` aindrita ray, - chitraloka.com | Kannada Movie News, Reviews | Image

aindrita ray,

 • ಐಂದ್ರಿತಾ ಪುನರ್ ಪ್ರವೇಶ - ಕಮ್​ಬ್ಯಾಕ್​ ನೀನಾಸಂ ಸತೀಶ್ ಜೊತೆ

  aindritha, ayogya image

  ನಟ ನೀನಾಸಂ ಸತೀಶ್ ಅಯೋಗ್ಯ ಚಿತ್ರದಲ್ಲಿ ನಟಿಸುತ್ತಿರುವುದಷ್ಟೇ ಅಲ್ಲ, ಆ ಚಿತ್ರದೊಂದಿಗೆ ಕೆಲವು ತಿಂಗಳಿಂದ ಮರೆಯಾಗಿದ್ದ ಐಂದ್ರಿತಾ ರೇ ಪುನರ್ ಪ್ರವೇಶವೂ ಆಗುತ್ತಿದೆ. ಬಹುಶಃ ನಿರುತ್ತರ ಚಿತ್ರವೇ ಕೊನೆ. ನಂತರ ಐಂದ್ರಿತಾ ಯಾವುದೇ ಸಿನಿಮಾದಲ್ಲಿ ಕಾಣಿಸಿಕೊಂಡಿರಲಿಲ್ಲ.

  ಬಿಡುಗಡೆಯಾದ ಕೊನೆಯ ಚಿತ್ರ ಮೇಲುಕೋಟೆ ಮಂಜ. ಆದರೆ, ಆ ಚಿತ್ರದ ಪ್ರಚಾರದಿಂದಲೂ ದೂರವೇ ಉಳಿದಿದ್ದ ಐಂದ್ರಿತಾ, ಹೆಚ್ಚೂ ಕಡಿಮೆ ಚಿತ್ರರಂಗದಿಂದ ದೂರವೇ ಆದರೇನೋ ಎಂಬಂತಿದ್ದರು. ಇತ್ತೀಚೆಗೆ ಕೆಲವು ಟಿವಿ ಶೋಗಳಲ್ಲಿ ಕಾಣಿಸಿಕೊಂಡಿದ್ದರು.

  ಹೀಗಿದ್ದ ಐಂದ್ರಿತಾ ಕೈಗೆ ಸಿಕ್ಕಿರುವ ಹೊಸ ಸಿನಿಮಾ ಅಯೋಗ್ಯ. ಚಿತ್ರದ ಟ್ಯಾಗ್​ಲೈನ್ ಗ್ರಾಮ ಪಂಚಾಯಿತಿ ಸದಸ್ಯ. ಅಂದಹಾಗೆ ಇದು ಭಟ್ಟರ ಕ್ಯಾಂಪಿನ ಹುಡುಗನ ಚಿತ್ರ. ಯೋಗರಾಜ್ ಭಟ್ಟರ ಬಳಿ ಅಸಿಸ್ಟೆಂಟ್ ಆಗಿದ್ದ ಮಹೇಶ್ ಎಂಬುವರು ಈ ಚಿತ್ರ ನಿರ್ದೇಶಿಸುತ್ತಿದ್ದಾರೆ.

  ಐಂದ್ರಿತಾ ಕೂಡಾ ಭಟ್ಟರ ಕ್ಯಾಂಪಿನ ಚಿತ್ರಗಳಲ್ಲಿ ಹೆಚ್ಚಾಗಿ ನಟಿಸಿದ್ದ ಹುಡುಗಿ ಎಂಬುದನ್ನು ಮರೆಯುವ ಹಾಗಿಲ್ಲ. ಇದಲ್ಲದೆ ಐಂದ್ರಿತಾ ಗರುಡ ಎಂಬ ಚಿತ್ರದಲ್ಲೂ ನಟಿಸುತ್ತಿದ್ದಾರೆ.

