` danish sait, - chitraloka.com | Kannada Movie News, Reviews | Image

danish sait,

  • `ಮಹಿಳೆಯರೇ.. ಮಹನೀಯರೇ.. ನೊಗರಾಜ್‍ಗೆ ಮತ ನೀಡಿ'

    humble politician creates trend

    ಹಂಬಲ್ ಪೊಲಿಟಿಷಿಯನ್ ನೊಗರಾಜ್. ಇದು ಚಿತ್ರದ ಹೆಸರು. ನೊಗರಾಜ್ ಅಥವಾ ನೋಗರಾಜ್ ಅಥವಾ ನಾಗರಾಜ್... ಹೀಗೆ ಮೂರೂ ಸ್ಟೈಲಲ್ಲಿ ಜನ ಚಿತ್ರದ ಹೆಸರು ಹೇಳುತ್ತಿದ್ದಾರೆ. ಚಿತ್ರವೊಂದು ಅಷ್ಟರಮಟ್ಟಿಗೆ ಕ್ರಿಯೇಟಿವಿಟಿ ಸೃಷ್ಟಿಸುವುದರಲ್ಲೇ ಚಿತ್ರದ ಯಶಸ್ಸು ಕೂಡಾ ಅಡಗಿದೆ. ಚಿತ್ರ ಬಿಡುಗಡೆಗೆ ಮುನ್ನವೇ ಪ್ರೇಕ್ಷಕರ ಮಧ್ಯೆ ಟಾಕಿಂಗ್ ಸೃಷ್ಟಿಸಿದೆ.

    ಈ ಚಿತ್ರದಲ್ಲಿರೋದು ರಾಜಕಾರಣಿಯ ಪಾತ್ರ. ರಾಜಕಾರಣಕ್ಕಾಗಿ, ರಾಜಕಾರಣಿಯೊಬ್ಬ ಏನೇನೆಲ್ಲ ಗಿಮಿಕ್ ಮಾಡಬಹುದೋ.. ಎಲ್ಲವನ್ನೂ ಚಿತ್ರದಲ್ಲಿ ಹೇಳಲಾಗಿದೆ. ದಾನೀಶ್ ಇರೋದ್ರಿಂದ ವ್ಯಂಗ್ಯ, ವಿಡಂಬನೆ ಸ್ವಲ್ಪ ಹೆಚ್ಚೆಂದೇ ಹೇಳಬಹುದು. ನೋಡುವಾಗ ಮುಗುಳ್ನಕ್ಕವರು, ಮತ್ತೆ ಮತ್ತೆ ನೆನಪಾದಾಗ ಗಹಗಹಿಸಿ ನಗುವಂತಾ ದೃಶ್ಯಗಳಿವೆಯಂತೆ.

    ಮಹಿಳೆಯರೇ.. ಮಹನೀಯರೇ.. ಪ್ರೇಕ್ಷಕರೇ.. ನೋಗರಾಜ್‍ಗೆ ಮತ ನೀಡಿ. ಡಿಸೆಂಬರ್ 29ಕ್ಕೆ ಬರ್ತಾರೆ. ಕರ್ನಾಟಕದ ಎಲೆಕ್ಷನ್‍ವರೆಗೂ ಕಾಯಿಸಲ್ಲ. ಸಿನಿಮಾ ನೋಡಿ, ನಮ್ಮ ರಾಜಕಾರಣಿಗಳು ಹೇಗೆಲ್ಲ ಗಿಮಿಕ್ ಮಾಡ್ತಾರೆ ಅನ್ನೊದನ್ನ ನೀವೇ ಅಂದಾಜು ಮಾಡಿ. ದಾನೀಶ್ ಜೊತೆ ಶೃತಿ ಹರಿಹರನ್ ಪ್ರಮುಖ ಪಾತ್ರದಲ್ಲಿದ್ದಾರೆ. ಸಿನಿಮಾದಲ್ಲಿಗುಜರಾತ್, ಹಿಮಾಚಲ ಪ್ರದೇಶ ಚುನಾವಣೆಯಲ್ಲಿ ಕಾಣಿಸಿಕೊಂಡ ಗಿಮಿಕ್‍ಗಳೂ ಇವೆ. 

  • '777 Charlie' Welcomes Danish Sait On Board

    777 charlie welcomes danish sait on board

    Danish Sait who is looking forward for the release of 'French Biryani' in Amazon Prime has joined the team of Rakshith Shetty starrer 'Charlie 777'. The actor will be playing a prominent role in the film.

    '777 Charlie' is being jointly produced by Rakshith Shetty and Pushkar Mallikarjunaiah and the film is written and directed by debutante Kiran Raj. The film revolves around a dejected youth and a dog. Raj B Shetty, Sangeetha Sringeri, Danish Shetty and others play important roles in the film. 

    '777 Charlie' was supposed to have been completed by now. The team had planned to complete the shooting by June and release the film as soon as possible. Due to lockdown, the shooting has been postponed indefinitely and the film will release only by next year.

    The team had released a video called 'Life of Dharma' on occasion of Rakshit Shetty's birthday last month

  • 'Humble Politician Nogaraj' To Release On Dec 29th

    humble politicain nograj

    Danish Seth's debut film as a hero, 'Humble Politician Nogaraj' is all set to be released on the 29th of December.

    'Humble Politician Nograj' stars Danish Seth, Roger Narayan, Shruthi Hariharan, Sumukhi, Raghu, Vijay Chendur and others in prominent roles. The film is being directed by Saad Khan, while Saadh Khan and Danish Seth have scripted the film. 

