` salman khan, - chitraloka.com | Kannada Movie News, Reviews | Image

salman khan,

  • ಸಲ್ಮಾನ್ ಖಾನ್ ಕನ್ನಡ ಮೇಷ್ಟ್ರು ಕಿಚ್ಚ ಸುದೀಪ್

    sudeep is salman;s kannada teacher

    ಕಿಚ್ಚ ಸುದೀಪ್ ಕನ್ನಡ ಅದ್ಭುತ. ಭಾಷೆಯ ಏರಿಳಿತ, ಉಚ್ಚಾರಣೆಯಲ್ಲಿನ ಸ್ಪಷ್ಟತೆ, ಅಲ್ಪಪ್ರಾಣ, ಮಹಾಪ್ರಾಣಗಳ ಬಳಕೆಯಲ್ಲಿನ ಲಯಬದ್ಧ ಮಾತುಗಾರಿಕೆ.. ಕಿಚ್ಚ ಸುದೀಪ್ ಅವರ ಧ್ವನಿ.. ಎಲ್ಲವೂ ಒಂದಕ್ಕೊಂದು ಮೇಳೈಸಿಬಿಟ್ಟರೆ.. ಕೇಳುವುದೊಂದು ಸೊಗಸು. ಇದೇನು ಸುದೀಪ್ ಅವರಿಗೆ ಜನ್ಮತಃ ಬಂದ ವರವಲ್ಲ. ಕಲಿತುಕೊಂಡು ಅಭ್ಯಾಸ ಮಾಡಿ ಗಳಿಸಿಕೊಂಡಿದ್ದು. ಇಂತಹ ಸುದೀಪ್ ಈಗ ಕನ್ನಡ ಮೇಷ್ಟರಾಗಿದ್ದಾರೆ. ಅದೂ ಸಲ್ಮಾನ್ ಖಾನ್‍ಗೆ.

    ದಬಾಂಗ್ 3 ಕನ್ನಡದಲ್ಲಿ ಡಬ್ ಆಗಿ ಬರುತ್ತಿದೆ. ಆ ಚಿತ್ರದಲ್ಲಿ ಚುಲ್ ಬುಲ್ ಪಾಂಡೆಯಾಗಿ ನಟಿಸಿರುವ ಸಲ್ಮಾನ್ ಕನ್ನಡದಲ್ಲಿ ಸ್ವತಃ ತಾವೇ ಡಬ್ ಮಾಡುವ ಇರಾದೆ ತೋರಿಸಿದ್ದಾರೆ. ಅಷ್ಟೇ ಅಲ್ಲ, ಸಲ್ಮಾನ್.. ಸುದೀಪ್ ಅವರ ಜೊತೆ ಕನ್ನಡದಲ್ಲಿಯೇ ಮಾತನಾಡಲು ಪ್ರಯತ್ನಿಸುತ್ತಾ, ತಪ್ಪುಗಳನ್ನು ತಿದ್ದಿಕೊಳ್ಳುತ್ತಿದ್ದಾರೆ.

    ಕನ್ನಡದಲ್ಲಿಯೇ ಡಬ್ ಮಾಡಲು ಇಷ್ಟವಿದೆ. ನಿಮ್ ಸಪೋರ್ಟ್ ಬೇಕು ಎಂದಾಗ ನಾನಂತೂ ಎಕ್ಸೈಟ್ ಆದೆ. ಅದನ್ನು ಸ್ವಾಗತಿಸುವುದು ನನ್ನ ಕೆಲಸ. ಅಲ್ಲಿಂದ ಡಬ್ಬಿಂಗ್ ಪ್ರಕ್ರಿಯೆ ಶುರುವಾಗಿದೆ. ಇಷ್ಟರಲ್ಲೇ ಕನ್ನಡ ದಬಾಂಗ್ 3ಯ ಟ್ರೇಲರ್ ಕೂಡಾ ಬರಲಿದೆ ಎಂದಿದ್ದಾರೆ ಸುದೀಪ್.

  • ಸಲ್ಮಾನ್ ಖಾನ್`ಗೆ ಸುದೀಪ್ ಡೈರೆಕ್ಷನ್..!

    ಸಲ್ಮಾನ್ ಖಾನ್`ಗೆ ಸುದೀಪ್ ಡೈರೆಕ್ಷನ್..!

