ರಿಕ್ಕಿ ಕೇಜ್. ಕನ್ನಡಿಗರೇ ಆದರೂ ಹುಟ್ಟಿದ್ದು ಅಮೆರಿಕದಲ್ಲಿ. ಸದ್ಯಕ್ಕೆ ವಾಸವಿರೋದು ಬೆಂಗಳೂರಿನಲ್ಲಿ. ಸಂಗೀತ ನಿರ್ದೇಶನವನ್ನೇ ವೃತ್ತಿ ಮಾಡಿಕೊಂಡಿರುವ ರಿಕ್ಕಿ ಕೇಜ್ ಮತ್ತೊಮ್ಮೆ ಗ್ರ್ಯಾಮಿ ಅವಾರ್ಡ್ ಗೆದ್ದುಕೊಂಡಿದ್ದಾರೆ. ಇದು ಅವರಿಗೆ 3ನೇ ಗ್ರ್ಯಾಮಿ ಅವಾರ್ಡ್. 2015ರಲ್ಲಿ ‘ವಿಂಡ್ಸ್ ಆಫ್ ಸಂಸಾರ’ ಆಲ್ಬಂಗೆ ಗ್ರ್ಯಾಮಿ ಪ್ರಶಸ್ತಿ ದೊರೆತಿತ್ತು. ಈಗ ಬಾರಿ ‘ಡಿವೈನ್ ಟೈಡ್ಸ್’ ಆಲ್ಬಂಗೆ ಸ್ಟೀವರ್ಟ್ ಕೋಪ್ಲ್ಯಾಂಡ್ ಹಾಗೂ ರಿಕ್ಕಿ ಕೇಜ್ಗೆ ಒಟ್ಟಾಗಿ ಗ್ರ್ಯಾಮಿ ಪ್ರಶಸ್ತಿ ದೊರೆತಿದೆ. ಮನಸೂರೆಗೊಳ್ಳುವ ಆಡಿಯೋ ಆಲ್ಬಂ ವಿಭಾಗದಲ್ಲಿ ಈ ಪ್ರಶಸ್ತಿ ಸಿಕ್ಕಿದೆ. ಈ ಮೂಲಕ ಅವರು ಭಾರತದ ಕೀರ್ತಿ ಪತಾಕೆಯನ್ನು ವಿಶ್ವ ಮಟ್ಟಕ್ಕೆ ಕೊಂಡೊಯ್ದಿದ್ದಾರೆ.
ಈ ಆಲ್ಬಂಗೆ ಕಳೆದ ವರ್ಷ ಗ್ರ್ಯಾಮಿ ಪ್ರಶಸ್ತಿ ಸಿಕ್ಕಿತ್ತು. ಡಿವೈನ್ ಟೈಡ್ಸ್ ಎರಡನೇ ಬಾರಿಗೆ ನಾಮಿನೇಟ್ ಆಗಿ ಮತ್ತೊಮ್ಮೆ ಪ್ರಶಸ್ತಿ ಗೆದ್ದಿದೆ. ಸ್ವೀವರ್ಟ್ ಕೋಪ್ ಲ್ಯಾಂಡ್ ಜೊತೆ ಈ ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ ರಿಕ್ಕಿ ಕೇಜ್. ಒಟ್ಟು ಮೂರು ಬಾರಿ, ಸತತ ಎರಡು ಬಾರಿ ಪ್ರಶಸ್ತಿ ಪಡೆದ ಭಾರತೀಯ ಎನ್ನುವ ಹೆಗ್ಗಳಿಕೆ ರಿಕಿ ಕೇಸ್ ಅವರದ್ದು. ಕಳೆದ ವರ್ಷವೂ ಅವರಿಗೆ ಗ್ರ್ಯಾಮಿ ಅವಾರ್ಡ್ ದೊರೆತಿತ್ತು. ಈ ಬಾರಿಯೂ ಅವರಿಗೆ ಗೌರವ ದೊರೆತಿದೆ. ವಿಶ್ವದಾದ್ಯಂತ ಅಭಿಮಾನಿಗಳನ್ನು ಹೊಂದಿರುವ ಅವರಿಗೆ ನೂರಕ್ಕೂ ಹೆಚ್ಚು ಪ್ರತಿಷ್ಠಿತ ಪ್ರಶಸ್ತಿಗಳು ಸಂದಿವೆ ಎನ್ನುವುದು ವಿಶೇಷ.
ರಿಕ್ಕಿ ಕೇಜ್ ಈ ಪ್ರಶಸ್ತಿ ಪಡೆದ ಭಾರತೀಯರ ಪಟ್ಟಿಯಲ್ಲಿ ಈಗಾಗಲೇ ಸ್ಥಾನ ಪಡೆದಿದ್ದರು. ಪಂಡಿತ್ ರವಿಶಂಕರ್ ಅವರಿಗೆ 5 ಗ್ರ್ಯಾಮಿ ಪ್ರಶಸ್ತಿ ಲಭಿಸಿವೆ. ಜುಬಿನ್ ಮೆಹ್ತಾ ಕೂಡಾ 5 ಬಾರಿ ಗ್ರ್ಯಾಮಿ ಗೆದ್ದಿದ್ದಾರೆ. ಟಿಎಚ್ ವಿನಯಕ್ರಮ್, ಜಾಕಿರ್ ಹುಸೇನ್, ಪಂಡಿತ್ ವಿಶ್ವ ಮೋಹನ್ ಭಟ್, ಎ.ಆರ್.ರೆಹಮಾನ್ ಈ ಪಟ್ಟಿಯಲ್ಲಿದ್ದಾರೆ. ಇವರು ಸಂಗೀತ ನಿರ್ದೇಶಕರಾದರೆ, ಸೌಂಡ ಇಂಜಿನಿಯರ್ ಎಚ್. ಶ್ರೀಧರ್, ಮಿಕ್ಸ್ ಇಂಜಿನಿಯರ್ ಪಿ.ಎ. ದೀಪಕ್, ನೀಲಾ, ಫಾಲ್ಗುಣಿ ಶಾ ಕೂಡ ಗ್ರ್ಯಾಮಿ ಪ್ರಶಸ್ತಿ ಗ್ರ್ಯಾಮಿ ಪಡೆದ ಇನ್ನಿತರರು.