` ishan - chitraloka.com | Kannada Movie News, Reviews | Image

ishan

  • `ರೆಮೋ'ಗೆ 1 ಕೋಟಿ ವೆಚ್ಚದ ಅದ್ದೂರಿ ಸೆಟ್

    grand set constructed for raymo movie near vijaynagar metro station

    ಪವನ್ ಒಡೆಯರ್ ನಿರ್ದೇಶನದ ದಿ ವಿಲನ್ ನಿರ್ಮಾಪಕ ಸಿ.ಆರ್.ಮನೋಹರ್ ನಿರ್ಮಾಣದ ಸಿನಿಮಾ ರೆಮೋ. ಇಶಾನ್, ಅಶಿಕಾ ರಂಗನಾಥ್ ಜೋಡಿಯಾಗಿರುವ ಚಿತ್ರಕ್ಕೆ ಅದ್ದೂರಿ ಶೂಟಿಂಗ್ ನಡೆಯುತ್ತಿದೆ. ಈ ಚಿತ್ರಕ್ಕಾಗಿಯೇ ಬೆಂಗಳೂರಿನಲ್ಲಿ 1 ಕೋಟಿ ವೆಚ್ಚದ ಸೆಟ್ ಹಾಕಿದ್ದಾರೆ ಪವನ್ ಒಡೆಯರ್.

    ವಿಜಯನಗರ ಬಸ್ ನಿಲ್ದಾಣ, ಮೆಟ್ರೋ ಆಸುಪಾಸಿನಲ್ಲೇ ಇರುವ ಕಟ್ಟಡದ ಮೇಲೆ ಸಂಪೂರ್ಣ ಗಾಜಿನಲ್ಲಿ ಸೆಟ್ ಹಾಕಲಾಗಿದೆ. ಗುಣ ಮತ್ತು ಕರಣ್ ಸೆಟ್ ಡಿಸೈನ್ ಮಾಡಿದ್ದಾರೆ.

    ಗೂಗ್ಲಿ ನಂತರ ಪವನ್ ಒಡೆಯರ್ ಮತ್ತೊಮ್ಮೆ ಲವ್ ಸಬ್ಜೆಕ್ಟ್ ಕೈಗೆತ್ತಿಕೊಂಡಿದ್ದಾರೆ. ಚಿತ್ರೀಕರಣ ಭರದಿಂದ ಸಾಗುತ್ತಿದೆ.

  • 'Raymo' To Be Dubbed And Released In Telugu and Tamil

    'Raymo' To Be Dubbed And Released In Telugu and Tamil

    Pavan Wodeyar has already completed major portions of his latest film 'Raymo' starring Ishaan and Ashika Ranganath. Meanwhile, Pavan has announced that the film will be dubbed and simultaneously released in Telugu and Tamil apart from Kannada. 

    'Raymo' was launched in June last year and Pavan had completed almost 80 percent of the film. The team had planned to complete the film by April, when lockdown was announced. Now the team intends to shoot the remaining portions soon and release it in 2021. 

    Meanwhile, producer C R Manohar who is very much impressed about the shaping up of the film has decided to dub the film in Telugu and Tamil and release it there also. Hero Ishan's first film 'Rogue' was released in Kannada and Telugu. Now, 'Raymo' will be released in three languages.

    'Raymo' stars Ishan, Ashika Ranganath, Sharath Kumar and others in prominent roles. The film is being written and directed by Pavan Wodeyar. Arjun Janya is the music director, while Vaidi is the cameraman

  • Chiru replaces Ishan - Exclusive

    ishan replaces chiranjeevi

    Chiranjeevi Sarja has replaced Ishan in Dwarakish Chitra's new film Amma I Love You. It was earlier announced that Ishan who made his debut recently with Rogue was roped in for the new film. However the change has been made now in the lead cast. KM Chaitanya is directing the film.

    There was speculation that the film Amma I Love You has been stalled. But speaking to Chitraloka Yogesh Dwarakish said that the film is underway except for the replacement of the actor. Chiranjeevi Sarja is busy with the film Samhara and shooting for Amma I Love You will start right after that he said. KM Chaitanya will direct the film as announced earlier.

    Related Articles :-

    Yogish Dwarkish To Produce Ishan's New Film

     

  • Chopra Girl..Bengaluru Doll

    mannara chopra

    ROGUE!! Stylish Director Puri Jagannadh is known for his on screen magic through his blockbusters movie hits with superstars. It’s every debutants dream to work with Director PuriJagannadh. Debutant Ishan is one lucky hunk to make his debut both in Kannada and Telugu Language same time. And we already have the queen of hearts Ms Mannara Chopra! She is one trending girl right now in the Film industry. Of course she reaches up to everything that can be said that she is PuriJagannadh’s muse! Even though Mannara chopra is three movies old in Telugu and one in Bollywood she still feels like a sensational debutante through Puri Jagannadh’s ROGUE movie. 

    A fair skin, shining bright eyes, silky hair and a chick with innocence smile was in town. And as expected she fell in love with the city! She was all busy promoting her upcoming flick ROGUE with media, and interacting with public. During this time CHITHRALOKA.COM got exclusively chatty with Ms Chopra girl. A complete Chopra khandhan ki ladki! Mannara chopra comes from ‘Chopra’s’ family and she is a sister of Hollywood superstar our Indian actress Ms Priyanka Chopra. Of course Mannara chopra sees up to her sister making it big and better through her each movie. Mannara chopra feels lucky to make her Kannada movie debut under Prestigious banner TanviFilms and working with director Puri Jagannadh.

    Mannara chopra is passionate about acting. She dreams of making big in the industry and she is willing to work with superstars of south. Also she has been already approached for couple of movies from south. But she believes that ‘patience is virtue’ and taking it slow until the ROGUE release. Mannara chopra says ROGUE movie is her best one till date. And she promises that every audience will fall in love with her on screen character in this movie. Well, we sure look forward to watch this talented ‘Barbie doll’ making big in the industry and here is wishing her the best for her movie and her future projects.

    - Saraswathi

  • International Technology For Raymo

    international technology for raymo

    Kannada film Raymo has become the first film in India to adopt the technology of Infinity Rig. It is the most advanced 'rig' used in the film industry today. The film team has mated an Alexa camera with this new rig. Rigs are machinery to which cameras are attached for difficult and non-standard shots. A standard shot has the camera in a stationary position. But when the camera is required to be in motion various rigs are used like cranes, trolleys etc. The Infinity Rig is a kind of rig which does the job of all other rigs combined. 

    A team of six persons took training in Germany to operate this rig. Kannada actor Tharun Chandra has brought this Rig to India and Pavan Wadeyar has become the first person director to use it. The film team has been using it for the last 15 days.

