` ashika ranganath - chitraloka.com | Kannada Movie News, Reviews | Image

ashika ranganath

 • ಮದಗಜ ಭಾರೀ ಮೊತ್ತಕ್ಕೆ ಹಿಂದಿಗೆ ಮಾರಾಟ : ಎಷ್ಟು ಕೋಟಿ?

  ಮದಗಜ ಭಾರೀ ಮೊತ್ತಕ್ಕೆ ಹಿಂದಿಗೆ ಮಾರಾಟ : ಎಷ್ಟು ಕೋಟಿ?

  ಶ್ರೀಮುರಳಿ, ಅಯೋಗ್ಯ ಮಹೇಶ್, ಉಮಾಪತಿ ಶ್ರೀನಿವಾಸ ಗೌಡ ಕಾಂಬಿನೇಷನ್ ಸಿನಿಮಾ ಮದಗಜ. ಇದೇ ಡಿಸೆಂಬರ್ 4ಕ್ಕೆ ರಿಲೀಸ್ ಆಗುತ್ತಿರೋ ಮದಗಜ, ಈಗಾಗಲೇ ಸೆನ್ಸೇಷನ್ ಸೃಷ್ಟಿಸಿದೆ. ಚಿತ್ರದ ಟ್ರೇಲರ್, ಮೇಕಿಂಗ್ ವ್ಹಾರೆವ್ಹಾ ಎನ್ನಿಸುವಂತಿದೆ. ಕನ್ನಡದಲ್ಲಷ್ಟೇ ಅಲ್ಲದೆ ತೆಲುಗಿನಲ್ಲೂ ಬರುತ್ತಿದೆ ಮದಗಜ. ಈಗ ರಿಲೀಸ್ ಆಗುವುದಕ್ಕೂ ಮೊದಲೇ ಮದಗಜ ಚಿತ್ರದ ಡಬ್ಬಿಂಗ್ ರೈಟ್ಸ್ ಭಾರಿ ಮೊತ್ತಕ್ಕೆ ಸೇಲ್ ಆಗಿವೆ ಎನ್ನುತ್ತಿವೆ ಮೂಲಗಳು.

  ಉಗ್ರಂ ನಂತರ ಶ್ರೀಮುರಳಿಯ ಹಿಂದಿ ಡಬ್ಬಿಂಗ್ ಸಿನಿಮಾಗಳಿಗೆ ಭಾರಿ ಬೇಡಿಕೆ ಇದೆ. ಹೀಗಾಗಿ ಮದಗಜ ಚಿತ್ರವೂ ಭಾರಿ ಮೊತ್ತಕ್ಕೆ ಸೇಲ್ ಆಗಿದೆ. ಒಂದು ಮೂಲದ ಪ್ರಕಾರ ಹಿಂದಿಯ ಡಬ್ಬಿಂಗ್ ಹಕ್ಕುಗಳು ಸುಮಾರು 8 ಕೋಟಿಗೆ ಸೇಲ್ ಆಗಿದೆ. ಡಿಸೆಂಬರ್ 4ರಂದು ಕನ್ನಡ, ತಮಿಳು ಹಾಗೂ ತೆಲುಗಿನಲ್ಲಿ ಏಕಕಾಲಕ್ಕೆ ರಿಲೀಸ್ ಆಗುತ್ತಿರುವ ಮದಗಜ, ಸುಮಾರು 1500 ಸ್ಕ್ರೀನ್ಗಳಲ್ಲಿ ಪ್ರದರ್ಶನವಾಗಲಿದೆ.

 • ಮದಗಜ ಹೀರೋ ಹಂಗೆ.. ಹೀರೋಯಿನ್ ಹಿಂಗೆ..

  ಮದಗಜ ಹೀರೋ ಹಂಗೆ.. ಹೀರೋಯಿನ್ ಹಿಂಗೆ..

  ಮದಗಜ ಚಿತ್ರದ ಮೊದಲೆರಡು ಟೀಸರ್ ನೋಡಿದ್ದವರಿಗೆ ಇದೊಂದು ಭರ್ಜರಿ ಆ್ಯಕ್ಷನ್ ಸಿನಿಮಾ ಎನಿಸಿದ್ದರೆ ತಪ್ಪಲ್ಲ. ಅಷ್ಟರಮಟ್ಟಿಗೆ ಪವರ್ ಫುಲ್ ಡೈಲಾಗ್ಸ್.. ಶ್ರೀಮುರಳಿಯ ಬೆಂಕಿ ಕಣ್ಣುಗಳಿದ್ದವು. ಆದರೆ.. ಯುಗಾದಿಗೆ ಬಿಟ್ಟಿರೋ ಇನ್ನೊಂದು ಟೀಸರ್‍ನಲ್ಲಿ ಬೇರೆಯದದ್ದೇ ಲೋಕ ತೋರಿಸಿದ್ದಾರೆ ಅಯೋಗ್ಯ ಮಹೇಶ್.

  ಯುಗಾದಿಯ ಮದಗಜ ಟೀಸರ್‍ನಲ್ಲಿ ಹೈಲೈಟ್ ಆಗಿರೋದು ಆಶಿಕಾ ರಂಗನಾಥ್. ಅಪ್ಪಟ ರೈತ ಮಗಳಾಗಿ ಕಾಣಿಸಿರೋ ಆಶಿಕಾ, ಶ್ರೀಮುರಳಿಯ ಜೊತೆ ಮುದ್ದಾಗಿ ಕಾಣಿಸಿಕೊಳ್ತಾರೆ. ಹಾಗಾದರೆ.. ಇಲ್ಲೊಂದು ಚೆಂದದ ಲವ್ ಸ್ಟೋರಿ ಇದೆಯಾ..?

