` salman khan, - chitraloka.com | Kannada Movie News, Reviews | Image

salman khan,

 • ದಬಾಂಗ್ 3ಯಲ್ಲಿ ಕಿಚ್ಚನ ಪಾತ್ರ ಅಚ್ಚರಿ

  sudeep character in dabanng is special says producer

  ಕಿಚ್ಚ ಸುದೀಪ್ ನಟಿಸುವ ಚಿತ್ರ ಎಂದರೆ ಅವರ ಪಾತ್ರದ ಮೇಲೆ ಭಾರಿ ನಿರೀಕ್ಷೆ ಇರುವುದು ಸಹಜವೇ. ಸಲ್ಮಾನ್ ಖಾನ್ ಅಭಿನಯದ ದಬಾಂಗ್ 3ಯಲ್ಲಿ ಸಲ್ಲು ಜೊತೆ ನಮ್ಮ ಕಿಚ್ಚ ಇದ್ದಾರೆ ಎಂದಾಕ್ಷಣ ಕನ್ನಡಿಗರು ಥ್ರಿಲ್ಲಾಗಿದ್ದರು. ಈಗ ದಬಾಂಗ್ 3 ಚಿತ್ರದ ನಿರ್ಮಾಪಕ ಅರ್ಬಾಜ್ ಖಾನ್, ಕಿಚ್ಚನ ಫ್ಯಾನ್ಸುಗಳೆಲ್ಲ ಥ್ರಿಲ್ಲಾಗುವಂತ ಸುದ್ದಿ ಕೊಟ್ಟಿದ್ದಾರೆ.

  ದಬಾಂಗ್ 3ಯಲ್ಲಿ ಸುದೀಪ್ ಅವರದ್ದು ಸರ್‍ಪ್ರೈಸ್ ಎಲಿಮೆಂಟ್ ಎಂದಿದ್ದಾರೆ. ನಿರ್ಮಾಪಕರೇ ಸುದೀಪ್ ಸರ್‍ಪ್ರೈಸ್ ಎಲಿಮೆಂಟ್ ಎನ್ನುತ್ತಿರುವಾಗ ಅಭಿಮಾನಿಗಳ ನಿರೀಕ್ಷೆ ಯಾವ ಮಟ್ಟಕ್ಕೇರಬಹುದು..? ಕಾದು ನೋಡಿ.. ಎಂಜಾಯ್ ಮಾಡಿ.

 • ದಬಾಂಗ್ 3ಯಲ್ಲಿ ಕಿಚ್ಚನ ಹೆಸರೇನು..?

  sudeep as billy singh in dabang 3

  ದಬಾಂಗ್ 3. ಸಲ್ಮಾನ್ ಖಾನ್ ಅಭಿನಯದ ದಬಾಂಗ್ ಸೀಕ್ವೆಲ್. ಬಾಲಿವುಡ್ನ ಟ್ರೆಂಡ್ ಸೆಟ್ಟರ್ ಆಗಿರುವ ಚಿತ್ರದ 3ನೇ ಸೀಕ್ವೆಲ್ನಲ್ಲಿ ಚುಲ್ ಬುಲ್ ಪಾಂಡೆಗೆ ಕಿಚ್ಚ ಸುದೀಪ್ ವಿಲನ್. ಸುದೀಪ್ ಪಾತ್ರ ಹೇಗಿರಲಿದೆ ಅನ್ನೋದನ್ನು ಪೋಸ್ಟರ್ ಡಿಸೈನ್ ಮಾಡಿಸಿ ಬಿಟ್ಟಿದ್ದಾರೆ ಸಲ್ಮಾನ್ ಖಾನ್.

  ಚಿತ್ರದಲ್ಲಿ ಸುದೀಪ್ ಹೆಸರು ಬಿಲ್ಲಿ ಎಂದಿರಲಿದೆ ಎನ್ನುವುದು ಪೋಸ್ಟರ್ ಹೇಳ್ತಿರೋ ಕಥೆ. ವಿಲನ್ ಎಷ್ಟು ಸ್ಟ್ರಾಂಗ್ ಇರ್ತಾನೋ.. ಅಷ್ಟು ಮಜಾ ಬರಲಿದೆ ಅಂತಿದ್ದಾರೆ ಸಲ್ಮಾನ್. ವಿಲನ್ ಜೊತೆ ಪ್ರೀತಿ ಆದರೆ ಹಿಂಗೆಲ್ಲ ಆಗುತ್ತೆ ಎಂದು ಕಿಚಾಯಿಸಿದ್ದಾರೆ ಸುದೀಪ್.

  ಪೈಲ್ವಾನ್ ಕಿಚ್ಚನನ್ನು ನೋಡಿ ಬಂದಾ ನೋಡೋ ಪೈಲ್ವಾನ್ ಎಂದಿದ್ದ ಫ್ಯಾನ್ಸ್ಗೆ, ಸೈರಾದ ಅವುಕು ರಾಜನಾಗಿ ಬೇರೆಯದ್ದೇ ಅವತಾರ ತೋರಿಸಿದ್ದರು ಸುದೀಪ್. ಈಗ ಬಿಲ್ಲಿ ಸಿಂಗ್ ಆಗಿ ಕಿಕ್ ಕೊಡೋಕೆ ಬರುತ್ತಿದ್ದಾರೆ. ದಬಾಂಗ್ 3 ಕನ್ನಡದಲ್ಲೂ ಡಬ್ ಆಗಿ ಬರಲಿದೆ. ಚಿತ್ರಕ್ಕೆ ಪ್ರಭುದೇವ ಡೈರೆಕ್ಟರ್.

 • ದಬಾಂಗ್ ಕನ್ನಡ.. ಸಲ್ಮಾನ್ ಕನ್ನಡ.. ಬಂದೇ ಬಿಡ್ತು..!

  salman khan speaks kannada in dabaang 3 motion poster

  ದಬಾಂಗ್ 3, ಸಲ್ಮಾನ್ ಖಾನ್ ಅಭಿನಯದ ಪ್ರಭುದೇವ ನಿರ್ದೇಶನದ ಸಿನಿಮಾ. ಕಿಚ್ಚ ಸುದೀಪ್, ಸಲ್ಮಾನ್ ಎದುರು ಪ್ರತಿನಾಯಕನಾಗಿ ನಟಿಸಿರುವ ಚಿತ್ರವಿದು. ಸ್ವತಃ ಸಲ್ಮಾನ್ ಖಾನ್, ಅರ್ಬಾಜ್ ಖಾನ್, ನಿಖಿಲ್ ದ್ವಿವೇದಿ ಚಿತ್ರದ ನಿರ್ಮಾಪಕರು. ಈ ಚಿತ್ರ ಡಿಸೆಂಬರ್ 20ರಂದು ರಿಲೀಸ್ ಆಗುತ್ತಿದ್ದು, ಕನ್ನಡದಲ್ಲೂ ಬರಲಿದೆ.

  ಪೈಲ್ವಾನ್ ರಿಲೀಸ್ ಆಗುವುದಕ್ಕೆ 2 ದಿನ ಮೊದಲು ಕನ್ನಡದ ದಬಾಂಗ್ 3 ಟೀಸರ್ ಬಿಟ್ಟಿರುವ ಸಲ್ಮಾನ್, ಸ್ವತಃ ಕನ್ನಡದಲ್ಲಿಯೇ ಡಬ್ ಮಾಡಿದ್ದಾರೆ. ಟೈಮೂ ನಂದು..ತಾರೀಕೂ ನಂದು ಎನ್ನುವ ಸಲ್ಮಾನ್ ವಾಯ್ಸ್ ಇರುವ ಮೋಷನ್ ಪೋಸ್ಟರ್ ಹವಾ ಎಬ್ಬಿಸಿದೆ. ದಬಾಂಗ್ 3 ಒಟ್ಟು 4 ಭಾಷೆಗಳಲ್ಲಿ ಬರಲಿದೆ. ಒನ್ಸ್ ಎಗೇಯ್ನ್, ಇಲ್ಲಿಯೂ ಸಲ್ಮಾನ್ಗೆ ಸೋನಾಕ್ಷಿ ಸಿನ್ಹಾ ನಾಯಕಿ. ಒಟ್ಟಿನಲ್ಲಿ ಈ ಮೂಲಕ ಸಲ್ಮಾನ್  ಕನ್ನಡಕ್ಕೆ ಎಂಟ್ರಿ ಕೊಟ್ಟಿದ್ದಾರೆ.