    Wadeyar said that they have used the rig to shoot several scenes and also using it to shoot two fight scenes in the film. He said using it is not very difficult but needs some understanding of the mechanics. It has many remote features and brings many advantages. He said that time is saved using this rig compared to other rigs. There is also no need to hire multiple types of rigs when you have one rig doing all the jobs. He praised Tharun Chandra for introducing the technology to Sandalwood

  • Pavan's Next Is Titled 'Raymo'

    pavan's next titled raymo

    After the phenomenal success of 'Natasaarvabhowma', director Pavan Wadeyar's next starring Ishaan and Ashika Ranganath is titled 'Raymo'.

    None other than Century star Dr. Shivarajakumar along with his better half Mrs. Geetha Shivarajakumar attended the 'script pooja', wishing the film team on the occasion. MLC C R Manohar, was also present as his nephew Ishaan is returning with his second venture in Kannada after making his debut in Rogue directed by Puri Jagannath.

    "It was a pleasant surprise when Shivanna and Geethakka took their time to wish us on the pooja. We are now on the hunt for suitable locations," says Pavan Wadeyar.

    Sources say that the director is headed to Hyderabad in search of locations.

  • Raymo Beats Dabangg 3 & Avane Srimannarayana

    raymo beats dabanng and avane srimannarayana

    Look who is trending on top at national level by overtaking the mighty Dabangg 3 and Avane Srimannarayana. According to IMDB, it is Pawan Wadeyar's next - Raymo starring Ishan and Ashika Ranginath, which is trending at fifth position under global movies and TV trending in India.

    The film produced by C R Manohar, the motion poster of Raymo was released yesterday, which showcases Ishan in a rocking star avatar while claiming it to be a 'noble' love story.

    While Raymo has been trending above, Dabangg 3 starring Salman Khan and Kichcha Sudeepa is trending at 6th and whereas Avane Srimannarayana, which was released in Telugu, Tamil and Malayalam after Kannada, is trending at ninth spot.

    Following the tremendous success of Natasaarvabhowma starring Power Star Puneeth Rajkumar, the director shares that he is doing a full fledged romantic tale after Googly in his career, and promises that the audience will definitely love Raymo too.

  • Raymo Review, Chitraloka Rating- 3.5:5

    Raymo Review, Chitraloka Rating- 3.5:5

    Film: Raymo

    Cast: Ishan, Ashika Ranganath, Rajesh Nataranga, Madhoo, Sarath Kumar, Achyuth Kumar  

    Director: Pavan Wadeyar

    Duration: 156 minutes

    Certificate: U/A

    Rocking a love story 

    While it lasts, love is amusing, exhilarating, adrenaline-pumping and blissful. When everything is said and done, it leaves behind a trail of grief, sadness, haunting memories, gloom and sorrow. This eternal drama of love has been made, remade, built and narrated a million times before. But somehow, it is fresh every time. In the hands of a good narrator, a love story can still sound and feel new.

    So how has Pavan Wadeyar, one of the best romantic film makers of Sandalwood handled this latest musical love story? Firstly, he does not disappoint. Secondly, this is a lavish showcase of technical brilliance and good performances. Thirdly, there is good chemistry between the various characters and not just the lead pair. Raymo is a musical escapade you can immerse yourself in and forget the world for a while.

    The film is not flawless. It has its share of clichés. But Wadeyar, who has scripted the film as well, brings in freshness with the help of some good characterization. The characters played by Rajesh Nataranga, Madhoo, Achyuth Kumar and Sarath Kumar stand out in this regard. The four also deliver some nuanced performances which elevates the story’s value by several notches. Two scenes particularly; one involving Rajesh and the climax scene with Madhoo are top class.

    The lead characters are also well-crafted. Our hero is a troubled youngster who finds a good reason to hate his parents. He decides to chart his own path in the world and turns to music. It is his solace and it is his love. The inevitable character of a female singer who falls in love with him starts the real love saga. But fate has something else in store for them. To fulfill one destiny, our hero ignores the other. Now hell hath no fury like a woman scorned right? Ashika Ranganath delivers an impactful performance in a role that has substance and not just style for the leading lady. The story takes the predictable routes, but presents them with different backdrops and newer combinations of incidents and sub-plots.

    All well that ends well, but you have to go through the motions. It is in the journey that the real story lies. Wadeyar fills this journey with good characters, technical wizardry and visual wonders. The cinematography in the film is something that livens up the entire proceedings throughout the narrative. Though it is touted as a musical, the songs are a little subdued. There is one great number. The others are not bad but you expected each one to be a blockbuster when the film is about a rock star. Raymo has all the things in the right place, especially its heart. This film is for those who see roses, doves and maple leaves in their dreams.

  • Rogue Censored U/A

    rogue movie image

    CR Manohar produced movie Rogue has been censored with U/A certificate and will be releasing in March end.

    Rogue' marks the debut of Ishan and comeback of acclaimed director Puri Jagannath to Kannada cinema. The film is made in Kannada and Telugu simultaneously and the audio of the film was released in a grand scale in Bengaluru and Hyderabad.

    'Rogue' stars Ishan along with Angela, Mannara Chopra, Ali and others in prominent roles. C R Manohar has produced the film, while Sunil Kashyap has composed the songs.

    Rogue Movie Gallery - View

    Related Articles :-

    Rogue Songs Released

  • Rogue To Release In Triveni

    ishan, mannara in rogue

    Producer C R Manohar's new film, which stars his nephew Ishan is all set to release on the 31st of March in Triveni and other theaters across Karnataka. Right now, Dwarkish's 50th film 'Chauka' has completed 50 days in Triveni and the film will be replaced by 'Rogue' next week

    'Rogue' marks the debut of Ishan and comeback of acclaimed director Puri Jagannath to Kannada cinema. Recently the audio release of the film was held in Bangalore and many celebrities from Sandalwood participated in the event.

    'Rogue' stars Ishan along with Angela, Mannara Chopra, Ali and others in prominent roles. C R Manohar has produced the film, while Sunil Kashyap has composed the songs.

    Rogue Movie Gallery - View

    Related Articles :-

    Rogue Censored U/A

    Rogue Songs Released

  • Shanvi Heroine To Ishan - Exclusive

    shanvi is the heroine for ishan

    Actress Shanvi Srivatsa has be selected as heroine for CR Manohar's nephew Ishan movie temporarily selected movie as Amma I Love U. The film will be directed by KM Chaitanya and it is the 51st production of Dwarkish Films.

