ಸುಮನ್ ರಂಗನಾಥ್. ವಯಸ್ಸು 40 ದಾಟಿದ್ದರೂ, ಸೌಂದರ್ಯ ಮಾಸಿಲ್ಲ. ಸಿಬಿಐ ಶಂಕರ್ ಮೂಲಕ ಕನ್ನಡಕ್ಕೆ ಪರಿಚಿತರಾದ ಸುಮನ್, ಇತ್ತೀಚೆಗೆ ಕನ್ನಡದಲ್ಲಿ ವಿಭಿನ್ನ ಪಾತ್ರಗಳ ಮೂಲಕ ಗಮನ ಸೆಳೆದವರು. ಅವರೀಗ ಕವಲು ದಾರಿಯಲ್ಲಿ ಸೇರಿಕೊಂಡಿದ್ದಾರೆ.
ಪುನೀತ್ ರಾಜ್‍ಕುಮಾರ್ ನಿರ್ಮಾಣದ `ಕವಲು ದಾರಿ'ಯಲ್ಲಿ ಸುಮನ್ ಅವರದ್ದು ಹೀರೋಯಿನ್ ಪಾತ್ರ. ಅಂದರೆ, ಸಿನಿಮಾದ ನಿಜವಾದ ನಾಯಕಿ ಅಲ್ಲ. ಕವಲುದಾರಿಯಲ್ಲಿ ಸಿನಿಮಾದೊಳಗೊಂದು ಸಿನಿಮಾ ಇದೆ. ಆ ಸಿನಿಮಾದೊಳಗಿನ ಸಿನಿಮಾದಲ್ಲಿ ಸುಮನ್ ನಾಯಕಿ.
ಆಲ್‍ಫ್ರೆಡ್ ಹಿಚ್‍ಕಾಕ್ ಸಿನಿಮಾಗಳಲ್ಲಿರುವಂತೆ, ಒಂದು ವಿಭಿನ್ನವಾದ ಪಾತ್ರ ಸುಮನ್ ಅವರಿಗಾಗಿ ನೀಡಲಾಗಿದೆ ಎಂದು ಹೇಳಿಕೊಂಡಿದ್ದಾರೆ ನಿರ್ದೇಶಕ ಹೇಮಂತ್ ರಾವ್. ಚಿತ್ರದ ಎಲ್ಲ ಪಾತ್ರಗಳಿಗಿಂತ ಸುಮನ್ ಪಾತ್ರ ವಿಶೇಷವಾಗಿದೆಯಂತೆ.
ಕನ್ನಡದಲ್ಲಿ ನಾನು ಸಾಕಷ್ಟು ಪಾತ್ರಗಳನ್ನು ಮಾಡಿದ್ದರೂ, ಇಂಥಾದ್ದೊಂದು ಪಾತ್ರ ನನಗೂ ವಿಶೇಷ. ಈ ರೀತಿ ನನ್ನನ್ನು ತೋರಿಸಬಹುದು ಎಂಬ ಕಲ್ಪನೆಯೂ ನನಗಿರಲಿಲ್ಲ ಎಂದು ಖುಷಿ ಹಂಚಿಕೊಂಡಿದ್ದಾರೆ ಸುಮನ್.
Related Articles :-
Kavalu Daari Launched On Friday