  ಉಮಾಪತಿ ನಿರ್ಮಾಣದ ಚಿತ್ರ ಒಂದು ಪಕ್ಕಾ ಕಮರ್ಷಿಯಲ್ ಸಿನಿಮಾ ಅನ್ನೋದರ ಸುಳಿವಂತೂ ಇದುವರೆಗಿನ ಟೀಸರ್‍ಗಳು ಕೊಟ್ಟಿವೆ. 

 • ಮದಗಜನ ಬೆಂಕಿಯುಂಡೆ..

  ಮದಗಜನ ಬೆಂಕಿಯುಂಡೆ..

  ಶ್ರೀಮುರಳಿಯ ದರ್ಶನಕ್ಕೆ ಸಮಯ ಸನ್ನಿಹಿತವಾಗುತ್ತಿದೆ. ಡಿಸೆಂಬರ್ನಲ್ಲಿ ತೆರೆಯ ಮೇಲೆ ಬರೋ ಮದಗಜ ಚಿತ್ರದ ಟ್ರೇಲರ್ ಹೊರಬಿದ್ದಿದೆ. ರಕ್ತ ದೇಹದೊಳಗಿದ್ದರೆ ಸಂಬಂಧ.. ಅದೇ ರಕ್ತ ಹೊರಗೆ ಹರಿದರೆ ಕ್ರೌರ್ಯ ಅನ್ನೋ ಡೈಲಾಗು.. ಶ್ರೀಮುರಳಿಯ ಕಂಚಿನ ಕಂಠದಲ್ಲಿ ಕಿವಿಗೆ ಅಪ್ಪಳಿಸುತ್ತೆ.

  ಅಯೋಗ್ಯ ಖ್ಯಾತಿಯ ನಿರ್ದೇಶಕ ಮಹೇಶ್ ಕುಮಾರ್ ನಿರ್ದೇಶಿಸಿರೋ ಚಿತ್ರದಲ್ಲಿ ಶ್ರೀಮುರಳಿ ಎದುರು ವಿಲನ್ ಆಗಿ ಅಬ್ಬರಿಸೋಕೆ ಸಿದ್ಧವಾಗಿರೋದು ಜಗಪತಿ ಬಾಬು. ಲುಕ್ಕು ಖಡಕ್ಕಾಗಿದೆ. ನಾಯಕಿಯಾಗಿ ಅಶಿಕಾ ರಂಗನಾಥ್ ನಟಿಸಿದ್ದಾರೆ. ಌಕ್ಷನ್ ಸೀಕ್ವೆನ್ಸ್ ಭರ್ಜರಿಯಾಗಿವೆ ಅನ್ನೋ ಸುಳಿವು ಟ್ರೇಲರ್ನಲ್ಲೆ ಸಿಕ್ಕಿದೆ. ಉಮಾಪತಿ ಶ್ರೀನಿವಾಸ್ ಗೌಡ ನಿರ್ಮಾಣದ ಚಿತ್ರವಿದು. ಅದ್ಧೂರಿತನಕ್ಕೆ ಬರವಿಲ್ಲ. ರವಿ ಬಸ್ರೂರು ಬಿಜಿಎಂ ವ್ಹಾವ್ ಎನ್ನುವಂತಿದೆ.

 • ಮಾಟ, ಮಂತ್ರದ ಅವತಾರ್ ಪುರುಷನದ್ದೇ 2 ಅವತಾರ..!

  ಮಾಟ, ಮಂತ್ರದ ಅವತಾರ್ ಪುರುಷನದ್ದೇ 2 ಅವತಾರ..!

  ಮಾಟ, ಮಂತ್ರ, ತಂತ್ರಗಳ ಬಗ್ಗೆ ಒಂದಷ್ಟು ಜನ ಭಯ ಪಡುವುದು ಸತ್ಯವಾದರೂ, ಬಹಳಷ್ಟು ಜನ ಕೇರ್ ಮಾಡೋದಿಲ್ಲ. ಆದರೆ, ಅಂತಹ ಸಿನಿಮಾಗಳಿಗೆ ಒಂದಷ್ಟು ಖಾಯಂ ಪ್ರೇಕ್ಷಕರಿದ್ದೇ ಇರುತ್ತಾರೆ. ಅವತಾರ್ ಪುರುಷ ಇದೇ ಜಾನರ್‍ನ ಸಿನಿಮಾ.

  ಶರಣ್, ಶ್ರೀನಗರ ಕಟ್ಟಿ, ಅಶಿಕಾ ರಂಗನಾಥ್, ಸುಧಾರಾಣಿ, ಸಾಯಿ ಕುಮಾರ್, ಭವ್ಯಾ ಮೊದಲಾದ ಘಟಾನುಘಟಿ ಕಲಾವಿದರೇ ನಟಿಸಿರುವ ಅವತಾರ್ ಪುರುಷ ಚಿತ್ರದ ಚಿತ್ರೀಕರಣಕ್ಕೆ ಕುಂಭಳಕಾಯಿ ಬಿದ್ದಿದೆ.