    Speaking to Chitraloka producer Yogish Dwarkish told Today we have finalized Shanvi Srivatsava as the heroine. Movie shooting will start in October. Amma I Love you title is a working title only. Still we have not finalized the final title. Will give more details soon said Yogi Dwarkish 

  • Yogish Dwarkish To Produce Ishan's New Film

    yogish dwarkish to produce ishan's new film

    CR Manohar's nephew Ishan who made his debut with Puri Jagan's Rogue has signed a new film with Dwarkish Films. Yogish will produce the new film which is likely to be title Amma I Love You.

    The film will be directed by KM Chaitanya. The film will be officially announced on Dwarakish's 75th birthday. More details about the film is awaited. This will be Dwarkish production's 51st film after the successful Chowka.

    Chaitanya who is busy with the release of his new film Aake later this month will start work on Amma I Love You after that.

     

  • ಕೊರೊನಾ ಎಫೆಕ್ಟ್ : 360 ಡಿಗ್ರಿ ಗ್ರಾಫಿಕ್ಸ್ ಮೊರೆ ಹೋದ ರೆಮೋ

    raymo team adopts 360 degree technology

    ನೀವು ಈ ಚಿತ್ರ ರಿಲೀಸ್ ಆದ ಮೇಲೆ ಹಾಡಿನ ದೃಶ್ಯ ನೋಡುತ್ತೀರಿ. ಅಲ್ಲಿ ಹಿಮಾಲಯದಲ್ಲಿ ನಾಯಕ, ನಾಯಕಿ ಹಾಡುತ್ತಿರುತ್ತಾರೆ. ಬ್ಯಾಕ್‍ಗ್ರೌಂಡ್‍ನಲ್ಲಿ 150ಕ್ಕೂ ಹೆಚ್ಚು ಡ್ಯಾನ್ಸರ್ಸ್ ಇರುತ್ತಾರೆ. ಕೊರೊನಾ ನಿರ್ಬಂಧ ಇರುವಾಗ ಈ ಹಾಡನ್ನು ಹೇಗೆ ಶೂಟ್ ಮಾಡಿದರು. ಇವರು ಯಾವಾಗ ಹಿಮಾಲಯಕ್ಕೆ ಹೋದರು ಎಂದು ತಲೆಕೆಡಿಸಿಕೊಳ್ಳಬೇಡಿ. ನಿರ್ದೇಶಕ ಪವನ್ ಒಡೆಯರ್ ಟೆಕ್ನಾಲಜಿ ಮೊರೆ ಹೋಗಿದ್ದಾರೆ. 360 ಡಿಗ್ರಿ ಗ್ರಾಫಿಕ್ಸ್ ಟೆಕ್ನಾಲಜಿ ಬಳಸಿಕೊಳ್ಳುತ್ತಿದ್ದಾರೆ.

    ಗ್ರೀನ್ ಮ್ಯಾಟ್‍ನಲ್ಲಿ ಹಿಮಾಲಯ ಸೃಷ್ಟಿಸುತ್ತೇವೆ. 50 ಡ್ಯಾನ್ಸರ್‍ಗಳಿಗೆ ಮೂರು ಮೂರು ಕಾಸ್ಟ್ಯೂಮ್ ಬಳಸುತ್ತೇವೆ. ಅವರನ್ನೇ 150 ಜನರಂತೆ ರೀ-ಕ್ರಿಯೇಟ್ ಮಾಡುತ್ತೇವೆ. ಚಿತ್ರದ ಹೀರೋ ರ್ಯಾಪ್ ಸಿಂಗರ್. ಹೀಗಾಗಿ ದೃಶ್ಯಗಳಲ್ಲಿ ಹೆಚ್ಚು ಜನರನ್ನು ತೋರಿಸಲೇಬೇಕಿದೆ. ಅದಕ್ಕಾಗಿ ಈ ಸಾಹಸ ಮಾಡುತ್ತಿದ್ದೇವೆ. ನನ್ನ ಮತ್ತು ಕೊರಿಯೋಗ್ರಾಫರ್ ಇಮ್ರಾನ್ ಸರ್ದಾರಿಯಾ ಹಾಗೂ ಸಿನಿಮಾಟೋಗ್ರಾಫರ್ ವೈದಿ ಮುಂದೆ ದೊಡ್ಡ ಸವಾಲಿದೆ ಎನ್ನುತ್ತಾರೆ ಪವನ್.

    ಆಕ್ಚುಯಲಿ ಹೊರಾಂಗಣ ಚಿತ್ರೀಕರಣಕ್ಕಿಂತ ಗ್ರಾಫಿಕ್ಸ್ ಚಿತ್ರೀಕರಣಕ್ಕೆ ಹೆಚ್ಚು ವೆಚ್ಚವಾಗಲಿದೆಯಂತೆ. ಆದರೆ ಹಣ ಹೆಚ್ಚು ಖರ್ಚಾದರೂ ಪರವಾಗಿಲ್ಲ. ರಿಸ್ಕ್ ಬೇಡ ಎಂದಿದ್ದಾರಂತೆ ನಿರ್ಮಾಪಕ ಸಿ.ಆರ್. ಮನೋಹರ್. ಇಶಾನ್ ಮತ್ತು ಅಶಿಕಾ ರಂಗನಾಥ್ ನಟಿಸಿರುವ ಚಿತ್ರಕ್ಕೆ ಅಂತಿಮ ಹಂತದ ಚಿತ್ರೀಕರಣ ಬಾಕಿ ಉಳಿಸಿಕೊಂಡಿದೆ.