    ಸದಾ ಹೊಸ ಕನಸುಗಳನ್ನು ಬೆನ್ನತ್ತಿ ಹೋಗುವ ಕಿಚ್ಚ ಸುದೀಪ್ ಈಗ ಮತ್ತೊಂದು ಹೊಸ ಚಾಲೆಂಜ್`ನ್ನು ತಮಗೆ ತಾವೇ ಹಾಕಿಕೊಂಡಿದ್ದಾರೆ. ಕೋಟಿಗೊಬ್ಬ 3 ರಿಲೀಸ್ ಆಗುತ್ತಿರುವ ನಡುವೆಯೇ ತಮ್ಮ ಹೊಸ ಕನಸಿನ ಕಥೆ ಹೇಳಿದ್ದಾರೆ. ಅದು ಸಲ್ಮಾನ್ ಖಾನ್ ಚಿತ್ರವನ್ನು ನಿರ್ದೇಶಿಸುವ ಸೆನ್ಸೇಷನಲ್ ಸುದ್ದಿ.

    ಹಿಂದಿಯಲ್ಲಿ ಸಲ್ಮಾನ್ ಖಾನ್‍ಗೆ ನಿರ್ದೇಶನ ಮಾಡುವ ಸಲುವಾಗಿಯೇ ಕಥೆ ರೆಡಿ ಮಾಡಿದ್ದಾರಂತೆ ಕಿಚ್ಚ. ಕಥೆ ಹೇಳಿದ್ದೇನೆ. ಫ್ರೆಂಡ್ ಅನ್ನೋ ಕಾರಣಕ್ಕೆ ಸಲ್ಮಾನ್ ಒಪ್ಪಿಕೊಳ್ಳಲ್ಲ. ಅವರಿಗೆ ಕಥೆ ಇಷ್ಟವಾದರೆ ಓಕೆ ಎನ್ನುತ್ತಾರೆ. ಒಪ್ಪಿಕೊಳ್ಳುತ್ತಾರೆ ಅನ್ನೋ ಭರವಸೆ ಇದೆ ಎಂದಿದ್ದಾರೆ ಸುದೀಪ್.

    ಸದ್ಯದ ಪ್ಲಾನ್ ಪ್ರಕಾರ ಸಲ್ಮಾನ್ ಒಪ್ಪಿದರೆ ಹಿಂದಿಯಲ್ಲಿ ಸಲ್ಮಾನ್ ಹಾಗೂ ಕನ್ನಡ, ತೆಲುಗು, ತಮಿಳು, ಮಲಯಾಳಂನಲ್ಲಿ ಸ್ವತಃ ಸುದೀಪ್ ನಟಿಸುವ ಸಾಧ್ಯತೆ ಇದೆ. ಸದ್ಯಕ್ಕಂತೂ ಸುದೀಪ್ ಎದುರು ನೋಡುತ್ತಿರೋದು ಕೋಟಿಗೊಬ್ಬ 3 ರಿಸಲ್ಟ್.

  • ಸಲ್ಮಾನ್ ಖಾನ್​ಗೆ ವಿಲನ್ ಆಗ್ತಾರಾ ಕಿಚ್ಚ ಸುದೀಪ್..?

    sudeep salman khan

    ಕನ್ನಡದ ಸೂಪರ್ ಸ್ಟಾರ್ ಕಿಚ್ಚ ಸುದೀಪ್​ಗೆ ಬೇರೆ ಭಾಷೆಯಲ್ಲಿ ನಟಿಸುವುದು ಹೊಸದೇನೂ ಅಲ್ಲ. ಹಿಂದಿ, ತಮಿಳು, ತೆಲುಗಿನಲ್ಲಾಗಲೇ ಕಿಚ್ಚನ ಹೆಜ್ಜೆ ಗುರುತು ಮೂಡಿದೆ. ಆದರೆ, ಈಗ ಬರುತ್ತಿರುವ ಸುದ್ದಿ ಇನ್ನೂ ಹೊಸದು. ಇದು ಬಂದಿರೋದು ಬಾಲಿವುಡ್​ನಿಂದ.    

