` rishika singh - chitraloka.com | Kannada Movie News, Reviews | Image

rishika singh

 • 2 ವರ್ಷದ ನಂತರ ಗುಣಮುಖರಾಗುತ್ತಿದ್ದಾರೆ ರಿಷಿಕಾ ಸಿಂಗ್

  2 ವರ್ಷದ ನಂತರ ಗುಣಮುಖರಾಗುತ್ತಿದ್ದಾರೆ ರಿಷಿಕಾ ಸಿಂಗ್

  ರಿಷಿಕಾ ಸಿಂಗ್. ಖ್ಯಾತ ನಿರ್ದೇಶಕ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಅವರ ಪುತ್ರಿ. ನಟ ಆದಿತ್ಯ ಅವರ ತಂಗಿ. ಕಂಠೀರವ ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದಿದ್ದ ರಿಷಿಕಾ ಸಿಂಗ್, ದುನಿಯಾ ವಿಜಯ್, ರವಿಚಂದ್ರನ್, ಉಪೇಂದ್ರ ಸೇರಿದಂತೆ ಹಲವರ ಜೊತೆ ನಟಿಸಿದ್ದರು. ಕಳ್ಳ ಮಳ್ಳ ಸುಳ್ಳ ರಿಷಿಕಾಗೆ ಒಳ್ಳೆಯ ಹೆಸರು ತಂದುಕೊಟ್ಟಿತ್ತು. ಕಿರುತೆರೆಯಲ್ಲೂ ಆಕ್ಟಿವ್ ಆಗಿದ್ದ ರಿಷಿಕಾ ರಗಳೆ ವಿತ್ ರಿಷಿಕಾ ಎಂಬ ಟಿವಿ ಶೋ ನಡೆಸಿಕೊಡುತ್ತಿದ್ದರು. ಹೀಗೆ ಬ್ಯುಸಿಯಾಗಿರುವಾಗಲೇ ಒಂದು ಆಕ್ಸಿಡೆಂಟ್ ಆಯಿತು.

  2020, ಜುಲೈ 28 ರಂದು ಮಾವಳ್ಳಿಪುರ ಸಮೀಪದಲ್ಲಿಯೇ ಅತಿ ವೇಗವಾಗಿ ಬಂದ ಫಾರ್ಚೂನರ್ ಕಾರ್, ರಸ್ತೆ ಪಕ್ಕದಲ್ಲಿ ಇದ್ದ ನೀಲಗಿರಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಭೀಕರ ಅಪಘಾತ ಸಂಭವಿಸಿತ್ತು. ಅಪಘಾತದಲ್ಲಿ ರಿಷಿಕಾ ಬೆನ್ನುಮೂಳೆಗೆ ಬಲವಾಗಿ ಪೆಟ್ಟಾಗಿತ್ತು. ಈ ಘಟನೆ ನಡೆದು 2 ವರ್ಷಗಳಾಗುತ್ತ ಬಂತು. ಈಗ ರಿಷಿಕಾ  ಗುಣಮುಖರಾಗುತ್ತಿದ್ದಾರೆ. 1.5 ವರ್ಷಗಳ ಹಿಂದೆ ಗಾಯವಾಗಿತ್ತು. ದೇವರಿದ್ದರಿಂದ ನಾನು ಸುಧಾರಿಸಿಕೊಂಡೆ. ವೈದ್ಯೋ ನಾರಾಯಣೋ ಹರಿಃ ಎನ್ನುತ್ತಾರೆ. ನನಗೆ ಧೈರ್ಯ ತುಂಬಿ ನನ್ನ ಬೆನ್ನುಮೂಳೆ ಸರಿ ಹೋಗುವಂತೆ ಮಾಡಿ, ಐರನ್ ಮಹಿಳೆಯನನ್ನಾಗಿಸಿದ ವೈದ್ಯರಿಗೆ ಧನ್ಯವಾದಗಳು. ನನ್ನ ಕುಟುಂಬ ನನ್ನ ಶಕ್ತಿಯಾಗಿ ನಿಂತಿತ್ತು. ಭಯಕ್ಕಿಂತ ಜಾಸ್ತಿ ನನಗೆ ನಂಬಿಕೆಯಿತ್ತು. ಅದೇ ನನ್ನನ್ನು ಸುಧಾರಿಸಿತು. ಅಸಾಧ್ಯವಾದುದು ಯಾವುದೂ ಇಲ್ಲ. ನನ್ನ ಆರೋಗ್ಯ ಸುಧಾರಣೆಗೆ ಹಾರೈಸಿದ ಎಲ್ಲರಿಗೂ ಧನ್ಯವಾದಗಳು. ಎಂದು ಹೇಳಿಕೊಂಡಿದ್ದಾರೆ ರಿಷಿಕಾ ಸಿಂಗ್.

  ಕಂಪ್ಲೀಟ್ ಜಿಂಕೆಮರಿಯಂತೆ ಓಡಾಡುತ್ತಿದ್ದಾರೆ ಎಂದೇನಲ್ಲ. ಆದರೆ ಮತ್ತೆ ಜಿಂಕೆಮರಿಯಾಗುವ ಹಾದಿಯಲ್ಲಿ ಮುಂದೆ ಬಂದಿದ್ದಾರೆ. ಬೆನ್ನುಮೂಳೆಗೆ ಪೆಟ್ಟಾಗಿ ಗುಣಮುಖರಾಗುವುದು ಸುಲಭವಲ್ಲ. ಒಂದು ಸವಾಲನ್ನೇ ಮೆಟ್ಟಿ ನಿಂತು ಗೆಲ್ಲುತ್ತಿದ್ದಾರೆ ರಿಷಿಕಾ ಸಿಂಗ್. ಇನ್ನಷ್ಟು ಬೇಗ ಗುಣಮುಖರಾಗಲಿ ರಿಷಿಕಾ ಎನ್ನುವುದು ಎಲ್ಲರ ಹಾರೈಕೆ.

 • Is Pratham's Wish With Rishika Fulfilled? - Exclusive

  Rishika Pratham Image

  It seems that Pratham's wish to go on a long drive is fulfilled. The truth is not known but that's what most people who saw them together at the BIFFES in Mysuru concluded!

  Prashant who won the Bigg Boss Kannada season 4 is now the darling for many and a sensation of sorts. In the Bigg Boss house Pratham was a close friend with actress Rishika. He had even expressed that Rishika was an inspiration for him. To make matters interesting Rishika had made a special dance appearance for Pratham in the finals. Pratham had expressed a wish that he wanted to go on a long drive to Mysore with Rishika.

  Is this wish fulfuilled? Take a guess. 

  At the BIFFES international film festival Pratham and Rishika were seen in Mysore Fortune hotel together. They became instant attraction for the people who were there. Had Pratham managed to come on the cherished drive with her from Bengaluru or were they coincidentally meeting there? That was the question on the minds of people who had seen them on Bigg Boss.

  Rishika was eliminated from Bigg Boss much before Pratham. But there was no denying the friendship the two shared. Only Pratham and Rishika can answer whether the two have taken the drive.