  Related Articles :-

  Satish Neenasam's New Film is Ayogya

 • ಐಂದ್ರಿತಾ ರೇ-ದಿಗಂತ್ ಮದುವೆಗೆ ಮುಹೂರ್ತ ಫಿಕ್ಸ್

  aindritha diganths marriage date fixed

  ಐಂದ್ರಿತಾ ರೇ ಮತ್ತು ದಿಗಂತ್ ಸ್ಯಾಂಡಲ್‍ವುಡ್‍ನ ಪ್ರಣಯದ ಪಕ್ಷಿಗಳು ಎನ್ನುವುದು ಗುಟ್ಟೇನಲ್ಲ. ಇತ್ತೀಚೆಗೆ ಅದನ್ನು ಬಹಿರಂಗವಾಗಿಯೇ ಹೇಳಿಕೊಂಡಿದ್ದ ಮನಸಾರೆಯ ಜೋಡಿ ಮದುವೆಗೆ ಸಿದ್ಧವಾಗಿದೆ. ಇದೇ ಡಿಸೆಂಬರ್ 11 ಮತ್ತು 12ರಂದು ಐಂದ್ರಿತಾ ಮತ್ತು ದಿಗಂತ್ ಸಪ್ತಪದಿ ತುಳಿಯುತ್ತಿದ್ದಾರೆ.

  ಇತ್ತೀಚೆಗೆ ಎರಡೂ ಮನೆಯವರು ಒಟ್ಟಿಗೇ ಸೇರಿ, ಎರಡೂ ಮನೆಯವರ ಸಮ್ಮುಖದಲ್ಲಿ ಒಂಟಿ ಕಾಲಿನ ಮೇಲೆ ಕುಳಿತು ಐಂದ್ರಿತಾಗೆ ದಿಗಂತ್ ಪ್ರಪೋಸ್ ಮಾಡಿದ್ರಂತೆ. ಅದು ಎಂಗೇಜ್‍ಮೆಂಟ್. ಇನ್ನು ಡಿಸೆಂಬರ್ 11,12ಕ್ಕೆ ಮದುವೆ ಎಂದು ತಿಳಿಸಿದ್ದಾರೆ ಐಂದ್ರಿತಾ.

  ಸದ್ಯಕ್ಕೆ ಬ್ಯಾಚುಲರ್ ಪಟ್ಟ ಕಳೆದುಕೊಳ್ತಿರೋ ದಿಗಂತ್, ತಮ್ಮ ಸ್ನೇಹಿತರ ಗ್ಯಾಂಗ್ ಜೊತೆ ಶ್ರೀಲಂಕಾದಲ್ಲಿ ಬ್ಯಾಚುಲರ್ ಪಾರ್ಟಿ ಮಾಡುತ್ತಿದ್ದಾರಂತೆ. 2009ರಲ್ಲಿ ಮನಸಾರೆ ಚಿತ್ರದಲ್ಲಿ ಪರಿಚಯವಾಯ್ತು. ಪ್ರೀತಿಯೂ ಶುರುವಾಯ್ತು ಎಂದು ಹೇಳಿಕೊಂಡಿರೋ ಐಂದ್ರಿತಾ, ಬರೋಬ್ಬರಿ 9 ವರ್ಷದ ಪ್ರೀತಿಯ ನಂತರ ಮದುವೆಯಾಗುತ್ತಿರುವುದು ಖುಷಿಯ ವಿಚಾರ ಎಂದಿದ್ದಾರೆ.

  ಡಿಸೆಂಬರ್ 11ಕ್ಕೆ ಹರಿಶಿಣ ಶಾಸ್ತ್ರ, 12ಕ್ಕೆ ಮದುವೆ. ಅದೇ ದಿನ ಚಿತ್ರರಂಗದವರ ಜೊತೆ ಒಂದು ಪಾರ್ಟಿ. ಅದಕ್ಕೂ ಮೊದಲು  ಕೆಲವು ಅನಾಥಾಶ್ರಮಗಳಿಗೆ ಭೇಟಿ ನೀಡಿ, ಅವರೊಂದಿಗೆ ಸಂಭ್ರಮ ಹಂಚಿಕೊಳ್ಳುವುದು ಸದ್ಯದ ಪ್ಲಾನ್. ಹೊಸ ಜೋಡಿಗೆ ಶುಭವಾಗಲಿ.

