` ashika ranganath - chitraloka.com | Kannada Movie News, Reviews | Image

ashika ranganath

  • ಕಿಚ್ಚನ ಜೊತೆ ಚುಟು ಚುಟು ಚೆಲುವೆ

    ashika ranganath's guest appearance in kotigobba 3

    ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 3 ಚಿತ್ರದ ಹಾಡಿನಲ್ಲಿ ಚುಟು ಚುಟು ಖ್ಯಾತಿಯ ಅಶಿಕಾ ರಂಗನಾಥ್ ಕುಣಿದು ಕುಪ್ಪಳಿಸಿದ್ದಾರೆ. ಸುದೀಪ್ ಅವರ ಇಂಟ್ರೊಡಕ್ಷನ್ ಸಾಂಗ್‍ನಲ್ಲಿ ಅಶಿಕಾ ಹೆಜ್ಜೆ ಹಾಕಿದ್ದಾರೆ. ಕಂಠೀರವ ಸ್ಟುಡಿಯೋದಲ್ಲಿ ಹಾಡಿಗಾಗಿಯೇ ಅದ್ಧೂರಿ ಸೆಟ್ ಹಾಕಲಾಗಿದೆ. ಇಲ್ಲಿ ನಡೆಯುತ್ತಿರುವ ಹಾಡಿಗೆ ರಾಜು ಸುಂದರಂ ನೃತ್ಯ ನಿರ್ದೇಶನವಿದೆ.

    ಸೂರಪ್ಪ ಬಾಬು ನಿರ್ಮಾಣದ ಚಿತ್ರಕ್ಕೆ ಶಿವ ಕಾರ್ತಿಕ್ ನಿರ್ದೇಶಕ. ಈ ಹಾಡಿನ ಶೂಟಿಂಗ್ ಮುಗಿದರೆ, ಕೋಟಿಗೊಬ್ಬ 3 ಚಿತ್ರದ ಚಿತ್ರೀಕರಣ ಸಂಪೂರ್ಣ ಮುಗಿಯಲಿದೆ. ಸುದೀಪ್ ಎದುರು ಮಡೋನ್ನಾ ಸೆಬಾಸ್ಟಿಯನ್ ನಾಯಕಿಯಾಗಿ ನಟಿಸಿದ್ದಾರೆ. ಶ್ರದ್ಧಾ ದಾಸ್, ಅಫ್ತಾಬ್ ಶಿವದಾಸನಿ ಪ್ರಧಾನ ಪಾತ್ರಗಳಲ್ಲಿದ್ದಾರೆ.

     

  • ಕಿರುತೆರೆಗೆ ಕಾಲಿಟ್ಟಳು ಮುಗುಳುನಗೆ ಸುಂದರಿ

    ashika ranganah in a guest role

    ಮುಗುಳುನಗೆ ಸುಂದರಿ, ಚುಟು ಚುಟು ಚೆಲುವೆ ಆಶಿಕಾ ರಂಗನಾಥ್, ಕಿರುತೆರೆಗೆ ಕಾಲಿಟ್ಟಿದ್ದಾರೆ. ಸರ್ವ ಮಂಗಳ ಮಾಂಗಲ್ಯೆ ಎಂಬ ಧಾರಾವಾಹಿಯಲ್ಲಿ ನಟಿಸಲು ಓಕೆ ಎಂದಿದ್ದಾರೆ. ಅಂದಹಾಗೆ ಅದು ಪೂರ್ಣ ಪ್ರಮಾಣದ ಧಾರಾವಾಹಿಯ ಪಾತ್ರವಲ್ಲ. ಅತಿಥಿ ಪಾತ್ರವಷ್ಟೆ.

    ಧಾರಾವಾಹಿಯ ಕಥೆಗೊಂದು ಟ್ವಿಸ್ಟ್ ನೀಡುವ ಪಾತ್ರ ನನ್ನದು ಎಂದಿರುವ ಆಶಿಕಾ, ಚುಟು ಚುಟು ಹಾಡಿಗೆ ಹೆಜ್ಜೆಯನ್ನೂ ಹಾಕಿದ್ದಾರಂತೆ. ಧಾರಾವಾಹಿ ಶೂಟಿಂಗ್ ವೇಗವಾಗಿ ಮುಗಿಯುವುದನ್ನು ನೋಡಿಯೇ ಥ್ರಿಲ್ಲಾದೆ ಎನ್ನುವ ಆಶಿಕಾ ರಂಗನಾಥ್, ದಸರಾ ವೇಳೆಯ ವಿಶೇಷ ಅತಿಥಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

  • ಗರುಡನ ಅಡ್ಡಾದಲ್ಲಿ ಮೂವರು ಹೀರೋಯಿನ್ಸ್..!

    ಗರುಡನ ಅಡ್ಡಾದಲ್ಲಿ ಮೂವರು ಹೀರೋಯಿನ್ಸ್..!

    ಒಬ್ಬರು ಕಾಮ್ನಾ ಜೇಠ್ಮಲಾನಿ. ಕನ್ನಡದಲ್ಲಿ ಈ ಹಿಂದೆ ಯುಗಾದಿ, ಆಗ್ರಜ ಚಿತ್ರದಲ್ಲಿ ನಟಿಸಿದ್ದವರು.

    ಮತ್ತೊಬ್ಬರು ಐಂದ್ರಿತಾ ರೇ. ಮಗದೊಬ್ಬರು ಆಶಿಕಾ ರಂಗನಾಥ್. ಈ ಮೂವರೂ ಇರೋ ಚಿತ್ರಕ್ಕೆ ಹೀರೋ ಸಿದ್ಧಾರ್ಥ ಮಹೇಶ್. ಇದು ಗರುಡ ಚಿತ್ರದ ತಾರಾಗಣ.

    ಹೀರೋನನ್ನ ಇಬ್ಬರು ಲವ್ ಮಾಡ್ತಾರೆ. ಐಂದ್ರಿತಾ ಮತ್ತು ಆಶಿಕಾ. ಇಬ್ಬರಲ್ಲಿ ಸಿದ್ಧಾರ್ಥ ಯಾರಿಗೆ ಸಿಗ್ತಾರೆ ಅನ್ನೋದು ಗೊತ್ತಾಗೋದು ಸಿನಿಮಾ ನೋಡಿದಾಗಲೇ. ಕಾಮ್ನಾ ಜೇಠ್ಮಲಾನಿ ಹೀರೋಗೆ ಅತ್ತಿಗೆಯ ಪಾತ್ರ ಮಾಡಿದ್ದಾರೆ. ಈ ಅತ್ತಿಗೆಯ ತಂಗಿಯೇ ಆಶಿಕಾ ರಂಗನಾಥ್.

    ಹೀರೋಗೆ ಅಮ್ಮ ಇರಲ್ಲ. ಅತ್ತಿಗೆಯೇ ಎಲ್ಲ ಆಗಿರುತ್ತಾರೆ. ಆ ಅತ್ತಿಗೆಗೆ ಗೊತ್ತಾಗದಂತೆ ಮನೆಯಲ್ಲಿ ಜಗಳವಾಡುತ್ತಾ.. ಹೊರಗೆ ಲವ್ ಮಾಡೋ ಹುಡುಗನ ಪಾತ್ರ ನನ್ನದು ಎನ್ನುತ್ತಾರೆ ಸಿದ್ಧಾರ್ಥ. ಚಿತ್ರದಲ್ಲಿ ನೋಟ್ ಬ್ಯಾನ್, ಸರ್ಜಿಕಲ್ ಸ್ಟ್ರೈಕ್ ಎಲ್ಲವೂ ಇದೆ. ನಿರ್ದೇಶಕ ಧನುಕುಮಾರ್. ಚಿತ್ರದ ಕಥೆಗಾರ ಕೂಡಾ ಸಿದ್ಧಾರ್ಥ ಮಹೇಶ್ ಅವರೇ. ಶ್ರೀನಗರ ಕಿಟ್ಟಿ ಚಿತ್ರದಲ್ಲಿ ಪೊಲೀಸ್ ಆಫೀಸರ್ ಪಾತ್ರ ಮಾಡಿದ್ದಾರೆ.

  • ಚುಟು ಚುಟು ಅಂತೈತಿ.. ಸೂಪರ್ ಹಿಟ್ ಆಗೇತಿ..

    jutu jutu song becomes hit

    ಚುಟು ಚುಟು ಅಂತೈತಿ.. ಮಾಮ.. ಚುಟು ಚುಟು ಆಗೈತಿ.. ರ್ಯಾಂಬೋ 2 ಚಿತ್ರದ ಈ ಹಾಡು ಈಗ ಸೂಪರ್ ಹಿಟ್. ಎಲ್ಲೆಡೆ ವೈರಲ್ ಆಗುತ್ತಿದೆ.

