` kgf, - chitraloka.com | Kannada Movie News, Reviews | Image

kgf,

  • ಕೆಜಿಎಫ್ ನೋಡಿದವರಿಗೆ ಲಡ್ಡು.. ಅದೃಷ್ಟಶಾಲಿಗೆ ಬಂಗಾರ.. ನವರಂಗ್ ಆಫರ್

    navaran theater offers lucky draw gold scheme to kgf lovers

    ಕೆಜಿಎಫ್ ಚಿತ್ರವನ್ನು ಡಿಸೆಂಬರ್ 21ರಿಂದ ಜಗತ್ತಿನೆಲ್ಲೆಡೆ ನೋಡಬಹುದು. ಆದರೆ, ಆ ಸಿನಿಮಾವನ್ನು ನೀವು ನವರಂಗ್‍ನಲ್ಲಿ ಬೆಳಗ್ಗೆ 6 ಗಂಟೆಯ ವಿಶೇಷ ಶೋನಲ್ಲಿ ನೋಡಿದರೆ, ನಿಮಗೆ ಬಹುಮಾನವಿದೆ. ಜೊತೆಗೆ ಸಿಹಿ ಸಿಹಿ ಲಡ್ಡು.

    ಹೌದು, ಇದು ನವರಂಗ್ ಚಿತ್ರಮಂದಿರದ ವಿಶೇಷ ಆಫರ್. 

    ಬೆಳಗ್ಗೆ 6 ಗಂಟೆಗೆ ಶೋಗೆ ಬರುವ ಎಲ್ಲರಿಗೂ ಲಡ್ಡು ಹಂಚುವ ಹಾಗೂ ಅದೃಷ್ಟಶಾಲಿ ಪ್ರೇಕ್ಷಕರಿಗೆ 2 ಗ್ರಾಂ ಚಿನ್ನ ನೀಡುವ ಯೋಜನೆ ಹಮ್ಮಿಕೊಂಡಿದೆ. 

  • ಕೆಜಿಎಫ್ ಪಾರ್ಟ್ 2 ಬರುತ್ತಾ..?

    kgf in two parts?

    ರಾಜಾಮೌಳಿಯ ಬಾಹುಬಲಿ ರಿಲೀಸ್‍ಗೂ ಮೊದಲೇ ಇದು ಸೀಕ್ವೆಲ್‍ಗಳಲ್ಲಿ ಬರಲಿದೆ ಎಂದು ಘೋಷಿಸಿಕೊಂಡಿತ್ತು. ರಾಮ್ ಗೋಪಾಲ್ ವರ್ಮಾನ ರಕ್ತಚರಿತ್ರೆ ಕೂಡಾ ಹಾಗೆಯೇ ಮೊದಲೇ ಘೋಷಿಸಿಕೊಂಡು ಬಂದಿದ್ದ ಸರಣಿ ಚಿತ್ರಗಳು. ಕನ್ನಡದಲ್ಲಿ ಆ ಟ್ರೆಂಡ್ ಹುಟ್ಟು ಹಾಕಿದ್ದು ಕೆಂಡ ಸಂಪಿಗೆ. ಆದರೆ, ಅದೇಕೋ ಏನೋ.. ಆ ಸರಣಿಯ 2ನೇ ಭಾಗ ತೆರೆಗೆ ಬಂದು ಹಿಟ್ ಆದರೂ, ಮೊದಲನೇ ಭಾಗ ಇನ್ನೂ ತೆರೆ ಕಂಡಿಲ್ಲ. ಹೀಗಿರುವಾಗಲೇ, ಕೆಜಿಎಫ್ ಅದೇ ರೀತಿ ಸೀಕ್ವೆಲ್‍ಗಳಲ್ಲಿ ಬರಲಿದೆ ಎಂಬ ಸುದ್ದಿ ಹರಿದಾಡೋಕೆ ಶುರುವಾಗಿದೆ.

    ಉಗ್ರಂ ಖ್ಯಾತಿಯ ಪ್ರಶಾಂತ್ ನೀಲು, ರಾಕಿಂಗ್ ಸ್ಟಾರ್ ಯಶ್ ಹಾಗೂ ನಿರ್ಮಾಪಕ ವಿಜಯ್ ಕಿರಗಂದೂರು ಒಟ್ಟಿಗೇ ಸೇರಿದ್ದಾರೆ ಎಂಬ ಸುದ್ದಿ ಹೊರಬಿದ್ದ ದಿನದಿಂದಲೂ ಕೆಜಿಎಫ್ ನಿರೀಕ್ಷೆ ಹುಟ್ಟಿಸುತ್ತಲೇ ಇದೆ. ಆದರೆ, ಚಿತ್ರ ತಂಡ ಹೊರಗೆ ಮಾತನಾಡುವುದಿಲ್ಲ. ಇಂತಹ ಸುದ್ದಿಗಳಿಗೆ ಸದ್ಯಕ್ಕಂತೂ ಬರವಿಲ್ಲ. ಸದ್ಯಕ್ಕಂತೂ ಗಾಂಧಿನಗರದಲ್ಲಿ ಕೆಜಿಎಫ್ ಚಿತ್ರದ ಸೀಕ್ವೆಲ್ ಬರಲಿದೆ ಎಂಬ ಸುದ್ದಿ ಗಾಂಧಿ ನೋಟಿನಷ್ಟೇ ಸರಾಗವಾಗಿ ಓಡಾಡುತ್ತಿದೆ.

    ಚಿತ್ರದಲ್ಲಿ 1970ರ ದಶಕದ ಕಥೆಯಿದೆಯಂತೆ. ಚಿತ್ರದಲ್ಲಿ 500ಕ್ಕೂ ಹೆಚ್ಚು ಗಡ್ಡಧಾರಿಗಳಿದ್ದಾರಂತೆ. ಇಂತಹ ಸುದ್ದಿಗಳ ಮಧ್ಯೆ ಈಗ ಇನ್ನೊಂದು ಸುದ್ದಿ.. ಕೆಜಿಎಫ್ ಚಿತ್ರದ ಎರಡು ಭಾಗದಲ್ಲಿ ರಿಲೀಸ್ ಆಗಲಿದೆಯಂತೆ. ಸದ್ಯಕ್ಕಿದು ಅಂತೆ ಕಂತೆ ಸುದ್ದಿ ಮಾತ್ರ.

  • ಕೆಜಿಎಫ್ ಪೈರಸಿ ಗೊತ್ತಾದ್ರೆ.. ಈ ನಂ.ಗೆ 8978650014 ಕರೆ ಮಾಡಿ

    kgf team war against piracy

    ಸಿನಿಮಾ ಮಾಡೋದಷ್ಟೆ ಅಲ್ಲ, ಸಿನಿಮಾ ರಿಲೀಸ್ ಮಾಡೋದು ಅತೀ ದೊಡ್ಡ ಚಾಲೆಂಜ್. ಈಗ ಆ ಚಾಲೆಂಜ್‍ಗಳ ಲಿಸ್ಟ್‍ಗೆ ಇನ್ನೊಂದು ಸೇರ್ಪಡೆ, ಚಿತ್ರವನ್ನು ಪೈರಸಿ ಆಗದಂತೆ ತಡೆಯೋದು. ಇತ್ತೀಚೆಗಷ್ಟೇ ರಿಲೀಸ್ ಆದ ರಜನಿ-ಅಕ್ಷಯ್ ಅಭಿನಯದ 2.0 ಸಿನಿಮಾಗೆ ಚಾಲೆಂಜ್ ಹಾಕಿ ಪೈರಸಿ ಮಾಡಿದ್ದರು ಹ್ಯಾಕರ್ಸ್. ಈಗ ಕೆಜಿಎಫ್ ತಂಡಕ್ಕೂ ಆ ಭಯ ಕಾಡುತ್ತಿದೆ. ಹಾಗೆಂದು ಸುಮ್ಮನೆ ಕೂರೋಕಂತೂ ಸಾಧ್ಯವಿಲ್ಲ. ಹೋರಾಡಲೇ ಬೇಕು.

    ಕೆಜಿಎಫ್ ಪೈರಸಿ ಆಗದಂತೆ ತಡೆಯಲು ಹಲವಾರು ಕ್ರಮ ಕೈಗೊಂಡಿರುವ ಕೆಜಿಎಫ್ ತಂಡ, ಅದಕ್ಕಾಗಿಯೇ ಒಂದು ಹೆಲ್ಪ್‍ಲೈನ್ ಆರಂಭಿಸಿದೆ. ಒಂದು ಟೀಂ ಸೆಟ್ ಮಾಡಿದೆ. ನಿಮಗೆ ಎಲ್ಲಾದರೂ ಕೆಜಿಎಫ್‍ನ ಪೈರಸಿ ವಿವರ, ಮಾಹಿತಿ ಸಿಕ್ಕರೆ ತಕ್ಷಣ ಈ ನಂ.ಗೆ 8978650014 ಕರೆ ಮಾಡಿ.

