` kgf, - chitraloka.com | Kannada Movie News, Reviews | Image

kgf,

  • ಯಶ್ ಸೃಷ್ಟಿಸಿದ ಹೊಸ ಇತಿಹಾಸ

    yash writes new record in amazon prime

    ಕೆಜಿಎಫ್ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆದಿರುವ ರಾಕಿಂಗ್ ಸ್ಟಾರ್ ಯಶ್, ಈಗ ಮತ್ತೊಂದು ದಾಖಲೆ ಬರೆದಿದ್ದಾರೆ. ಇದು ಚಿತ್ರಮಂದಿರ ಅಥವಾ ಕಿರುತೆರೆಯಲ್ಲಿ ಅಲ್ಲ. ಅಮೇಜಾನ್ ಪ್ರೆöÊಂನಲ್ಲಿ.

    ಈ ವರ್ಷ ಅಮೇಜಾನ್ ಪ್ರೆöÊಂನಲ್ಲಿ ಅತೀ ಹೆಚ್ಚು ಜನರು ವೀಕ್ಷಿಸಿರುವ ಸಿನಿಮಾ ಕೆಜಿಎಫ್. ಹೌದು, ಎಲ್ಲ ಭಾಷೆಯ ಚಿತ್ರಗಳನ್ನೂ ರಿಲೀಸ್ ಮಾಡುವ ಅಮೇಜಾನ್ ಪ್ರೆöÊಂನಲ್ಲಿ ಈ ವರ್ಷದ ಸೂಪರ್ ಹಿಟ್ ನಂ.1 ಸಿನಿಮಾ ಕೆಜಿಎಫ್. ಎಲ್ಲ ಭಾಷೆಗಳನ್ನೂ ಹಿಂದಿಕ್ಕಿ ಕನ್ನಡದ ಕೆಜಿಎಫ್ ದಾಖಲೆ ಸೃಷ್ಟಿಸಿದೆ.

    ಪ್ರಶಾಂತ್ ನೀಲ್ ನಿರ್ದೇಶನದ, ವಿಜಯ್ ಕಿರಗಂದೂರು ನಿರ್ಮಿಸಿದ್ದ ಕೆಜಿಎಫ್, ಬಾಕ್ಸಾಫೀಸಿನಲ್ಲಿ ಹೊಸ ಇತಿಹಾಸ ಸೃಷ್ಟಿಸಿತ್ತು. ಈಗ ಡಿಜಿಟಲ್ ಸ್ಟೇಜ್‌ನಲ್ಲೂ ದಾಖಲೆ ಬರೆದಿದೆ. ಸಿನಿಮಾ ರಿಲೀಸ್ ಆದ 50 ದಿನಗಳ ನಂತರ ಅಮೇಜಾನ್ ಪ್ರೆöÊಂನಲ್ಲಿ ರಿಲೀಸ್ ಆಗಿತ್ತು ಕೆಜಿಎಫ್.

  • ಯಶ್, ಅಪ್ಪು ಸಿನಿಮಾಗೆ ಕಿಚ್ಚನ ಪಟಾಕಿ

    sudeep wishes good luck to kgf and natasarvabhouma

    ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ ನಟಸಾರ್ವಭೌಮ, ಜನವರಿಯಲ್ಲಿ ತೆರೆಗೆ ಬರುವ ನಿರೀಕ್ಷೆ ಇದೆ. ವರ್ಷದ ಕೊನೆಯಲ್ಲಿ ಯಶ್ ಅಭಿನಯದ ಕೆಜಿಎಫ್ ಬರಲಿದೆ. ಸ್ಸೋ.. ಬೆಳ್ಳಿತೆರೆಯ ಮೇಲೆ ವರ್ಷವಿಡೀ ದೀಪಾವಳಿ ಎಂಬರ್ಥದಲ್ಲಿ ಸುದೀಪ್ ಟ್ವೀಟ್ ಮಾಡಿದ್ದರು.

    ಅಂದಹಾಗೆ ಆಯುಧಪೂಜೆಯಲ್ಲಿ ಶುರುವಾದ ಚಿತ್ರರಂಗದ ಹಬ್ಬ.. ದೀಪಾವಳಿ ನಂತರವೂ ಸದ್ದು ಮಾಡುತ್ತಲೇ ಇದೆ. ದಿ ವಿಲನ್ ಸಿನಿಮಾದಿಂದ ಶುರುವಾದ ಸ್ಟಾರ್ ಸಿನಿಮಾಗಳ ಕ್ರೇಜ್ ಹಾಗೆಯೇ ಮುಂದುವರಿಯುತ್ತಿದೆ. ಸುದೀಪ್ ಹಾರೈಕೆ ನಿಜವಾಗಿ ರಿಲೀಸ್ ಆದ ಸಿನಿಮಾಗಳೆಲ್ಲವೂ ಸಕ್ಸಸ್ ಕಾಣಲಿ.

    ಅಂದಹಾಗೆ ನಟಸಾರ್ವಭೌಮ ಚಿತ್ರದ ಡಬ್ಬಿಂಗ್ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಬಿರುಸಾಗಿ ನಡೆಯುತ್ತಿವೆ. 

    ರಾಕ್‍ಲೈನ್ ವೆಂಕಟೇಶ್ ನಿರ್ಮಾಣದ ಚಿತ್ರಕ್ಕೆ ಪವನ್ ಒಡೆಯರ್ ನಿರ್ದೇಶಕ. ರಚಿತಾ ರಾಮ್, ಅನುಪಮಾ ಪರಮೇಶ್ವರನ್ ನಾಯಕಿಯರು. ಬಿ.ಸರೋಜಾದೇವಿ ಹಲವು ವರ್ಷಗಳ ನಂತರ ನಟಿಸಿರುವ ಸಿನಿಮಾ ನಟಸಾರ್ವಭೌಮ.

  • ರಜನಿಕಾಂತ್ 2.0 ಜೊತೆ ಕೆಜಿಎಫ್

    kgf shows in rajinikant's 2.0 movie shows

    ರಜನಿಕಾಂತ್-ಅಕ್ಷಯ್‍ಕುಮಾರ್-ಶಂಕರ್ ಕಾಂಬಿನೇಷನ್‍ನ 2.0 ಸಿನಿಮಾ, ಜಗತ್ತಿನ 10 ಸಾವಿರಕ್ಕೂ ಹೆಚ್ಚು ಸ್ಕ್ರೀನ್‍ಗಳಲ್ಲಿ ರಿಲೀಸ್ ಆಗಿ ಸದ್ದು ಮಾಡುತ್ತಿದೆ. ಇದರ ಜೊತೆಯಲ್ಲೇ ಕೆಜಿಎಫ್ ಕೂಡಾ ಸದ್ದು ಮಾಡುತ್ತಿದೆ.

    ಡಿಸೆಂಬರ್ ಅಂತ್ಯದ ಭಾರತದ ಬಹುನಿರೀಕ್ಷಿತ ಚಿತ್ರಗಳಲ್ಲೊಂದಾದ ಕೆಜಿಎಫ್ ಟ್ರೇಲರ್‍ನ್ನು ವಿದೇಶದ ಎಲ್ಲ 2.0 ಸ್ಕ್ರೀನ್‍ಗಳಲ್ಲಿ ಪ್ರದರ್ಶನ ಮಾಡಲಾಗಿದೆ. 2.0 ಕೂಡಾ ಹಲವು ಭಾಷೆಗಳಲ್ಲಿ ನಿರ್ಮಾಣವಾಗಿರುವ ಚಿತ್ರ. ಹೀಗಾಗಿ ವಿದೇಶದಲ್ಲಿ ತೆಲುಗು ಸ್ಕ್ರೀನ್‍ನಲ್ಲಿ ತೆಲುಗು ಕೆಜಿಎಫ್, ತಮಿಳಿ 2.0ನಲ್ಲಿ ತಮಿಳು ಕೆಜಿಎಫ್, ಹಿಂದಿ 2.0ನಲ್ಲಿ ಹಿಂದಿ ಕೆಜಿಎಫ್ ಹಾಗೂ ಮಲಯಾಳಂ 2.0 ಪ್ರದರ್ಶನದಲ್ಲಿ ಮಲಯಾಳಂ ಕೆಜಿಎಫ್‍ನ ಟ್ರೇಲರ್ ಪ್ರದರ್ಶನ ಮಾಡಲಾಗಿದೆ.