  ವಿಶೇಷವೆಂದರೆ ಇದನ್ನು ವೆಬ್ ಸಿರೀಸ್‍ಗಾಗಿ ಮಾಡಲಾಗಿತ್ತಂತೆ. ಆದರೆ, ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ, ನಿರ್ದೇಶಕ ಸಿಂಪಲ್ ಸುನಿಯವರನ್ನು ಒಪ್ಪಿಸಿ ಸಿನಿಮಾ ಮಾಡಿದ್ದಾರೆ. ಅಂದಹಾಗೆ ಅವತಾರ್ ಪುರುಷ, 2 ಭಾಗಗಳಲ್ಲಿ ಬರಲಿದೆ.

  ಅವತಾರ್ ಪುರುಷ ಭಾಗ 1ಕ್ಕೆ ಅಷ್ಟದಿಗ್ಬಂಧನ ಮಂಡಲಕ ಅನ್ನೋ ಟ್ಯಾಗ್‍ಲೈನ್ ಕೊಟ್ಟಿದ್ದರೆ, 2ನೇ ಭಾಗಕ್ಕೆ ತ್ರಿಶಂಕು ಅನ್ನೋ ಟೈಟಲ್ ಕೊಡಲಾಗಿದೆ. ಎರಡೂ ಭಾಗಗಳ ಚಿತ್ರೀಕರಣ ಮುಗಿಸಿದೆ ಅವತಾರ್ ಟೀಂ. ಎರಡೂ ಭಾಗಗಳನ್ನು ಒಟ್ಟಿಗೇ ತರುವ ಯೋಜನೆ ಚಿತ್ರತಂಡಕ್ಕಿದೆ.

  ಹೀಗಾಗಿಯೇ ಚಿತ್ರದ ಬಗ್ಗೆ ಟ್ವೀಟ್ ಮಾಡಿರುವ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ, ಮಾಟ, ಮಂತ್ರ ಅಂದ್ರೆ ಯಾರ್ಗೂ ನಂಬಿಕೆ, ಭಯ ಇಲ್ಲ. ಅಲ್ವಾ..? ಗೆಟ್ ರೆಡಿ ಫಾರ್ ದಿ ಸ್ಕೇರಿ ಡ್ರೈವ್ ಎಂದು ಟ್ವೀಟ್ ಮಾಡಿದ್ದಾರೆ.

 • ಮಿಲ್ಕಿ ಬ್ಯೂಟಿ ಅಶಿಕಾ ಬೆನ್ನು ಕೆಂಪಾಗಿದ್ದೇಕೆ ಮದಗಜ..?

  ಮಿಲ್ಕಿ ಬ್ಯೂಟಿ ಅಶಿಕಾ ಬೆನ್ನು ಕೆಂಪಾಗಿದ್ದೇಕೆ ಮದಗಜ..?

  ಕಳೆದ ವಾರ ರಿಲೀಸ್ ಆದ ಮದಗಜ ಹಿಟ್ ಚಿತ್ರಗಳ ಲಿಸ್ಟಿಗೆ ಸೇರಿದ್ದಾಯ್ತು. ಶ್ರೀಮುರಳಿ, ಉಮಾಪತಿ ಶ್ರೀನಿವಾಸ ಗೌಡ ಮತ್ತು ಮಹೇಶ್ ಕುಮಾರ್.. ಮೂವರೂ ಮತ್ತೊಮ್ಮೆ ಗೆದ್ದಿದ್ದಾಯ್ತು. ಹಾಗೆ ಗೆದ್ದಾದ ಮೇಲೆ ಚಿತ್ರದ ನಾಯಕಿ ಅಶಿಕಾ ರಂಗನಾಥ್ ಒಂದು ಫೋಟೋ ಹೊರಬಿಟ್ಟಿದ್ದಾರೆ.

  ಅಶಿಕಾ ಮಿಲ್ಕಿ ಬ್ಯೂಟಿ. ಹಾಲಿನ ಕೆನೆ ಮೈಬಣ್ಣದ ಹುಡುಗಿ. ಆದರೆ, ಈ ಫೋಟೋದಲ್ಲಿ ಅವರ ಬೆನ್ನು ಕೆಂಪು ಕೆಂಪಾಗಿ ಹೋಗಿದೆ. ಸನ್ ಬರ್ನ್ ಆಗಿರೋದು ಎದ್ದು ಕಾಣುತ್ತಿದೆ. ಇದೆಲ್ಲ ಮದಗಜ ಕೊಟ್ಟಿದ್ದಂತೆ.

  ಚಿತ್ರದ ಪಲ್ಲವಿ ಪಾತ್ರದಲ್ಲಿ ನಟಿಸಿ ಗೆದ್ದ ಹಳ್ಳಿ ಹುಡುಗಿಯಾಗಿ ಮಿಂಚಿದ ಅಶಿಕಾ, ಆ ಪಾತ್ರಕ್ಕೆ ವಹಿಸಿದ್ದ ಶ್ರಮದ ಪ್ರತಿಫಲ ಇದು. ಚಿತ್ರದಲ್ಲಿ ರೈತ ಮಗಳಾಗಿ ಕಳೆ ಕೀಳುವ, ಟ್ರ್ಯಾಕ್ಟರ್ ಓಡಿಸುವ, ಗದ್ದೆ ಉಳುವ ಕೆಲಸಗಳನ್ನೆಲ್ಲ ಮಾಡಿದ್ದಾರೆ ಅಶಿಕಾ. ಅದೆಲ್ಲದರ ರಿಸಲ್ಟ್ ಇದು. ಆದರೆ.. ಅದಕ್ಕಾಗಿ ನನಗೆ ಖುಷಿಯಿದೆ ಎಂದು ಹೇಳಿಕೊಂಡಿದ್ದಾರೆ ಅಶಿಕಾ.