    ಸ್ವತಃ ನಿರ್ಮಾಪಕ ವಿಜಯ್ ಕಿರಗಂದೂರು, ನಟ ಯಶ್, ನಿರ್ದೇಶಕ ಪ್ರಶಾಂತ್ ನೀಲ್..  ಎಲ್ಲರೂ ತಮ್ಮ ಅಭಿಮಾನಿಗಳಿಗೆ ಮಾಡಿರುವ ಮನವಿ ಇದೇ. 4 ವರ್ಷ ಕಷ್ಟಪಟ್ಟು ಸಿನಿಮಾ ಮಾಡಿದ್ದೇವೆ. ಸಿನಿಮಾವನ್ನು ಥಿಯೇಟರಿನಲ್ಲಿಯೇ ನೋಡಿ.

  • ಕೆಜಿಎಫ್ ಫ್ಲಾಪ್ ಎಂದವನಿಗೆ ಜಗ್ಗೇಶ್ ಕ್ಲಾಸ್

    jaggesh lashes out at kgf movie trollers

    ಕನ್ನಡದಲ್ಲಿ ಯಾರು ಏನೇ ಸಾಹಸ ಮಾಡಿದರೂ ಬೆನ್ನು ತಟ್ಟಿ ಪ್ರೋತ್ಸಾಹಿಸುವ, ಹುರಿದುಂಬಿಸುವವರಲ್ಲಿ ಜಗ್ಗೇಶ್ ಮೊದಲಿಗರಾಗಿರುತ್ತಾರೆ. ಆ ಸಾಹಸದಿಂದ ಕನ್ನಡಕ್ಕೆ ಒಳ್ಳೆಯದಾಗಲಿದೆ ಎಂದು ಗೊತ್ತಾದರೆ ಅಷ್ಟೇ ಸಾಕು. ಸಿನಿಮಾ ಯಾರದ್ದೇ ಇರಲಿ, ಜಗ್ಗೇಶ್ ಬೆಂಬಲ ಇದ್ದೇ ಇರುತ್ತೆ. ಈಗ ಕೆಜಿಎಫ್ ಜೋರು ಸದ್ದು ಮಾಡುತ್ತಿದೆ. ಇಡೀ ಭಾರತೀಯ ಚಿತ್ರರಂಗವೇ ಕೆಜಿಎಫ್‍ನತ್ತ ತಿರುಗಿ ನೋಡುತ್ತಿದೆ. ಹೀಗಿರುವಾಗಲೆ ಕೆಲವರು ಝೀರೋ ಎದುರು ಕೆಜಿಎಫ್ ಫ್ಲಾಪ್ ಆಗಲಿದೆ ಎಂದು ವಿಕೃತ ಸಂತೋಷ ಅನುಭವಿಸುತ್ತಿದ್ದಾರೆ. ಇದು ಜಗ್ಗೇಶ್‍ರನ್ನು ಕೆರಳಿಸಿದೆ. ಆದರೂ ತಾಳ್ಮೆಯಿಂದಲೇ ಪ್ರತಿಕ್ರಿಯೆ ನೀಡಿರುವ ಜಗ್ಗೇಶ್ ``ಕನ್ನಡದ ಬೆಳವಣಿಗೆಗೆ ಶ್ರಮಿಸುವ ಯಾರೇ ಆಗಲಿ, ಭುಜ ತಟ್ಟಿ ಹುರಿದುಂಬಿಸುವವನೇ ನಿಜವಾದ ಕನ್ನಡಿಗ. ಅಸೂಯೆ ಪಡುವವನು ಸಾಧಿಸಲಾಗದ ಸಾಧಿಸಿದವರನ್ನು ಸಹಿಸಲಾಗದ ನಿಷ್ಪ್ರಯೋಜಕ. ನಮ್ಮ ಕಲಾಬಂಧುಗಳಿಂದ ಕನ್ನಡ ಚಿತ್ರರಂಗ ಮುಂಚೂಣಿಗೆ ನುಗ್ಗುತ್ತಿದೆ ಹೆಮ್ಮೆ ಪಡಿ. ಪರಭಾಷಿಕರಿಗೆ ಕನ್ನಡ ಚಿತ್ರರಂಗ ಕುತೂಹಲ ಮೂಡಿಸುತ್ತಿದೆ. ಜೈ ಎನ್ನಿ'' ಎಂದಿದ್ದಾರೆ ಜಗ್ಗೇಶ್. ಕೆಜಿಎಫ್ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ ನವರಸನಾಯಕ ಜಗ್ಗೇಶ್.

    ಕೆಜಿಎಫ್ ಟ್ರೇಲರ್ ಇದೇ ದಿನ ರಿಲೀಸ್ ಆಗುತ್ತಿದ್ದು ಡಿಸೆಂಬರ್ 21ಕ್ಕೆ ಚಿತ್ರಮಂದಿರಕ್ಕೆ ನುಗ್ಗಲಿದೆ. ಅದೇ ದಿನ ಶಾರೂಕ್ ಖಾನ್ ಅಭಿನಯದ ಝೀರೋ ಚಿತ್ರವೂ ತೆರೆ ಕಾಣುತ್ತಿದೆ.

  • ಕೆಜಿಎಫ್ ಬಗ್ಗೆ ಮಾತ್ರ ಮಾತನಾಡೋಣ ಎಂದರೇಕೆ ಯಶ್..?

    lets talkonly on kgy says yash

    ರಾಕಿಂಗ್ ಸ್ಟಾರ್ ಯಶ್, ಈಗ ಬಿಡುವೇ ಇಲ್ಲದಂತೆ ಓಡಾಡುತ್ತಿದ್ದಾರೆ. ಕೆಜಿಎಫ್ ಬಿಡುಗಡೆಯ ಅಂತಿಮ ಸಿದ್ಧತೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅವರೀಗ ಕೆಜಿಎಫ್ ಬಿಟ್ಟು ಮಿಕ್ಕ ಯಾವುದೇ ವಿಚಾರದ ಬಗ್ಗೆ ಮಾತನಾಡೋದಿಲ್ಲ. ಹೀಗಿರುವಾಗ ಕೆಜಿಎಫ್ ಬಗ್ಗೆ ಮಾತ್ರ ಮಾತನಾಡೋಣ ಎಂದು ಅವರೇ ಹೇಳಿದ್ದಕ್ಕೆ ಕಾರಣವೂ ಇದೆ. ಅದಕ್ಕೆ ಕಾರಣ, ಯಶ್ ಬಗ್ಗೆ ಹಬ್ಬಿದ ಒಂದು ಗಾಳಿಸುದ್ದಿ.

    ಯಶ್, ರಾಜಮೌಳಿ ಚಿತ್ರದಲ್ಲಿ ನಟಿಸಲಿದ್ದಾರಂತೆ. ರಾಜಮೌಳಿಯವರು ಯಶ್ ಅವರನ್ನ ಕಾಂಟ್ಯಾಕ್ಟ್ ಮಾಡಿದ್ದಾರಂತೆ ಎಂದೆಲ್ಲ ಸುದ್ದಿ ಹಬ್ಬಿತ್ತು. ಈ ಕುರಿತು ಸ್ಪಷ್ಟನೆ ನೀಡಿರುವ ಯಶ್, ಸುಖಾಸುಮ್ಮನೆ ದೊಡ್ಡ ದೊಡ್ಡ ನಿರ್ದೇಶಕರ ಹೆಸರನ್ನು ಬಳಸಿಕೊಳ್ಳಬೇಡಿ. ನಾನು ರಾಜಮೌಳಿ ಚಿತ್ರದಲ್ಲಿ ನಟಿಸುತ್ತಿಲ್ಲ. ಅವರು ನನ್ನನ್ನು ಸಂಪರ್ಕಿಸಿಯೂ ಇಲ್ಲ ಎಂದು ಸ್ಟ್ರೈಟ್ ಫಾರ್ವರ್ಡ್ ಉತ್ತರ ಕೊಟ್ಟಿದ್ದಾರೆ.

    ಕೆಜಿಎಫ್ ಬಿಡುಗಡೆ ಹೊತ್ತಲ್ಲಿ.. ಕೇವಲ ಕೆಜಿಎಫ್ ಬಗ್ಗೆ ಮಾತನಾಡೋಣ ಎನ್ನುವ ಮೂಲಕ ತಮ್ಮ ವೃತ್ತಿಜೀವನದಲ್ಲಿ ಕೆಜಿಎಫ್ ಎಷ್ಟು ದೊಡ್ಡ ಸಿನಿಮಾ ಅನ್ನೋದನ್ನ ನೇರವಾಗಿ ಹೇಳಿದ್ದಾರೆ.

    Related Articles :-

    Not in Rajamouli film says Yash

  • ಕೆಜಿಎಫ್ ಬೈಕ್ ಹಿಂದಿನ ರೋಚಕ ಕಥೆ

    story behind kgf's bike

    ಕೆಜಿಎಫ್, ಚಿತ್ರೀಕರಣ ಹಂತದಲ್ಲಿರುವಾಗಲೇ ಚಿತ್ರದ ಕುರಿತ ಒಂದೊಂದೇ ರೋಚಕ ಸಂಗತಿಗಳು ಕುತೂಹಲ ಹುಟ್ಟಿಸುತ್ತಿವೆ. ಅಂಥದ್ದೇ ಕುತೂಹಲ ಹುಟ್ಟಿಸಿದ್ದುದು ಚಿತ್ರದ ಪೋಸ್ಟರ್‍ನಲ್ಲಿ ಬಳಕೆಯಾಗಿದ್ದ ಬೈಕ್. ಏಕೆಂದರೆ, ವಾಸ್ತವದಲ್ಲಿ ಅಂಥಾದ್ದೊಂದು  ಮಾಡೆಲ್‍ನ ಬೈಕ್ ಇಲ್ಲ.

