` sp balasubramanyam - chitraloka.com | Kannada Movie News, Reviews | Image

sp balasubramanyam

  • Illayaraja Notice to SPB

    SP Balasubramanyam Illayaraja Image

    Top Indian legendary singer SP Balasubramanya has received legal notice from legendary Music director Ilayaraja asking him not to sing his composed movie songs in the concert without his permission. 

    Here is what SP Balasubramanyam has written in his facebook.

    Dear all, Greetings from US. Had great shows in Seattle and LA last weekend. Grateful for the love you all showered upon us and the profesdional way the organizers conducted the shows.

    Couple of days back, an Attorney representing Shri.Iliaya Raja, sent legal notices to me, Smt.Chithra, Charan, organisers of the concerts in different cities and the managements of all the venues, which says that we are not supposed to perform compositions of Shri.Iliayaraja without his permission, if so, it is breaking the copyright law and have to pay huge financial penalities and face legal action. Let me say, I am ignorant of these legalities. 

    My Son designed this world tour and wekick started this SPB50 conncert tour in August in Toranto, then we performed in Russia, Srilanka, Malaysia, Singapore, Dubai and did lots of shows in India too. I did not get any feelers from Shri. Raja's office at that time. I dont know why now when we started our US tour. As I said earlier, I am ignorant of the law. If it is a law, so be it and I obey it.

    In these circumstances, our troupe can not perform Isaijnani's compositions from to day. But the show should happen.By God's grace I have sung lots of other composer's songs too which we will present. Hope you all will bless our concerts as usual.

    I am always grateful for your love and affection.

    I only request you all not to have any harsh opinions and discussions regarding this. If this is the design of God, I obey it with reverence. 

    Sarvejanah Sukhinobhavanthu.

     

  • ಇದಕ್ಕಿಂತ ದೊಡ್ಡ ದುರಂತವನ್ನು ನನ್ನ ಜೀವನದಲ್ಲಿ ನೋಡಲಾರೆ - ಹಂಸಲೇಖ

    Hamsalekha's Expresses Extreme Grief Over SPB's Death

    ಹಂಸಲೇಖ ಮತ್ತು ಎಸ್‍ಪಿಬಿ ಅವರದ್ದು ಜುಗಲ್‍ಬಂದಿ ಜೀವನ. ಹಂಸಲೇಖರ ಶ್ರೇಷ್ಟ ಗೀತೆಗಳಿಗೆ ಜೀವ ತುಂಬಿದವರು ಇದೇ ಎಸ್‍ಪಿಬಿ. ಹಂಸಲೇಖ ಅವರಿಗೆ ಕನ್ನಡದಲ್ಲಿ ರಾಷ್ಟ್ರಪ್ರಶಸ್ತಿ ಪಡೆಯಬೇಕು. ಆ ಪ್ರಶಸ್ತಿ ಸಮಾರಂಭಕ್ಕೆ ರಫಿ ಅವರು ಧರಿಸುತ್ತಿದ್ದಂತ ಕೋಟು ಧರಿಸಿ ಹೋಗಿ ಪ್ರಶಸ್ತಿ ಸ್ವೀಕರಿಸಬೇಕು ಎಂಬ ಕನಸಿತ್ತು. ಆ ಕನಸನ್ನು ನನಸು ಮಾಡಿದವರು ಹಂಸಲೇಖ.

    ಗಾನಯೋಗಿ ಪಂಚಕ್ಷರಿ ಗವಾಯಿ ಚಿತ್ರಕ್ಕೆ ಎಸ್‍ಪಿಬಿ ರಾಷ್ಟ್ರಪ್ರಶಸ್ತಿ ಪಡೆದರು. ಆ ದಿನ ಹೇಳಿದಂತೆಯೇ ರಫಿ ಧರಿಸುತ್ತಿದ್ದ ಮಾದರಿಯ ಕೋಟನ್ನೇ ಧರಿಸಿದ್ದರು. ಆರಂಭದಲ್ಲಿ ಅಷ್ಟು ದೊಡ್ಡ ಸಾಧಕನ ಹಾಡುಗಳನ್ನು ಹಾಡುವ ಶಕ್ತಿ ನನ್ನಲ್ಲಿ ಇಲ್ಲ ಎಂದಿದ್ದರಂತೆ ಎಸ್‍ಪಿಬಿ. ಸತತ 6 ತಿಂಗಳ ಪ್ರಯತ್ನದ ನಂತರವೂ ಎಸ್‍ಪಿಬಿ ಒಪ್ಪದೇ ಹೋದಾಗ ಹರಿಹರನ್ ಅವರಿಂದ ಹಾಡಿಸೋಣ ಎಂದುಕೊಂಡು ನಿರ್ಮಾಪಕರ ಬಳಿ ಹೇಳಿದ್ದರಂತೆ ಹಂಸಲೇಖ.

