` darling krishna, - chitraloka.com | Kannada Movie News, Reviews | Image

darling krishna,

  • ಡಾರ್ಲಿಂಗ್ ಕೃಷ್ಣ ಮತ್ತೆ ಮದುವೆಗೆ ರೆಡಿ..!

    ಡಾರ್ಲಿಂಗ್ ಕೃಷ್ಣ ಮತ್ತೆ ಮದುವೆಗೆ ರೆಡಿ..!

    2020ರಲ್ಲಷ್ಟೇ ಮದುವೆಯಾಗಿತ್ತು. ನಿಧಿಮಾ ಜೊತೆ. ಆದಿತ್ಯ ಮತ್ತು ನಿಧಿಮಾ ಲವ್ ಪ್ರೇಕ್ಷಕರಿಗೂ ಇಷ್ಟವಾಗಿತ್ತು. ವಿಧಿಯಾಟ.. ನಿಧಿಮಾ ದೂರವಾದಳು. ನಿಧಿಮಾ ದೂರವಾಗಿ 2 ವರ್ಷ ಕಳೆಯುವಷ್ಟರ ಹೊತ್ತಿಗೆ ಆದಿತ್ಯನಿಗೆ ಮತ್ತೆ ಮದುವೆಯಾಗೋ ಮನಸ್ಸಾಗಿದೆ. ಈ ಬಾರಿ ಯಾರ ಮೇಲೆ ಲವ್ ಆಗಿದೆ? ನಿಧಿಮಾ ಅಂದ್ರೇನೇ ಪ್ರೀತಿ ಅನ್ನೋ ಆದಿ, ಇನ್ನೊಬ್ಬಳಲ್ಲಿ ಪ್ರೀತಿ ಹುಡುಕಿದನಾ?

    ಹೀಗೆ ಹಲವು ಪ್ರಶ್ನೆಗಳಿಗೆ ಉತ್ತರ ಹೇಳೋಕೆ ಬರುತ್ತಿದೆ ಲವ್ ಮಾಕ್‍ಟೇಲ್ 2. ಒನ್ಸ್ ಎಗೇನ್ ಇದು ಡಾರ್ಲಿಂಗ್ ಕೃಷ್ಣ ಮತ್ತು ಮಿಲನ ನಾಗರಾಜ್ ಕನಸಿನ ಇನ್ನೊಂದು ಸಿನಿಮಾ. ಕಥೆ, ಚಿತ್ರಕಥೆ, ನಿರ್ದೇಶನ ಕೃಷ್ಣ ಅವರದ್ದೇ. ಈ ಬಾರಿ ನಕುಲ್ ಅಭ್ಯಂಕರ್ ಮ್ಯೂಸಿಕ್ ಹೊಣೆ ಹೊತ್ತಿದ್ದರೆ, ಸಾಹಿತ್ಯ ರಾಘವೇಂದ್ರ ಕಾಮತ್ ಅವರದ್ದು. ಮಿಲನಾ ಅವರಿಂದ ಬೈಸ್ಕೊಂಡ್ ಮೇಲೆ ಟ್ರೇಲರ್ ರಿಲೀಸ್ ಆಗಿದೆ. ಮೊದಲ ಭಾಗದಂತೆಯೇ ಒಂದಿಷ್ಟು ತರಲೆ, ತಮಾಷೆಗಳ ಜೊತೆಯಲ್ಲಿ ಸಾಗುವ ಕಥೆಯಲ್ಲಿ ಭಾವುಕತೆಯನ್ನು ತುಂಬಿ ತುಳುಕಿಸಿರೋ ಸುಳಿವು ಕೊಟ್ಟಿದ್ದಾರೆ ಕೃಷ್ಣ.

  • ಡಾರ್ಲಿಂಗ್ ಕೃಷ್ಣ, ಕಡ್ಡಿಪುಡಿ ಚಂದ್ರು ಜೊತೆ ಪಿ.ಸಿ.ಶೇಖರ್ ಸಿನಿಮಾ

    ಡಾರ್ಲಿಂಗ್ ಕೃಷ್ಣ, ಕಡ್ಡಿಪುಡಿ ಚಂದ್ರು ಜೊತೆ ಪಿ.ಸಿ.ಶೇಖರ್ ಸಿನಿಮಾ

    ಅದೆಲ್ಲವೂ ಕ್ಯಾಷುಯಲ್ಲಾಗಿ ಶುರುವಾಯ್ತು. ಒಂದ್ ದಿನ ನಾನು ಅಕಸ್ಮಾತ್ ಆಗಿ ಕಡ್ಡಿಪುಡಿ ಚಂದ್ರು ಅವರನ್ನು ಭೇಟಿ ಮಾಡಿದೆ. ಯಾವ್ದಾದ್ರೂ ಒಂದೊಳ್ಳೆ ಕಥೆ ಇದ್ರೆ ಹೇಳಿ. ಒನ್ ಲೈನ್ ಸ್ಟೋರಿಯಾದ್ರೂ ಆಯ್ತು ಅಂದ್ರು. ನಾನು ಹೇಳಿದ ಸ್ಟೋರಿ ಅವರಿಗೆ ಇಷ್ಟವಾಯ್ತು. ಈ ಕಥೆಗೆ ಹೀರೋ ಯಾರ್ ಆದ್ರೆ ಚೆನ್ನಾಗಿರುತ್ತೆ ಅಂದೆ. ನಾನು ಡಾರ್ಲಿಂಗ್ ಕೃಷ್ಣ ಹೆಸರು ಹೇಳಿದೆ. ಸರಿ ಎಂದು ಹೋದರು. ಮಾರನೇ ದಿನ ಫೋನ್ ಮಾಡಿ ತಕ್ಷಣವೇ ಬನ್ನಿ, ಡಾರ್ಲಿಂಗ್ ಕೃಷ್ಣ ಇದ್ದಾರೆ. ಫೈನಲ್ ಮಾಡೋಣ ಎಂದರು. ಹೋದೆ, ಕಥೆ ಹೇಳಿದೆ. ಕೃಷ್ಣ ಅವರಿಗೂ ಇಷ್ಟವಾಯ್ತು. ಈಗ ಅಕ್ಟೋಬರ್‍ನಲ್ಲಿ ಶೂಟಿಂಗ್ ಶುರುವಾಗಲಿದೆ.

    ಹೀಗೆ ಒಂದೇ ದಿನದಲ್ಲಿ ಹೊಸ ಸಿನಿಮಾ ಶುರುವಾದ ಕಥೆ ಹೇಳಿದ್ದು ಪಿ.ಸಿ.ಶೇಖರ್. ಇದೊಂದು ರೊಮ್ಯಾಂಟಿಕ್ ಕಾಮಿಡಿ ಸಿನಿಮಾ. ರೋಮಿಯೋ, ಅರ್ಜುನ, ರಾಗ, ದಿ ಟೆರರಿಸ್ಟ್ ಚಿತ್ರಗಳ ಮೂಲಕ ಗುರುತಿಸಿಕೊಂಡಿರುವ ಪಿ.ಸಿ.ಶೇಖರ್ ಪ್ರಯೋಗಾತ್ಮಕ ಶೈಲಿಯ ಜೊತೆಗೆ ಕಮರ್ಷಿಯಲ್ ಹಿಟ್ ಕೊಟ್ಟವರು. ಸದ್ಯಕ್ಕೆ ಮಾನ್ವಿತಾ ಕಾಮತ್ ನಟನೆಯ ಚಿತ್ರದಲ್ಲಿ ಬ್ಯುಸಿಯಿದ್ದಾರೆ. ಆ ಚಿತ್ರವನ್ನು ಕಂಪ್ಲೀಟ್ ಮುಗಿಸಿದ ನಂತರವೇ ಡಾರ್ಲಿಂಗ್ ಕೃಷ್ಣ ನಟನೆಯ ಚಿತ್ರ ಶುರುವಾಗಲಿದೆ.

  • ಡಾರ್ಲಿಂಗ್ ಜೊತೆ ಶಶಾಂಕ್ ಸಿನಿಮಾ ಆರಂಭ

    ಡಾರ್ಲಿಂಗ್ ಜೊತೆ ಶಶಾಂಕ್ ಸಿನಿಮಾ ಆರಂಭ

    ಮುಗ್ಧ ಪ್ರೀತಿಯ ಗುಂಗು ಹತ್ತಿಸಿದ್ದ ಶಶಾಂಕ್ ಮತ್ತೊಂದು ಸಿನಿಮಾ ಘೋಷಿಸಿದ್ದರು. ಶಶಾಂಕ್ ಮುಂದಿನ ಚಿತ್ರವನ್ನು ಡಾರ್ಲಿಂಗ್ ಕೃಷ್ಣ ಜೊತೆ ಮಾಡುವುದಾಗಿ ಹೇಳಿದ್ದರು. ಈಗ ಆ ಚಿತ್ರದ ಮುಹೂರ್ತ ನೆರವೇರಿದೆ. ವಿಜಯದಶಮಿಯಂದು ಹೊಸ ಚಿತ್ರದ ಮುಹೂರ್ತವನ್ನು ಸರಳವಾಗಿ ಆಚರಿಸಿ ಶುಭಾರಂಭ ಮಾಡಿದ್ದಾರೆ ಶಶಾಂಕ್ ಮತ್ತು ಡಾರ್ಲಿಂಗ್ ಕೃಷ್ಣ.

    ಸದ್ಯಕ್ಕೆ ಇರೋ ಮಾಹಿತಿಗಳು ಇಷ್ಟು ಮಾತ್ರವೇ. ಚಿತ್ರದ ಟೈಟಲ್ ಏನು? ಕಲಾವಿದರು, ತಂತ್ರಜ್ಞರು ಯಾರೆಲ್ಲ ಇದ್ದಾರೆ ಎಂಬ ಯಾವ ಮಾಹಿತಿಯನ್ನೂ ಬಿಟ್ಟು ಕೊಟ್ಟಿಲ್ಲ. ಲವ್ 360 ಚಿತ್ರದ ಮೂಲಕ ಮತ್ತೊಮ್ಮೆ ಗೆಲುವಿನ ಏಣಿ ಏರಿರುವ ಶಶಾಂಕ್ ಹಾಗೂ ಲಕ್ಕಿಮ್ಯಾನ್ ಚಿತ್ರದ ಮೂಲಕ ಹೊಸ ಅಭಿಮಾನಿಗಳನ್ನು ಸೃಷ್ಟಿಸಿಕೊಂಡಿರುವ ಡಾರ್ಲಿಂಗ್ ಕೃಷ್ಣ ಇಬ್ಬರೂ ಒಟ್ಟಾಗಿರುವ ಚಿತ್ರದಲ್ಲಿ ಲವ್ ಸ್ಟೋರಿಯೇ ಇರಲಿದೆ ಎಂಬುದು ಅಭಿಮಾನಿಗಳ ನಿರೀಕ್ಷೆ.