    ಹಾಗಾದರೆ, ಈ ಬೈಕ್ ಸಿದ್ಧ ಮಾಡಿದ್ದು ಯಾರು..? ಅದರ ಹಿಂದಿರೋದು ಸಿನಿಮಾದ ಕೊರಿಯೋಗ್ರಾಫರ್ ಭುವನ್ ಗೌಡ & ಅವರ ಟೀಂ. ಪ್ರಶಾಂತ್ ನೀಲ್ ಅವರಿಗೆ ಸಿನಿಮಾದಲ್ಲಿ ಹೀರೋಗೆ ಒಂದು ಡಿಫರೆಂಟಾದ ಬೈಕು ಬೇಕು ಎನಿಸಿತ್ತು. ಅದನ್ನು ಭುವನ್ ಗೌಡ ಅವರಿಗೆ ಹೇಳಿದರು. ಅಂಥಾದ್ದೊಂದು ಬೈಕ್ ಹುಡುಕಿಕೊಂಡು ಹೊರಟ ತಂಡ ರಾಯಲ್ ಎನ್‍ಫೀಲ್ಡ್‍ನ  ಟ್ರ್ಯಾಂಪ್ 500 ಸಿಸಿ ಬೈಕ್ ಖರೀದಿಸಿತು. ಅದನ್ನು ವಿದ್ಯಾಪೀಠ ಸರ್ಕಲ್ ಬಳಿ ಇರೋ ಬೇಗ್ ಅವರ ಗ್ಯಾರೇಜ್‍ಗೆ ಕೊಟ್ಟಿತು.

    ಅವರು ಕೇವಲ ಎಂಜಿನ್‍ನ್ನಷ್ಟೇ ಉಳಿಸಿಕೊಂಡು, ಮಿಕ್ಕಿದ್ದನ್ನೆಲ್ಲ ವಿಶೇಷವಾಗಿ ರೂಪಿಸಿಬಿಟ್ಟರು. ಜೊತೆಗೆ ನಿಂತವರು ಭುವನ್ ಗೌಡ, ಅವರ ಟೀಂನ ಆಕಾಶ್.

    ಈಗ ಕೆಜಿಎಫ್‍ನ ಈ ಬೈಕ್ ಅಪಾರ ಮೆಚ್ಚುಗೆ ಗಳಿಸುತ್ತಿದೆ. ಬೈಕ್‍ಗಳ ಕ್ರೇಜ್ ಹೊಂದಿರುವವರಂತೂ ಈಗಾಗಲೇ ಅದೇ ರೀತಿಯ ಬೈಕ್ ಡಿಸೈನ್ ಮಾಡಿಸುತ್ತಿದ್ದಾರೆ. ಶೂಟಿಂಗ್ ಮುಗಿಯುವ ಮೊದಲೇ ಕೆಜಿಎಫ್ ಕ್ರೇಜ್ ಶುರುವಾಗಿದೆ.

  • ಕೆಜಿಎಫ್ ಮೇಕಿಂಗ್‍ಗೆ ಫಿದಾ ಆದ ಪ್ರೇಕ್ಷಕರು

    fans completely in love with kgf

    ಕೆಜಿಎಫ್ ಚಿತ್ರ ಎಲ್ಲ ಅಡೆತಡೆಗಳ ಮಧ್ಯೆಯೂ ರಿಲೀಸ್ ಆಗಿದೆ. ಮೈಸೂರಿನಲ್ಲಿ ಮಧ್ಯರಾತ್ರಿ 1 ಗಂಟೆಗೆ ಶೋ ನಡೆದಿದೆ. ಮೈಸೂರಿನ ಡಿಆರ್‍ಸಿ ಚಿತ್ರಮಂದಿರದಲ್ಲಿ ಮಧ್ಯರಾತ್ರಿ ಎರಡು ಶೋ ನಡೆದಿವೆ. ಬೆಳಕು ಹರಿಯುವ ಮುನ್ನವೇ ಶೋ ನಡೆದಿರುವುದು ವಿಶೇಷ.

    ಮೇನ್ ಥಿಯೇಟರ್ ನರ್ತಕಿಯಲ್ಲಿ ರಾತ್ರಿಯಿಡೀ ಕಾದು ನಿಂತಿದ್ದ ಪ್ರೇಕ್ಷಕರು, ಬೆಳ್ಳಂಬೆಳಗ್ಗೆಯೇ ಕೆಜಿಎಫ್‍ನ್ನು ಕಣ್ತುಂಬಿಕೊಂಡಿದ್ದಾರೆ. ರಿಲೀಸ್ ಆದ ಎಲ್ಲ ಕಡೆ ಚಿತ್ರ ಹೌಸ್‍ಫುಲ್. ರಾಜ್ಯದ ಹಲವೆಡೆ ಯಶ್ ಅಭಿಮಾನಿಗಳು, ಯಶ್ ಕಟೌಟ್‍ಗೆ ಹಾಲಿನ ಅಭಿಷೇಕ ನಡೆಸಿದ್ದಾರೆ. 

    ಇಷ್ಟೆಲ್ಲದರ ಮಧ್ಯೆ ಮಧ್ಯರಾತ್ರಿಯೇ ಸಿನಿಮಾ ನೋಡಿದ ವಿದೇಶದ ಪ್ರೇಕ್ಷಕರು, ಯಶ್ ಮತ್ತು ಪ್ರಶಾಂತ್ ನೀಲ್‍ಗೆ ಮೆಚ್ಚುಗೆಯ ಸುರಿಮಳೆ ಸುರಿಸಿದ್ದಾರೆ. ರವಿ ಬಸ್ರೂರು ಸಂಗೀತ ಹಾಗೂ ಭುವನ್ ಗೌಡ ಕ್ಯಾಮೆರಾಗೆ ಹೆಚ್ಚಿನ ಸ್ಕೋರ್ ಕೊಟ್ಟಿದ್ದಾರೆ

  • ಕೆಜಿಎಫ್ ರಿಲೀಸ್ ಡೇಟ್ ಫಿಕ್ಸ್

    kgf release date fix

    ರಾಕಿಂಗ್ ಸ್ಟಾರ್ ಯಶ್ ಅಭಿನಯದ, ಉಗ್ರಂ ಖ್ಯಾತಿಯ ಪ್ರಶಾಂತ್ ನೀಲ್ ನಿರ್ದೇಶನದ, ರಾಜಕುಮಾರ ಖ್ಯಾತಿಯ ವಿಜಯ್ ಕಿರಗಂದೂರು, ಕಾರ್ತಿಕ್ ಗೌಡ ನಿರ್ಮಾಣದ ಸಿನಿಮಾ. ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ ಹಾಗೂ ಉರ್ದು ಭಾಷೆಯಲ್ಲಿ ಏಕಕಾಲಕ್ಕೆ ಬರುತ್ತಿರುವ ಸಿನಿಮಾ ರಿಲೀಸ್ ಆಗುವುದು ಮಾರ್ಚ್‍ನಲ್ಲಿ. ಮಾರ್ಚ್ 21ಕ್ಕೆ ಚಿತ್ರವನ್ನು ರಿಲೀಸ್ ಮಾಡುವ ಯೋಚನೆಯಲ್ಲಿದೆ ಚಿತ್ರತಂಡ.

    ಚಿತ್ರದ ಶೂಟಿಂಗ್ ಫೈನಲ್ ಹಂತಕ್ಕೆ ಬಂದಿದ್ದು, ಡಿಸೆಂಬರ್‍ನಿಂದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಶುರುವಾಗಲಿವೆ. ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಅದ್ಧೂರಿ ಚಿತ್ರವಾಗುತ್ತಿರುವ ಕೆಜಿಎಫ್ ಚಿತ್ರ ಡಿಸೆಂಬರ್‍ನಲ್ಲೇ ರಿಲೀಸ್ ಆಗಬೇಕಿತ್ತು. ತಾಂತ್ರಿಕ ಕಾರಣಗಳಿಂದಾಗಿ ವಿಳಂಬವಾಗಿದ್ದರೂ, ಮಾರ್ಚ್‍ಗೆ ಚಿತ್ರವನ್ನು ಥಿಯೇಟರ್‍ಗೆ ತಂದೇ ತರಲು ಚಿತ್ರತಂಡ  ನಿರ್ಧರಿಸಿದೆ.

