾಣ ಮಾಡಲಿದೆ.

 • ಮೈಸೂರು ಅರಮನೆಯಲ್ಲಿ ಕೆಜಿಎಫ್ ಚಾಪ್ಟರ್ 2 ಶೂಟಿಂಗ್

  kgf chapter 2 shooting in mysore

  ಕೆಜಿಎಫ್ ಚಾಪ್ಟರ್ 2 ಶೂಟಿಂಗ್ ಬಳ್ಳಾರಿಯಿಂದ ಮೈಸೂರಿಗೆ ಶಿಫ್ಟ್ ಆಗಿದೆ. ಮೈಸೂರಿನ ಲಲಿತ್ ಮಹಲ್ ಪ್ಯಾಲೇಸ್‍ನಲ್ಲಿ ಕೆಜಿಎಫ್ 2 ಶೂಟಿಂಗ್ ನಡೆಯುತ್ತಿದೆ. ಅಷ್ಟೇ ಅಲ್ಲ, ನಾಯಕಿ ಶ್ರೀನಿಧಿಯ ಶೂಟಿಂಗ್ ಕಂಪ್ಲೀಟ್ ಆಗಿದೆ ಎಂಬ ಸುದ್ದಿಗಳಿವೆ.

  ಕೆಜಿಎಫ್ ಚಾಪ್ಟರ್ 1 ಶೂಟಿಂಗ್ ಕೂಡಾ ಲಲಿತ್ ಮಹಲ್ ಪ್ಯಾಲೇಸ್‍ನಲ್ಲಿ ನಡೆದಿತ್ತು. ಅರಮನೆಯಲ್ಲಿ ಚಿತ್ರದ ಅತ್ಯಂತ ಪ್ರಮುಖ ಭಾಗಗಳ ಶೂಟಿಂಗ್ ನಡೆದಿದೆ ಎನ್ನಲಾಗಿದ್ದು, ನಿರ್ದೇಶಕ ಪ್ರಶಾಂತ್ ನೀಲ್ ಬಿಡುವಿಲ್ಲದೆ ಚಿತ್ರೀಕರಣ ಮಾಡುತ್ತಿದ್ದಾರೆ. ವಿಜಯ್ ಕಿರಗಂದೂರು ನಿರ್ಮಾಣದ ಕೆಜಿಎಫ್, 2020ರ ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಚಿತ್ರಗಳಲ್ಲೊಂದು.

 • ಯಶ್ ಅಭಿಮಾನಿಗಳ ಕ್ಷಮೆ ಕೋರಿದ ಕೆಜಿಎಫ್ ನಿರ್ದೇಶಕ

  kgf director apologoze to yash fans

  ಯಶ್ ಅಭಿಮಾನಿಗಳ ನಿರೀಕ್ಷೆಯನ್ನು ತಲುಪಲು ಸಾಧ್ಯವಾಗುತ್ತಿಲ್ಲ. ನಿಮ್ಮ ನಿರೀಕ್ಷೆಯಂತೆ ಯಶ್ ಹುಟ್ಟುಹಬ್ಬಕ್ಕೆ ಟೀಸರ್ ಬಿಡುಗಡೆ ಮಾಡಲು ಸಾಧ್ಯವಾಗುತ್ತಿಲ್ಲ. ಕ್ಷಮಿಸಿ ಎಂದು ಕ್ಷಮೆ ಕೋರಿದ್ದಾರೆ ಪ್ರಶಾಂತ್ ನೀಲ್.

  ಜನವರಿ 8ಕ್ಕೆ ಯಶ್ ಹುಟ್ಟುಹಬ್ಬ. ಯಶ್ ಬರ್ತ್‍ಡೇಗೆ ಒಂದು ಟೀಸರ್ ಆದರೂ ಪಕ್ಕಾ ಎಂದು ಕಾಯುತ್ತಿದ್ದ ಅಭಿಮಾನಿಗಳಿಗೆ ಇದು ನಿರಾಸೆ ಮೂಡಿಸಿರುವುದು ಸುಳ್ಳಲ್ಲ. ಪ್ರಶಾಂತ್ ಕೊಡುತ್ತಿರುವ ಕಾರಣ ಇದು, ಶೂಟಿಂಗ್ ಮುಗಿಸಿಕೊಂಡು ಇಡೀ ತಂಡ ಬೆಂಗಳೂರಿಗೆ ಬರುವುದೇ ಜನವರಿ 7ಕ್ಕೆ. ಉಳಿಯುವುದು ಇನ್ನೊಂದೇ ದಿನ. ಒಂದು ದಿನದಲ್ಲಿ ದಿ ಬೆಸ್ಟ್ ಎನ್ನುವ ಕ್ವಾಲಿಟಿ ಕೊಡಲು ಸಾಧ್ಯವಿಲ್ಲ. ಬೆಸ್ಟ್ ಕೊಡದೇ ಹೋದರೆ ತಪ್ಪಾಗುತ್ತದೆ. ಹೀಗಾಗಿ ಟೀಸರ್ ಬಿಡುಗಡೆಯನ್ನೇ ಮುಂದೂಡಿದ್ದಾರೆ ಪ್ರಶಾಂತ್ ನೀಲ್.