  • ಡಾರ್ಲಿಂಗ್ ಡಿಂಪಲ್ ಚಿತ್ರದ ಟೈಟಲ್ ಕಾಂಟ್ರವರ್ಸಿ : ಅಸಲಿ ಕಥೆ ಏನು?

    ಡಾರ್ಲಿಂಗ್ ಡಿಂಪಲ್ ಚಿತ್ರದ ಟೈಟಲ್ ಕಾಂಟ್ರವರ್ಸಿ : ಅಸಲಿ ಕಥೆ ಏನು?

    ಮೊನ್ನೆ ಮೊನ್ನೆಯಷ್ಟೇ ಡಾರ್ಲಿಂಗ್ ಕೃಷ್ಣ ಮತ್ತು ಡಿಂಪಲ್ ಕ್ವೀನ್ ರಚಿತಾ ರಾಮ್ ಕಾಂಬಿನೇಷನ್ನಿನ ಬಹುನಿರೀಕ್ಷಿತ ಚಿತ್ರಕ್ಕೆ ಲವ್ ಮೀ ಆರ್ ಹೇಟ್ ಮಿ ಚಿತ್ರ ಘೋಷಣೆಯಾಗಿತ್ತು. ಟೈಟಲ್ ಹೊರಬಿದ್ದ ಬೆನ್ನಲ್ಲೇ ವಿವಾದ ಸುತ್ತಿಕೊಂಡಿದೆ.

    ಈ ಚಿತ್ರದ ಟೈಟಲ್ ನನ್ನದು ಎಂದು ತಗಾದೆ ತೆಗೆದಿದ್ದಾರೆ ನಿರ್ದೇಶಕ ವಿ.ದೇವದತ್ತ. ವಿ. ದೇವದತ್ತ ಸೈಕೋ ಚಿತ್ರವನ್ನು ನಿರ್ದೇಶಿಸಿದ್ದವರು. ಚಿತ್ರದ ಟೈಟಲ್ ಪ್ರಶ್ನಿಸಿ ದೇವದತ್ತ ಫಿಲಂ ಚೇಂಬರ್ ಮೆಟ್ಟಿಲೇರಿದ್ದಾರೆ.

    ಇತ್ತ ನಿರ್ದೇಶಕ ದೀಪಕ್ ಗಂಗಾಧರ್. ಲವ್ ಮೀ ಆರ್ ಹೇಟ್ ಚಿತ್ರವನ್ನು ಶ್ರೀ ವೆಂಕಟೇಶ್ವರ ಇಂಟರ್‍ನ್ಯಾಷನಲ್ ಬ್ಯಾನರ್ ಅಡಿಯಲ್ಲಿ ಮಾಡುತ್ತಿದ್ದು, ಬಿ.ಕೆ.ರವಿಕಿರಣ್ ನಿರ್ಮಾಪಕರಾಗಿದ್ದಾರೆ. ಈಗಾಗಲೇ ಚಿತ್ರದ ಫಸ್ಟ್ ಲುಕ್ ಮತ್ತು ಪ್ರೋಮೋ ಶೂಟಿಂಗ್ ಆಗಿದೆ. ಹೀಗಾಗಿ ಚಿತ್ರದ ಟೈಟಲ್ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ ದೀಪಕ್ ಗಂಗಾಧರ್.

    ವಿವಾದಕ್ಕೆ ಕಾರಣ ಏನೆಂದು ಹುಡುಕಿದರೆ ಎರಡು ಫಿಲಂ ಚೇಂಬರ್‍ಗಳ ಕಥೆ ಹೊರಬಿದ್ದಿದೆ. ಕರ್ನಾಟಕ ಫಿಲಂ ಚೇಂಬರ್, ರಾಜ್ಯದ ಅಧಿಕೃತ ಮೂಲ ಸಂಸ್ಥೆ. ಚಿತ್ರರಂಗದ ಬಹುತೇಕ ವ್ಯವಹಾರಗಳು ನಡೆಯುವುದು ಈ ಸಂಸ್ಥೆಯ ಅಡಿಯಲ್ಲಿ. ದೇಶದ ಹಾಗೂ ದಕ್ಷಿಣ ಭಾರತದ ಫಿಲಂ ಚೇಂಬರ್‍ಗಳಲ್ಲಿಯೂ ಈ ಸಂಸ್ಥೆಗೆ ಅಧಿಕೃತ ಮಾನ್ಯತೆ ಇದೆ.  ಇದರ ನಡುವೆ ಕೆಲವು ವರ್ಷಗಳ ಹಿಂದೆ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಎಂಬ ಮತ್ತೊಂದು ಪರ್ಯಾಯ ಚೇಂಬರ್ ಹುಟ್ಟುಹಾಕಲಾಯಿತು.

    ಈಗ ದೀಪಕ್ ಗಂಗಾಧರ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಟೈಟಲ್ ನೋಂದಾಯಿಸಿದ್ದಾರೆ. ಅತ್ತ ದೇವದತ್ತ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಟೈಟಲ್ ರಿಜಿಸ್ಟ್ರಾರ್ ಮಾಡಿಸಿದ್ದಾರೆ. ಎರಡು ಫಿಲಂ ಚೇಂಬರುಗಳಲ್ಲಿ ಯಾವ ಚೇಂಬರ್‍ನಲ್ಲಿರುವ ಟೈಟಲ್‍ಗೆ ಮಾನ್ಯತೆ ಸಿಗಲಿದೆ ಎನ್ನುವುದು ಕುತೂಹಲಕಾರಿ.

  • ಡಾರ್ಲಿಂಗ್ ಡಿಂಪಲ್ ಜೋಡಿ ಚಿತ್ರಕ್ಕೆ ಮಿಲನಾ ಕ್ಲಾಪ್

    ಡಾರ್ಲಿಂಗ್ ಡಿಂಪಲ್ ಜೋಡಿ ಚಿತ್ರಕ್ಕೆ ಮಿಲನಾ ಕ್ಲಾಪ್

    ನಾವಿಬ್ಬರೂ 8 ವರ್ಷಗಳ ಹಿಂದೆ ಒಂದೇ ದಿನ ಚಿತ್ರರಂಗಕ್ಕೆ ಕಾಲಿಟ್ಟವರು. ರಚಿತಾ ಅವರ ಬುಲ್ ಬುಲ್ ತೆರೆ ಕಂಡ ದಿನವೇ, ನನ್ನ ಅಭಿನಯದ ಮದರಂಗಿ ರಿಲೀಸ್ ಆಗಿತ್ತು. ಈಗ ಇಬ್ಬರೂ ಒಟ್ಟಿಗೇ ನಟಿಸುತ್ತಿದ್ದೇವೆ ಎಂದವರು ಮದರಂಗಿ ಕೃಷ್ಣ. ಆ ಚಿತ್ರದ ಡಾರ್ಲಿಂಗ್ ಡಾರ್ಲಿಂಗ್ ಹಾಡಿನಿಂದ ಡಾರ್ಲಿಂಗ್ ಕೃಷ್ಣ ಆದವರು, ಈಗ ಲವ್ ಮಾಕ್‍ಟೇಲ್ ಕೃಷ್ಣನಾಗಿದ್ದಾರೆ. ಈಗ ಲವ್ ಮಿ ಆರ್ ಹೇಟ್ ಮಿ ಚಿತ್ರಕ್ಕೆ ಹೀರೋ ಆಗಿದ್ದಾರೆ. ಈ ಚಿತ್ರದಲ್ಲಿ ಅವರಿಗೆ ರಚಿತಾ ರಾಮ್ ಹೀರೋಯಿನ್.

    ಚಿತ್ರಕ್ಕೆ ದೀಪಕ್ ಗಂಗಾಧರ್ ಡೈರೆಕ್ಟರ್. ತಮ್ಮೊಂದಿಗೆ ಅಸಿಸ್ಟೆಂಟ್ ಆಗಿದ್ದ ದೀಪಕ್ ಗಂಗಾಧರ್ ಅವರ ಮೊದಲ ನಿರ್ದೇಶನದ ಚಿತ್ರಕ್ಕೆ ಕ್ಯಾಮೆರಾ ಆನ್ ಮಾಡಿ ಶುಭ ಕೋರಿದ್ದು ದಿನಕರ್ ತೂಗುದೀಪ. ಪತಿಯ ಚಿತ್ರಕ್ಕೆ ಕ್ಲಾಪ್ ಮಾಡಿದವರು ಮಿಲನಾ ನಾಗರಾಜ್.

    ನಿರ್ಮಾಪಕ ಸುನಿಲ್‍ಗೆ ಮೊದಲಿಂದಲೂ ಸಿನಿಮಾ ಪ್ರೊಡ್ಯೂಸರ್ ಆಗಬೇಕು ಎನ್ನುವ ಆಸೆಯಿತ್ತಂತೆ. ಈ ಚಿತ್ರದ ಮೂಲಕ ಈಡೇರಿಸಿಕೊಂಡಿದ್ದಾರೆ. ಸಂಗೀತ ನಿರ್ದೇಶಕ ಸಂಭ್ರಮ ಶ್ರೀಧರ್ ಈ ಚಿತ್ರಕ್ಕೆ ಸಹನಿರ್ಮಾಪಕರೂ ಹೌದು. ಸಂಗೀತ ನಿರ್ದೇಶಕರೂ ಹೌದು. 5 ಹಾಡು ರೆಡಿಯಿವೆ. ಎಲ್ಲವೂ ಒಂದಕ್ಕಿಂತ ಒಂದು ಮೆಲೋಡಿಯಸ್ ಆಗಿಯೇ ಕೊಡುತ್ತೇನೆ ಅನ್ನೋ ಭರವಸೆಯನ್ನಂತೂ ಕೊಟ್ಟಿದ್ದಾರೆ.

    ಚಿತ್ರಕ್ಕೆ ಟೈಟಲ್ ಲವ್ ಮಿ ಆರ್ ಹೇಟ್ ಮಿ. ಅದು ಅಣ್ಣಾವ್ರ ಸೂಪರ್ ಹಿಟ್ ಸಾಂಗ್‍ನ ಮೊದಲ ಸಾಲು. ಅದಕ್ಕೆ ಚ್ಯುತಿ ಬಾರದಂತೆ ಒಳ್ಳೆಯ ಸಿನಿಮಾ ಕೊಡುತ್ತೇವೆ ಅನ್ನೋ ಭರವಸೆ ಇಡೀ ಚಿತ್ರತಂಡದ್ದು.