  • ರವೀನಾ ಟಂಡನ್ ಪತಿಯಿಂದ ಕೆಜಿಎಫ್ ಹಿಂದಿ ರಿಲೀಸ್

    anil thadani with yash and kgf team

    ರಾಕಿಂಗ್ ಸ್ಟಾರ್ ಯಶ್, ವಿಜಯ್ ಕಿರಗಂದೂರು ಅವರ ಹೊಂಬಾಳೆ ಪ್ರೊಡಕ್ಷನ್, ಉಗ್ರಂ ಖ್ಯಾತಿಯ ಪ್ರಶಾಂತ್ ನೀಲ್ ಕಾಂಬಿನೇಷನ್‍ನ ಬಹುನಿರೀಕ್ಷಿತ ಸಿನಿಮಾ ಕೆಜಿಎಫ್. ನವೆಂಬರ್ 16ಕ್ಕೆ ಸಿನಿಮಾ ರಿಲೀಸ್ ಆಗಲಿದೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿಯಲ್ಲಿ ಏಕಕಾಲಕ್ಕೆ ಸಿನಿಮಾ ರಿಲೀಸ್ ಆಗುತ್ತಿದ್ದು, ಹಿಂದಿ ಕೆಜಿಎಫ್ ವಿತರಣೆಯ ಹಕ್ಕನ್ನು ಅನಿಲ್ ತಡಾನಿ ಖರೀದಿಸಿದ್ದಾರೆ. 

    ಅನಿಲ್ ತಡಾನಿ, ಕನ್ನಡದಲ್ಲಿ ಮಸ್ತ್ ಮಸ್ತ್ ಹುಡುಗಿಯಾಗಿ ನಟಿಸಿದ್ದ ಉಪೇಂದ್ರ ಚಿತ್ರದಿಂದ ಚಿರಪರಿಚಿತೆಯಾಗಿರುವ ರವೀನಾ ಟಂಡನ್‍ರ ಪತಿ. ಬಾಲಿವುಡ್‍ನಲ್ಲಿ ಸ್ಟಾರ್ ವಿತರಕ. ವಿಜಯ್ ದೇವರಕೊಂಡ ಹಾಗೂ ಕಾರ್ತಿಕ್ ಗೌಡ, ಅನಿಲ್ ತಡಾನಿ ಜೊತೆ ಮಾತುಕತೆ ನಡೆಸಿದ್ದಾರೆ. ಅನಿಲ್ ತಡಾನಿ ವಿತರಣೆ ಮಾಡುತ್ತಿರುವುದರಿಂದ ಹಿಂದಿಯಲ್ಲಿ ಬಹುದೊಡ್ಡ ಓಪನಿಂಗ್ ಸಿಗಲಿದೆ ಎಂಬ ನಿರೀಕ್ಷೆ ಗರಿಗೆದರಿದೆ.

  • ರಾಕಿಂಗ್ ಸ್ಟಾರ್ ಗೆ ಸಿಕ್ತು ರಿಯಲ್ ಸ್ಟಾರ್ ಶಹಬ್ಬಾಸ್‍ಗಿರಿ

    upendra appreciates yash's dediction

    ರಿಯಲ್ ಸ್ಟಾರ್ ಉಪೇಂದ್ರ, ತಮಗೆ ಇಷ್ಟವಾಗಿದ್ದನ್ನು ಹೇಳೋಕೆ, ಹಿಂದೆ ಮುಂದೆ ನೋಡುವವರಲ್ಲ. ಈಗ ಉಪೇಂದ್ರ, ರಾಕಿಂಗ್ ಸ್ಟಾರ್ ಯಶ್ ಬಗ್ಗೆ ಒಂದು ಟ್ವೀಟ್ ಮಾಡಿದ್ದಾರೆ. ಉಪೇಂದ್ರ ಅವರಿಗೆ ಬಹಳ ಇಷ್ಟವಾಗಿರೋದು ಯಶ್ ಅವರ ಡೆಡಿಕೇಷನ್.

    ಕೆಜಿಎಫ್ ಸಿನಿಮಾಗಾಗಿ 2 ವರ್ಷ ಮೀಸಲಿಟ್ಟಿರುವ ಯಶ್ ಅವರ ಈ ಡೆಡಿಕೇಷನ್ ಅಮೋಘ. ಒಂದು ಸಿನಿಮಾಗಾಗಿ ನೀವು ಮಾಡಿರುವ ಈ ಸಮರ್ಪಣಾಮನೋಭಾವದಿಂದ ಕಲಿಯುವುದು ತುಂಬಾ ಇದೆ ಎಂದು ಹೊಗಳಿದ್ದಾರೆ ಉಪೇಂರ್ಧಋ>

    ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್, ಎರಡು ಭಾಗಗಳಲ್ಲಿ ತೆರೆಗೆ ಬರುತ್ತಿದ್ದು, ಮೊದಲನೇ ಭಾಗ ಈ ವರ್ಷ ಬಿಡುಗಡೆಯಾಗಲಿದೆ. ಹೊಂಬಾಳೆ ಬ್ಯಾನರ್‍ನ ಚಿತ್ರದ ಬಗ್ಗೆ ಭಾರಿ ನಿರೀಕ್ಷೆಗಳಿವೆ.

    ಉಪ್ಪಿ ಟ್ವೀಟ್‍ಗೆ ಪ್ರತಿಕ್ರಿಯೆ ನೀಡಿರುವ ಯಶ್, ನಿಮ್ಮ ಹೊಗಳಿಕೆಗೆ ನಾನು ಅಭಾರಿ. ನೀವು ನನಗೆ ಸದಾ ಸ್ಫೂರ್ತಿ. ನಮಗೆ ಇದೇ ರೀತಿ ಪ್ರೇರಣೆ ನೀಡುತ್ತಿರಿ ಎಂದು ಧನ್ಯವಾದ ಅರ್ಪಿಸಿದ್ದಾರೆ.