    ನಿರ್ಮಾಪಕ ಬಂಗಾರೇಶ್ ಅವರು ಹರಿಹರಾನ ಕರ್ಕೊಂಡ್ ಬರ್ತೀರೋ.. ದಾವಣಗೆರೆಯನ್ನೇ ಕರ್ಕೊಂಡ್ ಬರ್ತೀರೋ ಗೊತ್ತಿಲ್ಲ. ಈ ಚಿತ್ರದಲ್ಲಿ ಎಸ್‍ಪಿಬಿ ಅವರು ಹಾಡಲೇಬೇಕು. ಅವರನ್ನು ಹೇಗಾದರೂ ಮಾಡಿ ಒಪ್ಪಿಸುವ ಜವಾಬ್ದಾರಿ ನಿಮ್ಮದು ಎಂದರಂತೆ. ಮತ್ತೊಮ್ಮೆ ಎಸ್‍ಪಿಬಿ ಅವರನ್ನು ಭೇಟಿ ಮಾಡಿ ಒತ್ತಾಯ ಮಾಡಿದಾಗ ಎಸ್‍ಪಿಬಿ, ಹಂಸಲೇಖ ಅವರಿಗೆ ಹಾಡುಗಳನ್ನು ಕೇಳಿಸಿದರಂತೆ.

    ಹಂಸಲೇಖ ಗವಾಯಿಗಳ ಚಿತ್ರಕ್ಕೆ ಸಂಯೋಜಿಸಿ ಕಳಿಸಿದ್ದ ಅಷ್ಟೂ ಹಾಡುಗಳನ್ನು 50 ಬಾರಿ ಹಾಡಿ ರೆಕಾರ್ಡ್ ಮಾಡಿದ್ದರಂತೆ ಎಸ್‍ಪಿಬಿ. ಕೊನೆಗೆ ಹಂಸಲೇಖ ಅವರನ್ನು ಸ್ಟುಡಿಯೋದಲ್ಲಿ ನೀವು ಇರಬಾರದು. ನೀವೇನಾದರೂ ದೋಷಗಳನ್ನು ಎತ್ತಿ ತೋರಿಸಿದರೆ ನನಗೆ ಕಷ್ಟವಾಗುತ್ತೆ. ಹಾಡು ಮುಗಿದ ನಂತರವೇ ನಿಮ್ಮ ಅಭಿಪ್ರಾಯ ಹೇಳಿ ಎಂದು ರೆಕಾರ್ಡಿಂಗ್ ಸ್ಟುಡಿಯೋಗೂ ಬಿಟ್ಟುಕೊಂಡಿರಲಿಲ್ಲವಂತೆ ಎಸ್‍ಪಿಬಿ. ಅವರಿಬ್ಬರ ಪ್ರೀತಿ, ಬಾಂಧವ್ಯ ಹಾಗಿತ್ತು.

    ನಾನು ಸ್ವಾತಂತ್ರ್ಯ ಚಳವಳಿ ಕಂಡವನಲ್ಲ. ಗಾಂಧಿಯನ್ನು ನೋಡಿದವನಲ್ಲ. ಆದರೆ ಜೆಪಿ ಚಳವಳಿ ನೋಡಿದವನು. ಮಹಾಯುದ್ಧಗಳನ್ನು ನೋಡಿದವನಲ್ಲ. ಆದರೆ ಈಗ ಬಂದಿರೋ ಕೊರೊನಾ ಮಹಾಯುದ್ಧಕ್ಕಿಂತ ಭೀಕರವಾಗಿದೆ. ನಾನು ನನ್ನ ಈ ಜನ್ಮದಲ್ಲಿ ನೋಡಬಾರದು ಎಂದುಕೊಂಡಿದ್ದುದು ಎಸ್‍ಪಿಬಿ ನಿಧನ. ಅದನ್ನೂ ನೋಡಿಬಿಟ್ಟೆ. ಇದಕ್ಕಿಂತ ದೊಡ್ಡ ದುರಂತವನ್ನು ನಾನು ನೋಡೋಕೆ ಸಾಧ್ಯವಿಲ್ಲ ಎಂದಿದ್ದಾರೆ ಹಂಸ.

  • ಎಸ್‍ಪಿಬಿ ಈಸ್ ಬ್ಯಾಕ್ - SPB IS BACK

    spb recovering

    ಸತತ 21 ದಿನಗಳ ಬಳಿಕ ಎಸ್‍ಪಿ ಬಾಲಸುಬ್ರಹ್ಮಣ್ಯಂ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಚೆನ್ನೈನ ಎಂಜಿಎಂ ಹೆಲ್ತ್‍ಕೇರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರೋ ಎಸ್‍ಪಿಬಿ ಅವರಿಗೆ ಪ್ರಜ್ಞೆ ಬಂದಿದೆ. ವೆಂಟಿಲೇಟರ್ ಮತ್ತು ಇಸಿಎಂಒ ವ್ಯವಸ್ಥೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ.