  • ಕೆಜಿಎಫ್ ರಿಲೀಸ್ ಮುಂದೂಡ್ತಾರಂತೆ.. ಹೌದಾ..?

    will kgf release date being postponed

    ರಾಕಿಂಗ್ ಸ್ಟಾರ್ ಯಶ್ ಅಭಿನಯದ, ಹೊಂಬಾಳೆ ಪ್ರೊಡಕ್ಷನ್ಸ್ ನಿರ್ಮಾಣದ ಉಗ್ರಂ ಪ್ರಶಾಂತ್ ನೀಲ್ ನಿರ್ದೇಶನದ ಸಿನಿಮಾ ಇದು. 2 ವರ್ಷಗಳಿಂದ ನಿರ್ಮಾಣವಾಗುತ್ತಿರುವ ಈ ಬಹುನಿರೀಕ್ಷಿತ ಚಿತ್ರದ ರಿಲೀಸ್ ಮುಂದಕ್ಕೆ ಹೋಯ್ತಾ..? ಇದು ಸದ್ಯಕ್ಕೆ ಗಾಂಧಿನಗರದ ಸೆನ್ಸೇಷನಲ್ ಸುದ್ದಿ. 

    ಅಕ್ಟೋಬರ್ 14ಕ್ಕೆ ಕೆಜಿಎಫ್ ಟೀಸರ್ ಬಿಡುಗಡೆ ಹಾಗೂ ನವೆಂಬರ್ 16ಕ್ಕೆ ರಿಲೀಸ್ ಎಂದು ಹೇಳಿದ್ದ ಚಿತ್ರತಂಡ, ತಾಂತ್ರಿಕ ಕಾರಣಗಳಿಂದಾಗಿ ಚಿತ್ರದ ಬಿಡುಗಡೆಯನ್ನು ಮುಂದೆ ಹಾಕಿದೆಯಂತೆ. ಇದು ಗಾಂಧಿನಗರದಲ್ಲಿ ಹರಿದಾಡುತ್ತಿರುವ ಸುದ್ದಿ. ಇದರ ಪ್ರಕಾರ, ಕೆಜಿಎಫ್ ಬಿಡುಗಡೆ ಡಿಸೆಂಬರ್ 3ನೇ ವಾರದಲ್ಲಿ ಆಗಲಿದೆ. 

  • ಕೆಜಿಎಫ್ ರಿಲೀಸ್ ಯಾವಾಗ..? - ಸೆ.19ಕ್ಕೆ ಹೇಳ್ತಾರೆ

    kgf release date to be announced on sep 19th

    ದೊಡ್ಡ ದೊಡ್ಡ ಸಿನಿಮಾಗಳ ರಿಲೀಸ್ ಡೇಟ್ ಹೇಳಲಿಕ್ಕೆಂದೇ ಒಂದು ಡೇಟ್ ಫಿಕ್ಸ್ ಮಾಡುವ ಟ್ರೆಂಡ್ ಶುರುವಾಗಿದೆಯಾ..? ದಿ ವಿಲನ್ ತಂಡ, ಗಣೇಶನ ಹಬ್ಬದ ದಿನ ರಿಲೀಸ್ ಡೇಟ್ ಹೇಳುತ್ತೇವೆ ಎಂದಿದ್ದರೆ, ಕೆಜಿಎಫ್ ಚಿತ್ರತಂಡವೂ ರಿಲೀಸ್ ಡೇಟ್ ಹೇಳಲಿಕ್ಕೆಂದೆ ಒಂದು ಡೇಟ್ ಫಿಕ್ಸ್ ಮಾಡಿದೆ.

    ಸೆಪ್ಟೆಂಬರ್ 19ರಂದು ಕೆಜಿಎಫ್ ಚಿತ್ರದ ಟ್ರೇಲರ್ ರಿಲೀಸ್ ಆಗುತ್ತಿದೆ. ಆ ದಿನವೇ ಚಿತ್ರದ ಬಿಡುಗಡೆ ದಿನಾಂಕ ಹೇಳಲಿದೆ ಕೆಜಿಎಫ್ ಟೀಂ. ಯಶ್ ಅಭಿನಯದ ಪ್ರಶಾಂತ್ ನೀಲ್ ನಿರ್ದೇಶನದ ಚಿತ್ರ, ಹೊಂಬಾಳೆ ಬ್ಯಾನರ್‍ನ ಬಹು ನಿರೀಕ್ಷಿತ ಚಿತ್ರ. ಕನ್ನಡದ ಬಿಗ್ ಬಜೆಟ್ ಚಿತ್ರವಾಗಿರೋ ಕೆಜಿಎಫ್, ಹೆಚ್ಚೂ ಕಡಿಮೆ 2 ವರ್ಷಗಳಿಂದ ವಿವಿಧ ಹಂತಗಳಲ್ಲಿ ಸಿದ್ಧವಾಗುತ್ತಿದೆ. ಸದ್ಯಕ್ಕೀಗ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.

    Related Articles :-

    'KGF' Release Date To Be Announced On Sep 19th

  • ಕೆಜಿಎಫ್ ರಿಲೀಸ್‍ಗೂ ಮುನ್ನ ರಾಕಿಂಗ್ ಸ್ಟಾರ್ ತೀರ್ಥಯಾತ್ರೆ..

    kgf team visits temple before movie release

    ಕೊಲ್ಲೂರು ಮೂಕಾಂಬಿಕೆ, ಧರ್ಮಸ್ಥಳ ಮಂಜುನಾಥೇಶ್ವರ, ಕುಕ್ಕೆ ಸುಬ್ರಹ್ಮಣ್ಯ.. ಹೀಗೆ ರಾಕಿಂಗ್ ಸ್ಟಾರ್ ಯಶ್ ಮತ್ತು ಕೆಜಿಎಫ್ ನಿರ್ಮಾಪಕ ವಿಜಯ್ ಕಿರಗಂದೂರು, ಪುಣ್ಯಕ್ಷೇತ್ರಗಳ ಯಾತ್ರೆ ಮಾಡಿದ್ದಾರೆ.

    ಕೊಲ್ಲೂರಿಗೆ ಹೆಲಿಕಾಪ್ಟರ್‍ನಲ್ಲಿ ಬಂದಿಳಿದ ಯಶ್ ಮತ್ತು ನಿರ್ಮಾಪಕ ವಿಜಯ್ ಕಿರಗಂದೂರು, ಮೂಕಾಂಬಿಕೆಗೆ ವಿಶೇಷ ಪೂಜೆ ಸಲ್ಲಿಸಿದರು. ಕಾಣಿಕೆ ಅರ್ಪಿಸಿದರು.

    ನಂತರ ಧರ್ಮಸ್ಥಳಕ್ಕೆ ತೆರಳಿ, ಮಂಜುನಾಥನ ದರ್ಶನ ಪಡೆದರು. ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ಆಶೀರ್ವಾದ ಪಡೆದರು. ಅದಾದ ಬಳಿಕ, ಕುಕ್ಕೆ ಸುಬ್ರಹ್ಮಣ್ಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.

  • ಕೆಜಿಎಫ್ ರಿಲೀಸ್‍ಗೂ ಮೊದಲೇ ಯಶ್ 100+

    yash crossed century before kgf release

    ಕೆಜಿಎಫ್ ರಿಲೀಸ್‍ಗೆ ಉಳಿದಿರೋದು ಇನ್ನೊಂದೇ ಒಂದು ದಿನ. ನಾಳೆ ಇಷ್ಟು ಹೊತ್ತಿಗೆ ಜಗತ್ತಿನ ಎಲ್ಲ ಕಡೆ ಕೆಜಿಎಫ್ ಫಸ್ಟ್ ರಿಪೋರ್ಟ್ ಬಂದಿರುತ್ತೆ. ಇದು ಸೂಪರ್ ಸಕ್ಸಸ್ ಆಗಲಿದೆ.. ಆಗಲೇಬೇಕು.. ಇದು ಕೆಜಿಎಫ್ ನಿರ್ಮಾಪಕರಷ್ಟೇ ಅಲ್ಲ, ಕೆಜಿಎಫ್ ಟೀಂ ಹಾಗೂ ಚಿತ್ರರಂಗದವರ ಬಯಕೆ. ಇದರ ನಡುವೆಯೇ ರಾಕಿಂಗ್ ಸ್ಟಾರ್ ಸದ್ದಿಲ್ಲದೇ ಸೆಂಚುರಿ ಬಾರಿಸಿಬಿಟ್ಟಿದ್ದಾರೆ.

    ಹೇಗೆ ಅಂತೀರಾ.. ಕೆಜಿಎಫ್ ಚಿತ್ರದ ಪ್ರಚಾರದಲ್ಲಿ ಬ್ಯುಸಿಯಾಗಿರುವ ಯಶ್, 100ಕ್ಕೂ ಹೆಚ್ಚು ಸಂದರ್ಶನಗಳನ್ನೆದುರಿಸಿದ್ದಾರೆ. ಹೌದು, ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲಿ ರಿಲೀಸ್ ಆಗುತ್ತಿರುವ ಚಿತ್ರವನ್ನು ಅಷ್ಟೇ ಅದ್ಧೂರಿಯಾಗಿ ಪ್ರಚಾರ ಮಾಡಬೇಕಲ್ಲ. ಹೀಗಾಗಿ ಯಶ್, ಟಿವಿ, ಪತ್ರಿಕೆ, ವೆಬ್‍ಸೈಟ್‍ಗಳೂ ಸೇರಿದಂತೆ ನೀಡಿರುವ ಸಂದರ್ಶನಗಳ ಸಂಖ್ಯೆ 100ರ ಗಡಿ ದಾಟಿದೆ. ಇಷ್ಟೆಲ್ಲ ಶ್ರಮ ಹಾಕಿದ ಮೇಲೆ ಚಿತ್ರ ಗೆಲ್ಲಲೇಬೆಕಲ್ಲವೇ..