  • ರಾಕಿಭಾಯ್ ಆಗೋಕೆ ನಾಲ್ವರನ್ನ ಕೊಂದ ಕಿರಾತಕ

    ರಾಕಿಭಾಯ್ ಆಗೋಕೆ ನಾಲ್ವರನ್ನ ಕೊಂದ ಕಿರಾತಕ

    ಕೆಜಿಎಫ್ ಸಿನಿಮಾ ಹಲವರಿಗೆ ಹಲವು ರೀತಿಯಲ್ಲಿ ಸ್ಫೂರ್ತಿ ನೀಡಿದೆ. ಚಿತ್ರರಂಗದವರಿಗೆ ಕೆಜಿಎಫ್ ಒಂದು ಮೈಲಿಗಲ್ಲು. ಕನ್ನಡ ಸಿನಿಮಾವನ್ನೂ ಗ್ಲೋಬಲ್ ಲೆವೆಲ್ಲಿಗೆ ತೆಗೆದುಕೊಂಡು ಹೋಗಬಹುದು ಎಂಬ ಸ್ಫೂರ್ತಿ ನೀಡಿದ ಸಿನಿಮಾ. ಹೀಗಾಗಿ ಅದು ಕೇವಲ ಕನ್ನಡದಲ್ಲಷ್ಟೇ ಅಲ್ಲ ಬೇರೆ ಭಾಷೆಯವರಿಗೂ ಸ್ಫೂರ್ತಿ ತುಂಬುತ್ತಿದೆ. ಚಿತ್ರದಲ್ಲಿನ ತಾಯಿ-ಮಗನ ಸೆಂಟಿಮೆಂಟ್ ಇನ್ನಷ್ಟು ಮಂದಿಗೆ ಸ್ಫೂರ್ತಿ ನೀಡುತ್ತಿದೆ. ಆದರೆ ಮಧ್ಯಪ್ರದೇಶದಲ್ಲೊಬ್ಬನಿಗೆ ಕೆಜಿಎಫ್‍ನ ರಾಕಿಭಾಯ್ ಕೆಟ್ಟ ರೀತಿಯಲ್ಲಿ ಸ್ಫೂರ್ತಿಯಾಗಿದ್ದಾನೆ.

    ಮಧ್ಯಪ್ರದೇಶದಲ್ಲಿ ಶಿವಪ್ರಸಾದ್ ದುವೆ ಎಂಬ ಯುವಕ ಐವರನ್ನು ಕೊಂದು ಹಾಕಿದ್ದಾನೆ. ಅವರಲ್ಲಿ ನಾಲ್ವರು ಸೆಕ್ಯುರಿಟಿ ಗಾರ್ಡುಗಳು. ಕೊಲೆ ಮಾಡಿದವನೊಬ್ಬನ ಮೊಬೈಲ್ ಕದ್ದುಕೊಂಡು ಹೋಗಿದ್ದ ಶಿವ ಪ್ರಸಾದ್ ಆ ಮೊಬೈಲಿನಿಂದಲೇ ಸಿಕ್ಕು ಬಿದ್ದಿದ್ದಾನೆ. ಏಕಯ್ಯಾ ಕೊಂದೆ ಎಂದರೆ ನಾನೂ ರಾಕಿಭಾಯ್ ಹಾಗೆ ಫೇಮಸ್ ಆಗಬೇಕು ಎಂದು ಪೊಲೀಸರ ಎದುರು ಹೇಳಿಕೆ ಕೊಟ್ಟಿದ್ದಾನಂತೆ. ಅಂದಹಾಗೆ ಅವನಿಗಿನ್ನೂ 19 ವರ್ಷ.

    ಈ ಸೀರಿಯಲ್ ಕಿಲ್ಲರ್ ಎಲ್ಲರನ್ನೂ ಕೊಂದಿರುವುದು ಒಂದೇ ರೀತಿ. ರಸ್ತೆ ಬದಿ ಮಲಗಿರುತ್ತಿದ್ದವರ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲ್ಲುವುದು. ಒಂದು ರೀತಿ ಸೈಕೋ. ಇವನಿಗೆ ಆಗಲೇ ಅಲ್ಲಿನ ಮೀಡಿಯಾಗಳು ಸ್ಟೋನ್ ಕಿಲ್ಲರ್ ಎಂದು ಕರೆಯುತ್ತಿದ್ದವು. ಇವನು ಕೆಜಿಎಫ್ ಚಿತ್ರವನ್ನು ಲೆಕ್ಕವಿಲ್ಲದಷ್ಟು ಸಾರಿ ನೋಡಿದ್ದನಂತೆ.

  • ರಾಕಿಭಾಯ್ ಲುಕ್ ಸೃಷ್ಟಿಸಿದ ಥಂಡರ್

    yash's beardo look creates thunder

    sಸೆ.16ರಂದು ಕಾಯುತ್ತಿರಿ, ಥಂಡರ್ ಬರಲಿದೆ. ಇದು ಜಾಹಿರಾತಿನ ಪ್ರೋಮೋ ವಿಡಿಯೋ. ಹಾಲಿವುಡ್ ಸ್ಟೈಲ್ ಲುಕ್‍ನಲ್ಲಿ ಥೇಟು ಬಿರುಗಾಳಿಯಂತೆಯೇ ಕಾಣುತ್ತಿರೋ ಯಶ್ ಹವಾ ಎಬ್ಬಿಸಿಬಿಟ್ಟಿದ್ದಾರೆ.

    ಸೆ.16ರಂದು ಉದ್ಭವವಾಗುವ ಬಿರುಗಾಳಿ ಏನು..? ಬಿಯೋರ್ಡ್ ಥಂಡರ್ ಅಂದ್ರೆ ಏನು..? ಉತ್ತರ ಗೊತ್ತಿಲ್ಲ. ಹುಳವನ್ನಂತೂ ಬಿಟ್ಟಾಗಿದೆ. ಇಷ್ಟಕ್ಕೂ ಈ ಸ್ಟೇಟಸ್‍ನ ಮರ್ಮವೇ ಅದು. ಕುತೂಹಲ ಹೆಚ್ಚಿಸುವುದು.

  • ರಾಖಿ ಭಾಯ್ ಬೈಕ್ ಬಿಡಲ್ಲ..!

    rocky bhai fida over bike

    ಕೆಜಿಎಫ್ ಚಿತ್ರದಲ್ಲಿ ಎಲ್ಲರ ಗಮನ ಸೆಳೆಯುತ್ತಿರುವುದು ಮ್ಯೂಸಿಕ್, ಸೌಂಡ್, ಡೈಲಾಗ್ಸ್, ಕ್ಯಾಮೆರಾ ಟೇಕಿಂಗ್ಸ್.. ಈ ಎಲ್ಲದರ ನಡುವೆ ಯುವಕರ ಕಣ್ಣು ಕುಕ್ಕುತ್ತಿರೋದು ರಾಖಿ ಭಾಯ್ ಬೈಕ್. 

    ಮೊದಲೇ 70-80ರ ದಶಕದ ಕಥೆ. ಹೀಗಾಗಿ ಆಗಿನ ಕಾಲದ ಬೈಕ್‍ನ್ನೇ ಬಳಸಿಕೊಳ್ಳೋ ಪ್ಲಾನ್ ನಿರ್ದೇಶಕ ಪ್ರಶಾಂತ್ ನೀಲ್ ಅವರಿಗೆ ಇತ್ತು. ಆದರೆ, ಮೈಲೇಜ್, ಕೆಪ್ಯಾಸಿಟಿ ಪ್ರಾಬ್ಲಂಗಳಿಂದಾಗಿ ಹೊಸ ರಾಯಲ್ ಎನ್‍ಫೀಲ್ಡ್ ಹಿಮಾಲಯನ್ ಗಾಡಿಯನ್ನೇ ಹಳೆಯ ರೂಪಕ್ಕೆ ಬದಲಿಸಲಾಯಿತು. ನಾವು ಟ್ರೇಲರ್‍ನಲ್ಲಿ ನೋಡ್ತಿರೋದು ಅದೇ ಬೈಕ್.

    ಆ ಬೈಕ್ ಮೇಲೆ ಯಶ್‍ಗೆ ಲವ್ವಾಗಿ ಬಿಟ್ಟಿದೆ. ಕೆಜಿಎಫ್ ಚಾಪ್ಟರ್ 2 ಶೂಟಿಂಗ್ ಮುಗಿದ ಮೇಲೆ ಆ ಬೈಕ್‍ನ್ನು ಸ್ವಂತಕ್ಕೆ ತೆಗೆದುಕೊಳ್ಳೋ ಪ್ಲಾನ್ ಹಾಕಿಕೊಂಡಿದ್ದಾರಂತೆ ಯಶ್. 