 • ಮೇ 28ಕ್ಕೆ ಶರಣ್ ಅಷ್ಟಮಂಡಲಕ ದಿಗ್ಬಂಧನ

  ಮೇ 28ಕ್ಕೆ ಶರಣ್ ಅಷ್ಟಮಂಡಲಕ ದಿಗ್ಬಂಧನ

  ಫೆ.19ರಿಂದ ಶುರುವಾಗುತ್ತಿರೋ ಕನ್ನಡದ ಸ್ಟಾರ್ ನಟರ ಚಿತ್ರಗಳ ಜಾತ್ರೆ ಕಂಟಿನ್ಯೂ ಆಗಲಿದೆ. ಸರಾಸರಿ ಪ್ರತಿ 15 ದಿನಕ್ಕೊಂದು ಸ್ಟಾರ್ ಸಿನಿಮಾ ಆಗುತ್ತಿದೆ. ಮೇ 14ಕ್ಕೆ ಭಜರಂಗಿ 2 ಇದ್ದು, ಅದಾದ ನಂತರ ಮೇ 28ಕ್ಕೆ ಶರಣ್ ಎಂಟ್ರಿ ಕೊಡುತ್ತಿದ್ದಾರೆ.

  ಶರಣ್, ಅಶಿಕಾ ರಂಗನಾಥ್, ಶ್ರೀನಗರ ಕಿಟ್ಟಿ ನಟಿಸಿರುವ ಅವತಾರ ಪುರುಷ ಅಷ್ಟಮಂಡಲಕ ದಿಗ್ಬಂಧನ ಮೇ 28ಕ್ಕೆ ರಿಲೀಸ್ ಆಗುತ್ತಿದೆ. ಕಾಮಿಡಿ ಲವ್ ಸ್ಟೋರಿಗಳಿಗೆ ಫೇಮಸ್ ಆಗಿರೋ ಸಿಂಪಲ್ ಸುನಿ, ಈ ಬಾರಿ ಸಿಂಪಲ್ಲಾಗ್ ಒಂದಿಷ್ಟು ಹಾರರ್ ಮಿಕ್ಸ್ ಮಾಡಿದ್ದಾರೆ. ಅದೂ 2 ಭಾಗಗಳಲ್ಲಿ. ಅವತಾರ ಪುರುಷ ಚಿತ್ರದ ಭಾಗ 1 ಮೇ 28ಕ್ಕೆ ರಿಲೀಸ್ ಆದರೆ, 2ನೇ ಭಾಗ ಅದಾದ 2 ತಿಂಗಳ ನಂತರ ಥಿಯೇಟರ್‍ಗೆ ಬರಲಿದೆ.

  ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣದಲ್ಲಿ ಸಿಂಪಲ್ ಸುನಿ ನಿರ್ದೇಶನ ಮತ್ತು ಶರಣ್ ನಟನೆ. ಎಲ್ಲವೂ ಹೊಚ್ಚ ಹೊಸ ಕಾಂಬಿನೇಷನ್ ಎನ್ನುವುದು ವಿಶೇಷ.

 • ರಚಿತಾ ಹೋದ್ರು.. ಅಶಿಕಾ ಬಂದ್ರು..!

  ashika ranganath replaces rachita ram in pc shekar's movie

  ಅಶಿಕಾ ರಂಗನಾಥ್, ಸ್ಯಾಂಡಲ್‍ವುಡ್‍ನ ಮೋಸ್ಟ್ ಡಿಮ್ಯಾಂಡಿಂಗ್ ಹೀರೋಯಿನ್. ಈಗಾಗಲೇ ಕೈತುಂಬಾ ಚಿತ್ರಗಳಿರುವ ಅಶಿಕಾ ರಂಗನಾಥ್, ಮತ್ತೊಂದು ಹೊಸ ಚಿತ್ರಕ್ಕೆ ಸೆಲೆಕ್ಟ್ ಆಗಿದ್ದಾರೆ. ಪಿ.ಸಿ.ಶೇಖರ್ ನಿರ್ದೇಶನದ ಹೊಸ ಗ್ಯಾಂಗ್‍ಸ್ಟರ್ ಚಿತ್ರಕ್ಕೆ ಅಶಿಕಾ ರಂಗನಾಥ್ ಹೀರೋಯಿನ್.

  ಪ್ಲಾನ್ ಪ್ರಕಾರ ಆ ರೋಲ್‍ನಲ್ಲಿ ರಚಿತಾ ರಾಮ್ ನಟಿಸಬೇಕಿತ್ತು.  ಆದರೆ ಡೇಟ್ಸ್ ಸಮಸ್ಯೆಯಿಂದಾಗಿ ರಚಿತಾ ಹಿಂದೆ ಸರಿದಿದ್ದಾರೆ. ಅಶಿಕಾ, ರಚಿತಾ ರಾಮ್ ಜಾಗ ತುಂಬುತ್ತಿದ್ದಾರೆ.

