` marriage, - chitraloka.com | Kannada Movie News, Reviews | Image

marriage,

  • Rakshith Shetty Says Marriage Only After Two Years

    rakshith shetty's views on marriage

    Actor-director Rakshith Shetty has said he intends to marry only after two years and marriage is on cards only after he finishes 'Avane Srimannarayana' and 'Thugs of Malgudi'.

    Recently, there were reports that Rakshith Shetty and 'Kirik Party' actress Rashmika Mandanna are in love and they are getting married shortly. The reports also said that Rakshith and Rashmika will be getting engaged shortly.

    But Rakshith Shetty has said that he Rashmika is just a fellow actor and has not decided anything about marriage. 'I am busy for the next two years and I don't have any plans to marry and I will be getting married only after two years' said Rakshith Shetty.

  • Suni Weds Soundarya n Chickmagalur

    sunil weds soundarya

    Director Suni who shot to fame with 'Simpleagond Love Story' married Soundarya in Chickmagalur on Friday. Rakshith Shetty, Pushkar Mallikarjunaiah, Praveen, Ashu Bedra and others from film industry wished Suni and Soundarya a happy married life.

    Suni and Soundarya were in love for the last four years. Due to various reasons, the marriage was delayed and now Suni and Soundarya have entered into a wedlock.

    Suni has arranged a reception on Sunday night for Kannada film industry celebrities. Many celebrities are expected to attend this reception.

  • ಕೊನೆಗೂ ಫಿಕ್ಸ್ ಆಯ್ತು ನಮಿತಾ ಮದುವೆ..!

    namitha's marriage fixed

    ನಟಿ ನಮಿತಾಗೆ ಮದುವೆನಾ..? ಹುಡುಗ ಯಾರಂತೆ..? ಯಾವಾಗಂತೆ..? ಇಂಥ ಪ್ರಶ್ನೆಗಳು ಆಗಾಗ್ಗೆ ಕೇಳಿಬರುವುದು ಹಾಗೂ ನಮಿತಾ ನಿರಾಕರಿಸುವುದು, ಸುದ್ದಿ ಸುಳ್ಳಾಗುವುದು ಇತ್ತೀಚಿನವರೆಗೆ ನಡೆದುಕೊಂಡೇ ಬರುತ್ತಿತ್ತು. ದಷ್ಟಪುಷ್ಟ ದೇಹದ ನಮಿತಾ ಕನ್ನಡ, ತೆಲುಗು ಮತ್ತು ತಮಿಳಿನಲ್ಲಿ ಬ್ಯುಸಿಯಾಗಿದ್ದ ನಟಿ. 

    ಈಗ ನಮಿತಾ ತಮ್ಮ ಮದುವೆಯ ಸುದ್ದಿಯನ್ನು ತಾವೇ ಹೇಳಿಕೊಂಡಿದ್ದಾರೆ. ತಮಿಳು ನಟ ವೀರೇಂದ್ರ ಚೌಧರಿಯನ್ನು ಮದುವೆಯಾಗುತ್ತಿದ್ದಾರೆ ನಮಿತಾ. ನವೆಂಬರ್ 24ರಂದು ಮದುಮಗಳಾಗುತ್ತಿದ್ದೇನೆ, ನಿಮ್ಮ ಹಾರೈಕೆ, ಪ್ರೀತಿ ಹೀಗೆಯೇ ಇರಲಿ ಎಂದು ಕೇಳಿಕೊಂಡಿದ್ದಾರೆ.

    ತೆಲುಗಿನ ಸ್ವಂತಂ ಚಿತ್ರದ ಮೂಲಕ ಬೆಳ್ಳಿತೆರೆಗೆ ಬಂದ ನಮಿತಾ, ಕನ್ನಡದಲ್ಲಿ ನೀಲಕಂಠ, ಇಂದ್ರ, ಹೂ, ನಮಿತಾ ಐ ಲವ್ ಯೂ, ಬೆಂಕಿ ಬಿರುಗಾಳಿ ಮೊದಲಾದ ಚಿತ್ರಗಳಲ್ಲಿ ನಟಿಸಿದ್ದಾರೆ. 