  • ರಾಜ್ಯೋತ್ಸವಕ್ಕೆ ಕೆಜಿಎಫ್ ಮತ್ತೆ ರಿಲೀಸ್

    kgf rajyotsava special

    ಕೆಜಿಎಫ್ ಚಾಪ್ಟರ್ 1 ಸಿನಿಮಾ ಇದೇ ರಾಜ್ಯೋತ್ಸವಕ್ಕೆ ಮತ್ತೆ ಬಿಡುಗಡೆಯಾಗುತ್ತಿದೆ. 25 ರಿಂದ 30 ಸ್ಕ್ರೀನ್‍ಗಳಲ್ಲಿ ಕೆಜಿಎಫ್ ಬಿಡುಗಡೆಯಾಗುತ್ತಿದ್ದು, ಇದು ರಾಜ್ಯೋತ್ಸವ ಸ್ಪೆಷಲ್. ಊರ್ವಶಿ, ಕಾವೇರಿ ಸೇರಿದಂತೆ ಕೆಲವು ಮಲ್ಟಿಪ್ಲೆಕ್ಸ್‍ಗಳಲ್ಲೂ ಕೆಜಿಎಫ್ ಮತ್ತೆ ತೆರೆ ಕಾಣುತ್ತಿದೆ.

    ಯಶ್, ಶ್ರೀನಿಧಿ ಶೆಟ್ಟಿ ಅಭಿನಯದ ಕೆಜಿಎಫ್ ಚಾಪ್ಟರ್ 1, ಪ್ರಶಾಂತ್ ನೀಲ್ ಅವರ ನಿರ್ದೇಶನದಲ್ಲಿ ತೆರೆ ಕಂಡಿತ್ತು. ಚಾಪ್ಟರ್ 2 ಚಿತ್ರೀಕರಣ ಬಿರುಸಿನಿಂದ ಸಾಗಿದ್ದು, ಮುಂದಿನ ವರ್ಷ ರಿಲೀಸ್ ಆಗಲಿದೆ.

  • ರಾಷ್ಟ್ರೀಯ ಪ್ರಶಸ್ತಿ 66 : ಕನ್ನಡದ ದಾಖಲೆ 13

    sandalwood bags record 13 national film awards

    ಕೆಜಿಎಫ್ ಚಿತ್ರಕ್ಕೆ 2 ಪ್ರಶಸ್ತಿ ಸಂದಿವೆ. ಸಾಹಸ ನಿರ್ದೇಶನಕ್ಕೆ ಹಾಗೂ ಸ್ಪೆಷಲ್ ಎಫೆಕ್ಟ್ ವಿಭಾಗದಲ್ಲಿ ಪ್ರಶಸ್ತಿ ಸಿಕ್ಕಿದೆ. ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ ಚಿತ್ರಕ್ಕೆ ಅತ್ಯುತ್ತಮ ಮಕ್ಕಳ ಚಿತ್ರ ಸ್ವರ್ಣಕಮಲ ಲಭಿಸಿದೆ.

    ನಾತಿಚರಾಮಿ ಚಿತ್ರಕ್ಕೆ ಅತ್ಯುತ್ತಮ ಪ್ರಾದೇಶಿಕ ಚಿತ್ರ, ಸಂಕಲನ, ಸಾಹಿತ್ಯ, ಹಿನ್ನೆಲೆ ಗಾಯಕಿ ಹಾಗೂ ನಟಿ ಶ್ರುತಿ ಹರಿಹರನ್‍ಗೆ ವಿಶೇಷ ಉಲ್ಲೇಖ ಪ್ರಮಾಣ ಪತ್ರ ಸಿಕ್ಕಿದೆ. ಒಂದಲ್ಲ ಎರಡಲ್ಲಾ ಚಿತ್ರಕ್ಕೆ ನರ್ಗಿಸ್ ದತ್ ರಾಷ್ಟ್ರೀಯ ಭಾವೈಕ್ಯತಾ ಚಿತ್ರ ಪ್ರಶಸ್ತಿ ಹಾಗೂ ಪಿ.ವಿ.ರೋಹಿತ್‍ಗೆ ಅತ್ಯುತ್ತಮ ಬಾಲನಟ ಪ್ರಶಸ್ತಿ

    ಮೂಕಜ್ಜಿಯ ಕನಸುಗಳು ಚಿತ್ರ, ರಾಷ್ಟ್ರೀಯ ಆರ್ಕೈವ್‍ಗೆ, ಅಗ್ರ್ಯಾನಿಕ್ ಸೇಜ್ ಆಫ್ ಇಂಡಿಯಾ ಸರಳ ವಿರಳಕ್ಕೆ ಅತ್ಯುತ್ತಮ ಶೈಕ್ಷಣಿಕ ಸಿನಿಮಾ (ಚಲನಚಿತ್ರೇತರ ವಿಭಾಗ)ಪ್ರಶಸ್ತಿ ಸಂದಿವೆ. ಇದು ಕನ್ನಡದ ಮಟ್ಟಿಗಂತೂ ಅತ್ಯದ್ಭುತ ದಾಖಲೆ. ಇಷ್ಟೊಂದು ಪ್ರಶಸ್ತಿಗಳನ್ನು ಇದುವರೆಗೆ ಕನ್ನಡ ಚಿತ್ರರಂಗ ಪಡೆದೇ ಇರಲಿಲ್ಲ. 

    ಎಲ್ಲ ಪ್ರಶಸ್ತಿ ವಿಜೇತರಿಗೆ ಫಿಲಂ ಚೇಂಬರ್ ಅಧ್ಯಕ್ಷ ಜೈರಾಜ್ ಅಭಿನಂದನೆ ಸಲ್ಲಿಸಿದ್ದಾರೆ.

  • ವಸಿಷ್ಠ ಸಿಂಹ ಹುಡುಗಿ ಮೇಲೆ ಯಶ್ ಕಣ್ಣು..!

    funny co incidnce between yash and vashistha in kgf

    ವಸಿಷ್ಠ ಸಿಂಹ, ಈಗ ಕನ್ನಡದ ಸ್ಟಾರ್ ವಿಲನ್ ಎಂದರೆ ತಪ್ಪಾಗಲಿಕ್ಕಿಲ್ಲ. ಕೆಜಿಎಫ್‍ನಲ್ಲೂ ಅದು ಪ್ರೂವ್ ಆಗಿದೆ. ಆದರೆ, ಅಲ್ಲೊಂದು ತರ್ಲೆ ಇದೆ. ವಸಿಷ್ಠ ಸಿಂಹ ಲವ್ ಮಾಡೋ ಹುಡುಗಿ ಮೇಲೆ ಯಶ್ ಕಣ್ಣು ಹಾಕ್ತಾರೆ. 

    ವಿಶೇಷ.. ವಿಚಿತ್ರ ಏನಂದ್ರೆ, ವಸಿಷ್ಠಗೆ ಹೆಸರು ತಂದುಕೊಟ್ಟ ರಾಜಾಹುಲಿಯಲ್ಲೂ ಅಷ್ಟೆ. ವಸಿಷ್ಠ ಲವ್ ಮಾಡೋ ಹುಡುಗಿಯನ್ನೇ ರಾಜಾಹುಲಿ ಯಶ್ ಮದುವೆಯಾಗೋದು. ಅದು ಕೆಜಿಎಫ್‍ನಲ್ಲೂ ಮುಂದುವರಿದಿದೆ.