  ನನ್ನ ಚಿತ್ರಕ್ಕೆ ಕಣ್ಣಿನಲ್ಲೇ ಭಾವನೆಗಳನ್ನು ವ್ಯಕ್ತಪಡಿಸಬಲ್ಲ ನಾಯಕಿ ಬೇಕಿತ್ತು. ಅಶಿಕಾ ಆ ರೋಲ್‍ಗೆ ತುಂಬಾ ಚೆನ್ನಾಗಿ ಸೂಟ್ ಆಗುತ್ತಾರೆ. ರಚಿತಾ ರಾಮ್ ಕೂಡಾ ಸೂಟ್ ಆಗುತ್ತಿದ್ದರು. ಆದರೆ, ಡೇಟ್ಸ್ ಮ್ಯಾಚ್ ಆಗಲಿಲ್ಲ ಎನ್ನುವ ಶೇಖರ್, ಅಶಿಕಾ ಪಾತ್ರ ಸವಾಲಿನದ್ದು. ಆ ಪಾತ್ರಕ್ಕೆ ಹೆಚ್ಚು ಡೈಲಾಗ್‍ಗಳಿಲ್ಲ. ಮೌನದಲ್ಲೇ ಮಾತನಾಡಬೇಕು. ಕ್ಯಾರೆಕ್ಟರ್ ಗೊತ್ತಾದ ಮೇಲೂ ಅಶಿಕಾ ಕಾನ್ಫಿಡೆನ್ಸ್‍ನಲ್ಲಿದ್ದಾರೆ ಎನ್ನುತ್ತಾರೆ ಶೇಖರ್.

 • ರೆಮೋ ಲಾಂಚ್`ಗೆ ಕನ್ನಡ ಚಿತ್ರರಂಗದಲ್ಲಿ ಸಂಚಲನ.

  ರೆಮೋ ಲಾಂಚ್`ಗೆ ಕನ್ನಡ ಚಿತ್ರರಂಗದಲ್ಲಿ ಸಂಚಲನ.

  ರೆಮೋ. ಪವನ್ ಒಡೆಯರ್ ನಿರ್ದೇಶನದ ಸಿನಿಮಾ. ಕನ್ನಡ ಚಿತ್ರರಂಗದ ಎರಡು ನಕ್ಷತ್ರಗಳನ್ನು ಒಟ್ಟಾಗಿ ಸೇರಿಸಿ ವಿಲನ್ ಚಿತ್ರ ನಿರ್ಮಿಸಿದ್ದ ಸಿ.ಆರ್.ಮನೋಹರ್, ರೆಮೋ ಚಿತ್ರಕ್ಕೆ ನಿರ್ಮಾಪಕ. ನಾಯಕರಾಗಿರೋದು ಅವರ ಸಹೋದರ  ಇಶಾನ್. ನಾಯಕಿ ಅಶಿಕಾ ರಂಗನಾಥ್. ಈ ಚಿತ್ರದ ಟೀಸರ್ ಲಾಂಚಿಂಗ್‍ಗೆ ಮುಹೂರ್ತ ಫಿಕ್ಸ್ ಆಗಿದೆ. ನ.25ರಂದು ನಡೆಯುತ್ತಿರೋ ಟೀಸರ್ ಲಾಂಚ್ ಕಾರ್ಯಕ್ರಮಕ್ಕೆ ಇಡೀ ಚಿತ್ರರಂಗ ಒಂದಾಗುತ್ತಿರೋದು ಸಂಚಲನವನ್ನೇ ಸೃಷ್ಟಿಸಿದೆ.

  ಏಕೆಂದರೆ ಟೀಸರ್ ಲಾಂಚ್‍ಗೆ ಕನ್ನಡ ಚಿತ್ರರಂಗದ ಸ್ಟಾರ್ ನಿರ್ಮಾಪಕ, ನಿರ್ದೇಶಕರೆಲ್ಲ ಒಂದೇ ವೇದಿಕೆಯಲ್ಲಿ ಸೇರುತ್ತಿದ್ದಾರೆ. ಪವನ್ ಒಡೆಯರ್ ಅವರೊಂದಿಗೆ ಯೋಗರಾಜ್ ಭಟ್, ಎ.ಹರ್ಷ, ಚೇತನ್ ಕುಮಾರ್, ಜೋಗಿ ಪ್ರೇಮ್, ತರುಣ್ ಸುಧೀರ್, ಎ.ಪಿ. ಅರ್ಜುನ್. ನಿರ್ಮಾಪಕರಾಗಿ ಕಾರ್ತಿಕ್ ಗೌಡ, ಜಯಣ್ಣ-ಭೋಗೇಂದ್ರ, ಕೆ.ಪಿ.ಶ್ರೀಕಾಂತ್, ಕೆ.ಮಂಜು  ವೇದಿಕೆಯಲ್ಲಿರುತ್ತಾರೆ. ಒಂದು ಸಿನಿಮಾ ಕಾರ್ಯಕ್ರಮಕ್ಕೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ನಿರ್ಮಾಪಕರು, ನಿರ್ದೇಶಕರು ಒಟ್ಟಿಗೇ ಸೇರುತ್ತಿರುವುದು ಇದೇ ಮೊದಲು.