  • ತಿಥಿ ಖ್ಯಾತಿಯ ಅಭಿಷೇಕ್‍ಗೆ ಮದುವೆ ಸಂಭ್ರಮ

    thithi fame abhishek

    ತಿಥಿ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಖ್ಯಾತನಾಗಿದ್ದ ಯುವನಟ ಅಭಿಷೇಕ್ ಈಗ ಮದುವೆಯಾಗುತ್ತಿದ್ದಾರೆ. ನವೆಂಬರ್ 14ರಂದು ಮಕ್ಕಳ ದಿನಾಚರಣೆ ದಿನ, ಅಭಿಷೇಕ್ ಹಸೆಮಣೆ ಏರುತ್ತಿದ್ದಾರೆ. ಅಕ್ಕನ ಮಗಳು ಹೊಂಬಾಳೆಯನ್ನೇ ಮದುವೆಯಾಗುತ್ತಿರುವ ಅಭಿಷೇಕ್, ಮೂಲತಃ ಮಂಡ್ಯ ಜಿಲ್ಲೆಯ ಹುಲಿಕೆರೆ ಕೊಪ್ಪಲಿನವರು. 

    ನವೆಂಬರ್ 14 ಶಾಸ್ತ್ರ, ನವೆಂಬರ್ 15 ಮುಹೂರ್ತ. ತಿಥಿ ಚಿತ್ರದ ಮೂಲಕ ಬೆಳ್ಳಿತೆರೆಗೆ ಪರಿಚಯವಾಗಿದ್ದ ಅಭಿಷೇಕ್, ತದನಂತರ ತರ್ಲೆ ವಿಲೇಜ್, ಏನ್ ನಿನ್ ಪ್ರಾಬ್ಲಮ್ಮು, ಹಳ್ಳಿ ಪಂಚಾಯ್ತಿ ಚಿತ್ರಗಳಲ್ಲಿಯೂ ನಟಿಸಿದ್ದರು. 

  • ಪ್ರೀತಿ ನಿಜ, ಮದುವೆ ಸುಳ್ಳು - ಶೃತಿ ಹರಿಹರನ್

    sruthi hariharan reacts

    ಶೃತಿ ಹರಿಹರನ್ ಮದುವೆಯಾಗಿದ್ದಾರೆ ಎಂಬ ವದಂತಿ ಗಾಂಧಿನಗರದಲ್ಲಿ ಹರಿದಾಡುತ್ತಿತ್ತು. ಆದರೆ, ಚಿತ್ರರಂಗದಲ್ಲಿ ಸದ್ಯಕ್ಕೆ ಉತ್ತುಂಗದಲ್ಲಿರುವ ಕಾರಣಕ್ಕೆ ಅದನ್ನು ಗುಟ್ಟಾಗಿದ್ದಾರೆ ಎನ್ನಲಾಗಿತ್ತು. ಆ ಗಾಸಿಪ್​ಗಳಿಗೆ ನಟಿ ಶೃತಿ ಹರಿಹರನ್ ಪ್ರತಿಕ್ರಿಯೆ ನೀಡಿದ್ದಾರೆ.

    ಮದುವೆ ಆಗೋದು ನಿಜ. ಆದರೆ, ಸದ್ಯಕ್ಕೆ ಆಗಿಲ್ಲ. ನಾನು ಮದುವೆಯಾಗಿದ್ದೇನೆ ಎನ್ನಲಾಗುತ್ತಿರುವ ರಾಮ್ ಕುಮಾರ್, ನನಗೆ ಚಿತ್ರರಂಗಕ್ಕೆ ಬರುವ ಮೊದಲಿನಿಂದಲೂ ಗೊತ್ತು. ಮದುವೆ ಆಗುವಾಗ ಎಲ್ಲರಿಗೂ ಹೇಳಿಯೇ ಮದುವೆಯಾಗುತ್ತೇನೆ. ಇಷ್ಟಕ್ಕೂ ಅದು ನನ್ನ ಪರ್ಸನಲ್ ಎಂದಿದ್ದಾರೆ ಶೃತಿ ಹರಿಹರನ್.     

