ರಾಜು ಕನ್ನಡ ಮೀಡಿಯಂ ಚಿತ್ರದಲ್ಲಿ ಸುದೀಪ್ ಅವರದ್ದು ಅತಿಥಿ ನಟನ ಪಾತ್ರ. ಸುದೀಪ್ ಅವರ ಸ್ಟೈಲಿಷ್ ಲುಕ್, ಗಾಲ್ಫ್ ಸ್ಟಿಕ್ ಹಿಡಿದಿರುವ ಫೋಟೋ ನೋಡಿದವರಿಗೆಲ್ಲ ಕಿಚ್ಚನ ಪಾತ್ರ ಏನು..? ಹೇಗಿರುತ್ತೆ..? ಎಂಬ ಕುತೂಹಲ ಇದ್ದೇ ಇತ್ತು. ಚಿತ್ರದಲ್ಲಿ ಸುದೀಪ್ ಅವರದ್ದು ರಾಜುಗೆ ಧೈರ್ಯ ಹೇಳುವ ಪಾತ್ರವಂತೆ.
ಕೀಳರಿಮೆ, ಇಂಗ್ಲಿಷ್ ಬರದೆ ಒದ್ದಾಡುವ ನಾಯಕ ರಾಜು ಅಲಿಯಾಸ್ ಗುರುನಂದನ್‍ಗೆ ಧೈರ್ಯ ಹೇಳುವ, ಆತ್ಮವಿಶ್ವಾಸ ತುಂಬುವ ಪಾತ್ರದಲ್ಲಿ ಸುದೀಪ್ ನಟಿಸಿದ್ದಾರೆ. ಕೆಲವೇ ನಿಮಿಷಗಳ ಕಾಲ ತೆರೆಯ ಮೇಲಿರುವ ಸುದೀಪ್, ಇಡೀ ಚಿತ್ರಕ್ಕೆ ಟರ್ನಿಂಗ್ ನೀಡಲಿದ್ದಾರೆ.
ನರೇಶ್ ನಿರ್ದೇಶನದ ಚಿತ್ರ, ಬಿಡುಗಡೆಗೆ ರೆಡಿಯಾಗಿದೆ. ಚಿತ್ರದಲ್ಲಿ ವಿದೇಶಿ ಯುವತಿಯ ಪಾತ್ರದಲ್ಲಿ ಏಂಜಲಿನಾ ನಟಿಸಿದ್ದು, ಆಕೆಯ ಪಾತ್ರ ಏನು..? ಎಂಬ ಕುತೂಹಲವೂ ಇದೆ. ಬಹುಶಃ ಆಕೆ ವಿದೇಶದಲ್ಲಿದ್ದರೂ, ಕನ್ನಡವನ್ನು ಅಭಿಮಾನಿಸುವ ಯುವತಿಯಾಗಿ ನಟಿಸಿರಬಹುದು ಎಂಬುದು ನಿರೀಕ್ಷೆ.