  • ಟಿಪ್ಸ್ ಕೊಟ್ಟಿದ್ದು ಶ್ರೇಯಾ ಘೋಷಾಲ್ : ಕಥೆ ಕೇಳಿಯೇ ಥ್ರಿಲ್ ಆದ್ರಂತೆ ಮೋಹನ

    ಟಿಪ್ಸ್ ಕೊಟ್ಟಿದ್ದು ಶ್ರೇಯಾ ಘೋಷಾಲ್ : ಕಥೆ ಕೇಳಿಯೇ ಥ್ರಿಲ್ ಆದ್ರಂತೆ ಮೋಹನ

    ನಾನು ಗೂಗ್ಲಿ ನೋಡಿದ ದಿನದಿಂದಲೇ ಈ ಡೈರೆಕ್ಟರ್ ಜೊತೆ ಕೆಲಸ ಮಾಡಬೇಕು ಅನ್ನೋ ಆಸೆ ಹುಟ್ಟಿತು. ಅದಕ್ಕೆ ತಕ್ಕಂತೆಯೇ ಪವನ್ ಒಡೆಯರ್ ಕಥೆ ಹೇಳಿದಾಗ ಅವರ ನಿರೂಪಣೆ, ಸ್ಕ್ರಿಪ್ಟ್ ತುಂಬಾ ಇಷ್ಟವಾಯಿತು. ಒಪ್ಪಿಕೊಂಡೆ. ಅಲ್ಲದೆ ಚಿತ್ರಕ್ಕೆ ನಾನೇ ಯಾಕೆ ಎಂದು ಕೇಳಿದೆ. ನಿಮ್ಮ ಫೇಸ್‍ನಲ್ಲಿ ಇನ್ನೋಸೆನ್ಸಿ ಇದೆ. ಆ ಇನ್ನೋಸೆಂಟ್ ನನ್ನ ಚಿತ್ರದ ಪಾತ್ರಕ್ಕೆ ಸೂಟ್ ಆಯಿತು ಎಂದರು. ಅಲ್ಲಿಗೆ, ನಾನು ಪಾತ್ರಕ್ಕೆ ಹೊಂದಿಕೊಳ್ಳುತ್ತೇನೆ ಎನ್ನುವ ಡೈರೆಕ್ಟರ್ ಕಲ್ಪನೆಯೂ ಇಷ್ಟವಾಯಿತು. ಹೀಗಾಗಿ ರೇಮೋ ಚಿತ್ರ ಒಪ್ಪಿಕೊಂಡೆ.. ಎನ್ನುತ್ತಾ ಹೋಗುತ್ತಾರೆ ಆಶಿಕಾ ರಂಗನಾಥ್.

    ಆಶಿಕಾಗೆ 2022ರ 2ನೇ ಸಿನಿಮಾ ರೇಮೋ. ಅವತಾರ್ ಪುರುಷ ಹಿಟ್ ಆಗಿತ್ತು. ಈಗ ರೇಮೋ ಬರುತ್ತಿದೆ. ಪುನೀತ್ ಅವರ ಜೇಮ್ಸ್‍ನಲ್ಲಿ ಕಾಣಿಸಿಕೊಂಡಿದ್ದರೂ ಅದು ಪುನೀತ್ ಮೇಲಿನ ಅಭಿಮಾನ, ಪ್ರೀತಿಯಿಂದ. ಪ್ರಮೋಷನ್ ಸಾಂಗ್‍ನಲ್ಲಿ ನಟಿಸಿದ್ದರು. ಈಗ ರೇಮೋ ತಿಂಗಳ ಕೊನೆಯಲ್ಲಿ ಬರುತ್ತಿದೆ.

    ಇದು ಕಂಪ್ಲೀಟ್ ಲವ್ & ಮ್ಯೂಸಿಕಲ್ ಸ್ಟೋರಿ. ನನಗೆ ಮೊದಲ ಅನುಭವ. ಲವ್ ಸ್ಟೋರಿಗಳಲ್ಲಿ ಹೀರೋಗಿದ್ದಷ್ಟೇ ಹೀರೋಯಿನ್‍ಗೂ ಸ್ಪೇಸ್ ಇರುತ್ತದೆ. ಪ್ರಮುಖ ಪಾತ್ರವೇ ಇರುತ್ತದೆ. ಮೋಹನಳ ಪಾತ್ರ ಹೆಚ್ಚೂ ಕಡಿಮೆ ನನ್ನ ವೊರಿಜಿನಲ್ ಕ್ಯಾರೆಕ್ಟರ್ ಕೂಡಾ ಹೌದು. ಪ್ರೇಕ್ಷಕರು ಖಂಡಿತಾ ಈ ಚಿತ್ರದ ನಂತರ ಆಶಿಕಾ ರಂಗನಾಥ್‍ರನ್ನು ಬೇರೆಯದೇ ರೀತಿ ನೋಡುತ್ತಾರೆ ಎನ್ನುವ ಕಾನ್ಫಿಡೆನ್ಸ್ ಆಶಿಕಾ ಅವರಲ್ಲಿ ತುಂಬಿ ತುಳುಕುತ್ತಿದೆ.

    ಸಿಂಗರ್ ಪಾತ್ರ. ಒಬ್ಬ ಸಿಂಗರ್ ಹೇಗಿರುತ್ತಾರೆ ಎಂಬುದಕ್ಕೆ ನನಗೆ ಶ್ರೇಯಾ ಘೋಷಾಲ್ ಟಿಪ್ಟ್ ಕೊಟ್ಟರು. ಉಳಿದಂತೆ ನಿರ್ದೇಶಕರು ಹೇಳಿದಂತೆ ಅವರ ಕಲ್ಪನೆಗೆ ತಕ್ಕಂತೆ ನಟಿಸಿದ್ದೇನೆ ಎನ್ನುವ ಆಶಿಕಾ ಹೀರೋ ಇಶಾನ್ ಹಾಗೂ ನನ್ನ ಮಧ್ಯೆ ಒಳ್ಳೆ ಫ್ರೆಂಡ್‍ಶಿಪ್ ಬೆಳೆಯೋಕೆ ಪವನ್ ಒಡೆಯರ್ ಬಿಟ್ಟರು. ಸಿನಿಮಾದಲ್ಲಿರೋದು ಲವ್ ಸ್ಟೋರಿ. ಕೆಲವು ಇಂಟಿಮೇಟ್ ಸೀನ್ಸ್ ಕೂಡಾ ಇವೆ. ಅಂತಹ ದೃಶ್ಯಗಳಲ್ಲಿ ನಟಿಸುವಾಗ ಕಂಪರ್ಟ್ ಎನಿಸಬೇಕು. ಅದಕ್ಕೆ ನಮ್ಮ ಫ್ರೆಂಡ್‍ಶಿಪ್ ಸಹಾಯ ಮಾಡಿತು ಎನ್ನುತ್ತಾರೆ.

    ಸಿ.ಆರ್.ಮನೋಹರ್ ನಿರ್ಮಾಣದ ರೇಮೋಗೆ ಪವನ್ ಒಡೆಯರ್ ನಿರ್ದೇಶಕ.