    ಮೊನ್ನೆಗಿಂತ ಹೆಚ್ಚು ಸುಧಾರಿತರಾಗಿದ್ದಾರೆ. ಅವರ ಶ್ವಾಸಕೋಶದಲ್ಲಿ ಸುಧಾರಣೆಯಾಗಿದೆ. ಅಷ್ಟೇ ಅಲ್ಲ, ಹಾಡನ್ನು ಕೇಳಿಕೊಂಡು ಅದನ್ನು ಹಾಡಲು ಪ್ರಯತ್ನ ಪಟ್ಟಿದ್ದಾರೆ. ಬರೆಯಲು ಯತ್ನಿಸುತ್ತಿದ್ದಾರೆ ಎಂದು ಎಸ್‍ಪಿ ಚರಣ್ ತಿಳಿಸಿದ್ದಾರೆ. 

  • ಎಸ್‍ಪಿಬಿ ಗುಣಮುಖರಾಗುವಂತೆ ಚಿತ್ರರಂಗದ ಸಾಮೂಹಿಕ ಪ್ರಾರ್ಥನೆ

    sp balasubramanyam image

    ಹಿರಿಯ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಗುಣಮುಖರಾಗಲೆಂದು ದೇಶಾದ್ಯಂತ ಕೋಟ್ಯಂತರ ಹೃದಯಗಳು ಹಾರೈಸುತ್ತಿವೆ. ಸೂಪರ್ ಸ್ಟಾರ್ ರಜನಿಕಾಂತ್, ಮೆಗಾಸ್ಟಾರ್ ಚಿರಂಜೀವಿ, ಸಂಗೀತ ಮಾಂತ್ರಿಕ ಇಳಯರಾಜಾ ಸೇರಿದಂತೆ ಚಿತ್ರರಂಗದ ಹಿರಿ ಕಿರಿಯ ಕಲಾವಿದರು, ತಂತ್ರಜ್ಞರು, ಗಾಯಕರು ಎಸ್‍ಪಿಬಿಗಾಗಿ ಪ್ರಾರ್ಥಿಸುತ್ತಿದ್ದಾರೆ.

    ಇದೇ ವೇಳೆ ಚಿತ್ರರಂಗದವರೆಲ್ಲ ಸೇರಿ ಏಕಕಾಲದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲು ನಿರ್ಧರಿಸಿದ್ದಾರೆ. ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಚೇತರಿಕೆಗಾಗಿ ಪ್ರಾರ್ಥಿಸಿ ಇಂದು (ಗುರುವಾರ) ಸಂಜೆ 6 ಗಂಟೆಗೆ ಮನೆ ಮನೆಗಳಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಯಲಿದೆ.

    you_tube_chitraloka1.gif

    ಭಾರತದಲ್ಲಿ ಸಂಜೆ 6 ಗಂಟೆಯಾದರೆ, ಅಮೆರಿಕದಲ್ಲಿ ಬೆಳಗ್ಗೆ 8.30 ಹಾಗೂ ದುಬೈನಲ್ಲಿ ಮಧ್ಯಾಹ್ನ 4.30ಕ್ಕೆ ಸಾಮೂಹಿಕವಾಗಿ ಮನೆ ಮನೆಗಳಲ್ಲಿಯೇ ಪ್ರಾರ್ಥನೆ ನಡೆಯಲಿದೆ.

    ಬೇಗ ಗುಣಮುಖರಾಗಿ ಬನ್ನಿ ಎಸ್‍ಪಿಬಿ ಸರ್..

  • ಎಸ್‍ಪಿಬಿಗೆ ಕೊರೊನಾ : ಮಾಳವಿಕಾ ಮೇಲೇಕೆ ಅನುಮಾನ..?

    singer malavika denies rumors of infecting spb with corona

    ಎಸ್.ಪಿ.ಬಾಲಸುಬ್ರಹ್ಮಣ್ಯಂ ಕಳೆದ 20 ದಿನಗಳಿಂದ ಕೊರೊನಾ ಪೇಷೆಂಟ್ ಆಗಿ ಚೆನ್ನೈ ಆಸ್ಪತ್ರೆಯಲ್ಲಿದ್ದಾರೆ. ಕೊರೊನಾ ನೆಗೆಟಿವ್ ಬಂದಿದೆ ಎಂದು ಕಲ್ಯಾಣ್ ಹೇಳಿದರೆ, ಇಲ್ಲ, ಅದೆಲ್ಲ ರೂಮರ್ಸ್ ಎಂದಿದ್ದಾರೆ ಪುತ್ರ ಚರಣ್. ಇದರ ನಡುವೆ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿರೋದು ಗಾಯಕಿ ಮಾಳವಿಕಾ.

