ಕೆಜಿಎಫ್, ಕನ್ನಡ ಚಿತ್ರರಂಗದಲ್ಲಿ ಹೊಸ ಹೊಸ ದಾಖಲೆ ಬರೆಯುತ್ತಿದೆಯಷ್ಟೇ ಅಲ್ಲ, ಕನ್ನಡಕ್ಕೆ ಹೊಸ ಮಾರುಕಟ್ಟೆಯನ್ನೂ ಸೃಷ್ಟಿಸಿಕೊಟ್ಟಿದೆ. ಈ ಹಿಂದೆ ಕನ್ನಡ ಚಿತ್ರಗಳು ಎಂಟ್ರಿಯನ್ನೇ ಕೊಡದಿದ್ದ ಪ್ರದೇಶದಲ್ಲೂ ಕೆಜಿಎಫ್‍ನಿಂದಾಗಿ ಡಿಮ್ಯಾಂಡ್ ಸೃಷ್ಟಿಯಾಗಿದೆ.
ಯೂರೋಪ್ ಹಾಗೂ ಅಮೆರಿಕದ ಕೆಲವೆಡೆ ಕನ್ನಡ ಚಿತ್ರಗಳು ಪ್ರದರ್ಶನವಾಗುವುದು ಹೊಸದೇನಲ್ಲ. ಆದರೆ ಕೆಜಿಎಫ್‍ನಿಂದಾಗಿ ದಕ್ಷಿಣ ಯೂರೋಪ್‍ನ ಲಾಟ್ವಿಯಾ, ಲಿಥೇನಿಯಾ, ಉಕ್ರೇನ್‍ಗಳಲ್ಲಿಯೂ ಕೆಜಿಎಫ್ ಧ್ವಜ ಹಾರಿಸಲು ಸಿದ್ಧವಾಗಿದೆ. ರಷ್ಯಾದ ಕೆಲವು ನಗರಗಳಿಂದಲೂ ಕೆಜಿಎಫ್‍ಗಾಗಿ ಬೇಡಿಕೆ ಬಂದಿದೆಯಂತೆ.
ಸ್ವೀಡನ್, ನಾರ್ವೆ, ಲುಕ್ಸೆಂಬರ್ಗ್, ಫಿನ್‍ಲ್ಯಾಂಡ್, ಡೆನ್ಮಾರ್ಕ್, ಮಾಲ್ಟಾ, ಸೈಪ್ರಸ್, ಆಫ್ರಿಕನ್ ದೇಶಗಳು, ಇಸ್ರೇಲ್, ಹಾಂಗ್‍ಕಾಂಗ್.. ಹೀಗೆ ಕನ್ನಡ ಚಿತ್ರಗಳು ಇದುವರೆಗೆ ಪ್ರದರ್ಶನವನ್ನೇ ಕಂಡಿರದ ದೇಶಗಳಲ್ಲಿ, ನಗರಗಳಲ್ಲಿ ಕೆಜಿಎಫ್ ರಿಲೀಸ್ ಆಗಲಿದೆ.