    ನಾನು ಡ್ಯಾನ್ಸ್ ಮಾಸ್ಟರ್ ಜೊತೆ ಮದುವೆ ಆಗಿದ್ದೇನೆ ಅಂತ ಸುದ್ದಿ ಹರಡಿದೆ. ಆದರೆ ನಾನು ಮದುವೆ ಆಗುತ್ತಿರುವಾತ ಡ್ಯಾನ್ಸ್ ಮಾಸ್ಟರ್ ಅಲ್ಲ. ಮುಚ್ಚಿಡುವಂಥಾದ್ದು ಏನೂ ಇಲ್ಲ ಎಂದಿದ್ದಾರೆ ಶೃತಿ ಹರಿಹರನ್.

    Related Articles :-

    ನಟಿ ಶೃತಿ ಹರಿಹರನ್ ಸೀಕ್ರೆಟ್ ಮದುವೆಯಾಗಿದ್ದಾರಂತೆ..!

  • ಮದುವೆಯಾಗಿರುವುದು ನಿಜ. ಮುಚ್ಚಿಟ್ಟಿದ್ದಕ್ಕೆ ಕಾರಣವೂ ಇದೆ - ರಮ್ಯಾ ಬಾರ್ನಾ

    ramya barne accepts marriage

    ಮೇ 29ರಂದೇ ರಹಸ್ಯವಾಗಿ ಮದುವೆಯಾಗಿರುವ ರಮ್ಯಾ ಬಾರ್ನಾ, ಇಷ್ಟು ದಿನ ವಿಷಯವನ್ನು ಮುಚ್ಚಿಟ್ಟಿದ್ದು ಏಕೆ ಎಂಬ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಫಹಾದ್, ರಮ್ಯಾ ಬಾರ್ನಾ ಅವರಿಗೆ ಹಲವು ದಿನಗಳಿಂದ ಗೊತ್ತಿತ್ತು.

    ಪರಿಚಯ ಪ್ರೇಮಕ್ಕೆ ತಿರುಗಿತ್ತು. ದೊಡ್ಡದಾಗಿ ಮದುವೆಯಾಗುವುದು ನನಗೆ ಇಷ್ಟವಿರಲಿಲ್ಲ. ಹೀಗಾಗಿ ಸಿಂಪಲ್ಲಾಗಿ ರಿಜಿಸ್ಟರ್ ಮ್ಯಾರೇಜ್ ಮಾಡಿಕೊಂಡೆವು. ಸದ್ಯಕ್ಕೆ ನನ್ನ ತಾಯಿಯ ಆರೋಗ್ಯ ಸರಿಯಿಲ್ಲದ ಕಾರಣ, ಮದುವೆಯನ್ನು ಬಹಿರಂಗಪಡಿಸಿಲ್ಲ. ಶೀಘ್ರದಲ್ಲೇ ಒಂದು ಪಾರ್ಟಿ ಕರೆದು ಎಲ್ಲರಿಗೂ ತಿಳಿಸುತ್ತೇವೆ ಎಂದಿದ್ದಾರೆ ರಮ್ಯಾ ಬಾರ್ನಾ.

    ಇದರ ಬಗ್ಗೆ ಚಿತ್ರಲೋಕ ಡಾಟ್ ಕಾಮ್, ಜನವರಿಯಲ್ಲಿ ಒಂದು ವರದಿ ಮಾಡಿತ್ತು. ಆಗ ರಮ್ಯಾ ಬಾರ್ನಾ ಮ್ಯಾಟ್ರಿಮೋನಿಯಲ್ ಸೈಟ್ವೊಂದರಲ್ಲಿ ತಮ್ಮ ಫೋಟೋ ಮತ್ತು ವಿವರವನ್ನು ಅಪ್ಲೋಡ್ ಮಾಡಿದ್ದರು.