    ಕೊರೊನಾ ಪಾಸಿಟಿವ್ ಬರೋಕೂ ಮುನ್ನ ಎಸ್‍ಪಿಬಿ ಹೈದರಾಬಾದ್‍ನಲ್ಲಿ ಟಿವಿ ಶೋನಲ್ಲಿ ಭಾಗವಹಿಸಿದ್ದರು. ಅಲ್ಲಿ ಗಾಯಕಿ ಮಾಳವಿಕಾ ಕೂಡಾ ಇದ್ದರು. ಈಗ ಮಾಳವಿಕಾ ಕೂಡಾ ಕೊರೊನಾ ಪೇಷೆಂಟ್. ಹೀಗಾಗಿ ಮಾಳವಿಕಾ ಅವರಿಂದಲೇ ಎಸ್‍ಪಿಬಿಗೆ ಕೊರೊನಾ ಬಂದಿದೆ ಅನ್ನೋದು ಅಭಿಮಾನಿಗಳ ಆಕ್ರೋಶ. ಅದೆಲ್ಲವನ್ನೂ ಅಭಿಮಾನಿಗಳು ಮಾಳವಿಕಾ ಮೇಲೆ ಹಾಕಿದ್ದಾರೆ. ಇದಕ್ಕೆ ಸ್ವತಃ ಮಾಳವಿಕಾ ಸ್ಪಷ್ಟನೆ ಕೊಟ್ಟಿದ್ದಾರೆ.

    ಎಸ್‍ಪಿಬಿಯವರಿಗೆ ಪಾಸಿಟಿವ್ ಬಂದಿದ್ದು ಆಗಸ್ಟ್ 5ರಂದು. ನನಗೆ ಪಾಸಿಟಿವ್ ಬಂದಿದ್ದು ಆಗಸ್ಟ್ 8ಕ್ಕೆ. ಎಸ್‍ಪಿಬಿಯವರಿಗೆ ಪಾಸಿಟಿವ್ ಎಂದು ಗೊತ್ತಾದ ಮೇಲೆ ನಾನು ಪರೀಕ್ಷೆ ಮಾಡಿಸಿದ್ದು, ನನಗೆ ಪಾಸಿಟಿವ್ ಬಂತು. ಅದಾದ ಮೇಲೆ ಮನೆಯಲ್ಲಿದ್ದವರಿಗೆಲ್ಲ ಪರೀಕ್ಷೆ ಮಾಡಿದಾಗ ನನ್ನ ಅಪ್ಪ, ಅಮ್ಮ, ಮಗಳಿಗೆ ಪಾಸಿಟಿವ್ ಇದೆ ಅನ್ನೋದು ಗೊತ್ತಾಯ್ತು. ಪತಿಗೆ ನೆಗೆಟಿವ್ ಬಂತು ಎಂದು ಮಾಹಿತಿ ನೀಡಿದ್ದಾರೆ ಮಾಳವಿಕಾ. ಅಷ್ಟೇ ಅಲ್ಲ, ಸುಳ್ಳು ಸುದ್ದಿ ಹಬ್ಬಿಸಿದವರ ವಿರುದ್ಧ ಪೊಲೀಸರಿಗೆ ದೂರು ನೀಡುವುದಾಗಿಯೂ ಎಚ್ಚರಿಸಿದ್ದಾರೆ.

  • ಐಸಿಯುನಲ್ಲಿ ಎಸ್‍ಪಿಬಿ

    spb recovering, still in icu

    ಹಿರಿಯ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ದೇಹಸ್ಥಿತಿ ಗಂಭೀರವಾಗಿದೆ. ಆಗಸ್ಟ್ 5ರಂದು ಕೊರೊನಾ ಪಾಸಿಟಿವ್ ಬಂದ ನಂತರ ಎಸ್‍ಪಿಬಿ ಆಸ್ಪತ್ರೆಗೆ ಶಿಫ್ಟ್ ಆಗಿದ್ದರು. ಚೆನ್ನೈನ ಎಂಜಿಎಂ ಹೆಲ್ತ್‍ಕೇರ್‍ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎಸ್‍ಪಿಬಿ ಅವರಿಗೆ ಉಸಿರಾಟದ ವ್ಯವಸ್ಥೆ ಎದುರಾದ್ದರಿಂದ ಅವರಿಗೆ ಕೃತಕ ಉಸಿರಾಟದ ವ್ಯವಸ್ಥೆ ಮಾಡಲಾಗಿದೆ.

    ಸದ್ಯಕ್ಕೆ ಐಸಿಯುನಲ್ಲಿರುವ ಎಸ್‍ಪಿಬಿ, ಹಾಸಿಗೆಯಿಂದಲೇ ಗೆಲುವಿನ ಚಿಹ್ನೆ ತೋರಿಸಿ, ಇದನ್ನೂ ಗೆದ್ದು ಬರುತ್ತೇನೆ ಎಂಬ ಸಂದೇಶ ನೀಡಿದ್ದಾರೆ. ಚಿತ್ರೋದ್ಯಮದ ಗೆಳೆಯರು, ಲಕ್ಷಾಂತರ ಅಭಿಮಾನಿಗಳು ದೇಶದಾದ್ಯಂತ ಎಸ್‍ಪಿಬಿ ಅವರ ಚೇತರಿಕೆಗಾಗಿ ಪ್ರಾರ್ಥಿಸುತ್ತಿದ್ದಾರೆ. ಎಸ್‍ಪಿಬಿ ಶೀಘ್ರ ಗುಣಮುಖರಾಗಿ ಬರಲಿ..