  • ಪ್ರೇಮಿಗಳ ಪ್ರೀತಿ-ಸೇಡು-ದ್ವೇಷ-ಸಂಗೀತದ ಕಥೆ ರೇಮೋ

    ಪ್ರೇಮಿಗಳ ಪ್ರೀತಿ-ಸೇಡು-ದ್ವೇಷ-ಸಂಗೀತದ ಕಥೆ ರೇಮೋ

    ಅವಳು ಮೋಹನ. ಹೊಸ ಮ್ಯೂಸಿಕಲ್ ಸೆನ್ಸೇಷನ್. ಪ್ರೀತಿಸಿದವನ ಮೇಲೆ ಸೇಡು ತೀರಿಸಿಕೊಳ್ಳುವುದಕ್ಕಾಗಿಯೇ ಸ್ಟಾರ್ ಸಿಂಗರ್ ಆಗುತ್ತಾಳೆ. ಅವನು ರೇವಂತ್. ಫೈಟು-ದುಶ್ಚಟಗಳ ಮಧ್ಯೆಯೇ ಮೋಹನಳ ಪ್ರೀತಿಗೆ ಹಂಬಲಿಸುವವನು. ಆದರೆ.. ಅವರಿಬ್ಬರ ಮಧ್ಯೆ ಪ್ರೀತಿಯೋ.. ದ್ವೇಷವೋ.. ಏನೋ ಒಂದು ಆಗಿದೆ. ಇಬ್ಬರೂ ಸೇಡಿಗೆ ಬಿದ್ದವರಂತೆ ಹೊರಡುತ್ತಾರೆ. ಅವರಿಬ್ಬರ ಮಧ್ಯೆ ಪ್ರೀತಿ-ಸೇಡು-ದ್ವೇಷ ಸರಸರನೆ ಸರಿದಾಡುತ್ತಿರುತ್ತದೆ. ಇಬ್ಬರೂ ಬಳಸೋ ಆಯುಧ ಒಂದೇ. ಅದು ಪ್ರೀತಿ. ರೇಮೋ ಚಿತ್ರದ ಟ್ರೇಲರ್ ನೋಡಿದವರಿಗೆ ಪ್ರೀತಿಯೂ ಅಸ್ತ್ರವಾಗುತ್ತದೆ ಎನ್ನುವುದೇ ಅಚ್ಚರಿ. ಆ ಅಚ್ಚರಿಯನ್ನು ಮೂಡಿಸಿಯೇ ಕುತೂಹಲ ಹುಟ್ಟಿಸುತ್ತಾರೆ ಪವನ್ ಒಡೆಯರ್.

    ಇಶಾನ್-ಆಶಿಕಾ ರಂಗನಾಥ್ ಮುದ್ದು ಮುದ್ದಾದ ಜೋಡಿ ಗಮನ ಸೆಳೆಯುತ್ತದೆ. ಅಹಂಕಾರ ತೋರಿಸುವಲ್ಲಿ, ಫೈಟುಗಳಲ್ಲಿ, ಪ್ರೀತಿಗಾಗಿ ಹಂಬಲಿಸುವಲ್ಲಿ.. ಇಶಾನ್ ಗಮನ ಸೆಳೆದರೆ ಮುಗ್ಧತೆಯಿಂದ, ಪ್ರೀತಿಗಾಗಿ ಸೇಡಿಗಾಗಿ ಹಂಬಲಿಸುವ ಹುಡುಗಿಯಾಗಿ ಕಣ್ಣುಗಳಲ್ಲೇ ಕಿಚ್ಚು ಹಚ್ಚುತ್ತಾರೆ ಆಶಿಕಾ ರಂಗನಾಥ್.

    ಅರ್ಜುನ್ ಜನ್ಯಾ ಮ್ಯೂಸಿಕ್ ಮತ್ತೊಂದು ಮೆರವಣಿಗೆ ಹೊರಟಿರುವ ಸೂಚನೆ ಇದೆ. ಸಿ.ಆರ್. ಮನೋಹರ್ ನಿರ್ಮಾಣದ ಚಿತ್ರ ನವೆಂಬರ್ 25ಕ್ಕೆ ಬಿಡುಗಡೆಯಾಗುತ್ತಿದೆ. ಶಿವಣ್ಣ ಟ್ರೇಲರ್ ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.

  • ರೆಮೋ ಚಿತ್ರದ ವಿರಹಗೀತೆ : ಪ್ರೀತಿಗೆ ನಂದೊಂದು ಶ್ರದ್ಧಾಂಜಲಿ..

    ರೆಮೋ ಚಿತ್ರದ ವಿರಹಗೀತೆ : ಪ್ರೀತಿಗೆ ನಂದೊಂದು ಶ್ರದ್ಧಾಂಜಲಿ..

    ರೆಮೋ. ಪವನ್ ಒಡೆಯರ್ ನಿರ್ದೇಶನದ ಮ್ಯೂಸಿಕಲ್ ಲವ್ ಸ್ಟೋರಿ. ಇಶಾನ್ ಮತ್ತು ಆಶಿಕಾ ರಂಗನಾಥ್ ಜೋಡಿದ ರೇಮೋ ನವೆಂಬರ್‍ನಲ್ಲಿ ರಿಲೀಸ್ ಆಗುತ್ತಿದೆ. ಸಿ.ಆರ್.ಮನೋಹರ್ ನಿರ್ಮಾಣದ ಚಿತ್ರ ಹಲವು ದೇಶಗಳಲ್ಲಿ ಚಿತ್ರೀಕರಣವಾಗಿರುವ ಅದ್ಧೂರಿ ಲವ್ ಸ್ಟೋರಿ. ಸಂಗೀತದ ಜೊತೆ ಜೊತೆಯಲ್ಲೇ ಸಾಗುವ ಪ್ರೇಮಕಥೆ. ಚಿತ್ರದ ಹಾಡು ಈಗ ರಿಲೀಸ್ ಆಗಿದೆ.

    ಹೋದರೆ ಹೋಗು..

    ಯಾರಿಗೆ ಬೇಕು..

    ಪ್ರೀತಿಗೆ ನಂದೊಂದು..

    ಶ್ರದ್ಧಾಂಜಲಿ..

    ಜಾರದು ಒಂದು..

    ಕಂಬನಿ ಬಿಂದು..

    ಎಂದಿಗೂ ನಿನಗಾಗಿ..

    ಕಣ್ಣಂಚಲಿ..

