` nidhi kushalapa, - chitraloka.com | Kannada Movie News, Reviews | Image

nidhi kushalapa,

  • Preethi Prema Censored With U Certificate

    preethi prema badnekayi still

    Preethi Prema Pustakada Badanekayi has been censored with clear U certificate. Movie KS produced by Chaitanya under the banner Virgo Illusions. Preethi Prema is a love subject starring Chaitanya, Nidhi Kushalapla in lead.

    Movie is directed by Kasi and Bharat BJ has scored the music. Movie is releasing in February.

    Preethi Prema Badnekayi Gallery - View

     

     

  • ಕುಮಾರಿ ಟ್ರೈಲರ್ ಹಂಗೆ.. ಸಿನಿಮಾ ಹೆಂಗೆ..?

    kumari 21 f has good message

    ಕುಮಾರಿ ರ್21 ಟ್ರೇಲರ್ ನೋಡಿದವರು ಶಾಕ್ ಆಗೋದು ಗ್ಯಾರಂಟಿ. ಟ್ರೇಲರ್‍ನಲ್ಲಿರೋದು ಅಂತಹ ದೃಶ್ಯ ಮತ್ತು ಸಂಭಾಷಣೆಗಳು. ಸುಮ್ಮನೆ ಒಂದಿಷ್ಟು ಸ್ಯಾಂಪಲ್ ನೋಡಿ.ಹೀರೋ ಹುಡುಗಿಯ ಹೆಸರು ಕೇಳ್ತಾನೆ. ಹುಡುಗಿ ಬಾಡಿಯ ಸ್ಟಾಟಿಸ್ಟಿಕ್ಸ್ ಹೇಳ್ತಾಳೆ. ಲೈನ್ ಹೊಡೆಯೋಕೆ ಫಿಗರ್ ಸಾಕಾಗೊಲ್ವಾ..? ಫುಲ್ ಬಯೋಡೇಟಾ ಬೇಕಾ ಅಂತಾಳೆ.ಹೀರೋ ಜೊತೆ ಬೈಕ್‍ನಲ್ಲಿ ರೊಮ್ಯಾಂಟಿಕ್ ಆಗಿ ರೈಡ್ ಮಾಡುವ ದೃಶ್ಯವಿದೆ. ಹೀರೋಗೆ ಕಿಸ್ ಕೊಟ್ಟು, ಇದೇ ನನ್ನ ಫಸ್ಟ್ ಕಿಸ್, ಚೆನ್ನಾಗಿದ್ಯಾ ಅಂತಾಳೆ ನಾಯಕಿ.

    ಬರೀ ನನ್ನ ಸೊಂಟಕ್ಕೇ 5000 ಕೊಡಬಹುದು ಅನ್ನೋ ಹುಡುಗಿ, ನಾನು ಮದುವೆ ಆಗೋ ಹುಡುಗಿ ವರ್ಜಿನ್ ಆಗಿರಬೇಕು ಎಂದು ಆಸೆ ಪಡೋದ್ರಲ್ಲಿ ತಪ್ಪೇನಿಲ್ವಲ್ಲಾ ಅನ್ನೋ ಹೀರೋ..  ರೊಮ್ಯಾಂಟಿಕ್ ದೃಶ್ಯಗಳು..

    ಇವೆಲ್ಲ ಮುಗಿಯುತ್ತಿದ್ದಂತೆ ಹೀರೋನ ಪುಂಡ ಸ್ನೇಹಿತರ ಡೈಲಾಗ್ಸ್..ಕ್ರೈಂ ದೃಶ್ಯ, ಪೊಲೀಸ್ ತನಿಖೆ.. ಹೀಗೆ ಟ್ರೇಲರ್ ಕುತೂಹಲ ಹುಟ್ಟಿಸುತ್ತೆ. ಇದು ತೆಲುಗಿನ ಕುಮಾರಿ ರ್21 ಚಿತ್ರದ ರೀಮೇಕ್.

