` telugu movies, - chitraloka.com | Kannada Movie News, Reviews | Image

telugu movies,

 • Lord Channakeshava Vanished For A Telugu Movie

  dj shooting at beluru

  Vaishnava Principles was changed for Allu Arjun's movie at Hassan's historical Beluru Temple. the complete environment of the temple was changed for the shooting. Lord Shiva's idol was installed in the Vaishanav temple. The main entrance was shut for the devotees to enter. it is also said that the movie team has hurt the religious sentiments of the people. The shooting is of Allu's Arjun's new movie DJ. The devotes present at the temple are furious for hurting their beliefs and sentiments.

  dj_shooting_1telugu.jpgBelur is worldwide famous for its uniqueness. Channakeshava Temple is one of the most famous tourist spots in Karnataka, which has visitors from all over the world. Law protectors who are supposed to safeguard the famous world heritage property are the one's corrupting it. Everyday 1000's of devotes, visit the temple but today, there is no entrance to the devotees because of movie shooting.

  The movie has a prior permission from the historical department to shoot in the temple. but the main question is, how far is it good to shoot hurting so many sentiments and faith? The most alarming part is, Channakeshava temple was under the hit list of Terrorists, and the security was previously beefed up. but now, the movie team is using drone camera and is shooting every bit of the temple,this has raised many speculations about the safety of the temple.

  To what extent is it right to hurt the sentiments of devotes by manipulating the principles of Vaishnava religion and also by prohibiting the devotes from entering the temple only because of Allu Arjun's movie?

 • Telugu Movies Taking Over KG Road

  telugu movies taking over kg road

  The Kempegowda Road in Gandhinagar is where the main theatres of Kannada films are located. However in the coming week it looks like it will become a Telugu film hub. On January 11, Khaidi No. 150 starring Chiranjeevi is releasing in Bhoomika theatre on the road. A day later on January 12, another Telugu film Gautami Putra Satakarni is releasing in Santhosh theatre.

  Baahubali Destroys Tamil and English in Bengaluru - Exclusive

  Kannada film Lee that was planned to be released in Santhosh will have to look for another Theatre now. There are very few theatres left on Kempegowda Road now. With two major theatres screening Telugu films this week,  Kannada films have been pushed out. The two Telugu films are also releasing in many single screen theatre in Bengaluru that usually screen Kannada films.

  Cinema V/s Cinema

  Khaidi No 150 is announced to release in 2 theatres in Gandhinagar. Apart from Bhoomika it is also releasing in Movieland, the theatre that has traditionally screens Telugu films in the area.

  However both films have claimed the same theatres in rest of Bengaluru. Both are fighting for the same screens like Rex, Urvashi, Mukunda, Sandhya, Renukaprasanna, Manasa and others.

  Also See

  Baahubali Destroys Tamil and English in Bengaluru - Exclusive

  Cinema V/s Cinema

  Uma Column 10 - ತೊಲಗು ಅಂದರೆ ನಾನು ತೆಲುಗು ಅಂದ ಹಾಗಾಯಿತು

   

 • ಕಿರಿಕ್ ಪಾರ್ಟಿ ಅಲ್ಲ, ಕಿರ್ರಕ್ ಪಾರ್ಟಿ

  telugu movie kiraak party

  ಕಿರಿಕ್ ಪಾರ್ಟಿ, ಕನ್ನಡದಲ್ಲಿ ದಾಖಲೆ ಬರೆದ ಈ ಚಿತ್ರ ತೆಲುಗಿಗೆ ರೀಮೇಕ್ ಆಗಲಿದೆ ಎಂದು ಸುದ್ದಿಯಾಗಿತ್ತು. ಈಗ ತೆಲುಗು ಕಿರಿಕ್ ಪಾರ್ಟಿಯ ಟೈಟಲ್, ಪೋಸ್ಟರ್ ಬಿಡುಗಡೆಯಾಗಿದೆ. ಕನ್ನಡದ ಕಿರಿಕ್ ಪಾರ್ಟಿ, ತೆಲುಗಿನಲ್ಲಿ ಕಿರ್ರಕ್ ಪಾರ್ಟಿಯಾಗಿದೆ.

  ಚಿತ್ರಕ್ಕೆ ಹೀರೋ ಆಗಿರುವುದು ನಿಖಿಲ್. ಹ್ಯಾಪಿಡೇಸ್ ಖ್ಯಾತಿಯ ನಿಖಿಲ್, ಈ ಚಿತ್ರಕ್ಕಾಗಿ 12 ಕೆಜಿ ತೂಕ ಇಳಿಸಿಕೊಂಡಿದ್ದಾರಂತೆ. ಈ ಚಿತ್ರದ ಮೂಲಕ ಛಾಯಾಗ್ರಹಕ ಅದ್ವೈತ ಗುರುಮೂರ್ತಿ ಹಾಗೂ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್, ತೆಲುಗಿಗೆ ಎಂಟ್ರಿ ಕೊಡುತ್ತಿದ್ದಾರೆ. 