  • ದೇವರಾಗುತ್ತಿದ್ದಾರೆ ಪುನೀತ್

    ದೇವರಾಗುತ್ತಿದ್ದಾರೆ ಪುನೀತ್

    ಪುನೀತ್ ರಾಜ್‍ಕುಮಾರ್, ದೈವ ಭಕ್ತನಾಗಿ ಸಿನಿಮಾ ರಂಗಕ್ಕೆ ಬಂದವರು. ಭಕ್ತ ಪ್ರಹ್ಲಾದನಾಗಿ ನರಸಿಂಹನನ್ನೇ ಭೂಮಿಗೆ ಕರೆದು ತಂದಿದ್ದ ಪುನೀತ್, ಈಗ ಸ್ವತಃ ದೇವರಾಗುತ್ತಿದ್ದಾರೆ. ಪುನೀತ್ವರಾಗುತ್ತಿರುವುದು ಡಾರ್ಲಿಂಗ್ ಕೃಷ್ಣ ಪಾಲಿಗೆ.

    ಡಾರ್ಲಿಂಗ್ ಕೃಷ್ಣ ಈಗ ಓ ಕಡವುಳೇ ಚಿತ್ರದ ರೀಮೇಕ್‍ನಲ್ಲಿ ನಟಿಸುತ್ತಿದ್ದಾರೆ. ಮನಸೆಲ್ಲ ನೀನೆ, ಚಿತ್ರ ಚಿತ್ರಗಳಲ್ಲಿ ನಟಿಸಿದ್ದ ಪ್ರಭುದೇವ ಸಹೋದರ ನಾಗೇಂದ್ರ ಪ್ರಸಾದ್, ಈ ಚಿತ್ರಕ್ಕೆ ನಿರ್ದೇಶಕ.

    ಓಕಡವುಳೇ ಚಿತ್ರದಲ್ಲಿ ವಿಜಯ್ ಸೇತುಪತಿ, ಆ ದೇವರ ಪಾತ್ರ ಮಾಡಿದ್ದರು. ಕನ್ನಡದಲ್ಲಿ ಆ ಪಾತ್ರ ಮಾಡೋಕೆ ಪುನೀತ್ ಒಪ್ಪಿಕೊಂಡಿದ್ದಾರೆ. ಏಪ್ರಿಲ್‍ನಲ್ಲಿ ಸಿನಿಮಾ ಕೆಲಸ ಶುರುವಾಗಲಿದೆ

  • ನಿಜವಾದ ಲಕ್ಕಿಮ್ಯಾನ್ ನಾನೇ : ಡಾರ್ಲಿಂಗ್ ಕೃಷ್ಣ

    ನಿಜವಾದ ಲಕ್ಕಿಮ್ಯಾನ್ ನಾನೇ : ಡಾರ್ಲಿಂಗ್ ಕೃಷ್ಣ

    ನಾಳೆ ಲಕ್ಕಿಮ್ಯಾನ್ ಚಿತ್ರ ಬಿಡುಗಡೆ. ಚಿತ್ರದ ಹೀರೋ ಡಾರ್ಲಿಂಗ್ ಕೃಷ್ಣ. ಅವರೇ ಲಕ್ಕಿಮ್ಯಾನ್. ಸಂಗೀತಾ ಶೃಂಗೇರಿ ಮತ್ತು ರೋಷನಿ ಪ್ರಕಾಶ್ ನಾಯಕಿಯಾಗಿರೋ ಚಿತ್ರಕ್ಕೆ ನಾಗೇಂದ್ರ ಪ್ರಸಾದ್ ನಿರ್ದೇಶಕ. ಅಪ್ಪು ಅಭಿನಯದ ಕೊನೆಯ ಚಿತ್ರದಲ್ಲಿ ಪ್ರಭುದೇವ ಕೂಡಾ ನಟಿಸಿದ್ದಾರೆ.

    ಈ ಚಿತ್ರದ ಆಫರ್ ಬಂದಾಗ ನಾನು ನಾನ್ ಕಡವುಳೆ ಚಿತ್ರ ನೋಡಿದೆ. ವಿಜಯ್ ಸೇತುಪತಿ ಪಾತ್ರ ಇಷ್ಟವಾಗಿತ್ತು.

    ಚಿತ್ರ ನೋಡಿದ್ದೆ. ನಾಗೇಂದ್ರ ಪ್ರಸಾದ್ 2 ತಿಂಗಳ ನಂತರ ಅಗ್ರಿಮೆಂಟ್‍ಗೆ ಸೈನ್ ಹಾಕೋಕೆ ಫೋನ್ ಮಾಡಿದರು. ಆದರೆ ಮಿಲನಾ ಒಪ್ಪಿರಲಿಲ್ಲ. ಈಗ ಕೆರಿಯರ್ ಬೆಳೆಯುತ್ತಿರೋ ಸಮಯದಲ್ಲಿ ರೀಮೇಕ್ ಬೇಕಾ ಎಂದು ಪ್ರಶ್ನೆಯೆತ್ತಿದರು. ಮಿಲನಾ ಅವರನ್ನು ಒಪ್ಪಿಸಿ ನಟಿಸೋಕೆ ರೆಡಿಯಾದೆ. ಆಮೇಲೆ ಪುನೀತ್ ಸರ್ ಜೊತೆಯಾದರು. ಲಕ್ಕಿಮ್ಯಾನ್ ಅಲ್ಲವೇ ಎನ್ನುವ ಡಾರ್ಲಿಂಗ್ ಕೃಷ್ಣಕ್ಕೆ ಪುನೀತ್ ಜೊತೆ ನಟಿಸುವುದು ಹೊಸದೇನಲ್ಲ.

    ನನಗೆ ಪುನೀತ್ ಅವರ ಜೊತೆ ನಟಿಸುವುದು ಹೊಸದಲ್ಲ. ನನಗೆ ಅವರು 10 ವರ್ಷಗಳಿಂದ ಗೊತ್ತು. ನನ್ನ ಕೆರಿಯರ್‍ನಲ್ಲಿ ಅವರ ಪಾತ್ರವೂ ಇದೆ. ಅಷ್ಟೇ ಅಲ್ಲ, ಜಾಕಿ ಚಿತ್ರದಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿದ್ದಾಗ ಅವರಿಗೆ ನಿರ್ದೇಶನ ಮಾಡಿದ ಅನುಭವವೂ ಇದೆ. ಆದರೂ ಹೀರೋ ಆಗಿರುವ ಚಿತ್ರದಲ್ಲಿ ಅಪ್ಪು ಸರ್ ನಟಿಸುತ್ತಾರೆ ಎಂದಾಗ ನರ್ವಸ್ ಆಗಿದ್ದಂತೂ ನಿಜ. ಆದರೆ ಅವರೇ ಆ ಆತಂಕ ದೂರ ಮಾಡಿದರು ಎನ್ನುವ ಕೃಷ್ಣಗೆ ಅಪ್ಪು ಅವರ ಕೊನೆಯ ಚಿತ್ರಕ್ಕೆ ನಾನು ಹೀರೋ ಎನ್ನುವ ಪ್ರೀತಿ, ಅಭಿಮಾನ ಇದೆ. ಹೀಗಾಗಿಯೇ ನಾನು ನಿಜವಾದ ಲಕ್ಕಿಮ್ಯಾನ್ ಎನ್ನುತ್ತಾರೆ.

    ಚಿತ್ರದಲ್ಲಿ ಪುನೀತ್ ಜೊತೆ ಪ್ರಭುದೇವ ಕೂಡಾ ಇದ್ದಾರೆ. ಇಬ್ಬರು ನಾಯಕಿಯರಿದ್ದಾರೆ. ರಿಯಲ್ ಲೈಫಲ್ಲಿ ಮತ್ತು ರೀಲ್ ಲೈಫಲ್ಲಿ ಎರಡರಲ್ಲೂ ನಾನು ಲಕ್ಕಿಮ್ಯಾನ್ ಎನ್ನುವ ಕೃಷ್ಣ, ನಾಳೆಯ ರಿಲೀಸ್‍ಗೆ ಕಾಯುತ್ತಿದ್ದಾರೆ.

  • ನೋಡಿದವರೆನ್ನಲ್ಲ ಬೆಚ್ಚಗಾಗಿಸೋ ದಿಲ್ ಪಸಂದ್ ಫಸ್ಟ್ ಲುಕ್

    ನೋಡಿದವರೆನ್ನಲ್ಲ ಬೆಚ್ಚಗಾಗಿಸೋ ದಿಲ್ ಪಸಂದ್ ಫಸ್ಟ್ ಲುಕ್

    ದಿಲ್ ಪಸಂದ್. ಡಾರ್ಲಿಂಗ್ ಕೃಷ್ಣ ಮತ್ತು ನಿಶ್ವಿಕಾ ನಾಯ್ಡು ಹಾಗೂ ಮೇಘಾ ಶೆಟ್ಟಿ ಅಭಿನಯದ ಹೊಸ ಸಿನಿಮಾ. ಶಿವತೇಜಸ್ ನಿರ್ದೇಶನದ ಚಿತ್ರದಲ್ಲಿ ರೊಮ್ಯಾಂಟಿಕ್ ಲವ್ ಸ್ಟೋರಿ ಇದೆ. ಚಿತ್ರದ ಫಸ್ಟ್ ಲುಕ್ ಈಗ ಹೊರಬಿದ್ದಿದೆ. ಫಸ್ಟ್ ಲುಕ್ ನೋಡಿದವರ ಮೈಮನಗಳನ್ನೆಲ್ಲ ಬೆಚ್ಚಗಾಗಿಸುವಂತೆ ಒಂದೇ ಒಂದು ಫೋಟೋ ಹೊರಬಿಟ್ಟಿದ್ದಾರೆ ಶಿವತೇಜಸ್.

    ಲವ್ ಮಾಕ್‍ಟೇಲ್ ನಂತರ ರೊಮ್ಯಾಂಟಿಕ್ ಚಿತ್ರಗಳಲ್ಲೇ ನಟಿಸುತ್ತಿರೋ ಡಾರ್ಲಿಂಗ್ ಕೃಷ್ಣ, ಈ ಚಿತ್ರದಲ್ಲಿ ಇಬ್ಬರು ಚೆಲುವೆಯರ ಜೊತೆ ರೊಮ್ಯಾನ್ಸ್ ಮಾಡಲಿದ್ದಾರೆ. ಸಾಧುಕೋಕಿಲ, ರಂಗಾಯಣ ರಘು, ತಬಲಾ ನಾಣಿ, ಅರುಣ್ ಬಾಲರಾಜ್ ಮೊದಲಾದವರು ನಟಿಸುತ್ತಿರೋ ಚಿತ್ರದಲ್ಲಿ ಕಾಮಿಡಿಯೂ ಭರಪೂರ ಇರುವ ಸೂಚನೆ ಇದೆ.

