ಮೇನಕ ಚಿತ್ರಮಂದಿರದಲ್ಲಿ ಗಾಯತ್ರಿ ಎಂಬ ಸಿನಿಮಾ ನೋಡಿ, ಭಯಬಿದ್ದ ಪ್ರೇಕ್ಷಕನೊಬ್ಬ ರಕ್ತ ಕಾರಿಕೊಂಡಿದ್ದಾನಂತೆ. ಹಾಗೆ ಮೂರ್ಚೆ ಬಿದ್ದು ರಕ್ತ ವಾಂತಿ ಮಾಡಿದವನ ಹೆಸರು ವಿಜಿ.
ಅವನೂ ಕೂಡಾ ಚಿತ್ರದಲ್ಲೊಂದು ಪುಟ್ಟ ಪಾತ್ರ ಮಾಡಿದ್ದನಂತೆ. ಅದೇ ಕುತೂಹಲದಲ್ಲಿ ಚಿತ್ರ ನೋಡಲು ಹೋಗಿದ್ದವನು ಸಿನಿಮಾ ನೋಡುವಾಗ ಬಿದ್ದು ಒದ್ದಾಡಿದ್ದಾನೆ. ಕೆಲವು ಪ್ರೇಕ್ಷಕರು ಇದು ಮೂರ್ಛೆರೋಗ ಇರಬಹುದು ಎಂದು ಕಬ್ಬಿಣವನ್ನು ಕೈಗೆ ಕೊಟ್ಟಿದ್ದಾರೆ. ನಂತರ ಕೆಸಿ ಜನರಲ್ ಆಸ್ಪತ್ರೆಗೆ ಸೇರಿಸಿದ್ದಾರೆ. ಚಿಕಿತ್ಸೆಯನ್ನೂ ಕೊಡಿಸಿದ್ದಾರೆ. ಈಗ ಹುಷಾರಾಗಿರುವ ವಿಜಿಗೆ ಯಾವುದೂ ನೆನಪಿಲ್ಲವಂತೆ.
ಇದು ಸಾಧ್ಯಾನಾ..? ಸಿನಿಮಾ ನೋಡಿ ಈ ರೀತಿ ಆಗೋಕೆ ಸಾಧ್ಯಾನಾ..? ಪ್ರಶ್ನೆಗೆ ಉತ್ತರ ಇಲ್ಲ.