ಪ್ರಿಯಾ ಪ್ರಕಾಶ್ ವಾರಿಯರ್. ಸದ್ಯಕ್ಕೆ ಇಡೀ ದೇಶದ ಸೆನ್ಸೇಷನ್. ಆಕೆಯ ಕಣ್ಸನ್ನೆ, ಕುಡಿನೋಟಕ್ಕೆ ಯುವಕರು ಮರುಳಾಗಿ ಹೋಗಿದ್ದಾರೆ. `ಒರು ಆಡಾರ್ ಲವ್' ಖ್ಯಾತಿಯ ಈ ಪ್ರಿಯಾ, ಈಗ ಕನ್ನಡಕ್ಕೆ ಬರುತ್ತಿದ್ದಾರೆ.
ಯೋಗಿ ಲವ್ಸ್ ಸುಪ್ರಿಯಾ ಅನ್ನೋ ಚಿತ್ರಕ್ಕೆ ಪ್ರಿಯಾ ಓಕೆ ಎಂದಿದ್ದಾರೆ. ಚಿತ್ರದ ನಾಯಕ, ನಿರ್ದೇಶಕ ಯೋಗಿ. ಅವರಿಗೂ ಇದು ಹೊಸ ಅನುಭವ. ಚಿತ್ರರಂಗದಲ್ಲಿ ಹಲವು ವಿಭಾಗಗಳಲ್ಲಿ ದುಡಿದ ಅನುಭವವಿರುವ ಯೋಗಿ, ತಾವೇ ನಿರ್ದೇಶಿಸಿ, ನಟಿಸುತ್ತಿರುವ ಚಿತ್ರ ಯೋಗಿ ಲವ್ಸ್ ಸುಪ್ರಿಯಾ.
ಚಿತ್ರಕ್ಕೆ ಪ್ರಿಯಾ ಅವರನ್ನು ಆಯ್ಕೆ ಮಾಡಿಕೊಳ್ಳೋಕೆ ಕಾರಣ, ಅವರು ಹುಬ್ಬು ಹಾರಿಸಿದ ಶೈಲಿ. ಆ ಟ್ರೆಂಡಿಂಗ್ ವಿಡಿಯೋದಲ್ಲಿ ಅವರು ಹುಬ್ಬು ಹಾರಿಸಿದ್ದನ್ನು ನೋಡಿಯೇ ಯೋಗಿ ಫಿದಾ ಆದರಂತೆ. ಹೀಗಾಗಿ ಇವರೇ ತಮ್ಮ ಚಿತ್ರಕ್ಕೆ ನಾಯಕಿ ಎಂದು ನಿರ್ಧರಿಸಿದ್ದಾರೆ. ಒರು ಆಡಾರ್ ಲವ್ ಚಿತ್ರತಂಡದವರನ್ನು ಸಂಪರ್ಕಿಸಿಸಿ, ಪ್ರಿಯಾ ಅವರ ನಂಬರ್ ಪಡೆದು ಭೇಟಿ ಮಾಡಿ ಬಂದಿದ್ದಾರೆ.
ಚಿತ್ರದ ಕಥೆ ಕೇಳಿ ಇಷ್ಟವಾಗಿರುವ ಪ್ರಿಯಾ ನಟಿಸಲು ಒಪ್ಪಿಕೊಂಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ ಯೋಗಿ.
Related Articles :-
Will Priya Warrier Act In 'Yogi Loves Supriya'?