    ಹಾಡಿಗೆ ಪ್ರತಿ ಪದಕ್ಕೂ ಭಾವ ತುಂಬಿ ಹಾಡಿದ್ದಾರೆ ಶ್ರೇಯಾ ಘೋಷಲ್. ಪ್ರೀತಿಯನ್ನು ತೊರೆದು ಹೋದ ಪ್ರೇಮಿಗೆ ಇನ್ನೆಂದೂ ನಿನಗಾಗಿ ಕಾಯಲಾರೆ. ನಿನಗಾಗಿ ಕಣ್ಣೀರು ಹಾಕಲಾರೆ ಎಂದು ಪ್ರಿಯತಮೆ ಹಾಡುವ ಹಾಡು. ಅರ್ಜುನ್ ಜನ್ಯ ಮ್ಯೂಸಿಕ್ ಹಾಡಿಗೆ ತಕ್ಕಂತೆ ಮೆಲೋಡಿಯಾಗಿಯೇ ಇದೆ. ಕವಿರಾಜ್ ಪ್ರೀತಿಯನ್ನೆಲ್ಲ ಪೆನ್ನಿಗೆ ತುಂಬಿ ಅಕ್ಷರರೂಪಕ್ಕಿಳಿಸಿದ್ದಾರೆ. ಡೊಳ್ಳು ಚಿತ್ರದ ಮೂಲಕ ಅಂತಾರಾಷ್ಟ್ರೀಯ ಖ್ಯಾತಿ ಪಡೆದ, ರಾಷ್ಟ್ರ ಪ್ರಶಸ್ತಿಯನ್ನೂ ಗೆದ್ದ ಪವನ್ ಒಡೆಯರ್ ಚಿತ್ರವಿದು. ನವೆಂಬರ್ 25ಕ್ಕೆ ರಿಲೀಸ್.

  • ರೇಮೋ :ರಾಕ್ ಸ್ಟಾರ್ಗೆ ಡೈರೆಕ್ಟರ್ ಕೊಟ್ಟಿದ್ದ ಟಿಪ್ಸ್

    ರೇಮೋ :ರಾಕ್ ಸ್ಟಾರ್ಗೆ ಡೈರೆಕ್ಟರ್ ಕೊಟ್ಟಿದ್ದ ಟಿಪ್ಸ್

    ರೇಮೋ. ಈ ಚಿತ್ರದಲ್ಲಿ ಇಶಾನ್ ರಾಕ್ ಸ್ಟಾರ್. ಒಬ್ಬ ಸಾಮಾನ್ಯ ಹುಡುಗ ರಾಕ್ ಸ್ಟಾರ್ ಆಗುವುದೇ ಒಂದು ಮ್ಯಾಜಿಕ್. ನಿರ್ದೇಶಕ ಪವನ್ ಅವರು ಈ ಪಾತ್ರಕ್ಕೆ ಯಾವುದೇ ರೆಫರೆನ್ಸ್ ಇಟ್ಟುಕೊಳ್ಳಬೇಡಿ. ನಾವು ಮಾಡಿದ್ದೇ ಸ್ಟೈಲ್ ಆಗಬೇಕು. ಯಾರನ್ನೂ ಅನುಕರಿಸಬೇಡಿ ಎಂದು ಹೇಳಿದ್ದರು. ಆದರೂ ನಾನು ಇಂಡಿಯನ್ ರಾಕ್ ಸ್ಟಾರ್ಸ್ ಸಿನಿಮಾ ನೋಡಿದೆ. ಆದರೆ ಖಂಡಿತವಾಗಿ ಯಾರನ್ನೂ ಅನುಕರಣೆ ಮಾಡಿಲ್ಲ ಎನ್ನುತ್ತಾರೆ ಇಶಾನ್.

    ಶೂಟಿಂಗ್ ಶುರುವಾದ ಕೆಲವು ದಿನಗಳ ನಂತರ ಪವನ್ ಒಡೆಯರ್ ನನಗೆ ರಾಕ್ ಸ್ಟಾರ್ ಸಿಕ್ಕಾಯ್ತು ಎಂದಿದ್ದರು. ಡೈರೆಕ್ಟರ್ ಎದುರು ನಾನು ಗೆದ್ದಿದ್ದೆ. ಚಿತ್ರದ ಸ್ಕ್ರಿಪ್ಟ್ ಹಂತದಲ್ಲಿ ಜೊತೆಯಲ್ಲೇ ಇದ್ದೆ. ಹೀಗಾಗಿ ಪಾತ್ರ ಅರ್ಥ ಮಾಡಿಕೊಳ್ಳೋದು ನನಗೆ ಕಷ್ಟ ಆಗಲಿಲ್ಲ ಎಂದಿದ್ದಾರೆ ಇಶಾನ್. ಡೈರೆಕ್ಟರ್ ಹೇಳಿ ಆಕ್ಟಿಂಗ್ ಮಾಡಿಸುತ್ತಾರೆ. ಆದರೆ ನಟಿಸೋದು ನಾವೇ ಅಲ್ಲವೇ. ಪಾತ್ರದ ಮ್ಯಾನರಿಸಂ, ಎಮೋಷನ್, ಎನರ್ಜಿ ಎಲ್ಲವನ್ನೂ ಕೊಡಬೇಕಾದವರು ನಾವೇ. ಅದು ನಿರ್ದೇಶಕರಿಗೆ ಮೊದಲು ಇಷ್ಟವಾಗಬೇಕು. ನಂತರ ಪ್ರೇಕ್ಷಕರಿಗೆ ಇಷ್ಟವಾಗಬೇಕು ನನಗಂತೂ ಈ ಸಿನಿಮಾ ಟರ್ನಿಂಗ್ ಪಾಯಿಂಟ್ ಆಗುತ್ತೆ ಅನ್ನೋ ನಂಬಿಕೆ ಇದೆ ಎನ್ನುವ ವಿಶ್ವಾಸ ಇಶಾನ್ ಮಾತುಗಳಲ್ಲಿದೆ. ಪವನ್ ಒಡೆಯರ್  ನಿರ್ದೇಶನದ ರೇಮೋನಲ್ಲಿ ಇಶಾನ್ಗೆ ಆಶಿಕಾ ರಂಗನಾಥ್ ನಾಯಕಿ. ಸಿ.ಆರ್.ಮನೋಹರ್ ನಿರ್ಮಾಣದ ರೇಮೋ ಈಗ ಥಿಯೇಟರಲ್ಲಿದೆ.

  • ರೇಮೋ ಚಿತ್ರದ ಇನ್ನೊಬ್ಬ ಹೀರೋ.. ಇವರೇ..

    ರೇಮೋ ಚಿತ್ರದ ಇನ್ನೊಬ್ಬ ಹೀರೋ.. ಇವರೇ..