    `ನಾನೂ ಯಶ್, ಚೆನ್ನಾಗೇ ಇದ್ದೀವಿ. ಆದರೆ, ನಿರ್ದೇಶಕರು ನಮ್ಮಿಬ್ಬರ ಮಧ್ಯೆ ಹುಡುಗಿಯನ್ನು ಬಿಟ್ಟು ಆಟ ಆಡಿಸ್ತಾರೆ.. ಹಹ್ಹಹ್ಹಹ್ಹಾ.. ' ಎಂದು ಗಹಗಹಿಸುತ್ತಾರೆ ವಸಿಷ್ಠ. 

  • ವಿಲನ್ ಎಫೆಕ್ಟ್.. ಕೆಜಿಎಫ್‍ಗಾಗಿ ಬದಲಾಗುತ್ತಿದೆ ನರ್ತಕಿ

    nartaki theater updates its technology

    ಕೆಜಿಎಫ್ ರಿಲೀಸ್ ವೇಳೆ ನರ್ತಕಿ ಚಿತ್ರಮಂದಿರ ಬದಲಾಗುತ್ತಿದೆ. ಚಿತ್ರಮಂದಿರದಲ್ಲಿ 4ಕೆ ರೆಸಲ್ಯೂಷನ್ ಸ್ಕ್ರೀನ್ ಹಾಕಲಾಗುತ್ತಿದ್ದು, 2ಕೆನಲ್ಲಿ ಸ್ಕ್ರೀನಿಂಗ್ ಆಗಲಿದೆ. ಅಷ್ಟೇ ಅಲ್ಲ, ಚಿತ್ರಮಂದಿರದ ಸೌಂಡಿಂಗ್ ಸಿಸ್ಟಂನ್ನೂ ಆಧುನೀಕರಣ ಮಾಡಲಾಗುತ್ತಿದೆ. 

    ಅದಕ್ಕೆಲ್ಲ ಕಾರಣ ದಿ ವಿಲನ್. ಸಿನಿಮಾ ರಿಲೀಸ್ ಆದ ದಿನ ನರ್ತಕಿ ಚಿತ್ರಮಂದಿರದ ವ್ಯವಸ್ಥೆ ಸರಿಯಿಲ್ಲ ಎಂದು ನಿರ್ದೇಶಕ ಪ್ರೇಮ್, ಕಿಡಿಕಾರಿದ್ದರು. ಚಿತ್ರಮಂದಿರದವರೂ ಸಮರ್ಥನೆ ಕೊಟ್ಟಿದ್ದರು. ಆದರೆ, ಈ ಬಾರಿ ಯಾವುದೇ ಚಾನ್ಸ್ ತೆಗೆದುಕೊಳ್ಳದೆ ಚಿತ್ರಮಂದಿರವನ್ನು ಟೆಕ್ನಿಕಲಿ ಅಪ್‍ಡೇಟ್ ಮಾಡಲಾಗುತ್ತಿದೆ. ಇದಕ್ಕಾಗಿ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿದೆ. ಡಿಸೆಂಬರ್ 21ರಂದು ಕೆಜಿಎಫ್, ನರ್ತಕಿಯಲ್ಲಿ ಬೇರೆಯದ್ದೇ ಅನುಭವ ನೀಡಲಿದೆ.

  • ವೊರಿಜಿನಲ್ ಕೆಜಿಎಫ್ ಕಥೆ ಹೇಳ್ತಾರಂತೆ ಪಾ.ರಂಜಿತ್

    ವೊರಿಜಿನಲ್ ಕೆಜಿಎಫ್ ಕಥೆ ಹೇಳ್ತಾರಂತೆ ಪಾ.ರಂಜಿತ್

    ಪಾ.ರಂಜಿತ್. ತಮಿಳು ಚಿತ್ರರಂಗದಲ್ಲಿ ಈತ ಸೆನ್ಸೇಷನಲ್ ಡೈರೆಕ್ಟರ್. ಹೊಸ ನಿರ್ದೇಶಕರಲ್ಲಿ ರಜನಿಕಾಂತ್ ಅವರಿಗೆ ಅತೀ ಹೆಚ್ಚು ಇಷ್ಟವಾದ ಡೈರೆಕ್ಟರ್. ಹೀಗಾಗಿಯೇ ಪಾ.ರಂಜಿತ್ ರಜನಿಗಾಗಿ ಎರಡು ಸಿನಿಮಾ ನಿರ್ದೇಶಿಸಿದ ಹೆಗ್ಗಳಿಕೆ ಹೊಂದಿದ್ದಾರೆ. ಕಬಾಲಿ ಮತ್ತು ಕಾಲ. ಎರಡೂ ಹಿಟ್ ಸಿನಿಮಾಗಳೇ. ಮದ್ರಾಸ್, ಸಾರ್ಪಟ್ಟಾ ಪರಂಪರಾ.. ಪಾ.ರಂಜಿತ್ ಅವರ ಇತರೆ ಹಿಟ್ ಚಿತ್ರಗಳು. ಈಗ ಕಮಲ್ ಹಾಸನ್ ಹಾಗೂ ವಿಕ್ರಂ ಅವರಿಗಾಗಿ ಸಿನಿಮಾ ಮಾಡುತ್ತಿರುವ ಪಾ.ರಂಜಿತ್ ಅವರ ಹೊಸ ಕನಸು ಕೆಜಿಎಫ್ ಸಿನಿಮಾ.

    ನನಗೆ ಕೆಜಿಎಫ್ ಬಗ್ಗೆ ಕೇಳಿ ಗೊತ್ತಿತ್ತು. ಕುತೂಹಲವೂ ಇತ್ತು. ಕಾರಣ ಅಲ್ಲಿನ ಚಿನ್ನ ಮತ್ತು ಅಲ್ಲಿನ ಜನರು. ಕಬಾಲಿ ಮುಗಿದ ಕೂಡಲೇ ಕೆಜಿಎಫ್ ಬಗ್ಗೆ ಸಿನಿಮಾ ಸ್ಕ್ರಿಪ್ಟ್ ರೆಡಿ ಮಾಡಿದೆ. ಆದರೆ, ಅದನ್ನು ಡ್ರಾಪ್ ಮಾಡಿದೆ. ಏಕೆಂದರೆ ಕೆಜಿಎಫ್ ಬಗ್ಗೆ ಏನನ್ನೂ ತಿಳಿದುಕೊಳ್ಳದೆ ಕಥೆ ಬರೆದಿದ್ದೆ. ನಂತರ ಕೆಜಿಎಫ್ ಬಗ್ಗೆ ತಿಳಿದುಕೊಂಡೆ. ಅದೇ ವೇಳೆ ಕೋಲಾರ್ ತಂಗವಯಲ್ ಪುಸ್ತಕ ಸಿಕ್ಕಿತು. ಅದನ್ನು ಓದುತ್ತಲೇ ಮೈಝುಮ್ ಎನ್ನಿಸಿಬಿಟ್ಟಿತು. ಅಷ್ಟೊತ್ತಿಗೆ ಕೆಜಿಎಫ್ ಬಂತು. ಸಿನಿಮಾ ಚೆನ್ನಾಗಿತ್ತು. ಆದರೆ, ಅದರಲ್ಲಿ ಕೆಜಿಎಫ್ ಕಥೆಯೇ ಇರಲಿಲ್ಲ. ಕೆಜಿಎಫ್ ಹೆಸರಲ್ಲಿ ಬೇರೆ ಕಥೆ ಹೇಳಿದ್ದರು. ಹೀಗಾಗಿ ನಾನು ಕೆಜಿಎಫ್‍ನ ವೊರಿಜಿನಲ್ ಕಥೆ ಸಿನಿಮಾ ಮಾಡುತ್ತೇನೆ. ಅದೊಂದು ರೋಚಕ ಕಥೆ ಎಂದು ಹೇಳಿಕೊಂಡಿದ್ದಾರೆ ಪಾ.ರಂಜಿತ್.