    ಶರಣ್ ಹಾಗೂ ಆಶಿಕಾ ರಂಗನಾಥ್ ಅವರ ಎರ್ರಾಬಿರ್ರಿ ಡ್ಯಾನ್ಸ್ ಕೂಡಾ ಹುಚ್ಚೆದ್ದು ಕುಣಿಸುವ ಹಾಗಿದೆ. ಉತ್ತರ ಕರ್ನಾಟಕ ಭಾಷೆಯ ಶೈಲಿಯಲ್ಲೇ ಬಂದಿರುವ ಹಾಡು. 

    ಹಾಡಿನ ಸಾಹಿತ್ಯ ಮತ್ತು ಡ್ಯಾನ್ಸ್ ನೋಡುವಾಗಲೇ ಈ ಹಾಡು ಹಿಟ್ ಆಗಲಿದೆ ಎಂಬ ನಿರೀಕ್ಷೆ ಇತ್ತು ಎಂದು ಹೇಳಿದ್ದಾರೆ ಆಶಿಕಾ ರಂಗನಾಥ್.

    ಶರಣ್ ಹಾಗೂ ಆಶಿಕಾ ಅವರ ವಿಭಿನ್ನ ಡ್ಯಾನ್ಸ್ ಸ್ಟೆಪ್ಪುಗಳ ಹುಬ್ಬೇರಿಸುವಂತಿವೆ.

    ಹಾಡಿಗೆ ಕಂಪೋಸ್ ಮಾಡಿರುವುದು ಅರ್ಜುನ್ ಜನ್ಯಾ. ಹಾಡಿರುವುದು ಖ್ಯಾತಿ ಹಿಂದೂಸ್ಥಾನಿ ಗಾಯಕ ರವೀಂದ್ರ ಸೊರ್ಗಾಂವಿ ಮತ್ತು ಶಮಿತಾ ಮಲ್ನಾಡ್. ಭೂಷಣ್ ಕೊರಿಯೋಗ್ರಫಿ ಇರುವ ಹಾಡಿನಲ್ಲಿ ರಂಗು ರಂಗಿನ ಸೆಟ್ ಗಮನ ಸೆಳೆಯುತ್ತಿದೆ. ನಿರ್ದೇಶಕ ಅನಿಲ್, ಈ ಹಾಡು ಮತ್ತು ಸಿನಿಮಾ ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

     ಅಂದಂಗ ಚುಟು ಚುಟು ಆಗ್ತೇತಿ ಅಂದ್ರೇನ... ಉತ್ತರ ಕರ್ನಾಟಕ ಮಂದೀನೇ ಹೇಳ್ರಲ..

  • ಚುಟು ಚುಟು ಆಶಿಕಾಗೆ ಅಪ್ಪು ಅವಾರ್ಡ್

    ashika ranganath gets appu award

    ರ್ಯಾಂಬೋ 2 ಸಿನಿಮಾ ಸೂಪರ್ ಹಿಟ್ ಆಗಿದೆ. 50ನೇ ದಿನದತ್ತ ಚುಟುಚುಟು ಅಂತಾನೇ ಮುನ್ನುಗ್ಗುತ್ತಿದೆ. ಅಮೆರಿಕದಲ್ಲೂ ಭರ್ಜರಿ ಸದ್ದು ಮಾಡೋಕೆ ಹೊರಟಿದೆ. ಹೀಗಿರುವಾಗಲೇ ಚಿತ್ರದ ಹೀರೋಯಿನ್ ಆಶಿಕಾ ರಂಗನಾಥ್‍ಗೆ ದೊಡ್ಡದೊಂದು ಪ್ರಶಸ್ತಿಯೂ ಸಿಕ್ಕಿದೆ. ಅದು ಅಪ್ಪು ಅವಾರ್ಡ್.

    ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಸಿಕ್ಕಿದ್ದ ಪುನೀತ್ ರಾಜ್‍ಕುಮಾರ್, ಚುಟುಚುಟು ಹಾಡಿನಲ್ಲಿ ಆಶಿಕಾ ರಂಗನಾಥ್ ಅವರ ಡ್ಯಾನ್ಸ್‍ನ್ನು ಹೊಗಳಿದರಂತೆ. ಚುಟುಚುಟು ಹಾಡಿನಲ್ಲಿ ಅದ್ಭುತ ಡ್ಯಾನ್ಸ್ ಮಾಡಿದ್ದೀರ, ನಟನೆಯೂ ಚೆನ್ನಾಗಿದೆ. ನಿಮ್ಮ ಡ್ಯಾನ್ಸ್‍ನಲ್ಲಿ ಸಖತ್ ಎನರ್ಜಿ ಇದೆ ಎಂದು ಬೆನ್ನು ತಟ್ಟಿದ್ದಾರೆ ಅಪ್ಪು.

    ಚಿಕ್ಕಂದಿನಿಂದ ಅಪ್ಪು ಸಿನಿಮಾ, ಅವರ ಡ್ಯಾನ್ಸ್ ನೋಡಿಕೊಂಡೇ ಬೆಳೆದ ನನಗೆ ಈಗ ಅಪ್ಪು ಅವರಿಂದಲೇ ಮೆಚ್ಚುಗೆ ಸಿಕ್ಕಿರುವುದು ದೊಡ್ಡ ಪ್ರಶಸ್ತಿಯೇ ಸಿಕ್ಕಂತಾಗಿದೆ. ಕನ್ನಡದಲ್ಲಿ ಡ್ಯಾನ್ಸ್ ಅಂದ್ರೆ ಅಪ್ಪು, ಅಂಥಾದ್ದರಲ್ಲಿ ಅವರಿಗೇ ಇಷ್ಟವಾಯ್ತು ಅಂದ್ರೆ, ಅದಕ್ಕಿಂತ ದೊಡ್ಡ ಪ್ರಶಸ್ತಿ ಇನ್ನೇನಿದೆ.. ಚುಟುಚುಟು ಅಂತೈತಿ.. ಚುಮುಚುಮು ಆಗ್ತೈತಿ.. 

  • ಚುಟು ಚುಟು ಬ್ಯೂಟಿಗೆ ಕ್ರೇಜೀ ಟಚ್

    ashika in ravichandran's next

    ಕ್ರೇಜಿ ಸ್ಟಾರ್ ರವಿಚಂದ್ರನ್ ಚಿತ್ರಗಳಲ್ಲಿ ನಟಿಸುವುದು ಹಲವು ಹೀರೋಯಿನ್‍ಗಳ ಕನಸು. ಅದು ಈಗಲೂ ಬದಲಾಗಿಲ್ಲ. ಅವರ ನಿರ್ದೇಶನದ ಚಿತ್ರಗಳೆಂದರೆ, ನಾಯಕಿಯರು ಸದಾ ಸಿದ್ಧ. ಕಾರಣ ಇಷ್ಟೆ, ನಾಯಕಿಯರ ಚೆಲುವನ್ನು, ಸೌಂದರ್ಯವನ್ನು ರವಿಚಂದ್ರನ್‍ರಷ್ಟು ಅದ್ಭುತವಾಗಿ ತೋರಿಸಬಲ್ಲವರು ಮತ್ತೊಬ್ಬರಿಲ್ಲ. ಈಗ ಅಂತಹ ಅವಕಾಶ ಚುಟು ಚುಟು ಸ್ಟಾರ್  ಅಶಿಕಾ ರಂಗನಾಥ್ ಪಾಲಾಗಿದೆ.

    ರವಿಚಂದ್ರನ್ ನಿರ್ದೇಶನದ ಹೊಸ ಚಿತ್ರದಲ್ಲಿ ಅಶಿಕಾ ರಂಗನಾಥ್ ನಟಿಸಲಿದ್ದಾರೆ. ಕ್ಯೂಟ್ ಫೇಸ್‍ನ ಗ್ಲಾಮರಸ್ ಹುಡುಗಿ ಬೇಕಿತ್ತು. ನನ್ನ ಚಿತ್ರದ ಪಾತ್ರಕ್ಕೆ ಅಶಿಕಾ 100% ಸೂಟ್ ಆಗ್ತಾರೆ ಎಂದಿದ್ದಾರೆ ರವಿಚಂದ್ರನ್.

    ರವಿಚಂದ್ರನ್‍ರನ್ನು ಮೀಟ್ ಮಾಡಿ, ಚಿತ್ರಕ್ಕೆ ಓಕೆ ಎಂದಿರುವ ಅಶಿಕಾ ತಮ್ಮ ಡೇಟ್ಸ್‍ನ್ನು ರವಿಚಂದ್ರನ್ ಚಿತ್ರಕ್ಕಾಗಿ ಅಡ್ಜಸ್ಟ್ ಮಾಡಿಕೊಳ್ತೇನೆ ಎಂದಿದ್ದಾರೆ.