  • ಕೆಜಿಎಫ್ ರಿಲೀಸ್‍ಗೂ ಮೊದಲೇ ಲೀಕ್ ಆಯ್ತಾ..?

    is kgf leaked ?

    ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾ, ರಿಲೀಸ್‍ಗೂ ಮೊದಲೇ ಲೀಕ್ ಆಗಿಬಿಡ್ತಾ..? ಚಿತ್ರರಂಗವನ್ನು ಬೇತಾಳದಂತೆ ಕಾಡುತ್ತಿರುವ ಪೈರಸಿ ಭೂತ, ಕೆಜಿಎಫ್‍ನ್ನು ಆಕ್ರಮಿಸಿತಾ..? ಒಂದು ದೊಡ್ಡ ಆತಂಕ ಕಾಡೋಕೆ ಶುರುವಾಗಿದೆ. ಅದಕ್ಕೆ ಕಾರಣ ಆನ್‍ಲೈನ್‍ನಲ್ಲಿ ಕಾಣಿಸಿಕೊಂಡ ಎರಡು ಫೋಟೋಗಳು.

    ಆ ಫೋಟೋಗಳ ಮೇಲೆ ಇದುವರೆಗೆ ಟ್ರೇಲರ್‍ನಲ್ಲಿ ಕಾಣಿಸದೇ ಇರುವ ದೃಶ್ಯವಿದೆ. ಜೊತೆಗೆ ಸೆನ್ಸಾರ್ ಕಾಪಿ ಎನ್ನುವುದೂ ಕಾಣುತ್ತಿದೆ. ಹಾಗಾದರೆ, ಕೆಜಿಎಫ್ ಲೀಕ್ ಆಗಿದೆಯಾ..? 

    ಕೋಟಿ ಕೋಟಿ ಬಂಡವಾಳ ಸುರಿದು, ಕನ್ನಡ ಚಿತ್ರರಂಗ ಯಾವುದಕ್ಕೂ.. ಯಾರಿಗೂ ಕಡಿಮೆ ಇಲ್ಲ ಎಂದು ತೋರಿಸಲು ಹೊರಟ ವಿಜಯ್ ಕಿರಗಂದೂರುಗೆ ಇದು ದೊಡ್ಡ ಶಾಕ್.

    ಇತ್ತೀಚೆಗೆ ಬಿಡುಗಡೆಯಾಗುವ ಪ್ರತಿ ದೊಡ್ಡ ಚಿತ್ರವನ್ನೂ ಆನ್‍ಲೈನ್‍ನಲ್ಲಿ ಲೀಕ್ ಮಾಡುವ ಹ್ಯಾಕರ್‍ಗಳ ದೊಡ್ಡ ತಂಡವೇ ಜಗತ್ತಿನ ವಿವಿಧೆಡೆ ಕೆಲಸ ಮಾಡುತ್ತಿದೆ. ಕೆಜಿಎಫ್, ಇಂತಹ ಪೈರಸಿಕಳ್ಳರ ವಿರುದ್ಧವೂ ಎಚ್ಚೆತ್ತುಕೊಳ್ಳಲೇಬೇಕು. ರಿಲೀಸ್‍ಗೆ ತಲೆಕೆಡಿಸಿಕೊಳ್ಳುವಷ್ಟೇ ಅಥವಾ ಅದಕ್ಕಿಂತಲೂ ಹೆಚ್ಚು, ಈ ವಿಚಾರದ ಬಗ್ಗೆ ಎಚ್ಚರವಹಿಸಬೇಕು. 

  • ಕೆಜಿಎಫ್ ವಿವಾದಕ್ಕೆ ಕಿಶೋರ್ ಮತ್ತೊಂದು ಸ್ಪಷ್ಟನೆ : ಹೇಳಿದ್ದೇ ಬೇರೆ.. ಆಗಿದ್ದೇ ಬೇರೆ..

    ಕೆಜಿಎಫ್ ವಿವಾದಕ್ಕೆ ಕಿಶೋರ್ ಮತ್ತೊಂದು ಸ್ಪಷ್ಟನೆ : ಹೇಳಿದ್ದೇ ಬೇರೆ.. ಆಗಿದ್ದೇ ಬೇರೆ..

    ನಟ ಕಿಶೋರ್ ಕೆಜಿಎಫ್ ಕುರಿತು ನೀಡಿದ್ದ ಹೇಳಿಕೆಯೊಂದ ವಿವಾದಕ್ಕೆ ಕಾರಣವಾಗಿತ್ತು. ಕೆಜಿಎಫ್ ನನ್ನ ಆಯ್ಕೆಯ ಸಿನಿಮಾ ಅಲ್ಲ. ಮೈಂಡ್‍ಲೆಸ್ ಸಿನಿಮಾ. ನಾನಂತೂ ಕೆಜಿಎಫ್ ನೋಡಿಲ್ಲ ಎಂದಿದ್ದ ಹೇಳಿಕೆ ಬಿರುಗಾಳಿಯೆಬ್ಬಿಸಿತ್ತು. ಇದೀಗ ನಟ ಕಿಶೋರ್ ಮತ್ತೊಮ್ಮೆ ವಿವಾದಕ್ಕೆ ಸ್ಪಷ್ಟನೆ ಕೊಟ್ಟಿದ್ದಾರೆ. ಮೈಂಡ್‍ಲೆಸ್ ನನ್ನ ಪದ ಅಲ್ಲ. ಅದು ಹೇಗೆ ವಿವಾದವಾಯಿತೋ ಗೊತ್ತಿಲ್ಲ ಎಂದಿರೋ ಕಿಶೋರ್ ಘಟನೆ ಹಾಗೂ ವಿವಾದದ ಹಿಂದಿನ ಕಾರಣ ಮತ್ತು ಹೇಳಿಕೆಗಳನ್ನು ಮತ್ತೊಮ್ಮೆ ವಿವರಿಸಿದ್ದಾರೆ.

    ಅದೊಂದು ಹಳೆಯ ಸಂದರ್ಶನ. ನಟಿ ರಶ್ಮಿಕಾ ಮಂದಣ್ಣ ಅವರನ್ನು ಬ್ಯಾನ್ ಮಾಡಬೇಕು ಎಂಬ ಆಗ್ರಹ ಕೇಳಿ ಬಂದಿತ್ತು. ಕಾಂತಾರ ಚಿತ್ರವನ್ನು ರಶ್ಮಿಕಾ ಮಂದಣ್ಣ ಅವರು ಇನ್ನೂ ನೋಡಿಲ್ಲ ಎನ್ನುವುದೇ ವಿವಾದಕ್ಕೆ ಕಾರಣವಾಗಿತ್ತು. ಆ ಪ್ರಶ್ನೆಗೆ ಉತ್ತರವಾಗಿ ನಾನು ಕೇಳಿದ್ದು ಇದು. ನಾನೂ ಕೂಡಾ ಕೆಜಿಎಫ್ ಸಿನಿಮಾ ನೋಡಿಲ್ಲ. ಹಾಗಂತ ನನ್ನನ್ನು ಬ್ಯಾನ್ ಮಾಡ್ತೀರಾ ಎಂದು ಪ್ರಶ್ನೆ ಹಾಕಿದ್ದೆ. ಪ್ರತಿಯಬ್ಬ ವ್ಯಕ್ತಿಗೂ ಆಯ್ಕೆಯ ಸ್ವಾತಂತ್ರ್ಯ ಇದೆ ಎಂದು ಹೇಳಿದ್ದೆ.ಆಗ ನೀಡಿದ್ದ ಸಂದರ್ಶನ ಈಗೇಕೆ ವಿವಾದವಾಯ್ತೋ ಗೊತ್ತಿಲ್ಲ. ಅಲ್ಲೆಲ್ಲೂ ನಾನು ಕೆಜಿಎಫ್ ಮೈಂಡ್‍ಲೆಸ್ ಸಿನಿಮಾ ಎಂದು ಹೇಳಿಲ್ಲ ಎಂದಿದ್ದಾರೆ ಕಿಶೋರ್.