  • ವ್ಹಾವ್.. ಕೆಜಿಎಫ್ ಟ್ರೇಲರ್ ಸಖತ್ತಾಗಿದೆ..

    kgf trailer looks amazing

    ಕೆಜಿಎಪ್ ಟ್ರೇಲರ್ ರಿಲೀಸ್ ಆಯ್ತು. ನಿರೀಕ್ಷೆಯಂತೆಯೇ ಚಿತ್ರದಲ್ಲಿರೊದು ಕೋಲಾರ ಚಿನ್ನದ ಗಣಿಯ ಕಥೆ.  1951ರಿಂದ ಚಿತ್ರದ ಕಥೆ ಶುರುವಾಗುತ್ತೆ. ಆದರೆ, ಚಿತ್ರ ಆರಂಭವಾಗೋದು ಮುಂಬೈನಿಂದ ಅನ್ನೋ ಸುಳಿವು ಕೊಟ್ಟಿದೆ ಚಿತ್ರದ ಟ್ರೇಲರ್. 80ರ ದಶಕವನ್ನು ಪ್ರಶಾಂತ್ ಮತ್ತೊಮ್ಮೆ ಮರುಸೃಷ್ಟಿಸಿದ್ದಾರೆ. ಉಗ್ರಂನಲ್ಲಿ ವಿಭಿನ್ನ ಡೈಲಾಗ್ಗಳ ಹೊಳೆ ಹರಿಸಿದ್ದ ಪ್ರಶಾಂತ್, ಈ ಟ್ರೇಲರ್ನಲ್ಲೂ ಡೈಲಾಗ್ ಹವಾ ಇದೆ ಅನ್ನೊ ಸುಳಿವು ಕೊಟ್ಟಿದ್ದಾರೆ. ಮೇಕಿಂಗ್ ಅಂತೂ ಹಾಲಿವುಡ್ ಚಿತ್ರಗಳನ್ನೂ ನಾಚಿಸುವಂತಿದೆ.

    ಅನಂತ್ನಾಗ್ ಹಿನ್ನೆಲೆ ಧ್ವನಿಯೊಂದಿಗೆ ಶುರುವಾಗುವ ಟ್ರೇಲರ್, ಕೆಲವೇ ಕ್ಷಣಗಳಲ್ಲಿ ಮನಸ್ಸು ಆವರಿಸಿಕೊಳ್ಳುತ್ತಿದೆ. ರವಿ ಬಸ್ರೂರು ಸಂಗೀತ ಕಿವಿಗಳಲ್ಲಿ ಗುಂಯ್ಗುಟ್ಟುತ್ತೆ. ಯಶ್ ಸಣ್ಣ ಸಣ್ಣ ಮೂವ್ಮೆಂಟ್ನಲ್ಲಿಯೇ ಆವರಿಸಿಕೊಂಡುಬಿಡ್ತಾರೆ. ಶ್ರೀನಿಧಿ ಶೆಟ್ಟಿ, ಅನಂತ್ ನಾಗ್, ಮಾಳವಿಕ, ವಸಿಷ್ಟ ಹೀಗೆ ಕಲಾವಿದರ ದೊಡ್ಡ ದಂಡೇ ಚಿತ್ರದಲ್ಲಿದೆ. ತಮನ್ನಾ ಐಟಂ ಸಾಂಗ್ ಚಿತ್ರದ ಹೈಲೈಟ್. 

    ಯಶ್ ಗೆಟಪ್, ಡೈಲಾಗ್ ಡೆಲಿವರಿ ರೋಮಾಂಚನೊಗಳಿಸಿದರೆ, ಕ್ಯಾಮೆರಾ ಕಣ್ಣಿಗೆ ಹಬ್ಬವನ್ನುಂಟು ಮಾಡುವಂತಿದೆ. ಬಾಹುಬಲಿಯನ್ನೂ ಮೀರಿಸಲಿದೆ ಎನ್ನುವ ನಿರೀಕ್ಷೆಯನ್ನು ಟ್ರೇಲರ್ ಇನ್ನಷ್ಟು ಹೆಚ್ಚಿಸಿದೆ. ರಾಜಕುಮಾರನ ಮೂಲಕ ಇತಿಹಾಸ ಸೃಷ್ಟಿಸಿದ ವಿಜಯ್ ಕಿರಗಂದೂರು ಮತ್ತೊಂದು ಇತಿಹಾಸ ಸೃಷ್ಟಿಸಲಿ.

  • ಶಿರಡಿ ಸಾಯಿಬಾಬಾ ಸನ್ನಿಧಿಯಲ್ಲಿ ಯಶ್, ಕೆಜಿಎಫ್

    kgf team visits shiridi sai baba

    ರಾಕಿಂಗ್ ಸ್ಟಾರ್ ಯಶ್, ಕೆಜಿಎಫ್ ಚಿತ್ರತಂಡದ ಜೊತೆ ಶಿರಡಿಯಲ್ಲಿ ಸಾಯಿಬಾಬಾ ದರ್ಶನ ಪಡೆದಿದ್ದಾರೆ. ಸಾಯಿಬಾಬಾರನ್ನು ಪ್ರಾರ್ಥನೆ ಮಾಡುವ ಮೂಲಕ ಕೆಜಿಎಫ್ ಪ್ರಚಾರಕ್ಕೆ ಚಾಲನೆ ನೀಡಿದ್ದಾರೆ. ಸಿನಿಮಾ ರಿಲೀಸ್‍ಗೆ ಈಗ ಕೆಲವು ದಿನಗಳಷ್ಟೇ ಬಾಕಿ ಇವೆ. ಚಿತ್ರದ ಪ್ರಚಾರಕ್ಕೆ, ಬಿಡುಗಡೆಗೆ ಯಾವುದೇ ಅಡೆತಡೆ ಬಾರದಿರಲಿ ಎನ್ನುವುದು ಯಶ್ ಮತ್ತು ಕೆಜಿಎಫ್ ಚಿತ್ರತಂಡದ ಪ್ರಾರ್ಥನೆ.

    ಯಶ್ ಅವರೊಂದಿಗೆ ವಿಜಯ್ ಕಿರಗಂದೂರು ಮತ್ತು ಗೆಳೆಯರು ಶಿರಡಿಗೆ ಹೋಗಿದ್ದರು. ಸಾಯಿಬಾಬಾ ದರ್ಶನ ಪಡೆದು, ನಂತರ ಕೊಲ್ಲಾಪುರಕ್ಕೆ ತೆರಳಿ ಮಹಾಲಕ್ಷ್ಮಿ ದೇವಿಗೂ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನದ ಸಿನಿಮಾ ಡಿಸೆಂಬರ್ 21ಕ್ಕೆ ರಿಲೀಸ್ ಆಗುತ್ತಿದೆ. ಇದರ ಮೊದಲ ಭಾಗವಾಗಿ ನವೆಂಬರ್ 9ರಂದು ಚಿತ್ರದ ಟ್ರೇಲರ್ ರಿಲೀಸ್ ಆಗಲಿದೆ.