    ಸದ್ಯಕ್ಕೆ ಅಶಿಕಾ ರಂಗನಾಥ್ ಕನ್ನಡದ ಬ್ಯುಸಿ ಹೀರೋಯಿನ್‍ಗಳಲ್ಲಿ ಒಬ್ಬರು. ಶರಣ್ ಜೊತೆ ಅವತಾರ ಪುರುಷ, ಪವನ್ ಒಡೆಯರ್ ನಿರ್ದೇಶನದ ರೆಮೋ, ಪಿಸಿ ಶೇಖರ್ ನಿರ್ದೇಶನದ ಹೊಸ ಸಿನಿಮಾ, ಗರುಡ, ರಂಗಮಂದಿರ ಹೀಗೆ ಕೈತುಂಬಾ ಚಿತ್ರಗಳಿವೆ.

  • ಚುಟು ಚುಟು ಹುಡುಗಿ ಈಗ ಪಟಾಕಿ ಪೋರಿ

    ಚುಟು ಚುಟು ಹುಡುಗಿ ಈಗ ಪಟಾಕಿ ಪೋರಿ

    ಚುಟು ಚುಟು ಹಾಡಿನ ಮೂಲಕ ಫೇಮಸ್ ಆದ ಆಶಿಕಾ ರಂಗನಾಥ್ ಈಗ ಪಟಾಕಿ ಪೋರಿಯಾಗಿದ್ದಾರೆ. ಹೀರೋಯಿನ್ ಆಗಿಯೇ ಕೈಲಿ ನಾಲ್ಕೈದು ಚಿತ್ರಗಳಿವೆ. ಇದರ ನಡುವೆ ಐಟಂ ಸಾಂಗ್ ಬೇಕಿತ್ತಾ..? ಈ ಪ್ರಶ್ನೆಗೆ ಆಶಿಕಾ ಕೊಟ್ಟಿರೋ ಉತ್ತರವೇ ಪಟಾಕಿಯಂತಿದೆ.

    ನಾನು ಈ ಹಾಡಿನಲ್ಲಿ ನನ್ನ ಪಾತ್ರ ಮತ್ತು ಹಾಡಿನಲ್ಲಿ ಯಾಱರು ಇರುತ್ತಾರೆ ಎಂಬುದನ್ನು ಮೊದಲೇ ಕೇಳಿದ್ದೆ. ಸುದೀಪ್ ಸರ್ ಇರುತ್ತಾರೆ ಎಂದು ಗೊತ್ತಾಗಿಯೇ ಚಿತ್ರೀಕರಣಕ್ಕೆ ಹೋದೆ.  ಹೀರೋಯಿನ್‌ ಆಗಿದ್ದುಕೊಂಡು ಐಟಮ್‌ ಸಾಂಗ್‌ ಮಾಡಿದರು ಎಂದು ಕೆಟಗರೈಸ್‌ ಆಗೋಕೆ ಇಷ್ಟ ಇರಲಿಲ್ಲ.  ದಕ್ಷಿಣ ಭಾರತದ ಖ್ಯಾತ ನೃತ್ಯ ನಿರ್ದೇಶಕ ರಾಜು ಸುಂದರಂ ಅವರ ಕೊರಿಯೋಗ್ರಫಿಯಲ್ಲಿ ಕೆಲಸ ಮಾಡುವ ಅವಕಾಶ ಬಿಡೋದು ಹೇಗೆ..? ಇದು ನನ್ನ ಕೆರಿಯರ್ಗೆ ಹೊಡೆತ ಕೊಡುವ ಹಾಡಂತೂ ಅಲ್ಲ. ಬದಲಿಗೆ ಚುಟು ಚುಟು ಹುಡುಗಿ ಅಂತಿದ್ದ ನನ್ನನ್ನು ಈಗ ಪಟಾಕಿ ಪೋರಿ ಎನ್ನುತ್ತಿದ್ದಾರೆ ಎಂದಿದ್ದಾರೆ ಆಶಿಕಾ ರಂಗನಾಥ್.

  • ಚುಟು ಚುಟು ಹುಡುಗಿ ಹೊಗೆ ಬಿಟ್ಟಾಗ..

    ಚುಟು ಚುಟು ಹುಡುಗಿ ಹೊಗೆ ಬಿಟ್ಟಾಗ..

    ಮುಗುಳುನಗೆಯಲ್ಲೇ ಚುಟು ಚುಟು ಅನ್ನಿಸಿದ ಹುಡುಗಿ ಅಶಿಕಾ ರಂಗನಾಥ್ ಹುಟ್ಟುಹಬ್ಬದ ದಿನವೇ ಹೊಗೆ ಬಿಟ್ಟಿದ್ದಾರೆ. ಇದು ಮದಗಜ ಚಿತ್ರದ ಪೋಸ್ಟರ್. ಆಶಿಕಾ ಹುಟ್ಟುಹಬ್ಬಕ್ಕೆಂದೇ ವಿಶೇಷವಾಗಿ ರಿಲೀಸ್ ಮಾಡಿದ ಪೋಸ್ಟರ್‍ನಲ್ಲಿ ಆಶಿಕಾ ಸಿಗರೇಟು ಸೇದುತ್ತಿರೋ ಫೋಟೋ ಇದೆ.

    ಮದಗಜದಲ್ಲಿ ಆಶಿಕಾ ಹಳ್ಳಿ ಹುಡುಗಿ ಎನ್ನಲಾಗಿತ್ತು. ಅದೇ ರೀತಿಯ ಪೋಸ್ಟರ್ ಕೂಡಾ ಹೊರಬಿದ್ದಿತ್ತು. ಈಗ ಮತ್ತೊಂದು ಪೋಸ್ಟರ್. ಅದೂ 24 ಮುಗಿಸಿ, 25ಕ್ಕೆ ಕಾಲಿಟ್ಟ ವೇಳೆ ಚಿತ್ರತಂಡ ಬಿಟ್ಟಿರೋ ಪೋಸ್ಟರ್, ಮದಗಜ ಚಿತ್ರದ ಬಗ್ಗೆ ಕುತೂಹಲ ಹೆಚ್ಚಿಸಿರುವುದು ನಿಜ.

    ಮಹೇಶ್ ಕುಮಾರ್ ನಿರ್ದೇಶನದ ಚಿತ್ರಕ್ಕೆ ಉಮಾಪತಿ ಶ್ರೀನಿವಾಸ್ ಗೌಡ ನಿರ್ಮಾಪಕ. ಶ್ರೀಮುರಳಿ ಹೀರೋ ಆಗಿರೋ ಚಿತ್ರಕ್ಕೆ ಆಶಿಕಾ ಹೀರೋಯಿನ್.

  • ಚುಟು ಚುಟು ಹುಡುಗಿಗೆ ಅಪ್ಪು ಜೊತೆ ನಟಿಸುವಾಸೆ..!

    ashika ranganath expresses desire to work with puneeth rajkumar

    ಕನ್ನಡದಲ್ಲಿ ಚುಟು ಚುಟು ಹುಡುಗಿ ಅಂತಾನೇ ಫೇಮಸ್ ಆದವರು ಅಶಿಕಾ ರಂಗನಾಥ್. ಅಪ್ಪಟ ಚಿನಕುರುಳಿಯಂತೆ ಹೆಜ್ಜೆ ಹಾಕಿ, ಕನ್ನಡಿಗರ ಹೃದಯ ಗೆದ್ದ ಈ ಹುಡುಗಿ, ಸದ್ಯಕ್ಕೆ ಅವತಾರ್ ಪುರುಷ ಹಾಗೂ ರಂಗಮಂದಿರ ಚಿತ್ರಗಳಲ್ಲಿ ಬ್ಯುಸಿ. 

    ಚಿತ್ರರಂಗಕ್ಕೆ ಬಂದು 3 ವರ್ಷವಾಗಿದೆ. ಈ 3 ವರ್ಷಗಳಲ್ಲಿ ನನಗೆ ಒಳ್ಳೊಳ್ಳೆಯ ಚಿತ್ರತಂಡ, ಸಿನಿಮಾ ಸಿಕ್ಕಿದೆ. ಸಕ್ಸಸ್ ಕೂಡಾ ಸಿಕ್ಕಿದೆ ಎನ್ನುವ ಅಶಿಕಾಗೆ, ತೆಲುಗು, ತಮಿಳಿನಿಂದಲೂ ಆಫರ್‍ಗಳಿವೆಯಂತೆ. ತೆಲುಗಿನಲ್ಲಿ ಒಂದು ಸಿನಿಮಾದ ಮಾತುಕತೆ ಫೈನಲ್ ಹಂತದಲ್ಲಿದೆ. ಫೈನಲ್ ಆದ ಮೇಲೆ ಹೇಳ್ತೇನೆ ಎನ್ನುವ ಅಶಿಕಾಗೆ, ಕನ್ನಡದಲ್ಲಿ ಎಲ್ಲ ಸ್ಟಾರ್‍ಗಳ ಜೊತೆಯಲ್ಲೂ ನಟಿಸುವ ಆಸೆ ಇದೆ.

