` kgf, - chitraloka.com | Kannada Movie News, Reviews | Image

kgf,

  • ಕೆಜಿಎಫ್ 50

    kgf completes 50 days

    ಜಗತ್ತಿನೆಲ್ಲೆಡೆ ಅಬ್ಬರಿಸಿ ಬೊಬ್ಬರಿದ ಕೆಜಿಎಫ್, 50 ದಿನ ಪೂರೈಸಿದೆ. ಅರ್ಧ ಶತಕ ಬಾರಿಸಿದ ನಂತರವೂ ಯಶಸ್ವಿಯಾಗಿ ಮುನ್ನುಗ್ಗುತ್ತಿರುವ ಚಿತ್ರ, ಸ್ಯಾಂಡಲ್‍ವುಡ್‍ನ ಹೊಸ ರೆಕಾರ್ಡ್. ಹೀಗಾಗಿಯೇ ಚಿತ್ರತಂಡ ಈ 50 ಸಕ್ಸಸ್‍ನ್ನು ವಿಶೇಷವಾಗಿ ಸೆಲಬ್ರೇಟ್ ಮಾಡಿದೆ.

    `ಕೆಜಿಎಫ್ ನನಗೆ ಬರೀ ಚಿತ್ರವಾಗಿರಲಿಲ್ಲ. ಇಂಥಾದ್ದೊಂದು ಅದ್ಧೂರಿ ಚಿತ್ರವನ್ನು ಕನ್ನಡ ಚಿತ್ರರಂಗಕ್ಕೆ ಸಮರ್ಪಿಸಬೇಕೆಂಬುದು ನನ್ನ ಕನಸಾಗಿತ್ತು' ಎಂದು ಭಾವುಕವಾಗಿಯೇ ಸಂಭ್ರಮ ಹಂಚಿಕೊಂಡಿದ್ದಾರೆ ನಿರ್ಮಾಪಕ ವಿಜಯ್ ಕಿರಗಂದೂರು.

  • ಕೆಜಿಎಫ್ ಅಧಿಕೃತ ಕಲೆಕ್ಷನ್ ಎಷ್ಟು..? 200 ಕೋಟಿ ನಿಜಾನಾ..?

    producer clarifies about kgf's collection

    ಕೆಜಿಎಫ್ ಚಿತ್ರ 200 ಕೋಟಿ ಕ್ಲಬ್ ಸೇರಿದೆ ಎನ್ನುವ ಸುದ್ದಿ ಹರಿದಾಡುತ್ತಿರುವಾಗಲೇ ಚಿತ್ರದ ಕಲೆಕ್ಷನ್ ಬಗ್ಗೆ ನಿರ್ಮಾಪಕ ವಿಜಯ್ ಕಿರಗಂದೂರು ಮಾತನಾಡಿದ್ದಾರೆ. ಚಿತ್ರದ ಕಲೆಕ್ಷನ್ ಬಗ್ಗೆ ಈಗಲೇ ಏನನ್ನೂ ಹೇಳುವುದು ಸಾಧ್ಯವಿಲ್ಲ. ಚಿತ್ರ ಇನ್ನೂ 600 ಸ್ಕ್ರೀನ್‍ಗಳಲ್ಲಿ ಚೆನ್ನಾಗಿ ಹೋಗುತ್ತಿದೆ. ಒಂದು ತಿಂಗಳು ಸುಮ್ಮನಿರಿ. ನಾನೇ ಎಲ್ಲವನ್ನೂ ನಿಮ್ಮ ಮುಂದೆ ಲೆಕ್ಕ ಹೇಳುತ್ತೇನೆ' ಎಂದಿದ್ದಾರೆ ವಿಜಯ್ ಕಿರಗಂದೂರು.

    200 ಕೋಟಿ ದಾಟಿದೆ ಎನ್ನುವ ಸುದ್ದಿಯನ್ನು ವಿಜಯ್ ನಿರಾಕರಿಸಿದ್ದಾರೆ. ಚಿತ್ರ ಹಿಂದಿಯಲ್ಲಿಯೇ 600 ಸ್ಕ್ರೀನ್‍ಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಕನ್ನಡದಲ್ಲಿ ರಿಲೀಸ್ ಆಗಿರುವ ಎಲ್ಲ ಸೆಂಟರ್‍ಗಳಲ್ಲಿ ಈಗಲೂ ಚೆನ್ನಾಗಿ ಹೋಗುತ್ತಿದೆ. ಪಾಕಿಸ್ತಾನದಲ್ಲೂ ರಿಲೀಸ್ ಆಗಿದೆ. ಎಲ್ಲ ಲೆಕ್ಕವನ್ನೂ ಮುಂದಿನ ತಿಂಗಳು ಕೊಡುತ್ತೇನೆ ಎಂದಿದ್ದಾರೆ ಕೆಜಿಎಫ್‍ನ ಮಾಲೀಕ ವಿಜಯ್ ಕಿರಗಂದೂರು.

  • ಕೆಜಿಎಫ್ ಆಡಿಯೋ ಲಹರಿಗೆ. ಸೇಲಾಗಿದ್ದು ಎಷ್ಟು ಕೋಟಿಗೆ..?

    lahari music gets kgf audio launch

    ಕನ್ನಡ ಚಿತ್ರರಂಗದ ಬಹುನಿರೀಕ್ಷಿತ, ಭಾರಿ ಬಜೆಟ್‍ನ ಸಿನಿಮಾ ಕೆಜಿಎಫ್. ಯಶ್, ಪ್ರಶಾಂತ್ ನೀಲ್ ಮತ್ತು ಹೊಂಬಾಳೆ ಪ್ರೊಡಕ್ಷನ್ಸ್ ವಿಜಯ್ ಕಿರಗಂದೂರು ಕಾಂಬಿನೇಷನ್‍ನ ಈ ಬಿಗ್ ಸಿನಿಮಾದ ಆಡಿಯೋ ರೈಟ್ಸ್ ಮಾರಾಟವಾಗಿದೆ.

    ಕೆಜಿಎಫ್ ಆಡಿಯೋ ರೈಟ್ಸ್ ಖರೀದಿಸಿರುವುದು ಲಹರಿ ವೇಲು. ರವಿ ಬಸ್ರೂರು ಸಂಗೀತ ನಿರ್ದೇಶನದ ಹಾಡುಗಳು ಬೊಂಬಾಟ್ ಆಗಿವೆ ಅನ್ನೋದು ಚಿತ್ರತಂಡದ ಮೂಲಗಳ ಮಾಹಿತಿ. ಕನ್ನಡ ಅಷ್ಟೇ ಅಲ್ಲ, ತೆಲುಗು, ತಮಿಳು, ಹಿಂದಿಯ ಆಡಿಯೋ ರೈಟ್ಸ್‍ನ್ನು ಕೂಡಾ ಲಹರಿ ವೇಲು ಅವರೇ ಖರೀದಿಸಿದ್ದಾರೆ. ದೊಡ್ಡ ಮೊತ್ತಕ್ಕೆ ಅನ್ನೋದು ಪಕ್ಕಾ. ಆದರೆ, ಎಷ್ಟು ಕೋಟಿಗೆ ಅನ್ನೋದನ್ನು ಗುಟ್ಟಾಗಿಯೇ ಇಟ್ಟಿದೆ ಕೆಜಿಎಫ್ ಟೀಂ.

  • ಕೆಜಿಎಫ್ ಆಡಿಯೋ ಹಕ್ಕು 3.60 ಕೋಟಿ 

    kgf audio rights sold for 3.6 crores

    ಕೆಜಿಎಫ್ ಚಿತ್ರದ ಹವಾದಲ್ಲಿ ದಾಖಲೆಗಳು ಚಿಂದಿ ಚಿಂದಿಯಾಗುತ್ತಿವೆ. ಕನ್ನಡ ಚಿತ್ರರಂಗದಲ್ಲೇ ಭಾರಿ ಬಜೆಟ್‍ನ, ಭರ್ಜರಿ ನಿರೀಕ್ಷೆ ಹುಟ್ಟಿಸಿರುವ ಕೆಜಿಎಫ್, ಆಡಿಯೋ ರೈಟ್ಸ್‍ನಲ್ಲಿ ಮತ್ತೊಂದು ಹೊಸ ದಾಖಲೆ ಬರೆದಿದೆ. ಒನ್ಸ್ ಎಗೇಯ್ನ್, ಈ ದಾಖಲೆ ಮೊತ್ತಕ್ಕೆ ಆಡಿಯೋ ಖರೀದಿಸಿರುವುದು ಲಹರಿ ವೇಲು.

    ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂ ಆಡಿಯೋ ರೈಟ್ಸ್‍ನ್ನು ಮಾತ್ರ 3.60 ಕೋಟಿ ಕೊಟ್ಟು ಖರೀದಿಸಿದ್ದಾರೆ. ಹಿಂದಿಯ ರೈಟ್ಸ್‍ನ್ನು ಇನ್ನೂ ಮಾರಾಟ ಮಾಡಿಲ್ಲ. ಈ ದಾಖಲೆ ಮೊತ್ತಕ್ಕೆ ಆಡಿಯೋ ಖರೀದಿಸೋಕೆ ಕಾರಣ, ಚಿತ್ರದ ಟ್ರೇಲರ್‍ಗೆ ಸಿಗುತ್ತಿರುವ ಮೆಚ್ಚುಗೆ. ಎಲ್ಲ ಭಾಷೆಯಲ್ಲೂ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿರುವುದೇ ಈ ದಾಖಲೆ ಮೊತ್ತದ ಖರೀದಿಗೆ ಕಾರಣ ಎಂದಿದ್ದಾರೆ ಲಹರಿ ವೇಲು.

    1992ರಲ್ಲೇ ದಳಪತಿ ಚಿತ್ರದ ಆಡಿಯೋ ರೈಟ್ಸ್‍ನ್ನು 75 ಲಕ್ಷಕ್ಕೆ ಖರೀದಿಸಿದ್ದ ಲಹರಿ ವೇಲು, ಬಾಹುಬಲಿಯನ್ನು 2 ಕೋಟಿ ರೂಗೂ ಹೆಚ್ಚಿನ ಮೊತ್ತಕ್ಕೆ ಖರೀದಿಸಿದ್ದರು. ಈಗ ಮತ್ತೊಮ್ಮೆ ತಮ್ಮದೇ ದಾಖಲೆ ಬ್ರೇಕ್ ಮಾಡಿದ್ದಾರೆ.

  • ಕೆಜಿಎಫ್ ಇವತ್ತೇ ರಿಲೀಸ್.. ಆದರೆ.. ಇಲ್ಲಿ ಅಲ್ಲ..!

    kgf release in abroad today

    ಕೆಜಿಎಫ್ ಡೇ ಇರೋದು ನಾಳೆ. ಆದರೆ, ಸಿನಿಮಾ ಇವತ್ತೇ ರಿಲೀಸ್ ಆಗುತ್ತಿದೆ. ಎಲ್ಲಿ.. ಯಾವಾಗ.. ಶೋ  ಟೈಂ ಏನು.. ಟಿಕೆಟ್ ಎಲ್ಲಿ ಸಿಗುತ್ತೆ.. ಹೀಗೆ ಹಲವು ಪ್ರಶ್ನೆಗಳನ್ನು ಸೈಡಿಗಿಡಿ. ಕೆಜಿಎಫ್ ಇವತ್ತು ರಿಲೀಸ್ ಆಗ್ತಿರೋದು ಇಲ್ಲಿ.. ಅಂದ್ರೆ ಇಂಡಿಯಾದಲ್ಲಿ ಅಲ್ವೇ ಅಲ್ಲ. ಅಮೆರಿಕದಲ್ಲಿ.

    ಅಮೆರಿಕದ ಅಲ್ಬಾಮಾ, ಅರಿಝೋನಾ, ಅರ್ಕಾನ್ಸಾಸ್, ಕ್ಯಾಲಿಫೋರ್ನಿಯಾ, ಕೊಲರ್ಯಾಡೋ, ಫ್ಲೋರಿಡಾಗಳಲ್ಲಿ ಇವತ್ತೇ ರಿಲೀಸ್. ಜಾರ್ಜಿಯಾ, ಮಿಸ್ಸೋರಿ, ನೆವಾಡಾ, ಹವಾಲಿ, ಇಡಾಹೋ, ಇಲಿನೊಯ್ಸ್, ಇಂಡಿಯಾನಾ, ಲೊವಾ, ಕನ್ಸಾಸ್, ನ್ಯೂಜೆರ್ಸಿ, ನ್ಯೂ ಹ್ಯಾಂಪ್‍ಶೈರ್, ನ್ಯೂ ಮೆಕ್ಸಿಕೋ, ನ್ಯೂಯಾರ್ಕ್, ನಾರ್ತ್ ಕ್ಯಾರೊಲಿನಾ, ಓಹಿಯೋ, ಒಕ್ಲಾಹಾಮಾ, ಒರೇಗನ್, ಪೆನ್ಸುಲ್ವೇನಿಯಾ, ರ್ಹೋಡ್ ಐಸ್‍ಲ್ಯಾಂಡ್, ಸೌಥ್ ಕ್ಯಾರೊಲಿನಾ, ಟೆನೆಸ್ಸೇ, ಟೆಕ್ಸಾಸ್, ಉಟಾ, ವರ್ಜಿನಿಯಾ, ವಾಷಿಂಗ್ಟನ್ ಡಿಸಿಗಳಲ್ಲಿ ಡಿಸೆಂಬರ್ 20ರಂದೇ ಪ್ರೀಮಿಯರ್ ಶೋ ಇದೆ.

  • ಕೆಜಿಎಫ್ ಎಫೆಕ್ಟ್ : ಭುವನ್, ಶ್ರೀನಿಧಿ ಶೆಟ್ಟಿಗೆ ಎಂಥ ಡಿಮ್ಯಾಂಡು..?

    kgf effect, srinidhi shetty in demand

    ಯಶ್ ಅಭಿನಯದ ಕೆಜಿಎಫ್, ದೇಶಾದ್ಯಂತ ಬಿರುಗಾಳಿ ಎಬ್ಬಿಸಿದ್ದರೆ, ಚಿತ್ರದ ಟ್ರೇಲರ್‍ಗೆ ಸಿಗುತ್ತಿರುವ ರಿಯಾಕ್ಷನ್ ನೋಡಿ ಸಂಭ್ರಮಿಸುತ್ತಿದೆ ಹೊಂಬಾಳೆ ಫಿಲಂಸ್. ನಿರ್ದೇಶಕ ಪ್ರಶಾಂತ್ ನೀಲ್‍ರ ಶ್ರಮ ಇಡೀ ಟ್ರೇಲರ್‍ನಲ್ಲಿ ಎದ್ದುಕಂಡಿದೆ. ಟ್ರೇಲರ್ ಹಿಟ್ ಆಗುತ್ತಿದ್ದಂತೆಯೇ ಎಲ್ಲರಿಗಿಂತ ಮೊದಲು ಡಿಮ್ಯಾಂಡ್ ಸೃಷ್ಟಿಯಾಗಿರುವುದು ಚಿತ್ರದ ನಾಯಕಿ ಶ್ರೀನಿಧಿ ಶೆಟ್ಟಿ ಮತ್ತು ಛಾಯಾಗ್ರಾಹಕ ಭುವನ್‍ಗೆ.

    ಚಿನ್ನದ ಗಣಿಯ ದೂಳು, ಕಣ್ಣ ಭಾವನೆಯ ನೆರಳುಗಳನ್ನು ಹೃದಯ ಮುಟ್ಟುವಂತೆ ಚಿತ್ರೀಕರಿಸಿರುವ ಭುವನ್‍ಗೆ ಈಗ ಬಾಲಿವುಡ್ ಸೇರಿದಂತೆ ಪರಭಾಷೆ ಚಿತ್ರಗಳ ನಿರ್ದೇಶಕರು, ನಿರ್ಮಾಪಕರಿಂದ ಕರೆ ಬರುತ್ತಿವೆ.

    ಅತ್ತ, ಇದೇ ಮೊದಲ ಬಾರಿಗೆ ಬೆಳ್ಳಿತೆರೆಗೆ ಕಾಲಿಟ್ಟಿರುವ ನಾಯಕಿ ಶ್ರೀನಿಧಿ ಶೆಟ್ಟಿಗೂ ಬಾಲಿವುಡ್ ಬ್ಯಾನರ್‍ಗಳಿಂದ ಅವಕಾಶಗಳು ಬರುತ್ತಿವೆ. ಸದ್ಯಕ್ಕೆ ಯಾವುದನ್ನೂ ಒಪ್ಪಿಕೊಂಡಿಲ್ಲವಾದರೂ, ಅವಕಾಶಗಳ ಸುರಿಮಳೆಯಂತೂ ಆಗುತ್ತಿದೆ. 