 • ಐಟಂ ಸಾಂಗ್‍ಗೆ ಐಂದ್ರಿತಾ ಒಪ್ಪಿದ್ದು ಹೀಗೆ..

  special song in rambo 2 movie

  ರ್ಯಾಂಬೋ 2 ಚಿತ್ರ, ರಿಲೀಸ್‍ಗೂ ಮೊದಲೇ ಸದ್ದು ಮಾಡ್ತಿರೋದು ಹಾಡುಗಳಿಂದ. ಒಂದೊಂದು ಹಾಡೂ ಒಂದೊಂದು ರೀತಿ ಅಭಿಮಾನಿಗಳಿಗೆ ಇಷ್ಟವಾಗುತ್ತಿದೆ. ಅದರಲ್ಲಿ ಒಂದು ಐಂದ್ರಿತಾ ಹೆಜ್ಜೆ ಹಾಕಿರುವ ಐಟಂ ಡ್ಯಾನ್ಸ್. ಚಿತ್ರದ ವಿಡಿಯೋ ಸಾಂಗ್‍ನ್ನು ಚಿತ್ರತಂಡ ಇನ್ನೂ ಬಿಡುಗಡೆ ಮಾಡಿಲ್ಲ. ಲಿರಿಕಲ್ ಹಾಡಿಗೇ ಚಿತ್ರರಸಿಕರು ಥ್ರಿಲ್ಲಾಗಿದ್ದಾರೆ.

  ಆದರೆ, ಈ ಹಾಡಿಗೆ ಹೆಜ್ಜೆ ಹಾಕಿಸೋಕೆ ನಿರ್ಮಾಪಕರು ಐಂದ್ರಿತಾ ಬೆನ್ನು ಬಿದ್ದು ಒಪ್ಪಿಸಿದ ಕಥೆ ಇದ್ಯಲ್ಲ, ಅದು ಐಟಂ ಹಾಡಿನಷ್ಟೇ ಇಂಟ್ರೆಸ್ಟಿಂಗ್. ಬಸಂತಿ, ಮೂರೇ ಮೂರು ಪೆಗ್ಗು, ಸೌಂದರ್ಯ ಸಮರದಂತಹಾ ಸಾಂಗ್‍ಗಳಲ್ಲಿ ಐಂದ್ರಿತಾ ರೈ ಮಿಂಚಿದ್ದರು. ಆದರೆ ಅದಾದ ಮೇಲೆ ಐಟಂ ಸಾಂಗುಗಳ ಸಹವಾಸವೇ ಬೇಡ ಎಂದುಬಿಟ್ಟಿದ್ದರು. ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾದ ತರುಣ್ ಸುಧೀರ್ ಐಂದ್ರಿತಾ ರೈ ಅವರನ್ನು ಕಾಂಟ್ಯಾಕ್ಟ್ ಮಾಡಿದಾಗ ನೋ ಎಂದು ಫೋನಿಟ್ಟಿದ್ದರಂತೆ ಐಂದ್ರಿತಾ.

  ಭೇಟಿ ಮಾಡಿ ಒಂದ್ಸಲ ಹಾಡು ಕೇಳಿ ಎಂದರೂ ಒಪ್ಪಿರಲಿಲ್ಲ. ಕೊನೆಗೆ ಹಠಕ್ಕೆ ಬಿದ್ದು, ಒಂದ್ಸಲ ಹಾಡು ಕೇಳಿ ಎಂದು ಇಯರ್ ಫೋನ್ ಕೊಟ್ಟು ಕೇಳಿಸಿದೆ. ಅರ್ಧ ಹಾಡು ಕೂಡಾ ಮುಗಿದಿರಲಿಲ್ಲ, ಐಂದ್ರಿತಾ ಎಸ್ ಎಂದಿದ್ದರು ಎಂದು ಹಾಡಿನ ಕಥೆ ಬಿಚ್ಚಿಟ್ಟಿದ್ದಾರೆ ತರುಣ್ ಸುಧೀರ್.

  ಚಿತ್ರದಲ್ಲಿ ಈ ಹಾಡಿಗೆ ಧ್ವನಿಯಾಗಿರುವುದು ಅರುಣ್ ಸಾಗರ್ ಅವರ ಪುತ್ರ ಆದಿತಿ ಸಾಗರ್. ಪುಟ್ಟ ಹುಡುಗಿಯಾದರೂ, ಧ್ವನಿ ಜಯಶ್ರೀ ಅವರನ್ನು ನೆನಪಿಸುವಂತಿದೆ ಎಂದು ಗುನುಗುತ್ತಿರುವುದು ಚಿತ್ರರಸಿಕರು.