    The film is jointly produced by Pushkar Mallikarjunaiah, Hemanth Rao and Rakshith Shetty.

  • 'Humble Politician Nograj' Replaces 'Agnatavasi'

    danish's humble politician, pawan's agnatavasi

    Danish Sait's debut film as a hero, 'Humble Politician Nogaraj' which was released on Friday is getting good response from the audience and within two days of the film's release, the film has been getting more and more theaters.

    'Humble Politician Nogaraj' has been released in more than 100 theaters across Karnataka. Now the film has replaced Telugu film 'Agnyaathavaasi' in Urvashi, Rex, Srinivasa and other theaters, as the Pavan Kalyan starrer is not performing well and the audience is not showing interest in watching the film. So, the film has been replaced by 'Humble Politician Nograj'.

    The film stars Danish Sait, Roger Narayan, Shruthi Hariharan, Sumukhi, Raghu, Vijay Chendur and others in prominent roles. The film is being directed by Saad Khan, while Saadh Khan and Danish Seth have scripted the film. The film is jointly produced by Pushkar Mallikarjunaiah, Hemanth Rao and Rakshith Shetty.

  • Humble Politician Nogaraj Launched

    danish sait in humble politician

    'Godhi Banna Sadharana Maikattu' producer Pushkar Mallikarjunaiah is back with a new film called 'Humble Politician Nogaraj' and the film was launched on the Valentines day at the Sri Dharmastala Manjunatha Swamy Temple in Bangalore.

    The film stars Danish Seth, Roger Narayan, Shruthi Hariharan, Sumukhi, Raghu, Vijay Chendur and others in prominent roles. The film is being directed by Saad Khan, while Saadh Khan and Danish Seth have scripted the film. The film is jointly produced by Pushkar Mallikarjunaiah, Hemanth Rao and Rakshith Shetty and the shooting for the film will start from the 01st of March.

    Danish Seth says this film is a political satire. 'We are not targeting any party or leaders in this film. We are just making a satire about the Indian political system. There wont be any imitations in the film. We are just telling, about how a man gets into trouble doing bad things. This will be a comedy film with a good message' says Danish Seth.

    Related Articles:-

    Humble Politician Nograj Audition On Dec 12th And 13th

  • Humble Politician Nogaraj Postponed To Jan 12th

    humble politicain nograj

    If everything had gone right, then Danish Seth's debut film as a hero, 'Humble Politician Nogaraj' was all set to be released on the 29th of December. Now the film has been postponed to the 12th of January.

    'Humble Politician Nograj' has been postponed to the 12th of January. The film will not be releasing across Karnataka, but also across India and other countries.

    The film stars Danish Seth, Roger Narayan, Shruthi Hariharan, Sumukhi, Raghu, Vijay Chendur and others in prominent roles. The film is being directed by Saad Khan, while Saadh Khan and Danish Seth have scripted the film. The film is jointly produced by Pushkar Mallikarjunaiah, Hemanth Rao and Rakshith Shetty.

  • Humble Politician Nograj Review; Chitraloka Rating 3.5/5

    humble politician nograj movie review

    You may have seen many kinds of politicians but this is one special guy. Meet Humble Politician Nograj, an one-of-a-kind political animal. Like all politicians he is corrupt. But he is honest about it. He does not lie about it. He tries to better himself in this aspect everyday by improving his corruption appeal. 

    Even our Nograj has to face difficulties. His dangers come in the form of the local MLA who wants to dominate all corporators. Nograj is not one to be dominated and stomped upon. He sets out to demolish his opponent. He does what every politician does. It is a dog eat dog world out there and Nograj knows how to handle it. He thrives when it comes to beating politicians at their own game.

    Now what if a really honest person who is not a politican becomes his opponent? That is where the fun begins. Nograj is at his wit's end facing the challenge from NRI turned local honest businessman Roger Narayan. Does Nograj finally meet his Waterloo at the hands of the really honest person or does the wily politician win the impossible battle? That is what you will see in the film Honest Politician Nograj. 

    Danish Seth's hilarious comedy coupled with a serious satire on the political system in the country through the eyes of a businessman is brought out beautifully by director Saad Khan. The film has some good acting by Danish Sait, Vijay Chendur, Roger Narayan, Sumukhi Suresh, Sruthi Hariharan and Hanumante Gowda. 

    This is a very unusual film that will leave you laughing all the way through. It will leave you rooting for Nograj sometimes and the honest Roger other times. Either way it is a win-win situation for everyone including the audience. This is a surprisingly different kind of film and you would not have experienced the dimensions of characters like this. At times the film has too much of English and it may not be familiar to everyone. But overall this is a special film for Sandalwood and a Sankranti gift. 

    Chitraloka Rating - 3.5/5

  • Naughty Calendar Of 'Humble Politician Nogaraj' Released

    humble politicain nograj

    Danish Seth's debut film as a hero, 'Humble Politician Nogaraj' is all set to be released on the 12th of January. Meanwhile, a naughty calendar of the film has been released in social media by actor Danish Seth.

    'Humble Politician Nograj' stars Danish Seth, Roger Narayan, Shruthi Hariharan, Sumukhi, Raghu, Vijay Chendur and others in prominent roles. The film is being directed by Saad Khan, while Saadh Khan and Danish Seth have scripted the film. 

    The film is jointly produced by Pushkar Mallikarjunaiah, Hemanth Rao and Rakshith Shetty.

     

  • PRK Productions To Produce Danish's Next

    PRK Productions To Produce Danish's Next

    After 'French Biryani', PRK Productions and Danish Sait is back with their new film called 'One Cut Two Cut' which is all set to be launched in February.