    ಅಂತಹ ಚಿತ್ರಗಳನ್ನು ನಾನು ನೋಡುವುದಿಲ್ಲ ಎಂದಿದ್ದು ನಿಜ. ನಾನು ಕೂಡಾ ಹಣಕ್ಕಾಗಿ ಕಮರ್ಷಿಯಲ್ ಚಿತ್ರಗಳಲ್ಲಿ ನಟಿಸಿದ್ದೇನೆ. ನಿಮಗೆ ತಮಿಳಿನ ವಿಸಾರಣೈ ಗೊತ್ತಿರಬಹುದು. ಒಳ್ಳೆಯ ಚಿತ್ರವೇ. ನಾನೂ ನಟಿಸಿದ್ದ ಚಿತ್ರ. ಆದರೆ ಆ ಚಿತ್ರವನ್ನು ನಾನು ನೋಡಲಿಲ್ಲ. ಹಿಂಸೆಯನ್ನು ಸಹಿಸಿಕೊಳ್ಳುವುದು ನನಗೆ ಆಗಲಿಲ್ಲ. ಪ್ರತಿ ಪ್ರೇಕ್ಷಕರಿಗೂ ಆಯ್ಕೆಗಳಿರುತ್ತವೆ ಎಂದಿದ್ದಾರೆ ಕಿಶೋರ್.

    ಈಗಲೂ ನಾನು ಹೇಳುತ್ತೇನೆ. ಸಣ್ಣ ಸಣ್ಣ ಸಿನಿಮಾಗಳು, ಗಂಭೀರ ವಿಚಾರ ಹೇಳಿರುವ ಚಿತ್ರಗಳನ್ನು ವೈಯಕ್ತಿಕವಾಗಿ ನೋಡೋಕೆ ಇಷ್ಟಪಡುತ್ತೇನೆ. ಕೆಜಿಎಫ್ ಚಿತ್ರದಿಂದ ಕಲಿಯುವುದು ಸಾಕಷ್ಟಿದೆ. ಒಬ್ಬ ತಂತ್ರಜ್ಞನಾಗಿ ಆ ಸಿನಿಮಾದಿಂದ ಕಲಿತ ವಿಷಯಗಳಿವೆ. ಯಶಸ್ಸಿನಿಂದ ಸಂತೋಷವಿದೆ. ಇಷ್ಟಿದ್ದರೂ ಕೆಜಿಎಫ್ ನನ್ನ ಆಯ್ಕೆಯ ಸಿನಿಮಾ ಅಲ್ಲ. ಹಾಗಂತ ನಾನು ಕೆಜಿಎಫ್ ಚಿತ್ರದ ವಿರೋಧಿಯೆಂದು ಬಿಂಬಿಸುವುದು ಸರಿಯಲ್ಲ. ಸಿನಿಮಾ ನೋಡುವುದಕ್ಕೆ ಪ್ರೇಕ್ಷಕರನ್ನು ಥಿಯೇಟರಿನ ಒಳಗೆ ತಳ್ಳೋಕೆ ಆಗಲ್ಲ. ಹೊರಗೆ ತಳ್ಳೋಕೂ ಆಗಲ್ಲ. ನನ್ನ ಸಿನಿಮಾಮಾದರೂ ಸರಿ, ಬೇರೆಯವರ ಸಿನಿಮಾ ಆದರೂ ಸರಿ. ಸಿನಿಮಾ ನೋಡೋದು ನನ್ನ ಆಯ್ಕೆ ಎಂದಿದ್ದಾರೆ ಕಿಶೋರ್.

    ಇಷ್ಟಕ್ಕೂ ನಾನು ನೋಡದೇ ಇರುವ ಸಿನಿಮಾ ಬಗ್ಗೆ ಇದು ಸರಿ, ಇದು ತಪ್ಪು ಎಂದು ಹೇಳುವುದಾದರೂ ಹೇಗೆ ಎಂಬ ಪ್ರಶ್ನೆಯೆತ್ತಿದ್ದಾರೆ ಕಿಶೋರ್.

  • ಕೆಜಿಎಫ್ ಶತದಿನೋತ್ಸವ.. ಯಶ್ 19ನೇ ಚಿತ್ರೋತ್ಸವ ಯಾವಾಗ..?

    kgf 2 image

    ಏಪ್ರಿಲ್ 14ಕ್ಕೆ ಶುರುವಾದ ದಿಗ್ವಿಜಯ ಯಾತ್ರೆ ಅದು. ಕೆಜಿಎಫ್ ಚಾಪ್ಟರ್ 2 ಆರ್ಭಟಕ್ಕೆ ದಾಖಲೆಗಳೆಲ್ಲ ಚಿಂದಿ ಚಿಂದಿಯಾಗಿ ಹೋದವು. ಬಾಕ್ಸಾಫೀಸ್‍ನ್ನೇ ನಡುಗಿಸಿದ ಚಿತ್ರ ಕೆಜಿಎಫ್ ಚಾಪ್ಟರ್, ಇಂಡಿಯಾದಲ್ಲಿ ಅತೀ ಹೆಚ್ಚು ಜನ ಥಿಯೇಟರಿನಲ್ಲಿ ನೋಡಿದ ಸಿನಿಮಾ ಎಂಬ ದಾಖಲೆಯನ್ನೂ ಬರೆಯಿತು. ಜುಲೈ 22ಕ್ಕೆ ಕೆಜಿಎಫ್ ಚಾಪ್ಟರ್ 2ಗೆ 100 ದಿನವೂ ತುಂಬಿತು. ಶತದಿನೋತ್ಸವ. ಆದರೆ.. ಅಭಿಮಾನಿಗಳ ಆ ಕಾಯುವಿಕೆಗೆ ಮಾತ್ರ ಉತ್ತರ ಸಿಕ್ಕಿಲ್ಲ.

    ಪ್ರಶಾಂತ್ ನೀಲ್ ಆಗಲೇ ಸಲಾರ್`ನಲ್ಲಿ ಬ್ಯುಸಿಯಿದ್ದಾರೆ. ಅದು ಮುಗಿದ ನಂತರ ಎನ್‍ಟಿಆರ್ ಸಿನಿಮಾ ಶುರುವಾಗಲಿದೆ. ಇದರ ಮಧ್ಯೆ ಬಘೀರನಿಗೆ ಕಥೆ ಕೊಟ್ಟಿದ್ದಾರೆ.

    ಇದು ಆರಂಭವಷ್ಟೇ ಎಂದಿದ್ದ ಹೊಂಬಾಳೆ ಬೆನ್ನು ಬೆನ್ನಿಗೆ ಚಿತ್ರಗಳನ್ನು ಘೋಷಿಸಿದೆ. ಎಲ್ಲ ಚಿತ್ರಗಳೂ ಒಂದಲ್ಲ ಒಂದು ಹಂತದಲ್ಲಿವೆ.

    ಚಿತ್ರದಲ್ಲಿ ನಟಿಸಿದ್ದ ಕಲಾವಿದರು ಮತ್ತು ತಂತ್ರಜ್ಞರೆಲ್ಲ ಒಂದಲ್ಲ ಒಂದು ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ.. ಯಶ್ ಮಾತ್ರ ಉತ್ತರ ಕೊಟ್ಟಿಲ್ಲ.

    ಯೂರೋಪ್‍ನಲ್ಲಿ ಪತ್ನಿ ಮಕ್ಕಳ ಸಮೇತ ಸುತ್ತುತ್ತಿರೋ ಯಶ್ ತಮ್ಮ 19ನೇ ಚಿತ್ರದ ಗುಟ್ಟನ್ನು ಗುಟ್ಟಾಗಿಯೇ ಇಟ್ಟುಕೊಂಡಿದ್ದಾರೆ. ಅವರು ಡೈರೆಕ್ಟ್ ಮಾಡ್ತಾರಂತೆ.. ಇವರು ಪ್ರೊಡ್ಯೂಸ್ ಮಾಡ್ತಾರಂತೆ.. ಅನ್ನೋ ಅಂತೆ ಕಂತೆಗಳಿವೆ ಬರವೇ ಇಲ್ಲ. ಒಂದು ಸುದ್ದಿಯೂ ಅಧಿಕೃತವಾಗಿಲ್ಲ.

    ಯಶ್ 19ನೇ ಚಿತ್ರೋತ್ಸವ ಯಾವಾಗ..? ಯಾವಾಗ..? ಯಾವಾಗ..?

  • ಕೆಜಿಎಫ್ ಸಂಭಾಷಣೆಗಾರ ಚಂದ್ರಮೌಳಿ ಈಗ ನಿರ್ದೇಶಕ

    kgf dialogue writer turns director

    ಕೆಜಿಎಫ್ ಚಾಪ್ಟರ್ 1 ಚಿತ್ರದಲ್ಲಿ ಕ್ಯಾಮೆರಾ, ಮ್ಯೂಸಿಕ್, ಬಿಜಿಎಮ್.. ಹೀಗೆ ಪ್ರತಿಯೊಂದು ವಿಭಾಗವೂ ತಾಂತ್ರಿಕವಾಗಿ ಉನ್ನತ ಮಟ್ಟದಲ್ಲಿತ್ತು. ಚಿತ್ರದಲ್ಲಿ ಅಷ್ಟೇ ದೊಡ್ಡ ಮಟ್ಟದಲ್ಲಿ ಗಮನ ಸೆಳೆದಿದ್ದು ಚಿತ್ರದ ಸಂಭಾಷಣೆ. ಆ ಸಂಭಾಷಣೆಯ ಸೃಷ್ಟಿಕರ್ತರಲ್ಲಿ ಒಬ್ಬರಾಗಿದ್ದ ಚಂದ್ರಮೌಳಿ, ಈಗ ನಿರ್ದೇಶಕರಾಗುತ್ತಿದ್ದಾರೆ. ದಿಲ್‍ಮಾರ್ ಹೆಸರಿನ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ.