 • ದಬಾಂಗ್ ಕ್ಲೈಮಾಕ್ಸ್ ಲೀಕ್ : ಕಿಚ್ಚನ ಹೊಡೆದಾಟ ಬಿಚ್ಚಿಟ್ಟ ಸಲ್ಲು

  dabanng 3 climax video leaked

  ಯಾವುದೇ ಚಿತ್ರದ ಜೀವಾಳವೇ ಕ್ಲೈಮಾಕ್ಸ್. ಅಂಥಾದ್ದರಲ್ಲಿ ಬಾಲಿವುಡ್ಡಿನ ಬಹುನಿರೀಕ್ಷಿತ ಚಿತ್ರ ದಬಾಂಗ್ 3 ಚಿತ್ರದ ಕ್ಲೈಮಾಕ್ಸ್ ಲೀಕ್ ಆಗಿದೆ. ವಿಶೇಷ ಅಂದ್ರೆ, ಈ ಕ್ಲೈಮಾಕ್ಸ್ ದೃಶ್ಯದ ತುಣುಕುಗಳನ್ನು ಲೀಕ್ ಮಾಡಿರುವುದು ಸ್ವತಃ ಸಲ್ಮಾನ್ ಖಾನ್.

  ಕ್ಲ್ಯೈಮ್ಯಾಕ್ಸ್ ಸೀನ್‌ನಲ್ಲಿ ಸಿಕ್ಕಾಪಟ್ಟೆ ಆ್ಯಕ್ಷನ್ ಇದ್ದು, ಬಲಿ ಸಿಂಗ್ ಆಗಿ ಸುದೀಪ್ ನಟಿಸಿದ್ದಾರೆ. 23 ದಿನ ಶೂಟಿಂಗ್ ಆದ ಕ್ಲೈಮಾಕ್ಸ್ ಇದು. ಸಲ್ಮಾನ್ 500 ಜನರ ವಿರುದ್ಧ ಫೈಟ್ ಮಾಡ್ತಾರಂತೆ. 00 ಕಾರ್‌ಗಳು ಕ್ಲ್ಯೈಮ್ಯಾಕ್ಸ್ ಸೀನ್‌ನಲ್ಲಿವೆಯಂತೆ. ಬ್ಲಾಸ್ಟ್ ಆಗ್ತವಾ..?

  ಅಲ್ಲೇ ಇರೋದು ಟ್ವಿಸ್ಟು. ಸಲ್ಮಾನ್ ಖಾನ್ ಅಣ್ಣ ಅರ್ಬಾಜ್ ಖಾನ್ ಚಿತ್ರದ ನಿರ್ಮಾಪಕ. ಅಷ್ಟು ಸುಲಭವಾಗಿ ಬಿಟ್ಟು ಬಿಡ್ತಾರಾ..? ಪ್ರಭುದೇವ ನಿರ್ದೇಶನದ ಈ ಸಿನಿಮಾ ಡಿಸೆಂಬರ್ 20ಕ್ಕೆ ರಿಲೀಸ್ ಆಗ್ತಿದೆ. ಅಲ್ಲಿಯವರೆಗೂ ಚುಲ್ ಬುಲ್ ಪಾಂಡೆ ಇಂತಹ ಮಜಾ ಕೊಡ್ತಾನೇ ಇರ್ತಾರೆ. ಫುಲ್ ಮಜಾ ಸಿಗೋದೇನಿದ್ರೂ ಆವತ್ತೇ..

 • ದಬಾಂಗ್ ಬಾಕ್ಸಾಫೀಸ್ ಬೊಂಬಾಟ್

  dabanng 3 box office report

  ಕಿಚ್ಚ ಸುದೀಪ್ ವಿಲನ್ ಆಗಿ ನಟಿಸಿರುವ ದಬಾಂಗ್ 3, ಕನ್ನಡದಲ್ಲಿ ಕಮಾಲ್ ಮಾಡುತ್ತಿದೆ. ಸಲ್ಮಾನ್ ಖಾನ್, ಸೋನಾಕ್ಷಿ ಸಿನ್ಹ ನಟಿಸಿರುವ ದಬಾಂಗ್ 3 ಕನ್ನಡದಲ್ಲಿ 4 ಕೋಟಿ ರೂ. ಕಲೆಕ್ಷನ್ ಮಾಡಿದೆ. ಡಬ್ಬಿಂಗ್ ಸಿನಿಮಾವೊಂದು ಕನ್ನಡದಲ್ಲಿ ಗಳಿಸಿರುವ ಅತಿ ದೊಡ್ಡ ಕಲೆಕ್ಷನ್ ಇದು. ಹೀಗಾಗಿಯೇ ವಿತರಕ ಜಾಕ್ ಮಂಜು ಖುಷಿಯಾಗಿದ್ದಾರೆ.

  ಚಿತ್ರಕ್ಕೆ ಉತ್ತರ ಕರ್ನಾಟಕದಲ್ಲಿ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ. ರಾಜ್ಯದ ಹಲವು ಕಡೆ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಹಿಂದಿಗಿAತಲೂ ಕನ್ನಡಕ್ಕೆ ಒಳ್ಳೆಯ ರೆಸ್ಪಾನ್ಸ್ ಸಿಗುತ್ತಿದೆ ಎಂದಿದ್ದಾರೆ ಜಾಕ್ ಮಂಜು. ಚಿತ್ರಮಂದಿರಗಳ ಸಂಖ್ಯೆ ಹೆಚ್ಚುತ್ತಿರುವುದು ಚಿತ್ರದ ಸಕ್ಸಸ್ ತೋರಿಸುತ್ತಿದೆ.

 • ದಬಾಂಗ್ ಸ್ಟರ‍್ಸ್ ಇಷ್ಟದ ಕ್ರಿಕೆರ‍್ಸ್ ಯಾರು..?

  dabanng 3 promotions reaches cricket stadium too

  ದಬಾಂಗ್ 3 ರಿಲೀಸ್ ಹತ್ತಿರವಾದಂತೆ ಚಿತ್ರದ ಪ್ರಮೋಷನ್ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ ಸಲ್ಮಾನ್ ಮತ್ತು ಸುದೀಪ್. ಈಗ ನಡೆಯುತ್ತಿರುವ ವೆಸ್ಟ್ಇಂಡೀಸ್ ವಿರುದ್ಧದ ಸರಣಿಯಲ್ಲೂ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ ಸಲ್ಲು ಮತ್ತು ಕಿಚ್ಚ. ಪಂದ್ಯದ ನೇರಪ್ರಸಾರದ ವೇಳೆ ಸ್ಟುಡಿಯೋಗೆ ತೆರಳಿದ್ದ ಸಲ್ಮಾನ್ ಮತ್ತು ಸುದೀಪ್ ಕ್ರಿಕೆಟ್ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

  ಇದೇ ವೇಳೆ ತಮಗಿಷ್ಟವಾದ ಆಟಗಾರರು ಯಾರು ಎಂಬ ಪ್ರಶ್ನೆಗೆ ಸಲ್ಮಾನ್ ವೈಯಕ್ತಿಕವಾಗಿ ನನಗೆ ಕೇದಾರ್ ಜಾಧವ್ ಗೊತ್ತು, ಆದರೆ ನನಗೆ ಧೋನಿ ಫೇವರಿಟ್ ಸ್ಟಾರ್ ಎಂದಿದ್ದಾರೆ.

  ಸ್ವತಃ ಕ್ರಿಕೆಟರ್ ಆಗಿರುವ ಸುದೀಪ್ ಅವರು ಆ ದಿನ ಚೆನ್ನಾಗಿ ಆಡುವವನೇ ನಿಜವಾದ ಸ್ಟಾರ್ ಎಂದರಾದರೂ ತಮ್ಮ ಅಚ್ಚುಮೆಚ್ಚಿನ ಆಟಗಾರ ಅನಿಲ್ ಕುಂಬ್ಳೆ, ಪ್ರಸ್ತುಟ ಟೀಂನಲ್ಲಿರುವವರಲ್ಲಿ ರೋಹಿತ್ ಶರ್ಮಾ ಇಷ್ಟ ಎಂದಿದ್ದಾರೆ.