  • ಶ್ರೀನಿಧಿ ಶೆಟ್ಟಿ ಕೆಜಿಎಫ್ ಸೀಕ್ವೆಲ್‍ಗೆ ರೆಡಿ

    will recover in 2 weeks says srinidhi shetty

    ಮೊನ್ನೆ ಮೊನ್ನೆ ಒಂದು ಸುದ್ದಿ ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಸಿತ್ತು. ಕೆಜಿಎಫ್ ನಾಯಕಿ ಶ್ರೀನಿಧಿ ಶೆಟ್ಟಿಗೆ ಗಾಯವಾಗಿದೆ. ಮೂಳೆ ಫ್ರಾಕ್ಚರ್ ಆಗಿದೆ. ಹೀಗಾಗಿ ಚಿತ್ರತಂಡದಿಂದ ಶ್ರೀನಿಧಿ ಹೊರಬಿದ್ದಿದ್ದಾರೆ ಅನ್ನೋ ಸುದ್ದಿಯದು. ಮೊದಲ ಚಿತ್ರದಲ್ಲಿಯೇ ದೇಶಾದ್ಯಂತ ಸದ್ದು ಮಾಡಿದ ಚಿತ್ರದ ನಾಯಕಿ ಹೀಗೆ ಸೈಡಿಗೆ ಹೋಗಿಬಿಟ್ಟರಾ ಎಂಬ ಪ್ರಶ್ನೆಗಳಿಗೆಲ್ಲ ಈಗ ಅವರೇ ಉತ್ತರ ಕೊಟ್ಟಿದ್ದಾರೆ.

    ಬ್ಯಾಡ್ಮಿಂಟನ್ ಆಡುವಾಗ ಬಲಗೈ ರಿಸ್ಟ್‍ನಲ್ಲಿ ಲಿಗಮೆಂಟ್ ಇಂಜುರಿ ಆಗಿದೆ. ಸದ್ಯಕ್ಕೆ ರೆಸ್ಟ್‍ನಲ್ಲಿದ್ದೇನೆ. ನೋ ಪ್ರಾಬ್ಲಂ. ಎರಡು ವಾರದಲ್ಲಿ ಕಂಪ್ಲೀಟ್ ಸರಿ ಹೋಗುತ್ತೇನೆ ಎಂದಿದ್ದಾರೆ ಶ್ರೀನಿಧಿ.

    ಕೆಜಿಎಫ್ ಚಾಪ್ಟರ್ 2 ಸಿದ್ಧತೆಗಳು ಜೋರಾಗಿ ನಡೆಯುತ್ತಿದೆ. ಶ್ರೀನಿಧಿ ಡೇಟ್ಸ್ ಇನ್ನೂ ಫಿಕ್ಸ್ ಆಗಿಲ್ಲ. ಸೀಕ್ವೆಲ್‍ನಲ್ಲಿ ಶ್ರೀನಿಧಿ ರೋಲ್ ಹೆಚ್ಚಾಗಿದ್ದು, ಲವ್, ರೊಮ್ಯಾನ್ಸ್ ಎಲ್ಲವೂ ಇದೆಯಂತೆ. ಕೆಜಿಎಫ್ ಚಾಪ್ಟರ್-2 ಮುಗಿಯುವವರೆಗೆ ಬೇರೆ ಸಿನಿಮಾ ಇಲ್ಲ ಎಂದಿದ್ದಾರೆ ಶ್ರೀನಿಧಿ ಶೆಟ್ಟಿ. 

  • ಸರಣ್ ಪಕ್ಕಾ.. ಆದರೆ ರಾಕಿಭಾಯ್ ಜೂನಿಯರ್ ಅಲ್ಲ

    saran shakthi in kgf

    ಕೆಜಿಎಫ್ 2ನಲ್ಲಿ ತಮಿಳು ನಟ  ಸರಣ್ ಶಕ್ತಿ ನಟಿಸುತ್ತಿದ್ದಾರೆ. ಅವರು ರಾಕಿಭಾಯ್ ಅವರ ಹದಿಹರೆಯದ ಹುಡುಗನ ಪಾತ್ರದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ ಎಂದು ಚಿತ್ರಲೋಕ ವರದಿ ಮಾಡಿತ್ತು. ಆದರೆ, ಇದಕ್ಕೆ ಸ್ಪಷ್ಟನೆ ನೀಡಿದ್ದಾರೆ ಕೆಜಿಎಫ್-2 ಸಹನಿರ್ಮಾಪಕರೂ ಆಗಿರುವ ಕಾರ್ತಿಕ್ ಗೌಡ. ಚಿತ್ರಲೋಕದ ವರದಿಯನ್ನೇ ರೀ ಟ್ವೀಟ್ ಮಾಡಿ ಸ್ಪಷ್ಟನೆ ಕೊಟ್ಟಿದ್ದಾರೆ.

    ಸರಣ್ ಶಕ್ತಿ ನಟಿಸುತ್ತಿರುವುದು ನಿಜ. ಆದರೆ, ರಾಕಿಭಾಯ್ ಜೂನಿಯರ್ ಪಾತ್ರದಲ್ಲಿ ಅಲ್ಲ ಎಂದಿದ್ದಾರೆ. ಸರಣ್ ಶಕ್ತಿ ಪಾತ್ರ ಏನು ಎಂಬ ಬಗ್ಗೆ ಸಸ್ಪೆನ್ಸ್ ಹಾಗೆಯೇ ಉಳಿಸಿಕೊಂಡಿದ್ದಾರೆ.

    ಪ್ರಶಾಂತ್ ನೀಲ್ ನಿರ್ದೇಶನ, ಯಶ್ ಹೀರೋಯಿಸಂ, ಸಂಜಯ್ ದತ್, ರವೀನಾ ಟಂಡನ್ ಕಾಂಬಿನೇಷನ್, ವಿಜಯ್ ಕಿರಗಂದೂರು ನಿರ್ಮಾಣ.. ಹೀಗೆ ಭರ್ಜರಿ ಕಾಂಬಿನೇಷನ್ನುಗಳ ಕೆಜಿಎಫ್-2 ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾ.

  • ಸಲಾಂ ರಾಖಿ ಭಾಯ್‍ನಿಂದ 2ನೇ ಟ್ರೇಲರ್ 

    kgf second trailer today

    ಸಲಾಂ ರಾಖಿ ಭಾಯ್ ಹಾಡು ರಿಲೀಸ್ ಮಾಡಿ ಹವಾ ಎಬ್ಬಿಸಿರುವ ಕೆಜಿಎಫ್ ಟೀಂ, ಹಾಡಿನ ಗುಂಗು ಗುಂಯ್ ಅಂತಿರೋವಾಗ್ಲೇ ಇನ್ನೊಂದು ಅಬ್ಬರದ ಸುಳಿವು ಕೊಟ್ಟಿದೆ. ಬೆನ್ನಲ್ಲೇ ಕೆಜಿಎಫ್‍ನ 2ನೇ ಟ್ರೇಲರ್ ರಿಲೀಸ್ ಮಾಡೋದಾಗಿ ಹೇಳಿದೆ.

    ರವಿ ಬಸ್ರೂರು ನಿರ್ದೇಶನದ ಸಲಾಂ ರಾಖಿ ಭಾಯ್ ಹಾಡು ರಾಕಿಂಗ್ ಸ್ಟಾರ್ ಯಶ್

     ಅಭಿಮಾನಿಗಳಿಗಂತೂ ಥ್ರಿಲ್ ಕೊಟ್ಟಿದೆ. ಕೆಲವು ಕನ್ನಡ ಪರ ಸಂಘಟನೆಯವರು ಹಾಡಿನಲ್ಲಿ ಹಿಂದಿಯೇ ತುಂಬಿದೆ ಎಂಬ ಅಪಸ್ವರವನ್ನೂ ಎತ್ತಿದ್ದಾರೆ. ನಾಗೇಂದ್ರ ಪ್ರಸಾದ್ ಸಾಹಿತ್ಯದಲ್ಲಿ ಅಬ್ಬರವಿದೆ. ಈ ಹಾಡಿನ ಅಬ್ಬರ ಜೋರಾಗಿರುವಾಗಲೇ 2ನೇ ಟ್ರೇಲರ್ ರಿಲೀಸ್ ಮಾಡುತ್ತಿದೆ ಚಿತ್ರತಂಡ.