    ರೇಮೋ. ನಾಳೆ ರಿಲೀಸ್ ಆಗುತ್ತಿರುವ ಮ್ಯೂಸಿಕಲ್ ಲವ್ ಸ್ಟೋರಿ. ಇಶಾನ್ ಹೀರೋ ಆಗಿರೋ ಚಿತ್ರಕ್ಕೆ ಆಶಿಕಾ ರಂಗನಾಥ್ ನಾಯಕಿ. ಇಶಾನ್ ರೇವಂತ್ ಅನ್ನೋ ಸಿಂಗರ್ ಪಾತ್ರ ಮಾಡುತ್ತಿದ್ದರೆ, ಆಶಿಕಾ ಮೋಹನ ಅನ್ನೋ ಟ್ರೆಡಿಷನಲ್ ಹುಡುಗಿಯಾಗಿ, ಸಿಂಗರ್ ಆಗಿ ಕಂಗೊಳಿಸಿದ್ದಾರೆ. ಎರಡು ಹೃದಯಗಳ ನಡುವಿನ ಈಗೋ, ಪ್ರೀತಿ, ದ್ವೇಷಗಳ ಮಧ್ಯೆ ಸಂಗೀತ ಹೊನಲು ಹೊನಲಾಗಿ ಹರಿಯುತ್ತದೆ. ಇದೆಲ್ಲವನ್ನೂ ಕಥೆಯಾಗಿ ಕಟ್ಟಿ ಹೇಳುತ್ತಿರೋದು ಪವನ್ ಒಡೆಯರ್. ನಿರ್ಮಾಪಕ ಸಿ.ಆರ್.ಮನೋಹರ್. ಆದರೆ ಇವರೆಲ್ಲರನ್ನೂ ಮೀರಿದ ಇನ್ನೊಬ್ಬ ಹೀರೋ ಚಿತ್ರದಲ್ಲಿದ್ದಾರೆ. ಅದು ಬೇರ್ಯಾರು ಅಲ್ಲ, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ.

    ರೇಮೋಫೇಮೋ.. ಹಾಡು ಪಾರ್ಟಿಗಳಿಗೆ, ಕ್ರೇಜ್‍ಗೆ ಹೇಳಿ ಮಾಡಿಸಿದಂತಿದೆ. ಕನ್ನಡಕ್ಕೆ ಹೊಸದೆನ್ನಿಸುವ ಹಾಡು ಕೊಡುವ ಕಿಕ್ಕು ಬೇರೆಯದೇ ಇದೆ.

    ಹೋದರೆ ಹೋಗು.. ಯಾರಿಗೆ ಬೇಕು.. ಹಾಡು ಭಗ್ನಪ್ರೇಮಿಗಳ ಹೃದಯಗೀತೆಯಾಗುವ ಎಲ್ಲ ಅರ್ಹತೆಗಳನ್ನೂ ಹೊಂದಿದೆ. ಇದು ಲೇಡಿಸ್ ಭಗ್ನಪ್ರೇಮಿಗಳಿಗಾಗಿ..

    ನಿನದೇ ನಿನದೇ ಹಾಡಂತೂ.. ಕ್ಲಾಸಿಕಲ್ ಮತ್ತು ರ್ಯಾಪ್ ಎರಡನ್ನೂ ಮಿಕ್ಸ್ ಮಾಡಿರುವ ಹಾಡು. ಶಾಸ್ತ್ರೀಯ ಸಂಗೀತದಲ್ಲಿ ರ್ಯಾಪ್ ಸಾಂಗ್ ಮಾಡೋದು ಸಾಧ್ಯವೇ ಎಂದು ಅಚ್ಚರಿ ಹುಟ್ಟಿಸುತ್ತದೆ.

    ತೆರೆಯೋ ಕೋಟಿ.. ಚಂದಿರ ಒಂಟಿ.. ಇದು ಯುವ ಪುರುಷ ಭಗ್ನಪ್ರೇಮಿಗಳಿಗಾಗಿ..

    ಚೆಂದದ ಹಾಡುಗಳ ಮೂಲಕವೇ ಕಥೆ ಹೇಳೋದು ಪವನ್ ಒಡೆಯರ್ ಸ್ಟೈಲ್. ಹಾಡುಗಳನ್ನು ಚೆಂದ ಚೆಂದವಾಗಿ ಕಟ್ಟಿ ಕಒಟ್ಟಿದ್ದಾರೆ ಪವನ್ ಒಡೆಯರ್. ಇಶಾನ್-ಆಶಿಕಾ ರಂಗನಾಥ್ ಮುದ್ದು ಮುದ್ದು ಮುಖದಲ್ಲಿ ಭಾವನೆಗಳನ್ನೂ ಹೊರಹಾಕಿದ್ದಾರೆ. ಸಿನಿಮಾ ನಾಳೆ ರಿಲೀಸ್.

  • ರೇಮೋ ರೇವಂತ್`ಗೆ ಡೈರೆಕ್ಟರ್ಸ್ ರೆಡಿ

    ರೇಮೋ ರೇವಂತ್`ಗೆ ಡೈರೆಕ್ಟರ್ಸ್ ರೆಡಿ

    ಪವನ್ ಒಡೆಯರ್ ಮತ್ತು ಇಶಾನ್ ಕಾಂಬಿನೇಶನ್ ನಲ್ಲಿ ಬರ್ತಿರುವ ರೆಮೋ ಸೌಂಡ್ ಸಿಕ್ಕಾಪಟ್ಟೆ ಜೋರಾಗಿದೆ. ನವೆಂಬರ್ 25ರಂದು ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಸಿನಿಮಾ ಬಿಡುಗಡೆಗೂ ಮುನ್ನವೇ ನಾಯಕ ನಟ ಇಶಾನ್ ಗೆ ಸ್ಟಾರ್ ನಿರ್ದೇಶಕರಿಂದ ಆಫರ್ ಮೇಲೆ ಆಫರ್ ಬರ್ತಿರುವುದು ವಿಶೇಷ. ಹ್ಯಾಂಡ್ಸಮ್ ಹಂಕ್ ಇಶಾನ್ ನಟಿಸಿರುವ ರೆಮೋ ಹಾಡು, ಟೀಸರ್, ಟ್ರೇಲರ್ ಎಲ್ಲವನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಆದ್ರೆ ಅದಕ್ಕೂ ಮಿಗಿಲಾಗಿ ನಾಯಕ ನಟ ಇಶಾನ್ ನಟನೆ, ಲುಕ್, ಪರ್ಸನಾಲಿಟಿ, ಸ್ಕ್ರೀನ್ ಅಪಿಯರೆನ್ಸ್ ಎಲ್ಲ ಪ್ರೇಕ್ಷಕರು ಹಾಗೂ ಸ್ಟಾರ್ ನಿರ್ದೇಶಕರನ್ನು ಇಂಪ್ರೆಸ್ ಮಾಡಿದೆ.