    ಡಿಸೆಂಬರ್ 21ಕ್ಕೆ ತೆರೆಗೆ ಬರಲಿರುವ ಕೆಜಿಎಫ್‍ನ ಕ್ರೇಝ್ ನೋಡುತ್ತಿದ್ದರೆ, ಶಾರೂಕ್ ಖಾನ್‍ರ ಝೀರೋ ಶೇಕ್ ಆದರೂ ಅಚ್ಚರಿಯಿಲ್ಲ.

  • ಕೆಜಿಎಫ್ ಕಥೆ ಗೊತ್ತಾಗೋಯ್ತು..

    what is kgf storyline

    ಕೆಜಿಎಫ್ ರಿಲೀಸ್ ಡೇಟ್ ಪ್ರಕಟಿಸಿದ ಹೊತ್ತಲ್ಲೇ ಚಿತ್ರದ ಕಥೆ ಎಳೆಯನ್ನೂ ಬಿಚ್ಚಿಟ್ಟಿದ್ದಾರೆ ನಿರ್ದೇಶಕ ಪ್ರಶಾಂತ್ ನೀಲ್. ದುರಾಸೆಯ ದುಷ್ಟನೊಬ್ಬನ ಕೈಗೆ ಬಂಗಾರದ ಗಣಿ ಸಿಕ್ಕರೆ, ಒಂದು ವ್ಯವಸ್ಥೆಯಲ್ಲಿ ಆತ ಏನೆಲ್ಲ ಅಲ್ಲೋಲಕಲ್ಲೋಲ ಸೃಷ್ಟಿಸುತ್ತಾನೆ ಎನ್ನುವುದೇ ಚಿತ್ರದ ಕಥೆ. ಚಿತ್ರದಲ್ಲಿ ಅಂಡರ್‍ವಲ್ರ್ಡ್ ಲಿಂಕ್ ಇದೆ. ಚಿತ್ರದ ಹೀರೋ ಯಶ್, ತಾಯಿಯ ಸೂಚನೆಯಂತೆ ಅಂಡರ್‍ವಲ್ರ್ಡ್‍ಗೆ ಎಂಟ್ರಿ ಕೊಡುತ್ತಾನೆ. ಚಿನ್ನದ ಕಥೆಗೂ, ತಾಯಿಯ ಮಾತಿಗೂ ಏನ್ ಸಂಬಂಧ ಅನ್ನೋದು ಚಿತ್ರದಲ್ಲಿ ಗೊತ್ತಾಗಲಿದೆ. ಅಂಡರ್‍ವಲ್ರ್ಡ್ ಡಾನ್ ಸ್ಟೋರಿಯೇ ಚಿತ್ರದ ಕಥೆ.

    ಹೀಗೆ ಕಥೆಯ ಎಳೆಯನ್ನಷ್ಟೇ ಬಿಚ್ಚಿಟ್ಟಿರುವ ಪ್ರಶಾಂತ್ ನೀಲ್, ಇದಕ್ಕೂ ಕೋಲಾರದ ಚಿನ್ನದ ಗಣಿಗೂ ಸಂಬಂಧವಿಲ್ಲ. ಇದು ಯಾವುದೇ ಜಗತ್ತಿಗೂ, ಯಾವುದೇ ಊರಿಗೂ ಲಿಂಕ್ ಆಗಬಹುದಾದ ಕಥೆ. ನನ್ನ ಕಲ್ಪನೆಯ ಕಥೆ ಎಂದು ಹೇಳಿಕೊಳ್ತಾರೆ.

    ಹೊಂಬಾಳೆ ಪ್ರೊಡಕ್ಷನ್ಸ್‍ನಲ್ಲಿ ಬರುತ್ತಿರುವ ಸಿನಿಮಾದ ಟ್ರೈಲರ್ ಅಕ್ಟೋಬರ್ 14ಕ್ಕೆ ರಿಲೀಸ್ ಆದ್ರೆ, ಸಿನಿಮಾ ನವೆಂಬರ್ 16ಕ್ಕೆ ರಿಲೀಸ್ ಆಗುತ್ತೆ. ನವೆಂಬರ್ 16ಕ್ಕೆ ಬರೋದು ಕೆಜಿಎಫ್ ಚಾಪ್ಟರ್ 1. ಚಾಪ್ಟರ್ 2, 2019ರ ಅಂತ್ಯಕ್ಕೆ ಬರಲಿದೆಯಂತೆ.

  • ಕೆಜಿಎಫ್ ಕ್ಲೈಮಾಕ್ಸ್‍ನಲ್ಲಿ ಇಂಡಿಯನ್ ಆರ್ಮಿ

    indina army for kgf chapter 2 climax shoot

    ಕೆಜಿಎಫ್ 2 ಚಿತ್ರದ ಶೂಟಿಂಗ್ ಭರ್ಜರಿಯಾಗಿ ಸಾಗುತ್ತಿದೆ. ಬಹುತೇಕ ಚಿತ್ರೀಕರಣ ಮುಕ್ತಾಯದ ಹಂತಕ್ಕೆ ಬಂದಿದೆ. ಹೈದರಾಬಾದ್‍ನಲ್ಲೀಗ ಕ್ಲೈಮಾಕ್ಸ್ ಶೂಟಿಂಗ್ ನಡೆಯುತ್ತಿದ್ದು, ಕ್ಲೈಮಾಕ್ಸ್ ಚಿತ್ರೀಕರಣದಲ್ಲಿ ಭಾರತೀಯ ಸೇನೆ ಬಳಕೆಯಾಗುತ್ತಿದೆ. ಕ್ಲೈಮಾಕ್ಸ್ ಚಿತ್ರೀಕರಣದ ಒಂದು ಫೋಟೋ ಹೊರಬಿದ್ದಿದ್ದು, ನೂರಾರು ಇಂಡಿಯನ್ ಆರ್ಮಿ ವಾಹನಗಳು ಸಾಲಾಗಿ ಸಂಚರಿಸುತ್ತಿರುವ ಫೋಟೋ ಕುತೂಹಲ ಹೆಚ್ಚಿಸಿದೆ.

    ಕೆಜಿಎಫ್ ಚಾಪ್ಟರ್ 2ನಲ್ಲಿ ರವೀನಾ ಟಂಡನ್, ದೇಶದ ಪ್ರಧಾನಿಯ ಪಾತ್ರ ಮಾಡುತ್ತಿದ್ದಾರೆ. ಯಶ್ ಅಲಿಯಾಸ್ ರಾಕಿಭಾಯ್ ಡೆತ್ ವಾರೆಂಟ್‍ಗೆ ಸಹಿ ಹಾಕೋದೇ ಅವರು. ನಂತರ ರಾಕಿ ಭಾಯ್ ಸಾಮ್ರಾಜ್ಯಕ್ಕೆ ನುಗ್ಗುತ್ತೆ ಇಂಡಿಯನ್ ಆರ್ಮಿ.

    ಹೇಗಿರುತ್ತೆ ಕ್ಲೈಮಾಕ್ಸ್.. ನಿರ್ದೇಶಕ ಪ್ರಶಾಂತ್ ನೀಲ್ ಸಿನಿಮಾವನ್ನು ಥ್ರಿಲ್ ಆಗುವಂತೆ ತೋರಿಸ್ತಾರೆ. ವಿಜಯ್ ಕಿರಗಂದೂರು ಅದರ ಅದ್ಧೂರಿತನಕ್ಕೆ ಮೋಸ ಮಾಡಲ್ಲ. ವೇಯ್ಟ್.. ಸಿನಿಮಾ ಇದೇ ವರ್ಷ ರಿಲೀಸ್ ಆಗುತ್ತೆ

  • ಕೆಜಿಎಫ್ ಗಲಿ ಗಲಿ.. ಚಿಲಿಪಿಲಿಯೋ ಚಿಲಿಪಿಲಿ

    kgf's gali gali song

    ಕೆಜಿಎಫ್ ಚಿತ್ರದ ಹಿಂದಿ ವರ್ಷನ್ ಐಟಂ ಸಾಂಗ್ ಗಲಿ ಗಲಿ ಹಾಡಿನ ವಿಡಿಯೋ ರಿಲೀಸ್ ಆಗಿದೆ. ಹಿಂದಿಯಲ್ಲಿ ಈ ಹಾಡಿಗೆ ಹೆಜ್ಜೆ ಹಾಕಿರುವುದು ಮೌನಿ ರಾಯ್. ಹಾಡು ಆನ್‍ಲೈನ್‍ನಲ್ಲಿ ಧೂಳೆಬ್ಬಿಸಿದೆ.