 • ದರ್ಶನ್ ಅಂದ್ರೆ ಸ್ಯಾಂಡಲ್‍ವುಡ್ ಸಲ್ಮಾನ್

  yajamana producer calls darshan sandalwood salman khan

  ಚಾಲೆಂಜಿಂಗ್ ಸ್ಟಾರ್ ದರ್ಶನ್, ಸ್ಯಾಂಡಲ್‍ವುಡ್ ಸಲ್ಮಾನ್ ಖಾನ್. ಬಾಲಿವುಡ್‍ಗೆ ಸಲ್ಮಾನ್ ಹೇಗೋ ಹಾಗೆ ಕನ್ನಡಕ್ಕೆ ದರ್ಶನ್. ದರ್ಶನ್ ಚಿತ್ರದ ನಂದಿ ಹಾಡು ಸೃಷ್ಟಿಸುತ್ತಿರುವ ದಾಖಲೆಗಳೇ ಎಲ್ಲವನ್ನೂ ಹೇಳುತ್ತಿವೆ. ಹೀಗೆ ಹೇಳಿರುವುದು ಬೇರ್ಯಾರೂ ಅಲ್ಲ, ಚಿತ್ರದ ನಿರ್ಮಾಪಕಿ ಶೈಲಜಾ ಸುರೇಶ್.

  ಬಿ.ಸುರೇಶ್ ಬ್ಯಾನರ್‍ನಲ್ಲಿ ಬರುತ್ತಿರುವ ಮೊದಲ ಕಮರ್ಷಿಯಲ್ ಸಿನಿಮಾ ಹಾಗೂ ಭಾರಿ ಬಜೆಟ್‍ನ ಸಿನಿಮಾ ಯಜಮಾನ. ದರ್ಶನ್‍ಗೆ ಕಥೆ ಹೇಳೋಕೆ ಹೋದಾಗ ಎರಡು ಕಥೆ ರೆಡಿ ಮಾಡಿಟ್ಟುಕೊಂಡು ಹೋಗಿದ್ದರಂತೆ. ಎರಡೂ ಕಥೆ ಕೇಳಿದ ದರ್ಶನ್, ಯಜಮಾನ ಕಥೆಗೆ ಓಕೆ ಎಂದಿದ್ದಾರೆ. ಅಷ್ಟೆ ಅಲ್ಲ, ಎರಡನೇ ಕಥೆಯೂ ಇಷ್ಟವಾಗಿ, ಆ ಕಥೆಗೂ ಕಾಲ್‍ಶೀಟ್ ಕೊಟ್ಟಿದ್ದಾರೆ ದರ್ಶನ್. ಇವೆಲ್ಲವನ್ನೂ ಖುಷಿಯಿಂದ ಹೇಳಿಕೊಂಡಿರೋ ನಿರ್ಮಾಪಕಿ ಶೈಲಜಾ ನಾಗ್, ಫೆಬ್ರವರಿಯಲ್ಲಿ ಚಿತ್ರದ ರಿಲೀಸ್ ಖಚಿತ ಎಂದಿದ್ದಾರೆ. 

 • ಪೈಲ್ವಾನ್ ನೋಡಬೇಕು - ಕಿಚ್ಚನಿಗೆ ಸಲ್ಮಾನ್, ಚಿರಂಜೀವಿ ಡಿಮ್ಯಾಂಡ್

  stars waiting to watching pailwaan

  ಪೈಲ್ವಾನ್ ಸಿನಿಮಾ ರಿಲೀಸ್ ಆಗಿ ಕನ್ನಡದ ಪ್ರೇಕ್ಷಕರು ಮೆಚ್ಚಿ ಕೊಂಡಾಡುತ್ತಿದ್ದರೆ, ಬೇರೆ ಭಾಷೆಯ ಸ್ಟಾರ್ ನಟರು ಚಿತ್ರವನ್ನು ನೋಡುವ ಆಸೆ ತೋರಿಸಿದ್ದಾರೆ. ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್, ಪೈಲ್ವಾನ್ ಚಿತ್ರವನ್ನು ಕುಟುಂಬದೊಂದಿಗೆ ನೋಡಲು ರೆಡಿಯಾಗಿದ್ದಾರೆ. ಅವರ ಜೊತೆಗೆ ಕಿಚ್ಚ ಸಾಥ್ ಕೊಡಬೇಕು. ಪೈಲ್ವಾನ್ ಪರ ಈಗಾಗಲೇ ಸಲ್ಲು ಸೋಷಿಯಲ್ ಮೀಡಿಯಾದಲ್ಲಿ ಪ್ರಚಾರವನ್ನೂ ಮಾಡಿದ್ದಾರೆ.

  ಅತ್ತ ತೆಲುಗಿನ ಮೆಗಾಸ್ಟಾರ್ ಚಿರಂಜೀವಿ ಕೂಡಾ ಪೈಲ್ವಾನ್ ನೋಡುವ ಅಭಿಲಾಷೆ ವ್ಯಕ್ತಪಡಿಸಿದ್ದಾರೆ. ಸುದೀಪ್ ಅಭಿನಯದ ಚಿತ್ರಕ್ಕೆ ಸ್ಯಾಂಡಲ್‍ವುಡ್‍ನ ಎಲ್ಲ ಸ್ಟಾರ್‍ಗಳೂ ಶುಭ ಹಾರೈಸಿದ್ದಾರೆ. 

 • ಪೈಲ್ವಾನ್ ಮೆಚ್ಚಿದ ಸುಲ್ತಾನ್ ಸಲ್ಮಾನ್..!

  sultan praises pailwan

  ಪೈಲ್ವಾನ್.. ನಮ್ಮ ಕಿಚ್ಚ ಸುದೀಪ್ ಅಭಿನಯದ ಸಿನಿಮಾ. ಸುಲ್ತಾನ್, ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅಭಿನಯದ ಸಿನಿಮಾ. ಆ ಚಿತ್ರವೂ ಕೂಡಾ ಬಾಕ್ಸಿಂಗ್ ಪಟುವೊಬ್ಬನ ಕಥೆ ಹೊಂದಿತ್ತು. ಕುಸ್ತಿ, ರಸ್ಲಿಂಗ್, ಒಂದು ಲವ್ ಸ್ಟೋರಿ, ತಾಯಿ ಪ್ರೇಮ.. ಹೀಗೆ ಎಲ್ಲವನ್ನೂ ಒಳಗೊಂಡಿದ್ದ ಸಿನಿಮಾ ಸೂಪರ್ ಹಿಟ್ ಆಗಿತ್ತು. ಈಗ ಕಿಚ್ಚನ ಪೈಲ್ವಾನ್. ಸಂಕ್ರಾಂತಿ ಹಬ್ಬಕ್ಕೆಂದೇ ಸುದೀಪ್ ಮತ್ತು ಕೃಷ್ಣ ನೀಡಿರುವ ಉಡುಗೊರೆ ಚಿತ್ರದ ಟೀಸರ್.

  ಹುರಿಗಟ್ಟಿದ ಮೈ, ಅಖಾಡದ ಮಣ್ಣಿನಲ್ಲಿ ಮಿರಿ ಮಿರಿ ಮಿಂಚುವ ದೇಹದ ಸುದೀಪ್, ಆ ಕುಸ್ತಿ.. ಎಲ್ಲವೂ ಇದೆಲ್ಲವನ್ನೂ ಮಾಡಿರೋದು ಕಿಚ್ಚನಾ ಎಂದು ಹುಬ್ಬೇರಿಸುವಂತಿವೆ. ಅಷ್ಟರಮಟ್ಟಿಗೆ ಬದಲಾಗಿ ಹೋಗಿದ್ದಾರೆ ಕಿಚ್ಚ. 

  ಹೀಗಾಗಿಯೇ.. ಪೈಲ್ವಾನನ ಟೀಸರ್ ಅಭಿಮಾನಿಗಳಿಗಷ್ಟೇ ಅಲ್ಲ, ಭಾರತೀಯ ಚಿತ್ರರಂಗದ ದಿಗ್ಗಜರನ್ನೂ ಬಡಿದೆಬ್ಬಿಸಿದೆ. ಪೈಲ್ವಾನ್ ಟೀಸರ್‍ಗೆ ವ್ಹಾವ್ ಎಂದಿರೋದು ಸಲ್ಮಾನ್. ಇದನ್ನು ಸ್ವತಃ ನಿರೀಕ್ಷಿಸಿರದೇ ಇದ್ದ ಸುದೀಪ್‍ಗೆ ಇದು ಅತಿದೊಡ್ಡ ಸರ್‍ಪ್ರೈಸ್. 