  • ಪ್ರೇಮಿಗಳ ದಿನದಂದೇ ಲವ್ ಮಾಕ್‍ಟೇಲ್ ಜೋಡಿಯ ಮದುವೆ

    Love Mocktail Fame Darling Krishna - Milana Nagraj To Tie Knot On Feb 14th

    ಲವ್ ಮಾಕ್‍ಟೇಲ್ ಸಿನಿಮಾ 2020ರ ಹಿಟ್ ಸಿನಿಮಾ. ಈ ಸಿನಿಮಾದ ಮೂಲಕ ಹಿಟ್ ಜೋಡಿಯಾಗಿದ್ದು ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್. ವಿಶೇಷ ಅಂದ್ರೆ ಸಿನಿಮಾ ಬಿಡುಗಡೆಯಾಗುವ ಹೊತ್ತಿಗೆ ಇವರಿಬ್ಬರ ಪ್ರೀತಿಯನ್ನು ಅವರೇ ಬಹಿರಂಗಪಡಿಸಿದ್ದರು. ಇನ್ನೂ ವಿಶೇಷ ಅಂದ್ರೆ ಇವರಿಬ್ಬರ ಪ್ರೀತಿ ಪ್ರೇಮಕ್ಕೆ ಈಗಾಗಲೇ 6 ವರ್ಷ ಅನ್ನೋದು.

    ಲವ್ ಮಾಕ್‍ಟೇಲ್ ಬಿಡುಗಡೆ ನಂತರ ಇಬ್ಬರೂ ಶೀಘ್ರದಲ್ಲೇ ಮದುವೆಯಾಗೋದಾಗಿ ಹೇಳಿದ್ದರು. ಅದಕ್ಕೀಗ ಸಮಯ ಕೂಡಿ ಬಂದಿದೆ. 2021ರ ಫೆಬ್ರವರಿ 14ರಂದು ಮಿಲನ ಮತ್ತು ಕೃಷ್ಣ ಅವರ ಸಂಗಮವಾಗಲಿದೆ. ಪ್ರೇಮಿಗಳ ದಿನದಂದೇ ಇಬ್ಬರೂ ಹಸೆಮಣೆ ಏರುತ್ತಿರೋದು ವಿಶೇಷ. ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್‍ನಲ್ಲಿ ಮದುವೆ ನಡೆಯಲಿದೆ.

  • ಮತ್ತಿನಲ್ಲಿ ಜನುಮದ ಜೋಡಿಯಾದವರಿಗೆ.. ಪರಸ್ಪರ ಪರಿಚಯವೇ ಇಲ್ಲದಿದ್ದರೆ..

    ಮತ್ತಿನಲ್ಲಿ ಜನುಮದ ಜೋಡಿಯಾದವರಿಗೆ.. ಪರಸ್ಪರ ಪರಿಚಯವೇ ಇಲ್ಲದಿದ್ದರೆ..  ಅವರಿಬ್ಬರೂ ಪಬ್ಬಿಗೆ ಬರುತ್ತಾರೆ. ಅವನಿಗೆ ಮದುವೆ, ಪ್ರೀತಿ, ಸಂಸಾರ, ಜವಾಬ್ದಾರಿಗಳಾವ್ಯಾವುವೂ ಇಷ್ಟವಿಲ್ಲ. ಆದರೆ ವೃತ್ತಿ ಮದುವೆ ಮಾಡಿಸುವುದು. ಮ್ಯಾರೇಜ್ ಆರ್ಗನೈಸರ್. ಅವಳೂ ಪಬ್ಬಿಗೆ ಬರುತ್ತಾಳೆ. ಅವಳಿಗೂ ಅಷ್ಟೆ. ಪ್ರೀತಿ, ಮದುವೆಯನ್ನೇ ದ್ವೇಷಿಸುವವಳು. ಇಬ್ಬರೂ ಪಬ್ಬಿನಲ್ಲಿ ಜೊತೆಯಾಗಿ ಮತ್ತಿನಲ್ಲಿ ಒಂದು ಎಡವಟ್ಟು ಮಾಡುತ್ತಾರೆ. ಸೋಷಿಯಲ್ ಮೀಡಿಯಾದಲ್ಲಿ ಸೆಲ್ಫೀ ತೆಗೆದುಕೊಂಡು ನಾವಿಬ್ಬರೂ ಕಪಲ್ ಎಂದು ಅನೌನ್ಸ್ ಮಾಡಿಬಿಡುತ್ತಾರೆ. ಮತ್ತೆಲ್ಲ ಇಳಿದು ಬೆಳಗ್ಗೆ ಎದ್ದ ಮೇಲೆ ನಮ್ಮಿಬ್ಬರಿಗೂ ಪರಿಚಯವೇ ಇಲ್ಲ. ಹೆಸರೂ ಕೂಡಾ ಗೊತ್ತಿಲ್ಲ ಎಂದು ಅರಿವಾಗುತ್ತೆ. ಅಲ್ಲಿಂದ ಶುರುವಾಗುತ್ತೆ ಭಾವನೆಗಳ ಸವಾರಿ.. ಇದು ಶುಗರ್ ಫ್ಯಾಕ್ಟರಿ ಚಿತ್ರದ ಒನ್ ಲೈನ್ ಸ್ಟೋರಿ. ಹೀರೋ ಡಾರ್ಲಿಂಗ್ ಕೃಷ್ಣ. ಹೀರೋಯಿನ್ ಸೋನಲ್ ಮಂಥೆರೋ. ರಂಗಾಯಣ ರಘು, ಅದ್ವಿತಿ ಶೆಟ್ಟಿ, ಶಿಲ್ಪಾ ಶೆಟ್ಟಿ, ಶಿಲ್ಪಾ, ಪವನ್ ನಾರಾಯಣ್, ಗೋವಿಂದೇ ಗೌಡ.. ಹೀಗೆ ದೊಡ್ಡ ಕಲಾವಿದರ ದಂಡೇ ಚಿತ್ರದಲ್ಲಿದೆ. ನಿರ್ದೇಶಕ ದೀಪಕ್ ಅರಸ್ ದಶಕದ ಗ್ಯಾಪ್ ನಂತರ ಚಿತ್ರ ನಿರ್ದೇಶನಕ್ಕಿಳಿದಿದ್ದಾರೆ. ಆದರೆ ಇಡೀ ಚಿತ್ರದ ಕಥೆ ಈಗಿನ ಯೂಥ್ ಟ್ರೆಂಡ್ ಪಬ್ ಲೈಫ್ ಕುರಿತಾದದ್ದು. ಇಡೀ ಚಿತ್ರವನ್ನು ಏಷ್ಯಾದ ನಂ.1 ಪಬ್ಬಿನಲ್ಲಿ ಚಿತ್ರೀಕರಣ ಮಾಡಲಾಗಿದೆ. 27 ದಿನಗಳ ಕಾಲ ಚಿತ್ರೀಕರಣ. ಗೋವಾದಲ್ಲಿ 22 ದಿನ ಶೂಟಿಗ್. ಪ್ರತಿ ದೃಶ್ಯವೂ ರಿಚ್ ಆಗಿ ಬಂದಿದೆ ಎನ್ನುತ್ತಾರೆ ದೀಪಕ್ ಅರಸ್. 2011ರಲ್ಲಿ ಮನಸಾಲಜಿ ಚಿತ್ರ ನಿರ್ದೇಶಿಸಿದ್ದವರು ದೀಪಕ್ ಅರಸ್. ಶುಗರ್ ಫ್ಯಾಕ್ಟರಿಯಲ್ಲಿ ಒಟ್ಟು 7 ಹಾಡುಗಳಿವೆ. ಕಬೀರ್ ರಫಿ ಅದ್ಭುತ ಸಂಗೀತ ಸಂಯೋಜನೆ ಮಾಡಿದ್ದಾರೆ. ಪಬ್ ಆ್ಯಂಥಮ್ ಗೀತೆಯೊಂದನ್ನು ಚಂದನ್ ಶೆಟ್ಟಿ ಹಾಡಿದ್ದು ಹಾಡು ಹಿಟ್ ಆಗಿದೆ. ಇದೇ ಫೆಬ್ರವರಿ 10ರಂದು ಚಿತ್ರ ರಿಲೀಸ್ ಆಗುತ್ತಿದೆ.

    ಅವರಿಬ್ಬರೂ ಪಬ್ಬಿಗೆ ಬರುತ್ತಾರೆ. ಅವನಿಗೆ ಮದುವೆ, ಪ್ರೀತಿ, ಸಂಸಾರ, ಜವಾಬ್ದಾರಿಗಳಾವ್ಯಾವುವೂ ಇಷ್ಟವಿಲ್ಲ. ಆದರೆ ವೃತ್ತಿ ಮದುವೆ ಮಾಡಿಸುವುದು. ಮ್ಯಾರೇಜ್ ಆರ್ಗನೈಸರ್. ಅವಳೂ ಪಬ್ಬಿಗೆ ಬರುತ್ತಾಳೆ. ಅವಳಿಗೂ ಅಷ್ಟೆ. ಪ್ರೀತಿ, ಮದುವೆಯನ್ನೇ ದ್ವೇಷಿಸುವವಳು. ಇಬ್ಬರೂ ಪಬ್ಬಿನಲ್ಲಿ ಜೊತೆಯಾಗಿ ಮತ್ತಿನಲ್ಲಿ ಒಂದು ಎಡವಟ್ಟು ಮಾಡುತ್ತಾರೆ. ಸೋಷಿಯಲ್ ಮೀಡಿಯಾದಲ್ಲಿ ಸೆಲ್ಫೀ ತೆಗೆದುಕೊಂಡು ನಾವಿಬ್ಬರೂ ಕಪಲ್ ಎಂದು ಅನೌನ್ಸ್ ಮಾಡಿಬಿಡುತ್ತಾರೆ. ಮತ್ತೆಲ್ಲ ಇಳಿದು ಬೆಳಗ್ಗೆ ಎದ್ದ ಮೇಲೆ ನಮ್ಮಿಬ್ಬರಿಗೂ ಪರಿಚಯವೇ ಇಲ್ಲ. ಹೆಸರೂ ಕೂಡಾ ಗೊತ್ತಿಲ್ಲ ಎಂದು ಅರಿವಾಗುತ್ತೆ. ಅಲ್ಲಿಂದ ಶುರುವಾಗುತ್ತೆ ಭಾವನೆಗಳ ಸವಾರಿ..