    ಕನ್ನಡದಲ್ಲಿ ಜೋಕೆ.. ನಾನು ಬಳ್ಳಿಯ ಮಿಂಚು ಹಾಡಿನ ರೀಮಿಕ್ಸ್ ಸಾಂಗ್ ಬಳಸಿಕೊಂಡಿದ್ದಾರಲ್ಲ.. ಹಾಗೆಯೇ.. ಗಲಿ ಗಲಿ ಹಾಡನ್ನು ಹಿಂದಿ ಕೆಜಿಎಫ್‍ನಲ್ಲಿ ಬಳಸಿಕೊಳ್ಳಲಾಗಿದೆ. 

    ಹಿಂದಿ ಚಿತ್ರರಸಿಕರಿಗೆ ಗಲಿ ಗಲಿ ಸಾಂಗ್‍ನ ವಿಡಿಯೋ ತೋರಿಸಿ ಕಣ್ಣು, ಕಿವಿ ಎರಡನ್ನೂ ತಣಿಸಿರುವ ನಿರ್ದೇಶಕ ಪ್ರಶಾಂತ್ ನೀಲ್, ನಿರ್ಮಾಣ ಸಂಸ್ಥೆ ಹೊಂಬಾಳೆ.. ಕನ್ನಡ ಚಿತ್ರರಸಿಕರಿಗೆ 

    ತಮನ್ನಾ ಹಾಡು ತೋರಿಸೋದು ಯಾವಾಗ..? 

  • ಕೆಜಿಎಫ್ ಚಾಪ್ಟರ್ 2 ಶೂಟಿಂಗ್ ಲೇಟು. ಏನ್ ಕಾರಣ ಗೊತ್ತಾ..?

    dela in kgf chapter 2 shooting

    ಕೆಜಿಎಫ್ ಚಾಪ್ಟರ್ 2 ಚಿತ್ರದ ಚಿತ್ರೀಕರಣ ಇಷ್ಟೊತ್ತಿಗೆ ಶುರುವಾಗಬೇಕಿತ್ತು. ಚಾಪ್ಟರ್ 2 ಭಯಂಕರ ಸಕ್ಸಸ್ ಕಂಡಿರುವ ಹಿನ್ನೆಲೆಯಲ್ಲಿ ಚಾಪ್ಟರ್ 2 ಬಗ್ಗೆ ನಿರೀಕ್ಷೆಗಳೂ ಮೌಂಟ್ ಎವರೆಸ್ಟ್ ಎತ್ತರದಲ್ಲಿವೆ. ಇನ್ನು ಚಿತ್ರದ ಕೆಲವು ಪಾತ್ರಗಳಿಗಾಗಿ ಭರ್ಜರಿಯಾಗಿಯೇ ಅಡಿಷನ್ ನಡೆಸಿದೆ ಕೆಜಿಎಫ್ ಟೀಂ. ಆದರೆ, ಶೂಟಿಂಗ್ ಮಾತ್ರ ಇನ್ನೂ ಶುರುವಾಗಿಲ್ಲ. 

    ಕೆಜಿಎಫ್ ಶೂಟಿಂಗ್ ವಿಳಂಬಕ್ಕೆ ಏನು ಕಾರಣ ಎಂದು ಹುಡುಕುತ್ತಾ ಹೋದರೆ, ಅಧಿಕೃತ ಮಾಹಿತಿ ಸಿಕ್ಕಿಲ್ಲ. ಆದರೆ, ಸೆಟ್ ನಿರ್ಮಾಣದಲ್ಲಿ ಆಗುತ್ತಿರುವ ವಿಳಂಬವೇ ಶೂಟಿಂಗ್ ವಿಳಂಬಕ್ಕೂ ಕಾರಣ ಎನ್ನಲಾಗುತ್ತಿದೆ. 

    ನಿರ್ದೇಶಕ ಪ್ರಶಾಂತ್ ನೀಲ್, ವಿಭಿನ್ನ ಕಲ್ಪನೆಯ ಸೆಟ್ ಹಾಕಿಸುತ್ತಿದ್ದು, ಅದು ಅಂದುಕೊಂಡಿದ್ದಕ್ಕಿಂತ ಹೆಚ್ಚು ಸಮಯ ಕೇಳುತ್ತಿದೆಯಂತೆ. ನಿರ್ಮಾಪಕ ವಿಜಯ್ ಕಿರಗಂದೂರು ಕೂಡಾ, ಕ್ವಾಲಿಟಿಯಲ್ಲಿ ನೋ ಕಾಂಪ್ರಮೈಸ್ ಎಂದಿದ್ದಾರೆ. ಯಶ್ ಕೂಡಾ ಚೆನ್ನಾಗಿ ಬರುವವರೆಗೆ ಕಾಯೋಣ ಎನ್ನುತ್ತಿದ್ದಾರಂತೆ. ಹೀಗಾಗಿ ಕೆಜಿಎಫ್ ಚಾಪ್ಟರ್ 2 ಶೂಟಿಂಗ್ ವಿಳಂಬವಾಗುತ್ತಿದೆ.

  • ಕೆಜಿಎಫ್‌ ಚಾಪ್ಟರ್‌ 2ಗೆ ರೌಡಿ ತಂಗಂ ಟ್ರಬಲ್

    kgf chapter 2 lands in new trouble

    ಇತ್ತೀಚೆಗಷ್ಟೇ ಸೈನೇಡ್ ಗುಡ್ಡದ ಶೂಟಿಂಗ್ ಸಂಕಟದಿಂದ ಪಾರಾಗಿದ್ದ ಕೆಜಿಎಫ್ ಚಾಪ್ಟರ್ 2 ಸಿನಿಮಾಗೆ ಈಗ ಇನ್ನೊಂದು ಸಮಸ್ಯೆ ಎದುರಾಗಿದೆ. ಅದು ಬಂದಿರೋದು ರೌಡಿ ತಂಗಂ ತಾಯಿಯಿಂದ. ಕೆಜಿಎಫ್ 1 ಸಿನಿಮಾದಲ್ಲಿ ನನ್ನ ಮಗನನ್ನು ಒಳ್ಳೆಯ ರೀತಿ ತೋರಿಸುತ್ತೇವೆ ಎಂದು ಹೇಳಿ, ಅವನನ್ನು

     ಕೆಟ್ಟದಾಗಿ ತೋರಿಸಿದ್ದಾರೆ. ಹೀಗಾಗಿ ಕೆಜಿಎಫ್‌ ಚಾಪ್ಟರ್‌ 2 ಚಿತ್ರೀಕರಣಕ್ಕೆ ತಡೆ ನೀಡಬೇಕು ಎಂದು ತಂಗಂ ತಾಯಿ ಪೌಳಿ, 2ನೇ  ಹೆಚ್ಚುವರಿ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.

    ರೌಡಿ ತಂಗಂ ಹಲವು ವರ್ಷಗಳ ಹಿಂದೆ, ಪೊಲೀಸ್ ಎನ್‌ಕೌಂಟರ್‌ನಲ್ಲಿ ಮೃತಪಟ್ಟಿದ್ದ ರೌಡಿ. ಅರ್ಜಿ ಹಿನ್ನೆಲೆಯಲ್ಲಿ ನ್ಯಾಯಾಲಯ, ನಿರ್ಮಾಪಕ ವಿಜಯ ಕಿರಗಂದೂರು, ನಿರ್ದೇಶಕ ಪ್ರಶಾಂತ್ ನೀಲ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಮತ್ತು ಬಿಜಿಎಂಎಲ್‌ ಕಂಪೆನಿಗೆ ಸಮನ್ಸ್ ನೀಡಿದೆ. ಅರ್ಜಿಯ ವಿಚಾರಣೆ ಅಕ್ಟೋಬರ್ 9ಕ್ಕೆ ನಿಗಧಿಯಾಗಿದೆ.