  ಇಷ್ಟೇ ಅಲ್ಲ, ತೆಲುಗು, ತಮಿಳು, ಬಾಲಿವುಡ್‍ನ ನಿರ್ದೇಶಕರು, ನಟರು ಪೈಲ್ವಾನ್ ಟೀಸರ್‍ನ್ನು ಮೆಚ್ಚಿಕೊಂಡಿದ್ದಾರೆ. ಸ್ಯಾಂಡಲ್‍ವುಡ್‍ನ ಬಹುತೇಕ ಎಲ್ಲ ಕಲಾವಿದರೂ, ತಂತ್ರಜ್ಞರು ಪೈಲ್ವಾನ್ ಟೀಸರ್ ನೋಡಿ.. ಸುದೀಪ್ ಮತ್ತು ನಿರ್ದೇಶಕ ಕೃಷ್ಣ ಬೆನ್ನು ತಟ್ಟಿದ್ದಾರೆ. 

  ಅಂದಹಾಗೆ.. ಇದು ಟೀಸರ್ ಮಾತ್ರ. ಟ್ರೇಲರ್ ಬಾಕಿ ಇದೆ. ಸಿನಿಮಾ ಇನ್ನೂ ಬರಬೇಕಿದೆ.

 • ಬಲ್ಲಿ ಸಿಂಗ್ ಕಿಚ್ಚನಿಗೆ ಚುಲ್ ಬುಲ್ ಪಾಂಡೆಯಿಂದ BMW ಕಾರ್ ಉಡುಗೊರೆ

  salman khan gifts bmw m5 to kiccha

  ದಬಾಂಗ್ 3ಯಲ್ಲಿ ಒಟ್ಟಿಗೇ ನಟಿಸಿದ್ದ ಸಲ್ಮಾನ್ ಮತ್ತು ಸುದೀಪ್ ಈಗ ಗೆಳೆಯರೂ ಆಗಿಬಿಟ್ಟಿದ್ದಾರೆ. ದಬಾಂಗ್ 3ಯಲ್ಲಿ ವಿಲನ್ ಬಲ್ಲಿ ಸಿಂಗ್ ಆಗಿ ಗೆದ್ದಿದ್ದ ಕಿಚ್ಚ, ಸಲ್ಮಾನ್ ಹೃದಯವನ್ನೂ ಗೆದ್ದಿದ್ದಾರೆ. ಸುದೀಪ್ ಅವರಿಗೆ ಸಲ್ಮಾನ್ ಖಾನ್ ದುಬಾರಿ ಉಡುಗೊರೆಯೊಂದನ್ನು ಕೊಟ್ಟಿದ್ದಾರೆ.

  ಸುದೀಪ್‌ಗೆ ಈ ಬಾರಿ ಸಲ್ಮಾನ್‌  ಬಿಎಂಡಬ್ಲ್ಯೂ ಎಂ5 ಸಿರೀಸ್‌ನ ಕಾರನ್ನು ಕಾಣಿಕೆಯಾಗಿ ಕೊಟ್ಟಿದ್ದಾರೆ. ಅಷ್ಟೇ ಅಲ್ಲ, ಆ ಕಾರು ಕೊಡುವುದಕ್ಕಾಗಿ ಬೆಂಗಳೂರಿಗೆ ಬಂದಿದ್ದ ಸಲ್ಮಾನ್, ಸ್ವತಃ ಸುದೀಪ್ ಅವರ ಮನೆಗೆ ಹೋಗಿ ಉಡುಗೊರೆ ಕೊಟ್ಟು ಖುಷಿ ಪಟ್ಟಿದ್ದಾರೆ. ಅಂದಹಾಗೆ ಈ ಕಾರಿನ ಮಾರುಕಟ್ಟೆ ಮೌಲ್ಯ ಒಂದೂವರೆ ಕೋಟಿಗೂ ಹೆಚ್ಚು.

  ಅಫ್ಕೋರ್ಸ್.. ಅವರಿಬ್ಬರ ಸ್ನೇಹಕ್ಕೆ ಎಷ್ಟು ಕೋಟಿ ಕೊಟ್ಟರೂ ಬೆಲೆ ಕಟ್ಟಲು ಸಾಧ್ಯವಿಲ್ಲ, ಆ ಮಾತು ಬೇರೆ. ಒಳ್ಳೆಯತನಕ್ಕೆ ಒಳ್ಳೆಯತನವೇ ಉಡುಗೊರೆ. ಒಳ್ಳೆಯ ಹೃದಯಕ್ಕೆ ಒಳ್ಳೆಯ ಹೃದಯವೇ ಉಡುಗೊರೆ. ಕಾರ್ ಸಮೇತ ಅಚ್ಚರಿ ಕೊಟ್ಟ ಸಲ್ಮಾನ್ ಖಾನ್ಗೆ ನನ್ನ ಮತ್ತು ನನ್ನ ಕುಟುಂಬದಿಂದ ಧನ್ಯವಾದಗಳು ಎಂದು ಟ್ವೀಟಿಸಿದ್ದಾರೆ ಕಿಚ್ಚ.

 • ಮುಂಬೈನಲ್ಲಿ ವಿಕ್ರಾಂತ್ ರೋಣ

  ಮುಂಬೈನಲ್ಲಿ ವಿಕ್ರಾಂತ್ ರೋಣ

  ಬೆಂಗಳೂರಿನಲ್ಲಿ ಟ್ರೇಲರ್ ಲಾಂಚ್ ಮಾಡಿದ ಬೆನ್ನಲ್ಲೇ ಮುಂಬೈಗೆ ಹೋಗಿರೋ ವಿಕ್ರಾಂತ್ ರೋಣ ಟೀಂ ಅಲ್ಲಿಯೂ ರಣಕಹಳೆ ಮೊಳಗಿಸಿದೆ. ಹಿಂದಿಯಲ್ಲಿ ವಿಕ್ರಾಂತ್ ರೋಣ ಟ್ರೇಲರ್‍ನ್ನು ಸಲ್ಮಾನ್ ಖಾನ್ ರಿಲೀಸ್ ಮಾಡಿದ್ದರು. ಈಗ ಮುಂಬೈನಲ್ಲಿ ಪ್ರೀ-ರಿಲೀಸ್ ಈವೆಂಟ್ ಮೂಲಕ ಪ್ರಚಾರಕ್ಕೆ ಇನ್ನಷ್ಟು ಮೆರುಗು ನೀಡಿದೆ ವಿಕ್ರಾಂತ್ ರೋಣ.

  ದೃಶ್ಯ ವೈಭವದ ಟ್ರೇಲರಿನಲ್ಲಿ ಅನೂಪ್ ಭಂಡಾರಿ ಎಲ್ಲಿಯೂ ಕಥೆ ಬಿಟ್ಟುಕೊಟ್ಟಿಲ್ಲ. ಆದರೆ ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಎನ್ನುವುದನ್ನು ಮಾತ್ರ ಹೇಳಿದ್ದಾರೆ. ಕಿಚ್ಚ ಸುದೀಪ್ ಬೇರೆಯದೇ ಶೇಡ್‍ನಲ್ಲಿ ಕಾಣಿಸುತ್ತಿದ್ದಾರೆ.

  ಇದು ಕನಸಿನ ಸಿನಿಮಾ. ದೊಡ್ಡದಾಗಿಯೇ ಶುರು ಮಾಡಿದ್ದೆವು. ಐಡಿಯಾ ದೊಡ್ಡದಾಗಿತ್ತು. ಸಿನಿಮಾ ಕಾನ್ಸೆಪ್ಟ್ ದೊಡ್ಡದಾಗಿತ್ತು. ರಿಸಲ್ಟ್‍ನ್ನೂ ಕೂಡಾ ದೊಡ್ಡದಾಗಿಯೇ ಎದುರು ನೋಡುತ್ತಿದ್ದೇವೆ ಎಂದಿರೋದು ಸುದೀಪ್.

  ಈ ಚಿತ್ರ ಹಾಗೂ ರಕ್ಕಮ್ಮ ಹಾಡಿನ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದೇನೆ. ಅದೊಂದು ಅದ್ಭುತ ಅನುಭವ ಎಂದು ಹೇಳಿಕೊಂಡಿದ್ದಾರೆ ರಕ್ಕಮ್ಮ ಫರ್ನಾಂಡಿಸ್.