 • ಡಿಸೆಂಬರ್ ಗೆ ದಿಗಂತ್-ಐಂದ್ರಿತಾ ಮದುವೆ 

  aindritha to wed diganth in december

  ದೂದ್‍ಪೇಡ ದಿಗಂತ್ ಮತ್ತು ಐಂದ್ರಿತಾ ತಮ್ಮ ಪ್ರೀತಿಯನ್ನು ಈಗ ಗುಟ್ಟಾಗೇನೂ ಇಟ್ಟಿಲ್ಲ. ತಾವಿಬ್ಬರೂ ಜನುಮದ ಜೋಡಿ ಅನ್ನೋದನ್ನ ಓಪನ್ ಆಗಿಯೇ ಹೇಳಿಕೊಂಡಿದ್ದಾರೆ. ಹಲವು ವರ್ಷಗಳಿಂದ ಲವ್ ಮಾಡ್ತಾನೇ ಇರೋ ಈ ಜೋಡಿ, ಈ ವರ್ಷದ ಕೊನೆಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದೆಯಂತೆ.

  ಇಬ್ಬರೂ ಮಾತನಾಡಿಕೊಂಡಿದ್ದೇವೆ. ಡಿಸೆಂಬರ್‍ನಲ್ಲಿ ಮದುವೆಯಾಗೋ ಆಲೋಚನೆ ಇದೆ. ದಿನಾಂಕ, ಸ್ಥಳ ಎಲ್ಲ ಫಿಕ್ಸ್ ಆದ ಮೇಲೆ ನಾನೇ ಅಧಿಕೃತವಾಗಿ ಹೇಳ್ತೇನೆ ಎಂದಿದ್ದಾರೆ ದಿಗಂತ್.

  ಮನೆಯಲ್ಲಿನ್ನೂ ಮದುವೆಯ ಬಗ್ಗೆ ಚರ್ಚೆ ಮಾಡಿಲ್ಲ. ಅವರ ಒಪ್ಪಿಗೆ ತೆಗೆದುಕೊಂಡೇ ಮುನ್ನಡೆಯುತ್ತೇವೆ. ಡಿಸೆಂಬರ್ ನಂತರ ದಿಗಂತ್ ಜೀವನದಲ್ಲಿ ಹೊಸ ಕಥೆ ಶುರುವಾಗಲಿದೆ ಎಂದಿದ್ದಾರೆ ದಿಗಂತ್.

  ಅಫ್‍ಕೋರ್ಸ್, ಸದ್ಯಕ್ಕೆ ದಿಗಂತ್ `ಕಥೆಯೊಂದು ಶುರುವಾಗಿದೆ' ಚಿತ್ರದ ಹೀರೋ. ಆ ಚಿತ್ರದ ನಿರ್ಮಾಪಕರು ಪುಷ್ಕರ್ ಮಲ್ಲಿಕಾರ್ಜುನಯ್ಯ ಮತ್ತು ರಕ್ಷಿತ್ ಶೆಟ್ಟಿ. ಪರಂವಾ ಸ್ಟುಡಿಯೋಸ್‍ನಿಂದ ನಿರ್ಮಾಣವಾಗುತ್ತಿರುವ ಚಿತ್ರಕ್ಕೆ ಸನ್ನಾ ಹೆಗಡೆ ನಿರ್ದೇಶನವಿದೆ. 