    ಇದು ಶುಗರ್ ಫ್ಯಾಕ್ಟರಿ ಚಿತ್ರದ ಒನ್ ಲೈನ್ ಸ್ಟೋರಿ. ಹೀರೋ ಡಾರ್ಲಿಂಗ್ ಕೃಷ್ಣ. ಹೀರೋಯಿನ್ ಸೋನಲ್ ಮಂಥೆರೋ. ರಂಗಾಯಣ ರಘು, ಅದ್ವಿತಿ ಶೆಟ್ಟಿ, ಶಿಲ್ಪಾ ಶೆಟ್ಟಿ, ಶಿಲ್ಪಾ, ಪವನ್ ನಾರಾಯಣ್, ಗೋವಿಂದೇ ಗೌಡ.. ಹೀಗೆ ದೊಡ್ಡ ಕಲಾವಿದರ ದಂಡೇ ಚಿತ್ರದಲ್ಲಿದೆ. ನಿರ್ದೇಶಕ ದೀಪಕ್ ಅರಸ್ ದಶಕದ ಗ್ಯಾಪ್ ನಂತರ ಚಿತ್ರ ನಿರ್ದೇಶನಕ್ಕಿಳಿದಿದ್ದಾರೆ. ಆದರೆ ಇಡೀ ಚಿತ್ರದ ಕಥೆ ಈಗಿನ ಯೂಥ್ ಟ್ರೆಂಡ್ ಪಬ್ ಲೈಫ್ ಕುರಿತಾದದ್ದು. ಇಡೀ ಚಿತ್ರವನ್ನು ಏಷ್ಯಾದ ನಂ.1 ಪಬ್ಬಿನಲ್ಲಿ ಚಿತ್ರೀಕರಣ ಮಾಡಲಾಗಿದೆ. 27 ದಿನಗಳ ಕಾಲ ಚಿತ್ರೀಕರಣ. ಗೋವಾದಲ್ಲಿ 22 ದಿನ ಶೂಟಿಗ್. ಪ್ರತಿ ದೃಶ್ಯವೂ ರಿಚ್ ಆಗಿ ಬಂದಿದೆ ಎನ್ನುತ್ತಾರೆ ದೀಪಕ್ ಅರಸ್.

    2011ರಲ್ಲಿ ಮನಸಾಲಜಿ ಚಿತ್ರ ನಿರ್ದೇಶಿಸಿದ್ದವರು ದೀಪಕ್ ಅರಸ್. ಶುಗರ್ ಫ್ಯಾಕ್ಟರಿಯಲ್ಲಿ ಒಟ್ಟು 7 ಹಾಡುಗಳಿವೆ. ಕಬೀರ್ ರಫಿ ಅದ್ಭುತ ಸಂಗೀತ ಸಂಯೋಜನೆ ಮಾಡಿದ್ದಾರೆ. ಪಬ್ ಆ್ಯಂಥಮ್ ಗೀತೆಯೊಂದನ್ನು ಚಂದನ್ ಶೆಟ್ಟಿ ಹಾಡಿದ್ದು ಹಾಡು ಹಿಟ್ ಆಗಿದೆ. ಇದೇ ಫೆಬ್ರವರಿ 10ರಂದು ಚಿತ್ರ ರಿಲೀಸ್ ಆಗುತ್ತಿದೆ.

  • ಮತ್ತೆ ಬೇಕು ಅಂದ್ರೆ ಅಪ್ಪು ಸಿಗಲ್ಲ. ಈ ಸಿನಿಮಾ ಅಪ್ಪಿಕೊಳ್ಳಿ : ಕಿಚ್ಚ ಸುದೀಪ್

    ಮತ್ತೆ ಬೇಕು ಅಂದ್ರೆ ಅಪ್ಪು ಸಿಗಲ್ಲ. ಈ ಸಿನಿಮಾ ಅಪ್ಪಿಕೊಳ್ಳಿ : ಕಿಚ್ಚ ಸುದೀಪ್

    ಲಕ್ಕಿಮ್ಯಾನ್. ಸೆಪ್ಟೆಂಬರ್`ನಲ್ಲಿ ರಿಲೀಸ್ ಆಗುತ್ತಿರೋ ಸಿನಿಮಾ ಇದು. ನಾನ್ ಕಡುವುಳೆ ಚಿತ್ರದ ರೀಮೇಕ್ ಆಗಿರೋ ಲಕ್ಕಿಮ್ಯಾನ್ ಚಿತ್ರದಲ್ಲಿ ಪುನೀತ್ ರಾಜಕುಮಾರ್ ದೇವರ ಪಾತ್ರದಲ್ಲಿ ನಟಿಸಿದ್ದಾರೆ. ಪ್ರಭುದೇವ ಕೂಡಾ ನಟಿಸಿರೋ ಚಿತ್ರಕ್ಕೆ ಪ್ರಭುದೇವ  ಸಹೋದರ ನಾಗೇಂದ್ರ ಪ್ರಸಾದ್ ನಿರ್ದೇಶಕ. ಚಿತ್ರದ ಬಿಡುಗಡೆ ಹಿನ್ನೆಲೆಯಲ್ಲಿ ಬಾರೋ ರಾಜ ಹಾಡಿನ ಲಿರಿಕಲ್ ವಿಡಿಯೋ ರಿಲೀಸ್ ಮಾಡಿದ ಚಿತ್ರತಂಡ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಕಿಚ್ಚ ಸುದೀಪ್, ರಾಘವೇಂದ್ರ ರಾಜಕುಮಾರ್, ಸಾಧುಕೋಕಿಲ ಸೇರಿದಂತೆ ಇಡೀ ಚಿತ್ರತಂಡ ಹಾಜರಿತ್ತು.

    ಚಿತ್ರದ ಹೀರೋ ಡಾರ್ಲಿಂಗ್ ಕೃಷ್ಣ. ಅಪ್ಪು ಸರ್ ಜೊತೆ ನಟಿಸುವುದು ನನಗೆ ಹೊಸದಲ್ಲ. ಈ ಹಿಂದೆ ಅಭಿನಯಿಸಿದ್ದೇನೆ. ಆದರೆ ನಾನು ಲೀಡ್ ರೋಲಿನಲ್ಲಿರುವ ಚಿತ್ರದಲ್ಲಿ ಅಪ್ಪು ಸರ್ ನಟಿಸಿದ್ದಾರೆ ಎನ್ನುವುದು ನನ್ನ ಹೆಮ್ಮೆ ಎಂದರು ಕೃಷ್ಣ.

    ಈ ಚಿತ್ರವನ್ನು ಬಾಚಿ ತಬ್ಬಿಕೊಂಡು ಬಿಡಿ. ಅಪ್ಪುನ ಮತ್ತೆ ನೋಡಬಹುದು ಅನ್ನೋ ಕಾರಣಕ್ಕೆ ನಾನು ಟ್ರೇಲರ್ ನೋಡಿ ಖುಷಿಪಟ್ಟೆ. ಅಪ್ಪು ಅವರು ಈಗಿಲ್ಲ. ಅವರು ದೇವರಾಗಿದ್ದಾರೆ. ಈ ಸಿನಿಮಾದಲ್ಲೂ ದೇವರಾಗಿ ನಟಿಸಿದ್ದಾರೆ. ಮತ್ತೆ ಬೇಕು ಅಂದ್ರೂ ಅಪ್ಪು ನೋಡೋಕೆ ಸಿಗಲ್ಲ. ಅಪ್ಪುಗೆ ದೇವರ ಪಾತ್ರ ಚೆನ್ನಾಗಿ ಸೂಟ್ ಆಗುತ್ತೆ ಎಂದವರು ಸುದೀಪ್.

    ಚಿತ್ರದ ನಿರ್ದೇಶಕ ನಾಗೇಂದ್ರ ಪ್ರಸಾದ್ ಎಲ್ಲವನ್ನೂ ನಡೆಸಿಕೊಟ್ಟ ಅಣ್ಣ ಪ್ರಭುದೇವಗೆ ಥ್ಯಾಂಕ್ಸ್ ಹೇಳಿದರು. ಪ್ರಭುದೇವ ಫೋನಿನಲ್ಲಿ ಕೇಳಿದ ತಕ್ಷಣ ಮರುಮಾತನಾಡದೆ ಖುಷಿಯಿಂದ ಒಪ್ಪಿಕೊಂಡರಂತೆ ಅಪ್ಪು.

    ಡಾರ್ಲಿಂಗ್ ಕೃಷ್ಣ ಮತ್ತು ಸಂಗೀತಾ ಶೃಂಗೇರಿ ಪ್ರಧಾನ ಪಾತ್ರದಲ್ಲಿರೋ ಚಿತ್ರದಲ್ಲಿ ಅಪ್ಪು ಅತಿಥಿ ನಟರಾಗಿದ್ದರೂ ಅವರ ಪಾತ್ರ ಮುಕ್ಕಾಲು ಗಂಟೆ ಇರಲಿದೆಯಂತೆ.

    ಲಕ್ಕಿಮ್ಯಾನ್ ಒಂದು ರೀತಿಯಲ್ಲಿ ಅಪ್ಪು ನಟನೆಯ ಕಟ್ಟಕಡೆಯ ಸಿನಿಮಾ. ಇದಾದ ನಂತರ ಗಂಧದ ಗುಡಿ ಬರಲಿದೆಯಾದರೂ ಅದು ಸಾಕ್ಷ್ಯಚಿತ್ರ. ಸಿನಿಮಾ ಅಲ್ಲ.

  • ಮತ್ತೆ ಲವ್ ಬಡ್ರ್ಸ್ ಆದ ಲವ್ ಮಾಕ್ಟೇಲ್ ಜೋಡಿ

    ಮತ್ತೆ ಲವ್ ಬಡ್ರ್ಸ್ ಆದ ಲವ್ ಮಾಕ್ಟೇಲ್ ಜೋಡಿ

    ಲವ್ ಮಾಕ್ಟೇಲ್ ಚಿತ್ರದ ಮೂಲಕ ತೆರೆಯ ಮೇಲೆ ಭರ್ಜರಿ ಜೋಡಿಯಾದವರು ಮಿಲನಾ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ. ತೆರೆಯ ಮೇಲೆ ಹಾಗೂ ರಿಯಲ್ ಲೈಫಿನಲ್ಲಿ ಎರಡೂ ಕಡೆ ಮುದ್ದು ಮುದ್ದು ಜೋಡಿಯಾದ ಮಿಲನಾ ಮತ್ತು ಕೃಷ್ಣ ಈಗ ಮತ್ತೊಮ್ಮೆ ಒಂದಾಗಿದ್ದಾರೆ. ಲವ್ ಬಡ್ರ್ಸ್ ಆಗಿ.

