ತಲಾ ಅಜಿತ್ ಎಂದೇ ಪ್ರೀತಿಯಿಂದ ಕರೆಸಿಕೊಳ್ಳುವ ತಮಿಳು ಸ್ಟಾರ್ ನಟ ತಲಾ ಅಜಿತ್, ಈ ಬಾರಿ ಮತ್ತೊಂದು ಅಮೋಘ ಸಾಧನೆ ಮಾಡಿದ್ದಾರೆ. ಅಜಿತ್ ನಟಿಸಿದ ಚಿತ್ರ ಸೂಪರ್ ಹಿಟ್ ಗ್ಯಾರಂಟಿ ಅನ್ನೋದ್ರಲ್ಲಿ ಅನುಮಾನವೇ ಇಲ್ಲ. ಅಷ್ಟರಮಟ್ಟಿಗೆ ಅವರ ಸಕ್ಸಸ್ ರೇಟ್ ಇದೆ. ಆದರೆ ಸಿನಿಮಾ ಬಿಟ್ಟು ಬೇರೆ ಬೇರೆ ಕ್ಷೇತ್ರಗಳಲ್ಲಿಯೂ ಗುರುತಿಸಿಕೊಂಡಿರೋ ಅಜಿತ್, ಈ ಬಾರಿ ಶೂಟಿಂಗ್‍ನಲ್ಲಿ ಭರ್ಜರಿ ಸಾಧನೆ ಮಾಡಿದ್ದಾರೆ.
ತಮಿಳುನಾಡು ರಾಜ್ಯ ರೈಫಲ್ ಶೂಟಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಅಜಿತ್, 6 ಮೆಡಲ್ ಗೆದ್ದುಕೊಂಡಿದ್ದಾರೆ. 46ನೇ ಶೂಟಿಂಗ್ ಸ್ಪರ್ಧೆಯಲ್ಲಿ ಅಜಿತ್ ಗೆದ್ದ 6ಕ್ಕೆ ಆರೂ ಮೆಡಲ್ಲುಗಳು ಗೋಲ್ಡ್ ಎನ್ನುವುದೇ ವಿಶೇಷ.
ಇಂತಹ ಸ್ಪರ್ಧೆಗಳಿಗೆ ಸಿನಿಮಾ ಸೆಲಬ್ರಿಟಿಗಳು ಸಾಮಾನ್ಯವಾಗಿ ಗೆಸ್ಟ್‍ಗಳಾಗಿ ಬರ್ತಾರೆ. ಆದರೆ ಅಜಿತ್ ಹಾಗಲ್ಲ, ಸ್ಪರ್ಧಿಯಾಗಿ ಬಂದು, ಪ್ರಶಸ್ತಿಯನ್ನೂ ಗೆದ್ದಿದ್ದಾರೆ. ಅಜಿತ್ ಅವರ ಇಂತಹ ಸಾಧನೆಗಳು ಇದೇ ಮೊದಲೇನಲ್ಲ. ಅವರು ಕಾರ್ ರೇಸ್, ಬೈಕ್ ರೇಸ್, ಸೈಕ್ಲಿಂಗ್‍ನಲ್ಲೂ ಸಾಧನೆ ಮಾಡಿರುವ ನಾಯಕ. ಕ್ರೀಡಾ ಚಟುವಟಿಕೆಗಳಲ್ಲಿ ಬಹಳಷ್ಟು ಆಸಕ್ತಿ ಇರೋ ಅಜಿತ್, ಅವುಗಳಿಗಾಗಿ ಸಿನಿಮಾವನ್ನೂ ಬಿಟ್ಟು ಹೋಗುತ್ತಾರೆ.