 • ಮುಮ್ಮಡಿ ಚುಲ್‍ಬುಲ್ ಪಾಂಡೆಗೆ ಕಿಚ್ಚನೇ ಎದುರಾಳಿ..!

  sudeep all set to fight chulbul pandey

  ದಬಂಗ್ ಮತ್ತೊಮ್ಮೆ ಬರುತ್ತಿದೆ. ಅದೇ ಸಲ್ಮಾನ್ ಖಾನ್, ಚುಲ್‍ಬುಲ್ ಪಾಂಡೆಯಾಗಿ ಬರುತ್ತಿದ್ದಾರೆ. ಈ ಬಾರಿ ಚುಲ್‍ಬುಲ್ ಪಾಂಡೆಗೆ ಸ್ಟಾರ್ಟ್.. ಕ್ಯಾಮೆರಾ.. ಆ್ಯಕ್ಷನ್ ಎನ್ನುತ್ತಿರುವುದು ಡ್ಯಾನ್ಸಿಂಗ್ ಸ್ಟಾರ್ ಪ್ರಭುದೇವ. ಈ ಬಾರಿ ಚುಲ್‍ಬುಲ್ ಪಾಂಡೆಗೆ ಸವಾಲು ಹಾಕೋಕೆ ರೆಡಿಯಾಗಿರುವುದು ನಮ್ಮ ಕಿಚ್ಚ ಸುದೀಪ್.

  ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ಟೈಗರ್ ಜಿಂದಾ ಹೈ ಚಿತ್ರದಲ್ಲೇ ಸಲ್ಮಾನ್ ಜೊತೆ ಸುದೀಪ್ ನಟಿಸಬೇಕಿತ್ತು. ಅದು ಈಗ ದಬಂಗ್ 3 ಮೂಲಕ ಈಡೇರುತ್ತಿದೆ. ನಿರ್ದೇಶಕ ಪ್ರಭುದೇವ ಈಗಾಗಲೇ ಸುದೀಪ್ ಅವರಿಗೆ ಕಥೆ, ಪಾತ್ರದ ಕುರಿತು ವಿವರ ಕೊಟ್ಟಿದ್ದಾರಂತೆ. ಸುದೀಪ್ ಕೂಡಾ ಓಕೆ ಎಂದಿದ್ದಾರೆ.

  ಒಂದು ಸುತ್ತಿನ ಮಾತುಕತೆ ನಡೆದಿದೆ. ಆದರೆ, ಅಧಿಕೃತವಾಗಿ ಇನ್ನೂ ಫೈನಲ್ ಆಗಿಲ್ಲ. ನಾನು ಯೆಸ್ ಎಂದಿರುವುದು ನಿಜ ಎಂದಿದ್ದಾರೆ ಸುದೀಪ್.ಬಹುಶಃ ಏಪ್ರಿಲ್‍ನಲ್ಲಿ ದಬಂಗ್ 3 ಶುರುವಾಗೋ ಚಾನ್ಸ್ ಇದೆ.

 • ಯಶ್ ಹಾದಿಯನ್ನೇ ತುಳಿದ ಸಲ್ಮಾನ್ ಖಾನ್

  ಯಶ್ ಹಾದಿಯನ್ನೇ ತುಳಿದ ಸಲ್ಮಾನ್ ಖಾನ್

  ರಾಕಿಂಗ್ ಸ್ಟಾರ್ ಯಶ್ ಕೋವಿಡ್ ಸಂಕಷ್ಟದ ವೇಳೆ ಚಲನಚಿತ್ರ ಕಾರ್ಮಿಕರ ನೆರವಿಗೆ ದೊಡ್ಡ ಮಟ್ಟದಲ್ಲಿ ಧಾವಿಸಿದ್ದರು. ಮೂರೂವರೆ ಸಾವಿರಕ್ಕೂ ಹೆಚ್ಚು ಕಾರ್ಮಿಕರ ಖಾತೆಗೆ ತಲಾ 5 ಸಾವಿರ ರೂ. ಡೆಪಾಸಿಟ್ ಮಾಡಿ ಕಷ್ಟಕ್ಕೆ ಹೆಗಲು ಕೊಟ್ಟಿದ್ದರು. ತಮ್ಮ ಸ್ವಂತ ಹಣದಿಂದ 1 ಕೋಟಿ 80 ಲಕ್ಷ ಹಣ ಖರ್ಚು ಮಾಡಿದ್ದರು. ಈಗ ಬಾಲಿವುಡ್‍ನಲ್ಲಿ ನಟ ಸಲ್ಮಾನ್ ಖಾನ್ ಕೂಡಾ ಇದೇ ಹಾದಿ ಹಿಡಿದಿದ್ದಾರೆ.

  ಬಾಲಿವುಡ್ ಕೂಡಾ ಸಂಕಷ್ಟದಲ್ಲಿದ್ದು, ಹಿಂದಿ ಚಿತ್ರರಂಗದ 25 ಸಾವಿರಕ್ಕೂ ಹೆಚ್ಚು ಕಾರ್ಮಿಕರಿಗೆ ಸಲ್ಮಾನ್ ಸಹಾಯ ಹಸ್ತ ಚಾಚಿದ್ದಾರೆ. ಸುಮಾರು 25 ಸಾವಿರ ಕಾರ್ಮಿಕರ ಖಾತೆಗೆ ತಲಾ 1,500 ರೂ. ಹಾಕುವ ಮೂಲಕ ನೆರವಾಗಿದ್ದಾರೆ. ಇದಕ್ಕಾಗಿ ಸುಮಾರು ಮೂರೂವರೆ ಕೋಟಿ ಹಣ ಖರ್ಚಾಗಿದೆ ಎನ್ನಲಾಗಿದೆ.

 • ಯಾರು ಗ್ರೇಟ್..? ಹೀರೋನಾ..? ವಿಲನ್ನಾ..? - ಸುದೀಪ್ ಹೇಳಿದ್ದೇನು..?

  sudeep talks abput dabang 3

  ಯಾವುದೇ ಸಿನಿಮಾ ಇರಲಿ.. ಹೀರೋಗೆ ಇರೋ ಗೌರವವೇ ಬೇರೆ. ಹೀರೋ ಅಂದ್ರೆ ಹೀರೋನೇ.. ಕೆಲವು ಚಿತ್ರಗಳಲ್ಲಿ ವಿಲನ್ ಅಬ್ಬರಿಸುವುದೂ ಇದೆ. ಆದರೆ, ಅಂತಿಮ ಗೆಲುವು ಹೀರೋಗೇ ಹೊರತು ವಿಲನ್‍ಗೆ ಅಲ್ಲ... ಹಾಗಾದರೆ, ಈ ಇಬ್ಬರಲ್ಲಿ ಯಾರು ಗ್ರೇಟ್..? ಈ ಪ್ರಶ್ನೆ ಎದುರಾಗಿರುವುದು ಕಿಚ್ಚ ಸುದೀಪ್‍ಗೆ. 

  ಕಾರಣ ಎಲ್ಲರಿಗೂ ಗೊತ್ತು. ಸುದೀಪ್, ಕನ್ನಡ ಚಿತ್ರರಂಗದ ಸೂಪರ್ ಸ್ಟಾರ್. ಆದರೆ, ಹೊರಗಿನ ಭಾಷೆಯ ಚಿತ್ರಗಳಲ್ಲಿ ವಿಲನ್ ಆಗಿ ನಟಿಸಿದ್ದೇ ಹೆಚ್ಚು. 

  `ಹೀರೋ ಅಂದ್ರೆ ಒಳ್ಳೆಯವ ಎಂಬ ಭಾವನೆ ಬರುತ್ತೆ. ಆದರೆ, ಹೀರೋ ಒಳ್ಳೆಯವನಾಗೋಕೆ ವಿಲನ್ ಇದ್ದರಷ್ಟೇ ಸಾಧ್ಯ. ಹೀಗಾಗಿ ವಿಲನ್ ಕೂಡಾ ತುಂಬಾ ಮುಖ್ಯ' ಎಂದಿದ್ದಾರೆ ಸುದೀಪ್.

  ದಭಾಂಗ್-3ಯಲ್ಲಿ ನಟಿಸುತ್ತಿರುವ ಸುದೀಪ್, ಚಿತ್ರದಲ್ಲಿ ನಟಿಸಲು ಉತ್ಸಾಹದಿಂದ ಇದ್ದೇನೆ. ನಿರ್ದೇಶಕರು ಕೇಳಿದ್ದನ್ನು ನಾನು ಕೊಡಲೇಬೇಕು.ಬಾಲಿವುಡ್ ಸೂಪರ್ ಸ್ಟಾರ್ ಜೊತೆ ಕೆಲಸ ಮಾಡುವುದು ಹೊಸ ಅನುಭವ. ಸೊಹೈಲ್ ಖಾನ್, ಸಲ್ಮಾನ್ ಖಾನ್, ಪ್ರಭುದೇವ ಅವರೆಲ್ಲ ಇರೋ ಟೀಂನಲ್ಲಿ ನಾನೂ ಒಬ್ಬ ಎನ್ನುವುದೇ ನನಗೆ ಖುಷಿ ಎಂದಿದ್ದಾರೆ ಸುದೀಪ್.