    ಮಾಡೆಲ್ ಅಂದಕೂಡ್ಲೇ ಜನ ಯೋಚನೆ ಮಾಡೋ ರೀತಿನೇ ಬೇರೆ. ಆಕೆಯನ್ನು ನೇರವಾಗಿ ಕೇಳಿದರೆ ಪ್ರಶ್ನೆಗಳಿಗೆ ಉತ್ತರ ಸಿಕ್ಕಿರುತ್ತವೆ. ಆದರೆ, ಕೇಳೋದೇ ಇಲ್ಲ. ಹೊರಗಿನವರಿಗೆ ಆಕೆಯೇನೋ ತಪ್ಪು ಮಾಡುತ್ತಿದ್ದಾಳೆ ಎನ್ನಿಸುತ್ತಿರುತ್ತೆ. ಆದರೆ, ಅದು ಆಕೆಯ ಪ್ರೊಫೆಷನ್.  ಇದು ಅಂತಹ ಮಾಡೆಲ್ ಹಾಗೂ ಸಾಮಾನ್ಯ ಹುಡುಗನೊಬ್ಬನ ಲವ್‍ಸ್ಟೋರಿ. ಬೆಂಗಳೂರು ಬೆಳೆಯುತ್ತಿರುವ ವೇಗ, ಹದಿಹರೆಯದ ಹುಡುಗ, ಹುಡುಗಿಯರು, ಹೆಚ್ಚುತ್ತಿರುವ ಅತ್ಯಾಚಾರದಂತ ಕ್ರೈಂಗಳನ್ನು ನೋಡಿ ಈ ಸಿನಿಮಾ ಮಾಡೋಕೆ ನಿರ್ಧರಿಸಿದೆವು ಅಂತಾರೆ ಸಂಪತ್ ಕುಮಾರ್.

    ಪ್ರಣಮ್ ದೇವರಾಜ್, ನಿಧಿ ಕುಶಾಲಪ್ಪ ಪ್ರಮುಖ ಪಾತ್ರದಲ್ಲಿರುವ ಚಿತ್ರದಲ್ಲೊಂದು ಸಂದೇಶವೂ ಇದೆ.

  • ಕುಮಾರಿ ನಿಧಿಗೆ ಸರ್ವಂ ಪ್ರಥಮಂ..!

    nidhi alks about kumari 21 f

    ಕುಮಾರಿ 21 F ಚಿತ್ರದ ಟ್ರೇಲರ್ ನೋಡಿದ್ದರೆ, ಇದು ಗೊತ್ತಿರುತ್ತೆ. ಚಿತ್ರದಲ್ಲಿ ಹೀರೋಯಿನ್ ಸ್ಮೋಕ್ ಮಾಡೋದು, ಡ್ರಿಂಕ್ಸ್ ಮಾಡೋದು ಮತ್ತು ಹೀರೋಗೆ ಕಿಸ್ ಮಾಡೋ ಸೀನ್‍ಗಳಿವೆ. ಚಿತ್ರದ ಆಫರ್ ಕೊಟ್ಟಾಗ, ಒಪ್ಪಿಕೊಳ್ಳುವ ಮುನ್ನವೇ ಶ್ರೀಮಾನ್ ವೇಮುಲ, ಚಿತ್ರದಲ್ಲಿ ನಿಮಗೆ ಕೆಲವು ಇಂಟಿಮೇಟ್ ಸೀನ್‍ಗಳಿವೆ. ರೊಮ್ಯಾಂಟಿಕ್ ದೃಶ್ಯಗಳಿವೆ ಎಂದು ಹೇಳಿಬಿಟ್ಟಿದ್ದರಂತೆ.

    ನಿರ್ದೇಶಕರು ಹಾಗೆ ಹೇಳಿದ ಮೇಲೆ ಮನೆಗೆ ಬಂದು ವೊರಿಜಿನಲ್ ಸಿನಿಮಾ ನೋಡಿದೆ. ಅಂತಹ ದೃಶ್ಯಗಳಿದ್ದರೂ, ಪಾತ್ರ ತುಂಬಾ ಇಷ್ಟವಾಯ್ತು. ಹಾಗೆ ನೋಡಿದರೆ ಚಿತ್ರದ ಪಾತ್ರ ಕುಮಾರಿ ಕೂಡಾ, ಸ್ಮೋಕರ್, ಡ್ರಿಂಕರ್ ಅಲ್ಲ. ಹಾಗಾಗಿ ಒಪ್ಪಿಕೊಂಡೆ.