 • ರೇಮೋ ಪ್ರೇಮ್ ಕಹಾನಿ ಆರಂಭ

  pavan wadeyar's reymo launched

  ಅವನ ಹೆಸರು ರೇವಂತ್.. ಅವಳ ಹೆಸರು ಮೋಹನಾ.. ಅವರಿಬ್ಬರ ಹೆಸರಿನ ಮೊದಲ ಅಕ್ಷರ ಸೇರಿದರೆ ರೇಮೋ.. ಅಷ್ಟೇ ಅಲ್ಲ.. ನಾಯಕ ವಿಚಿತ್ರ ಸ್ವಭಾವದವನು. ಅದಕ್ಕೆ ತಕ್ಕಂತೆ ಅವನ ಹೆಸರು ರೇಮೋ..

  ನಿಮಗೆ ಅನ್ನಿಯನ್ ಚಿತ್ರದ ಕ್ಯಾರೆಕ್ಟರ್ ನೆನಪಾಗಿದ್ದರೆ, ಆಶ್ಚರ್ಯವಿಲ್ಲ. ಅಲ್ಲಿ ವಿಕ್ರಂ ಅವತಾರದ ಮಾಡ್ ಪಾತ್ರದ ಹೆಸರು ರೇಮೋ.. 

  ಇಷ್ಟೆಲ್ಲ ಇರೋ ಈ ಚಿತ್ರ ಈಗ ಶುರುವಾಗಿಯೇ ಬಿಟ್ಟಿದೆ. ರೋಗ್ ಮೂಲಕ ಗಮನ ಸೆಳೆದಿದ್ದ ನಟ ಇಶಾನ್, ಚುಟುಚುಟು ಚೆಲುವು ಅಶಿಕಾ ರಂಗನಾಥ್ ನಟಿಸುತ್ತಿರುವ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿರುವುದು ನಿರ್ದೇಶಕ ಪವನ್ ಒಡೆಯರ್.

  ವಿಲನ್ ನಂತರ ಸಿ.ಆರ್. ಮನೋಹರ್ ನಿರ್ಮಿಸುತ್ತಿರುವ ಚಿತ್ರಿವಿದು. ಇಶಾನ್, ಮನೋಹರ್ ಫ್ಯಾಮಿಲಿ ಹುಡುಗ. ಚಿತ್ರದ ಮುಹೂರ್ತಕ್ಕೆ ಶಿವರಾಜ್‍ಕುಮಾರ್ ಮತ್ತು ಗೀತಾ ಆಗಮಿಸಿ ಶುಭ ಕೋರಿದರು.

 • ಶರಣ್ ಕೆರಿಯರ್‍ನಲ್ಲೇ ರ್ಯಾಂಬೋ2 ವಂಡರ್

  rambo 2 does wonders at box office

  Rambo 2 ರಿಲೀಸ್ ಆದ ದಿನದಿಂದಲೂ ಬಾಕ್ಸಾಫೀಸ್‍ನಲ್ಲಿ ಚುಟುಚುಟು ಅಂತಾನೇ ಇದೆ. ಚುಮುಚುಮು ಮ್ಯಾಜಿಕ್ ಮಾಡಿರುವ ಸಿನಿಮಾ, 25 ದಿನ ಪೂರೈಸಿ 50ನೇ ದಿನಕ್ಕೆ ಮುನ್ನುಗ್ಗುತ್ತಿದೆ. ಇದು ಶರಣ್ ವೃತ್ತಿಜೀವನದಲ್ಲೇ ಅತಿದೊಡ್ಡ ಹಿಟ್ ಎನ್ನಲಾಗುತ್ತಿದೆ. ಸದ್ಯಕ್ಕೆ Rambo 2 ಹೋಗುತ್ತಿರುವ ಸ್ಪೀಡ್ ನೋಡಿದರೆ, 60ಕ್ಕೂ ಹೆಚ್ಚು ಕೇಂದ್ರಗಳಲ್ಲಿ 50 ದಿನ ಪೂರೈಸುವ ಸೂಚನೆ ಇದೆ.

  ಸದ್ಯಕ್ಕೆ Rambo 2, 12 ಕೋಟಿಗೂ ಹೆಚ್ಚು ಗಳಿಕೆ ಮಾಡಿದೆಯಂತೆ. ತಂತ್ರಜ್ಞರೇ ಬಂಡವಾಳ ಹೂಡಿ ನಿರ್ಮಿಸಿದ್ದ ಸಿನಿಮಾ ಇದಾಗಿತ್ತು. ನಾಯಕ ಶರಣ್, ಅಟ್ಲಾಂಟಾ ನಾಗೇಂದ್ರ, ತರುಣ್ ಸುಧೀರ್, ಅರ್ಜುನ್ ಜನ್ಯಾ, ಚಿಕ್ಕಣ್ಣ ಸೇರಿದಂತೆ.. ಎಲ್ಲರೂ ನಿರ್ಮಾಪಕರಾಗಿದ್ದರು. ಈಗ ಪ್ರತಿಯೊಬ್ಬ ನಿರ್ಮಾಪಕರ ಮೊಗದಲ್ಲೂ ನಗು.. ಚುಟುಚುಟು ಅನ್ನೋಕೆ ಶುರುವಾಗಿದೆ.