 • ಧಮ್ ಮಾರೋ ಧಮ್ ಬಸಂತಿ

  aindritha ray's special song fro rambo 2

  Rambo-2 ಚಿತ್ರ ರಿಲೀಸ್‍ಗೆ ರೆಡಿಯಾಗಿರುವ ಈ ಹೊತ್ತಿನಲ್ಲಿ ಇನ್ನೊಂದು ಸೀಕ್ರೆಟ್ ಬಯಲು ಮಾಡಿದೆ ಚಿತ್ರತಂಡ. ಚಿತ್ರದಲ್ಲಿ ಐಂದ್ರಿತಾ ಧಮ್ ಹೊಡೆದಿದ್ದಾರೆ. ಅರ್ಥಾತ್.. ಧಮ್ ಮಾರೋ ಧಮ್ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಶರಣ್ ಅಭಿನಯದ ಚಿತ್ರದಲ್ಲಿ ಶುಭಾ ಪೂಂಜಾ, ಶ್ರುತಿ ಹರಿಹರನ್, ಸಂಚಿತಾ ಪಡುಕೋಣೆ, ಭಾವನಾ ರಾವ್ ಹಾಗೂ ಮಯೂರಿ ಒಂದು ಹಾಡಿನಲ್ಲಿ ಅತಿಥಿಗಳಾಗಿ ಬಂದು ಹೋಗ್ತಾರೆ. ಆದರೆ, ಇನ್ನೊಂದು ಹಾಡಿನಲ್ಲಿ ಐಂದ್ರಿತಾ ಕೂಡಾ ಶರಣ್ ಜೊತೆ ಹೆಜ್ಜೆ ಹಾಕಿದ್ಧಾರೆ.

  ಅದು ಧಮ್ ಮಾರೋದು ಧಮ್ ಹಾಡಿಗೆ. ಐಂದ್ರಿತಾ ಸ್ಪೆಷಲ್ ಸಾಂಗುಗಳಲ್ಲಿ ಕಾಣಿಸಿಕೊಂಡಿದ್ದು ಕಡಿಮೆಯೆಂದೇ ಹೇಳಬಹುದೇನೋ.. ಈ ಹಿಂದೆ ಪ್ರೇಮ್ ಅಡ್ಡದಲ್ಲಿ ಬಸಂತಿ.. ಹಾಡಿಗೆ ಹೆಜ್ಜೆ ಹಾಕಿದ್ದರು ಐಂದ್ರಿತಾ. ಅಲ್ಲದೆ ಚಂದನ್ ಶೆಟ್ಟಿಯವರ ಮೂರೇ ಮೂರು ಪೆಗ್ಗಿಗೆ ಹಾಡಿನಲ್ಲೂ ಐಂದ್ರಿತಾ ಇದ್ದರು. ಈಗ Rambo-2  ಚಿತ್ರದಲ್ಲಿ ಧಮ್ ಮಾರೋ ಧಮ್ ಹಾಡಿಗೆ ನಡು ಬಳುಕಿಸಿದ್ದಾರೆ ಐಂದ್ರಿತಾ.

  ಅಂದಹಾಗೆ ಈ ಧಮ್ ಮಾರೋ ಧಮ್ ಹಾಡು ಹಾಡಿರುವ ಹಿನ್ನೆಲೆ ಗಾಯಕಿ ಆದಿತಿ. ಆಕೆ ಅರುಣ್ ಸಾಗರ್ ಮಗಳು. 

   

 • ಬಾಂಗ್ ವೆಡ್ಸ್ ಬೊಮ್ಮನ್ ಅಂದ್ರೆ ಆ್ಯಂಡಿ ವೆಡ್ಸ್ ದಿಗ್ಗಿ

  bang weds bomman invitation

  #ಬಾಂಗ್ ವೆಡ್ಸ್ ಬೊಮ್ಮನ್ ಅನ್ನೊದು ಹ್ಯಾಷ್‍ಟ್ಯಾಗ್. ಇದು ಐಂದ್ರಿತಾ ರೇ ಮತ್ತು ದಿಗಂತ್ ತಮ್ಮ ಮದುವೆ ಆಹ್ವಾನಕ್ಕೆ ಸ್ವತಃ ಸೃಷ್ಟಿಸಿರುವ ಹ್ಯಾಷ್‍ಟ್ಯಾಗ್. ಐಂದ್ರಿತಾ ಬಂಗಾಳಿ ಹುಡುಗಿ. ಹೀಗಾಗಿ (bang)ಬಾಂಗ್. ದಿಗಂತ್ ಬ್ರಾಹ್ಮಣರ ಹುಡುಗ. ಹೀಗಾಗಿ ಬೊಮ್ಮನ್. (bomman). ಹೀಗೆ ತಮ್ಮದೇ ಶೈಲಿಯಲ್ಲಿ ಡಿಫರೆಂಟಾಗಿ ಆಹ್ವಾನ ಕೊಡುತ್ತಿದ್ದಾರೆ ದಿಗಂತ್ ಮತ್ತು ಐಂದ್ರಿತಾ.