    On Friday, on the occasion of the new year Puneeth announced the new film in the social media and released the posters of the film. If going by the poster, Danish plays the role of Gopi an English teacher and film looks like a laugh riot.

    '2021 a new movie is came. PRK Productions is here to entertain you with an Gopi. Starring Danish Sait and eclectic cast. This is definitely going to be an absolute freak out film Ok. Filming starts in February' tweeted Puneeth Rajakumar.

    The film is being directed by debutante Vamsidhar Bhogaraju and more details about the film are yet awaited.

  • Puneeth To Produce Pannaga-Danish Film

    puneth tp produce pannaga danish film

    Puneeth Rajkumar will produce a new film to be directed by Pannaga Bharana and starring Danish Sait. This will be the third film under the PRK Productions banner. PRK Productions is also producing Kavalu Daari and Maya Bazaar.

    The idea for the new film was pitched by Pannaga to Puneeth Rajkumar who instantly agreed to it. It was Pannaga's idea to cast Danish Sait in the lead role. The title, cast and crew are yet to be finalized.

  • ಅಪ್ಪು ಬ್ಯಾನರ್‍ನಲ್ಲಿ 3ನೇ ಸಿನಿಮಾ ಶುರು

    puneeth starts new movie under prk productions

    ಪುನೀತ್ ರಾಜ್‍ಕುಮಾರ್ ಅವರ ಪಿಆರ್‍ಕೆ ಪ್ರೊಡಕ್ಷನ್ ಹೌಸ್, 3ನೇ ಸಿನಿಮಾ ಶುರು ಮಾಡಿದೆ. ಈ ಬಾರಿ ಪುನೀತ್ ಪನ್ನಗಾಭರಣ ಅವರಿಗೆ ನಿರ್ದೇಶನದ ಹೊಣೆ ನೀಡಿದ್ದಾರೆ. ಡ್ಯಾನಿಷ್ ಸೇಠ್ ಚಿತ್ರದ ಹೀರೋ. ದಿಶಾ ಮದನ್ ನಾಯಕಿ.

    ಚಿತ್ರದಲ್ಲಿ ಇಬ್ಬರು ಆಟೋ ಡ್ರೈವರ್‍ಗಳ ಕಥೆಯಿದೆ. ಒಬ್ಬ ಶಿವಾಜಿನಗರದವನು. ಇನ್ನೊಬ್ಬ ಫ್ರಾನ್ಸ್‍ನಿಂದ ಬಂದು ಶಿವಾಜಿನಗರದಲ್ಲಿ ಬದುಕುತ್ತಿರುವವನು. ಚಿತ್ರದ ಕಥೆ ಕೇಳಿಯೇ ಪುನೀತ್ ಬಿದ್ದೂ ಬಿದ್ದು ನಕ್ಕರು ಎಂದಿದ್ದಾರೆ ನಿರ್ದೇಶಕ ಪನ್ನಗಾಭರಣ.

    ಪುನೀತ್ ಸರ್ ಹೋಮ್ ಬ್ಯಾನರ್‍ನಲ್ಲಿ ನಟಿಸುತ್ತಿರುವುದೇ ದೊಡ್ಡ ಥ್ರಿಲ್ ಎಂದಿದ್ದಾರೆ ಡ್ಯಾನಿಷ್ ಸೇಠ್. ಪಿಆರ್‍ಕೆ ಬ್ಯಾನರ್‍ನ ಕವಲುದಾರಿ ಹಾಗೂ ಮಾಯಾ ಬಜಾರ್, ರಿಲೀಸ್‍ಗೆ ರೆಡಿಯಾಗಿವೆ. 3ನೇ ಚಿತ್ರಕ್ಕೆ ಸ್ಕ್ರಿಪ್ಟ್ ಪೂಜೆ ನಡೆದಿದೆ.

  • ಅಪ್ಪು ಮೆಚ್ಚಿದ ಹಂಬಲ್ ಪೊಲಿಟಿಷಿಯನ್ ನೊಗ್‍ರಾಜ್

    puneeth appreciates humble politician

    ರಾಜ್ಯಾದ್ಯಂತ.. ದೇಶಾದ್ಯಂತ.. ಜಗತ್ತಿನಾದ್ಯಂತ.. ಭರ್ಜರಿ ಸುದ್ದಿ ಮಾಡುತ್ತಿರುವ ಹಂಬಲ್ ಪೊಲಿಟಿಷಿಯನ್ ಚಿತ್ರಕ್ಕೆ ಸ್ವತಃ ಪುನೀತ್ ರಾಜ್‍ಕುಮಾರ್ ಅವರಿಂದಲೂ ಮೆಚ್ಚುಗೆ ಸಿಕ್ಕಿದೆ. ಎಲ್ಲರಿಗಿಂತ ಮೊದಲು ತಮ್ಮ ಮನೆಯಲ್ಲೇ ಸಿನಿಮಾ ನೋಡಿದ ಪುನೀತ್ ರಾಜ್‍ಕುಮಾರ್ ಸಿನಿಮಾ ಸಖತ್ತಾಗಿದೆ ಎಂದಿದ್ದಾರೆ. ಡ್ಯಾನಿಶ್ ಸೇಟ್ ಅಭಿನಯಕ್ಕೆ ಹೊಟ್ಟೆ ತುಂಬಾ ನಕ್ಕಿದ್ದಾರೆ.