  • ಕೊರೊನಾ ಒದ್ದೋಡಿಸಿದ ಎಸ್‍ಪಿಬಿ ಕಾಯ್ತಿರೋದು ಅದಕ್ಕೆ..

    spb health updates

    sಒಂದು ತಿಂಗಳಿಗೂ ಹೆಚ್ಚು ಕಾಲ ಕಾಡಿದ ಕೊರೊನಾ ವೈರಸ್‍ನ್ನು ಎಸ್.ಪಿ.ಬಾಲಸುಬ್ರಹ್ಮಣ್ಯಂ ಕೊನೆಗೂ ಗೆದ್ದಿದ್ದಾರೆ. ಎಸ್‍ಪಿಬಿ ಅವರಲ್ಲಿದ್ದ ಆತ್ಮವಿಶ್ವಾಸ, ವೈದ್ಯರ ಅವಿರತ ಪರಿಶ್ರಮ ಹಾಗೂ ಕೋಟಿ ಕೋಟಿ ಹೃದಯಗಳ ಪ್ರಾರ್ಥನೆ ಕೊನೆಗೂ ಫಲಿಸಿದೆ. ಎಸ್‍ಪಿಬಿ ಅವರ ಹೊಸ ಕೊರೊನಾ ಟೆಸ್ಟ್ ರಿಪೋರ್ಟ್ ನೆಗೆಟಿವ್ ಬಂದಿದೆ.

    ಕೊರೊನಾ ನೆಗೆಟಿವ್ ಬಂದಿದ್ದರೂ, ಅವರ ಶ್ವಾಸಕೋಶಗಳು ಮಾಮೂಲಿ ಸ್ಥಿತಿಯಲ್ಲಿಲ್ಲ. ಹೀಗಾಗಿ ಶ್ವಾಸಕೋಶಗಳು ಸರಿಹೋಗುವವರೆಗೂ ಅವರನ್ನು ತೀವ್ರ ನಿಗಾ ಘಟಕದಲ್ಲಿಯೇ ಇಟ್ಟು ಚಿಕಿತ್ಸೆ ನೀಡಲಿದ್ದೇವೆ. ಎಕ್ಮೋ ರಕ್ಷಾಕವಚ ಕಂಟಿನ್ಯೂ ಆಗಲಿದೆ ಎಂದು ತಿಳಿಸಿದ್ದಾರೆ ಎಸ್‍ಪಿಬಿ ಪುತ್ರ ಚರಣ್. ಇತ್ತೀಚೆಗೆ ಎಸ್‍ಪಿಬಿ ತಮ್ಮ ವಿವಾಹ ವಾರ್ಷಿಕೋತ್ಸವವನ್ನೂ ಆಸ್ಪತ್ರೆಯಲ್ಲೇ ಸೆಲಬ್ರೇಟ್ ಮಾಡಿದ್ದರು.

    ಸದ್ಯಕ್ಕೆ ಬೆಡ್ ಮೇಲೇ ಬರವಣಿಗೆ, ಓದು, ಟೆನ್ನಿಸ್ ಮ್ಯಾಚ್ ನೋಡುತ್ತಿರೋ ಎಸ್‍ಪಿಬಿ ಕಾಯ್ತಿರೋದು ಐಪಿಎಲ್ ಟೂರ್ನಿಗೆ. ಎಸ್‍ಪಿಬಿಗೆ ಕ್ರಿಕೆಟ್ ಅಂದ್ರೆ ತುಂಬಾ ಇಷ್ಟ. ಹೀಗಾಗಿ ಐಪಿಎಲ್ ಶುರುವಾದರೆ ಒಂದಷ್ಟು ಹೊತ್ತು ಸಮಯ ಉಲ್ಲಾಸಿತವಾಗಿ ಕಳೆಯಲಿದೆ ಎಂಬ ನಿರೀಕ್ಷೆಯಲ್ಲಿದ್ದಾರೆ ಎಸ್‍ಪಿಬಿ.

  • ಕೊರೊನಾ ಗೆದ್ದ ಎಸ್‍ಪಿಬಿ. ಆದರೆ..

    sp balasubramanyam tests negative for corona

    ಕಳೆದ 20 ದಿನಗಳಿಂದ ಆಸ್ಪತ್ರೆಯಲ್ಲಿರೋ ಗಾನಕೋಗಿಲೆ ಎಸ್‍ಪಿ ಬಾಲ ಸುಬ್ರಹ್ಮಣ್ಯಂ ಕೊರೊನಾ ಗೆದ್ದಿದ್ದಾರೆ. 74 ವರ್ಷದ ಎಸ್‍ಪಿಬಿ ಅವರ ಕೊರೊನಾ ಟೆಸ್ಟ್ ಸತತ 19 ದಿನಗಳ ನಂತರ ನೆಗೆಟಿವ್ ಬಂದಿದೆ. ಸ್ಸೋ.. ಕೊರೊನಾದಿಂದ ಬಾಲಸುಬ್ರಹ್ಮಣ್ಯಂ ಬಚಾವ್. ಆದರೆ..