 • ತೆಲುಗಿಗೆ ಹೊರಟ ದೇವರಾಜ್ ಪುತ್ರ

  pranam devaraj's telugu film starts

  ಡೈನಮಿಕ್ ಸ್ಟಾರ್ ದೇವರಾಜ್ ಅವರ 2ನೇ ಪುತ್ರ ಪ್ರಣಾಮ್ ದೇವರಾಜ್, ಟಾಲಿವುಡ್‍ಗೆ ಹಾರಿದ್ದಾರೆ. ಇತ್ತೀಚೆಗಷ್ಟೇ ಕುಮಾರಿ 21ಎಫ್ ಚಿತ್ರದ ಮೂಲಕ ಸ್ಯಾಂಡಲ್‍ವುಡ್‍ಗೆ ಪಾದಾರ್ಪಣೆ ಮಾಡಿದ್ದ ಪ್ರಣಾಮ್, ಗಮನ ಸೆಳೆದಿದ್ದರು. ಈಗ 2ನೇ ಸಿನಿಮಾ ಮೂಲಕ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ.

  ವೈರಂ, ಪ್ರಣಾಮ್ ದೇವರಾಜ್ ನಟಿಸುತ್ತಿರುವ ತೆಲುಗು ಚಿತ್ರದ ಹೆಸರು. ಸಾಯಿ ಶಿವಾನಿ ಎಂಬುವವರು ಚಿತ್ರದ ನಿರ್ದೇಶಕರು. ಈ ಸಿನಿಮಾ ಕನ್ನಡದಲ್ಲೂ ಬರಲಿದೆಯಂತೆ.

  ದೇವರಾಜ್, ಕನ್ನಡದಲ್ಲಷ್ಟೇ ಅಲ್ಲ, ತೆಲುಗು ಚಿತ್ರರಂಗದಲ್ಲೂ ಹೆಸರು ಮಾಡಿರುವ ನಟ. ಆಂಧ್ರಪ್ರದೇಶದಲ್ಲಿ ಅತ್ಯುತ್ತಮ ನಟನೆಗಾಗಿ ನಂದಿ ಅವಾರ್ಡ್ ಪಡೆದಿರುವ ಕಲಾವಿದ. ಹೀಗಾಗಿ ಪ್ರಣಾಮ್ ದೇವರಾಜ್ ಮೇಲೆ ತೆಲುಗು ಚಿತ್ರರಂಗದಲ್ಲೂ ಭಾರಿ ನಿರೀಕ್ಷೆ ಇದೆ.

 • ತೆಲುಗಿಗೆ ಹೊರಟು ನಿಂತ ಬುಲ್ಬುಲ್ ರಚಿತಾ

  rachitha ready to act in tollywood

  ರಚಿತಾ ರಾಮ್, ಸದ್ಯಕ್ಕೆ ಕನ್ನಡದಲ್ಲಿ ಸಿಕ್ಕಾಪಟ್ಟೆ ಡಿಮ್ಯಾಂಡ್ ಇರುವ ನಟಿ. ಬುಲ್ ಬುಲ್ ಚಿತ್ರದಿಂದ ಎಂಟ್ರಿ ಕೊಟ್ಟ ರಚಿತಾ, ಈಗಾಗಲೇ ದರ್ಶನ್, ಸುದೀಪ್, ಪುನೀತ್, ಶ್ರೀಮುರಳಿ ಸೇರಿದಂತೆ ಹಲವು ಟಾಪ್ ನಟರ ಜೊತೆ ನಟಿಸಿದ್ದಾರೆ.

  ಈಗ ಈ ಕನ್ನಡದ ಡಿಂಪಲ್ ಕ್ವೀನ್, ತೆಲುಗಿಗೆ ಹೊರಟಿದ್ದಾರಂತೆ. ಅದಕ್ಕೆಂದೇ ವಿಶೇಷ ಫೋಟೋಶೂಟ್ ಮಾಡಿಸಿರುವ ರಚಿತಾ, ಕೆಲವು ತೆಲುಗು ನಿರ್ಮಾಪಕರಿಂದ ಕಥೆಯನ್ನೂ ಕೇಳಿದ್ದಾರಂತೆ. ಸದ್ಯಕ್ಕೆ ಯಾವುದೂ ಫೈನಲೈಸ್ ಆಗಿಲ್ಲ.ಆದರೆ, ತೆಲುಗಿನಿಂದ ಆಫರ್ ಬಂದಿರುವುದು ನಿಜ ಎಂದಿದ್ದಾರೆ ರಚಿತಾ ರಾಮ್.