  • ಕೆಜಿಎಫ್ ಚಿತ್ರದಲ್ಲಿ ಅಂಥಾದ್ದೇನಿದೆ..?

    kgf highlights revealed by prashanth neel

    ರಾಕಿಂಗ್ ಸ್ಟಾರ್ ಯಶ್ ಅಭಿನಯದ, ಹೊಂಬಾಳೆ ಪ್ರೊಡಕ್ಷನ್ಸ್ ನಿರ್ಮಾಣದ ಕೆಜಿಎಫ್ ಚಿತ್ರ, ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದು. ಸುಮಾರು ಒಂದು ವರ್ಷದಿಂದ ಕನ್ನಡಿಗರು ಎದುರು ನೋಡುತ್ತಿರುವ ಚಿತ್ರ. ಚಿತ್ರದ ಚಿತ್ರೀಕರಣ ಇನ್ನೂ ಶೇ.15ರಷ್ಟು ಬಾಕಿಯಿದೆ. ಇದುವರೆಗೆ ಹೊರಬಂದಿರೋದು ಎರಡು ಟೀಸರ್ ಮಾತ್ರ. ಅವು ಹುಟ್ಟಿಸಿರುವ ಕುತೂಹಲ ಸಣ್ಣದೇನಲ್ಲ. ಇಷ್ಟಕ್ಕೂ ಚಿತ್ರದಲ್ಲಿ ಅಂಥಾದ್ದೇನಿದೆ..? ಕಥೆ ಎಂಥಾದ್ದು..? ನಿರ್ದೇಶಕ ಉಗ್ರಂ ಪ್ರಶಾಂತ್ ನೀಲ್, ಒಂದಿಷ್ಟು ಹೇಳಿಕೊಂಡಿದ್ದಾರೆ.

    ಇದು 70ರಿಂದ 80ರ ದಶಕದಲ್ಲಿ ನಡೆಯುವ ಕಥೆ. ಅಂಡರ್‍ವಲ್ರ್ಡ್ ಛಾಯೆಯಿರುವುದು ಹೌದಾದರೂ, ಅದಕ್ಕೂ ಕೆಜೆಎಫ್‍ಗೂ ಸಂಬಂಧವಿಲ್ಲ. ಪಾತ್ರಗಳು ನನ್ನ ಕಲ್ಪನೆಯವೇ ಹೊರತು, ನಿಜವಾದ ವ್ಯಕ್ತಿಗೆ ಸಂಬಂಧಪಟ್ಟಿದ್ದಲ್ಲ. ಚಿತ್ರದಲ್ಲಿ ಆ್ಯಕ್ಷನ್, ರೊಮ್ಯಾನ್ಸ್, ತಾಯಿ-ಮಗನ ಸೆಂಟಿಮೆಂಟ್ ಎಲ್ಲವೂ ಇದೆ. ಉಗ್ರಂ ಚಿತ್ರಕ್ಕೂ, ಈ ಚಿತ್ರಕ್ಕೂ ಕೂದಲೆಳೆಯಷ್ಟೂ ಲಿಂಕ್ ಇಲ್ಲ. ಇದು ಕಥೆಯ ಬಗ್ಗೆ ಪ್ರಶಾಂತ್ ಹೇಳಿರುವ ಮಾತು.

    ಇನ್ನು ಚಿತ್ರ ರಿಲೀಸ್ ಆಗುವುದು ಏಪ್ರಿಲ್, ಮೇ ನಂತರಾನೇ ಎಂದಿದ್ದಾರೆ ಪ್ರಶಾಂತ್. ನಿರ್ಮಾಪಕ ವಿಜಯ್ ಕಿರಗಂದೂರು ಅವರ ನಿರೀಕ್ಷೆಯಂತೆಯೇ ಚಿತ್ರ ಮೂಡಿ ಬರುತ್ತಿದೆ. ಮೇಕಿಂಗ್ ಶೈಲಿ ಹಾಲಿವುಡ್ ಮಾದರಿಯಲ್ಲಿದೆ ಎಂದು ಖುಷಿಗೊಂಡಿದ್ದಾರೆ. 

    ಯಶ್ ಅವರಂತೂ ಇಡೀ ಚಿತ್ರವನ್ನು ತಮ್ಮದೇ ಹೋಮ್ ಬ್ಯಾನರ್ ಸಿನಿಮಾವೇನೋ ಎಂಬಷ್ಟು ಪ್ರೀತಿಸುತ್ತಿದ್ದಾರೆ. ತಾವೊಬ್ಬ ಸ್ಟಾರ್ ನಟ ಅನ್ನೋದನ್ನು ಪಕ್ಕಕ್ಕಿಟ್ಟು, ಚಿತ್ರದ ಚಿತ್ರೀಕರಣದಲ್ಲಿ ಇನ್‍ವಾಲ್ವ್ ಆಗುತ್ತಿದ್ದಾರೆ. ಅನಂತ್‍ನಾಗ್, ಅಚ್ಯುತ್ ಕುಮಾರ್, ವಸಿಷ್ಠ ಸಿಂಹ,  ನಾಜರ್ ಕೂಡಾ ಅಷ್ಟೆ.. ಪ್ರತಿಯೊಬ್ಬರೂ ಸಿನಿಮಾವನ್ನು ನಮ್ಮ ಸಿನಿಮಾ ಎಂದೇ ಸಹಕಾರ ನೀಡುತ್ತಿದ್ದಾರೆ. ಒಂದು ಅದ್ಬುತ ಅನುಭವದ ಚಿತ್ರವಂತೂ ನಿಮ್ಮ ಮುಂದೆ ಬರಲಿದೆ ಎಂದು ಭರವಸೆ ನೀಡಿದ್ದಾರೆ ಪ್ರಶಾಂತ್.

  • ಕೆಜಿಎಫ್ ಜೊತೆಯಲ್ಲೇ ಶಿವಣ್ಣ, ಅಪ್ಪು ಕಿಕ್

    natasarvabhouma, kavacha teaser - trailer during kgf

    ಕೆಜಿಎಫ್ ರಿಲೀಸ್ ಆದ ದಿನ ಥಿಯೇಟರಿಗೆ ಅಕ್ಷರಶಃ ನುಗ್ಗಿ ಚಿತ್ರವನ್ನು ಕಣ್ತುಂಬಿಕೊಂಡ ಚಿತ್ರರಸಿಕರಿಗೆ ಇನ್ನೆರಡು ಗಿಫ್ಟ್‍ಗಳೂ ಜೊತೆಯಲ್ಲಿದ್ದವು. ಒಂದು ಶಿವರಾಜ್‍ಕುಮಾರ್ ಅವರದ್ದು. ಇನ್ನೊಂದು ಪುನೀತ್ ರಾಜ್‍ಕುಮಾರ್‍ದು.

    ಮುಂದಿನ ತಿಂಗಳು ರಿಲೀಸ್‍ಗೆ ರೆಡಿಯಾಗಿರುವ ಕವಚ ಚಿತ್ರದ ಟ್ರೇಲರ್‍ನ್ನು ಕೆಜಿಎಫ್ ಜೊತೆಯಲ್ಲಿಯೇ ರಿಲೀಸ್ ಮಾಡಲಾಗಿದೆ. ಶಿವಣ್ಣ ಮೊದಲ ಬಾರಿಗೆ ಅಂಧನಾಗಿ ನಟಿಸಿರುವ, 14 ವರ್ಷಗಳ ನಂತರ ರೀಮೇಕ್‍ನಲ್ಲಿ ನಟಿಸಿರುವ ಚಿತ್ರ ಕವಚ.

    ಇನ್ನು ಪುನೀತ್ ರಾಜ್‍ಕುಮಾರ್ ಅಭಿನಯದ ನಟಸಾರ್ವಭೌಮ ಚಿತ್ರದ ಟೀಸರ್ ಕೂಡಾ ಕೆಜಿಎಫ್ ಜೊತೆಯಲ್ಲೇ ಹೊರಬಂದಿದೆ. ಡ್ಯಾನ್ಸ್ ವಿತ್ ಅಪ್ಪು ಎಂಬ ಹಾಡಿನಲ್ಲಿ ಅಪ್ಪು ಮತ್ತೊಮ್ಮೆ ಮೈನವಿರೇಳಿಸುವ ಸ್ಟೆಪ್ ಹಾಕಿದ್ದಾರೆ. ಪವನ್ ಒಡೆಯರ್ ನಿರ್ದೇಶನದ ಚಿತ್ರಕ್ಕೆ ರಾಕ್‍ಲೈನ್ ವೆಂಕಟೇಶ್ ನಿರ್ಮಾಪಕ.

  • ಕೆಜಿಎಫ್ ಟೀಂ ಹೈದರಾಬಾದ್ ಶಿಫ್ಟ್

    kgf team busy shooting in hyderabad

    ಕೆಜಿಎಫ್ ಚಾಪ್ಟರ್ 2 ಚಿತ್ರದ ಚಿತ್ರೀಕರಣ ಕೋಲಾರದಲ್ಲಿ ಮುಕ್ತಾಯವಾಗಿದೆ. 2ನೇ ಶೆಡ್ಯೂಲ್ ಚಿತ್ರೀಕರಣ ಹೈದರಾಬಾದ್‍ನಲ್ಲಿ ಶುರುವಾಗಿದೆ. ಇಡೀ ಚಿತ್ರತಂಡ ಈಗ ಹೈದರಾಬಾದ್‍ನಲ್ಲಿ ಬೀಡುಬಿಟ್ಟಿದೆ.