    ಆದರೆ, ಆಗ ಅದನ್ನು ರಮ್ಯಾ ಒಪ್ಪಿಕೊಂಡಿರಲಿಲ್ಲ. ಅಂದಹಾಗೆ ರಮ್ಯಾ ಅವರ ಪತಿ ಫಹಾದ್, ಜಮೀರ್ ಅಹ್ಮದ್ ಅವರ ಸೋದರಿಯ ಮಗನಲ್ಲ. ಜಮೀರ್ ಅಹ್ಮದ್ ಅವರ ಅಕ್ಕನ ಪತಿಯ ತಮ್ಮನ ಮಗ. ಅಂದ್ರೆ ಜಮೀರ್ ಅಹ್ಮದ್ ಅವರ ಭಾವನ ತಮ್ಮನ ಮಗ.

    Related Articles :-

    ಚಿತ್ರನಟಿ ರಮ್ಯಾ ಬಾರ್ನಾ ಸೀಕ್ರೆಟ್ ಮ್ಯಾರೇಜ್

    Ramya Barne Seen in Matrimonial Site - Exclusive

  • ಸಿಂಧು ಲೋಕನಾಥ್ ರಹಸ್ಯ ಮದುವೆ..!

    sindhu loknath secret marriage

    ಚಿತ್ರನಟಿ ಸಿಂಧು ಲೋಕನಾಥ್ ಮದುವೆಯಾಗಿದ್ದಾರೆ. ಆದರೆ, ಅದನ್ನು ಬಹಿರಂಗಪಡಿಸದ ಕಾರಣಕ್ಕಷ್ಟೇ ಇದು ರಹಸ್ಯ ಮದುವೆ. ಪುಮಾ ಕಂಪೆನಿಯ ಉದ್ಯೋಗಿಯಾಗಿರುವ ಶ್ರೇಯಸ್ ಎಂಬುವರ ಜೊತೆ ಸಿಂಧು ಸಪ್ತಪದಿ ತುಳಿದಿದ್ದಾರೆ. ಶ್ರೇಯಸ್ ಮೂಲತಃ ಮಂಗಳೂರಿನವರು. ಇವರಿಬ್ಬರ ಮಧ್ಯೆ 2 ವರ್ಷದಿಂದ ಪ್ರೀತಿಯಿತ್ತು. ಈಗ ಮದುವೆಯಾಗಿದೆ.

    ಆಗಸ್ಟ್ 27ನೇ ತಾರೀಕು, ಮಡಿಕೇರಿಯ ಕಾವೇರಿ ಹಾಲ್​ನಲ್ಲಿ ಬೆಳಗ್ಗೆ 11 ಗಂಟೆಯಿಂದ ನಡೆದ ತುಲಾ ಮುಹೂರ್ತದಲ್ಲಿ ಮದುವೆಯಾಗಿದೆ. ತಂದೆ ತಾಯಿಯೇ ನಿಂತು ಈ ಮದುವೆ ನೆರವೇರಿಸಿಕೊಟ್ಟಿದ್ದಾರೆ. 

    ಸಿಂಧು ಲೋಕನಾಥ್ ಮೂಲತಃ ಕೊಡಗಿನವರು. ಪರಿಚಯ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ಸಿಂಧು, ರಾಕ್ಷಸಿ, ಯಾರೇ ಕೂಗಾಡಲಿ, ಡ್ರಾಮಾ, ಲವ್ ಇನ್ ಮಂಡ್ಯ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಮದುವೆಯ ಕುರಿತು ಪ್ರತಿಕ್ರಿಯೆ ಕೇಳಲು ಪ್ರಯತ್ನಿಸಿದರೆ, ಸದ್ಯಕ್ಕೆ ಸಿಂಧು ಫೋನ್ ಸ್ವಿಚ್​ ಆಫ್.

  • ಹುಚ್ಚ ವೆಂಕಟನ ಹೊಸ ಗಿಮಿಕ್ಕು..!