    ನಟ ಡ್ಯಾನಿಶ್ ಸೇಟ್, ರಕ್ಷಿತ್ ಶೆಟ್ಟಿ, ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ, ನಿರ್ದೇಶಕ ಹೇಮಂತ್ ರಾವ್ ಮತ್ತು ಪುನೀತ್ ರಾಜ್‍ಕುಮಾರ್ ಒಟ್ಟಿಗೇ ತೆಗೆಸಿಕೊಂಡ ಫೋಟೋವನ್ನು ಪುಷ್ಕರ್ ಮಲ್ಲಿಕಾರ್ಜುನಯ್ಯ ತಮ್ಮ ಎಫ್‍ಬಿ ಖಾತೆಯಲ್ಲಿ ಹಾಕುವವರೆಗೆ ಇದು ಗುಟ್ಟಾಗಿಯೇ ಇತ್ತು. 

    ಯಾಕೆ ಅಂದ್ರೆ, ಹಂಬಲ್ ಪೊಲಿಟಿಷಿಯನ್ ನೊಗ್‍ರಾಜ್ ತರಲೆ, ತಮಾಷೆ ಗುಟ್ಟಾಗಿ ನಡೆಯೋದೇ ಇಲ್ಲ. ಚಿತ್ರತಂಡದ ಸದಸ್ಯ ವಿಜಯ್ ಚೆಂಡೂರ್ ಜೊತೆ ಥೇಟು ರಶ್ಮಿಕಾ-ರಕ್ಷಿತ್ ಸ್ಟೈಲಲ್ಲಿ ಬೆಳಗೆದ್ದು ಹಾಡಿನ ಗೆಟಪ್‍ನಲ್ಲಿ ಟೂರ್‍ನ್ನೇ ಹೊಡೆದಿರುವವರು. ಇಷ್ಟಕ್ಕೂ ರಾಜಕಾರಣಿಗಳು ತೀರಾ ತೀರಾ ಪರ್ಸನಲ್ ಕೆಲಸಗಳನ್ನಷ್ಟೇ ಗುಟ್ಟಾಗಿ ಮಾಡ್ತಾರೆ.

    ಎಷ್ಟೆಂದರೂ ಹಂಬಲ್ ಪೊಲಿಟಿಷಿಯನ್ ಅಲ್ವಾ..? ನೋಡೋಣ. ನಾಯಕ ಗುಟ್ಟು ಮಾಡ್ತಾನಾ..? ಎಲ್ಲವನ್ನೂ ಓಪನ್ ಆಗಿಯೇ ಹೇಳ್ತಾನಾ..? ಒಳ್ಳೆಯವನಾ..? ಅಥವಾ ತುಂಬಾ ಒಳ್ಳೆಯವನಾ ಅನ್ನೋದು ಜನವರಿ 12ರಂದು ಗೊತ್ತಾಗುತ್ತೆ. ಎಳ್ಳುಬೆಲ್ಲ ತಿಂದ್ಕೊಂಡ್ ತಿಳ್ಕೊಂಡ್ರಾಯ್ತು.

  • ಅವರಿಗೆಲ್ಲ ಕನ್ನಡ ಕಲಿಸಿದ್ದ ಚತುರ.. ರಾಜಕೀಯ ಹೇಳಿಕೊಡ್ತಾನೆ..!

    humble politicain nograj

    ನೀವು ಆರ್‍ಸಿಬಿ ಪ್ಲೇಯರ್‍ಗಳನ್ನು ನೋಡಿರ್ತೀರಿ. ಕ್ರಿಸ್ ಗೇಲ್, ವಿರಾಟ್ ಕೊಹ್ಲಿ, ಎ.ಬಿ.ಡೆವಿಲಿಯರ್ಸ್ ಮೊದಲಾದವರೆಲ್ಲ ಕನ್ನಡದಲ್ಲಿ ಮಾತನಾಡಿದಾಗ ಥ್ರಿಲ್ ಆಗಿದ್ದೀರಿ. ಹಾಗೆ ಅಂತಾರಾಷ್ಟ್ರೀಯ ಖ್ಯಾತಿಯ ಕ್ರಿಕೆಟಿಗರಿಗೇ ಕನ್ನಡ ಹೇಳಿಕೊಡುತ್ತಿದ್ದಾತ ಮಿಸ್ಟರ್ ನಾಗ್. ನಮ್ಮ ಕನ್ನಡಿಗ ಡ್ಯಾನಿಶ್ ಸೇಟ್. ಈಗ ರಾಜಕೀಯ ಹೇಳಿಕೊಡೋಕೆ ಬಂದಿದ್ದಾರೆ.

    ಈಗ ಡ್ಯಾನಿಶ್ ಸೇಟ್ ಅಭಿನಯದ ಹಂಬಲ್ ಪೊಲಿಟಿಷಿಯನ್ ನೊಗ್‍ರಾಜ್, ಥಿಯೇಟರಿಗೆ ಬರುತ್ತಿದ್ದಾನೆ. ಬಂದೇ ಬಿಟ್ಟ.. ಇಡೀ ಚಿತ್ರದಲ್ಲಿ ಉಡಾಫೆ ರಾಜಕಾರಣಿ ಮತ್ತು ಪ್ರಾಮಾಣಿಕ ರಾಜಕಾರಣಿಯ ನಡುವಿನ ಜುಗಲ್‍ಬಂದಿಯಿದೆ. ನೊಗರಾಜ್ ಅಳಕ್‍ಪುಳಕ್ ರಾಜಕಾರಣಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರಿಗೆ ಎದುರಾಗಿ ಅರುಣ್ ಪಾಟೀಲ್ ಇರ್ತಾರೆ. ನೊಗ್‍ರಾಜನ ಕ್ರೇಜೀ ಐಡಿಯಾಗಳಿಗೆ ಸ್ಫೂರ್ತಿ ತುಂಬೋದು ಸುಮುಖಿ ಸುರೇಶ್. ಒಟ್ಟಿನಲ್ಲಿ ಅದೊಂದು ಹಾಸ್ಯದೌತಣ. ನಗೆದ ದಾಳಿ. ಹಾಸ್ಯದ ಒಡ್ಡೋಲಗ.