    ಸಲ್ಮಾನ್ ಖಾನ್ ಅಭಿನಯದ ‘ಟೈಗರ್ ಜಿಂದಾ ಹೈ’ ಚಿತ್ರದಲ್ಲಿ ಸುದೀಪ್ ಖಳನಾಯಕರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅದು 2012ರಲ್ಲಿ ಬಂದಿದ್ದ ಏಕ್ ಥಾ ಟೈಗರ್ ಚಿತ್ರದ ಸೀಕ್ವೆಲ್. ಆ ಚಿತ್ರದಲ್ಲಿ ಸಲ್ಮಾನ್ ಖಾನ್, ಭಾರತದ ರಾ ಏಜೆಂಟ್ ಪಾತ್ರದಲ್ಲಿ ನಟಿಸಿದ್ದರು. ನಾಯಕಿಯಾಗಿ ಕತ್ರಿನಾ ಕೈಫ್ ಪಾಕ್ ಐಎಸ್​ಐ ಏಜೆಂಟ್ ಆಗಿ ಕಾಣಿಸಿಕೊಂಡಿದ್ದರು. ಎರಡು ಶತ್ರು ದೇಶಗಳ ಗೂಢಚಾರರು ಪ್ರೀತಿಗಾಗಿ ದೇಶವನ್ನೇ ಬಿಟ್ಟು ನಿಗೂಢವಾಗಿ ಮರೆಯಾಗುವುದರೊಂದಿಗೆ ಚಿತ್ರ ಕೊನೆಯಾಗಿತ್ತು. 

    ಈಗ ಆ ಚಿತ್ರದ ಎರಡನೇ ಭಾಗ ಸಿದ್ಧವಾಗುತ್ತಿದೆ. ಹಾಗಾದರೆ, ನಾಪತ್ತೆಯಾಗಿದ್ದ ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್​ರನ್ನು ಹುಡುಕಿಕೊಂಡು ಬರುವ ಪಾಕ್ ಐಎಸ್​ಐ ಏಜೆಂಟ್ ಆಗಿ ಸುದೀಪ್ ಕಾಣಿಸಿಕೊಳ್ಳಲಿದ್ದಾರಾ..? ಸದ್ಯಕ್ಕೆ ಇದು ಸಸ್ಪೆನ್ಸ್.ಸುದೀಪ್ ಪಾತ್ರದ ಹೆಸರು ಜಹೀರ್.

    ಚಿತ್ರಕ್ಕೆ ಸುದೀಪ್ ಅವರನ್ನೇ ಆಯ್ಕೆ ಮಾಡಿಕೊಳ್ಳುವುದರ ಹಿಂದೆ ಬಾಕ್ಸಾಫೀಸ್ ಲೆಕ್ಕಾಚಾರವೂ ಇದೆ. ದಕ್ಷಿಣದಲ್ಲಿ ಕರ್ನಾಟಕ, ತಮಿಳುನಾಡು ಹಾಗೂ ಆಂಧ್ರಪ್ರದೇಶ, ತೆಲಂಗಾಣದಲ್ಲೂ ಸುದೀಪ್ ಚಿತ್ರಗಳಿಗೆ ಡಿಮ್ಯಾಂಡ್ ಇದೆ. ಹೀಗಾಗಿ ದಕ್ಷಿಣದ ಸ್ಟಾರ್ ನಟರನ್ನು ಹಾಕಿಕೊಳ್ಳುವ ಲೆಕ್ಕಾಚಾರ ಬಾಲಿವುಡ್​ನದ್ದು. ಅದರ ಮೂಲಕ ಸುದೀಪ್ ಸ್ಟಾರ್​ಗಿರಿಯ ಲಾಭ ಪಡೆಯುವ ಬ್ಯುಸಿನೆಸ್ ಲೆಕ್ಕಾಚಾರವೂ ಇದರ ಹಿಂದಿದೆ.

    Related Articles :-

    Will Sudeep Act In Salman Khan's Tiger Zinda Hai?