    ಯಶ್, ಶ್ರೀನಿಧಿ ಶೆಟ್ಟಿ, ಸಂಜಯ್ ದತ್, ರವೀನಾ ಟಂಡನ್, ಅನಂತನಾಗ್, ಮಾಳವಿಕಾ ಅವಿನಾಶ್ ಸೇರಿದಂತೆ ಮತ್ತೊಮ್ಮೆ ಕಲಾವಿದರ ತಂಡ ಒಗ್ಗೂಡಿದೆ. ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಸಾಹಸ ದೃಶ್ಯಗಳ ಭರ್ಜರಿ ಚಿತ್ರೀಕರಣ ನಡೆಯುತ್ತಿದೆ. ಸೆಪ್ಟೆಂಬರ್ ಕೊನೆಯ ವೇಳೆಗೆ ಚಿತ್ರದ ಶೇ.60ರಷ್ಟು ಚಿತ್ರೀಕರಣ ಮುಗಿಸುವ ತವಕದಲ್ಲಿದೆ ಕೆಜಿಎಫ್ ಟೀಂ.

    ಹೊಂಬಾಳೆ ಫಿಲಂಸ್‍ನಲ್ಲಿ ಬರುತ್ತಿರುವ ಕೆಜಿಎಫ್ ಚಾಪ್ಟರ್-2 ಚಿತ್ರವನ್ನು ಮೊದಲ ಭಾಗಕ್ಕಿಂತ ಅದ್ಧೂರಿಯಾಗಿ ತೆರೆ ಮೇಲೆ ತರಲು ಉತ್ಸುಕರಾಗಿದ್ದಾರೆ ನಿರ್ಮಾಪಕ ವಿಜಯ್ ಕಿರಗಂದೂರು.

  • ಕೆಜಿಎಫ್ ಟ್ರೇಲರ್ ಅಂಬರೀಷ್ರಿಂದ ರಿಲೀಸ್

    kgf trailer launched by ambareesh

    ರಾಕಿಂಗ್ ಸ್ಟಾರ್ ಯಶ್, ಹೊಂಬಾಳೆ ಪ್ರೊಡಕ್ಷನ್ಸ್ ಮತ್ತು ಪ್ರಶಾಂತ್ ನೀಲ್ ಕಾಂಬಿನೇಷನ್ನಿನದ ಕೆಜಿಎಫ್ ಸಿನಿಮಾ ಟ್ರೇಲರ್ ಅದ್ದೂರಿಯಾಗಿ ಬಿಡುಗಡೆಯಾಗಿದೆ. ರೆಬಲ್ ಸ್ಟಾರ್ ಅಂಬರೀಶ್ ಚಿತ್ರದ ಐದೂ ಭಾಷೆಯ ಟ್ರೇಲರ್ ರಿಲೀಸ್ ಮಾಡಿದ್ದಾರೆ. ನಾವು ನೀವು ಕಂಡಂತೆ ಯಾವುದೇ ಟ್ರೇಲರ್ ಆಗಲಿ, ಬಿಡುಗಡೆಗೆ ಬರೋದು ಕೆಲವೇ ಜನ. ಆದರೆ ಕೆಜಿಎಫ್ ಇಡೀ ಪ್ರಪಂಚವನ್ನೇ ಆವರಿಸಿಕೊಳ್ಳುತ್ತೆ. ಅದು ನನ್ನ ಆಸೆ ಎಂದರು ಅಂಬಿ. ಟ್ರೇಲರ್ ಬಹಳ ಕುತೂಹಲ ಸೃಷ್ಟಿಸಿದೆ. ಇಷ್ಟು ದೊಡ್ಡ ಸಿನಿಮಾದ ಟ್ರೇಲರ್ ರಿಲೀಸ್ ಮಾಡೋಕೆ ಖುಷಿಯಾಗುತ್ತಿದೆ ಎಂದರು ಅಂಬಿ.

    ಹೊಂಬಾಳೆ ಪ್ರೊಡಕ್ಷನ್ನಿಂದ ಕನ್ನಡ-ಮಲಯಾಳಂ ಟ್ರೈಲರ್ ರಿಲೀಸ್ ಆದರೆ, ವಿಶಾಲ್ ಫಿಲಂ ಫ್ಯಾಕ್ಟರಿಯಿಂದ ತಮಿಳು ಟ್ರೈಲರ್  ರಿಲೀಸ್ ಆಗಿದೆ. ವರಾಹಿ ಪ್ರೊಡಕ್ಷನ್ ತೆಲುಗು ಮತ್ತು ಹಿಂದಿ ಟ್ರೈಲರ್ ರಿಲೀಸ್ ಮಾಡಿದೆ. 

    ಐದು ಭಾಷೆಗಳ ಪತ್ರಕರ್ತರ ಸಮ್ಮುಖದಲ್ಲಿ ರಿಲೀಸ್ ಆದ ಕೆಜಿಎಪ್ ಚಿತ್ರದ ಟ್ರೇಲರ್, ರಿಲೀಸ್ ಆದ ಕೆಲವೇ ನಿಮಿಷಗಳಲ್ಲಿ ಟ್ರೆಂಡ್ ಆಗಿದ್ದು ವಿಶೇಷ.  ಕೆಜಿಎಫ್ ಡಿಸೆಂಬರ್ 21ರಂದು ರಿಲೀಸ್ ಆಗುತ್ತಿದೆ.

  • ಕೆಜಿಎಫ್ ಟ್ರೇಲರ್‍ನ ಪವರ್‍ಫುಲ್ ಡೈಲಾಗ್ಸ್

    kgf dialogues goes viral

    ಕೆಜಿಎಫ್ ಚಿತ್ರದ ಮೇಕಿಂಗ್, ದೃಶ್ಯ ವೈಭವಕ್ಕೆ ಪೈಪೋಟಿ ನೀಡಿರುವ ಡೈಲಾಗುಗಳಂತೂ ಅದ್ಭುತ. ಟ್ರೇಲರ್‍ನಲ್ಲಿ ಖಡಕ್ ಅನ್ನಿಸೋದು ಎರಡೇ ಡೈಲಾಗು. ಉಳಿದಂತೆ ಭಾವನೆಗಳನ್ನು ಕೆರಳಿಸುವ, ಉದ್ದೀಪಿಸುವ ಮಾತುಗಳಿವೆ. ಟ್ರೇಲರ್ ಆರಂಭ : ಆ ರಾತ್ರಿ ಎರಡು ಘಟನೆ ನಡೀತು. ಆ ಜಾಗಾನೂ ಹುಟ್ತು. ಅವನೂ ಹುಟ್ಟಿದ..

    ಡೈಲಾಗ್ ನಂ. 1 - ಮುಂಬೈ ಏನು ನಿಮ್ಮಪ್ಪಂದಾ..?

    ಅಲ್ಲ ಕಣೋ.. ನಿಮ್ಮಪ್ಪಂದೇ.. ನಿಮ್ಮಪ್ಪ ನಾನೇ..

    ಡೈಲಾಗ್ ನಂ. 2 - ನಿನ್ನ ಬೆನ್ನ ಹಿಂದೆ ಸಾವಿರ ಜನ ನಿಂತಿದ್ದಾರೆ ಅನ್ನೋ ಧೈರ್ಯ ನಿನಗೆ ಇದ್ರೆ, ನೀನು ಬರೀ ಒಂದು ಯುದ್ಧ ಗೆಲ್ಲಬಹುದು.

    ಅದೇ ನೀನು ಮುಂದೆ ನಿಂತಿದ್ದೀಯ ಅನ್ನೋ ಧೈರ್ಯ ನಿನ್ನ ಹಿಂದೆ ಇರೋ ಸಾವಿರ ಜನಕ್ಕೆ ಬಂದ್ರೆ, ನೀನು ಪ್ರಪಂಚನೇ ಗೆಲ್ಲಬಹುದು.