  ಮದುವೆ ಮನೆಯಲ್ಲಿ ಬಂಗಾಳಿ ಶೈಲಿಯ ಸೋಲನ್‍ಗುರ್ ರಸಗುಲ್ಲ ಮತ್ತು ಬ್ರಾಹ್ಮಣರ ಸ್ಪೆಷಲ್ ಮಿಡಿ ಉಪ್ಪಿನಕಾಯಿ ಇರುತ್ತದಂತೆ.

 • ಬಾಲಿವುಡ್ ಸೀತೆಯಾಗಿ ಐಂದ್ರಿತಾ ರೇ

  aindritha rai in bollywood film

  ಐಂದ್ರಿತಾ ರೇ.. ಬಬ್ಲಿ ಪಾತ್ರಗಳ ಮೂಲಕವೇ ಕನ್ನಡ ಚಿತ್ರರಸಿಕರ, ಪಡ್ಡೆ ಹುಡುಗರ ಹೃದಯ ಕದ್ದ ಈ ಚೆಲುವೆ, ಈಗ ಸೀತೆಯ ಪಾತ್ರದಲ್ಲಿ ನಟಿಸೋಕೆ ಸಿದ್ಧರಾಗಿದ್ದಾರೆ. ಅದೂ ಬಾಲಿವುಡ್‍ನಲ್ಲಿ. 

  ಬಾಲಿವುಡ್ ಐಂದ್ರಿತಾಗೆ ಹೊಸದೇನಲ್ಲ. ಈ ಹಿಂದೆ ದ ಫ್ಲ್ಯಾಟ್ ಎಂಬ ಚಿತ್ರದಲ್ಲಿ ನಟಿಸಿದ್ದ ಐಂದ್ರಿತಾ, ಈಗ ಮತ್ತೊಂದು ಹಿಂದಿ ಸಿನಿಮಾ ಒಪ್ಪಿಕೊಂಡಿದ್ದಾರೆ. ಹಾರ್ದಿಕ್ ಗುಜ್ಜರ್ ಚಿತ್ರದ ನಿರ್ದೇಶಕ. ಅಭಿಮನ್ಯು ಸಿಂಗ್, ರಾಕೇಶ್ ಶಮಾ, ರಾಜೇಂದ್ರ ಗುಪ್ತ ಮೊದಲಾದವರು ನಟಿಸಲಿರುವ ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ.

  ಸ್ಲಂ ಡಾಗ್ ಮಿಲಿಯನೇರ್ ಖ್ಯಾತಿಯ ಅಂಕುರ್ ರಾಮನಾದರೆ, ಐಂದ್ರಿತಾ ಸೀತೆಯ ಪಾತ್ರದಲ್ಲಿದ್ದಾರೆ. ಬೀದಿನಾಟಕ ಮಾಡುವ ತಂಡದ ಕಥೆ ಹೊಂದಿರುವ ಚಿತ್ರದಲ್ಲಿ ಐಂದ್ರಿತಾ ಇರುತ್ತಾರೆ. ಆ ತಂಡದಲ್ಲಿ ಐಂದ್ರಿತಾರದ್ದು ಸೀತೆಯ ಪಾತ್ರ. 

  ರ್ಯಾಂಬೋ2 ನಲ್ಲಿ ಐಟಂ ಸಾಂಗ್ ಮೂಲಕ ಗಮನ ಸೆಳೆದಿದ್ದ ಐಂದ್ರಿತಾ ಈಗ ಬಾಲಿವುಡ್‍ಗೆ ಹಾರಿದ್ದಾರೆ.