    ಜೇಮ್ಸ್ ಖ್ಯಾತಿಯ ಚೇತನ್ ಕುಮಾರ್ ಇಶಾನ್ ಜೊತೆ ಈಗಾಗಲೇ ಹೊಸ ಸಿನಿಮಾ ಘೋಷಿಸಿದ್ದಾರೆ. ಭಜರಂಗಿ ಖ್ಯಾತಿಯ ಎ ಹರ್ಷ, ರ್ಯಾಂಬೋ ಖ್ಯಾತಿಯ ಅನಿಲ್ ಹಾಗೂ ಯುವ ರಾಜ್ ಕುಮಾರ್ ಮೊದಲಸಿನಿಮಾ ಘೋಷಿಸಿದ್ದ ಪುನೀತ್ ರುದ್ರನಾಗ್ ಇಶಾನ್ ಜೊತೆ ಸಿನಿಮಾ ಮಾಡಲು ರೆಡಿಯಾಗಿದ್ದಾರೆ. ಈ ಬಗ್ಗೆ ನಾಯಕ ಇಶಾನ್ ಜೊತೆ ಒಂದು ಸುತ್ತಿನ ಮಾತುಕತೆಯನ್ನು ನಡೆಸಿದ್ದಾರಂತೆ.  ರೆಮೋ ಬಿಡುಗಡೆಯ ಮುನ್ನವೇ ಇಷ್ಟೊಂದು ನಿರ್ದೇಶಕರನ್ನು ಇಂಪ್ರೆಸ್ ಮಾಡಿರುವ ಇಶಾನ್, ಭರವಸೆಯ ನಾಯಕ ನಟನಾಗಿ ಹೊರಹೊಮ್ಮೋ ಸೂಚನೆ ಕೊಟ್ಟಿದ್ದಾರೆ.

    ಪವನ್ಒಡೆಯರ್ನಿರ್ದೇಶನದ ಮ್ಯೂಸಿಕಲ್ ಲವ್ ಸ್ಟೋರಿಯಲ್ಲಿ ಇಶಾನ್ ಹೀರೋ. ಆಶಿಕಾ ರಂಗನಾಥ್ ನಾಯಕಿ. ಸಿ ಆರ್ಮನೋಹರ್ ನಿರ್ಮಾಣದ ಈ ಚಿತ್ರದಲ್ಲಿ ಬಹುಭಾಷಾ ನಟ ಶರತ್ಕುಮಾರ್, ರಾಜೇಶ್ನಟರಂಗ, ಮಧು ಶಾ ನಟಿಸಿದ್ದಾರೆ. ಅರ್ಜುನ್ಜನ್ಯಾ ಸಂಗೀತವಿದೆ.

  • ರೇವಂತ್ ಮೋಹನ ಲವ್ ಸ್ಟೋರಿ ಹೇಗಿದೆ?

    ರೇವಂತ್ ಮೋಹನ ಲವ್ ಸ್ಟೋರಿ ಹೇಗಿದೆ?

    ರೇವಂತ್ ದೇಶಪಾಂಡೆ. ಆಸೆ, ಆಕಾಂಕ್ಷೆ, ಚಟಗಳೇ ತುಂಬಿಕೊಂಡಿರೋ ಕೋಟ್ಯಧಿಪತಿಯ ಮಗ. ಮ್ಯೂಸಿಕ್ ಜಗತ್ತಿನಲ್ಲಿ ವಿಹರಿಸೋ ಈತನಿಗೆ ಅಪ್ಪ ಅಂದ್ರೇನೇ ಆಗಲ್ಲ. ಆತನ ಭಾವನೆಗಳಿಗೆ ತದ್ವಿರುದ್ಧವಾಗಿ ಹುಡುಗಿ ಮೋಹನ. ಸಂಪ್ರದಾಯಸ್ಥರ ಮನೆಯ ಶಾಸ್ತ್ರೀಯ ಸಂಗೀತ ಕಲಿತ ಹುಡುಗಿ. ಇಬ್ಬರಿಗೂ ಪ್ರೀತಿಯಾಗುತ್ತೆ. ಮೋಹವಾಗುತ್ತೆ. ಅನುಮಾನ ಮೂಡುತ್ತೆ. ಪ್ರೀತಿ ದ್ವೇಷವಾಗುತ್ತೆ. ರಾಕ್ ಸ್ಟಾರ್ ಮ್ಯೂಸಿಕ್ ಕಿವಿಯಲ್ಲಿ ಗುಂಯ್ ಅಂತಿರುತ್ತೆ. ಹಾಡುಗಳು ರೋಮಾಂಚಕ.. ಮನಮೋಹಕ.. ಕಣ್ಣು ತಂಪು ತಂಪು ಕೂಲ್ ಕೂಲ್. ಪವನ್ ಒಡೆಯರ್ ಮತ್ತೊಂದು ಪ್ರೇಮಕಥೆಯಲ್ಲಿ ಗೆದ್ದಿರೋದು ಸಾಬೀತಾಗುತ್ತೆ.

    ಇಶಾನ್ ಸಖತ್ ಕಾನ್ಫಿಡೆನ್ಸ್‍ನಲ್ಲಿ ನಟಿಸಿದ್ದಾರೆ. ಆಶಿಕಾ ಮುದ್ದು ಮುದ್ದು ಚುಟುಚುಟು. ಇವರಿಬ್ಬರ ಲವ್ ಸ್ಟೋರಿಯಷ್ಟೇ ಅಲ್ಲ, ತಂದೆ ತಾಯಂದಿರ ವಾತ್ಸಲ್ಯದ ಕಥೆಯೂ ಚಿತ್ರದಲ್ಲಿದೆ. ನೋಡುಗರ ಕಣ್ಣನ್ನು ಪವನ್ ಒಡೆಯರ್ ಒದ್ದೆ ಮಾಡಿಸುತ್ತಾರೆ. ಎಲ್ಲ ಮೆಲೋಡ್ರಾಮಗಳ ನಡುವೆ ರಿಯಾಲಿಟಿಗೂ ಹತ್ತಿರದಲ್ಲಿರೋ ಸಿನಿಮಾ ಪ್ರೇಕ್ಷಕರಿಗೆ ಇಷ್ಟವಾಗಿದೆ. ಅದರಲ್ಲೂ ಯುವ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಅಂದಹಾಗೆ ಚಿತ್ರದ ಇನ್ನೊಬ್ಬ ಹೀರೋ ಅರ್ಜುನ್ ಜನ್ಯ. ಹಾಡುಗಳು ಮೋಡಿ ಮಾಡುತ್ತವೆ. ಸಿ.ಆರ್.ಮನೋಹರ್ ಅವರ ಕನಸಿಗೆ ಪವನ್ ಒಡೆಯರ್, ಅರ್ಜುನ್ ಜನ್ಯ, ಇಶಾನ್ ಹಾಗೂ ಆಶಿಕಾ ಜೀವ ತಂದುಕೊಟ್ಟಿದ್ದಾರೆ.