    ಡೈಲಾಗ್ ನಂ. 3 - ರೌಡಿ : ಏನೋ ಬೇಕು ನಿಂಗೆ..?  ಮಾಸ್ಟರ್ ಯಶ್ ಡೈಲಾಗ್ : ದುನಿಯಾ

    ಟ್ರೇಲರ್ ಇಂಟರ್ವಲ್ - ನೀನು ಒಂದು ಆನೆ ಹೊಡೀಬೇಕು ಅಂತಾ ಹೇಳ್ತಾನೆ ಡಾನ್. ಯಶ್ ಜರ್ನಿ ಶುರು. ಹೊರಟ.. ಅವನಿಗೆ ಹೋಗೋ ದಾರಿನೂ ಗೊತ್ತಿರ್ಲಿಲ್ಲ. ತಲುಪೋ ಜಾಗದ ಬಗ್ಗೆ ಗೊತ್ತಿರಲಿಲ್ಲ.  ಅಲ್ಲಿನ ಅಮಾನುಷತೆಯೂ ಗೊತ್ತಿರಲಿಲ್ಲ.

    ಹೀಗೆ ಶುರುವಾಗುವ ಟ್ರೇಲರ್‍ನಲ್ಲಿ ಸಣ್ಣ ಸಣ್ಣ ಸೌಂಡು ಕೂಡಾ ಎದ್ದು ಕಾಣುತ್ತೆ. ಕಿವಿಗೆ ನಾಟುತ್ತೆ. ಪ್ರಶಾಂತ್ ನೀಲ್ ಮತ್ತೊಮ್ಮೆ ಉಗ್ರಂ ನೆನಪಿಸುತ್ತಾರೆ.

  • ಕೆಜಿಎಫ್ ಡೈಲಾಗ್‍ದೇ ಹವಾ..

    kgf dialogue is hit

    ರಾಕಿಂಗ್ ಸ್ಟಾರ್ ಯಶ್ ಅಂದ್ರೆ, ಡೈಲಾಗ್‍ಗಳಿಗೆ ಬರವೇ ಇರೋದಿಲ್ಲ. ಇನ್ನು ಕೆಜಿಎಫ್ ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್. ಈ ಇಬ್ಬರ ಕಾಂಬಿನೇಷನ್ನಿನ ಕೆಜಿಎಫ್, ಭರ್ಜರಿ ನಿರೀಕ್ಷೆ ಹುಟ್ಟಿಸಿರುವಾಗಲೇ, ಯಶ್‍ರ ಆ ಡೈಲಾಗ್ ಹವಾ ಸೃಷ್ಟಿಸಿದೆ

    ರಕ್ತದ ವಾಸನೆ ಕಂಡ್ರೆ ಬೇಜಾನ್ ಮೀನುಗಳು ಒಟ್ಟಿಗೇ ಬಂದ್ ಬಿಡ್ತವೆ. ಆದರೆ, ಆ ಮೀನುಗಳಿಗೆ ಗೊತ್ತಿಲ್ಲ, ಆ ರಕ್ತ ಮೀನುಗಳನ್ನು ಬೇಟೆಯಾಡೋ ತಿಮಿಂಗಿಲದ್ದು ಅಂತಾ.. ಇದು ಯಶ್ ಡೈಲಾಗ್.

    ಇದಕ್ಕೆ ಮುಂಚೆ ಇದೇ ಚಿತ್ರದ ಇನ್ನೊಂದು ಡೈಲಾಗ್‍ನ್ನು ಸ್ವತಃ ಯಶ್ ಬಹಿರಂಗಪಡಿಸಿದ್ರು. ಇನ್ಮೇಲಿಂದ ಅವರಪ್ಪ ನನ್ ಮಾವ, ನಾನು ನಿಮ್ಮೆಲ್ಲರಿಗೂ ಭಾವ. ನಿಮ್ಮಕ್ಕನ್ ಚೆನ್ನಾಗ್ ನೋಡ್ಕಳ್ರೋ, ಚೆನ್ನಾಗ್ ನೋಡ್ಕಳಿ ಅನ್ನೋ ಡೈಲಾಗ್ ಬಹಿರಂಗವಾಗಿತ್ತು.

    ಈಗ 2ನೇ ಡೈಲಾಗ್ ಹೊರಬಿದ್ದಿದೆ. ಹೊಂಬಾಳೆ ಫಿಲ್ಸ್ಮ್ ನಿರ್ಮಿಸುತ್ತಿರುವ ಚಿತ್ರಕ್ಕೆ ವಿಜಯ್ ಕಿರಗಂದೂರು ನಿರ್ಮಾಪಕರು. 5 ಭಾಷೆಗಳಲ್ಲಿ ರಿಲೀಸ್ ಆಗಲಿರುವ ಚಿತ್ರದಲ್ಲಿರೋದು 80ರ ದಶಕದ ಕಥೆ. ಅಷ್ಟನ್ನು ಬಿಟ್ಟರೆ, ಬೇರ್ಯಾವುದೇ ಸೀಕ್ರೆಟ್ ಬಹಿರಂಗವಾಗಿಲ್ಲ.

  • ಕೆಜಿಎಫ್ ದರ್ಬಾರ್ ಇನ್ ಫಿಲಂಫೇರ್

    kgf rules film fare awards

    2018ರ ಕೊನೆಯಲ್ಲಿ ರಿಲೀಸ್ ಆಗಿ, 2019ರ ಆರಂಭದಲ್ಲಿ ಸಂಪೂರ್ಣ ಹವಾ ಸೃಷ್ಟಿಸಿದ್ದ ಕೆಜಿಎಫ್, ಫಿಲಂಫೇರ್ ಹಬ್ಬದಲ್ಲೂ ದರ್ಬಾರ್ ಮಾಡಿದೆ. ಬೆಸ್ಟ್ ಫಿಲಂ ಮತ್ತು ಬೆಸ್ಟ್ ಆ್ಯಕ್ಟರ್ ಎರಡೂ ಪ್ರಶಸ್ತಿ ಕೆಜಿಎಫ್ ಪಾಲಾಗಿದೆ.

    ಬೆಸ್ಟ್ ನಟಿ ಪ್ರಶಸ್ತಿ ಟಗರು ಪುಟ್ಟಿ ಮಾನ್ವಿತಾ ಹರೀಶ್ ಪಾಲಾಗಿದ್ದರೆ, ವಿಮರ್ಶಕರ ಪ್ರಶಸ್ತಿ ಗೆದ್ದಿರುವುದು ನಾತಿಚರಾಮಿಯ ಶೃತಿ ಹರಿಹರನ್. ನಟರಲ್ಲಿ ವಿಮರ್ಶಕರ ಪ್ರಶಸ್ತಿ ಅಯೋಗ್ಯ ಸತೀಶ್‌ಗೆ ಒಲಿದಿದೆ. ಉಳಿದಂತೆ..

    ಅತ್ಯುತ್ತಮ ಹಿನ್ನೆಲೆ ಗಾಯಕ - ಸಂಚಿತ್ ಹೆಗ್ಡೆ (ಶಾಕುಂತ್ಲೆ ಸಿಕ್ಕಳು.. - ನಡುವೆ ಅಂತರವಿರಲಿ)

    ಅತ್ಯುತ್ತಮ ಹಿನ್ನೆಲೆ ಗಾಯಕಿ - ಬಿಂದುಮಾಲಿನಿ (ಭಾವಲೋಕದ.. - ನಾತಿಚರಾಮಿ)

    ಅತ್ಯುತ್ತಮ ಮ್ಯೂಸಿಕ್ ಆಲ್ಬಂ - ವಾಸುಕಿ ವೈಭವ್ - ಸ.ಹಿ.ಪ್ರಾ.ಶಾಲೆ

    ಇನ್ನು ನಾತಿಚರಾಮಿ ಚಿತ್ರಕ್ಕಾಗಿ ಮಂಸೋರೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಪಡೆದುಕೊಂಡಿದ್ದರೆ, ಅದೇ ಚಿತ್ರಕ್ಕಾಗಿ ಶರಣ್ಯ ಪೋಷಕನಟಿ ಪ್ರಶಸ್ತಿ ಪಡೆದಿದ್ದಾರೆ. ಟಗರು ಚಿತ್ರದ ಡಾಲಿ ಪಾತ್ರಕ್ಕೆ ಧನಂಜಯ್ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಪಡೆದುಕೊಂಡಿದ್ದಾರೆ.