  ಕನ್ನಡದಿಂದ ತೆಲುಗಿಗೆ ವಲಸೆ ಹೋದ ನಟಿಯರ ದೊಡ್ಡ ಲಿಸ್ಟೇ ಇದೆ. ಸೌಂದರ್ಯ, ಪ್ರೇಮಾ, ಪ್ರಿಯಾಮಣಿ, ರಕ್ಷಿತಾ ಮೊದಲಾದವರೆಲ್ಲ ತೆಲುಗಿನಲ್ಲೂ ಸ್ಟಾರ್ ಆಗಿ ಮಿಂಚಿದವರು. ಅಂಥದ್ದೇ ಅದೃಷ್ಟ ರಚಿತಾಗೂ ಒಲಿಯುತ್ತಾ..?

 • ಮತ್ತೆ ತೆಲುಗಿನತ್ತ ಉಪೇಂದ್ರ - ಈ ಬಾರಿ ಚಿರಂಜೀವಿ ಜೊತೆ..

  upendra movie image

  ರಿಯಲ್ ಸ್ಟಾರ್ ಉಪೇಂದ್ರಗೆ ತೆಲುಗು ಚಿತ್ರರಂಗ ಹೊಸದೇನೂ ಅಲ್ಲ. ಓಂ, ಎ, ಉಪೇಂದ್ರ, ಸೂಪರ್ ಮೊದಲಾದ ಚಿತ್ರಗಳ ಮೂಲಕ ತೆಲುಗು ಚಿತ್ರರಂಗಕ್ಕೆ ಪರಿಚಿತರಾಗಿರುವ ನಟ. ಅಷ್ಟೇ ಅಲ್ಲ, ದೊಡ್ಡ ಫ್ಯಾನ್ ಫಾಲೋಯಿಂಗ್ ಕೂಡಾ ಇದೆ. ಉಪ್ಪಿಯ ಸಿನಿಮಾಗಳು ತೆಲುಗಿಗೆ ಡಬ್ ಆಗುತ್ತಲೇ ಇರುತ್ತವೆ. ಇತ್ತೀಚೆಗಷ್ಟೇ ಅಲ್ಲು ಅರ್ಜುನ್ ನಾಯಕತ್ವದ ಸನ್ ಆಫ್ ಸತ್ಯಮೂರ್ತಿ ಚಿತ್ರದಲ್ಲಿ ಉಪೇಂದ್ರ ನಟಿಸಿದ್ದರು. ಈಗ ಮತ್ತೊಮ್ಮೆ ತೆಲುಗಿಗೆ ಹೊರಟಿದ್ದಾರೆ ಉಪೇಂದ್ರ.

  ಈ ಬಾರಿ ಉಪೇಂದ್ರ ನಟಿಸಲಿರೋದು ಚಿರಂಜೀವಿ ಚಿತ್ರದಲ್ಲಿ. ಆಗಸ್ಟ್ 22ಕ್ಕೆ ಚಿರಂಜೀವಿ ಹುಟ್ಟುಹಬ್ಬವಿದೆ. ಆ ದಿನ ಉಯ್ಯಲವಾಡ ನರಸಿಂಹ ರೆಡ್ಡಿ ಎಂಬ ಚಿತ್ರ ಘೋಷಣೆಯಾಗುವ ಸಾಧ್ಯತೆಗಳಿವೆ. ಆ ಚಿತ್ರದಲ್ಲಿ ಉಪೇಂದ್ರ ನಟಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಕರ್ನಾಟಕದಲ್ಲಲಿ ಸಂಗೊಳ್ಳಿ ರಾಯಣ್ಣ ಹೇಗೋ, ಆಂಧ್ರಪ್ರದೇಶದಲ್ಲಿ ಉಯ್ಯಲವಾಡ ನರಸಿಂಹ ರೆಡ್ಡಿ ಹಾಗೆ. ಎಲ್ಲವೂ ಪಕ್ಕಾ ಆದರೆ, ಚಿರಂಜೀವಿಯ 151ನೇ ಸಿನಿಮಾದಲ್ಲಿ ಉಪೇಂದ್ರ ಕೂಡಾ ಇರಲಿದ್ದಾರೆ.