 • ವಿಕ್ರಾಂತ್ ರೋಣನಿಗೆ 3ನೇ ಬಲ

  ವಿಕ್ರಾಂತ್ ರೋಣನಿಗೆ 3ನೇ ಬಲ

  ವಿಕ್ರಾಂತ್ ರೋಣ ಚಿತ್ರಕ್ಕೆ ಕಿಚ್ಚ ಸುದೀಪ್ ಹೀರೋ ಆದಾಗಲೇ ಒಂದು ಶಕ್ತಿ ಸಿಕ್ಕಿತ್ತು. ಅನೂಪ್ ಭಂಡಾರಿ ನಿರ್ದೇಶನದಲ್ಲಿ ತಯಾರಾಗುತ್ತಿರೋ ಸಿನಿಮಾ ಭರ್ಜರಿ ಸೌಂಡ್ ಮಾಡುತ್ತಿದೆ. ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ರಿಲೀಸ್ ಆಗುತ್ತಿರೋ ಸಿನಿಮಾ ಇಂಗ್ಲಿಷ್‍ನಲ್ಲೂ ರಿಲೀಸ್ ಆಗುತ್ತಿರೋದು ವಿಶೇಷ. ವಿಕ್ರಾಂತ್ ರೋಣ ಚಿತ್ರಕ್ಕೆ ಒಂದೊಂದು ಭಾಷೆಯಲ್ಲಿ ಒಬ್ಬೊಬ್ಬ ಸ್ಟಾರ್ ಸಪೋರ್ಟ್ ಮಾಡುತ್ತಿದ್ದಾರೆ.

  ಹಿಂದಿಯಲ್ಲಿ ಖುದ್ದು ಸಲ್ಮಾನ್ ಖಾನ್ ಚಿತ್ರವನ್ನು ಪ್ರೆಸೆಂಟ್ ಮಾಡುತ್ತಿದ್ದಾರೆ. ಇನ್ನೊಂದೆಡೆ ವಿತರಣೆಯ ಜವಾಬ್ದಾರಿ ಹೊತ್ತಿರುವುದು ದೇಶದ ಪ್ರತಿಷ್ಠಿತ ಸಂಸ್ಥೆ ಝೀ ಸ್ಟುಡಿಯೋಸ್. ಈಗ ಪಿವಿಆರ್ ಸಿನಿಮಾಸ್ ಕೂಡಾ ಕೈಜೋಡಿಸಿದೆ. ಅಲ್ಲಿಗೆ ವಿಕ್ರಾಂತ್ ರೋಣನಿಗೆ 3ನೇ ಬಲ ಸಿಕ್ಕಿದೆ.

  ವಿಕ್ರಾಂತ್ ರೋಣ ಫಿಕ್ಷನ್ ಸಿನಿಮಾ ಆಗಿದ್ದು, ಸುದೀಪ್ ಜೊತೆ ನಿರೂಪ್ ಭಂಡಾರಿ ಕೂಡಾ ಪ್ರಮುಖ ಪಾತ್ರದಲ್ಲಿದ್ದಾರೆ. ಜುಲೈ 28ಕ್ಕೆ ಸಿನಿಮಾ ರಿಲೀಸ್ ಆಗುತ್ತಿದೆ.

 • ವಿಕ್ರಾಂತ್ ರೋಣನಿಗೆ ಸಲ್ಲು ಪವರ್

  ವಿಕ್ರಾಂತ್ ರೋಣನಿಗೆ ಸಲ್ಲು ಪವರ್

  ಕನ್ನಡದ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿರುವ ವಿಕ್ರಾಂತ್ ರೋಣ ಈಗಾಗಲೇ ಮೇಕಿಂಗ್‍ನಿಂದ ಗಮನ ಸೆಳೆದಿದೆ. ಟೀಸರ್ ವ್ಹಾವ್ ಎನ್ನಿಸಿದೆ. ಗುಮ್ಮನ ಕಥೆಯ ಸಸ್ಪೆನ್ಸ್ ಕೊಟ್ಟಿರುವ ಅನೂಪ್ ಭಂಡಾರಿ ಚಿತ್ರವನ್ನು 3ಡಿಯಲ್ಲೂ ರಿಲೀಸ್ ಮಾಡುತ್ತಿದ್ದಾರೆ. ಜುಲೈ 28ಕ್ಕೆ ರಿಲೀಸ್ ಆಗುತ್ತಿರೋ ಕಿಚ್ಚನ ಡಿಫರೆಂಟ್ ಚಿತ್ರಕ್ಕೆ ಸಲ್ಮಾನ್ ಖಾನ್ ಸಪೋರ್ಟು ಕೂಡಾ ಸಿಕ್ಕಿದೆ.

  ವಿಕ್ರಾಂತ್ ರೋಣ ಚಿತ್ರದ ಹಿಂದಿ ವರ್ಷನ್‍ನ್ನು ಸಲ್ಮಾನ್ ಖಾನ್ ಅವರ ಎಸ್‍ಕೆಎಫ್ ರಿಲೀಸ್ ಮಾಡುತ್ತಿದೆ. ಸಲ್ಮಾನ್ ಮತ್ತು ಸುದೀಪ್ ಸ್ನೇಹ ಹೊಸದೇನಲ್ಲ. ದಬಾಂಗ್‍ನಲ್ಲಿ ಕೇವಲ ಸಲ್ಮಾನ್ ಖಾನ್ ಅವರಿಗಾಗಿ ವಿಲನ್ ಆಗಿ ನಟಿಸಿದ್ದರು ಕಿಚ್ಚ. ಸುದೀಪ್ ಅವರೊಂದಿಗೆ ಇರುವ ಸ್ನೇಹವನ್ನು ವಿಭಿನ್ನ ರೀತಿಯಲ್ಲಿ ಸೆಲಬ್ರೇಟ್ ಮಾಡಿರುವುದು ಸಲ್ಮಾನ್ ಖಾನ್. ಈಗ ವಿಕ್ರಾಂತ್ ರೋಣ ಹಿಂದಿ ಡಿಸ್ಟ್ರಿಬ್ಯೂಷನ್ ಹೊಣೆ ಹೊತ್ತಿದ್ದಾರೆ ಸಲ್ಮಾನ್.

  ವಿಕ್ರಾಂತ್ ರೋಣ ಚಿತ್ರಕ್ಕೆ ಈಗಾಗಲೇ ಬೇರೆ ಬೇರೆ ಚಿತ್ರರಂಗದಲ್ಲಿ ಸ್ಟಾರ್ ನಟರ ಬೆಂಬಲ ಸಿಕ್ಕಿದೆ. ಕನ್ನಡದ ಜೊತೆಗೆ ಏಕಕಾಲದಲ್ಲಿ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ. ನಿರ್ಮಾಣ ಜಾಕ್ ಮಂಜು ಅವರದ್ದು. ಸುದೀಪ್ ಜೊತೆಗೆ ನಿರೂಪ್ ಭಂಡಾರಿ, ನೀತು ಜೋಸೆಫ್, ಜಾಕ್ವೆಲಿನ್ ಫರ್ನಾಂಡಿಸ್ ಸೇರಿದಂತೆ ಘಟಾನುಘಟಿ ಕಲಾವಿದರ ದಂಡೇ ಗುಮ್ಮನ ಕಥೆಯಲ್ಲಿದೆ.

 • ವಿಲನ್ ಕ್ಯಾರೆಕ್ಟರ್ : ಕಿಚ್ಚನಿಗೆ ಹೊಸದಲ್ಲ.. ಚಾಲೆಂಜ್ ಆಗಲೇ ಗೆದ್ದಾಗಿದೆ..

  kiccha sudeep talks about the villain role in dabanng 3

  ಕಿಚ್ಚ ಸುದೀಪ್ ದಬಾಂಗ್ 3ಯಲ್ಲಿ ವಿಲನ್. ಸಲ್ಮಾನ್ ಖಾನ್ ಎದುರು ಖಳನಯಕನಾಗಿ ಅಬ್ಬರಿಸುತ್ತಿದ್ದಾರೆ. ಕನ್ನಡದಲ್ಲಿ ಇಷ್ಟು ದೊಡ್ಡ ಸ್ಟಾರ್ ಆಗಿ, ಬೇರೆ ಭಾಷೆಯಲ್ಲಿ ವಿಲನ್ ಆಗೋದೇಕೆ.. ಎನ್ನುವುದು ಹಲವರ ಪ್ರಶ್ನೆ. ಆದರೆ, ಅವುಗಳಿಗೆಲ್ಲ ಸುದೀಪ್ ಕೊಡುವ ಉತ್ತರವೇ ಬೇರೆ. ಒಬ್ಬ ಕಲಾವಿದ ಎಲ್ಲ ರೀತಿಯ ಪಾತ್ರಗಳನ್ನೂ ಮಾಡಬೇಕು ಅನ್ನೋದು ಅವರ ಮೊದಲ ವಾದ. ಎರಡನೆಯದು ತಮ್ಮೊಂದಿಗೆ ಕನ್ನಡವೂ ಅಲ್ಲಿಗೆ ತಲುಪಲಿದೆ ಎನ್ನುವ ದೂರಗಾಮಿ ಆಲೋಚನೆ.

  ಹಾಗೆ ನೋಡಿದರೆ ಸುದೀಪ್ ವಿಲನ್ ಅಥವಾ ನೆಗೆಟಿವ್ ಶೇಡ್ ಇರುವ ಪಾತ್ರ ಮಾಡಿರುವುದು ಇದೇ ಮೊದಲಲ್ಲ. ಸುದೀಪ್ ತಮ್ಮ ವೃತ್ತಿ ಜೀವನದ ಆರಂಭದ ದಿನಗಳಲ್ಲೇ ವಾಲಿ ಚಿತ್ರ ಮಾಡಿದ್ದರು. ತಮ್ಮನ ಪತ್ನಿಯನ್ನು ಮೋಹಿಸುವ ಅಣ್ಣನಾಗಿ ಎದೆ ಝಲ್ ಎನ್ನುವ ಅಭಿನಯ ನೀಡಿದ್ದರು.

  ಇನ್ನು ಸುದೀಪ್ ವೃತ್ತಿ ಜೀವನದ ಮೌಂಟ್ ಎವರೆಸ್ಟ್ ಈಗದಲ್ಲಿಯೂ ಅಷ್ಟೆ. ಆ ಚಿತ್ರದಲ್ಲಿ ಹೀರೋಗಿಂತ ಹೆಚ್ಚು ವಿಜೃಂಭಿಸಿದ್ದವರು ಸುದೀಪ್.

  ಹಿಂದಿಯಲ್ಲಿ ಸುದೀಪ್ ಕೇವಲ ವಿಲನ್ ಪಾತ್ರಗಳನ್ನಷ್ಟೇ ಮಾಡುತ್ತಿಲ್ಲ. ಬೇರೆ ರೀತಿಯ ಪಾಸಿಟಿವ್ ಪಾತ್ರಗಳನ್ನೂ ಆಯ್ಕೆ ಮಾಡಿಕೊಂಡಿದ್ದಾರೆ.

  ಈಗ ಸುದೀಪ್ ವಿಲನ್ ಆಗಿ ನಟಿಸಿರುವ ದಬಾಂಗ್ 3 ಬಾಕ್ಸಿಂಗ್ ಡೇಯಂದು ರಿಲೀಸ್ ಆಗುತ್ತಿದೆ. ಪ್ರಭುದೇವ ನಿರ್ದೇಶನ, ಸಲ್ಮಾನ್-ಸೋನಾಕ್ಷಿ ಸಿನ್ಹಾ ಅಭಿನಯದ ಚಿತ್ರದಲ್ಲಿ ಸುದೀಪ್ ವಿಲನ್.

 • ಸತತ ಸೋಲು ದುಷ್ಮನ್`ಗಳನ್ನು ಒಂದಾಗಿಸಿತಾ?

  ಸತತ ಸೋಲು ದುಷ್ಮನ್`ಗಳನ್ನು ಒಂದಾಗಿಸಿತಾ?

  ಬಾಲಿವುಡ್ ಈಗ ಬಾಲಿವುಡ್ ಆಗಿ ಉಳಿದಿಲ್ಲ. ಅದೀಗ ಭಾರತೀಯ ಚಿತ್ರರಂಗದ ಬಾದ್‍ಶಾಹ್ ಅಲ್ಲ. ಗೆಲುವು ಸಿಗುತ್ತಿದ್ದಾಗ ಇರುವುದೇ ಬೇರೆ. ಸೋತಾಗ ನಡೆಯುವುದೇ ಬೇರೆ. ಹಮ್ಮು..ಬಿಮ್ಮು..ಅಹಮ್ಮು..ಅಹಂಕಾರ..ಕೋಪ..ತಾಪ..ದ್ವೇಷಗಳನ್ನೆಲ್ಲ ಸೈಡಿಗೆ ತಳ್ಳೋ ತಾಕತ್ತು ಕೇವಲ ಸೋಲಿಗೆ ಇದೆ. ವೈಫಲ್ಯಕ್ಕೆ ಇದೆ. ಬಾಲಿವುಡ್‍ನ ಶಾರೂಕ್ ಖಾನ್ ಮತ್ತು ಸಲ್ಮಾನ್ ಖಾನ್ ಅವರಿಬ್ಬರ ಜೋಡಿಯ ಮಿಲನವನ್ನು ಸೋಷಿಯಲ್ ಮೀಡಿಯಾ ವಿಶ್ಲೇಷಣೆ ಮಾಡುತ್ತಿರುವುದು ಹೀಗೆ.

  ಸಲ್ಮಾನ್ ಖಾನ್ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಇತ್ತೀಚೆಗೆ ಶಾರೂಕ್ ಖಾನ್ ಕೂಡಾ ಬಂದಿದ್ದರು. ಇತ್ತೀಚೆಗೆ ಬಾಲಿವುಡ್ ಖಾನ್‍ಗಳಿಗೆ ಗೆಲುವು ಸಿಗುತ್ತಿಲ್ಲ. ದೂರವಾಗಿಯೇ ಇದೆ. ಹೀಗಾಗಿಯೇ ಒಂದು ಕಾಲದಲ್ಲಿ ಅವರಿದ್ದ ಕಡೆ ನಾನಿರಲ್ಲ.. ಎಂದು ದೂರ ಹೋಗುತ್ತಿದ್ದ ಖಾನ್‍ಗಳು ಈಗ ಒಟ್ಟಿಗೇ ಸೇರಿದ್ದಾರೆ. ಇತ್ತೀಚೆಗೆ ಬಾಲಿವುಡ್‍ನ ಎಲ್ಲರೂ ಒಟ್ಟಾಗುತ್ತಿದ್ದಾರೆ.

  ಶಾರೂಕ್ ಖಾನ್‍ಗೆ ಅರ್ಜೆಂಟಾಗಿ ಗೆಲುವು ಬೇಕಿದೆ. ಒಂದು ಕಾಲದ ಸೂಪರ್ ಹಿಟ್ ಚಿತ್ರಗಳ ಸರದಾರ ಗೆಲುವನ್ನು ನೋಡಿ ಅರ್ಧದಶಕವಾಗಿದೆ. ಸಲ್ಮಾನ್ ಖಾನ್‍ಗೆ ಕೂಡಾ ಸೋಲಿನ ಪರಿಚಯವಾಗಿದೆ. ಹೀಗಾಗಿಯೇ ಬಾಲಿವುಡ್ ಒಂದಾಗಿ ಗೆಲ್ಲಬೇಕು ಎಂಬ ನಿರ್ಧಾರಕ್ಕೆ ಬಂದಿದ್ದು ಪರಸ್ಪರ ಪಾರ್ಟಿ, ಕಾರ್ಯಕ್ರಮಗಳಲ್ಲಿ ಇತ್ತೀಚೆಗೆ ಜೊತೆಯಾಗುತ್ತಿದ್ದಾರೆ. ದಶಕಗಳ ಹಿಂದೆ ಶಾರೂಕ್ ಖಾನ್ ಪಾರ್ಟಿಗೆ ನುಗ್ಗಿ, ಸಲ್ಮಾನ್ ಖಾನ್ ದಾಂಧಲೆಯನ್ನೇ ನಡೆಸಿದ್ದರು. ಬಾಲಿವುಡ್‍ನಲ್ಲಿ ಎರಡು ಬಣಗಳು ಸೃಷ್ಟಿಯಾಗಿದ್ದವು.