    ನಿರ್ದೇಶಕ ಪ್ರಶಾಂತ್ ನೀಲ್ ಅಪ್ಪಟ ಕಸುಬುದಾರಿಕೆ ಹಾಗೂ ಹೊಂಬಾಳೆ ಬ್ಯಾನರ್‍ನ ಕಮಿಟ್‍ಮೆಂಟ್, ಚಿತ್ರದ ಪ್ರಚಾರದಲ್ಲಿ ಎದ್ದು ಕಾಣುತ್ತಿರುವುದು ವಿಶೇಷ.

  • ಸೆಪ್ಟೆಂಬರ್‍ನಲ್ಲಿ ವಿಲನ್, ಕೆಜಿಎಫ್ ಮುಖಾಮುಖಿ..?

    will the villain and kgf release together?

    ಶಿವರಾಜ್‍ಕುಮಾರ್, ಸುದೀಪ್, ಜೋಗಿ ಪ್ರೇಮ್ ಹಾಗೂ ನಿರ್ಮಾಪಕ ಸಿ.ಆರ್.ಮನೋಹರ್ ಕಾಂಬಿನೇಷನ್ ಸಿನಿಮಾ ದಿ ವಿಲನ್. ಶೂಟಿಂಗ್ ಮುಗಿಸಿ ಸೆನ್ಸಾರ್ ಮೆಟ್ಟಿಲೇರಿದೆ.

    ಯಶ್, ಪ್ರಶಾಂತ್ ನೀಲ್, ವಿಜಯ್ ಕಿರಗಂದೂರು ಕಾಂಬಿನೇಷನ್‍ನ ಕೆಜಿಎಫ್ ಚಿತ್ರ ಕೂಡಾ ಶೂಟಿಂಗ್ ಮುಗಿಸಿ, ಎಡಿಟಿಂಗ್ ಫೈನಲ್ ಸ್ಟೇಜ್‍ನಲ್ಲಿದೆ.

    ಎರಡೂ ಕನ್ನಡದ ಬಹುನಿರೀಕ್ಷಿತ ಚಿತ್ರಗಳು. ಈ ಎರಡೂ ಚಿತ್ರಗಳು ಸೆಪ್ಟೆಂಬರ್‍ನಲ್ಲಿಯೇ ಮುಖಾಮುಖಿಯಾಗುವ ಸಾಧ್ಯತೆ ಇದೆ. ವಿಲನ್ ಚಿತ್ರದ ಆಡಿಯೋ ರಿಲೀಸ್‍ಗೆ ಭರ್ಜರಿ ವೇದಿಕೆ ಸಿದ್ಧವಾಗಿದ್ದು, ಸೆಪ್ಟೆಂಬರ್ ಮೊದಲ ವಾರದಲ್ಲೇ ತೆರೆಗೆ ಬಂದರೆ ಅಚ್ಚರಿಯಿಲ್ಲ. ಕೆಜಿಎಫ್ ಸೆಪ್ಟೆಂಬರ್ ಕೊನೆಯಲ್ಲಿ ರಿಲೀಸ್ ಆಗುವ ಸಾಧ್ಯತೆಯೂ ಇಲ್ಲದಿಲ್ಲ. ಒಟ್ಟಿನಲ್ಲಿ ಸೆಪ್ಟೆಂಬರ್ ನಂತರ ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ಚಿತ್ರಗಳದ್ದೇ ಹಬ್ಬ.

  • ಸೈಮಾ ಅವಾರ್ಡ್ 2019 : ಇವರೇ ದಿ ಬೆಸ್ಟ್...

    kgf steals show at siima

    ಸೈಮಾ ಪ್ರಶಸ್ತಿ ಪ್ರದಾನ ಸಮಾರಂಭ ಮುಕ್ತಾಯವಾಗಿದೆ. ಕತಾರ್‍ನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಚಿತ್ರತಾರೆಯರು ಪ್ರಶಸ್ತಿ ಸ್ವೀಕರಿಸಿ ಸಂಭ್ರಮಿಸಿದ್ದಾರೆ. ಸೈಮಾ ಪ್ರಶಸ್ತಿ ವಿಜೇತರ ಪಟ್ಟಿ ಇಲ್ಲಿದೆ ನೋಡಿ. ಅತೀ ಹೆಚ್ಚು ಪ್ರಶಸ್ತಿ ಪಡೆದಿರುವುದು ಕೆಜಿಎಫ್. ಅಯೋಗ್ಯ 2ನೇ ಸ್ಥಾನದಲ್ಲಿದೆ.

    ಅತ್ಯುತ್ತಮ ನಾಯಕ ನಟ - ಯಶ್: ಕೆಜಿಎಫ್ ಚಾಪ್ಟರ್ 1

    ಅತ್ಯುತ್ತಮ ನಾಯಕ ನಟಿ - ರಚಿತಾ ರಾಮ್ : ಅಯೋಗ್ಯ

    ಅತ್ಯುತ್ತಮ ನಿರ್ದೇಶಕ - ಪ್ರಶಾಂತ್ ನೀಲ್ : ಕೆಜಿಎಫ್ ಚಾಪ್ಟರ್ 1

    ಅತ್ಯುತ್ತಮ ಹೊಸ ನಿರ್ದೇಶಕ - ಮಹೇಶ್ ಕುಮಾರ್ : ಅಯೋಗ್ಯ

    ಅತ್ಯುತ್ತಮ ಹೊಸ ನಟ - ಡ್ಯಾನಿಷ್ ಸೇಠ್ : ಹಂಬಲ್ ಪೊಲಿಟಿಷಿಯನ್ ನೊಗ್ರಾಜ್

    ಅತ್ಯುತ್ತಮ ಹೊಸ ನಟಿ - ಅನುಪಮಾ ಗೌಡ : ಆ ಕರಾಳ ರಾತ್ರಿ

    ಅತ್ಯುತ್ತಮ ಹಾಸ್ಯ ನಟ - ಪ್ರಕಾಶ್ ತುಮಿನಾಡು : ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ

    ಅತ್ಯುತ್ತಮ ಪೋಷಕ ನಟ - ಅಚ್ಯುತ್ ಕುಮಾರ್ 

    ಅತ್ಯುತ್ತಮ ಪೋಷಕ ನಟಿ - ಅರ್ಚನಾ : ಕೆಜಿಎಫ್ ಚಾಪ್ಟರ್ 1

    ಅತ್ಯುತ್ತಮ ಖಳನಟ - ಧನಂಜಯ್ : ಟಗರು

    ವಿಮರ್ಶಕರ ಪ್ರಶಸ್ತಿ- ಮಾನ್ವಿತಾ ಹರೀಶ್ : ಟಗರು

    ಅತ್ಯುತ್ತಮ ಗೀತ ರಚನೆ - ಚೇತನ್ ಕುಮಾರ್ : ಅಯೋಗ್ಯ (ಏನಮ್ಮಿ.. ಏನಮ್ಮಿ..)

    ಅತ್ಯುತ್ತಮ ಗಾಯಕಿ - ಅನನ್ಯಾ ಭಟ್ : ಟಗರು (ಹೋಲ್ಡನ್ ಹೋಲ್ಡಾನ್..)

    ಅತ್ಯುತ್ತಮ ಛಾಯಾಗ್ರಹಣ - ಭುವನ್ ಗೌಡ : ಕೆಜಿಎಫ್ ಚಾಪ್ಟರ್ 1

    ಅತ್ಯುತ್ತಮ ಸಂಗೀತ ನಿರ್ದೇಶನ - ರವಿ ಬಸ್ರೂರ್ : ಕೆಜಿಎಫ್ ಚಾಪ್ಟರ್ 1