    ಎಲ್ಲ ಸ್ಟಾರ್‍ಗಳಿಗಿಂತಲೂ ಪುನೀತ್ ಮೇಲೆ ಸ್ವಲ್ಪ ಹೆಚ್ಚು ಆಸೆ. ಅಪ್ಪು ಜೊತೆ ಒಂದು ಚಿತ್ರದಲ್ಲಾದರೂ ನಟಿಸಬೇಕು ಅನ್ನೋದು. ಕಾರಣ ಸಿಂಪಲ್, ಅಶಿಕಾ ಬೇಸಿಕಲಿ ಡ್ಯಾನ್ಸರ್. ನೃತ್ಯದಲ್ಲಿ ಪಳಗಿದವರಿಗೆ ಅಪ್ಪು ಜೊತೆ ನಟಿಸಬೇಕು ಅನ್ನಿಸೋದು ಕಾಮನ್ ಬಿಡಿ.

  • ಚುಟುಚುಟು ಅಂತಾನೇ ಸಕ್ಸಸ್ 50..

    rambo 2 completes 50days

    ರ್ಯಾಂಬೋ 2. ಈ ವರ್ಷದ ಮತ್ತೊಂದು ಹಿಟ್ ಚಿತ್ರವಾಗಿ ಹೊರಹೊಮ್ಮಿದೆ. ಬಾಕ್ಸಾಫೀಸ್‍ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದ ಸಿನಿಮಾ, ಯಶಸ್ವಿಯಾಗಿ 50 ದಿನ ಪೂರೈಸಿ ಮುನ್ನುಗ್ಗುತ್ತಿದೆ. ಟಗರು ನಂತರ ಈ ವರ್ಷ ದೊಡ್ಡಮಟ್ಟದ ಸಕ್ಸಸ್ ಕಂಡ ಸಿನಿಮಾ ರ್ಯಾಂಬೋ2. ವಿದೇಶಗಳಲ್ಲಿಯೂ ಯಶಸ್ವಿಯಾಗಿರುವ ಸಿನಿಮಾ, ಶತದಿನೋತ್ಸವ ಪೂರೈಸಿದರೂ ಅಚ್ಚರಿಯಿಲ್ಲ.

    ಶರಣ್, ಆಶಿಕಾ ರಂಗನಾಥ್, ರವಿಶಂಕರ್, ಚಿಕ್ಕಣ್ಣ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ಸಿನಿಮಾಗೆ ಅನಿಲ್ ಕುಮಾರ್ ನಿರ್ದೇಶನವಿತ್ತು. ತರುಣ್ ಸುಧೀರ್ ಕ್ರಿಯೇಟಿವ್ ಹೆಡ್ ಆಗಿದ್ದರು. ತಂತ್ರಜ್ಞರೇ ನಿರ್ಮಾಪಕರಾಗಿದ್ದ ಸಿನಿಮಾ ಭರ್ಜರಿಯಾಗಿ ಗೆದ್ದಿದೆ.

    ಚಿತ್ರಲೋಕ ಡಾಟ್ ಕಾಮ್ ಮೂಲಕ ಅಭಿಮಾನಿಗಳ ಜೊತೆ ನೇರವಾಗಿ ಮಾತನಾಡಿದ ಚಿತ್ರದ ನಾಯಕ ಶರಣ್, ಚಿತ್ರವನ್ನು ಯಶಸ್ವಿಗೊಳಿಸಿದ ಎಲ್ಲರಿಗೂ ಧನ್ಯವಾದ ಅರ್ಪಿಸಿದ್ದಾರೆ.

  • ಜಸ್ಟ್ ಫಾರ್ ಚೇಂಜ್.. ಹೀರೋಯಿನ್ ಪ್ಯಾಥೊ ಸಾಂಗ್

    just for change heroine sings patho song

    ಲವ್ ಫೆಲ್ಯೂರ್ ಆದಾಗ ಹೀರೋ ವಿಷಾದ ಗೀತೆ ಹಾಡೋದು, ಪ್ಯಾಥೋ ಸಾಂಗ್‍ಗೆ ಹೆಜ್ಜೆ ಹಾಕುವುದು ಕಾಮನ್. ಆದರೆ, ಈ ರೂಲ್ಸ್‍ನ್ನೇ ಬ್ರೇಕ್ ಮಾಡಿದ್ದಾರೆ ಅಶಿಕಾ ರಂಗನಾಥ್. ಹಳೆಯ ರೂಲ್ಸ್‍ಗೆ ತಿಲಾಂಜಲಿ ಹಾಡಿಸಿರುವುದು ನಿರ್ದೇಶಕ ಪವನ್ ಒಡೆಯರ್. ರೆಮೋ ಚಿತ್ರಕ್ಕಾಗಿ. ಜಸ್ಟ್ ಫಾರ್ ಚೇಂಜ್..

    ರೇಮೋ ಚಿತ್ರದಲ್ಲಿ ಹೀರೋ ಹೆಸರು ರೇವಂತ್. ಹೀರೋಯಿನ್ ಹೆಸರು ಮೋಹನ. ಅವರಿಬ್ಬರ ಹೆಸರಿನ ಆರಂಭದ ಅಕ್ಷರಗಳೇ ಚಿತ್ರದ ಟೈಟಲ್. ಉತ್ತರ ಕನ್ನಡದ ಯಲ್ಲಾಪುರದಲ್ಲಿ ರಿಯಲ್ ಮಳೆಯಲ್ಲಿಯೇ ಹಾಡಿನ ಶೂಟಿಂಗ್ ಆಗಿದೆ. ರೇಮೋ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ.

  • ಡಿಸೆಂಬರ್ ತಿಂಗಳಲ್ಲಿ ಸ್ಯಾಂಡಲ್ವುಡ್ ಧಮಾಕಾ..!

    ಡಿಸೆಂಬರ್ ತಿಂಗಳಲ್ಲಿ ಸ್ಯಾಂಡಲ್ವುಡ್ ಧಮಾಕಾ..!

    ವರ್ಷದ ಕೊನೆಗೆ ಕನ್ನಡ ಚಿತ್ರರಂಗ ದೊಡ್ಡ ದೊಡ್ಡ ಸಿನಿಮಾಗಳ ಮೂಲಕ ಸೆನ್ಸೇಷನ್ ಸೃಷ್ಟಿಸುತ್ತಾ..? ಹೌದು ಅಂತಿದೆ ಗಾಂಧಿ ನಗರ. ಡಿಸೆಂಬರ್ನಲ್ಲಿ ಶ್ರೀಮುರಳಿ ಮತ್ತು ರಕ್ಷಿತ್ ಶೆಟ್ಟಿಯ ಸಿನಿಮಾಗಳು ರಿಲೀಸ್ ಅಗಲಿವೆಯಂತೆ.

    ಶ್ರೀಮುರಳಿಯವರ ಮದಗಜ ಚಿತ್ರ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿದೆ. ಮುರಳಿ ಎದುರು ಆಶಿಕಾ ರಂಗನಾಥ್ ನಾಯಕಿಯಾಗಿದ್ದು, ಅಯೋಗ್ಯ ಖ್ಯಾತಿಯ ಮಹೇಶ್ ಕುಮಾರ್ ಈ ಚಿತ್ರದ ನಿರ್ದೇಶಕ.

    ಇನ್ನು ರಕ್ಷಿತ್ ಶೆಟ್ಟಿ ಪಾಲಿಗೆ ಡಿಸೆಂಬರ್ ಕೊನೆಯ ವಾರ,  ಅದೃಷ್ಟದ ವಾರ ಎಂದರೆ ತಪ್ಪೇನಲ್ಲ. ಕಿರಿಕ್ ಪಾರ್ಟಿ ರಿಲೀಸ್ ಆಗಿದ್ದು ಅದೇ ವಾರ. ಅವನೇ ಶ್ರೀಮನ್ನಾರಾಯಣಕ್ಕೂ ಡಿಸೆಂಬರ್ ಲಿಂಕ್ ಇದೆ. ಈಗ ಚಾರ್ಲಿ 777 ಕೂಡಾ ಅದೇ ವಾರ ರಿಲೀಸ್ ಆಗಲಿದೆಯಂತೆ. ಸ್ವತಃ ರಕ್ಷಿತ್ ಶೆಟ್ಟಿಯೂ ನಿರ್ಮಾಪಕರಾಗಿರುವ ಚಾರ್ಲಿ 777 ಚಿತ್ರದ ಚಿತ್ರೀಕರಣ ಮುಗಿದಿದೆ. ಟ್ರೇಲರ್, ಹಾಡು ಗಮನ ಸೆಳೆಯುತ್ತಿದೆ. ಇದು ಸದ್ಯಕ್ಕೆ ಗಾಂಧಿನಗರದಲ್ಲಿ ತೇಲುತ್ತಿರುವ ಸುದ್ದಿ. ಅಧಿಕೃತ ರಿಲೀಸ್ ಡೇಟ್ ಇನ್ನೂ ಫಿಕ್ಸ್ ಆಗಬೇಕಿದೆ.

  • ತಾಯಿಗೆ ತಕ್ಕ ಮಗ ನೋಡಲು 10 ಕಾರಣಗಳು

    10 reasons to watch thayige thakka maga

    ತಾಯಿಗೆ ತಕ್ಕ ಮಗ ಚಿತ್ರ ರಿಲೀಸ್‍ಗೆ ರೆಡಿಯಾಗಿದೆ. ಶಶಾಂಕ್ ನಿರ್ದೇಶನದ ಅಜಯ್ ರಾವ್-ಸುಮಲತಾ-ಅಶಿಕಾ ರಂಗನಾಥ್ ಅಭಿನಯದ ಸಿನಿಮಾ ತೆರೆಯ ಮೇಲೆ ಬರಲು ಸಿದ್ಧವಾಗಿದೆ. ಈ ಸಿನಿಮಾ ನೋಡೋಕೆ ಕೆಲವು ವಿಶೇಷ ಕಾರಣಗಳೂ ಇವೆ.

    1. ತಾಯಿಗೆ ತಕ್ಕ ಮಗ, ಅಣ್ಣಾವ್ರ ಸೂಪರ್ ಹಿಟ್ ಸಿನಿಮಾದ ಟೈಟಲ್. ಅಣ್ಣಾವ್ರ ಸಿನಿಮಾ ಟೈಟಲ್ ಎತ್ತಿಕೊಂಡ ತಕ್ಷಣ ನಿರ್ದೇಶಕನ ಮೇಲೊಂದು ತಂತಾನೇ ಒಂದು ಜವಾಬ್ದಾರಿ ಹೆಗಲೇರುತ್ತೆ. ಅದಕ್ಕೆ ಚ್ಯುತಿ ಬಾರದಂತೆ ಚಿತ್ರ ನಿರ್ದೇಶಿಸಿದ್ದಾರೆ ಶಶಾಂಕ್.

    2. ಚಿತ್ರದಲ್ಲಿ ತಾಯಿ ಪಾತ್ರದಲ್ಲಿ ನಟಿಸಿರುವುದು ಸುಮಲತಾ ಅಂಬರೀಷ್. ಇದುವರೆಗೆ ಇಂತಹದ್ದೊಂದು ರೋಲ್ ಮಾಡಿಲ್ಲ. ರೆಬಲ್‍ಸ್ಟಾರ್ ಅಮ್ಮನಾಗಿ, ಕ್ರಾಂತಿಕಾರಿ ಲಾಯರ್ ಪಾತ್ರದಲ್ಲಿ ನಟಿಸಿದ್ದೇನೆ ಎಂದು ಖುಷಿಯಾಗಿ ಹೇಳಿಕೊಂಡಿದ್ದಾರೆ ಸುಮಲತಾ.

    3. ಅಜಯ್ ರಾವ್ ಅಭಿನಯದ 25ನೇ ಸಿನಿಮಾ ಇದು ಎನ್ನುವುದು ಒಂದು ವಿಶೇಷ. ಆದರೆ, ಸಿನಿಮಾ ಶುರುವಾಗಿ ಕೆಲವು ದಿನಗಳಾಗುವವರೆಗೆ ಇದು ತಮ್ಮ 25ನೇ ಸಿನಿಮಾ ಎನ್ನುವುದು ಅವರಿಗೇ ಗೊತ್ತಿರಲಿಲ್ಲ.

    4. ನಿರ್ದೇಶಕ ಶಶಾಂಕ್ ಬ್ಯಾನರ್‍ನ ಮೊದಲ ಸಿನಿಮಾ. ಸಿಕ್ಸರ್, ಮೊಗ್ಗಿನ ಮನಸ್ಸು, ಕೃಷ್ಣಲೀಲಾ, ಕೃಷ್ಣನ್ ಲವ್ ಸ್ಟೋರಿ, ಬಚ್ಚನ್, ಮುಂಗಾರು ಮಳೆ2.. ಹೀಗೆ ಹಿಟ್ ಚಿತ್ರಗಳನ್ನೇ ಹೆಚ್ಚು ನೀಡಿರುವ ಶಶಾಂಕ್ ಈ ಚಿತ್ರದ ನಿರ್ಮಾಪಕರೂ ಹೌದು.

    5. ಅಶಿಕಾ ರಂಗನಾಥ್, ಈ ಚಿತ್ರದಲ್ಲಿ ಗ್ಲಾಮರಸ್ಸಾಗಿ ಕಾಣಿಸಿಕೊಂಡಿದ್ದಾರೆ. ಚುಟು ಚುಟು ಹಾಡಿನಲ್ಲಿ ಮೈಚಳಿ ಬಿಡಿಸಿದ್ದ ಅಶಿಕಾ, ಈ ಚಿತ್ರದಲ್ಲಿ ಮೈ ಬಿಸಿ ಏರಿಸುವಂತೆ ಕಾಣಿಸಿಕೊಂಡಿದ್ದಾರೆ.

    6. ಚಿತ್ರದಲ್ಲಿ ನಲ್‍ಪಾಡ್ ಗ್ಯಾಂಗ್‍ನ ಪ್ರಸ್ತಾಪವೂ ಇದೆ ಎನ್ನಲಾಗಿದ್ದು, ವಿವಾದಕ್ಕೂ ಕಾರಣವಾಗಿತ್ತು. ಚಿತ್ರದಲ್ಲಿ ಆ ಘಟನೆಯ ನೆರಳು ಇದೆ ಎನ್ನುವ ಸುಳಿವಂತೂ ಕಾಣುತ್ತಿದೆ.

    7. ಅಜಯ್ ರಾವ್‍ಗೆ ಮೊದಲ ಸಿನಿಮಾದ ಅಮ್ಮ ಸುಮಲತಾ ಅಂಬರೀಷ್, 25ನೇ ಸಿನಿಮಾದಲ್ಲೂ ಅಮ್ಮನಾಗಿರುವುದು ವಿಶೇಷ. 

    8. ಅಜಯ್ ರಾವ್‍ಗೆ ಆ್ಯಕ್ಷನ್ ಹೀರೋ ಆಗಬೇಕು ಎನ್ನುವ ಕನಸಿತ್ತು. ಮಾರ್ಷಲ್ ಆಟ್ರ್ಸ್ ಕೂಡಾ ಕಲಿತಿದ್ದ ಅಜಯ್ ರಾವ್‍ಗೆ ಎಕ್ಸ್‍ಕ್ಯೂಸ್ ಮಿ ಚಿತ್ರದ ಸಾಫ್ಟ್ ಹುಡುಗನ ಪಾತ್ರ ಇಮೇಜ್ ಬದಲಿಸಿತ್ತು. ಅವರ ಕನಸು 25ನೇ ಸಿನಿಮಾದಲ್ಲಿ ಈಡೇರಿದೆ.

    9. ಶಶಾಂಕ್ ಮತ್ತು ಅಜಯ್ ರಾವ್ ಅವರದ್ದು ಹ್ಯಾಟ್ರಿಕ್ ಕಾಂಬಿನೇಷನ್. ಈ ಹಿಂದೆ ಕೃಷ್ಣನ್ ಲವ್ ಸ್ಟೋರಿ ಮತ್ತು ಕೃಷ್ಣಲೀಲಾ ಎರಡರಲ್ಲೂ ಗೆದ್ದಿರುವ ಜೋಡಿ, ಹ್ಯಾಟ್ರಿಕ್ ಜೋಡಿಯಾಗುವ ಕನಸಿನಲ್ಲಿದೆ.

    10. ತಾಯಿಗೆ ತಕ್ಕ ಮಗಕ್ಕೆ ಸಂಗೀತ ನೀಡಿರುವುದು ಜುಡಾ ಸ್ಯಾಂಡಿ. ಚಿತ್ರದ ಎಲ್ಲ ಹಾಡುಗಳೂ ಹಿಟ್ ಆಗಿವೆ. ಚಂದನ್ ಶೆಟ್ಟಿ ಹಾಡಿರುವ ಟೈಟಲ್ ಟ್ರ್ಯಾಕ್ ಸೂಪರ್ ಹಿಟ್.

  • ತಾಯಿಗೆ ತಕ್ಕ ಮಗ.. ರಿಯಲ್ ಅಮ್ಮನ ಜೊತೆ ಹೇಗಿರ್ತಾರೆ..?

    ajai rao talks about his relationship with his mother

    ತಾಯಿಗೆ ತಕ್ಕ ಮಗ.. ಸಿನಿಮಾ ರಿಲೀಸ್‍ಗೆ ರೆಡಿಯಾಗಿದೆ. ಮೋಹನ್ ದಾಸ್ ಎಂಬ ಫೈರ್‍ಬ್ರಾಂಡ್ ಪಾತ್ರದಲ್ಲಿ ಮಿಂಚಿರುವುದು ಅಜಯ್ ರಾವ್. ತಾಯಿಯಾಗಿ ನಟಿಸಿರುವುದು ಎಕ್ಸ್‍ಕ್ಯೂಸ್ ಮಿಯಲ್ಲಿ ಅಮ್ಮನಾಗಿದ್ದ ಸುಮಲತಾ ಅಂಬರೀಷ್. ಮೊದಲ ಚಿತ್ರದಲ್ಲಿ ತಾಯಿಯಾಗಿದ್ದ ಸುಮಲತಾ, 25ನೇ ಚಿತ್ರಕ್ಕೆ ಮತ್ತೊಮ್ಮೆ ಅಮ್ಮನ ಪಾತ್ರದಲ್ಲಿ ನಟಿಸಿರುವುದು ಅಜಯ್ ರಾವ್ ಖುಷಿಗೆ ಕಾರಣ.

    ಇದೆಲ್ಲದರ ಜೊತೆಗೆ ಈ ಹೆಸರು ಕೇಳಿದ ಮೇಲೆ ಅಜಯ್ ರಾವ್ ತಮ್ಮ ತಾಯಿಯ ಜೊತೆ ಹೇಗಿರ್ತಾರೆ ಅನ್ನೋ ಕುತೂಹಲ ಮೂಡೋದು ಸಹಜ. `ನಾನು ನನ್ನ ಅಮ್ಮನ ಜೊತೆ ತುಂಬಾ ಫ್ರೆಂಡ್ಲಿಯಾಗಿರುತ್ತೇನೆ. ತಮಾಷೆ ಮಾಡಿಕೊಂಡಿರುತ್ತೇನೆ. ನಿರ್ದೇಶಕ ಶಶಾಂಕ್, ಕೆಲವೊಂದು ದೃಶ್ಯಗಳಿಗೆ ನನ್ನ ಮತ್ತು ನನ್ನ ಅಮ್ಮನ ಜೊತೆ ಒಡನಾಟದ ಕೆಲವು ಅಂಶಗಳನ್ನು ಮಿಕ್ಸ್ ಮಾಡಿದ್ದಾರೆ'' ಎಂದಿದ್ದಾರೆ ಅಜಯ್ ರಾವ್.

    ಅಜಯ್ ರಾವ್ ಅವರ ತಾಯಿ ಸಿನಿಮಾವನ್ನು ನೋಡಿ ತುಂಬಾ ಭಾವುಕರಾಗಿದ್ದರಂತೆ. ಸಿನಿಮಾ ನೋಡಿದ ಮೇಲೆ ಕೆಲವು ಗಂಟೆಗಳ ಯಾರೊಂದಿಗೂ ಮಾತನಾಡದೆ ಮೌನವಾಗಿ ಕುಳಿತುಬಿಟ್ಟಿದ್ದರಂತೆ. ಅಷ್ಟರಮಟ್ಟಿಗೆ ಸಿನಿಮಾ ಭಾವನಾತ್ಮಕವಾಗಿ ಮೂಡಿ ಬಂದಿದೆ.

    ಸೆಂಟಿಮೆಂಟ್ ಮತ್ತು ಕಮರ್ಷಿಯಲ್ ಎರಡೂ ಜಾನರ್‍ಗಳಲ್ಲಿ ಸಕ್ಸಸ್ ಕಂಡಿರುವ ನಿರ್ದೇಶಕ ಶಶಾಂಕ್ ಅವರ ಬ್ಯಾನರ್‍ನ ಮೊದಲ ಸಿನಿಮಾ ಇದು. ಅಜಯ್ ರಾವ್ ಜೊತೆ ಶಶಾಂಕ್ ಹ್ಯಾಟ್ರಿಕ್ ನಿರೀಕ್ಷೆಯಲ್ಲಿದ್ದರೆ, ಅಶಿಕಾ ರಂಗನಾಥ್ ಮತ್ತೊಂದು ಗೆಲುವಿನ ಕನಸಿನಲ್ಲಿದ್ದಾರೆ.

  • ತಾಯಿಗೆ ತಕ್ಕ ಮಗ'ದಲ್ಲಿ ನಲ್‍ಪಾಡ್ ಕೇಸ್ ನೆರಳು

    thayige thakka maga is based on true event

    ನಲ್‍ಪಾಡ್ ಗಲಾಟೆ.. ಈ ವರ್ಷ ಚುನಾವಣೆ ಹೊತ್ತಿನಲ್ಲಿ ರಾಜ್ಯಾದ್ಯಂತ ಸದ್ದು ಮಾಡಿದ್ದ ಸುದ್ದಿ. ಕಾಂಗ್ರೆಸ್ ಶಾಸಕ ಹ್ಯಾರಿಸ್‍ರ ಮಗ ನಲ್‍ಪಾಡ್, ರೆಸ್ಟೋರೆಂಟ್‍ವೊಂದರಲ್ಲಿ ಅಮಾಯಕ ಯುವಕರ ಮೇಲೆ ಮನಸೋ ಇಚ್ಚೆ ಹಲ್ಲೆ ಮಾಡಿದ್ದ. ಆ ಘಟನೆಯ ನೆರಳು ತಾಯಿಗೆ ತಕ್ಕ ಮಗ ಚಿತ್ರದಲ್ಲಿದೆಯಾ..? ಈ ಕುರಿತು ನಿರ್ದೇಶಕ ಶಶಾಂಕ್ ನೇರ ಉತ್ತರ ಹೇಳೋದಿಲ್ಲ. ಬಹುಶಃ ಸಿನಿಮಾ ಬಿಡುಗಡೆಗೆ ಮೊದಲು ವಿವಾದವಾಗುವುದು ಅವರಿಗೆ ಇಷ್ಟವೂ ಇರಲಿಲ್ಲ. ಈಗ ಚಿತ್ರ ತೆರೆಗೆ ಬಂದಿದೆ.

    ಚಿತ್ರದ ಟ್ರೇಲರ್ ನೋಡಿದವರಿಗೆ ನಲ್‍ಪಾಡ್ ಕೇಸ್‍ನ ನೆರಳು ಚಿತ್ರದಲ್ಲಿದೆಯಾ ಎಂಬ ಪ್ರಶ್ನೆ ಮೂಡದೇ ಇರದು. ರಾಜಕಾರಣಿ ಮತ್ತು ಅವರ ಕುಟುಂಬದವರು ಜನಸಾಮಾನ್ಯರ ಮೇಲೆ ನಡೆಸುವ ದಬ್ಬಾಳಿಕೆ, ಕ್ರೌರ್ಯದ ಹಲವು ನೈಜ ಘಟನೆಗಳು ಈ ಚಿತ್ರಕ್ಕೆ ಪ್ರೇರಣೆ ಎನ್ನುತ್ತಾರೆ ಶಶಾಂಕ್.

    ಜನಸಾಮಾನ್ಯರಲ್ಲಿ ಇಂತಹ ವರ್ತನೆ ಮಾಡುವವರ ವಿರುದ್ಧ ಆಕ್ರೋಶ ಭುಗಿಲೆದ್ದಿರುತ್ತೆ. ಅಂತಹ ಆಕ್ರೋಶದ ರೂಪವೇ ತಾಯಿಗೆ ತಕ್ಕ ಮಗ.

    ರೆಬಲ್‍ಸ್ಟಾರ್ ಪತ್ನಿ ಸುಮಲತಾ ಅಂಬರೀಷ್, ಇಲ್ಲಿ ರೆಬಲ್ ಅಮ್ಮ. ಮಗ ಅಜಯ್ ರಾವ್ ಪಾತ್ರ, ಹಳೆಯ ಸಿನಿಮಾದ ರೆಬಲ್‍ಸ್ಟಾರ್‍ರನ್ನು ನೆನಪಿಸಿದರೆ ಅಚ್ಚರಿ ಪಡಬೇಡಿ. ಅಶಿಕಾ ರಂಗನಾಥ್.. ಚಳಿಗಾಲವನ್ನು ಬೆಚ್ಚಗಾಗಿಸುವಂತೆ ನಟಿಸಿದ್ದಾರೆ. ನಿರ್ದೇಶಕ ಶಶಾಂಕ್ ನಿರ್ಮಾಣದ ಮೊದಲ ಸಿನಿಮಾ ಈಗ ತೆರೆಯ ಮೇಲಿದೆ.

  • ತಾಯಿಗೆ ತಕ್ಕ ಮಗನಿಗೆ ಜೋಡಿ ಸಿಕ್ಕಳು..

    thayige thakka maga

    ತಾಯಿಗೆ ತಕ್ಕ ಮಗ. ನಿರ್ದೇಶಕ ಶಶಾಂಕ್ ನಿರ್ಮಾಣದ ಮೊದಲ ಚಿತ್ರ. ಅಜೇಯ್ ರಾವ್, ಸುಮಲತಾ ಅಂಬರೀಷ್ ನಟಿಸುತ್ತಿರುವ ಚಿತ್ರಕ್ಕೆ ನಾಯಕಿಯ ಆಯ್ಕೆಯೇ ದೊಡ್ಡ ಸವಾಲಾಗಿ ಹೋಗಿತ್ತು. 150ಕ್ಕೂ ಹೆಚ್ಚು ಆರ್ಟಿಸ್ಟ್‍ಗಳ ಅಡಿಷನ್ ಮಾಡಿದ್ದ ಶಶಾಂಕ್‍ಗೆ ನಾಯಕಿಯೇ ಸಿಕ್ಕಿರಲಿಲ್ಲ. ಎಲ್ಲೆಲ್ಲೋ ಹುಡುಕಾಡಿದ್ದ ಶಶಾಂಕ್, ಆಶಿಕಾ ರಂಗನಾಥ್ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಿದ್ದಾರೆ.

    ಕ್ರೇಜಿಬಾಯ್ ಮೂಲಕ ಬೆಳ್ಳಿತೆರೆಗೆ ಬಂದ ಹುಡುಗಿ, ನಂತರ ಮುಗುಳುನಗೆ, ರಾಜು ಕನ್ನಡ ಮೀಡಿಯಂ ಚಿತ್ರದಲ್ಲಿ ನಟಿಸಿದ್ದರು. ಶರಣ್ ಜೊತೆ ರ್ಯಾಂಬೋ-2 ಚಿತ್ರದಲ್ಲಿ ನಟಿಸುತ್ತಿರುವ ಆಶಿಕಾ ರಂಗನಾಥ್, ಈಗ ತಾಯಿಗೆ ತಕ್ಕ ಮಗನ ಜೋಡಿಯಾಗಿದ್ದಾರೆ.

    ಶಶಾಂಕ್ ಚಿತ್ರಗಳಲ್ಲಿ ನಾಯಕಿಯರೆಂದರೆ ಗ್ಲಾಮರ್ ಗೊಂಬೆಗಳಾಗಿರುವುದಿಲ್ಲ. ಅಭಿನಯಕ್ಕೆ ಅವಕಾಶ ಇದ್ದೇ ಇರುತ್ತೆ. ಆಶಿಕಾ ಅವರಿಂದ ನನ್ನ ಚಿತ್ರದ ಪಾತ್ರಕ್ಕೆ ನ್ಯಾಯ ಸಿಗಲಿದೆ ಎಂಬ ಭರವಸೆ ನನಗಿದೆ. ಆಶಿಕಾ ಅವರಲ್ಲಿ ಪ್ರತಿಭೆ ಮತ್ತು ಸೌಂದರ್ಯ ಎರಡೂ ಇದೆ ಎಂದಿದ್ದಾರೆ ಶಶಾಂಕ್.

    ಚಿತ್ರದಲ್ಲಿ ಆಶಿಕಾ ರೆಬಲ್ ನಾಯಕನ ಎದುರು ಸೌಮ್ಯ ಸ್ವಭಾವದ ಹುಡುಗಿಯ ಪಾತ್ರ ಮಾಡುತ್ತಿದ್ದಾರೆ. ಸುಮಲತಾ ಅವರ ಎದುರು ನಟಿಸುತ್ತಿರುವುದೇ ಥ್ರಿಲ್ ಆಗಿದೆ ಎಂದಿದ್ದಾರೆ ಆಶಿತಾ.  ವೇದ್‍ಗುರು ನಿರ್ದೇಶಿಸುತ್ತಿರುವ ಚಿತ್ರದಲ್ಲಿ ಅಜೇಯ್ ರಾವ್ ನಾಯಕ. ಅಜೇಯ್ ರಾವ್ ತಾಯಿಯಾಗಿ ಸುಮಲತಾ ನಟಿಸುತ್ತಿದ್ದಾರೆ.

    Related Articles :-

    ತಾಯಿಗೆ ತಕ್ಕ ಮಗ ನಿರ್ದೇಶಕ ಬದಲು

    ‘ತಾಯಿಗೆ ತಕ್ಕ ಮಗ’ ಚಿತ್ರಕ್ಕೆ ಜುಡಾ ಸ್ಯಾಂಡಿ ಸಂಗೀತ

    Thayige Thakka Maga by Shashank - Exclusive

     

     

  • ತೆಲುಗಿಗೆ ಮದಗಜ.. ನಂತರ..?

    ತೆಲುಗಿಗೆ ಮದಗಜ.. ನಂತರ..?

    ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಅದ್ಧೂರಿ ಸಿನಿಮಾ ಮದಗಜ ಸಿನಿಮಾ ಕನ್ನಡದಲ್ಲಷ್ಟೇ ಅಲ್ಲ, ತೆಲುಗಿಗೂ ನುಗ್ಗುತ್ತಿದೆ. ಕೆಜಿಎಫ್ ಚಾಪ್ಟರ್ 2, ಯುವರತ್ನದ ಹಿಂದೆಯೇ ಮದಗಜ ಕೂಡಾ ತೆಲುಗಿನಲ್ಲಿ ರಿಲೀಸ್ ಆಗೋಕೆ ಸಿದ್ಧವಾಗಿದೆ.

    ಜನವರಿ 1ರ ಹೊಸ ವರ್ಷದ ದಿನ ಮದಗಜ, ರೋರಿಂಗ್ ಮದಗಜ ಟೈಟಲ್‍ನಲ್ಲಿ ತೆಲುಗಿನವರಿಗೆ ಪರಿಚಯವಾಗಲಿದೆ. ತೆಲುಗಿನಲ್ಲಿ ಆ ದಿನ ಟೀಸರ್ ಲಾಂಚ್.

    ಮಹೇಶ್ ಕುಮಾರ್ ನಿರ್ದೇಶನದ ಮದಗಜ ಚಿತ್ರಕ್ಕೆ ಉಮಾಪತಿ ನಿರ್ಮಾಪಕ. ಅಶಿಕಾ ರಂಗನಾಥ್ ನಾಯಕಿ. ಕ್ರಿಸ್‍ಮಸ್ ದಿನ ತೆಲುಗಿನ ಪೋಸ್ಟರ್ ಲಾಂಚ್ ಮಾಡಲಾಗಿದ್ದು, ಹೊಸ ವರ್ಷದ ದಿನ ಬೆಳಗ್ಗೆ 10 ಗಂಟೆ 10 ನಿಮಿಷಕ್ಕೆ ಆನಂದ್ ಆಡಿಯೋ ಯೂ ಟ್ಯೂಬ್ ಚಾನೆಲ್‍ನಲ್ಲಿ ಟೀಸರ್ ಲಾಂಚ್ ಆಗಲಿದೆ.

    ಅಷ್ಟೇ ಅಲ್ಲ, ತೆಲುಗಿನ ನಂತರ ತಮಿಳು, ಹಿಂದಿ, ಮಲಯಾಳಂನಲ್ಲೂ ಸಿನಿಮಾ ರಿಲೀಸ್ ಆಗಲಿದೆ. ಸದ್ಯಕ್ಕೆ ತೆಲುಗಿನ ಟೀಸರ್ ಲಾಂಚ್ ಆಗಲಿದೆ ಎನ್ನುತ್ತಾರೆ ನಿರ್ದೇಶಕ ಮಹೇಶ್. ಈಗಾಗಲೇ ಚಿತ್ರದ ಶೇ.80ರಷ್ಟು ಚಿತ್ರೀಕರಣ ಮುಗಿದಿದ್ದು, ಇನ್ನು 20% ಶೂಟಿಂಗ್ ಆದರೆ ಪೋಸ್ಟ್ ಪ್ರೊಡಕ್ಷನ್ ಕೆಲಸ ಶುರುವಾಗಲಿದೆ. ಏಪ್ರಿಲ್ ಅಥವಾ ಮೇ ಹೊತ್ತಿಗೆ ಥಿಯೇಟರಿಗೆ ಬರುತ್ತೇವೆ ಎನ್ನುವುದು ಮಹೇಶ್ ಮಾತು.

  • ಪವನ್ ಸಿನಿಮಾಗೆ ಚುಟುಚುಟು ಚಕೋರಿ

    ashika ranganath roped in for pavan wadeyar's role

    ಪವನ್ ಒಡೆಯರ್, ನಟಸಾರ್ವಭೌಮ ನಂತರ ಇಶಾನ್ ನಾಯಕತ್ವದ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳುತ್ತಿರುವುದು ಗೊತ್ತಿದೆಯಷ್ಟೇ. ನಿರ್ಮಾಪಕ ಸಿ.ಆರ್. ಮನೋಹರ್ ಸಂಬಂಧಿ ಇಶಾನ್ ಚಿತ್ರಕ್ಕೆ ಹೀರೋ.

    ಗೂಗ್ಲಿ ನಂತರ ಮತ್ತೊಮ್ಮೆ ಲವ್ ಸಬ್ಜೆಕ್ಟ್ ಎತ್ತಿಕೊಂಡಿರುವ ಪವನ್ ಒಡೆಯರ್, ಚಿತ್ರಕ್ಕೆ ಹೀರೋಯಿನ್ ಆಗಿ ಆಶಿಕಾ ರಂಗನಾಥ್ ಅವರನ್ನು ಸೆಲೆಕ್ಟ್ ಮಾಡಿದ್ದಾರೆ.

    ಜುಲೈ ಅಂತ್ಯಕ್ಕೆ ಸಿನಿಮಾ ಶುರುವಾಗಲಿದ್ದು, ಸಿ.ಆರ್.ಮನೋಹರ್ ಅವರೇ ಬಂಡವಾಳ ಹೂಡಲಿದ್ದಾರೆ. ಇದೊಂದು ಫ್ರೆಶ್ ಲವ್‍ಸ್ಟೋರಿ, ಒಂದೊಂದು ದೃಶ್ಯವೂ ರೊಮ್ಯಾಂಟಿಕ್ ಆಗಿ ಮೂಡಿ ಬರಲಿದೆ ಎನ್ನುವುದು ಪವನ್ ಒಡೆಯರ್ ಭರವಸೆ.

  • ಪ್ರೇಮಿಗಳ ಪ್ರೀತಿ-ಸೇಡು-ದ್ವೇಷ-ಸಂಗೀತದ ಕಥೆ ರೇಮೋ

    ಪ್ರೇಮಿಗಳ ಪ್ರೀತಿ-ಸೇಡು-ದ್ವೇಷ-ಸಂಗೀತದ ಕಥೆ ರೇಮೋ

    ಅವಳು ಮೋಹನ. ಹೊಸ ಮ್ಯೂಸಿಕಲ್ ಸೆನ್ಸೇಷನ್. ಪ್ರೀತಿಸಿದವನ ಮೇಲೆ ಸೇಡು ತೀರಿಸಿಕೊಳ್ಳುವುದಕ್ಕಾಗಿಯೇ ಸ್ಟಾರ್ ಸಿಂಗರ್ ಆಗುತ್ತಾಳೆ. ಅವನು ರೇವಂತ್. ಫೈಟು-ದುಶ್ಚಟಗಳ ಮಧ್ಯೆಯೇ ಮೋಹನಳ ಪ್ರೀತಿಗೆ ಹಂಬಲಿಸುವವನು. ಆದರೆ.. ಅವರಿಬ್ಬರ ಮಧ್ಯೆ ಪ್ರೀತಿಯೋ.. ದ್ವೇಷವೋ.. ಏನೋ ಒಂದು ಆಗಿದೆ. ಇಬ್ಬರೂ ಸೇಡಿಗೆ ಬಿದ್ದವರಂತೆ ಹೊರಡುತ್ತಾರೆ. ಅವರಿಬ್ಬರ ಮಧ್ಯೆ ಪ್ರೀತಿ-ಸೇಡು-ದ್ವೇಷ ಸರಸರನೆ ಸರಿದಾಡುತ್ತಿರುತ್ತದೆ. ಇಬ್ಬರೂ ಬಳಸೋ ಆಯುಧ ಒಂದೇ. ಅದು ಪ್ರೀತಿ. ರೇಮೋ ಚಿತ್ರದ ಟ್ರೇಲರ್ ನೋಡಿದವರಿಗೆ ಪ್ರೀತಿಯೂ ಅಸ್ತ್ರವಾಗುತ್ತದೆ ಎನ್ನುವುದೇ ಅಚ್ಚರಿ. ಆ ಅಚ್ಚರಿಯನ್ನು ಮೂಡಿಸಿಯೇ ಕುತೂಹಲ ಹುಟ್ಟಿಸುತ್ತಾರೆ ಪವನ್ ಒಡೆಯರ್.

    ಇಶಾನ್-ಆಶಿಕಾ ರಂಗನಾಥ್ ಮುದ್ದು ಮುದ್ದಾದ ಜೋಡಿ ಗಮನ ಸೆಳೆಯುತ್ತದೆ. ಅಹಂಕಾರ ತೋರಿಸುವಲ್ಲಿ, ಫೈಟುಗಳಲ್ಲಿ, ಪ್ರೀತಿಗಾಗಿ ಹಂಬಲಿಸುವಲ್ಲಿ.. ಇಶಾನ್ ಗಮನ ಸೆಳೆದರೆ ಮುಗ್ಧತೆಯಿಂದ, ಪ್ರೀತಿಗಾಗಿ ಸೇಡಿಗಾಗಿ ಹಂಬಲಿಸುವ ಹುಡುಗಿಯಾಗಿ ಕಣ್ಣುಗಳಲ್ಲೇ ಕಿಚ್ಚು ಹಚ್ಚುತ್ತಾರೆ ಆಶಿಕಾ ರಂಗನಾಥ್.

    ಅರ್ಜುನ್ ಜನ್ಯಾ ಮ್ಯೂಸಿಕ್ ಮತ್ತೊಂದು ಮೆರವಣಿಗೆ ಹೊರಟಿರುವ ಸೂಚನೆ ಇದೆ. ಸಿ.ಆರ್. ಮನೋಹರ್ ನಿರ್ಮಾಣದ ಚಿತ್ರ ನವೆಂಬರ್ 25ಕ್ಕೆ ಬಿಡುಗಡೆಯಾಗುತ್ತಿದೆ. ಶಿವಣ್ಣ ಟ್ರೇಲರ್ ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.

  • ಬಾಕ್ಸಾಫೀಸ್‍ನಲ್ಲಿ ಚುಟುಚುಟು ಅಂತೈತಿ..

    rambo 2 rocks at box office

    ಶರಣ್ ಅಭಿನಯದ ರ್ಯಾಂಬೋ 2 ಸಿನಿಮಾ ಬಾಕ್ಸ್‍ಆಫೀಸ್‍ನಲ್ಲಿ ಚುಟುಚುಟು ಅಂತಿದೆ. ಹಾಡಿನಷ್ಟೇ ಮೋಡಿ ಮಾಡಿರೋದು ಸಿನಿಮಾ. ಥಿಯೇಟರುಗಳಲ್ಲಿ ಹೌಸ್‍ಫುಲ್ ಪ್ರದರ್ಶನ ಕಾಣುತ್ತಿದೆ. ಮೊದಲ ವಾರದಲ್ಲೇ 5 ಕೋಟಿಗೂ ಹೆಚ್ಚು ಗಳಿಕೆ ಮಾಡಿದೆಯಂತೆ. 

    ರ್ಯಾಂಬೋದಂತೆಯೇ ರ್ಯಾಂಬೋ 2 ಕೂಡಾ ಭರ್ಜರಿ ಸದ್ದು ಮಾಡುತ್ತಿದೆ.

    ಹೀಗೆ ರಾಜ್ಯಾದ್ಯಂತ ಅದ್ಭುತ ಪ್ರದರ್ಶನ ಕಾಣುತ್ತಿರುವಾಗಲೇ ರ್ಯಾಂಬೋ 2, ಅಮೆರಿಕ, ಆಸ್ಟ್ರೇಲಿಯಾದಲ್ಲಿ ರಿಲೀಸ್ ಆಗುತ್ತಿದೆ. ಜೂನ್ 2ರಂದು ವಿದೇಶದಲ್ಲಿ ಬಿಡುಗಡೆಯಾಗುತ್ತಿರುವ ಚಿತ್ರ, ಈ ವರ್ಷದ ಬಿಗ್ ಹಿಟ್ ಆಗುವ ಎಲ್ಲ ಸೂಚನೆಗಳೂ ಇವೆ. 

    ಶರಣ್, ಅಶಿಕಾ ರಂಗನಾಥ್ ನಟಿಸಿರುವ ಚಿತ್ರ, ತಂತ್ರಜ್ಞರೇ ನಿರ್ಮಿಸಿರುವ ಸಿನಿಮಾ. ಶರಣ್, ಚಿಕ್ಕಣ್ಣ, ಅಟ್ಲಾಂಟ ನಾಗೇಂದ್ರ, ಅರ್ಜುನ್ ಜನ್ಯ ಸೇರಿದಂತೆ ಹಲವರು ನಿರ್ಮಾಪಕರಾಗಿರುವ ಚಿತ್ರ ರ್ಯಾಂಬೋ2. ಈ ಇಡೀ ತಂಡವನ್ನು ಒಗ್ಗೂಡಿಸಿರುವುದು ತರುಣ್ ಸುಧೀರ್. ತಂತ್ರಜ್ಞರ ಚಿತ್ರದ ಅದ್ಬುತ ಗೆಲುವು, ಚಿತ್ರರಂಗದ ಉತ್ಸಾಹ ಹೆಚ್ಚಿಸಿರೋದು ಸುಳ್ಳಲ್ಲ.