  • ಆರ್‍ಸಿಬಿ ಫ್ಯಾನ್ಸ್ ಹೀರೋ ಮಿ.ನಾಗ್, ಪೊಲಿಟಿಷಿಯನ್ ಆಗಿಬಿಟ್ರು..!

    humble politicain nograj

    ಡ್ಯಾನಿಷ್ ಸೇಟ್. ಹೆಸರು ಕೇಳಿದರೆ, ಇವರ್ಯಾರೋ ಕನ್ನಡಿಗರೇ ಅಲ್ಲ ಅಂತೀರೇನೋ. ಆದರೆ, ಇವರು ಮೂಲತಃ ಮೈಸೂರಿನವರು. ಓದಿದ್ದು ಕರ್ನಾಟದಲ್ಲೇ. ರೇಡಿಯೋ ಜಾಕಿಯಾಗಿ ವೃತ್ತಿ ಜೀವನ ಆರಂಭಿಸಿದ ಡ್ಯಾನಿಷ್ ಸೇಟ್, ಕಾಫಿ ವಿತ್ ಕರಣ್ ಕಾರ್ಯಕ್ರಮದ ರೂವಾರಿಗಳಲ್ಲಿ ಒಬ್ಬರು. ವಯಸ್ಸಿನ್ನೂ 29 ವರ್ಷ. ಈಗ ರಾಜಕಾರಣಿಯಾಗಿಬಿಟ್ಟಿದ್ದಾರೆ.

    ನಾವು ಹೇಳ್ತಾ ಇರೋದು ಹಂಬಲ್ ಪೊಲಿಟಿಷಿಯನ್ ನೋಗರಾಜ್ ಕುರಿತು ಅನ್ನೊದನ್ನ ಬಿಡಿಸಿ ಹೇಳಬೇಕಿಲ್ಲ. ಆರ್‍ಸಿಬಿಯಲ್ಲಿ ಮಿ.ನಾಗ್ ಎಂದೇ ಖ್ಯಾತರಾಗಿದ್ದ ಡ್ಯಾನಿಷ್ ಸೇಟ್, ಸೃಷ್ಟಿಸಿದ ಕಾಮಿಡಿ ವಿಡಿಯೋಗಳಿಗೆ ಲೆಕ್ಕವೇ ಇಲ್ಲ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳು ಕೊಹ್ಲಿ, ಗೇಲ್‍ರನ್ನು ಇಷ್ಟಪಡುವಷ್ಟೇ ಮಿ.ನಾಗ್‍ರನ್ನೂ ಇಷ್ಟಪಡುತ್ತಾರೆ.

    ಈಗ ಡ್ಯಾನಿಷ್ ಅವರೇ ಹೀರೋ ಆಗಿರುವ ಹಂಬಲ್ ಪೊಲಿಟಿಷಿಯನ್ ನೋಗರಾಜ್, ತೆರೆಗೆ ಸಿದ್ಧವಾಗಿದೆ. ಅದೊಂದು ಪಕ್ಕಾ ರಾಜಕೀಯ ವಿಡಂಬನೆಯ ಚಿತ್ರ. ಸಾದ್ ಖಾನ್ ನಿರ್ದೇಶನದ ಈ ಚಿತ್ರಕ್ಕೆ ಬಂಡವಾಳ ಹೂಡಿರುವುದು ರಕ್ಷಿತ್ ಶೆಟ್ಟಿ, ಹೇಮಂತ್ ರಾವ್ ಹಾಗೂ ಪುಷ್ಕರ್ ಮಲ್ಲಿಕಾರ್ಜುನಯ್ಯ. ಇದು ರಕ್ಷಿತ್ ಫಿಲ್ಮ್ ಫ್ಯಾಕ್ಟರಿಯ ಸಿನಿಮಾ. ಚಿತ್ರದ ಕಥೆ ಕೂಡಾ ಡ್ಯಾನಿಷ್ ಸೇಟ್ ಅವರದ್ದೇ. 

    ಇವರ ಜೊತೆ ಶೃತಿ ಹರಿಹರನ್ ಚಿತ್ರದ ಪ್ರಮುಖ ತಾರಾಬಳಗದಲ್ಲಿದ್ದಾರೆ. ಹೂಸ ವರ್ಷ ಜನವರಿ 12 ರಂದು ನುಗ್ಗುತ್ತಿರುವ ಹಂಬಲ್ ಪೊಲಿಟಿಷಿಯನ್ ನೋಗರಾಜ್, ವಿಡಂಬನೆಯ ಮೂಲಕವೇ ನಕ್ಕು ನಗಿಸೋದ್ರಲ್ಲಿ ಅನುಮಾನವಿಲ್ಲ.

  • ಈ ರಾಜಕಾರಣಿಯ ಪತ್ನಿ ಸಖತ್ ಫನ್ನಿ.!

    humble politicain nograj

    ಹಂಬಲ್ ಪೊಲಿಟಿಷಿಯನ್ ನೊಗ್‍ರಾಜ್ ಸಿನಿಮಾ ನೋಡಿದವರಿಗೆ ಡ್ಯಾನಿಶ್ ಸೇಟ್ ಅವರಷ್ಟೇ ಗಮನ ಸೆಳೀತಿರೋದು ಅವರ ಪತ್ನಿಯ ಪಾತ್ರಧಾರಿ ಲಾವಣ್ಯ. ಲಾವಣ್ಯ ಆಗಿ ನಟಿಸಿರುವ ಸುಮುಖ ಸುರೇಶ್ ಅವರಿಗೆ ಡ್ಯಾನಿಶ್ ಸೇಟ್ ಮತ್ತು ನಿರ್ದೇಶಕ ಸಾದ್ ಖಾನ್ ಅವರ ಒಡನಾಟ ಹೊಸದಲ್ಲ. ಸಿನಿಮಾ ಅಷ್ಟೇ ಹೊಸದು. ಇಂಪ್ರಾಬ್ ಕಾಮಿಡಿಗಳ ಮೂಲಕ ಗಮನ ಸೆಳೆದಿದ್ದ ಸುಮುಖ ಸುರೇಶ್, ಈ ಚಿತ್ರದಲ್ಲಿ ಹೀರೋಯಿನ್.

    ಹಂಬಲ್ ಪೊಲಿಟಿಷಿಯನ್ ನೊಗ್‍ರಾಜ್ ಎಷ್ಟು ಜಾಲಿ ಜಾಲಿ ಮನುಷ್ಯನೋ.. ಅಷ್ಟೇ ಫನ್ನಿ ಹೆಂಡತಿ ಅವನ ಹೆಂಡತಿ ಲಾವಣ್ಯ. ಇಬ್ಬರು ಕ್ರೇಜಿ ಪಾತ್ರಧಾರಿಗಳ ಸುತ್ತ ಹೆಣೆದಿರುವ ಕಥೆ, ಚಿತ್ರದುದ್ದಕ್ಕೂ ಕಚಗುಳಿ ಇಡುತ್ತಲೇ ಹೋಗುತ್ತೆ. ನಗಿಸಿ ನಗಿಸಿಯೇ ಸುಸ್ತು ಮಾಡಿಸುತ್ತೆ ಎನ್ನುವುದು ಲಾವಣ್ಯ ಅಲಿಯಾಸ್ ಸುಮುಖ ಸುರೇಶ್ ಅವರದ್ದು. ಇದೇ ಶುಕ್ರವಾರದಿಂದ ಥಿಯೇಟರುಗಳಲ್ಲಿ ನಗೆಯ ದಂಗೆ ಶುರುವಾಗಲಿದೆ. 

  • ಎಂಥವರಿಗೆ ವೋಟ್ ಹಾಕಬಾರದು..? - ನೊಗ್‍ರಾಜ್ ಸಿನಿಮಾ ನೋಡಿ

    humble politicain nograj

    ಹಂಬಲ್ ಪೊಲಿಟಿಷಿಯನ್ ನೊಗ್‍ರಾಜ್. ಡ್ಯಾನಿಶ್ ಸೇಟ್ ಅಭಿನಯದ ಈ ಸಿನಿಮಾ ರಾಜಕೀಯ ವಿಡಂಬನೆಯ ಚಿತ್ರ. ಸಾದ್ ನಿರ್ದೇಶನದ ಈ ಸಿನಿಮಾದಲ್ಲಿ ರಾಜಕಾರಣಿಗಳನ್ನು ಲೇವಡಿ ಮಾಡಲಾಗಿದೆ. ಗಿಮಿಕ್ಕುಗಳನ್ನು, ಗಿಮಿಕ್ಕುಗಳ ಹಿಂದಿನ ರಸಗವಳದಂತಾ ಕಥೆಯನ್ನು ತೋರಿಸಲಾಗಿದೆ. ಹಾಗಾದರೆ ಸಿನಿಮಾವನ್ನು ಏಕೆ ನೋಡಬೇಕು..? ಹಲವು ವಿಶೇಷಗಳ ಜೊತೆ ಇನ್ನೂ ಒಂದು ಕಾರಣ ಇದೆ. ಈ ಸಿನಿಮಾ ನೋಡಿದರೆ ಎಂಥವರಿಗೆ ವೋಟ್ ಹಾಕಬಾರದು ಎನ್ನುವುದು ಗೊತ್ತಾಗಲಿದೆ.

    ಸಿನಿಮಾ ಆರಂಭವಾಗಿ ಮುಗಿಯುವವರೆಗೆ ಜನ ಬಿದ್ದು ಬಿದ್ದೂ ನಗ್ತಾರೆ. ಒಂದು ಒಳ್ಳೆಯ ಮೆಸೇಜ್ ಇರುವ ಸಿನಿಮಾ. ಸಿನಿಮಾ ನೋಡಿದರೆ, ಎಂಥವರಿಗೆ ವೋಟ್ ಹಾಕಬಾರದು ಎಂಬುದಂತೂ ಗೊತ್ತಾಗುತ್ತೆ. ಎಲೆಕ್ಷನ್ ಬೇರೆ ಹತ್ತಿರ ಬರ್ತಾ ಇದೆ. ಈ ಸಮಯಕ್ಕೆ ಇಂಥಾದ್ದೊಂದು ಸಿನಿಮಾ ಬೇಕಿತ್ತು ಅಂತಾರೆ ಡ್ಯಾನಿಶ್ ಸೇಟ್.