  • ಸಲ್ಮಾನ್ ನೋಡೋಕೆ ಬಂದ್ರು ಸಿಎಂ ಬಿಎಸ್‌ವೈ ಪುತ್ರ ವಿಜಯೇಂದ್ರ

    cm yeddiyurappa's son meets salman khan

    ದಬಾAಗ್ 3 ಚಿತ್ರದ ಪ್ರಮೋಷನ್ ಕೆಲಸದ ಮೇಲೆ ಬೆಂಗಳೂರಿಗೆ ಬಂದಿದ್ದ ಸಲ್ಮಾನ್ ಖಾನ್ ಅವರಿಗೆ ಅಚ್ಚರಿ ಕೊಟ್ಟಿದ್ದು ಸಿಎಂ ಯಡಿಯೂರಪ್ಪ ಪುತ್ರ ವಿಜಯೇಂದ್ರ. ಮೊದಲೇ ರಾಜಕೀಯ ಬೆಳವಣಿಗೆ ಚಿತ್ರ ವಿಚಿತ್ರವಾಗಿ ನಡೆಯುತ್ತಿರುವ ಹೊತ್ತಿನಲ್ಲಿ ವಿಜಯೇಂದ್ರ ಭೇಟಿ ಕುತೂಹಲ ಹುಟ್ಟಿಸಿದ್ದು ಸತ್ಯ. ಮೊದಲೇ ಬಿಜೆಪಿಗೆ ನೆಲೆಯೇ ಇಲ್ಲದ ಮಂಡ್ಯದ ಜೆಡಿಎಸ್ ಭದ್ರಕೋಟೆಯಲ್ಲಿ ಕಮಲ ಅರಳಿಸಿರುವ ವಿಜಯೇಂದ್ರ, ಸಲ್ಮಾನ್ ಖಾನ್ ಭೇಟಿಗೆ ಕಾರಣ ಏನಿರಬಹುದು ಎಂಬ ಕುತೂಹಲಕ್ಕೆ ಚಿತ್ರತಂಡದವರೇ ಉತ್ತರ ಕೊಟ್ಟಿದ್ದಾರೆ.

    ಕಾಲೇಜು ದಿನಗಳಿಂದಲೂ ವಿಜಯೇಂದ್ರ ಅವರಿಗೆ ಸಲ್ಮಾನ್ ಚಿತ್ರಗಳೆಂದರೆ ಅಚ್ಚುಮೆಚ್ಚು. ಹೀಗಾಗಿ ಒಬ್ಬ ಅಭಿಮಾನಿಯಾಗಿ ವಿಜಯೇಂದ್ರ ಸಲ್ಮಾನ್ ಅವರನ್ನು ಭೇಟಿ ಮಾಡಿದ್ದಾರೆ ಎಂದಿದ್ದಾರೆ

  • ಸಲ್ಲು ಎದುರು ನಟಿಸುವಾಗ ಕಿಚ್ಚನಿಗೆ ತಮ್ಮ ವಿಲನ್‍ಗಳ ಕಷ್ಟ ಅರ್ಥವಾಯ್ತು..!

    sudeep couldn;t kick salman for a scene in dabaang 3

    ಕಿಚ್ಚ ಸುದೀಪ್ ಎದುರು ನಟಿಸುವಾಗ ವಿಲನ್ ಪಾತ್ರ ಮಾಡುವವರು ಸುದೀಪ್‍ಗೆ ಹೊಡೆಯುವ, ಒದೆಯುವ ದೃಶ್ಯಗಳಿದ್ದರೆ ಹಿಂದೇಟು ಹಾಕುತ್ತಾರೆ. ಅದು ಸೀನಿಯರ್ ಆಗುತ್ತಾ ಹೋದಂತೆ ಎದುರಿಸಲೇಬೇಕಾದ ಅತಿದೊಡ್ಡ ಸವಾಲು. ಶಬ್ಧವೇದಿ ಚಿತ್ರದಲ್ಲಿ ಡಾ.ರಾಜ್ ಅವರಿಗೆ ಹೊಡೆಯುವ ಸೀನ್ ಮಾಡು ಎಂದಿದ್ದಕ್ಕೆ, ಶೋಭರಾಜ್ ಎಸ್. ನಾರಾಯಣ್ ಅವರ ಜೊತೆ ಹೆಚ್ಚೂ ಕಡಿಮೆ ಜಗಳಕ್ಕೆ ಬಿದ್ದಿದ್ದನ್ನು ಚಿತ್ರರಂಗ ನೋಡಿದೆ. ಆದರೆ, ತಮ್ಮ ಎದುರು ಹಾಗೆ ಹಿಂದೇಟು ಹಾಕುವವರಿಗೆ ಏಯ್.. ಬಿಡ್ರಪ್ಪ... ಇದೆಲ್ಲ ಸಿನಿಮಾ ಕಣ್ರೋ.. ನೋ ಪ್ರಾಬ್ಲಂ.. ಎನ್ನುತ್ತಿದ್ದ ಸುದೀಪ್ ಅವರಿಗೆ ಆ ಕಷ್ಟ ಅರ್ಥವಾಗಿದ್ದು ಸಲ್ಮಾನ್ ಖಾನ್ ಎದುರು ನಟಿಸುವಾಗ.

    ನಟ ಸುದೀಪ್‍ಗೆ ಇಂಗ್ಲಿಷ್ ಸಲೀಸು.. ಹಿಂದಿ ಭಾರೀ ತುಟ್ಟಿ. ಹೀಗಾಗಿ ಡೈಲಾಗುಗಳನ್ನು ಒಟ್ಟಿಗೇ ಕೊಡಬೇಡಿ ಎಂದು ಪ್ರಭುದೇವ ಬಳಿ ಕೇಳಿಕೊಂಡಿದ್ದರಂತೆ. ಆದರೆ, ಅದಕ್ಕಿಂತ ದೊಡ್ಡ ಚಾಲೆಂಜ್ ಎದುರಾಗಿದ್ದು ಸಲ್ಮಾನ್ ಖಾನ್ ಎದೆಗೆ ಒದೆಯುವ ಸೀನ್ ಬಂದಾಗ. ಹಿಟ್ ಮಿ ಬುಡ್ಡೀ.. ಎಂದು ಸಲ್ಮಾನ್ ಹೇಳಿದರೂ ಆ ಸೀನ್ ಮಾಡುವುದು ಕಷ್ಟವಾಯ್ತಂತೆ. ಕೆಲವು ಗಂಟೆಗಳ ಕಾಲ ಚಿತ್ರೀಕರಣವನ್ನೇ ನಿಲ್ಲಿಸಿ ನಂತರ ಶೂಟ್ ಮಾಡಿದರಂತೆ.ಅದೂ ಕೆಲವು ಬದಲಾವಣೆಗಳೊಂದಿಗೆ..

    `ನನಗೆ ಆಗ ನನ್ನನ್ನು ಒದೆಯಲು ಅದೇಕೆ ನಮ್ಮ ಸಹನಟರು ಹಿಂದೇಟು ಹಾಕ್ತಾರೆ ಅನ್ನೋದು ಅರ್ಥವಾಯ್ತು' ಎಂದಿದ್ದಾರೆ ಕಿಚ್ಚ ಸುದೀಪ್. ಸದ್ಯಕ್ಕೆ ಸುದೀಪ್ ಪೈಲ್ವಾನ್ ಚಿತ್ರದ ಬಿಡುಗಡೆಯಲ್ಲಿ ಫುಲ್ ಬ್ಯುಸಿ. ಸೆಪ್ಟೆಂಬರ್ 12ರಂದು ಪೈಲ್ವಾನ್ ಜಗತ್ತಿನಾದ್ಯಂತ 3000ಕ್ಕೂ ಹೆಚ್ಚು ಥಿಯೇಟರುಗಳಲ್ಲಿ 5 ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ.ನ

  • ಸಲ್ಲು, ಕಿಚ್ಚ ಬರೀ ಮೈಲಿ ಫೈಟಿಂಗ್

    salman sudeep fight in dabang 3

    ದಬಾಂಗ್ 3 ಸಿನಿಮಾದ ಕ್ಲೈಮಾಕ್ಸ್ ಶೂಟಿಂಗ್ ಮುಗಿದಿದೆ. ಸಲ್ಮಾನ್ ಎದುರು ನೆಗೆಟಿವ್ ರೋಲ್‍ನಲ್ಲಿ ನಟಿಸಿರುವ ಕಿಚ್ಚ ಸುದೀಪ್, ಇದೇ ಮೊದಲ ಬಾರಿಗೆ ಷರ್ಟ್‍ಲೆಸ್ ಆಗಿ ಫೈಟ್ ಮಾಡಿದ್ದಾರೆ. ಸಲ್ಮಾನ್ ಖಾನ್, ಷರ್ಟ್ ತೆಗೆಯೋಕೆ ಫೇಮಸ್. ಅವರು ಬರೀ ಮೈಲಿ ಒಂದು ಸೀನ್ ಆದರೂ ಕಾಣಿಸಿಕೊಂಡರೆ ಚಿತ್ರ ಹಿಟ್ ಎನ್ನುವುದು ಬಾಲಿವುಡ್ ಮಂದಿಯ ನಂಬಿಕೆ.