    ಬಾಲಸುಬ್ರಹ್ಮಣ್ಯಂ ಅವರ ಶ್ವಾಸಕೋಶ ಸಮಸ್ಯೆ ಇನ್ನೂ ಸಂಪೂರ್ಣ ಸರಿಹೋಗಿಲ್ಲ. ಎಸ್‍ಪಿಬಿ ಅವರಿಗೆ ಇಸಿಎಂಓ ಚಿಕಿತ್ಸೆ ಮುಂದುವರೆಸಲಾಗಿದೆ. ಇಸಿಎಂಓ ಅಂದ್ರೆ ಕೃತಕ ಉಸಿರಾಟ ವ್ಯವಸ್ಥೆ ಕಲ್ಪಿಸುವ ಸಿಸ್ಟಂ. ಸದ್ಯಕ್ಕೆ ಎಸ್‍ಪಿಬಿ ಅವರ ರಕ್ಷಾಕವಚ ಇದೇ ಇಸಿಎಂಓ.

    ಎಸ್‍ಪಿಬಿ ಅವರ ಪತ್ನಿ ಸಾವಿತ್ರಿ ಕೊರೊನಾದಿಂದ ಸಂಪೂರ್ಣ ಗುಣಮುಖರಾಗಿದ್ದು, ಡಿಸ್‍ಚಾರ್ಜ್ ಮಾಡಲಾಗಿದೆ.

  • ನಾನೆಲ್ಲಿ ಮೋದಿಯನ್ನು ಟೀಕಿಸಿದೆ : ವಿವಾದ ಸೃಷ್ಟಿಸಿದ್ದಕ್ಕೆ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅಸಮಾಧಾನ

    sp balasubramanyam upset pver modi's chnage within controversy

    ಇತ್ತೀಚೆಗೆ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ದೆಹಲಿಯಲ್ಲಿ ಚೇಂಜ್ ವಿತ್ ಮೀಟ್ ಅನ್ನೋ ಔತಣಕೂಟ ಏರ್ಪಡಿಸಿದ್ದರು. ಚಿತ್ರರಂಗದ ಸೆಲಬ್ರಿಟಿಗಳನ್ನೆಲ್ಲ ಆ ಪಾರ್ಟಿಗೆ ಕರೆಯಲಾಗಿತ್ತು. ಅಲ್ಲಿ ದಕ್ಷಿಣದ ಕಲಾವಿದರೇ ಇರಲಿಲ್ಲ ಎಂದು ಆಗಲೂ ಒಂದು ವಿರೋಧ ಕೇಳಿ ಬಂದಿತ್ತು. ಅದು ಇನ್ನೊಂದು ಮಜಲು ತಲುಪಿದ್ದು ಎಸ್.ಪಿ.ಬಾಲಸುಬ್ರಹ್ಮಣ್ಯಂ ಹೇಳಿಕೆ ನಂತರ. ಅದು ಇನ್ನೊಂದು ವಿವಾದವಾಗಿ, ಎಸ್ಪಿಬಿ ಮೋದಿ ವಿರುದ್ಧ ಗರಂ ಎಂದೆಲ್ಲ ದೊಡ್ಡ ಬ್ರೇಕಿಂಗ್ ನ್ಯೂಸ್ ಆಯ್ತು. ಈಗ ಆ ವಿವಾದದ ಬ್ರೇಕಿಂಗ್ ನ್ಯೂಸಿಗೆ ಎಸ್ಪಿಬಿ ಉತ್ತರ ಕೊಟ್ಟಿದ್ದಾರೆ.

    ‘ಇದ್ಯಾಕೆ ವಿವಾದಾವಾಯಿತೋ ಅರ್ಥವಾಗುತ್ತಿಲ್ಲ. ನೀವು ಬಳಸಿದ ಪದಗಳಿಂದ ಆ ರೀತಿ ಆಗಿದೆ. ನನ್ನ ಫೋನನ್ನು ಕಸಿದುಕೊಂಡರು, ಪ್ರಧಾನಿ ಮೋದಿ ಜತೆಗೆ ಅಸಮಾಧಾನ ವ್ಯಕ್ತಪಡಿಸಿದರು ಎಂದೆಲ್ಲ ಬರೆಯಲಾಗಿದೆ. ನಾನು ಪ್ರಧಾನ ಮಂತ್ರಿಗಳ ವಿರುದ್ಧ ಏನೂ ಹೇಳಿಯೇ ಇಲ್ಲ. ಅದೇ ರೀತಿ ಸ್ಟಾರ್‌ಗಳ ವಿರುದ್ಧವೂ ಏನೂ ಹೇಳಿಲ್ಲ. ನಾನು ಹೇಳಿದ್ದು ಇಷ್ಟೇ, ಒಳಗಡೆಗೆ ನಮ್ಮ ಫೋನ್‌ಗಳನ್ನು ಕೊಂಡೊಯ್ಯಲು ಅನುಮತಿ ನೀಡಲಿಲ್ಲ. ಕೆಲವರು ಸೆಲ್ಫಿ ತೆಗೆದುಕೊಳ್ಳುತ್ತಿದ್ದರು. ಆದರೆ ನಮಗದು ಸಾಧ್ಯವಾಗಲಿಲ್ಲ. ಅಷ್ಟೇ ನಾನು ಹೇಳಿದ್ದು’ ಎಂದಿದ್ದಾರೆ.

    ಔತಣಕೂಟದಲ್ಲಿ ಮೋದಿ ನಮ್ಮನ್ನು ಚೆನ್ನಾಗಿಯೇ ಕಂಡರು. ನನಗೆ ಸಿಗಬೇಕಾದ ಮರ್ಯಾದೆ ಸಿಕ್ಕಿದೆ ಎಂದಿದ್ದಾರೆ ಮೋದಿ. ಎಸ್ಪಿಬಿಯ ಒಂದು ಸ್ಟೇಟ್ಮೆಂಟ್ ಇಟ್ಟುಕೊಂಡು ಇಷ್ಟೆಲ್ಲ ವಿವಾದ ಸೃಷ್ಟಿಯಾಗಿದ್ದು ಹೇಗೆ..?

  • ಮೊತ್ತ ಮೊದಲ ಬಾರಿಗೆ ಕೊಟ್ಟ ಮಾತು ತಪ್ಪಿದ ಎಸ್‍ಪಿಬಿ

    SPB Broke Promise For The First Time

    ಎಸ್‍ಪಿ ಬಾಲಸುಬ್ರಹ್ಮಣ್ಯಂ ಇನ್ನಿಲ್ಲ. ವೃತ್ತಿಜೀವನದಲ್ಲಿ ಅದು ವೈಯಕ್ತಿಕವೇ ಆಗಲಿ, ವೃತ್ತಿಪರವೇ ಆಗಿರಲಿ.. ಎಸ್‍ಪಿಬಿ ಎಂದಿಗೂ ಕೊಟ್ಟ ಮಾತು ತಪ್ಪಿದವರಲ್ಲ. ಆದರೆ ಇದೇ ಮೊದಲ ಬಾರಿ ಎಸ್‍ಪಿಬಿ ಕೊಟ್ಟ ಮಾತು ತಪ್ಪಿ ನಡೆದಿದ್ದಾರೆ.

    ಆಗಸ್ಟ್ 5ರಂದು ಕೊರೊನಾ ಸೋಂಕಿನಿಂದಾಗಿ ಆಸ್ಪತ್ರೆ ಸೇರಿದ್ದ ಬಾಲಸುಬ್ರಹ್ಮಣ್ಯಂ ಆ ದಿನ ತಾವು ಸೋಂಕಿನಿಂದ ಗುಣಮುಖನಾಗಿ ಬರುತ್ತೇನೆ. ಕೊರೊನಾ ಭಯಪಡುವ ಕಾಯಿಲೆಯೇನೂ ಅಲ್ಲ ಎಂದಿದ್ದರು. ಅಫ್‍ಕೋರ್ಸ್, ಕೊರೊನಾವನ್ನೇನೋ ಎಸ್‍ಪಿಬಿ ಸೋಲಿಸಿಬಿಟ್ಟರು. ಆದರೆ.. ಶ್ವಾಸಕೋಶದ ತೊಂದರೆಯನ್ನು ಗೆಲ್ಲಲು ಸಾಧ್ಯವಾಗಲಿಲ್ಲ.

    ಎಸ್‍ಪಿಬಿ ಅವರಿಗೆ ಇಸಿಎಂಒ ಚಿಕಿತ್ಸೆ ನೀಡಲಾಗುತ್ತಿತ್ತು. ಆ ಚಿಕಿತ್ಸೆಯಲ್ಲಿ ಎಸ್‍ಪಿಬಿ ಅವರ ಮೂಳೆಗಳಿಂದ ಮಜ್ಜೆಯನ್ನು ತೆಗೆದು ಚಿಕಿತ್ಸೆ ನೀಡಬೇಕಿತ್ತು. ವೈದ್ಯರು ಮೊದಲೇ ಎಚ್ಚರಿಕೆ ನೀಡಿದ್ದರು. ಅಕಸ್ಮಾತ್ ಆ ವೇಳೆ ಮಜ್ಜೆಯ ಬದಲು ರಕ್ತ ಬಂದರೆ ಉಳಿಸೋಕೆ ಸಾಧ್ಯವಿಲ್ಲ ಎಂದಿದ್ದರು. ಕುಟುಂಬಸ್ಥರ ಬಳಿಯೂ ಅನ್ಯ ಮಾರ್ಗ ಇರಲಿಲ್ಲ. ಹೀಗಾಗಿ ಆ ಚಿಕಿತ್ಸೆಗೆ ಒಪ್ಪಿಗೆ ನೀಡಿದ್ದರು.

    ಕೋಟ್ಯಂತರ ಹೃದಯಗಳ ಪ್ರಾರ್ಥನೆ ಫಲಿಸಲಿಲ್ಲ. ಚಿಕಿತ್ಸೆಯಲ್ಲಿ ಮೂಳೆಯೊಳಗೆ ಮಜ್ಜೆಯನ್ನು ತೆಗೆಯಲು ಪ್ರಯತ್ನಿಸಿದಾಗ ಮಜ್ಜೆ ಬರಲಿಲ್ಲ. ಬಂದಿದ್ದು ರಕ್ತ. ಹೀಗಾಗಿ ಎಸ್‍ಪಿಬಿ ಅವರನ್ನು ಉಳಿಸಿಕೊಳ್ಳುವ ಕೊನೆಯ ಪ್ರಯತ್ನವೂ ವಿಫಲವಾಗಿ ಹೋಯ್ತು.

    ವಾಪಸ್ ಬರುತ್ತೇನೆ. ಅಭಿಮಾನಿಗಳೇ ಆತಂಕ ಪಡುವ ಅಗತ್ಯ ಇಲ್ಲ ಎಂದಿದ್ದ ಎಸ್‍ಪಿಬಿ, ವಾಪಸ್ ಬರಲೇ ಇಲ್ಲ. ಅಷ್ಟೇ ಅಲ್ಲ, ಸರಿರಾತ್ರಿಯಾದರೂ ಸರಿ, ಇಳಯರಾಜ ಕರೆದರೆ ಓಡೋಡಿ ಹೋಗುತ್ತಿದ್ದ ಎಸ್‍ಪಿಬಿ, ಇದೇ ಮೊದಲ ಬಾರಿಗೆ ಇಳಯರಾಜ ಕರೆದಾಗಲೂ ಎದ್ದೇಳಲಿಲ್ಲ. ಎಸ್‍ಪಿಬಿ ಮೊತ್ತ ಮೊದಲ ಬಾರಿಗೆ ಕೊಟ್ಟ ಮಾತು ತಪ್ಪಿಬಿಟ್ಟರು.

  • ವೇದ ಶಾಲೆಗೆ ಸ್ವಂತ ಮನೆ ದಾನ ಮಾಡಿದ ಎಸ್‍ಪಿಬಿ

    sp balasubramanyam donates his house to veda patala shaala

    ಎಸ್‍ಪಿ ಬಾಲಸುಬ್ರಹ್ಮಣ್ಯಂ ತಮ್ಮ ಸ್ವಂತ ಮನೆಯನ್ನೇ ವೇದ ಶಾಲೆ ನಿರ್ಮಾಣಕ್ಕೆ ದಾನ ಕೊಟ್ಟಿದ್ದಾರೆ. ಆಂಧ್ರಪ್ರದೇಶದ ನೆಲ್ಲೂರಿನಲ್ಲಿ ತಿಪ್ಪರಾಜುವಾರಿ ಅನ್ನೋ ಬೀದಿಯಿದೆ. ಆ ಬೀದಿಯಲ್ಲಿರೋ ತಮ್ಮ ಸ್ವಂತ ಮನೆಯನ್ನು ಕಂಚಿ ಮಠಕ್ಕೆ ದಾನ ಕೊಟ್ಟಿದ್ದಾರೆ ಎಸ್‍ಪಿಬಿ.

    ಕಂಚಿ ಪೀಠಾಧ್ಯಕ್ಷರಾದ ಶ್ರೀ ಜಗದ್ಗುರು ಶಂಕರ ವಿಜಯೇಂದ್ರ ಸರಸ್ವತಿ ಶಂಕರಾಚಾರ್ಯ ಸ್ವಾಮಿ ಅವರಿಗೆ ತಮ್ಮ ಮನೆಯನ್ನು ವಿಧಿವತ್ತಾಗಿ ದಾನ ಕೊಟ್ಟಿದ್ದಾರೆ. ಇನ್ನು ಮುಂದೆ ಅಲ್ಲಿ ಎಸ್‍ಪಿಬಿ ಅವರ ತಂದೆ ಎಸ್‍ಪಿ ಸಾಂಬಮೂರ್ತಿ ಹೆಸರಿನಲ್ಲಿ ಶಾಲೆ ನಡೆಯಲಿದೆ.

    ಇದು ನಾನು ಕಂಚಿ ಪೀಠಕ್ಕೆ ನೀಡುತ್ತಿರುವ ದಾನವಲ್ಲ. ಭಗವಂತನ ಸೇವೆಗೆ ಭಗವಂತನೇ ಇದನ್ನು ಸ್ವೀಕರಿಸಿದ್ದಾನೆ. ನನ್ನ ತಂದೆ ಇಲ್ಲಿಯೇ ಇದ್ದಾರೆ ಎಂದು ಭಾವಿಸುತ್ತೇನೆ ಎಂದಿದ್ದಾರೆ ಎಸ್‍ಪಿಬಿ.