    ಪ್ರತಿದಿನ ಸಿನಿಮಾದ ಪುಟ್ಟ ಪುಟ್ಟ ವಿಡಿಯೋಗಳನ್ನು ಅಪ್‍ಲೋಡ್ ಮಾಡುತ್ತಲೇ ಇರುವ ಡ್ಯಾನಿಶ್ ಸೇಟ್, ಅದರಿಂದ ಚಿತ್ರಕ್ಕೆ ಪ್ರಚಾರವಾಗುತ್ತದೆಯೇ ಹೊರತು ಸಮಸ್ಯೆ ಆಗೋದಿಲ್ಲ. ನಮ್ಮ ಸಿನಿಮಾದ ಮೇಲೆ ನಮಗೆ ನಂಬಿಕೆ ಇದೆ ಎಂದು ಆತ್ಮವಿಶ್ವಾಸದಿಂದ ಹೇಳ್ತಾರೆ. ಚಿತ್ರದ ಬಿಡುಗಡೆ ಜೊತೆ ಜೊತೆಯಲ್ಲೇ 17 ಪ್ರೀಮಿಯರ್ ಶೋಗಳನ್ನು ಏರ್ಪಡಿಸಲಾಗಿದೆ. ಪ್ರೀಮಿಯರ್ ಶೋಗಳು ಆಗಲೇ ಹೌಸ್‍ಫುಲ್. 

    ಆನ್‍ಲೈನ್ ಮತ್ತು ಪ್ರೀಮಿಯರ್ ಶೋ ರೆಸ್ಪಾನ್ಸ್ ನೋಡುತ್ತಿದ್ದರೆ, ಜನವರಿ 12ರಂದು ಥಿಯೇಟರ್‍ಗಳು ತುಂಬಿ ತುಳುಕೋದ್ರಲ್ಲಿ ನೋ ಡೌಟ್.

     

  • ಚಾರ್ಲಿ ಜೊತೆ ಹಂಬಲ್ ಪೊಲಿಟಿಷಿಯನ್ ಡ್ಯಾನಿಷ್ ಸೇಟ್

    dansih sait joins charlie 777

    ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟ, ಸ್ಟಾರ್ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಜೊತೆಯಾಗಿರುವ ಇನ್ನೊಂದು ಚಿತ್ರ ಚಾರ್ಲಿ 777. ನಿರ್ದೇಶಕ ಕಿರಣ್ ರಾಜ್ ಈಗ ರಕ್ಷಿತ್ ಶೆಟ್ಟಿ ಜೊತೆ ಇನ್ನೊಬ್ಬ ಸ್ಟಾರ್ ಆಯ್ಕೆ ಮಾಡಿದ್ದಾರೆ. ಹಂಬಲ್ ಪೊಲಿಟಿಷಿಯನ್ ನೊಗ್ರಾಜ್ ಮೂಲಕ ಚಿತ್ರರಸಿಕರ ಗಮನ ಸೆಳೆದ ಡ್ಯಾನಿಷ್ ಸೇಟ್, ಚಾರ್ಲಿ 777 ಟೀಂ ಸೇರಿದ್ದಾರೆ.

    ಡ್ಯಾನಿಷ್ ಪಾತ್ರದ ಬಗ್ಗೆ ಯಾವುದೇ ಗುಟ್ಟು ಬಿಟ್ಟುಕೊಡದ ಕಿರಣ್ ರಾಜ್, ಸರ್‍ಪ್ರೈಸ್ ಚಿತ್ರದಲ್ಲಿ ಇರುತ್ತೆ ಎಂದಿದ್ದಾರೆ.

  • ಥಿಯೇಟರಿಗೆ `ಸೋಲ್ಡ್' ಆಗಿ ಬರ್ತಾರೆ ದಾನಿಷ್ ಸೇಠ್

    ಥಿಯೇಟರಿಗೆ `ಸೋಲ್ಡ್' ಆಗಿ ಬರ್ತಾರೆ ದಾನಿಷ್ ಸೇಠ್

    ದಾನಿಷ್ ಸೇಠ್ ಈಗ ಥಿಯೇಟರಿಗೆ ಬರುತ್ತಿದ್ದಾರೆ. ಇತ್ತೀಚೆಗೆ ದಾನಿಷ್ ಸೇಠ್ ನಟಿಸಿದ್ದ ಒಂದು ವೆಬ್ ಸಿರೀಸ್ ಮತ್ತು ಇನ್ನೊಂದು ಸಿನಿಮಾ ಎರಡೂ ರಿಲೀಸ್ ಆಗಿದ್ದು ಒಟಿಟಿಯಲ್ಲೇ. ಹಂಬಲ್ ಪೊಲಿಟಿಷಿಯನ್ ನೊಗ್ರಾಜ್ ವೆಬ್ ಸಿರೀಸ್ ಮತ್ತು ಒನ್ ಕಟ್ ಟೂ ಕಟ್ ಸಿನಿಮಾ.. ಎರಡನ್ನೂ ಒಟಿಟಿಯಲ್ಲಿ ಮೆಚ್ಚಿಕೊಂಡಿದ್ದ ಪ್ರೇಕ್ಷಕರಿಗೆ ಥ್ರಿಲ್ ಕೊಡೋಕೆ ಥ್ರಿಲ್ಲರ್ ಸಿನಿಮಾ ಮೂಲಕ ಬರುತ್ತಿದ್ದಾರೆ ದಾನಿಷ್ ಸೇಠ್. ಸೋಲ್ಡ್ ಚಿತ್ರದ ಮೂಲಕ.