 • ಸಿಂಪಲ್ ದೇವಕನ್ಯೆಯಾಗಿ ಅಶಿಕಾ ರಂಗನಾಥ್

  ಸಿಂಪಲ್ ದೇವಕನ್ಯೆಯಾಗಿ ಅಶಿಕಾ ರಂಗನಾಥ್

  ಅಶಿಕಾ ರಂಗನಾಥ್ ಎಂದರೆ ಚುಟು ಚುಟು ಫೇಮ್ ಸುಂದರಿ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಈ ಚುಟು ಚುಟು ಸುಂದರಿ ಬಬ್ಲಿ ಬಬ್ಲಿ ಪಾತ್ರಗಳಲ್ಲಿ ಮಿಂಚಿದ್ದೇ ಹೆಚ್ಚು. ಮದಗಜದಲ್ಲಿ ಟ್ರೆಡಿಷನಲ್ ಸುಂದರಿಯಾಗಿಯೂ ವ್ಹಾವ್ ಎನಿಸಿದ್ದ ಚೆಲುವೆಯನ್ನು ದೇವಕನ್ನಿಕೆ ಮಾಡಲು ಹೊರಟಿದ್ದಾರೆ ಸಿಂಪಲ್ ಸುನಿ.

  ಸಿಂಪಲ್ ಸುನಿ ನಿರ್ದೇಶನದ ಹೊಸ ಸಿನಿಮಾ ಗತವೈಭವ ಚಿತ್ರದಲ್ಲಿ ಅಶಿಕಾ ರಂಗನಾಥ್ ದೇವಕನ್ನಿಕೆಯ ಪಾತ್ರ ಮಾಡುತ್ತಿದ್ದಾರೆ. ನನ್ನ ಚಿತ್ರದ ಕಥೆ ಮತ್ತು ಪಾತ್ರಕ್ಕೆ ಅಪ್ಪಟ ಕನ್ನಡದ ಹುಡುಗಿ ಬೇಕಿತ್ತು. ಅಶಿಕಾ ಸೂಟ್ ಆಗುತ್ತಾರೆ. ಜೊತೆಗೆ ಚಿತ್ರದ ಹೀರೋ ದುಶ್ಯಂತ್. ಹೊಸಬರು. ಹೀಗಾಗಿ ಗುರುತಿಸಿಕೊಂಡಿರುವ ನಟಿಯೇ ಬೇಕಿತ್ತು. ಅಶಿಕಾ ರಂಗನಾಥ್ ಅವರಿಗೆ ದೇವಕನ್ನಿಕೆಯ ಪಾತ್ರಕ್ಕೆ ಸೂಟ್ ಆಗಬಲ್ಲ ಸೌಂದರ್ಯ ಮತ್ತು ಪ್ರತಿಭೆ ಎರಡೂ ಇದೆ ಎಂದಿದ್ದಾರೆ ಸುನಿ. ಸುನಿ ಜೊತೆ ಇದು ಅಶಿಕಾ ಅವರಿಗೆ 3ನೇ ಸಿನಿಮಾ. ಅವತಾರ ಪುರುಷ ಭಾಗ 1 ಮತ್ತು ಭಾಗ 2ರಲ್ಲಿ ಈಗಾಗಲೇ ಸುನಿ ಜೊತೆ ಕೆಲಸ ಮಾಡಿದ್ದಾರೆ. ದೇವಕನ್ನಿಕೆಯ ಲುಕ್ ಈ ದಿನ ಬಿಡುಗಡೆಯಾಗುತ್ತಿದೆ.

 • ಹೆಸರಷ್ಟೇ ರ್ಯಾಂಬೋ.. ಉಳಿದಂತೆ ಎಲ್ಲವೂ ಹೊಸದು

  this rambo is beyond differnt

  ಚುಟು ಚಟು ಅನ್ನಿಸುತ್ತಾ ತೆರೆಗೆ ರೆಡಿಯಾಗಿರುವ ಸಿನಿಮಾ ರ್ಯಾಂಬೋ 2. ಇದು ರ್ಯಾಂಬೋ ಚಿತ್ರದ ಮುಂದುವರಿದ ಭಾಗಾನಾ..? ಈ ಚಿತ್ರದಲ್ಲೂ ಹಂದಿ ಇರುತ್ತಾ..? ಹೀರೋ ಕಾರ್ ಬ್ರೋಕರ್ ಆಗಿರ್ತಾನಾ..? ಹೀಗೆ ಹಲವು ಪ್ರಶ್ನೆಗಳು ಮೂಡೋಕೆ ಕಾರಣ, ಚಿತ್ರದ ಟೈಟಲ್‍ನಲ್ಲೇ ರ್ಯಾಂಬೋ ಇರೋದು. ಆದರೆ, ಚಿತ್ರದ ಸಹನಿರ್ಮಾಪಕರೂ ಅಗಿರುವ ತರುಣ್ ಸುಧೀರ್ ಕ್ಲಿಯರ್ರಾಗಿ ಹೇಳಿಬಿಟ್ಟಿದ್ದಾರೆ. ಹೆಸರೊಂದು ಬಿಟ್ಟು, ಮಿಕ್ಕ ಎಲ್ಲವೂ ಹೊಸದು ಅಂತಾ.