    ಲವ್ ಮಾಕ್ಟೇಲ್ ಮತ್ತು ಲವ್ ಮಾಕ್ಟೇಲ್ 2ನಲ್ಲಿ ಇಬ್ಬರೂ ಜೊತೆಯಾಗಿದ್ದರು. ಮೊದಲ ಚಿತ್ರ ಪ್ರೇಕ್ಷಕರ ಮನಸ್ಸನ್ನೂ, 2ನೇ ಚಿತ್ರ ಬಾಕ್ಸಾಫೀಸನ್ನೂ ಗೆದ್ದಿತ್ತು. ಜೊತೆಗೆ ಇವರಿಬ್ಬರೂ ನಟಿಸಿದ ಇನ್ನೊಂದು ಚಿತ್ರ ಮಿ.ಬ್ಯಾಚುಲರ್. ಲವ್ ಮಾಕ್ಟೇಲ್ ಚಿತ್ರಕ್ಕೆ ಹೋಲಿಸಿದರೆ ಬ್ಯಾಚುಲರ್ ದೊಡ್ಡ ಮಟ್ಟದ ಸದ್ದನ್ನೇನೂ ಮಾಡಲಿಲ್ಲ. ಈಗ ಈ ಇಬ್ಬರೂ ಒಂದಾಗಿದ್ದಾರೆ.

    ಆದರೆ ಈ ಬಾರಿ ಇವರಿಬ್ಬರನ್ನೂ ಒಂದುಗೂಡಿಸಿರುವುದು ಪಿ.ಸಿ.ಶೇಖರ್. ಡಿಫರೆಂಟ್ ಕಥೆಗಳನ್ನು ಅಷ್ಟೇ ಡಿಫರೆಂಟ್ ಆಗಿ ಹೇಳುವ ಪಿ.ಸಿ.ಶೇಖರ್ ಈ ಇಬ್ಬರನ್ನೂ ಅಷ್ಟೇ ವಿಭಿನ್ನವಾಗಿ ಪ್ರೆಸೆಂಟ್ ಮಾಡಿದ್ದಾರೆ. ಚಿತ್ರದ ಟೀಸರ್ ಅದೇ ಕಾರಣಕ್ಕೆ ಇಷ್ಟವಾಗುತ್ತಿದೆ. ಕಡ್ಡಿಪುಡಿ ಚಂದ್ರು ನಿರ್ಮಾಣದ ಲವ್ ಬಡ್ರ್ಸ್ ಚಿತ್ರದ ಟೀಸರ್ ರಿಲೀಸ್ ಮಾಡಿದ್ದು ವಿಜಯ್ ರಾಘವೇಂದ್ರ ಮತ್ತು ಅಜೇಯ್ ರಾವ್.

    ಲವ್ ಬಡ್ರ್ಸ್ ಚಿತ್ರದಲ್ಲಿ ಕೃಷ್ಣ ದೀಪಕ್ ಆಗಿ, ಮಿಲನಾ ಪೂಜಾ ಆಗಿ ನಟಿಸುತ್ತಿದ್ದಾರೆ. ಇಬ್ಬರಿಗೂ ಕಥೆ ಸಖತ್ ಇಷ್ಟವಾಗಿದೆ. ಇದು ಕೇವಲ ಲವ್ ಸ್ಟೋರಿ ಅಲ್ಲ ಅನ್ನೋದು ಕೃಷ್ಣ ಮತ್ತು ಮಿಲನಾ ಅವರ ಮಾತಷ್ಟೇ ಅಲ್ಲ, ನಿರ್ದೇಶಕರದ್ದೂ ಅದೇ ಕಥೆ. ನನಗೆ ಒಂದೇ ಜಾನರ್ ಸಿನಿಮಾ ಮಾಡೋಕೆ ಬರಲ್ಲ. ಹೀಗಾಗಿ ಲವ್ ಬಡ್ರ್ಸ್ ಕಥೆ ಸಿದ್ಧ ಮಾಡಿದೆ. ಇಲ್ಲಿ ಪ್ರೀತಿಯ ಜೊತೆಗೆ ಬೇರೆ ಬೇರೆ ವಿಷಯಗಳೂ ಇವೆ ಎನ್ನುತ್ತಾರೆ ಶೇಖರ್.

    ಕೃಷ್ಣ ಸಖತ್ ಸ್ಟೈಲಿಷ್ ಆಗಿ ಕಾಣಿಸುತ್ತಿದ್ದರೆ, ಮಿಲನಾ ಕಣ್ಣಿಗೆ ಕನ್ನಡಕ ಹಾಕಿಕೊಂಡು ಇಂಟಲೆಕ್ಚುವಲ್ ಆಗಿ ಕಾಣಿಸುತ್ತಿದ್ದಾರೆ. ಆತ ಸಾಫ್ಟ್‍ವೇರ್ ಮತ್ತು ಟ್ರಾವೆಲ್‍ನಲ್ಲಿ ಖುಷಿ ಕಾಣುವ ಹುಡುಗ. ಈಕೆ ಸ್ವತಂತ್ರ ಮನೋಭಾವದ ಹೋರಾಟದ ಹುಡುಗಿ. ಇವರಿಬ್ಬರೂ ಹೇಗೆ ಪ್ರಣಯದ ಪಕ್ಷಿಗಳಾಗ್ತಾರೆ..? ಒಮ್ಮೆ ಟೀಸರ್ ನೋಡಿಬಿಡಿ..

  • ಲಕ್ಕಿ ಮ್ಯಾನ್ ಡಬ್ಬಿಂಗ್`ನಲ್ಲಿ ಡಾರ್ಲಿಂಗ್ ಕೃಷ್ಣ ಸಂಕಟವೇ ಬೇರೆ..

    ಲಕ್ಕಿ ಮ್ಯಾನ್ ಡಬ್ಬಿಂಗ್`ನಲ್ಲಿ ಡಾರ್ಲಿಂಗ್ ಕೃಷ್ಣ ಸಂಕಟವೇ ಬೇರೆ..

    ಡಾರ್ಲಿಂಗ್ ಕೃಷ್ಣ ಹೀರೋ ಆಗುವುದಕ್ಕೆ ಮೊದಲಿನಿಂದಲೂ ಪುನೀತ್ ಅವರ ಅಭಿಮಾನಿ. ಆರಂಭದ ದಿನಗಳಲ್ಲಿ ಪುನೀತ್ ಅವರಿಂದ ಬೆನ್ನು ತಟ್ಟಿಸಿಕೊಂಡಿದ್ದ ಕೃಷ್ಣ ಜೊತೆಗೆ ಪುನೀತ್ ಇತ್ತೀಚೆಗೆ ನಟಿಸಿದ್ದರು. ಕೃಷ್ಣ ಅವರ ಲಕ್ಕಿ ಮ್ಯಾನ್ ಚಿತ್ರದಲ್ಲಿ ಪುನೀತ್ ದೇವರ ಪಾತ್ರದಲ್ಲಿ ನಟಿಸಿದ್ದು, ಪ್ರಭುದೇವ ಜೊತೆ ಡ್ಯಾನ್ಸ್ ಕೂಡಾ ಮಾಡಿದ್ದಾರೆ.

    ಇತ್ತೀಚೆಗೆ ಆ ಚಿತ್ರದ ಡಬ್ಬಿಂಗ್ ಮುಗಿಸಿದ ಕೃಷ್ಣ ಅವರಿಗೆ ಡಬ್ಬಿಂಗ್ ಮಾಡುವಾಗ ಬಹಳ ಕಷ್ಟವಾಯಿತಂತೆ. ಅಪ್ಪು ಸರ್ ಜೊತೆಗಿನ ಶೂಟಿಂಗ್ ನಾನು ಜೀವನದಲ್ಲಿ ಮರೆಯಲು ಸಾಧ್ಯವಿಲ್ಲ. ಇದು ನನಗೆ ಎಂದೆಂದಿಗೂ ವಿಶೇಷ. ಡಬ್ಬಿಂಗ್ ಮಾಡುವಾಗ ತುಂಬಾ ಕಷ್ಟವಾಯಿತು ಎಂದು ಹೇಳಿದ್ದಾರೆ ಕೃಷ್ಣ.

    ಲಕ್ಕಿ ಮ್ಯಾನ್, ತಮಿಳಿನ ಓ ಮೈ ಕಡವಳೆ ಚಿತ್ರದ ರೀಮೇಕ್. ತಮಿಳಿನಲ್ಲಿ ವಿಜಯ್ ಸೇತುಪತಿ ಮಾಡಿದ್ದ ಪಾತ್ರವನ್ನು ಇಲ್ಲಿ ಪುನೀತ್ ಮಾಡಿದ್ದಾರೆ. ಕಷ್ಟದಲ್ಲಿರೋ ನಾಯಕನಿಗೆ ಸಹಾಯ ಮಾಡುವ ದೇವರ ಪಾತ್ರ ಪುನೀತ್ ಅವರದ್ದು.

  • ಲಕ್ಕಿಮ್ಯಾನ್ : ಅಪ್ಪು ದೇವರ ದರ್ಶನ ಎಷ್ಟು ಹೊತ್ತಿರುತ್ತೆ?

    ಲಕ್ಕಿಮ್ಯಾನ್ : ಅಪ್ಪು ದೇವರ ದರ್ಶನ ಎಷ್ಟು ಹೊತ್ತಿರುತ್ತೆ?

    ಲಕ್ಕಿಮ್ಯಾನ್ ಸಿನಿಮಾ ನಾಳೆ ರಿಲೀಸ್ ಆಗುತ್ತಿದೆ. ಡಾರ್ಲಿಂಗ್ ಕೃಷ್ಣ, ಸಂಗೀತಾ ಶೃಂಗೇರಿ, ರೋಶನಿ ಪ್ರಕಾಶ್ ಪ್ರಧಾನ ಪಾತ್ರದಲ್ಲಿರೋ ಈ ಚಿತ್ರದ ಅಪ್ಪು ಅಭಿನಯಿಸಿರುವ ಕೊನೆಯ ಸಿನಿಮಾ. ಪುನೀತ್ ರಾಜಕುಮಾರ್ ಅವರ ಜೊತೆಗೆ ಪ್ರಭುದೇವ ಒಟ್ಟಿಗೇ ನಟಿಸಿರುವ ಸಿನಿಮಾ. ಅಂದಹಾಗೆ ಇಡೀ ಸಿನಿಮಾ ಅವಧಿ 151 ನಿಮಿಷ. ಇದರಲ್ಲಿ 40ಕ್ಕೂ ಹೆಚ್ಚು ನಿಮಿಷ ಅವಧಿ ಪುನೀತ್ ತೆರೆ ಮೇಲಿರುತ್ತಾರೆ.