  ಕಳೆದ ಕೆಲ ವರ್ಷಗಳಲ್ಲಿ ಬಾಲಿವುಡ್ ಮಕಾಡೆ ಮಲಗಿದ್ದು, ಹಿಟ್ ಚಿತ್ರಗಳೆಂದರೆ ದಕ್ಷಿಣದ ಚಿತ್ರಗಳು ಮಾತ್ರ ಎನ್ನುವಂತಾಗಿದೆ. ಹಿಂದಿಯಲ್ಲಿ ಹಿಟ್ ಆದ ಚಿತ್ರ ಬಾಲಿವುಡ್ ಫಾರ್ಮುಲಾಗೆ ವಿರುದ್ಧವಾಗಿದೆ. ಅದರಲ್ಲಿಯೂ ಅದು ಸ್ಟಾರ್ ಚಿತ್ರವಲ್ಲ. ಅಳಿವು ಉಳಿವಿನ ಸಮಸ್ಯೆ ಎದುರಿಸುತ್ತಿರುವ ಬಾಲಿವುಡ್ ಈಗ ಒಗ್ಗಟ್ಟಿನ ಮಂತ್ರ ಜಪಿಸತೊಡಗಿದೆ. ಪಾರ್ಟಿಯಲ್ಲಿ ಆಲ್‍ಮೋಸ್ಟ್ ಬಾಲಿವುಡ್ ಇದ್ದರೂ, ಶಾರೂಕ್-ಸಲ್ಮಾನ್ ಪರಸ್ಪರ ಅಪ್ಪಿಕೊಂಡು ವಿಶ್ ಮಾಡಿರುವ ಫೋಟೋ ವೈರಲ್ ಆಗಿದೆ.

 • ಸಲ್ಮಾನ್ ಕನ್ನಡಕ್ಕೆ ಕನ್ನಡಿಗರ ದಬಾಂಗ್

  dabanng 3 kannada trailer

  ದಬಾಂಗ್ 3 ಕನ್ನಡದಲ್ಲೂ ಬರುತ್ತಿದೆ. ಚಿರಂಜೀವಿ ಅಭಿನಯದ ಸೈರಾ ಕನ್ನಡ ಚಿತ್ರಕ್ಕೆ ಸಿಕ್ಕ ಸ್ವಾಗತವೇ ದಬಾಂಗ್ 3 ಕನ್ನಡಕ್ಕೂ ಸಿಗುವ ಸಾಧ್ಯತೆ, ನಿರೀಕ್ಷೆ ಇದೆ. ಹೀಗಾಗಿಯೇ ದಬಾಂಗ್ 3 ಚಿತ್ರದ ಟ್ರೇಲರ್ ರಿಲೀಸ್ ಆಗಿದ್ದೇ ತಡ.. ಎಲ್ಲರೂ ಥ್ರಿಲ್ ಆಗಿದ್ದಾರೆ.

  ದಬಾಂಗ್ 3ಯಲ್ಲಿ ಸಲ್ಮಾನ್ ಖಾನ್ ಎದುರು ವಿಲನ್ ಆಗಿ ನಟಿಸಿರುವುದು ಕಿಚ್ಚ ಸುದೀಪ್. ಎಂದಿನಂತೆ ಚುಲ್ ಬುಲ್ ಕಾಮಿಡಿ ಸ್ಟೈಲ್ ಈ ಚಿತ್ರದಲ್ಲೂ ಇರಲಿದೆ. ಪ್ರಭುದೇವ ಡೈರೆಕ್ಷನ್ ಇರೋ ಕಾರಣಕ್ಕೆ ಹಾಡುಗಳೂ ಹಬ್ಬ ಸೃಷ್ಟಿಸಲಿವೆ. ಒನ್ಸ್ ಎಗೇಯ್ನ್ ಇಲ್ಲಿಯೂ ಸೋನಾಕ್ಷಿ ಸಿನ್ಹಾ ಹೀರೋಯಿನ್. ಅಂದಹಾಗೆ ಸುದೀಪ್ ಈ ಚಿತ್ರದಲ್ಲಿ ಹೀರೋಯಿನ್ ಮೇಲೇ ಕಣ್ಣು ಹಾಕೋ ವಿಲನ್ ಆಗಿದ್ದಾರಾ..? ಉತ್ತರ ಬೇಕಾದರೆ ಡಿಸೆಂಬರ್ 20ರವರೆಗೆ ವೇಯ್ಟ್ ಮಾಡಿ. ರಿಲೀಸ್ ಆಗುತ್ತೆ.

 • ಸಲ್ಮಾನ್ ಖಾನ್ ಕನ್ನಡ ಮೇಷ್ಟ್ರು ಕಿಚ್ಚ ಸುದೀಪ್

  sudeep is salman;s kannada teacher

  ಕಿಚ್ಚ ಸುದೀಪ್ ಕನ್ನಡ ಅದ್ಭುತ. ಭಾಷೆಯ ಏರಿಳಿತ, ಉಚ್ಚಾರಣೆಯಲ್ಲಿನ ಸ್ಪಷ್ಟತೆ, ಅಲ್ಪಪ್ರಾಣ, ಮಹಾಪ್ರಾಣಗಳ ಬಳಕೆಯಲ್ಲಿನ ಲಯಬದ್ಧ ಮಾತುಗಾರಿಕೆ.. ಕಿಚ್ಚ ಸುದೀಪ್ ಅವರ ಧ್ವನಿ.. ಎಲ್ಲವೂ ಒಂದಕ್ಕೊಂದು ಮೇಳೈಸಿಬಿಟ್ಟರೆ.. ಕೇಳುವುದೊಂದು ಸೊಗಸು. ಇದೇನು ಸುದೀಪ್ ಅವರಿಗೆ ಜನ್ಮತಃ ಬಂದ ವರವಲ್ಲ. ಕಲಿತುಕೊಂಡು ಅಭ್ಯಾಸ ಮಾಡಿ ಗಳಿಸಿಕೊಂಡಿದ್ದು. ಇಂತಹ ಸುದೀಪ್ ಈಗ ಕನ್ನಡ ಮೇಷ್ಟರಾಗಿದ್ದಾರೆ. ಅದೂ ಸಲ್ಮಾನ್ ಖಾನ್‍ಗೆ.

  ದಬಾಂಗ್ 3 ಕನ್ನಡದಲ್ಲಿ ಡಬ್ ಆಗಿ ಬರುತ್ತಿದೆ. ಆ ಚಿತ್ರದಲ್ಲಿ ಚುಲ್ ಬುಲ್ ಪಾಂಡೆಯಾಗಿ ನಟಿಸಿರುವ ಸಲ್ಮಾನ್ ಕನ್ನಡದಲ್ಲಿ ಸ್ವತಃ ತಾವೇ ಡಬ್ ಮಾಡುವ ಇರಾದೆ ತೋರಿಸಿದ್ದಾರೆ. ಅಷ್ಟೇ ಅಲ್ಲ, ಸಲ್ಮಾನ್.. ಸುದೀಪ್ ಅವರ ಜೊತೆ ಕನ್ನಡದಲ್ಲಿಯೇ ಮಾತನಾಡಲು ಪ್ರಯತ್ನಿಸುತ್ತಾ, ತಪ್ಪುಗಳನ್ನು ತಿದ್ದಿಕೊಳ್ಳುತ್ತಿದ್ದಾರೆ.

  ಕನ್ನಡದಲ್ಲಿಯೇ ಡಬ್ ಮಾಡಲು ಇಷ್ಟವಿದೆ. ನಿಮ್ ಸಪೋರ್ಟ್ ಬೇಕು ಎಂದಾಗ ನಾನಂತೂ ಎಕ್ಸೈಟ್ ಆದೆ. ಅದನ್ನು ಸ್ವಾಗತಿಸುವುದು ನನ್ನ ಕೆಲಸ. ಅಲ್ಲಿಂದ ಡಬ್ಬಿಂಗ್ ಪ್ರಕ್ರಿಯೆ ಶುರುವಾಗಿದೆ. ಇಷ್ಟರಲ್ಲೇ ಕನ್ನಡ ದಬಾಂಗ್ 3ಯ ಟ್ರೇಲರ್ ಕೂಡಾ ಬರಲಿದೆ ಎಂದಿದ್ದಾರೆ ಸುದೀಪ್.