    huccha venkats second marriage is gimmick

    ಹುಚ್ಚ ವೆಂಕಟ್ ಗಿಮಿಕ್ ಮಾಡೋದ್ರಲ್ಲಿ ಫೇಮಸ್. ಇತ್ತೀಚೆಗೆ ವೆಂಕಟ್, ತಾವು ತಮ್ಮ ಚಿತ್ರದ ನಾಯಕಿ ಐಶ್ವರ್ಯಾ ಅವರನ್ನು ಮದುವೆಯಾಗಿರೋದಾಗಿ ಹೇಳಿಕೊಂಡಿದ್ದರು. ಆದರೆ, ನಮ್ಮ ಅಪ್ಪ-ಅಮ್ಮನಿಗೆ ಹೇಳಬೇಡಿ ಎಂದು ಮನವಿ ಮಾಡಿದ್ದ ಅವರ ಮಾತಿನ ಬಗ್ಗೆ ಅನುಮಾನ ಇದ್ದೇ ಇತ್ತು. ಕೊನೆಗೂ ಅದು ಹುಚ್ಚ ವೆಂಕಟ್‍ನ ಪಬ್ಲಿಸಿಟಿ ಗಿಮಿಕ್ ಅನ್ನೋದು ಋಜುವಾತಾಗಿದೆ. ಏಕೆಂದರೆ, ಅದು ಹುಚ್ಚ ವೆಂಕಟ್‍ನ ಹೊಸ ಸಿನಿಮಾದ ದೃಶ್ಯವಂತೆ. ಅದನ್ನೇ ರಿಯಲ್ ಮದುವೆ ಅನ್ನೋ ರೀತಿ ತೋರಿಸಿ ಜನರನ್ನು ಬಕರಾ ಮಾಡಲು ಯತ್ನಿಸಿದ್ದಾನೆ ಹುಚ್ಚ ವೆಂಕಟ್.

    ನಾನು ಒಬ್ಬನೇ, ನಾನು ಯಾವತ್ತಿಗೂ ಸಿಂಗಲ್ ಎಂದಿರುವ ಹುಚ್ಚ ವೆಂಕಟ್, ಐಶ್ವರ್ಯಾ ಹೇಳಿದ್ದಕ್ಕೇ ಈ ರೀತಿ ಮಾಡಿದ್ದಾಗಿ ಹೇಳಿಕೊಂಡಿದ್ದಾನೆ.

    Related Articles :-

    ಹುಚ್ಚ ವೆಂಕಟ್ ಎರಡನೇ ಮದ್ವೆ..!

  • ಹುಚ್ಚ ವೆಂಕಟ್ ಎರಡನೇ ಮದ್ವೆ..!

    huccha venkat gets married again
    ನನ್ ಎಕ್ಕಡಾ.. ನನ್ ಮಗಂದ್.. ಖ್ಯಾತಿಯ ಹುಚ್ಚ ವೆಂಕಟ್ ಮತ್ತೊಮ್ಮೆ ಮದುವೆಯಾಗಿದ್ದಾರೆ. ಈ ಬಾರಿ ಅವರು ಮದುವೆಯಾಗಿರೋದು ತಮ್ಮದೇ ಚಿತ್ರದ ಹೀರೋಯಿನ್ ಜೊತೆ ಅನ್ನೋದು ವಿಶೇಷ. ಡಿಕ್ಟೇಟರ್ ಹುಚ್ಚ ವೆಂಕಟ್ ಅನ್ನೋ ಸಿನಿಮಾ ಮಾಡುತ್ತಿರುವ ವೆಂಕಟ್, ಅದೇ ಚಿತ್ರದ ನಾಯಕಿ ಐಶ್ವರ್ಯಾರನ್ನು ಮದುವೆಯಾಗಿದ್ದಾರೆ. ಅಂದಹಾಗೆ ಇದು ಹುಚ್ಚ ವೆಂಕಟ್‍ಗೆ ಎರಡನೇ ಮದುವೆ. ಈ ಮೊದಲು ರೇಷ್ಮಾ ಎಂಬುವವರನ್ನು ಮದುವೆಯಾಗಿದ್ದ ವೆಂಕಟ್, ನಂತರ ಅವರಿಂದ ದೂರವಾಗಿದ್ದರು.
     