  ನಿರ್ದೇಶಕ ಪ್ರಶಾಂತ್ ನೀಲ್ ಕಮಿಟ್‍ಮೆಂಟ್ ಬಗ್ಗೆ ಅವರ ಜೊತೆ ಕೆಲಸ ಮಾಡಿರುವವರಿಗೆ ಚೆನ್ನಾಗಿ ಗೊತ್ತು. ಅಂದುಕೊಂಡಂತೆ ಔಟ್‍ಪುಟ್ ಸಿಗುವವರೆಗೂ ರಾಜಿಯಾಗದ ಸ್ವಭಾವ ಅವರದ್ದು. ಸ್ಸೋ.. ಟೀಸರ್ ವಿಚಾರದಲ್ಲೂ ರಾಜಿ ಮಾಡಿಕೊಳ್ಳುತ್ತಿಲ್ಲ. ಆದರೆ, ಜನವರಿ 8ಕ್ಕೆ, ಬೆಳಗ್ಗೆ 10 ಗಂಟೆ 8 ನಿಮಿಷಕ್ಕೆ ಸರಿಯಾಗಿ ಕೆಜಿಎಫ್ ಚಾಪ್ಟರ್ 2ನ ಸೆಕೆಂಡ್ ಪೋಸ್ಟರ್ ಹೊರಬೀಳಲಿದೆ.

 • ಯಶ್ ಕೊಟ್ಟ ಗಿಫ್ಟಿನಲ್ಲಿ ಪ್ರಶಾಂತ್ ನೀಲ್ ಮಾಡಿದ ಮೊದಲ ಕೆಲಸ

  yash's luxury gift to prashanth neel

  ರಾಕಿಂಗ್ ಸ್ಟಾರ್ ಯಶ್‍ಗೆ ಪ್ರಶಾಂತ್ ನೀಲ್ ಅದ್ಭುತ ಉಡುಗೊರೆ ಕೊಟ್ಟಿರೋದು ಇಡೀ ಇಂಡಿಯಾಗೇ ಗೊತ್ತು. ಕೆಜಿಎಫ್ ನಂತಹ ಮಾಸ್ಟರ್ ಪೀಸ್ ಕೊಟ್ಟ ಪ್ರಶಾಂತ್ ನೀಲ್, ಯಶ್‍ಗೆ ಪ್ಯಾನ್ ಇಂಡಿಯಾ ಸ್ಟಾರ್ ಇಮೇಜ್ ಕೊಟ್ಟಿದ್ದಾರೆ. ಅಂತಹ ಪ್ರಶಾಂತ್ ನೀಲ್ ಅವರಿಗೆ ಯಶ್ ಕೂಡಾ ಒಂದು ಪ್ರೀತಿಯ ಕಾಣಿಕೆ ಕೊಟ್ಟಿದ್ದಾರೆ.

  ಸ್ಯಾಮ್ಸಂಗ್ ಗ್ಯಾಲಕ್ಸಿ ಎಎಕ್ಸ್‍ವೈ ಫೋಲ್ಡಿಂಗ್ ಮೊಬೈಲ್ ಗಿಫ್ಟ್ ನೀಡಿದ್ದಾರೆ ಯಶ್. ಅದನ್ನು ಅಷ್ಟೇ ಖುಷಿಯಿಂದ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ ಪ್ರಶಾಂತ್ ನೀಲ್. ಅಷ್ಟೇ ಅಲ್ಲ, ಆ ಕ್ಯಾಮೆರಾ ಮೂಲಕವೇ ತಮ್ಮ ಪತ್ನಿ ಮತ್ತು ಶ್ರೀನಿಧಿ ಶೆಟ್ಟಿ ಜೊತೆಯಲ್ಲಿರೋ ಫೋಟೋವೊಂದನ್ನು ಸೋಷಿಯಲ್ ಮೀಡಿಯಾಗೆ ಬಿಟ್ಟಿದ್ದಾರೆ ಪ್ರಶಾಂತ್. ಅಂದಹಾಗೆ ಪ್ರಶಾಂತ್ ನೀಲ್ ಪತ್ನಿ ಹೆಸರು ರೀನಾ.

 • ರವೀನಾ ಟಂಡನ್ ಪತಿಯಿಂದ ಕೆಜಿಎಫ್ ಹಿಂದಿ ರಿಲೀಸ್

  anil thadani with yash and kgf team

  ರಾಕಿಂಗ್ ಸ್ಟಾರ್ ಯಶ್, ವಿಜಯ್ ಕಿರಗಂದೂರು ಅವರ ಹೊಂಬಾಳೆ ಪ್ರೊಡಕ್ಷನ್, ಉಗ್ರಂ ಖ್ಯಾತಿಯ ಪ್ರಶಾಂತ್ ನೀಲ್ ಕಾಂಬಿನೇಷನ್‍ನ ಬಹುನಿರೀಕ್ಷಿತ ಸಿನಿಮಾ ಕೆಜಿಎಫ್. ನವೆಂಬರ್ 16ಕ್ಕೆ ಸಿನಿಮಾ ರಿಲೀಸ್ ಆಗಲಿದೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿಯಲ್ಲಿ ಏಕಕಾಲಕ್ಕೆ ಸಿನಿಮಾ ರಿಲೀಸ್ ಆಗುತ್ತಿದ್ದು, ಹಿಂದಿ ಕೆಜಿಎಫ್ ವಿತರಣೆಯ ಹಕ್ಕನ್ನು ಅನಿಲ್ ತಡಾನಿ ಖರೀದಿಸಿದ್ದಾರೆ. 