    ಪುನೀತ್ ರಿಯಲ್ ಲೈಫಲ್ಲಿ ಹೇಗಿದ್ದರೋ.. ತೆರೆಯ ಮೇಲೂ ಹಾಗೆಯೇ ಇರುತ್ತಾರೆ. ದೇವರಾಗಿ.. ದೇವರಂತೆ ಎನ್ನುತ್ತಾರೆ ಡಾರ್ಲಿಂಗ್ ಕೃಷ್ಣ. ದಯೆ, ಕೇರಿಂಗ್, ನಿಷ್ಕಲ್ಮಷ ಪ್ರೀತಿ ಎಲ್ಲಕ್ಕಿಂತ ಹೆಚ್ಚಾಗಿ ನಗು.. ಮಾಸದ ಆ ನಗು ಇಡೀ ಚಿತ್ರದ ತುಂಬಾ ಇರುತ್ತದೆ. ಅವರನ್ನು ಆ ಪಾತ್ರದಲ್ಲಿ ನೋಡುತ್ತಿದ್ದರೆ ಅವರು ಅಭಿನಯಿಸುತ್ತಾರೆ ಎಂದೆನಿಸುವುದಿಲ್ಲ ಎನ್ನುತ್ತಾರೆ ನಾಯಕ ಡಾರ್ಲಿಂಗ್ ಕೃಷ್ಣ.

    ನಾಗೇಂದ್ರ ಪ್ರಸಾದ್ ನಿರ್ದೆಶನದ ಈ ಚಿತ್ರದ ಹೀರೋ ಡಾರ್ಲಿಂಗ್ ಕೃಷ್ಣ. ಅಪ್ಪು ಸರ್ ಜೊತೆ ಈ ಹಿಂದೆಯೂ ನಟಿಸಿದ್ದೇನೆ. ಆದರೆ ನಾನು ಹೀರೋ ಆಗಿರೋ ಚಿತ್ರದಲ್ಲಿ ಅಪ್ಪು ಸರ್ ಅತಿಥಿಯಾಗಿ ನಟಿಸುವುದು ನನ್ನ ಅದೃಷ್ಟ. ಈ ಚಿತ್ರದಲ್ಲಿ ಅವರದ್ದು ದೇವರ ಪಾತ್ರ. ಅವರು ನಟಿಸಿಲ್ಲ. ಹೇಗಿದ್ದರೋ ಹಾಗೆಯೇ ಇದ್ದಾರೆ ಎನ್ನುವುದು ಡಾರ್ಲಿಂಗ್ ಕೃಷ್ಣ ಮಾತು.

    ಸಿನಿಮಾ ಇದೇ ಸೆಪ್ಟೆಂಬರ್ 9ಕ್ಕೆ ತೆರೆ ಕಾಣಲಿದೆ.

  • ಲವ್ ಬಡ್ರ್ಸ್ ಕೃಷ್ಣ-ಮಿಲನ ಮಧ್ಯೆ ಸಂಯುಕ್ತ ಹೊರನಾಡು

    ಲವ್ ಬಡ್ರ್ಸ್ ಕೃಷ್ಣ-ಮಿಲನ ಮಧ್ಯೆ ಸಂಯುಕ್ತ ಹೊರನಾಡು

    ಡಾರ್ಲಿಂಗ್ ಕೃಷ್ಣ ಮತ್ತು ಮಿಲನ ನಾಗರಾಜ್ ಇಬ್ಬರೂ ಲವ್ ಮಾಕ್ಟೇಲ್ ನಂತರ ಮತ್ತೊಮ್ಮೆ ಜೊತೆಯಾಗಿರುವುದು ಪಿ.ಸಿ.ಶೇಖರ್ ಚಿತ್ರದಲ್ಲಿ. ಲವ್ ಬಡ್ರ್ಸ್ ಆ ಚಿತ್ರದ ಟೈಟಲ್. ಸಿನಿಮಾ ಇನ್ನೇನು ಶುರುವಾಗುವ ಹಂತದಲ್ಲಿದೆ.

    ಆದರೆ ಇದು ಲವ್ ಟ್ರಯಾಂಗಲ್ ಅಲ್ಲ. ಮಿಲನ ಮತ್ತು ಸಂಯುಕ್ತಾ ಇಬ್ಬರಿಗೂ ಒಳ್ಳೆಯ ಸ್ಪೇಸ್ ಇದೆ. ನಟನೆಗೆ ಅವಕಾಶವಿದೆ ಎಂದಿದ್ದಾರೆ ಪಿ.ಸಿ.ಶೇಖರ್.

    ನನ್ನದು ಮಾಯಾ ಅನ್ನೋ ಪಾತ್ರ. ಆಕೆಯನ್ನು ನೀವು ಪ್ರೀತಿಸದೆ ಇರಲಾರಿರಿ ಎನ್ನುತ್ತಾರೆ ಸಂಯುಕ್ತಾ ಹೊರನಾಡು. ಇದೊಂದು ಪ್ರೇಮಕಥೆ. ಈ ಲವ್ ಸ್ಟೋರಿಯಲ್ಲಿ ಎಲ್ಲ ಸಂಬಂಧಗಳನ್ನೂ ಪ್ರೀತಿಸಬೇಕು ಎನ್ನುವ ಕಥೆಯಿದೆ ಅನ್ನೋದು ಹೊರನಾಡು ಹೇಳುವ ಮಾತು. ಪಿ.ಸಿ.ಶೇಖರ್ ಇದೇ ಮೊದಲ ಬಾರಿಗೆ ಲವ್ ಸ್ಟೋರಿ ಹೇಳೋಕೆ ಹೊರಟಿದ್ದಾರೆ. ಹೀಗಾಗಿ ಕುತೂಹಲ ಹೆಚ್ಚೇ ಇದೆ.

  • ಲವ್ ಮಾಕ್‍ಟೇಲ್ 2 ಟ್ರೇಲರ್ ರಿಲೀಸ್ ಮಾಡೋಕೆ ಇಷ್ಟೊಂದ್ ಜಗಳಾನಾ?

    ಲವ್ ಮಾಕ್‍ಟೇಲ್ 2 ಟ್ರೇಲರ್ ರಿಲೀಸ್ ಮಾಡೋಕೆ ಇಷ್ಟೊಂದ್ ಜಗಳಾನಾ?

    ಲವ್ ಮಾಕ್‍ಟೇಲ್ 2 ಸಿನಿಮಾ ರೆಡಿಯಾಗಿದೆ. ರಿಲೀಸ್ ಮಾಡ್ತೀವಿ ಅಂತಾ ಹೇಳ್ಕೊಂಡ್ ಬಂದಿರೋ ಕೃಷ್ಣ ಇನ್ನು ಟ್ರೇಲರ್ ರಿಲೀಸ್ ಮಾಡಿಲ್ಲ. ಅದು ನಿಧಿಮಾಗೆ ತಂದಿರೋ ಕೋಪ ಅಷ್ಟಿಷ್ಟಲ್ಲ. ಥೇಟು ಲವ್ ಮಾಕ್‍ಟೇಲ್ ಸ್ಟೈಲ್‍ನಲ್ಲೇ ಕೃಷ್ಣನಿಗೆ ಕ್ಲಾಸ್ ತಗೊಂಡಿದ್ದಾರೆ ಮಿಲನಾ ನಾಗರಾಜ್.

    ಅಫ್‍ಕೋರ್ಸ್.. ಅದು ಟ್ರೇಲರ್ ರಿಲೀಸ್ ಮಾಡೋಕೆ ಬಿಟ್ಟಿರೋ ಟ್ರೇಲರ್ ತರಾ ಕಾಣಿಸಿದ್ರೆ ಅಚ್ಚರಿಯಿಲ್ಲ. ಲವ್ ಮಾಕ್‍ಟೇಲ್ ನಲ್ಲಿ ನಿಧಿಮಾ ಸತ್ತು ಹೋಗಿದ್ದಾರೆ. 2ನೇ ಭಾಗದಲ್ಲಿ ಅವರು ನೆನಪಾಗಿ ಇರ್ತಾರೆ. ಕಥೆ ಹೊಸದಾಗಿಯೇ ಶುರುವಾಗಲಿದೆ. ಹೀಗಿರೋವಾಗ ಕಥೆ ಹೇಗಿರಬಹುದು ಅನ್ನೋ ಕುತೂಹಲವಂತೂ  ಇದೆ. ಕೃಷ್ಣ ಅವರಿಗೆ ಲವ್ ಮಾಕ್‍ಟೇಲ್‍ನಲ್ಲಷ್ಟೇ ಅಲ್ಲ, ರಿಯಲ್ ಲೈಫಲ್ಲೂ ಹೀರೋಯಿನ್ ಆಗಿರೋ ಮಿಲನಾ, ಚಿತ್ರದ ನಿರ್ಮಾಪಕಿಯೂ ಹೌದು.

    ಈಗಾಗಲೇ ಸಂಚಾರಿಯಾಗು ನೀ, ನಿಂದೇನೇ ಜನುಮಾ, ಇದೇ ಸ್ವರ್ಗ ಹಾಗೂ ಈ ಪ್ರೇಮ ಹಾಡುಗಳನ್ನ ಬಿಟ್ಟಿರೋ ಕೃಷ್ಣ, ಟ್ರೇಲರ್‍ನ್ನೂ ಶೀಘ್ರದಲ್ಲೇ ರಿಲೀಸ್ ಮಾಡೋ ಭರವಸೆಯನ್ನಂತೂ ಕೊಟ್ಟಿದ್ದಾರೆ. ಯಾವಾಗ..? ವೇಯ್ಟ್..

