ರಾಜ್ಯಾದ್ಯಂತ ಬಿಡುಗಡೆಯಾಗಿ ಮೆಚ್ಚುಗೆ ಗಳಿಸಿರುವ ಕವಲುದಾರಿ ಚಿತ್ರವನ್ನು ಅಮೆರಿಕದಲ್ಲಿ ಈ ವಾರ ರಿಲೀಸ್ ಮಾಡಲಾಗುತ್ತಿದೆ. ಅನಂತ್ ನಾಗ್, ರಿಷಿ, ಸುಮನ್ ರಂಗನಾಥ್, ಅಚ್ಯುತ್ ಕುಮಾರ್, ರೋಶನಿ ಪ್ರಕಾಶ್ ನಟನೆಯ ಚಿತ್ರಕ್ಕೆ ಗೋಧಿಬಣ್ಣ ಸಾಧಾರಣ ಮೈಕಟ್ಟು ಖ್ಯಾತಿಯ ಹೇಮಂತ್ ರಾವ್ ನಿರ್ದೇಶನವಿದೆ.
ಹಾಲಿವುಡ್ ಶೈಲಿಯ ಥ್ರಿಲ್ಲರ್‍ಗಳಂತೆ ತಣ್ಣಗೆ ಕಥೆ ಹೇಳಿ ಗೆದ್ದಿರುವ ಹೇಮಂತ್, ಪುನೀತ್ ರಾಜ್‍ಕುಮಾರ್ ಖುಷಿ ಪಡುವಂತೆ ಮಾಡಿದ್ದಾರೆ. ಮೊದಲ ನಿರ್ಮಾಣದ ಚಿತ್ರದಲ್ಲೇ ಮೆಚ್ಚುಗೆಯ ಮಹಾಪೂರ ಪಡೆದಿರುವ ಅಪ್ಪು, ಅಮೆರಿಕದಲ್ಲಿ 25ಕ್ಕೂ ಪ್ರಾಂತ್ಯಗಳಲ್ಲಿ ಸಿನಿಮಾ ರಿಲೀಸ್ ಮಾಡುತ್ತಿದ್ದಾರೆ.
ಕ್ಯಾಲಿಫೋರ್ನಿಯಾ, ಜಾರ್ಜಿಯಾ, ಇಂಡಿಯಾನಾ, ಮಸಾಚುಸೆಟ್ಸ್, ನ್ಯೂಯಾರ್ಕ್, ಮಿಸ್ಸೌರಿ, ನ್ಯೂಜೆರ್ಸಿ, ಓಹಿಯೋ, ಒಕ್ಲಾಹಾಮಾ, ಪೆನ್ಸಿಲ್ವೇನಿಯಾ, ಟೆಕ್ಸಾಸ್, ವರ್ಜಿನಿಯಾ ಅಷ್ಟೇ ಅಲ್ಲ, ಅಮೆರಿಕದ ರಾಜಧಾನಿ ವಾಷಿಂಗ್ಟನ್‍ನಲ್ಲೂ ರಿಲೀಸ್ ಆಗುತ್ತಿದೆ. ಇದು ಅಮೆರಿಕದಲ್ಲಿರೋ ಕನ್ನಡ ಪ್ರೇಕ್ಷಕರಿಗಾಗಿ.