    ರಾಮ್ ಎಂಬ ಹೊಸ ಹುಡುಗ ಈ ಚಿತ್ರಕ್ಕೆ ಹೀರೋ. ತೆಲುಗಿನಲ್ಲಿ ವಾಲ್ಮೀಕಿ, ಅಭಿನೇತ್ರಿ-2 ಚಿತ್ರಗಳಲ್ಲಿ ನಟಿಸಿದ್ದ ಡಿಂಪಲ್ ಹಯಾತಿ ನಾಯಕಿ. ಅರ್ಜುನ್ ರೆಡ್ಡಿ ಚಿತ್ರಕ್ಕೆ ಸಂಗೀತ ನೀಡಿದ್ದ ರಧನ್, ಈ ಚಿತ್ರಕ್ಕೆ ಸಂಗೀತ ನಿರ್ದೇಶಕರಾಗಿದ್ದಾರೆ. ನಾಗರಾಜ್ ಭದ್ರಾವತಿ ಎಂಬುವವರು ಚಿತ್ರದ ನಿರ್ಮಾಪಕರಾಗಿದ್ದಾರೆ.

  • ಕೆಜಿಎಫ್ ಹೀರೋ ನಾನೊಬ್ಬನೇ ಅಲ್ಲ.. - ಯಶ್

    yash credits kgf's success to his entire team

    ನಾನು ಸಿನಿಮಾದ ಹೀರೋ. ಆದರೆ, ಚಿತ್ರದಲ್ಲಿ ನಾನೊಂದು ಮುಖವೇ ಹೊರತು, ನಾನೇ ಎಲ್ಲ ಅಲ್ಲ. ಚಿತ್ರದ ಹೀರೋಗಳು ಹಲವರಿದ್ದಾರೆ. ಇದು ಯಶ್ ಕೆಜಿಎಫ್ ಚಿತ್ರದ ಬಗ್ಗೆ ಹೇಳಿರುವ ಮತ್ತೊಂದು ಮಾತು.

    ಚಿತ್ರದ ನಿಜವಾದ ಹೀರೋ ನಿರ್ಮಾಪಕ ವಿಜಯ್ ಕಿರಗಂದೂರು. ಅವರು ಧೈರ್ಯ ಮಾಡದೇ ಇದ್ದರೆ ಈ ಸಿನಿಮಾ ಆಗುತ್ತಿರಲಿಲ್ಲ. ಇನ್ನು ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್, ಕನ್ನಡ ಚಿತ್ರರಂಗದ ಆಸ್ತಿ. ಛಾಯಾಗ್ರಹಕ ಭುವನ್ ಗೌಡ, ಕಲಾ ನಿರ್ದೇಶಕ ಶಿವಕುಮಾರ್, ಸಂಗೀತ ನಿರ್ದೇಶಕ ರವಿ ಬಸ್ರೂರು, ಎಫೆಕ್ಟ್ ರಾಜನ್, ಉದಯ ರವಿ... ಅಷ್ಟೇ ಏಕೆ, ಸೆಟ್‍ನಲ್ಲಿ ಕೆಲಸ ಮಾಡಿದ ಪ್ರತಿಯೊಬ್ಬರೂ ಚಿತ್ರದ ಹೀರೋಗಳು. ನಾನು ಜಸ್ಟ್ ಮುಖ ಮಾತ್ರ ಎಂದು ಕ್ರೆಡಿಟ್‍ನ್ನು ಇಡೀ ಚಿತ್ರತಂಡಕ್ಕೆ ಅರ್ಪಿಸಿದ್ದಾರೆ ಯಶ್.

  • ಕೆಜಿಎಫ್‍ಗೆ ಉಪಮುಖ್ಯಮಂತ್ರಿಗಳಿಂದ ಬಹುಪರಾಕ್

    deputy chief minister parameshwara  praises kgf

    ಒಂದು ಚಿತ್ರವನ್ನು ಚಿತ್ರೋದ್ಯಮದವರು ಹೊಗಳುವುದು ಬೇರೆ. ರಾಜಕಾರಣಿಗಳು ಹೊಗಳುವುದು ಬೇರೆ. ಕೆಜಿಎಫ್‍ಗೆ ಈಗ ದೇಶಾದ್ಯಂತ ಚಿತ್ರರಸಿಕರಿಂದ ಮೆಚ್ಚುಗೆಯ ಸುರಿಮಳೆಯಾಗುತ್ತಿದೆ. ಕರ್ನಾಟಕದಿಂದ ಹೊರಟ ಸಿನಿಮಾ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ, ಹಿಂದಿಯಲ್ಲೂ ಮೋಡಿ ಮಾಡುತ್ತಿದೆ. ಬಾಕ್ಸಾಫೀಸ್‍ನಲ್ಲಿ ಹೊಸ ಹೊಸ ದಾಖಲೆ ಬರೆಯುತ್ತಿದೆ. ಎಲ್ಲ ಚಿತ್ರೋದ್ಯಮದ ಸೆಲಬ್ರಿಟಿಗಳೂ ಯಶ್, ಪ್ರಶಾಂತ್ ನೀಲ್, ವಿಜಯ್ ಕಿರಗಂದೂರು ಅವರನ್ನು ಹಾಡಿ ಹೊಗಳುತ್ತಿದ್ದಾರೆ. ಹೀಗಿರುವಾಗಲೇ, ರಾಜ್ಯದ ಉಪಮುಖ್ಯಮಂತ್ರಿ ಪರಮೇಶ್ವರ್, ಕೆಜಿಎಫ್‍ನ್ನು ಹೊಗಳಿದ್ದಾರೆ.

    ಕನ್ನಡದ ಗಡಿ ದಾಟಿ ಹೋಗಿರುವ ಕೆಜಿಎಫ್ ತಂಡಕ್ಕೆ ಹೃತ್ಪೂರ್ವಕ ಅಭಿನಂದನೆ ತಿಳಿಸಿದ್ದಾರೆ ಡಿಸಿಎಂ ಪರಮೇಶ್ವರ್.

    ನಿಮ್ಮ ಹಾರೈಕೆ, ನಮ್ಮ ಮುಂದಿನ ಪ್ರಯತ್ನಗಳಿಗೆ ಉತ್ಸಾಹ ತುಂಬಿದೆ ಸರ್ ಎಂದು ಧನ್ಯವಾದ ಅರ್ಪಿಸಿದ್ದಾರೆ ಯಶ್. ನಿರ್ಮಾಪಕ ವಿಜಯ್ ಕಿರಗಂದೂರು ಕೂಡಾ ಪರಮೇಶ್ವರ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ.

  • ಕೆಜಿಎಫ್‍ಗೆ ಥ್ರಿಲ್ಲಾದ ಸ್ಟಾರ್‍ಗಳು ಏನ್ ಹೇಳಿದ್ರು ನೋಡಿ..

    sandalwood stars thrilled about kgf

    ಕೆಜಿಎಫ್ ಟ್ರೇಲರ್ ಬಂತು. ಹವಾ ಎಬ್ಬಿಸಿತು. ಕನ್ನಡದಲ್ಲಷ್ಟೇ ಅಲ್ಲ, ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿಯಲ್ಲೂ ಕೆಜಿಎಫ್ ಬಗ್ಗೆ ಇರುವ ಕ್ರೇಜ್ ಗೊತ್ತಾಯ್ತು. ಚಿತ್ರದ ನಿಜವಾದ ಹೀರೋ ನಿರ್ಮಾಪಕ ವಿಜಯ್ ಕಿರಗಂದೂರು ಎಂದರು ಯಶ್. ಅತಿಶಯೋಕ್ತಿಯೇನೂ ಇರಲಿಲ್ಲ. ಕನಸು ಕಂಡವರು ಪ್ರಶಾಂತ್ ನೀಲ್. ನರ್ವಸ್ ಆಗಿದ್ದೇನೆ ಎಂದು ಪ್ರಾಮಾಣಿಕವಾಗಿಯೇ ಹೇಳಿಕೊಂಡರು. ಶಾರೂಕ್ ಝೀರೋಗೆ ಎದುರಾಗಿ ಬರುತ್ತಿದೆ ಎಂಬ ಮಾತಿಗೆ `ನಾನೂ ಶಾರೂಕ್ ಅಭಿಮಾನಿ. ಅದೊಂದು ಗೌರವ' ಎಂದರು ಯಶ್. ಯಶ್ ನನ್ನ ತಮ್ಮನಿದ್ದ ಹಾಗೆ ಎಂದರು ವಿಶಾಲ್. ಹೀಗೆ ಭಾರತೀಯ ಚಿತ್ರರಂಗವೇ ತಿರುಗಿ ನೋಡುವಂತೆ ಮಾಡಿದ ಕೆಜಿಫ್ ಟ್ರೇಲರ್‍ಗೆ ಕನ್ನಡ ಚಿತ್ರರಂಗದ ಸ್ಟಾರ್‍ಗಳು ಏನ್ ಹೇಳಿದ್ದಾರೆ ಗೊತ್ತಾ..?

