` ashok, - chitraloka.com | Kannada Movie News, Reviews | Image

ashok,

 • We Did Not Stop Shooting - Okkutta

  okkutta members image

  The Karnataka Film Workers Union has said that it has not stopped the shooting of any film and has not declared a strike. Earlier, on Monday there was news that the film workers had called for a strike and shooting for films like 'Ranna', 'Mattomme Shhh' and others have been stopped because of the strike.

  However, the Workers Union's secretary Ravindranath has said that the Union has not stopped working and has not stopped the shooting for any films. Ravindranath says he doesn't know why the shooting for 'Ranna', 'Mattomme Shhh' and others have been stopped and the Union doesn't have anything to do with it.

 • ಕಿಚ್ಚ ಸುದೀಪ್ ರಾಜಕೀಯಕ್ಕೆ..? - ಆರ್. ಅಶೋಕ್ ಹೇಳಿಕೆ

  r ashok says on sudeep joining politics

  ನಟ ಸುದೀಪ್ ರಾಜಕೀಯಕ್ಕೆ ಬರ್ತಾರಾ..? ಇತ್ತೀಚೆಗಷ್ಟೇ ಸುದೀಪ್ ನಾನು ರಾಜಕೀಯಕ್ಕೆ ಬರಲ್ಲ. ಸೇವೆ ಮಾಡೋಕೆ ರಾಜಕೀಯಕ್ಕೇ ಬರಬೇಕು ಅಂತೇನೂ ಇಲ್ಲ. ರಾಜಕೀಯದಿಂದ ದೂರವಿದ್ದುಕೊಂಡೇ ನನ್ನ ಕೈಲಾದಷ್ಟು ಸೇವೆ ಮಾಡುತ್ತೇನೆ ಎಂದಿದ್ದರು. ಆದರೆ, ಬಿಜೆಪಿ ಮುಖಂಡ ಆರ್.ಅಶೋಕ್ ಹೊಸ ಹೇಳಿಕೆಯನ್ನೇ ನೀಡಿದ್ದಾರೆ.

  ನನ್ನ ಚುನಾವಣಾ ಪ್ರಚಾರ ಉದ್ಘಾಟಿಸಿದ್ದೇ ಸುದೀಪ್. ನಾನು ಮತ್ತು ಸುದೀಪ್ ಒಳ್ಳೆಯ ಸ್ನೇಹಿತರು. ನಾನು ಸುದೀಪ್ ಸೇರಿದಂತೆ ಹಲವರ ಜೊತೆ ಮಾತುಕತೆ ನಡೆಸುತ್ತೇನೆ. ಸಾಕಷ್ಟು ಸ್ಟಾರ್​ಗಳು ಬಿಜೆಪಿ ಪರ ಪ್ರಚಾರಕ್ಕೆ ಬರುತ್ತಾರೆ ಎಂದಿದ್ದಾರೆ ಅಶೋಕ್. 

  ದರ್ಶನ್ ಕಾಂಗ್ರೆಸ್​ಗೆ ಹೋಗ್ತಾರೆ ಅನ್ನೋ ಸುದ್ದಿಗೆ ಪ್ರತಿಕ್ರಿಯೆ ನೀಡಿರುವ ಆರ್.ಅಶೋಕ್, ಚುನಾವಣೆ ಸಮಯದಲ್ಲಿ ಸ್ಪಷ್ಟ ಉತ್ತರ ನೀಡುತ್ತೇನೆ ಎಂದಿದ್ದಾರೆ.

 • ಚಲನಚಿತ್ರ ಕಾರ್ಮಿಕರ ಒಕ್ಕೂಟಕ್ಕೆ ಅಶೋಕ್ ರಾಜೀನಾಮೆ

  ashok resigns from labors association

  ಚಲನಚಿತ್ರ ಕಾರ್ಮಿಕರ ಒಕ್ಕೂಟಕ್ಕೆ ನಟ ಅಶೋಕ್ ರಾಜೀನಾಮೆ ನೀಡಿದ್ದಾರೆ. ಸುಮಾರು 30 ವರ್ಷಗಳಿಂದ ಕಾರ್ಮಿಕ ಒಕ್ಕೂಟದ ಅಧ್ಯಕ್ಷರಾಗಿದ್ದ ಅಶೋಕ್, ವೈಯಕ್ತಿಕ ಕಾರಣ ನೀಡಿ ರಾಜೀನಾಮೆ ನೀಡಿದ್ದಾರೆ. ಇತ್ತೀಚೆಗೆ ಕಿರುತೆರೆ ಧಾರಾವಾಹಿಗಳಲ್ಲಿ ನಟಿಸುತ್ತಿರುವ ಅಶೋಕ್, ನಟನೆಯ ಕಾರಣದಿಂದಾಗಿ ಒಕ್ಕೂಟದ ಕೆಲಸದಲ್ಲಿ ತೊಡಗಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ರಾಜೀನಾಮೆ ನೀಡುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ. 

  ಈಗ ನಟಿಸುತ್ತಿರುವ ಕಾರಣ, ರಾಜೀನಾಮೆ ನೀಡಿದ್ದೇನೆ. ರಾಜೀನಾಮೆ ವಾಪಸ್ ಪಡೆಯುವ ಮಾತೇ ಇಲ್ಲ ಎಂದಿದ್ದಾರೆ ಅಶೋಕ್. ಸತತ 3 ದಶಕಗಳ ಕಾಲ ಒಕ್ಕೂಟದ ಮೂಲಕ ಕಾರ್ಮಿಕರ ಪರ ಧ್ವನಿಯಾಗಿದ್ದ ಅಶೋಕ್ ರಾಜೀನಾಮೆ ಚಿತ್ರರಂಗದಲ್ಲಿ ಸಂಚಲನ ಮೂಡಿಸಿರುವುದು ನಿಜ.