  • ಲವ್ ಮಾಕ್ಟೇಲ್ 2 ರಿಲೀಸ್ ಡೇಟ್ ಫಿಕ್ಸ್

    ಲವ್ ಮಾಕ್ಟೇಲ್ 2 ರಿಲೀಸ್ ಡೇಟ್ ಫಿಕ್ಸ್

    ಲವ್ ಮಾಕ್`ಟೇಲ್. ಲಾಕ್ ಡೌನ್ ಮುಂಚೆ ಬಂದು ಹೃದಯ ತಟ್ಟಿ ಗೆದ್ದಿದ್ದ ಚಿತ್ರ. ಡಾರ್ಲಿಂಗ್ ಕೃಷ್ಣ, ಮಿಲನ ನಾಗರಾಜ್ ನಟಿಸಿ ನಿರ್ಮಿಸಿದ್ದ ಚಿತ್ರದ ಸೀಕ್ವೆಲ್ ಲವ್ ಮಾಕ್ಟೇಲ್ 2, ರಿಲೀಸ್ ಡೇಟ್ ಫಿಕ್ಸ್ ಆಗಿದೆ. ಫೆಬ್ರವರಿ 11ಕ್ಕೆ ರಿಲೀಸ್.

    ಮೊದಲ ಚಿತ್ರದಲ್ಲಿ ಮಿಲನಾ ನಾಗರಾಜ್ ಪಾತ್ರ ಸಾಯುತ್ತೆ. ಆದರೆ.. ಮಾಕ್ಟೇಲ್ 2ನಲ್ಲಿಯೂ ಮಿಲನಾ ಇದ್ದಾರೆ. ಹೇಗೆ ಅನ್ನೋದನ್ನ ಡೈರೆಕ್ಟರ್ ಡಾರ್ಲಿಂಗ್ ಕೃಷ್ಣ ಫೆಬ್ರವರಿ 11ಕ್ಕೆ ಹೇಳ್ತಾರಂತೆ. ರಚೆಲ್ ಡೇವಿಡ್ ನಾಯಕಿಯಾಗಿರೋ ಚಿತ್ರಕ್ಕೆ ಸಂಗೀತ ನೀಡಿರೋದು ನಕುಲ್ ಅಭಯಂಕರ್.

  • ಲವ್ ಮಾಕ್‍ಟೈಲ್ ಚಿತ್ರಕ್ಕೆ ಕಿಚ್ಚನ ಸಪೋರ್ಟು

    love mocktail gets sudeep's support

    ಲವ್ ಮಾಕ್ವೆಲ್, ಡಾರ್ಲಿಂಗ್ ಕೃಷ್ಣ ನಟಿಸಿ ನಿರ್ದೇಶಿಸಿರುವ ಚಿತ್ರ. ಈ ಚಿತ್ರಕ್ಕೆ ಮಿಲನ ನಾಗರಾಜ್ ನಾಯಕಿ. ನಾಯಕಿ ಅಷ್ಟೇ ಅಲ್ಲ, ನಿರ್ಮಾಪಕಿಯೂ ಹೌದು. ಐಟಿ ಉದ್ಯೋಗಿ.. ಆದರೆ ಮುಗ್ದ ಹುಡುಗಿ.. ಇಂತಹ ತದ್ವಿರುದ್ಧ ಭಾವ ಹೇಳಿಯೇ ಕುತೂಹಲ ಹುಟ್ಟಿಸಿಬಿಡ್ತಾರೆ ಮಿಲನ. ಅವರ ಪ್ರಥಮ ಸಾಹಸಕ್ಕೆ ಕಿಚ್ಚ ಸುದೀಪ್ ಸಪೋರ್ಟ್ ಸಿಕ್ಕಿರುವುದೇ ಅವರ ಖುಷಿ ಹೆಚ್ಚಿಸಿದೆ.

    ಕೃಷ್ಣ ಕಥೆ ಹೇಳಿದಾಗ ಕಥೆ ಇಷ್ಟವಾಯ್ತು. ತುಂಬಾ ತುಂಬಾ ಇಷ್ಟವಾಯ್ತು. ಹೀಗಾಗಿ ಕೃಷ್ಣ ಮತ್ತು ನಾನೇ ನಿರ್ಮಾಣದ ಹೊಣೆ ಹೊತ್ತುಕೊಂಡೆವು. ನಾವಂದುಕೊಂಡಂತೆಯೇ ಸಿನಿಮಾ ಬಂದಿದೆ ಎನ್ನುವ ಮಿಲನಗೆ ಸುದೀಪ್ ನೀಡಿರುವ ಬೆಂಬಲ ಅದ್ಭುತ ಎನಿಸಿದೆ.

    ಲವ್ ಮಾಕ್‍ಟೈಲ್ ಚಿತ್ರಕ್ಕೆ ಸುದೀಪ್ ಅವರೇ ಧ್ವನಿ ಕೊಟ್ಟಿದ್ದಾರೆ. ಚಿತ್ರದ 2 ಹಾಡುಗಳನ್ನು ನೋಡಿ ಬೆನ್ನು ತಟ್ಟಿದ್ದಾರೆ. ಸುದೀಪ್ ಅವರ ವಾಯ್ಸ್, ಚಿತ್ರವನ್ನು ಹೊಸದೊಂದು ಲೆವೆಲ್ಲಿಗೆ ತೆಗೆದುಕೊಂಡು ಹೋಗಿದೆ ಎನ್ನುತ್ತಾರೆ ಮಿಲನ.

  • ವರ್ಜಿನ್ ಅಲ್ಲ ಮಿ.ಬ್ಯಾಚುಲರ್

    ವರ್ಜಿನ್ ಅಲ್ಲ ಮಿ.ಬ್ಯಾಚುಲರ್

    ಲವ್ ಮಾಕ್‍ಟೇಲ್ ಹಿಟ್ ಆದ ಬೆನ್ನಲ್ಲೇ ಶುರುವಾದ ಚಿತ್ರ ವರ್ಜಿನ್. ಡಾರ್ಲಿಂಗ್ ಕೃಷ್ಣ ಮತ್ತು ನಿಮಿಕಾ ರತ್ನಾಕರ್ ಅಭಿನಯದ ಚಿತ್ರ ಈಗಾಗಲೇ ಬಹುತೇಕ ಶೂಟಿಂಗ್ ಮುಗಿಸಿದೆ. ನಾಯ್ಡು ಬಂದರ್ ನಿರ್ದೇಶಿಸಿರುವ ಚಿತ್ರದ ಪ್ರಮುಖ ದೃಶ್ಯಗಳ ಶೂಟಿಂಗ್ ಮುಗಿದಿದ್ದು, ಕೃಷ್ಣ ಮತ್ತು ಮಿಲನ ನಾಗರಾಜ್ ಪೋರ್ಷನ್ ಬಾಕಿಯಿದೆಯಂತೆ. ಹೌದು, ಚಿತ್ರದಲ್ಲಿ ಮಿಲನ ನಾಗರಾಜ್ ಹೀರೋಯಿನ್ ಅಲ್ಲ. ಆದರೆ ಪ್ರಮುಖ ಪಾತ್ರ. ಇನ್ನೂ ವಿಶೇಷವೆಂದರೆ ಚಿತ್ರದ ಟೈಟಲ್ ಬದಲಾಗಿದೆ.

    ಚಿತ್ರದ ಕಥೆ ಒಬ್ಬ ಬ್ಯಾಚುಲರ್ ಹುಡುಗನದ್ದು. ಆತನಿಗೆ ಮದುವೆಯಾಗುವುದೇ ಕನಸು. ಆ ಹಾದಿಯಲ್ಲಿ ಅತ ಸೋಲುತ್ತಲೇ ಹೋಗುತ್ತಾನೆ. ಸಖತ್ ತಮಾಷೆಯ ಪ್ರಸಂಗಗಳಿವೆ. ಹೀಗಾಗಿ ವರ್ಜಿನ್ ಎಂದು ಇಟ್ಟಿದ್ದ ಹೆಸರು, ಯಾಕೋ ರೀಚ್ ಆಗಲ್ಲ ಎನ್ನಿಸಿತು. ಹೀಗಾಗಿ ಚಿತ್ರತಂಡ ಒಟ್ಟಿಗೇ ಕುಳಿತು ಚರ್ಚಿಸಿ ಮಿ.ಬ್ಯಾಚುಲರ್ ಎಂದು ಹೆಸರಿಡಲು ತೀರ್ಮಾನಿಸಿತು ಎಂದಿದ್ದಾರೆ ಕೃಷ್ಣ. ಅಂದಹಾಗೆ ಈ ಯೂತ್ ಲವ್ ಸ್ಟೋರಿಗೆ ಶ್ರೀನಿವಾಸ್ ಮತ್ತು ಸ್ವರ್ಣಲತಾ ನಿರ್ಮಾಪಕರು.

  • ಶ್ರೀಕೃಷ್ಣ@Gmail.com ಆರಂಭ

    srikrishna@gmail.com launche

    ಲವ್ ಮಾಕ್‍ಟೇಲ್ ನಂತರ ಡಾರ್ಲಿಂಗ್ ಕೃಷ್ಣ ಅಭಿನಯದ ಶ್ರೀಕೃಷ್ಣ@Gmail.com  ಚಿತ್ರಕ್ಕೆ ಚಾಲನೆ ಸಿಕ್ಕಿದೆ. ಅರ್ಜುನ್ ಜನ್ಯ ಸ್ಟುಡಿಯೊದಲ್ಲಿ ಶ್ರೀಕೃಷ್ಣ@Gmail.com  ಚಿತ್ರದ ಮುಹೂರ್ತ ನೆರವೇರಿತು. ಚಿತ್ರಕ್ಕೆ ನಾಗಶೇಖರ್ ನಿರ್ದೇಶಕ. ಅಮರ್ ಚಿತ್ರದ ನಂತರ ನಾಗಶೇಖರ್ ನಿರ್ದೇಶಿಸುತ್ತಿರುವ ಚಿತ್ರವಿದು. ಸಂದೇಶ್ ನಾಗರಾನ್ ಬ್ಯಾನರಿನಲ್ಲೇ ತಯಾರಾಗುತ್ತಿರುವ ಚಿತ್ರ ಶ್ರೀಕೃಷ್ಣ@Gmail.com

    ಕೃಷ್ಣ ಎದುರು ರಾಧಿಕಾ ಕುಮಾರಸ್ವಾಮಿ ನಾಯಕಿಯಾಗಿದ್ದಾರೆ ಎನ್ನಲಾಗಿದೆ. ಕನ್ಫರ್ಮೇಷನ್ ಸಿಕ್ಕಿಲ್ಲ. ಹಾಗಾದರೆ ಶ್ರೀಕೃಷ್ಣ@Gmail.com ಕಥೆ ಏನಿರಬಹುದು ಎಂಬ ಕುತೂಹಲ ತಕ್ಷಣ ಮೂಡುತ್ತೆ. ಅಣ್ಣಾವ್ರ ಫೋಟೋ ಇಟ್ಟುಕೊಂಡು ಮೊದಲ ಸೀನ್ ಚಿತ್ರೀಕರಿಸಲಾಗಿದೆ.