 • ಮತ್ತೊಂದು ತೆಲುಗು ಚಿತ್ರದಲ್ಲಿ ರಶ್ಮಿಕಾ ಮಂದಣ್ಣ

  rashmika mandanna image

  ಕಿರಿಕ್ ಪಾರ್ಟಿ ಚಿತ್ರದ ಮೂಲಕ ಕನ್ನಡಿಗರ ಮನಗೆದ್ದ ರಶ್ಮಿಕಾ ಮಂದಣ್ಣ, ಯುವಕರಲ್ಲಂತೂ ಕ್ರೇಜ್‍ನ್ನೇ ಸೃಷ್ಟಿಸಿದ್ದರು. ಆ ಚಿತ್ರದ ನಂತರ ಅವರು ಕನ್ನಡದಲ್ಲಿ ನಟಿಸುತ್ತಿರುವುದು ಆಂಜನಿಪುತ್ರ ಚಿತ್ರದಲ್ಲಿ ಮಾತ್ರ. 

  ತೆಲುಗಿನಲ್ಲಿ ಈಗಾಗಲೇ ಅಲ್ಲು ಅರ್ಜುನ್ ಜೊತೆ `ನಾ ಪೇರು ಸೂರ್ಯ, ನಾ ಇಲ್ಲು ಇಂಡಿಯಾ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅದಾದ ನಂತರ ಏನು ಎಂಬ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಅಲ್ಲು ಅರ್ಜುನ್ ಅವರ ಕುಟುಂಬದ ಗೀತಾ ಆಟ್ರ್ಸ್‍ನ ಇನ್ನೊಂದು ಚಿತ್ರದಲ್ಲಿ ರಶ್ಮಿಕಾ ನಟಿಸುತ್ತಿದ್ದಾರೆ. 

  ತೆಲುಗಿನ ವಿಜಯ್ ದೇವರಕೊಂಡ ನಾಯಕತ್ವದ ಹೊಸ ಚಿತ್ರದಲ್ಲಿ ರಶ್ಮಿಕಾ ಹೀರೋಯಿನ್.ಪರಶುರಾಮ್ ನಿರ್ದೇಶನದ ಈ ಚಿತ್ರದಲ್ಲಿ ನಟಿಸುತ್ತಿರುವುದು ಖುಷಿಯಿಂದ ಹಂಚಿಕೊಂಡಿದ್ದಾರೆ ರಶ್ಮಿಕಾ. 

   

 • ವಜ್ರಕಾಯದ ನಭಾ ನಟೇಶ್ ತೆಲುಗಿನಲ್ಲಿ ಬ್ಯುಸಿ

  nabha natesh busy in telugu

  ನಭಾ ನಟೇಶ್. ಶಿವರಾಜ್ ಕುಮಾರ್ ಅಭಿನಯದ ವಜ್ರಕಾಯ ಚಿತ್ರದ ಮೂಲಕ ಬೆಳ್ಳಿತೆರೆಗೆ ಬಂದ ಪ್ರತಿಭೆ. ಅವರೀಗ ತಮಿಳು, ತೆಲುಗಿನಲ್ಲಿ ಬ್ಯುಸಿಯಾಗುತ್ತಿದ್ದಾರೆ. ಈಗಾಗಲೇ ರವಿಬಾಬು ನಿರ್ದೇಶನದ ಅದಿಗೋ ಚಿತ್ರದಲ್ಲಿ ನಟಿಸಿದ್ದ ನಭಾ ನಟೇಶ್, ಸುಧೀರ್ ಬಾಬು ಅಭಿನಯದ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

  ಸುಧೀರ್ ಬಾಬು, ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ಬಾಮೈದ. ಈಗಾಗಲೇ ಪ್ರೇಮಕಥಾಚಿತ್ರಂ ಹಾಗೂ ಭಲೆ ಮಂಚಿ ರೋಜು ಎಂಬ ಎರಡು ಹಿಟ್ ಕೊಟ್ಟಿರುವ ನಟ. ಅವರ ಚಿತ್ರಕ್ಕೀಗ ನಭಾ ನಟೇಶ್ ನಾಯಕಿ.  ಇದರ ಮಧ್ಯೆ ತಮಿಳು ಚಿತ್ರವೊಂದಕ್ಕೆ ಮಾತುಕತೆ ನಡೆಯುತ್ತಿದೆಯಂತೆ. ಹಾಗೆಂದು ಅಲ್ಲಯೇ ಇರಲ್ಲ. ಕನ್ನಡದಲ್ಲೂ ಅವಕಾಶ ಸಿಕ್ಕರೆ ಖಂಡಿತಾ ನಟಿಸುತ್ತೇನೆ ಎನ್ನುತ್ತಾರೆ ನಭಾ.