    ಕಿಚ್ಚ ಸುದೀಪ್ : ಜ್ವಾಲಾಮುಖಿ ಇನ್ನೇನು ಸ್ಫೋಟಗೊಳ್ಳುವ ಹಾಗಿದೆ. ಕೆಜಿಎಫ್ ತಂಡಕ್ಕೆ ನನ್ನ ಶುಭಾಶಯಗಳು. ನಿರ್ದೇಶಕ ಪ್ರಶಾಂತ್ ನೀಲ್‍ಗೆ ಹ್ಯಾಟ್ಸಾಫ್. ಯಶ್ ಲುಕ್ ಚೆನ್ನಾಗಿದೆ. ಹೊಂಬಾಳೆ ಫಿಲಂಸ್‍ಗೆ ಅಭಿನಂದನೆಗಳು.

    ನವರಸನಾಯಕ ಜಗ್ಗೇಶ್ : ಕನ್ನಡ ಚಿತ್ರರಂಗದ ಕಿರೀಟಕ್ಕೊಂದು ನವಿಲುಗರಿ. ಭಾರತದ ದಶದಿಕ್ಕು ತಲುಪಲಿ ಕನ್ನಡಿಗರ ಕಾಯಕ. 

    ರಾಣಾ ದಗ್ಗುಬಾಟಿ : ಕೆಜಿಎಫ್ ಚಿತ್ರತಂಡಕ್ಕೆ ಶುಭಾಶಯಗಳು.

    ರಾಮ್‍ಗೋಪಾಲ್ ವರ್ಮಾ : ಕೆಜಿಎಫ್ ಟ್ರೇಲರ್ ನೀವು ನೋಡಲೇಬೇಕು. ಉ.ಭಾರತದ ಚಿತ್ರಗಳಿಗಿಂತ ದ.ಭಾರತದ ಚಿತ್ರಗಳು ಬೆಳೆಯುತ್ತಿವೆ.

    ಶ್ರೀಮುರಳಿ : ಒಂದೊಳ್ಳೆ ಅನುಭವಕ್ಕಾಗಿ ಕೆಜಿಎಫ್ ನೋಡಿ. ನಾನೂ ಕೂಡಾ ಸಿನಿಮಾ ನೋಡಲು ಕಾಯುತ್ತಿದ್ದೇನೆ.

    ಶಶಾಂಕ್, ನಿರ್ದೇಶಕ - ಕನ್ನಡ ಚಿತ್ರರಂಗವನ್ನು ಇನ್ನೊಂದು ಹಂತಕ್ಕೆ ತೆಗೆದುಕೊಂಡು ಹೋಗುವುದು ಎಂದರೆ ಇದೇ.. ಯಶ್, ಹೊಂಬಾಳೆ ಫಿಲಂಸ್, ಪ್ರಶಾಂತ್ ನೀಲ್ ಮತ್ತು ಕೆಜಿಎಫ್ ತಂಡಕ್ಕೆ ಶುಭಾಶಯಗಳು

    ಡ್ಯಾನಿಶ್ ಸೇಠ್ : ವ್ಹಾವ್... ವ್ಹಾವ್... ವ್ಹಾವ್.. ಕೆಜಿಎಫ್ ಅದ್ಭುತ ಟ್ರೇಲರ್. 

    ಹರಿಪ್ರಿಯಾ : ಟ್ರೇಲರ್ ಅದ್ಭುತವಾಗಿದೆ. ಸಿನಿಮಾ ನೋಡಲು ಕಾತುರಳಾಗಿದ್ದೇನೆ.

    ರಶ್ಮಿಕಾ ಮಂದಣ್ಣ : ಓ ಮೈ ಗಾಡ್.. ಓ ಮೈ ಗಾಡ್.. ಓ ಮೈ ಗಾಡ್.. ಅದ್ಭುತ ಟ್ರೇಲರ್. 

    ಕೃಷ್ಣ, ನಿರ್ದೇಶಕ : ಟ್ರೇಲರ್ ನಿಜಕ್ಕೂ ಗಮನ ಸೆಳೆಯುತ್ತಿದೆ. ಸುದೀರ್ಘ ವರ್ಷಗಳ ಶ್ರಮ, ಪ್ರತಿಭೆ ಎದ್ದು ಕಾಣುತ್ತಿದೆ.

    ಆರ್ಯ : ಅತ್ಯದ್ಭುತ ಟ್ರೇಲರ್. 3 ವರ್ಷಗಳ ಶ್ರಮ ಹೇಗಿದೆ ಅನ್ನೋದಕ್ಕೆ ಟ್ರೇಲರ್ ಸಾಕ್ಷಿ.

    ಪವನ್ ಒಡೆಯರ್ : ಕನ್ನಡ ಚಿತ್ರರಂಗದಲ್ಲಿ ಹೊಸ ಇತಿಹಾಸ ಬರೆಯುವ ಮುನ್ಸೂಚನೆ ನೀಡಿದೆ. ರೋಮಾಂಚನಗೊಳಿಸುವ ಟ್ರೇಲರ್.

    ಶೃತಿ ಹರಿಹರನ್ : ಟ್ರೇಲರ್ ಥ್ರಿಲ್ ನೀಡುತ್ತಿದೆ.

    ರಿಷಬ್ ಶೆಟ್ಟಿ : ಇದು ಮಾಸ್. ಇದು ಕ್ಲಾಸ್. ಅಥವಾ ಆ ಎರಡನ್ನೂ ಮೀರಿದ್ದು. ಕನ್ನಡ ಸಿನಿಮಾ ಎಂದರೆ ಇದು. ಪ್ರಶಾಂತ್ ನೀಲ್ ಮತ್ತೊಮ್ಮೆ ಟ್ರೆಂಡ್ ಸೆಟ್ಟರ್ ಆಗಿದ್ದಾರೆ. ಯಶ್ ಅವರನ್ನು ಬಣ್ಣಿಸಲು ಪದಗಳಿಲ್ಲ.

    ಹೇಮಂತ್ ರಾವ್ : ಇದೊಂದು ಎಪಿಕ್. ಆ ದೃಶ್ಯ ವೈಭವ, ಮೇಕಿಂಗ್ ಅದ್ಭುತ.

  • ಕೆಜಿಎಫ್‍ಗೆ ಬಣ್ಣ ತುಂಬುವ ವಿಭಿನ್ನ ಸಾಹಸ

    kgf's new record

    ಕೆಜಿಎಫ್. ಕನ್ನಡ ಚಿತ್ರರಂಗದ ಈ ಬಹುನಿರೀಕ್ಷಿತ ಚಿತ್ರ ಬಿಡುಗಡೆಗೂ ಮೊದಲೇ ಸೃಷ್ಟಿಸಿರುವ ನಿರೀಕ್ಷೆ ಸಣ್ಣದಲ್ಲ. ರಾಕಿಂಗ್ ಸ್ಟಾರ್ ಯಶ್, ಉಗ್ರಂ ಖ್ಯಾತಿಯ ಪ್ರಶಾಂತ್ ನೀಲ್, ಹೊಂಬಾಳೆ ಪ್ರೊಡಕ್ಷನ್ಸ್ ಸಮ್ಮಿಲನದ ಚಿತ್ರ ಹಿಮಾಲಯದ ಎತ್ತರದಷ್ಟು ಕುತೂಹಲ ಮೂಡಿಸಿದೆ.

    ಚಿತ್ರದಲ್ಲಿ ಹಳೆಯ ವೈಭವದ ದಿನಗಳ ಕೆಜಿಎಫ್‍ನ್ನು ಮರುಸೃಷ್ಟಿಸಲಾಗುತ್ತಿದೆಯಂತೆ. ಆಗಿನ ಕಾಲದ ಕಥೆಗೆ ತಕ್ಕಂತೆ ಸಿನಿಮಾದಲ್ಲಿ ಹಳೆಯ ಕೆಜೆಎಫ್ ಸೃಷ್ಟಿಸುತ್ತಿದ್ದೇವೆ. ಇನ್ನು ಚಿತ್ರದ ದೃಶ್ಯಗಳಿಗೆ ಕಲರಿಂಗ್ ಮಾಡಿಸುತ್ತಿದ್ದೇವೆ ಎಂದಿದ್ದಾರೆ ಪ್ರಶಾಂತ್. ಚಿತ್ರದ ಕಲರಿಂಗ್‍ಗಾಗಿಯೇ ವಿದೇಶದಿಂದ ತಂತ್ರಜ್ಞರನ್ನು ಕರೆಸಲಾಗುತ್ತಿದೆ. ಕೊರಿಯೋಗ್ರಾಫರ್ ಭುವನ್ ಕೂಡಾ ಅತ್ಯುತ್ತಮ ಕೆಲಸ ಮಾಡಿದ್ದಾರೆ. ಉಗ್ರಂಗಿಂತ ಇದು ಬೇರೆಯೇ ತರಹದ ಮೇಕಿಂಗ್ ಎನ್ನುತ್ತಾರೆ ಪ್ರಶಾಂತ್. ನಿರೀಕ್ಷೆ... ಅಬ್ಬಾ..