    ಆದರೆ, ನಮ್ಮ ಕಿಚ್ಚ ಸುದೀಪ್‍ಗೆ ಇದು ಹೊಸದು. ಈಗ ಅವರೂ ಸಿಕ್ಸ್‍ಪ್ಯಾಕ್‍ನಲ್ಲಿರೋದ್ರಿಂದ ನೋ ಪ್ರಾಬ್ಲಂ. ಸಲ್ಮಾನ್ ಜೊತೆ ಷರ್ಟ್‍ಲೆಸ್ ಫೈಟ್ ಮಾಡುವುದನ್ನು ಯಾವತ್ತೂ ನಾನು ಆಲೋಚಿಸಿರಲಿಲ್ಲ. ಈಗ ಅದನ್ನು ಎಂಜಾಯ್ ಮಾಡುತ್ತಿದ್ದೇನೆ ಎಂದಿದ್ದಾರೆ ಸುದೀಪ್. ಪ್ರಭುದೇವ ನಿರ್ದೇಶನದ ಚಿತ್ರವಿದು.

  • ಸುಲ್ತಾನ್ ಮತ್ತು ಪೈಲ್ವಾನ್ ಜಂಘೀಕುಸ್ತಿ

    pailwan meets sultan

    ಪೈಲ್ವಾನ್ ಚಿತ್ರದೊಂದಿಗೆ ದೇಶಾದ್ಯಂತ ಸದ್ದು ಮಾಡ್ತಿದ್ದಾರೆ ಕಿಚ್ಚ ಸುದೀಪ್. ಇನ್ನು ಬಾಲಿವುಡ್ ಸುಲ್ತಾನ್, ಸಲ್ಮಾನ್ ಖಾನ್ ಕೂಡಾ ಪೈಲ್ವಾನನಾಗಿ ಅಬ್ಬರಿಸಿದ್ದವರು. ಅವರಿಬ್ಬರೂ ಈಗ ಕುಸ್ತಿಗೆ ಬಿದ್ದಿದ್ದಾರೆ. ಈ ಫೋಟೋ ಹೊರಬಿಟ್ಟಿರೋದು ಕಿಚ್ಚ ಸುದೀಪ್.

    `ಇದು ಮತ್ತೊಂದು ಪೋಸ್ಟರ್ ಅಲ್ಲ. ಸಲ್ಮಾನ್ ಖಾನ್ ತಮ್ಮ ಪ್ರೀತಿಪಾತ್ರರ ಜೊತೆ ಇರುವುದೇ ಹೀಗೆ. ನಿಮ್ಮ ಬದುಕಿನಲ್ಲಿ ನನಗೆ ಈ ಸ್ಥಾನ ನೀಡಿದ್ದಕ್ಕೆ ಧನ್ಯವಾದಗಳು ಸರ್' ಎಂದು ಬರೆದುಕೊಂಡಿದ್ದಾರೆ ಸುದೀಪ್.

    ಕಿಚ್ಚ ಸುದೀಪ್, ಪೈಲ್ವಾನ್ ಕೃಷ್ಣ ಕಾಂಬಿನೇಷನ್ನಿನ ಪೈಲ್ವಾನ್ ಚಿತ್ರಕ್ಕೆ ಸಲ್ಮಾನ್ ಖಾನ್ ಶುಭ ಕೋರಿದ್ದಾರೆ. ಸಲ್ಮಾನ್ ಖಾನ್‍ಗೂ  ಪೈಲ್ವಾನ್ ಟ್ರೇಲರ್ ಬಹಳ ಇಷ್ಟವಾಗಿದೆ. ಪೈಲ್ವಾನ್ ಸೆಪ್ಟೆಂಬರ್ 12ರಂದು ರಿಲೀಸ್ ಆಗುತ್ತಿದೆ.