    ಇದುವರೆಗೆ ಕಾಮಿಡಿ ಶೇಡ್ ಇರುವ ಪಾತ್ರಗಳಲ್ಲೇ ನಟಿಸುತ್ತಿದ್ದ ದಾನಿಷ್, ಸೋಲ್ಡ್ ಚಿತ್ರದಲ್ಲಿ ಪೊಲೀಸ್ ಆಫೀಸರ್ ಆಗಿದ್ದಾರೆ. ಅಂದಹಾಗೆ ಇದು ಸಸ್ಪೆನ್ಸ್ ಕ್ರೈಂ ಥ್ರಿಲ್ಲರ್. ಡೈರೆಕ್ಟರ್ ಪ್ರೇರಣಾ ಅಗರ್'ವಾಲ್. ಮಾನವ ಕಳ್ಳಸಾಗಣಿಕೆ ಕಥೆಯಿರೋ ಚಿತ್ರದಲ್ಲಿ ಕಾವ್ಯಾ ಶೆಟ್ಟಿ ರುಚಿತಾ ಅನ್ನೋ ಜರ್ನಲಿಸ್ಟ್ ಪಾತ್ರದಲ್ಲಿ ನಟಿಸಿದ್ದಾರೆ. ನಿರ್ಮಾಣ ಮಾಡಿರೋ ದೀಪಂ ಕೊಹ್ಲಿ ಕೂಡಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಮಾರ್ಚ್ 4ಕ್ಕೆ ರಿಲೀಸ್ ಆಗುತ್ತಿದೆ ಸೋಲ್ಡ್.

  • ದಾನಿಷ್ ಸೇಟ್ ವೆಡ್ಸ್ ಅನ್ಯಾ ರಂಗಸ್ವಾಮಿ

    ದಾನಿಷ್ ಸೇಟ್ ವೆಡ್ಸ್ ಅನ್ಯಾ ರಂಗಸ್ವಾಮಿ

    ದಾನಿಷ್ ಸೇಟ್. ಹಂಬಲ್ ಪೊಲಿಟಿಷಿಯನ್ ನೊಗ್ರಾಜ್ ಮೂಲಕ ಕನ್ನಡ ಚಿತ್ರರಸಿಕರಿಗೆ ಪರಿಚಿತವಾದ ನಟ. ಆರ್‍ಸಿಬಿ ಇನ್‍ಸೈಡರ್ ಮೂಲಕ ಆರ್‍ಸಿಬಿ ಫ್ಯಾನ್ಸ್‍ಗೂ ಚಿರಪರಿಚಿತ. ಆರ್‍ಜೆಯಾಗಿಯೂ ಖ್ಯಾತರಾಗಿರುವ ದಾನಿಷ್ ಸೇಟ್, ಈಗ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

    ತಮ್ಮ ಬಹುಕಾಲದ ಗೆಳತಿ ಅನ್ಯಾ ರಂಗಸ್ವಾಮಿ ಅವರನ್ನು ವಿವಾಹವಾಗಿದ್ದಾರೆ. ಕೋವಿಡ್ 19 ರೂಲ್ಸ್ ಕಾರಣ ಮದುವೆಯಲ್ಲಿ ಎರಡೂ ಕುಟುಂಬಗಳ ಸದಸ್ಯರು ಮತ್ತು ಆಪ್ತರಷ್ಟೇ ಭಾಗಿಯಾಗಿದ್ದರು.

  • ನೊಗ್‍ರಾಜನ ಮುಖದಲ್ಲಿ ನಗುವೋ ನಗು

    humble politician is happy

    ಹಂಬಲ್ ನೊಗ್‍ರಾಜ್, ಪೊಲಿಟಿಕಲ್ ಕಾಮಿಡಿ ಚಿತ್ರದ ನಿರ್ಮಾಪಕರ ಮುಖದಲ್ಲೀಗ ನಗುವೋ ನಗು. ಚಿತ್ರಕ್ಕೆ ಹಾಕಿದ ಬಂಡವಾಳದ ಜೊತೆ ಲಾಭವೂ ಬಂದಿದೆ. ಪುಷ್ಕರ್ ಮಲ್ಲಿಕಾರ್ಜುನಯ್ಯ ಈಗ ಸಂತಸದಲ್ಲಿದ್ದಾರೆ.

    ಇದೀಗ ಚಿತ್ರ ಇನ್ನೂ ಒಂದು ದಾಖಲೆ ಬರೆದಿದೆ. ಚಿತ್ರ ಅಮೇಜಾನ್ ಪ್ರೈಮ್ ವಿಡಿಯೋಗೆ ಮಾರಾಟವಾಗಿದೆ. ಅಮೇಜಾನ್ ಪ್ರೈಮ್ ವಿಡಿಯೋ ಖರೀದಿಸಿರುವ ಮೊದಲ ಕನ್ನಡ ಚಿತ್ರ ಆಪರೇಷನ್ ನೊಗ್‍ರಾಜ್. 

    ಥಿಯೇಟರಿನಿಂದಲೇ ಲಾಭ ಮಾಡಿದ್ದ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ, ಈಗ ಅಮೇಜಾನ್‍ನಲ್ಲೂ ಲಾಭ ಪಡೆದಿದೆ. ಅಂದಹಾಗೆ ಚಿತ್ರದ ಸ್ಯಾಟಲೈಟ್ ರೈಟ್ಸ್ ಇನ್ನೂ ಪುಷ್ಕರ್ ಅವರ ಬಳಿಯೇ ಇದೆ. ಡಿಮ್ಯಾಂಡೂ ಇದೆ.