  ಅನಿಲ್ ತಡಾನಿ, ಕನ್ನಡದಲ್ಲಿ ಮಸ್ತ್ ಮಸ್ತ್ ಹುಡುಗಿಯಾಗಿ ನಟಿಸಿದ್ದ ಉಪೇಂದ್ರ ಚಿತ್ರದಿಂದ ಚಿರಪರಿಚಿತೆಯಾಗಿರುವ ರವೀನಾ ಟಂಡನ್‍ರ ಪತಿ. ಬಾಲಿವುಡ್‍ನಲ್ಲಿ ಸ್ಟಾರ್ ವಿತರಕ. ವಿಜಯ್ ದೇವರಕೊಂಡ ಹಾಗೂ ಕಾರ್ತಿಕ್ ಗೌಡ, ಅನಿಲ್ ತಡಾನಿ ಜೊತೆ ಮಾತುಕತೆ ನಡೆಸಿದ್ದಾರೆ. ಅನಿಲ್ ತಡಾನಿ ವಿತರಣೆ ಮಾಡುತ್ತಿರುವುದರಿಂದ ಹಿಂದಿಯಲ್ಲಿ ಬಹುದೊಡ್ಡ ಓಪನಿಂಗ್ ಸಿಗಲಿದೆ ಎಂಬ ನಿರೀಕ್ಷೆ ಗರಿಗೆದರಿದೆ.

 • ರಾಕಿ ಭಾಯ್‍ಗೆ ಡೆತ್ ವಾರೆಂಟ್ ಕೊಡಲು ರವೀನಾ ಎಂಟ್ರಿ

  raveen tandon joins kgf chapter 2 team

  ಮಸ್ತ್ ಮಸ್ತ್ ಹುಡುಗಿ ರವೀನಾ ಟಂಡನ್ ಈಗ ಸೀನಿಯರ್ ನಟಿ. ಅವರೀಗ ಕೆಜಿಎಫ್ ಟೀಂಗೆ ಎಂಟ್ರಿ ಕೊಟ್ಟಿದ್ದಾರೆ. ಅವರ ಪಾತ್ರದ ಕೆಲಸವೇ ರಾಕಿ ಭಾಯ್‍ಗೆ ಡೆತ್ ವಾರೆಂಟ್ ಕೊಡೋದು.

  20 ವರ್ಷಗಳ ಬಳಿಕ ಕನ್ನಡ ಚಿತ್ರರಂಗಕ್ಕೆ ಬರುತ್ತಿರುವ ರವೀನಾ, ಕೆಜಿಎಫ್ ಚಾಪ್ಟರ್ 2ನಲ್ಲಿ ಪ್ರಧಾನಿಯ ಪಾತ್ರ ಮಾಡಿದ್ದಾರೆ. ದೇಶದ ಏಕೈಕ ಮಹಿಳಾ ಪ್ರಧಾನಿ ಇಂದಿರಾ ಗಾಂಧಿ ಅವರಾಗಿದ್ದ ಕಾರಣ, ರವೀನಾ ಪಾತ್ರದಲ್ಲಿ ಇಂದಿರಾ ಛಾಯೆಯೂ ಇದೆ.

  ರವೀನಾ ಟಂಡನ್, ಇಲ್ಲಿ ರಮಿಕಾ ಸೇನ್ ಹೆಸರಿನ ಪಾತ್ರ ಮಾಡುತ್ತಿದ್ದು, ಕೆಜಿಎಫ್ ಡೈರೆಕ್ಟರ್ ಪ್ರಶಾಂತ್ ನೀಲ್ ಸ್ವಾಗತ ಕೋರಿದ್ದಾರೆ.

  ಯಶ್, ಸಂಜಯ್ ದತ್, ಅನಂತ ನಾಗ್, ಶ್ರೀನಿಧಿ ಶೆಟ್ಟಿ ಅಭಿನಯದ ಕೆಜಿಎಫ್ ಚಾಪ್ಟರ್ 2ಗೆ ವಿಜಯ್ ಕಿರಗಂದೂರು ನಿರ್ಮಾಪಕ. 2020ರ ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾ ಆಗಿರುವ ಕೆಜಿಎಫ್ ಚಾಪ್ಟರ್ 2 ಜೂನ್ ಅಥವಾ ಜುಲೈನಲ್ಲಿ ರಿಲೀಸ್ ಆಗುವ ನಿರೀಕ್ಷೆ ಇದೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery