` ashika ranganath - chitraloka.com | Kannada Movie News, Reviews | Image

ashika ranganath

  • Raambo Chuttu Chuttu Video Song Crosses 100 Million Views

    Raambo 2 Image

    The Chuttu Chuttu video song from Raambo 2 movie released in March 2018 on the official Anand Audio's YouTube channel, has crossed 100,005,822 views becoming the first ever Kannada video song to do so on the social media platform.

    Performed by playback singers - Ravindra Soragavi and Shamitha Malnad, the song is penned by Shivu Bergi for the composition of magical composer Arjun Janya. The popular foot tapping number is choreographed by Bhushan featuring Sharan and Ashika Ranganath.

    The comedy thriller directed by Anil Kumar is produced by Sharan G K and Atlanta Nagendra under Ladoo Cinema House and De Arte Studios. The team even comprises of popular director Tharun Kishore Sudhir as its creative head.

  • Rambo 2 Movie Review, Chitraloka Rating 3.5/5

    rambo 2 movie review

    Six years after Rambo, Sharan and Atlanta Nagendra and the rest of the team is back together for the sequel. Raambo 2 is an amazing film that mixes mystery and thriller with comedy and emotional drama. It is over two hours of an entertaining journey. However there is no connection with the original film in terms of story or characters. It is something new which has a connection in the form of a car playing an important role. 

    Sharan plays Krishna aka Krish. From childhood, he always seeks variety in all the things he does. So his parents have to change homes and home towns often. Finally he is seen as a grown up in Goa where he is a car mechanic. His last aim in life is to find the girl of his dreams. But there is no one that matches his ideas. Finally he meets the girl of his dream and before proposing to her wants to go on a one-day road trip with her. The fun joy trip suddenly turns out to be a nightmare as he and the girl and another person have to race for their lives literally. 

    The suspense is revealed only towards the end and there is a small emotional story that is added to the film. The film starts as a fun ride. When Devanahalli Jayanna aka DJ played by Chikkanna joins the couple on the ride, it turns out to be a full-fledged comedy show. Brilliant jokes with superb dialogues makes it a very fun film to watch. There are also some very good songs in the film. Arjun Janya has managed to give his best to the film. 

    In the second half there is a surprising package of a thrilling character. The introduction of this brilliant character changes the dynamics of the film. Credit should be given to the director for coming up with such a story which gives importance to not only the characters but also minute details. Ravishnakar's entry to the film post interval is an amazing experiment with screenplay. 

    There is so much work done behind the scenes in Raambo 2. Superb music, amazing photography, good editing, colourful artwork and choreography catches your eyes. The acting by the four main actors, Sharan, Ashika, Chikkanna and Ravishankar is amazing. Sharan combines comedy with all kinds of emotions. Ashika as an eye candy matches the requirement with her intensity and charming screen presence. Chikkanna steals the show with his perfect comedy timing. Then Ravishankar is a treat to watch in this complex role. Do not miss Raambo 2. It is one of the best films this year. 

    Chitraloka Rating - 3.5/5

     

  • Raymo Review, Chitraloka Rating- 3.5:5

    Raymo Review, Chitraloka Rating- 3.5:5

    Film: Raymo

    Cast: Ishan, Ashika Ranganath, Rajesh Nataranga, Madhoo, Sarath Kumar, Achyuth Kumar  

    Director: Pavan Wadeyar

    Duration: 156 minutes

    Certificate: U/A

    Rocking a love story 

    While it lasts, love is amusing, exhilarating, adrenaline-pumping and blissful. When everything is said and done, it leaves behind a trail of grief, sadness, haunting memories, gloom and sorrow. This eternal drama of love has been made, remade, built and narrated a million times before. But somehow, it is fresh every time. In the hands of a good narrator, a love story can still sound and feel new.

    So how has Pavan Wadeyar, one of the best romantic film makers of Sandalwood handled this latest musical love story? Firstly, he does not disappoint. Secondly, this is a lavish showcase of technical brilliance and good performances. Thirdly, there is good chemistry between the various characters and not just the lead pair. Raymo is a musical escapade you can immerse yourself in and forget the world for a while.

    The film is not flawless. It has its share of clichés. But Wadeyar, who has scripted the film as well, brings in freshness with the help of some good characterization. The characters played by Rajesh Nataranga, Madhoo, Achyuth Kumar and Sarath Kumar stand out in this regard. The four also deliver some nuanced performances which elevates the story’s value by several notches. Two scenes particularly; one involving Rajesh and the climax scene with Madhoo are top class.

    The lead characters are also well-crafted. Our hero is a troubled youngster who finds a good reason to hate his parents. He decides to chart his own path in the world and turns to music. It is his solace and it is his love. The inevitable character of a female singer who falls in love with him starts the real love saga. But fate has something else in store for them. To fulfill one destiny, our hero ignores the other. Now hell hath no fury like a woman scorned right? Ashika Ranganath delivers an impactful performance in a role that has substance and not just style for the leading lady. The story takes the predictable routes, but presents them with different backdrops and newer combinations of incidents and sub-plots.

    All well that ends well, but you have to go through the motions. It is in the journey that the real story lies. Wadeyar fills this journey with good characters, technical wizardry and visual wonders. The cinematography in the film is something that livens up the entire proceedings throughout the narrative. Though it is touted as a musical, the songs are a little subdued. There is one great number. The others are not bad but you expected each one to be a blockbuster when the film is about a rock star. Raymo has all the things in the right place, especially its heart. This film is for those who see roses, doves and maple leaves in their dreams.

  • Thayige Thakka Maga Movie Review, Chitraloka Rating 3.5/5

    thayige thakka maga movie review

    There are many kinds of action movies and among them the most popular continues to be the hero centric one. Director Shashank has scripted a new path in action genre with his new film Thayige Thakka Maga. TTM is not just an action film but encompasses a romance and mother-son sentiment plots too. But the core of the film is action and it is a thrilling experience for those who love action. 

    The story is about a mother and son who cannot bear any kind of corruption in public life. The mother is an advocate who fights for the underdogs always. Many times she has to come to the rescue of her son who gets into trouble for taking law into his own hands. For example he beats up a corporator and his fellows who disrupt traffic for a birthday celebration. In court the mother saves her son. 

    Such being the situation a girl enters the boy's life. She is the perfect match for him according to the mother. Even the family of the girl agrees reluctantly. But the anger in the boy against corrupt people gets in way of the relationship. A politician's son is involved in an accident and the mother has to handle the case. This leads to a lot of tension that amounts to disrupting the fragile relationships. 

    How does the hero manage to save his relationship with the girl? Will he choose between his mother and girl? Will he be able to save himself and lives of his mother and girl from the evil politician? Watch this action saga to find answers for all these questions. 

    The climax of TTM is unique. It is very different from regular films and charts a new course for commercial films. Shashank deserves an applause for choosing something so different in a commercial film. There is extra action and extra entertainment in this film. Even if action is not your favourite kind of entertainment there is many other things in the film that will satisfy you. Go for this adventure.

  • ಅಭಿಮಾನಿಗಳಿಗೆ ಕಿಚ್ಚ ಸುದೀಪ್ ಮನವಿ

    sudeep requests fans to watch raju kannada medium

    ರಾಜು ಕನ್ನಡ ಮೀಡಿಯಂ ಚಿತ್ರತಂಡಕ್ಕೆ ಶುಭವಾಗಲಿ. ಅವರು ಗೆಲುವಿಗೆ ಅರ್ಹರು. ಅಭಿಮಾನಿಗಳೇ, ನಿಮ್ಮಲ್ಲಿ ನನ್ನ ಮನವಿ ಇಷ್ಟೆ. ರಾಜು ಕನ್ನಡ ಮೀಡಿಯಂ ಚಿತ್ರವನ್ನು ಪ್ರತಿಯೊಬ್ಬರೂ ಚಿತ್ರಮಂದಿರಗಳಲ್ಲಿ ನೋಡಿ. ಕನ್ನಡ ಚಿತ್ರವನ್ನು ಪ್ರೋತ್ಸಾಹಿಸಿ.

    ಇದು ತಮ್ಮ ಅಭಿಮಾನಿಗಳಿಗೆ ಕಿಚ್ಚ ಸುದೀಪ್ ಮಾಡಿರುವ ಮನವಿ. ಅಷ್ಟೇ ಅಲ್ಲ, ರಾಜು ಕನ್ನಡ ಮೀಡಿಯಂ ಚಿತ್ರವನ್ನು ಬೆಂಬಲಿಸಿದ ಚಿತ್ರಲೋಕ ವೀರೇಶ್ ಅವರಿಗೂ ಸುದೀಪ್ ಧನ್ಯವಾದ ಹೇಳಿದ್ದಾರೆ. ಅಂದಹಾಗೆ ಸುದೀಪ್‍ಗೆ ರಾಜು ಕನ್ನಡ ಮೀಡಿಯಂ ಚಿತ್ರತಂಡದ ತಂತ್ರಜ್ಞರು ಹಾಗೂ ನಿರ್ಮಾಪಕರ ಚಿತ್ರದ ಮೇಲಿನ ಪ್ರೀತಿ ಇಷ್ಟವಾಗಿದೆ. ಸಿನಿಮಾ ಬಗ್ಗೆ ಇಷ್ಟೊಂದು ಪ್ಯಾಷನ್ ಇರುವವರು ಸೋಲಬಾರದು ಅನ್ನೋದು ಸುದೀಪ್ ಮನದಾಸೆ.

    ಥ್ಯಾಂಕ್ಯೂ ಸುದೀಪ್.

  • ಅಮೆರಿಕದಲ್ಲಿ ಚುಟು ಚುಟು ಮ್ಯಾಜಿಕ್

    rambo 2 to release in america ad canada

    ಅಮೆರಿಕ ಹಾಗೂ ಆಸ್ಟ್ರೇಲಿಯಾಗಳಲ್ಲಿ ನಾಳೆ ತೆರೆ ಕಾಣುತ್ತಿರುವ ರ್ಯಾಂಬೋ2 ಸಿನಿಮಾ, ಬಿಡುಗಡೆಗೂ ಮುನ್ನವೇ ದಾಖಲೆ ಬರೆದುಬಿಟ್ಟಿದೆ. ಅಮೆರಿಕದಲ್ಲಿ 40ಕ್ಕೂ ಹೆಚ್ಚು ಸೆಂಟರ್‍ಗಳಲ್ಲಿ ರ್ಯಾಂಬೋ 2 ರಿಲೀಸ್ ಆಗುತ್ತಿದೆ. ವಾಷಿಂಗ್ಟನ್ ಡಿಸಿ, ಲಾಸ್ ಏಂಜಲೀಸ್, ಕನ್ಸಾಸ್ ಸಿಟಿ, ಸ್ಯಾಂಡಿಯಾಗೋ, ಮಿನ್ನೆಪೊಲೀಸ್, ಡೆಟ್ರಾಯ್ಟ್, ಸಾಲ್ಟ್ ಲೇಕ್ ಸಿಟಿ, ಸ್ಯಾಕ್ರಾಮೆಂಟೋ, ಅಟ್ಲಾಂಟಾ, ಮಿಯಾಮಿ, ಫಿಲಿಡಲ್ಫಿಯಾ, ಬಾಲ್ಟಿಮೋರ್ ಹಾಗೂ ಸೀಟಲ್ ನಗರಗಳಲ್ಲಿ ತೆರೆ ಕಾಣುತ್ತಿದೆ. ಕೆನಡಾದಲ್ಲಿಯೂ ಹಲವಾರು ಕಡೆ ಚಿತ್ರ ತೆರೆ ಕಾಣುತ್ತಿದೆ.

    ಚಿತ್ರ ನಿರ್ಮಾಪಕರಾದ ಶರಣ್ ಹಾಗೂ ಅಟ್ಲಾಂಟಾ ನಾಗೇಂದ್ರ, ಅಮೆರಿದಕ ಕಸ್ತೂರಿ ಮೀಡಿಯಾ ಹೌಸ್ ಮೂಲಕ ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದಾರೆ. ಕೆನಡಾದಲ್ಲಿ ಡ್ರೀಮ್ಸ್ ಮೀಡಿಯಾ ಬಿಡುಗಡೆಯ ಜವಾಬ್ದಾರಿ ತೆಗೆದುಕೊಂಡಿದೆ. ಉತ್ತರ ಅಮೆರಿಕದಲ್ಲಿ ಇದು ಕನ್ನಡ ಚಿತ್ರವೊಂದರ ಅತ್ಯಂತ ಅದ್ಧೂರಿ ಬಿಡುಗಡೆ ಎಂದರೂ ತಪ್ಪಾಗಲ್ಲ.

    ಈಗಾಗಲೇ ಕರ್ನಾಟಕದಲ್ಲಿ ಬಾಕ್ಸಾಫೀಸ್ ಮ್ಯಾಜಿಕ್ ಸೃಷ್ಟಿಸಿರುವ ರ್ಯಾಂಬೋ 2, ನಾಳೆಯಿಂದ ಅಮೆರಿಕ, ಆಸ್ಟ್ರೇಲಿಯಾ, ಕೆನಡಾಗಳಲ್ಲು ಚುಟುಚುಟು ಎನ್ನಲಿದೆ. ಶರಣ್, ಅಶಿಕಾ ರಂಗನಾಥ್, ಚಿಕ್ಕಣ್ಣ, ರವಿಶಂಕರ್ ಪ್ರಮುಖ ಪಾತ್ರದಲ್ಲಿರುವ ಸಿನಿಮಾ, ವಿದೇಶದ ಪ್ರೇಕ್ಷಕರಿಗೂ ಇಷ್ಟವಾಗೋದ್ರಲ್ಲಿ ಸಂಶಯವಿಲ್ಲ. 

  • ಅವತಾರ ಪುರುಷ ಅಷ್ಟದಿಗ್ಬಂಧನ ಮಂಡಲಕ ಡಿಸೆಂಬರ್ 10ಕ್ಕೆ ರಿಲೀಸ್

    ಅವತಾರ ಪುರುಷ ಅಷ್ಟದಿಗ್ಬಂಧನ ಮಂಡಲಕ ಡಿಸೆಂಬರ್ 10ಕ್ಕೆ ರಿಲೀಸ್

    ಶರಣ್, ಅಶಿಕಾ ರಂಗನಾಥ್, ಶ್ರೀನಗರ ಕಿಟ್ಟಿ ಪ್ರಧಾನ ಪಾತ್ರದಲ್ಲಿರುವ ಚಿತ್ರ ಅವತಾರ ಪುರುಷ. ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣದ.. ಎರಡು ಭಾಗಗಳಲ್ಲಿ ಬರುತ್ತಿರೋ ಚಿತ್ರದ ಭಾಗ 1, ಅವತಾರ ಪುರುಷ ಅಷ್ಟದಿಗ್ಬಂಧನ ಮಂಡಲಕ ಡಿಸೆಂಬರ್ 10ಕ್ಕೆ ರಿಲೀಸ್ ಆಗುತ್ತಿದೆ. ಸಿಂಪಲ್ ಸುನಿ ನಿರ್ದೇಶನ ಮಾಡಿರುವ ಚಿತ್ರದಲ್ಲಿ ಹಾರರ್ ಕಾಮಿಡಿ ಸ್ಟೋರಿ ಇದೆ.

    ಶರಣ್ ಚಿತ್ರ ಎಂದ ಮೇಲೆ ಕಾಮಿಡಿ ಇರಲೇಬೇಕು. ಸಿಂಪಲ್ ಸುನಿ ಚಿತ್ರದಲ್ಲಿ ತುಂಟಾಟ ತರಲೆ ಇರಲೇಬೇಕು. ಜೊತೆಗೆ ಈ ಬಾರಿ ಹಾರರ್ ಟಚ್ ಕೂಡಾ ಇದೆ. ಚುಟುಚುಟು ಹಿಟ್ ಆದನಂತರ ಶರಣ್ ಮತ್ತು ಅಶಿಕಾ ರಂಗನಾಥ್ ಒಟ್ಟಿಗೇ ನಟಿಸಿರುವ ಚಿತ್ರ ಅವತಾರಪುರುಷ. ಸುಧಾರಾಣಿ, ಸಾಯಿಕುಮಾರ್, ಶ್ರೀನಗರ ಕಿಟ್ಟಿ, ಭವ್ಯಾ ಮೊದಲಾದವರು ನಟಿಸಿರೋ ಚಿತ್ರದಲ್ಲಿ ಶರಣ್ ಜ್ಯೂ.ಆರ್ಟಿಸ್ಟ್ ಆಗಿ ನಟಿಸಿದ್ದಾರೆ.

  • ಅವತಾರ ಪುರುಷ ಯಶಸ್ವೀ 25 ದಿನ..

    ಅವತಾರ ಪುರುಷ ಯಶಸ್ವೀ 25 ದಿನ..

    ಕಾಮಿಡಿ ಸ್ಟಾರ್ ಶರಣ್, ಚುಟುಚುಟು ಚೆಲುವೆ ಆಶಿಕಾ ರಂಗನಾಥ್, ಸಿಂಪಲ್ ಸುನಿ, ಪುಷ್ಕರ್ ಮಲ್ಲಿಕಾರ್ಜುನಯ್ಯ, ಶ್ರೀನಗರ ಕಿಟ್ಟಿ ಕಾಂಬಿನೇಷನ್ ಸಿನಿಮಾ ಅವತಾರ್ ಪುರುಷ ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ. ಥಿಯೇಟರುಗಳಲ್ಲಿ 25 ದಿನ ಪೂರೈಸಿರುವ ಅವತಾರ್ ಪುರುಷ ಭಾಗ 1, 50ನೇ ದಿನದತ್ತ ದಾಪುಗಾಲಿಟ್ಟಿದೆ.

    ಮಾಟ, ಮಂತ್ರ, ದೇವರು, ಕಾಮಿಡಿ, ಥ್ರಿಲ್ಲರ್.. ಎಲ್ಲವನ್ನೂ ಹದವಾಗಿ ಬೆರೆಸಿರುವ ಸಿನಿಮಾ ಅವತಾರ ಪುರುಷ. ಶರಣ್ ಜ್ಯೂನಿಯರ್ ಆರ್ಟಿಸ್ಟ್ ಆಗಿ ನಟಿಸಿದ್ದು, ಚಿತ್ರದ ಕೊನೆಗೆ ಕೊಟ್ಟಿರುವ ಶಾಕ್, ಅದೂವರೆಗೆ ನಗುವ ಪ್ರೇಕ್ಷಕರನ್ನು ಬೆಚ್ಚಿಬೀಳಿಸುವುದು ಸುಳ್ಳಲ್ಲ.  ಚಿತ್ರ ಯಶಸ್ವಿಯಾಗಿದ್ದು, ಶೀಘ್ರದಲ್ಲೇ ಒಟಿಟಿಗೂ ಬರಲಿದೆ.

  • ಅವತಾರ ಪುರುಷ.. ತಂದೇಬಿಟ್ಟ ಹರುಷ

    ಅವತಾರ ಪುರುಷ.. ತಂದೇಬಿಟ್ಟ ಹರುಷ

    ತಮಟೆ ಹೊಡಿ ಬಾರೋ..

    ಎಂಟ್ರಿ ಕೊಟ್ಟ ಹೀರೋ..

    ತರುತಾನೆ ಹರುಷ.. ಅವತಾರ ಪುರುಷ..

    ಶರಣ್-ಸುನಿ-ಪುಷ್ಕರ್ ಮಲ್ಲಿಕಾರ್ಜುನಯ್ಯ ಕಾಂಬಿನೇಷನ್ನಿನ ಸಿನಿಮಾ ಅವತಾರ ಪುರುಷ ಚಿತ್ರದ ಹಾಡಿನ ಸಾಲುಗಳಿವು. ಹೀರೋ ಇಂಟ್ರೊಡಕ್ಷನ್ ಸಾಂಗ್ ಅಥವಾ ಚಿತ್ರದ ಟೈಟಲ್ ಟ್ರ್ಯಾಕ್. ಏನು ಬೇಕಾದರೂ ಹೇಳಬಹುದು. ಹಾಡನ್ನು ಭರ್ಜರಿಯಾಗಿ ಶೂಟ್ ಮಾಡಿರುವ ಸುನಿ, ಹಾಡನ್ನು ಪವರ್‍ಫುಲ್ ಕನ್ನಡದ  ಯುವಜನತೆಗೆ ಗಿಫ್ಟ್ ಆಗಿ ಕೊಟ್ಟಿದ್ದಾರೆ.

    ಕಿರಣ್ ಕೊಟ್ಟ, ಆರ್‍ಆರ್ ಅರ್ಜುನ್‍ರ ಸಾಹಿತ್ಯಕ್ಕೆ ತಮಟೆ ಸೌಂಡು ಸಖತ್ತಾಗಿ ಮ್ಯಾಚ್ ಆಗಿದೆ. ಹಾಡಿನ ಸಾಹಿತ್ಯಕ್ಕೆ ಅಷ್ಟೇ ಸಖತ್ತಾಗಿ ಕೂರಿಸಿರೋದು ಅರ್ಜುನ್ ಜನ್ಯಾ. ಶರಣ್ ಮತ್ತು ಆಶಿಕಾ ರಂಗನಾಥ್ ಹೀರೋ ಹೀರೋಯಿನ್ ಆಗಿರುವ ಚಿತ್ರದಲ್ಲಿ ಶ್ರೀನಗರ ಕಿಟ್ಟಿ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

     

  • ಅವತಾರ ಪುರುಷನ ತುಂಟಾಟ ಮುಗೀತು.. ಮಾತು ಶುರುವಾಯ್ತು..!

    avatara purusha shooting completed

    ಸಿಂಪಲ್ ಸುನಿ, ಪುಷ್ಕರ್ ಮಲ್ಲಿಕಾರ್ಜುನಯ್ಯ, ಶರಣ್-ಅಶಿಕಾ ರಂಗನಾಥ್ ಚುಟು ಚುಟು ಕಾಂಬಿನೇಷನ್. ಜೊತೆಯಲ್ಲಿ ಶ್ರೀನಗರ ಕಿಟ್ಟಿ.ಸುಧಾರಾಣಿ, ಸಾಯಿಕುಮಾರ್. ಹೀಗಾಗಿಯೇ ಅವತಾರ ಪುರುಷನ ಹವಾ ಜೋರು. ಹೀಗೆ ಹವಾ ಸೃಷ್ಟಿಸಿರುವ ಅವತಾರ್ ಪುರುಷನ ಶೂಟಿಂಗ್ ಮುಕ್ತಾಯವಾಗಿದೆ.

    ಮಾತಿನ ತುಂಟಾಟ ಮುಗಿದಿದ್ದು, ಜನವರಿಯಲ್ಲಿ ಹಾಡುಗಳ ಶೂಟಿಂಗ್‌ಗೆ ಪ್ಲಾನ್ ಮಾಡಿಕೊಂಡಿದೆ ಚಿತ್ರತಂಡ. ಜೊತೆಯಲ್ಲೇ ಡಬ್ಬಿಂಗ್ ಕೆಲಸವೂ ಶುರುವಾಗಿದೆ. ಟಾಕಿ ಪೋರ್ಷನ್ ಮುಗಿಸಿದ ನಂತರ ಹಾಡುಗಳ ಶೂಟಿಂಗ್‌ಗೆ ತೆರಳಲಿದೆಯಂತೆ ಚಿತ್ರತಂಡ. ಮಾರ್ಚ್-ಏಪ್ರಿಲ್‌ನಲ್ಲಿ ಸಿನಿಮಾ ತೆರೆಗೆ ಬರುವ ಸಾಧ್ಯತೆ ಇದೆ.

     

  • ಅವತಾರ ಪುರುಷನಿಗೆ ಸಿರಿ ತಂದ ಸೌಭಾಗ್ಯ

    ashika as siri in avatara ourusha

    ಅಶಿಕಾ ರಂಗನಾಥ್ ಅವರ ಅವತಾರ ಪುರುಷದ ಪಾತ್ರ ರಹಸ್ಯವನ್ನು ಸಿಂಪಲ್ ಸುನಿ ಕೊನೆಗೂ ಬಹಿರಂಗಪಡಿಸಿದ್ದಾರೆ. ಅದು ಅವರ ಹುಟ್ಟುಹಬ್ಬಕ್ಕಾಗಿ. ಆಗಸ್ಟ್ 5, ಅಶಿಕಾ ರಂಗನಾಥ್ ಹುಟ್ಟಿದ ದಿನ. ಹೀಗಾಗಿ ಅವರ ಪಾತ್ರದ ಫಸ್ಟ್ ಲುಕ್ ಹೊರಬಿಟ್ಟಿದ್ದಾರೆ ಸಿಂಪಲ್ ಸುನಿ. ಪುಷ್ಕರ್ ಮಲ್ಲಿಕಾರ್ಜನಯ್ಯ ನಿರ್ಮಾಣದ ಚಿತ್ರದಲ್ಲಿ ಅಶಿಕಾ ಅವರದ್ದು ಸಿರಿ ಎನ್ನುವ ಪಾತ್ರ.

    ಸಿರಿ, ಎನ್‍ಆರ್‍ಐ. ಆಕೆ ತನ್ನ ತಾಯಿ ಮತ್ತು ಅಣ್ಣನ ನಡುವಿನ ವೈಮನಸ್ಸು ದೂರ ಮಾಡಲು ಬರುತ್ತಾರೆ. ಹಾಗೆ ಬಂದವರಿಗೆ ಶರಣ್ ಜೊತೆಯಾಗುತ್ತಾರೆ. ಜರ್ನಿ ಶುರುವಾಗುತ್ತೆ ಎಂದು ಸಣ್ಣದೊಂದು ಪರಿಚಯ ಕೊಟ್ಟಿದ್ದಾರೆ ಸುನಿ.

    ಶರಣ್ ಈ ಚಿತ್ರದಲ್ಲಿ ಜ್ಯೂನಿಯರ್ ಆರ್ಟಿಸ್ಟ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಶ್ರೀನಗರ ಕಿಟ್ಟಿ ಕೂಡಾ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

  • ಅವತಾರ್ ಪುರುಷನಿಗೆ ಅರ್ಜುನ್ ಜನ್ಯಾ ಬಂದಿದ್ದು ಏಕೆ..?

    reason behind arjun janya's music in avatara purusha

    ಶರಣ್, ಆಶಿಕಾ ರಂಗನಾಥ್ ಜೋಡಿಯ ಸಿನಿಮಾ ಅವತಾರ್ ಪುರುಷ. ಪುಷ್ಕರ್ ಬ್ಯಾನರ್‌ನಲ್ಲಿ ಇದೇ ಮೊದಲ ಬಾರಿಗೆ ಸಿಂಪಲ್ ಸುನಿ ನಿರ್ದೇಶನ ಮಾಡುತ್ತಿರುವ ಚಿತ್ರ ಅವತಾರ್ ಪುರುಷ. ಶ್ರೀನಗರ ಕಿಟ್ಟಿಯೂ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಚಿತ್ರಕ್ಕೆ ಚರಣ್ ರಾಜ್ ಸಂಗೀತ ನೀಡಬೇಕಿತ್ತು. ಆರಂಭದಲ್ಲಿ ಚಿತ್ರತಂಡವೂ ಇದೇ ಮಾತು ಹೇಳಿತ್ತು. ಆದರೀಗ ಅರ್ಜುನ್ ಜನ್ಯ ಸಂಗೀತ ನೀಡುತ್ತಿದ್ದಾರೆ.

    ಇದಕ್ಕೆ ಕಾರಣವೂ ಇದೆ. ರವಿಚಂದ್ರನ್-ಹAಸಲೇಖ, ದರ್ಶನ್-ಹರಿಕೃಷ್ಣ ಜೋಡಿಯಂತೆ ಹಿಟ್ ಆಗಿರುವ ಜೋಡಿ ಶರಣ್-ಜನ್ಯಾ ಕಾಂಬಿನೇಷನ್. ರ‍್ಯಾಂಬೋ, ರ‍್ಯಾಂಬೋ-೨, ಅಧ್ಯಕ್ಷ, ವಿಕ್ಟರಿ, ವಿಕ್ಟರಿ-೨, ಬುಲೆಟ್ ಬಸ್ಯಾ, ಜೈ ಮಾರುತಿ ೮೦೦.. ಹೀಗೆ ಇಬ್ಬರ ಜೋಡಿಯ ಸಿನಿಮಾಗಳ ಎಲ್ಲ ಹಾಡುಗಳೂ ಹಿಟ್ ಆಗಿರುವುದು ಇದಕ್ಕೆ ಕಾರಣ. ಹಿಟ್ ಜೋಡಿಯನ್ನು ಬೇರೆ ಮಾಡೋದೇಕೆ ಎಂಬ ಕಾರಣಕ್ಕೆ ಜನ್ಯಾ, ಅವತಾರ್ ಪುರುಷನಿಗೆ ಸರಿಗಮಪ ಹೇಳುತ್ತಿದ್ದಾರೆ.

  • ಅವತಾರ್ ಪುರುಷನಿಗೆ ಚುಟುಚುಟು ಜೋಡಿ..

    chutu chutu jodi to reccreate magic in avatar purusha

    ಚುಟುಚುಟು ಅಂತೈತಿ.. ನನಗಾ ಚುಮುಚುಮು ಆಗತೈತಿ.. ಎಂದು ಹಾಡುತ್ತಾ, ಕುಣಿಯುತ್ತಾ ಪ್ರೇಕ್ಷಕರ ಎದೆಗೇ ಲಗ್ಗೆಯಿಟ್ಟ ಶರಣ್, ಅಶಿಕಾ ರಂಗನಾಥ್ ಜೋಡಿ ಮತ್ತೊಮ್ಮೆ ಒಂದಾಗುತ್ತಿದೆ. ಅದು ಅವತಾರ್ ಪುರುಷ ಚಿತ್ರದಲ್ಲಿ.

    ಸಿಂಪಲ್ ಸುನಿ, ಈ ಸೂಪರ್ ಹಿಟ್ ಜೋಡಿಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣದ ಅವತಾರ್ ಪುರುಷ ಚಿತ್ರದ ಚಿತ್ರೀಕರಣ ಫೆಬ್ರವರಿ 18ರಿಂದ ಶುರುವಾಗಲಿದೆ. 

    ಸಿಂಪಲ್ ಸುನಿ ಡೈರೆಕ್ಷನ್, ಪುಷ್ಕರ್ ಬ್ಯಾನರ್ ಸಿನಿಮಾ ಮತ್ತು ಮತ್ತೊಮ್ಮೆ ಶರಣ್ ಜೊತೆ ಅಭಿನಯಿಸುವ ಅವಕಾಶ ಸಿಕ್ಕಿದ್ದು ಖುಷಿಯಾಗಿದೆ ಎಂದಿದ್ದಾರೆ ಅಶಿಕಾ.

  • ಅಶಿಕಾ ಜೊತೆ ಡಾರ್ಲಿಂಗ್ ಕೃಷ್ಣ ರೊಮ್ಯಾನ್ಸ್ ಫಿಕ್ಸ್

    ಅಶಿಕಾ ಜೊತೆ ಡಾರ್ಲಿಂಗ್ ಕೃಷ್ಣ ರೊಮ್ಯಾನ್ಸ್ ಫಿಕ್ಸ್

    ಇತ್ತೀಚೆಗಷ್ಟೇ ನಿರ್ದೇಶಕ ಪಿ.ಸಿ.ಶೇಖರ್, ರೊಮ್ಯಾಂಟಿಕ್ ಕಾಮಿಡಿ ಚಿತ್ರವೊಂದನ್ನು ಘೋಷಿಸಿದ್ದರು. ಡಾರ್ಲಿಂಗ್ ಕೃಷ್ಣ ಹೀರೋ ಆಗಲಿರುವ ಚಿತ್ರಕ್ಕೆ ಕಡ್ಡಿಪುಡಿ ಚಂದ್ರು ನಿರ್ಮಾಪಕ ಎಂದು ಶೇಖರ್ ಹೇಳಿದ್ದರು. ಕನ್ನಡದ ಹುಡುಗಿಯೇ ನಾಯಕಿಯಾಗುತ್ತಾರೆ ಎಂದಿದ್ದ ಪಿಸಿ, ಈಗ ಅಶಿಕಾ ರಂಗನಾಥ್ ಅವರನ್ನು ಫೈನಲ್ ಮಾಡಿದ್ದಾರೆ.

    ನನ್ನ ಚಿತ್ರದ ಕಥೆಗೆ ಅಶಿಕಾ ಅವರೇ 100% ಸೂಟ್ ಆಗ್ತಾರೆ. ಹೀಗಾಗಿ ಅವರೇ ಬೇಕು ಎಂದು ಆಯ್ಕೆ ಮಾಡಿಕೊಂಡಿದ್ದೇನೆ ಎನ್ನುತ್ತಾರೆ ಪಿಸಿ. ಹೊಸ ಚಿತ್ರದ ಮುಹೂರ್ತ ಅಕ್ಟೋಬರ್ 10ರಂದು ನಡೆಯಲಿದೆ.

  • ಅಶಿಕಾ ರಂಗನಾಥ್ ಚುಟುಚುಟು ಅಶಿಕಾ ಆಗಿಬಿಟ್ರು..

    ashika ranganath's new title is chutu chutu

    ಅಶಿಕಾ ರಂಗನಾಥ್.. ಮುಗುಳುನಗೆ, ರಾಜು ಕನ್ನಡ ಮೀಡಿಯಂ ಮೊದಲಾದ ಚಿತ್ರಗಳಲ್ಲಿ ನಟಿಸಿರುವ ಚೆಲುವೆ. ಹೋಮ್ಲಿ ಪಾತ್ರಗಳ ಮೂಲಕ ಗಮನ ಸೆಳೆದಿದ್ದ ಈ ಹುಡುಗಿಗೆ ಈಗ ಅಭಿಮಾನಿಗಳು ಹೊಸ ಬಿರುದು ಕೊಟ್ಟಿದ್ದಾರೆ. ಅಶಿಕಾ ಈಗ ಚುಟುಚುಟು ಅಶಿಕಾ ಆಗಿಬಿಟ್ಟಿದ್ದಾರೆ. ಆ ಬಿರುದು ಬಂದಿದ್ದು ರ್ಯಾಂಬೋ2 ಚಿತ್ರದ ಚುಟು ಚುಟು ಹಾಡಿನಿಂದ.

    ಚುಟುಚುಟು ಅಂತೈತಿ ಅನ್ನೋ ಹಾಡಿಗೆ ಮೈಚಳಿ ಬಿಟ್ಟು ಹೆಜ್ಜೆ ಹಾಕಿರುವ ಅಶಿಕಾ, ಪ್ರೇಕ್ಷಕರನ್ನು ಹುಚ್ಚೆಬ್ಬಿಸಿರುವುದು ನಿಜ. ಚಿತ್ರದಲ್ಲಿ ಅದೊಂದೇ ಹಾಡಲ್ಲ, ಯವ್ವಾಯವ್ವಾ, ಬಿಟ್ಹೋಗ್ಬೇಡ ಹಾಡುಗಳೂ ಹಿಟ್ ಆಗಿವೆ. ಐಂದ್ರಿತಾ ಹೆಜ್ಜೆ ಹಾಕಿರುವ ಧಮ್ ಮಾರೋ ಧಮ್ ಕೂಡಾ ಸದ್ದು ಮಾಡ್ತಿದೆ. ಅರ್ಜುನ್ ಜನ್ಯಾ ಮತ್ತೊಮ್ಮೆ ಮ್ಯಾಜಿಕ್ ಮಾಡಿಬಿಟ್ಟಿದ್ದಾರೆ.

    ಎಲ್ಲಿಯೇ ಹೋದ್ರೂ ನನ್ನನ್ನೀಗ ಚುಟುಚುಟು ಅಂತಾನೇ ಗುರುತಿಸ್ತಿದ್ದಾರೆ. ಅಷ್ಟರಮಟ್ಟಿಗೆ ಫೇಮಸ್ ಆಗಿಬಿಟ್ಟಿದ್ದೇನೆ ಅಂತಾರೆ ಚುಟುಚುಟು ಅಶಿಕಾ.

    ಚಿತ್ರದಲ್ಲಿ ಅಶಿಕಾ ಅವರದ್ದು ಗ್ಲಾಮರ್ ರೋಲ್. ಗೋವಾದಲ್ಲಿ ನೆಲೆಸಿರುವ ಮಯೂರಿ ಅನ್ನೋ ಹುಡುಗಿಯ ಪಾತ್ರ. ಬೋಲ್ಡ್, ಗ್ಲಾಮರಸ್ ಹಾಗೂ ಅಟಿಟ್ಯೂಡ್ ಇರುವ ಹುಡುಗಿಯ ಪಾತ್ರ. ಅಭಿನಯಕ್ಕೆ ಸಿಕ್ಕಿರುವ ಅವಕಾಶವನ್ನು ಅಶಿಕಾ ಅದ್ಬುತವಾಗಿ ಬಳಸಿಕೊಂಡಿದ್ದಾರೆ ಅನ್ನೋ ಸರ್ಟಿಫಿಕೇಟ್ ಕೊಟ್ಟಿರೋದು ನಿರ್ದೇಶಕ ಅನಿಲ್. 

  • ಅಶಿಕಾಗೆ ಅಭಿಮಾನಿ ಮುತ್ತು : ರಿಯಲ್ ಸ್ಟೋರಿಯೇ ಬೇರೆ..!

    real story behind ashika ranganath;s kissing incident

    ಆಶಿಕಾ ರಂಗನಾಥ್ ಎಂಬ ಚೆಲುವೆ ಕನ್ನಡ ಚಿತ್ರರಸಿಕರ ಎದೆಯಲ್ಲಿ ಚುಟು ಚುಟು ಹಾಡಿರುವುದು ಎಲ್ಲರಿಗೂ ಗೊತ್ತು. ಅಂತಾದ್ರಲ್ಲಿ ಅವರ ಕೆನ್ನೆಗೆ ಕಿಡಿಗೇಡಿಯೊಬ್ಬ ಬಲವಂತವಾಗಿ ಕಿಸ್‌ ಮಾಡಿದ್ರೆ ಹೇಗಾಗಬೇಡ..? ಅದೊಂದು ವಿಡಿಯೋ ವೈರಲ್ ಆಗಿ ಎಲ್ಲೆಡೆ ಚರ್ಚೆಯಾಗೋಕೆ ಶುರುವಾಗಿದೆ. ಎಂತೆಂತಾ ಹುಚ್ಚರಿರ್ತಾರಪ್ಪಾ ಎಂದು ಎಲ್ಲರೂ ಶಾಕ್ ಆಗಿರೋವಾಗಲೇ ಘಟನೆಯ ಅಸಲಿ ಸತ್ಯ ಹೊರಬಿದ್ದಿದೆ.

    ಅದು ಸಿನಿಮಾ ಸೀನ್. ಪವನ್ ಒಡೆಯರ್ ನಿರ್ದೇಶಿಸುತ್ತಿರುವ ರೇಮೋ ಚಿತ್ರದ ಶೂಟಿಂಗ್. ಅಷ್ಟೇ ಹೊರತು ರಿಯಲ್ ಘಟನೆ ಅಲ್ಲ. ಸ್ವತಃ ಪವನ್ ಒಡೆಯರ್ ಇದನ್ನು ಸ್ಪಷ್ಟಪಡಿಸಿದ್ದಾರೆ.

    ಪವನ್‌ ಒಡೆಯರ್‌ ನಿರ್ದೇಶನದ ರೇಮೋ ಚಿತ್ರದಲ್ಲಿ ಆಶಿಕಾ ರಂಗನಾಥ್‌ ನಾಯಕಿ. ರೋಗ್‌ ಖ್ಯಾತಿಯ ಇಶಾನ್‌ ಹೀರೋ. ಕಿಡಿಗೇಡಿಯೊಬ್ಬ ಅಶಿಕಾ ಕೆನ್ನೆಗೆ ಮುತ್ತು ಕೊಟ್ಟು, ನಂತರ ಹೀರೋ ಫೈಟ್ ಮಾಡುವ ಸೀನ್ ಚಿತ್ರೀಕರಣದ ವೇಳೆ ಯಾರೋ ಮೊಬೈಲ್ನಲ್ಲಿ ಶೂಟ್ ಮಾಡಿ ಸೋಷಿಯಲ್ ಮೀಡಿಯಾಗೆ ಬಿಟ್ಟಿದ್ದಾರೆ.  ಅದು ಸಿನಿಮಾ ಸೀನ್. ರಿಯಲ್ ಆಗಿದ್ದರೆ ಅಂತಹವನಿಗೆ ತಕ್ಕ ಶಾಸ್ತಿ ಮಾಡ್ತಿದ್ದೆ ಎಂದಿದ್ದಾರೆ ಅಶಿಕಾ ರಂಗನಾಥ್.

  • ಆಕ್ರೋಶ, ಕ್ರಾಂತಿ, ಶಾಂತಿಯ ಸಂಗಮ ತಾಯಿಗೆ ತಕ್ಕ ಮಗ

    thayige thakka maga is a complete package

    ತಾಯಿಗೆ ತಕ್ಕ ಮಗ ಚಿತ್ರದಲ್ಲೇನಿದೆ..? ಕಥೆಯಲ್ಲಿ ಅಂಥಾ ವಿಶೇಷ ಏನಿದೆ..? ಹೀಗೆ ಹುಡುಕುತ್ತಾ ಹೋದರೆ ನಾಯಕ ನಟ ಅಜಯ್ ರಾವ್ ಕನಸು ತೆರೆದುಕೊಳ್ಳುತ್ತೆ. ಬ್ರೂಸ್ ಲೀ ಸಿನಿಮಾಗಳನ್ನು ನೋಡಿ ನೋಡಿ ಕರಾಟೆ ಕಲಿತಿದ್ದ, ಅಂಬರೀಷ್, ಅಮಿತಾಬ್ ಸಿನಿಮಾಗಳನ್ನು ನೋಡಿ ಆ್ಯಂಗ್ರಿಯಂಗ್ ಮ್ಯಾನ್ ಆಗಬೇಕು ಎಂದುಕೊಂಡಿದ್ದ ಅಜಯ್ ರಾವ್‍ಗೆ ಆರಂಭದಲ್ಲಿ ಸಿಕ್ಕಿದ್ದು ಚಾಕೊಲೇಟ್ ಹೀರೋ ಪಾತ್ರಗಳು. ಈಗ ತಾಯಿಗೆ ತಕ್ಕ ಮಗ ಚಿತ್ರದಲ್ಲಿ ಅವರ ಕನಸಿನ ರೋಲ್ ಸಿಕ್ಕಿದೆ.

    ಚಿತ್ರದಲ್ಲಿ ತಾಯಿ ಸುಮಲತಾ ಅವರದ್ದು ಕ್ರಾಂತಿಯಾದರೆ, ಮಗ ಅಜಯ್ ರಾವ್ ಅವರದ್ದು ಆಕ್ರೋಶ, ಆವೇಶದ ಪಾತ್ರ. ನಾಯಕಿ ಅಶಿಕಾ ರಂಗನಾಥ್ ಅವರದ್ದು ಶಾಂತಂ.. ಶಾಂತಂ. ಇವರೆಲ್ಲರ ಸಂಗಮದ ಕಥೆಯೇ ತಾಯಿಗೆ ತಕ್ಕ ಮಗ.

    ನಿರ್ದೇಶಕ ಶಶಾಂಕ್ ಸಿನಿಮಾಸ್ ಬ್ಯಾನರ್‍ನ ಮೊದಲ ಸಿನಿಮಾ ಇದು. ಅಜಯ್ ರಾವ್‍ಗೆ ಇದು 25ನೇ ಸಿನಿಮಾ. ಇಬ್ಬರ ಜೋಡಿಯೂ ಈಗಾಗಲೇ ಸತತ 2 ಹಿಟ್ ಚಿತ್ರಗಳನ್ನು ಕೊಟ್ಟಿದೆ. ಮತ್ತೊಂದು ಹಿಟ್ ನಿರೀಕ್ಷೆಯಲ್ಲಿ ಕಾಯುತ್ತಿದೆ.

  • ಆಲ್ ಇಂಡಿಯಾ ರೋಡಲ್ಲಿ ರ್ಯಾಂಬೋ-2 ಸರ್ಕಸ್

    rambo 2 all india jounery

    Rambo- 2. ಇದು ಕಾಮಿಡಿ  ಥ್ರಿಲ್ಲರ್. ಜರ್ನಿಯಲ್ಲೇ ಸಾಗುವ ಕಥೆ. ಈ ಚಿತ್ರಕ್ಕಾಗಿ ಇಡೀ ಚಿತ್ರತಂಡ ಇಡೀ ಭಾರತವನ್ನು ರೌಂಡ್ ಹೊಡೆದಿದೆ. ಒಂಥರಾ ಲಾರಿ, ಕಾರುಗಳ ಮೇಲೆ ಆಲ್ ಇಂಡಿಯಾ ಪರ್ಮಿಟ್ ಅನ್ನೋ ಬೋರ್ಡ್ ಇರುತ್ತಲ್ಲಾ.. ಆ ಥರ.. ಹೀಗಾಗಿ ಸಿನಿಮಾ ಟೀಂ, ಕರ್ನಾಟಕ, ಜೋಧ್‍ಪುರ ಕಡೆಗೆಲ್ಲ ಹೋಗಿದೆ. ಆದರೆ, ಸಿನಿಮಾದಲ್ಲಿ ಕಥೆ ನಡೆಯೋದು ಉತ್ತರ ಕರ್ನಾಟಕ ಮತ್ತು ಗೋವಾ ಮಧ್ಯೆ ಜರ್ನಿಯಲ್ಲಿ. ಹಾಗಾದರೆ, ರಾಜಸ್ಥನಕ್ಕೆ ಹೋಗೋ ಅಗತ್ಯ ಏನಿತ್ತು ಅಂತೀರಾ..?

    ಸಿನಿಮಾ ಶೂಟಿಂಗ್ ವೇಳೆ ಕರ್ನಾಟಕದಲ್ಲಿ ಮಳೆಯೋ ಮಳೆ.. ಹಸಿರು ತುಂಬಿತ್ತು. ಹೀಗಾಗಿ ಕರ್ನಾಟಕದ ವಾತಾವರಣ ಹೋಲುವ ರಾಜಸ್ಥಾನದ ಪ್ರದೇಶಗಳಲ್ಲಿ ಶೂಟಿಂಗ್ ಮಾಡಲಾಯ್ತು. ಇನ್ನು ಕಥೆಯಲ್ಲಿ ಬರುವ ರಸ್ತೆಯ ಫಲಕಗಳನ್ನು ಕನ್ನಡದಲ್ಲಿ ಕಾಣುವಂತೆ ಮಾಡಲು ಅದೇನೇನು ಸರ್ಕಸ್ ಮಾಡಿದ್ದಾರೋ.. ನಿರ್ದೇಶಕ ಅನಿಲ್ ಚಿತ್ರೀಕರಣದ ರಸಘಳಿಗೆಗಳನ್ನು ಹೇಳಿಕೊಳ್ತಾರೆ.

    ನಾವು ಶೂಟಿಂಗ್‍ಗೆ ಪ್ಲಾನ್ ಮಾಡಿದ್ದು ಉತ್ತರ ಕರ್ನಾಟಕದಲ್ಲಿ. ಆದರೆ, ಶೂಟಿಂಗ್ ಶುರುವಾಗುವ ಹೊತ್ತಿಗೆ ಇಡೀ ಪ್ರದೇಶ ಹಸಿರೋ ಹಸಿರು. ಹೀಗಾಗಿ ರಾಜಸ್ಥಾನ ಹುಡುಕಿಕೊಂಡೆವು. ಗೋವಾದ ದೃಶ್ಯಗಳನ್ನೂ ಅಷ್ಟೆ.. ಕೆಲವು ಸೀನ್‍ಗಳನ್ನು ಗೋವಾ ಹೋಲುವ ರಾಮೇಶ್ವರಂನಲ್ಲಿ ಶೂಟ್ ಮಾಡಲಾಗಿದೆ. ಆದರೆ, ಇದು ಪ್ರೇಕ್ಷಕರಿಗೆ ಗೊತ್ತಾಗಲ್ಲ. ಎಷ್ಟರಮಟ್ಟಿಗೆ ಅಂದ್ರೆ, ರಸ್ತೆಯಲ್ಲಿ ಬರುವ ಫಲಕಗಳನ್ನೂ ಕೂಡಾ ನಾವು ಕನ್ನಡಮಯವಾಗಿಸಿದ್ದೇವೆ. ಹೀಗಾಗಿ ಯಾವುದು ಉತ್ತರ ಕರ್ನಾಟಕ.. ಯಾವುದು ರಾಜಸ್ಥಾನ.. ಎನ್ನುವುದು ಪ್ರೇಕ್ಷಕರಿಗೆ ಗೊತ್ತಾಗಲ್ಲ. ಜೋಧ್‍ಪುರ್, ಜೈಸಲ್ಮೇರ್, ಭಾರತ ಪಾಕಿಸ್ತಾನ ಗಡಿ ಪ್ರದೇಶದಲ್ಲೂ ಶೂಟಿಂಗ್ ಆಗಿದೆ ಎಂದು ಶೂಟಿಂಗ್ ಕಥೆ ಬಿಚ್ಚಿಟ್ಟಿದ್ದಾರೆ ನಿರ್ದೇಶಕ ಅನಿಲ್.

    ಶರಣ್ ಜೊತೆ ಅಶಿಕಾ ರಂಗನಾಥ್ ಜೋಡಿಯಾಗಿದ್ದರೆ, ಚಿಕ್ಕಣ್ಣ ಕಾಂಬಿನೇಷನ್ ಕೂಡಾ ಸಿನಿಮಾದಲ್ಲಿದೆ. ನಾಳೆಯೇ ಸಿನಿಮಾ ರಿಲೀಸ್. ತರುಣ್ ಸುಧೀರ್ ಸಾರಥ್ಯದಲ್ಲಿ ತಂತ್ರಜ್ಞರು ಮತ್ತು ಕಲಾವಿದರು ಒಗ್ಗೂಡಿ ನಿರ್ಮಿಸಿರುವ ಸಿನಿಮಾ ಇದು. 

  • ಆಶಿಕಾ ಸಿಕ್ಕಾಪಟ್ಟೆ ಹಾಟ್ ಹಾಟ್..

    ashika ranganath in rambo 2

    ಆಶಿಕಾ ರಂಗನಾಥ್. ಮುಗುಳುನಗೆ ಚಿತ್ರದ ಮೂಲಕ ಗಮನ ಸೆಳೆದ ಚೆಲುವೆ. ಕ್ರೇಜಿಬಾಯ್ ಚಿತ್ರದಲ್ಲಿಯೂ ನಟಿಸಿದ್ದ ಆಶಿಕಾಗೆ ಹೆಸರು ತಂದುಕೊಟ್ಟಿದ್ದು ಮುಗುಳುನಗೆ. ಎರಡೂ ಸಿನಿಮಾಗಳಲ್ಲಿ ಸ್ವಲ್ಪ ಗ್ಲಾಮರಸ್ ಆಗಿ ಕಾಣಿಸಿದ್ದರೂ, ಕ್ಯೂಟ್ ಬೇಬಿಯಂತೆ ಕಂಗೊಳಿಸಿದ್ದರು. ಹೀಗಿದ್ದ ಆಶಿಕಾ ರಂಗನಾಥ್, Rambo 2 ಚಿತ್ರದಲ್ಲಿ ಸಿಕ್ಕಾಪಟ್ಟೆ ಹಾಟ್ ಆಗಿದ್ದಾರಂತೆ.

    ಹುಡುಗರ ಜೊತೆ ಹೆಚ್ಚಾಗಿ ಮಿಂಗಲ್ ಹಾಗುವ, ಫಾಸ್ಟ್ ಪಾರ್ವರ್ಡ್ ನೇಚರ್ ಹುಡುಗಿಯಾಗಿ ನಟಿಸಿರುವ ಆಶಿಕಾ, ಆ ಪಾತ್ರ ಯುವತಿಯರಿಗಿಂತ ಯುವಕರಿಗೇ ಹೆಚ್ಚು ಕನೆಕ್ಟ್ ಆಗುತ್ತೆ ಅಂತಾರೆ. ಗ್ಲಾಮರ್ ಎಂದರೆ ವ್ಯಕ್ತಿತ್ವವನ್ನು ಗಟ್ಟಿಗೊಳಿಸುವುದೇ ಹೊರತು, ವ್ಯಕ್ತಿತ್ವಕ್ಕೆ ಧಕ್ಕೆ ತರುವಂಥದ್ದಲ್ಲ ಅನ್ನೋದು ಅವರ ವಿವರಣೆ.

  • ಈ ಇಬ್ಬರು ನಟಿಯರ ಅಕೌಂಟ್ ಮೇಲೆ ಹ್ಯಾರ‍್ಸ್ ಕಣ್ಣು..!

    hackers attack manvitha and ashika;s accounts

    ಇತ್ತೀಚೆಗೆ ತೆಲುಗಿನಲ್ಲಿ ಮಿಂಚುತ್ತಿರುವ ಮಲೆನಾಡಿನ ಹುಡುಗಿ ಪೂಜಾ ಹೆಗ್ಡೆ ಅಕೌಂಟ್ ಹ್ಯಾಕ್ ಆಗಿತ್ತು. ಕಂಗನಾ ರಣಾವತ್, ದೀಪಿಕಾ ಪಡುಕೋಣೆ.. ಹೀಗೆ ಹಲವು ದೊಡ್ಡ ದೊಡ್ಡ ಸ್ಟಾರ್‌ಗಳ ಅಕೌಂಟ್‌ಗಳು ಹ್ಯಾಕ್ ಆಗಿದ್ದವು. ಈಗ ಕನ್ನಡದ ನಟಿಯರ ಮೇಲೂ ಹ್ಯಾರ‍್ಸ್ ಕಣ್ಣು ಬಿದ್ದಿದೆ.

    ಹ್ಯಾರ‍್ಸ್ ಕೆಂಗಣ್ಣಿಗೆ ಬಿದ್ದಿರೋ ಆ ಇಬ್ಬರೆಂರೆ ಚುಟು ಚುಟು ಚೆಲುವೆ ಅಶಿಕಾ ರಂಗನಾಥ್ ಮತ್ತು ಟಗರು ಪುಟ್ಟಿ, ಕೆಂಡಸAಪಿಗೆ ಕಿನ್ನರಿ ಮಾನ್ವಿತಾ ಕಾಮತ್. ಇದು ಗೊತ್ತಾಗುತ್ತಿದ್ದಂತೆಯೇ ಇಬ್ಬರೂ ತಮ್ಮ ಅಕೌಂಟ್‌ನ್ನು ಕ್ಲೀನ್ ಮಾಡಿದ್ದಾರೆ. ಅರ್ಥಾತ್, ಹ್ಯಾರ‍್ಸ್ ಅಟ್ಯಾಕ್‌ನಿಂದ ಮುಕ್ತಗೊಳಿಸಿಕೊಂಡಿದ್ದಾರೆ. ಎಲ್ಲವೂ ಸರಿ ಹೋದ ಮೇಲೆ ತಮ್ಮ ಅಭಿಮಾನಿಗಳಿಗೆ, ಫಾಲೋರ‍್ಸ್ಗೆ ಮನವಿ ಮಾಡಿಕೊಂಡಿದ್ದಾರೆ.

    `ನಮ್ಮ ಪೇಜ್‌ನಲ್ಲಿ ಬರೋ ಯಾವುದೇ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ. ಓಪನ್ ಮಾಡಬೇಡಿ' ಎಂದು ಮನವಿ ಮಾಡಿದ್ದಾರೆ.