  ರ್ಯಾಂಬೋ 2 ಸಿನಿಮಾದಲ್ಲಿರೋದು ಕಾಮಿಡಿ ಥ್ರಿಲ್ಲರ್. ರೋಡ್ ಸಿನಿಮಾ. ಸಿನಿಮಾದ ಶೇ.80ರಷ್ಟು ಕಥೆ, ಜರ್ನಿಯಲ್ಲಿಯೇ ನಡೆಯುತ್ತೆ ಅಂತಾರೆ ತರುಣ್ ಸುಧೀರ್. ರ್ಯಾಂಬೋ ಸಿನಿಮಾ ಕೂಡಾ ಕಾಮಿಡಿ ಥ್ರಿಲ್ಲರ್ ಆಗಿತ್ತು. ಪ್ರೇಕ್ಷಕರನ್ನು ನಕ್ಕು ನಲಿಸಿತ್ತು. ಶರಣ್‍ರನ್ನು ಸ್ಟಾರ್ ಮಾಡಿತ್ತು. ಈಗ ಮತ್ತೊಮ್ಮೆ ಬರುತ್ತಿದೆ ರ್ಯಾಂಬೋ ಟೀಂ. ಶರಣ್‍ರನ್ನು ಸೂಪರ್‍ಸ್ಟಾರ್ ಮಾಡುತ್ತಾ..?

 • ಹೇಗಿದ್ದಾನೆ ತಾಯಿಗೆ ತಕ್ಕ ಮಗ..? - ಸ್ಟಾರ್‍ಗಳ ವಿಮರ್ಶೆ ಇದು

  stars review thayige thakka maga

  ತಾಯಿಗೆ ತಕ್ಕ ಮಗ. ಪಕ್ಕಾ ಕಮರ್ಷಿಯಲ್ ಎಂಟರ್‍ಟೈನರ್ ಸಿನಿಮಾ. ನಿರ್ದೇಶಕ ಶಶಾಂಕ್, ಇದೇ ಮೊದಲ ಬಾರಿಗೆ ನಿರ್ಮಾಣ ಮಾಡಿರುವ ಸಿನಿಮಾ, ಬಾಕ್ಸಾಫೀಸ್‍ನಲ್ಲಿ ಭರ್ಜರಿ ಸದ್ದು ಮಾಡುತ್ತಿದೆ. ಅಜಯ್ ರಾವ್‍ರ ಮಾಸ್ ಆ್ಯಕ್ಷನ್, ಸುಮಲತಾರ ಕಣ್ಣುಗಳಲ್ಲಿನ ಕಿಡಿ, ಅಶಿಕಾರ ಅದ್ಭುತ ಸೌಂದರ್ಯ ಪ್ರೇಕ್ಷಕರನ್ನು ಮೋಡಿ ಮಾಡಿದೆ. ಚಿತ್ರವನ್ನು ನೋಡಿದ ಸ್ಟಾರ್‍ಗಳು ಚಿತ್ರದ ಬಗ್ಗೆ ತಮ್ಮದೇ ಅಭಿಪ್ರಾಯ ಹಂಚಿಕೊಂಡಿದ್ದಾರೆ.

  ಅಂಬರೀಷ್ : ನನಗೆ 40 ವರ್ಷಗಳ ಹಿಂದಿನ ಅಂತ ಸಿನಿಮಾ ನೆನಪಾಯ್ತು. ಆ್ಯಕ್ಷನ್ ಸೂಪರ್. ಕ್ಲೈಮಾಕ್ಸ್ ಡಿಫರೆಂಟ್ ಆಗಿದೆ. ಚಿತ್ರತಂಡ ಒಳ್ಳೆಯ ಸಿನಿಮಾ ಮಾಡಿದೆ.

  ಉಪೇಂದ್ರ : ಕನ್ನಡ ಚಿತ್ರರಂಗಕ್ಕೆ ಮತ್ತೊಬ್ಬ ಆ್ಯಕ್ಷನ್ ಹೀರೋ ಸಿಕ್ಕಿದ್ದಾರೆ. ಚಿತ್ರದ ಸ್ಟೋರಿಲೈನ್ ಚೆಂದವಾಗಿದೆ. ತಾಯಿ, ಮಗನ ಕೆಮಿಸ್ಟ್ರಿ ಚೆನ್ನಾಗಿದೆ. ಕ್ಲೈಮಾಕ್ಸ್ ಅಂತೂ ಬಹಳ ಚೆನ್ನಾಗಿದೆ.

  ಯಶ್ : ಮನರಂಜನೆ ಇಟ್ಟುಕೊಂಡೇ ಒಂದೊಳ್ಳೆ ಮೆಸೇಜ್ ಇರೋ  ಸಿನಿಮಾ ಕೊಟ್ಟಿದ್ದಾರೆ. ಅಜಯ್ ರಾವ್, ಸುಮ ಮೇಡಂ, ಅಶಿಕಾ, ಲೋಕಿ ಅಭಿನಯ ಅದ್ಭುತವಾಗಿದೆ. ಅಮ್ಮ ಮಗನ ಕಾಂಬಿನೇಷನ್ ಕೂಡಾ ಸಖತ್ ಆಗಿದೆ.

  ಅಮೂಲ್ಯ : ಅಜಯ್ ರಾವ್ ಪಾತ್ರ ನೋಡ್ತಿದ್ರೆ ನನ್ನ ಅಣ್ಣ ನೆನಪಿಗೆ ಬರ್ತಿದ್ದ. ತುಂಬಾ ಫ್ರೆಶ್ ಸಿನಿಮಾ.

  ಯಶ್ ಅಮ್ಮ : ಚಿಕ್ಕ ವಯಸ್ಸಿನಲ್ಲಿ ಯಶ್‍ಗೆ ಬೈತಾ ಇದ್ದದ್ದೆಲ್ಲ ನೆನಪಾಯ್ತು.