    ಮಡಿಕೇರಿಯಲ್ಲಿ ಮದುವೆಯಾಗಿರುವ ಹುಚ್ಚ ವೆಂಕಟ್, ಇನ್ನೂ ವಿಷಯವನ್ನು ಮನೆಯವರಿಗೆ ತಿಳಿಸಿಲ್ಲವಂತೆ!. ಫೇಸ್‍ಬುಕ್ ಲೈವ್‍ನಲ್ಲಿ ಇದೆಲ್ಲ ವಿಷಯವನ್ನು ಜಗತ್ತಿಗೇ ಹೇಳಿಕೊಂಡಿರುವ ಹುಚ್ಚ ವೆಂಕಟ್, ಮದುವೆ ವಿಷಯವನ್ನು ಮನೆಯವರಿಂದ ಮುಚ್ಚಿಟ್ಟಿದ್ದಾರಂತೆ. ಕಾರಣ, ಅವರ ದೊಡ್ಡಮ್ಮ ತೀರಿಹೋದ ಸುದ್ದಿ. ಹೀಗಾಗಿ ಹೇಳಿಲ್ಲ. ನಮ್ಮನ್ನು ದೂರ ಮಾಡಬೇಡಿ ಎಂದು ಬೇಡಿಕೊಂಡಿದ್ದಾರೆ ಹುಚ್ಚ ವೆಂಕಟ್.
  • ಹೇಮಾ ಪಂಚಮುಖಿ, ಸುಮಂತ್ ವಿವಾಹ ಬಂಧನ

    hema panchamukhi, sumanth

    ಹೇಮಾ ಪಂಚಮುಖಿ. ಅಮೆರಿಕ ಅಮೆರಿಕಾದ ಭೂಮಿಕಾ, ರವಿಮಾಮನ ಪ್ರೀತಿಯ ತಂಗಿ, ಸಂಭ್ರಮದ ಮೂಕ ಹುಡುಗಿ, ದೊರೆ ಮೊದಲಾದ ಸಿನಿಮಾಗಳಲ್ಲಿ ಅಭಿನಯದ ಮೂಲಕವೇ ಕನ್ನಡಿಗರ ಹೃದಯ ಗೆದ್ದಿದ್ದವರು. ಈಗ ಮದುವೆಯಾಗಿದ್ದಾರೆ. ಮದುವೆಯಾಗಿರುವುದು ರಂಗೋಲಿ ಚಿತ್ರದ ಖ್ಯಾತಿಯ ಸುಮಂತ್ ಅವರನ್ನ.

    ಅಂದಹಾಗೆ ಸುಮಂತ್ ಅವರ ನಿಜವಾದ ಹೆಸರು ಪ್ರಶಾಂತ್ ಗೋಪಾಲ ಸ್ವಾಮಿ. ಮದುವೆಯ ಸುದ್ದಿಯನ್ನು ಇಬ್ಬರೂ ತಮ್ಮ ತಮ್ಮ ಫೇಸ್‍ಬುಕ್ ಪೇಜ್‍ಗಳಲ್ಲಿ ಹಂಚಿಕೊಂಡಿದ್ದಾರೆ. 

    ಸಿನಿಮಾ ಕ್ಷೇತ್ರದಿಂದ ದೂರವೇ ಇರುವ ಹೇಮಾ, ಅದ್ಭುತ ನೃತ್ಯಗಾತಿ. ಬೆಂಗಳೂರಿನಲ್ಲಿ ನೃತ್ಯ ಶಾಲೆ ನಡೆಸುತ್ತಿರುವ ಹೇಮಾ, ನೂರಾರು ಮಕ್ಕಳಿಗೆ ನೃತ್ಯದ ಪಾಠ ಹೇಳಿಕೊಡುತ್ತಾರೆ. ಸ್ಟೇಜ್‍ಗಳಲ್ಲಿ ಶೋ ಕೊಡುತ್ತಾರೆ. ಪ್ರಶಾಂತ್ (ಸುಮಂತ್) ಕೂಢಾ ಭರತನಾಟ್ಯ ಕಲಾವಿದ. 

    ಹೇಮಾ ಪಂಚಮುಖಿ, ಈ ಹಿಂದೆ ಮದುವೆಯಾಗಿದ್ದವರು. ಡೈವೋರ್ಸ್ ತೆಗೆದುಕೊಂಡಿದ್ದ ಹೇಮಾ ಅವರು ಹೊಸ ಬದುಕಿನ ಹೆಜ್ಜೆಯಿಟ್ಟಿದ್ದಾರೆ. ಶುಭವಾಗಲಿ.