 • ಮತ್ತೊಂದು ಐಟಂ ಹಾಡಿಗೆ ಲಕ್ಕಿ ಐಂದ್ರಿತಾ

  aindritha's another party song

  ಐಂದ್ರಿತಾ ರೇ, ಕನ್ನಡದ ಮುದ್ದು ಮುಖದ ನಟಿ. ಚಿತ್ರರಂಗದಲ್ಲಿ, ನಗುವಿನಿಂದಲೇ ಮೆರವಣಿಗೆ ಆರಂಭಿಸಿದ ಐಂದ್ರಿತಾ ಅವರಿಗೆ ಒಂದು ಲಕ್ಕಿ ಇಮೇಜ್ ಇದೆ. ಅದು ಐಟಂ ಹಾಡುಗಳಿಗೆ ಸಂಬಂಧಿಸಿದ್ದು. ಐಂದ್ರಿತಾ ಇದುವರೆಗೆ 3 ಸ್ಪೆಷಲ್ ಸಾಂಗ್‍ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮೂರಕ್ಕೆ ಮೂರೂ ಹಾಡೂ ಸೂಪರ್ ಡ್ಯೂಪರ್ ಹಿಟ್.

  ಪ್ರೇಮ್ ಅಡ್ಡ ಚಿತ್ರದಲ್ಲಿನ ಬಸಂತೀ.. ಕಡ್ಡಿಪುಡಿ ಚಿತ್ರದ ಸೌಂದರ್ಯ ಸಮರ.. ಹಾಗೂ ಮೂರೇ ಮೂರು ಪೆಗ್ಗಿಗೆ ಹಾಡುಗಳಲ್ಲಿ ಐಂದ್ರಿತಾ ಹೆಜ್ಜೆ ಹಾಕಿದ್ದಾರೆ. ಈಗ ಮತ್ತೊಂದು ಸ್ಪೆಷಲ್ ಸಾಂಗ್‍ಗೆ ಸಿದ್ಧರಾಗುತ್ತಿದ್ದಾರೆ.

  ಐಂದ್ರಿತಾ ಈಗ ಹೆಜ್ಜೆ ಹಾಕುತ್ತಿರುವುದು ರ್ಯಾಂಬೋ ಚಿತ್ರದ ಹಾಡಿಗೆ. ಅದು ಚಿತ್ರದಲ್ಲಿ ಬರುವ ಟರ್ನಿಂಗ್ ಪಾಯಿಂಟ್ ಹಾಡಂತೆ. ಹಾಡು ಮತ್ತು ಹಾಡು ಬರುವ ಸನ್ನಿವೇಶವನ್ನು ತಿಳಿದುಕೊಂಡ ನಂತರವಷ್ಟೇ ನಾನು ಈ ಹಾಡಿಗೆ ಒಪ್ಪಿಕೊಂಡೆ. ಈ ಹಾಡು ಕೂಡಾ ಮ್ಯಾಜಿಕ್ ಮಾಡುತ್ತೆ ಎನ್ನುತ್ತಾರೆ ಐಂದ್ರಿತಾ.

 • ಮಾತಿನ ಮಲ್ಲಿ ಐಂದ್ರಿತಾ ಬಾಯಿ ಬಂದ್..!

  aindritha to do a silent movie

  ಐಂದ್ರಿತಾ ರೇ ಎಂಬ ಮಾತಿನ ಮಲ್ಲಿಯ ಮಾತನ್ನೇ ಬಂದ್ ಮಾಡಲು ನಿರ್ಧರಿಸಿದೆ ಶ್ರೀಹರಿ. ಶ್ರೀಹರಿ, ಐಂದ್ರಿತಾ ಅವರ ಹೊಸ ಚಿತ್ರದ ನಿರ್ದೇಶಕ. ಹಲವು ವರ್ಷಗಳಿಂದ ಜಾಹೀರಾತು ಕ್ಷೇತ್ರದಲ್ಲಿದ್ದ ಶ್ರೀಹರಿ, ಈಗ ಸಿನಿಮಾ ರಂಗಕ್ಕೆ ಕಾಲಿಟ್ಟಿದ್ದಾರೆ. ಅಂದಹಾಗೆ ಇದು ಮೂಕಿ ಚಿತ್ರ. ಹೀಗಾಗಿಯೇ ಐಂದ್ರಿತಾ ಅವರ ಮಾತು ಬಂದ್ ಎಂದು ಹೇಳಿದ್ದು.