    ನನಗೂ ಕೂಡಾ ಸ್ಮೋಕಿಂಗ್ ಮತ್ತು ಡ್ರಿಂಕಿಂಗ್ ಹೊಸ ಅನುಭವ. ಕಿಸ್ಸಿಂಗ್ ಕೂಡಾ. ಚಿತ್ರದಲ್ಲಿ ಹೊಸತನವಿದೆ. ಹುಡುಗಿಯ ಡ್ರೆಸ್, ಆಕೆಯ ವೃತ್ತಿ ನೋಡಿ, ಆಕೆಯ ಕ್ಯಾರೆಕ್ಟರ್ ಜಡ್ಜ್ ಮಾಡಬೇಡಿ. ಪ್ರೀತಿಸುವ ಹುಡುಗಿಯನ್ನು ನಂಬುವುದೂ ಕೂಡಾ ಪ್ರೀತಿಯ ಭಾಗ ಅನ್ನೋ ಸಂದೇಶ ಚಿತ್ರದಲ್ಲಿದೆ. ಈ ಚಿತ್ರ ಬಂದ ಮೇಲೆ ನನಗೆ ಇದೇ ಮಾದರಿಯ ಪಾತ್ರಗಳ ಆಫರ್ ಬಂದರೂ ಬರಬಹುದು. ಒಪ್ಪುತ್ತೇನೋ.. ಬಿಡುತ್ತೇನೋ.. ಕಥೆಯ ಮೇಲೆ ನಿಂತಿದೆ ಅಂತಾರೆ ನಿಧಿ.

  • ನಿಜ ಕುಮಾರಿ ನಿಧಿ ಹೇಳಿದ 21 F ಸ್ಟೋರಿ

    kumari 21 f heroine talks about her film

    ಕುಮಾರಿ 21 F ಟ್ರೇಲರ್  ನೋಡಿದವರ ಗಮನ ಸೆಳೆಯೋದು ಹೀರೋಯಿನ್. ಸ್ಮೋಕ್ ಮಾಡುವ, ಡ್ರಿಂಕ್ಸ್ ಮಾಡುವ ಹುಡುಗಿ. ಅರೆ, ಚಿತ್ರದಲ್ಲಿ ಹೀರೋಯಿನ್ ಇಷ್ಟೊಂದು ಬೋಲ್ಡಾ.. ಎನ್ನಿಸಿದ್ರೆ ಅಚ್ಚರಿಯೇನೂ ಇಲ್ಲ. ಆ ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡಿರೋದು ನಿಧಿ ಕುಶಾಲಪ್ಪ. ಕೊಡಗಿನ ಚೆಲುವೆ.

    ನೀವು ಟ್ರೇಲರ್‍ನಲ್ಲಿ ಏನು ನೋಡಿದ್ದೀರೋ.. ಆ ಬೋಲ್ಡ್‍ನೆಸ್ ಇಡೀ ಚಿತ್ರದಲ್ಲಿರೋದು ಅಷ್ಟೆ. ಉಳಿದಂತೆ ಅದು ಸ್ಟೋರಿ ಓರಿಯಂಟೆಡ್ ಸಿನಿಮಾ. ಇಡೀ ಸಿನಿಮಾ ಬೋಲ್ಡ್ ಅಲ್ಲ ಎನ್ನುತ್ತಾರೆ ನಿಧಿ ಕುಶಾಲಪ್ಪ. 

    ಸುಮ್ಮನೆ ಜಡ್ಜ್‍ಮೆಂಟ್ ಕೊಡಬೇಡಿ. ಸಿನಿಮಾ ನೋಡಿ. ಖಂಡಿತಾ.. ಹೊರಗೆ ಬರುವಾಗ ನಿಮ್ಮ ಅಭಿಪ್ರಾಯ ಬೇರೆಯೇ ಆಗಿರುತ್ತೆ. ಅಷ್ಟೇ ಅಲ್ಲ, ಸಿನಿಮಾ ಮತ್ತು ಚಿತ್ರತಂಡದ ಬಗ್ಗೆ ಮೆಚ್ಚುಗೆ ಇಟ್ಟುಕೊಂಡು ಹೊರಬರುತ್ತೀರಿ ಎಂದು ವಿಶ್ವಾಸದಿಂದ ಹೇಳ್ತಾರೆ ನಿಧಿ.

    ಕನ್ನಡಕ್ಕೆ ಇದು ಒಂದು ಡಿಫರೆಂಟ್ ಪ್ರಯತ್ನ. ನನಗೆ ಮೊದಲ ಚಿತ್ರದಲ್ಲೇ ಚಾಲೆಂಜಿಂಗ್ ರೋಲ್ ಸಿಕ್ಕಿದೆ. ಚಿತ್ರ ಒಳ್ಳೆಯ ಬ್ರೇಕ್ ಕೊಡುವ ನಿರೀಕ್ಷೆ ಇದೆ ಎಂದಿದ್ದಾರೆ ನಿಧಿ.ಪ್ರಣಮ್ ದೇವರಾಜ್ ಅಭಿಯನದ ಮೊದಲ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿರೋದು ಶ್ರೀಮಾನ್ ವೇಮುಲ.