    ಈ ಬಾರಿಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿರುವ ಎಚ್.ಎಸ್.ವೆಂಕಟೇಶ್ ಮೂರ್ತಿ ಅವರ ಸಾಹಿತ್ಯವಿದ್ದ ಹಸಿರು ರಿಬ್ಬನ್ ಚಿತ್ರಕ್ಕೆ ಅತ್ಯುತ್ತಮ ಸಾಹಿತ್ಯಕ್ಕಾಗಿಯೇ ಪ್ರಶಸ್ತಿ ಲಭಿಸಿದೆ

  • ಕೆಜಿಎಫ್ ನಾಯಕಿ ಕಥೆಯ ರಹಸ್ಯ ಹೇಳಿಬಿಟ್ರಾ..?

    srinidhi shetty talks about her role in kgf

    ಕೆಜಿಎಫ್ ನಾಯಕಿ ಶ್ರೀನಿಧಿ ಶೆಟ್ಟಿ. ಆಕೆಗಿದು ಮೊದಲ ಸಿನಿಮಾ. ಆದರೆ, ಕೆಜಿಎಫ್ ರಿಲೀಸ್ ಡೇಟ್ ಹತ್ತಿರವಾಗುತ್ತಿದ್ದರೂ, ಆಕೆ ಮೀಡಿಯಾಗಳಲ್ಲಿ ಕಾಣಿಸಿಕೊಂಡಿದ್ದೇ ಇಲ್ಲ. ಅದಕ್ಕೆ ಕಾರಣ ಬೇರೆ ಯಾರೂ ಅಲ್ಲ. ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್. 

    ಕಥೆ, ತಮ್ಮ ಪಾತ್ರದ ಕುರಿತು ಯಾರೊಬ್ಬರೂ ಹೊರಗೆ ಮಾತನಾಡಬಾರದು ಅನ್ನೊದು ಪ್ರಶಾಂತ್ ನೀಲ್, ಯಶ್ ಸೇರಿದಂತೆ ಎಲ್ಲ ಕಲಾವಿದರು, ತಂತ್ರಜ್ಞರಿಗೂ ವಿಧಿಸಿರುವ ಕಟ್ಟಪ್ಪಣೆ. ಅದನ್ನು ಎಲ್ಲರೂ ಶಿರಸಾವಹಿಸಿ ಪಾಲಿಸುತ್ತಿದ್ದಾರೆ ಅನ್ನೋದೂ ಸತ್ಯ. ಇದರ ನಡುವೆ ಶ್ರೀನಿಧಿ ಶೆಟ್ಟಿ ಪಾತ್ರ ಏನು..? ಈ ಕುತೂಹಲವನ್ನು ಮುಂದಿಟ್ಟುಕೊಂಡೇ ಕೇಳಿರೋ ಪ್ರಶ್ನೆ ಇದು.

    ಕೆಜಿಎಫ್‍ನಲ್ಲಿ ನಾಯಕಿ ಡಾನ್ ಮಗಳಂತೆ. ಆಕೆಯನ್ನು ಕೊಲ್ಲಲೆಂದೇ ಹೀರೋ ಯಶ್ ಸುಪಾರಿ ತಗೊಂಡು ಕೆಜಿಎಫ್‍ಗೆ ಬರ್ತಾರಂತೆ. ಹೌದಾ ಅಂದ್ರೆ..

    ಕಥೆ ಸೂಪರ್ ಆಗಿದೆ ಎಂದು ಗಹಗಹಿಸಿ ನಕ್ಕಿದ್ದಾರೆ ಶ್ರೀನಿಧಿ. ಅಷ್ಟೆಲ್ಲ ಆಗಿ, ನೀವು ಹೇಳ್ತಿರೋ ಕಥೆ ಚಿತ್ರದಲ್ಲಿದೆಯೋ ಇಲ್ವೋ ನಂಗೆ ಗೊತ್ತಿಲ್ಲ. ನಾನೂ ರಿಲೀಸ್‍ಗೆ ಕಾಯ್ತಿದ್ದೇನೆ ಎಂದಿದ್ದಾರೆ.

  • ಕೆಜಿಎಫ್ ನಾಯಕಿ ಹೇಳಿದ ಸೀಕ್ರೆಟ್

    kgf heroine srinidhi

    ಹೊಂಬಾಳೆ ಬ್ಯಾನರ್‍ನಲ್ಲಿ ಸಿದ್ಧವಾಗುತ್ತಿರುವ ಕೆಜಿಎಫ್ ಚಿತ್ರದ ಕಥೆ ಏನು..? ಯಶ್ ಪಾತ್ರ ಏನು..? ಈ ಬಗ್ಗೆ ಚಿತ್ರತಂಡ ಅದೆಷ್ಟು ಗಮನ ಹರಿಸಿದೆಯೆಂದರೆ, ಒಂದೇ ಒಂದು ಗುಟ್ಟನ್ನೂ ಅದು ಹೊರಬಿಟ್ಟಿಲ್ಲ. ಯಶ್ ಹುಟ್ಟುಹಬ್ಬದಂದು ಬಿಡುಗಡೆಯಾಗಿರುವ ಟೀಸರ್, ಕುತೂಹಲ ಹೆಚ್ಚಿಸಿದೆಯೇ ಹೊರತು, ಕಥೆಯ ಸುಳಿವನ್ನೂ ಹೇಳಿಲ್ಲ. 

    ಹೀಗೆ ಪ್ರಶಾಂತ್ ನೀಲ್ ಕಥೆಯ ಬಗ್ಗೆ ಗುಟ್ಟು ಕಾಪಾಡಿಕೊಳ್ಳುತ್ತಿರುವ ಹೊತ್ತಿನಲ್ಲಿಯೇ ನಾಯಕ ನಟಿ ಶ್ರೀನಿಧಿ ಶೆಟ್ಟಿ ಮಾತನಾಡಿದ್ದಾರೆ. ಯಶ್ ಬಗ್ಗೆ, ಸಿನಿಮಾ ಟೀಂ ಬಗ್ಗೆ ಖುಷಿ ಖುಷಿಯಾಗಿ ಹೇಳಿಕೊಂಡಿರುವ ಶ್ರೀನಿಧಿ, ನಿಮ್ಮ ರೋಲ್ ಏನು ಎಂದರೆ, ಅದನ್ನೆಲ್ಲ ಹೇಳಂಗಿಲ್ಲ. ನನ್ನ ಪಾತ್ರದ ವಿವರಣೆ ನೀಡಿದರೆ, ಕಥೆ ಗೊತ್ತಾಗಿಬಿಡುತ್ತೆ ಎನ್ನುತ್ತಾರೆ. ಸೀಕ್ರೆಟ್..ಸೀಕ್ರೆಟ್..ಸೀಕ್ರೆಟ್.

    ಕಾಲೇಜು ದಿನಗಳಿಂದ ಯಶ್ ಅವರ ಸಿನಿಮಾ ನೋಡುತ್ತಿದ್ದ ಶ್ರೀನಿಧಿಗೆ ಅವರಿಗೇ ಹೀರೋಯಿನ್ ಆಗುತ್ತೇನೆ ಎಂಬ ಕಲ್ಪನೆಯೂ ಇರಲಿಲ್ಲ. ನಟನೆಯ ಗಾಳಿಗಂಧ ಗೊತ್ತಿಲ್ಲದ ಶ್ರೀನಿಧಿಗೆ ಸೆಟ್‍ನಲ್ಲಿ ಆ್ಯಕ್ಟಿಂಗ್ ಹೇಳಿಕೊಟ್ಟಿದ್ದು ಸ್ವತಃ ಯಶ್. ಯಶ್ ಅವರಿಲ್ಲದೆ ಹೋಗಿದ್ದರೆ, ನಾನು ಸಿನಿಮಾದಲ್ಲಿ ಅಭಿನಯಿಸಲು ಸಾಧ್ಯವೇ ಆಗುತ್ತಿರಲಿಲ್ಲ ಎಂದಿದ್ದಾರೆ ಶ್ರೀನಿಧಿ.

    ಮಿಸ್ ಸುಪ್ರಾ ನ್ಯಾಷನಲ್ ಆಗಿ ಆಯ್ಕೆಯಾಗಿದ್ದ ಶ್ರೀನಿಧಿ ಶೆಟ್ಟಿಗೆ ಆ್ಯಕ್ಟಿಂಗ್ ಕ್ಲಾಸ್‍ಗೆ ಹೋಗುವ ಆಸೆಯಿತ್ತು. ಆದರೆ, ಸಮಯವೇ ಸಿಗಲಿಲ್ಲ. ಈ ಸಿನಿಮಾ ಮುಗಿದ ಮೇಲೆ ಬಿಡುವು ಮಾಡಿಕೊಂಡು ಕಲಿಯುತ್ತೇನೆ ಎಂದಿದ್ದಾರೆ ಶ್ರೀನಿಧಿ.