  ಇದು ಅಬ್ಬರವಿಲ್ಲದ ಸೈಲೆಂಟ್ ಮೂವಿ. ಚಿತ್ರರಂಗ ಶುರುವಾಗಿದ್ದೇ ಮೂಕಿ ಚಿತ್ರಗಳಿಂದ. ಮಾತುಗಳೇ ಇಲ್ಲದೆ ಶಬ್ಧ ಮತ್ತು ಅಂಗಿಕ ಅಭಿನಯದ ಮೂಲಕ ಪರಿಣಾಮಕಾರಿಯಾಗಿ ಕಥೆ ಹೇಳುತ್ತೇವೆ ಎನ್ನುತ್ತಾರೆ ಶ್ರೀಹರಿ. ಸದ್ಯಕ್ಕೆ ಗರುಡ ಚಿತ್ರದಲ್ಲಿ ಬ್ಯುಸಿಯಾಗಿರುವ ಐಂದ್ರಿತಾ, ಅದು ಮುಗಿದ ಮೇಲೆ ಈ ಚಿತ್ರಕ್ಕೆ ಕಮಿಟ್ ಆಗಲಿದ್ದಾರೆ.

 • ಮುಂದಿನ ವರ್ಷ ದಿಗಂತ್-ಐಂದ್ರಿತಾ ಮದುವೆ..!

  aindritha diganth to marry next year

  10,16, 2017, ಸ್ಯಾಂಡಲ್‍ವುಡ್‍ಗೆ ಮದುವೆ ವರ್ಷಗಳೆಂದೇ ಹೇಳಬೇಕು. ಯಶ್, ರಾಧಿಕಾ, ಪ್ರಿಯಾಮಣಿ, ಅಮೂಲ್ಯ, ಮೇಘನಾ ರಾಜ್, ಚಿರಂಜೀವಿ ಸರ್ಜಾ, ರಮ್ಯಾ ಬಾರ್ನಾ, ಸಿಂಧು ಲೋಕನಾಥ್... ಹೀಗೆ ವರ್ಷವಿಡೀ ಮದುವೆ, ಎಂಗೇಜ್‍ಮೆಂಟ್‍ಗಳು ಸುದ್ದಿಯಗುತ್ತಲೇ ಇವೆ. ಈಗ ದಿಗಂತ್ ಮತ್ತು ಐಂದ್ರಿತಾ ಸರದಿ. 

  ದಿಗಂತ್ ಮತ್ತು ಐಂದ್ರಿತ ನಡುವೆ ಪ್ರೀತಿ ಇದೆ ಅನ್ನೋದು ಹೊಸ ಸುದ್ದಿಯೇನಲ್ಲ. ಕೆಲವೊಮ್ಮೆ ನಿರಾಕರಿಸುವ ಮತ್ತೂ ಕೆಲವೊಮ್ಮೆ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡುವ ಇಬ್ಬರೂ ಅಧಿಕೃತ ಕುತೂಹಲವನ್ನು ಕಾದಿಟ್ಟುಕೊಂಡೇ ಬಂದಿದ್ದಾರೆ. ಹೀಗಿರುವಾಗಲೇ ಈ ಸುದ್ದಿ ಹೊರಬಿದ್ದಿದೆ.

  ಮುಂದಿನ ವರ್ಷ ಇಬ್ಬರೂ ಮದುವೆಯಾಗಲಿದ್ದಾರಂತೆ. ಬ್ರೇಕಪ್ ಏನೂ ಆಗಿಲ್ಲ. ಮದುವೆಯಾಗೋದು ನಿಜ. ಆದರೆ, ಈಗಲ್ಲ. ಮುಂದಿನ ವರ್ಷದ ಕೊನೆಯಲ್ಲಿ ಮದುವೆಯಾಗುತ್ತೇವೆ ಎಂದು ಹೇಳಿಕೊಂಡಿದ್ದಾರೆ ದಿಗಂತ್. ಇಬ್ಬರೂ ಮನಸಾರೆ, ಪಾರಿಜಾತ, ಶಾರ್ಪ್ ಶೂಟರ್ ಚಿತ್ರಗಳಲ್ಲಿ ಒಟ್ಟಿಗೇ ನಟಿಸಿದ್ದವರು. ಮದುವೆಯಾಗುವುದಾದರೆ, ಕಂಗ್ರಾಟ್ಸ್ ಹೇಳೋಣ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery